ಏದುಸಿರು ಬಿಡುತ್ತಾ
ಎದ್ದು ಕುಳಿತು ನೀನು ಸೈಕಲ್ ತುಳಿಯುತ್ತಿದ್ದೆ
ಹಿಂದೆ ಸೀಟಿನಲಿ ನಾನು
ಬೈಟೂ ಟೀ ಮುಂದೆ
ನಮಗೆ ಜಗತ್ತಿನ ಆಕಾರವೇ ಗೊತ್ತಾಗಲಿಲ್ಲ
ಹೊಸದಾಗಿ ತಂದ ಕಲರ್ ಟೀವಿಯಲಿ
ಯಾವತ್ತಿನದೋ ಕಪ್ಪುಬಿಳುಪು ಚಿತ್ರ
ಇಬ್ಬರಿಗೂ ಇಷ್ಟವಾಯಿತು
ನಮ್ಮಿಬ್ಬರ ಬೆಸುಗೆಗೆ
ಮುರಿಯದ ದೋಸ್ತಿಗೆ
ವಯಸ್ಸೆಸ್ಟೋ ಗೊತ್ತಿಲ್ಲ
ನನ್ನ ಸಿಟ್ಟು ನನ್ನ ಮೌನ ನಿನಗರ್ಥವಾಗಲಿಲ್ಲ
ನಿನ್ನ ಸೋಲು ಕೂಡ
ಹೊರಟು ಬಂದೆ
ಈಗ ನೀನು ಒಂಟಿ
ಇಲ್ಲ ಇಲ್ಲ ನಾನಾಗಂದು ಕೊಂಡೆನಷ್ಟೆ
ಕತ್ತಲೆಂದರೆ ಅಂಜುವ ನಿನಗೆ
ನನ್ನ ಮೌನದ ಸೂತಕ ಅರ್ಥವಾಗಲಿಲ್ಲ
ನೀನೀಗ ಸೈಕಲ್ ತುಳಿಯಲು ದಣಿಯಬೇಕಿಲ್ಲ
ಹಿಂದಿನ ಸೀಟಲ್ಲಿ ನಾನಿಲ್ಲ
ಒಂದು ಟೀ ಈಗ ಬೈಟೂ ಆಗಲಾರದು
ಕೊನೆಗೂ
ನನ್ನ ಸಿಟ್ಟು ನನ್ನ ಮೌನ
ನಿನ್ನರಿವಿಗೆ ಬರಲಿಲ್ಲ.