ಒಮ್ಮೆ ನೀ ಕಣ್ ತೆರೆದು ನೋಡು
ಮುಂಜಾವಿನಲಿ ಶಾಂತತೆ ಇದೆ
ಅದೇ ಶಾಂತಿಯ ಕಿರಣದಲಿ
ಕೆಂಪು ವರ್ಣವಿದೆ.

ಧಿಕ್ಕರಿಸು, ನೀ ಅದನ
ಅದೇ ದಿಕ್ಕಲಿ ಹಸಿರಾದ ಸೂರ್ಯನ ತರುವ
ಇದ್ದ ಸೂರ್ಯನ ಕುಟ್ಟಿ ಪುಡಿ ಮಾಡಿ
ಅರೆದು, ಹೊಸತು ತುಂಬುವ
ಎಲ್ಲ ಗ್ರಹಕ್ಕೂ ಅಧಿಪತಿ ಎಂದು ಬೀಗುವ
ಅವನ ಸ್ವಾರ್ಥ ಅಧಿಕಾರ ಧಿಕ್ಕರಿಸುವ
ಚಚ್ಚುವ, ಅವನ ನಾಲ್ಕು ಕಾಲು ಸಮೇತ ಚಚ್ಚುವ

ಚಚ್ಚುವ ಸುತ್ತಿಗೆಯನು ಚೆನ್ನಾಗಿವರೆಸಿ
ಇದ್ದ ತುಕ್ಕನೆಲ್ಲ ಬಿಡಿಸಿ
ಚಚ್ಚಲು, ಮದ ಬಂದ ಆನೆಯಂತೆ
ಮಾವುತನ ತುಳಿದ ಬಾ ಒಮ್ಮೆ, ಬಾ

ಅಂದಿನ ಮಧ್ಯಾಹ್ನವೇ ತಾನೇ ಬೆವೆತು ಛಳಿ ಹತ್ತಿ ನಡುಗಿ
ಬಿರು ಬಿಸಿಲಿನ ಮಧ್ಯಾನ್ಹವೇ
ಬಿದಗಿಯ ಚಂದ್ರನಂತೆ ತಂಪಾಗುತ್ತಾನೆ.

ಆದರೆ! ಚಚ್ಚುವ ಸುತ್ತಿಗೆಯು ಮಾತ್ರ
ಸದಾ ನಿನ್ನಲ್ಲಿರಲಿ, ಅದುss ಬಿಗಿಯಾಗಿರಲಿ
ಅದರ ಹಿಡಿ ಇಡಿಯಾಗಿರಲಿ.