ಅಗ್ಗಿನಗಾಡಿ ಟ್ರೇನು
ಅಡ್ಡಣಗಿ ಊಟದ ತಟ್ಟೆ ಇಟ್ಟುಕೊಳ್ಳಲು ಮಾಡಿದ ಮೂರು ಕಾಲಿನ ಮಣೆ
ಅನಗೇಡ ಅಭಿಮಾನಗೇಡಾಗು
ಅನ್ನಿಗೇರು ಅನ್ಯರು
ಅಲಕಮಲಕಿನ ತೊಡಕುತೊಡಕಾದ
ಅಸರಂತ ಯಾವಾಗಲೂ
ಅಳುಕು ಹೆದರಿಕೆ
ಆರ್ಯಾಣ ಅರಣ್ಯ
ಈಬತ್ತಿ ವಿಭೂತಿ, ಭಸ್ಮ
ಉತ್ತರಕೊಡು ಎದುರುವಾದಿಸು
ಒಕ್ಕಲು ಮನೆತನ
ಒಗಿ ಸ್ವಚ್ಛಮಾಡು
ಒಂದೊತ್ತ ಉಪವಾಸ
ಒನಿ ಮೊಗೆ
ಒಲಿಹೂಡು ಅಡಿಗೆ ಮಾಡಲು ಒಲೆ ಹೊತ್ತಿಸು
ಕಡೆ ಕೈಯ ಆಭರಣ
ಕಬಲಾಗು ಒಪ್ಪು
ಕೀಟಾಳ ಕೀಟಲೆ ಮಾಡುವವ
ಕುತನಿ ಒಂದು ಬಗೆಯ ರೇಷ್ಮೆ ಬಟ್ಟೆ
ಕುಮರಾಗ ಕುಮಾರನಿಗೆ
ಕೊರೆದು ಹಾಕಾಕ ಮೇವು ಕೊರೆದು ಹಾಕಲು
ಕಂಡೇಪೂಜಿ ಆಯುಧಪೂಜೆ
ಗಡಿ ಹುದ್ದರಿ
ಗದ್ದಿಸು ಗರ್ಜಿಸು
ಗಲೀಪ ಎತ್ತಿನ ಮೈಮೇಲೆ ಹೊದಿಸುವ ಬಟ್ಟೆ
ಗುಜ್ಜಿ ಕುಬ್ಜೆ, ಕುಳ್ಳಿ
ಗೋದಿಮಂಡಲ ಗೋದಿ ಬೆಳೆಯುವ ಪ್ರದೇಶ
ಗೋಪ ಕೊರಳ ಆಭರಣ
ಗೋಪಿ ಹಸು
ಚಳತಾವ ಅರಳಿವೆ
ಚಳತುಂಬ ನೇತಾಡುವ ಮುತ್ತಿನೋಲೆ.
ಚಾಜ ಪದ್ಧತಿ, ರೀತಿ
ಚೀಟ ಬಣ್ಣದ ಬಟ್ಟೆ
ಚಿಂತಾಕು ಆಭರಣ
ಜಂಗು ಜಂಗಮರು ಕಾಲಲ್ಲಿ ಧರಿಸುವ ಕಿರುಗಂಟೆ
ಜಡಿಯಿಳುವು ಜವಳ ತೆಗೆಯಿಸುವುದು
ಜಟ್ಟಕಡಿ ಸಂಬಂಧಕಡಿ, ನಿಶ್ಚಿಂತನಾಗಿರು
ಜತ್ತೀಲಿ ಜೊತೆಯಾಗಿ
ಜಬತಿ ಕಂದಾಯ ಕೊಡದಿದ್ದಾಗ ಸರಕಾರೀ ಅಧಿಕಾರಿಗಳು ಮನೆಮಾರುವಸ್ತುಗಳನ್ನು ಮಾರಿ ವಸೂಲ ಮಾಡುವಿಕೆ.
ಜಾಜಮಲ್ಲಿಗಿ ತಾಜಾ ಮಲ್ಲಿಗೆ
ತಗಿಯೆನ್ನು ಒಲ್ಲೆನೆನ್ನು, ನಿರಾಕರಿಸು, ಹೇಸು
ತಣಿವು ತಂಪು
ತರವುಬಿಡು ಹಾಲು ಹಿಂಡ ಉವ ಸೂಚನೆ ತೋರು
ತಾರೀಪ ಒನಪು, ಬಡಿವಾರ
ತಿನುವಾನ ತಿನ್ನುವಂಥವನು
ತಿಬ್ಬಿ ಹೊಲಿಗೆ
ತೆರವು ವಧುವಿಗೆ ತೆರುವ ಬೆಲೆ
ತೋಪಿನಸೆರಗು ಸೀರೆಯ ಒಂದು ವಿಶೇಷರೀತಿಯ ಸೆರಗು
ತೊಲಿಬಾಗಿಲು ಮುಂಬಾಗಿಲು
ದಟ್ಟ ಸಣ್ಣ ಸೀರೆ
ದವನ ಸುವಾಸನೆ
ದಾನಿ ಕುದುರೆಗಿಡುವ ತಿನಿಸು
ದೇಶಾವರಿಹೋಗು ನಾಡಿನಮೇಲೆ ವ್ಯಾಪಾರಕ್ಕಾಗಿ ಹೋಗು (ಪರದೇಶಿಯಾಗಿ ಊರು ಬಿಟ್ಟುಹೋಗು)
ಧಾವತಿ ಅವಸರ
ನಕಲೀಮಾಡು ಚೇಷ್ಟೆಮಾಡು
ನಾಟಗಿ ಸಸಿ
ನಿದ್ದಿತಿಳಿ ಎಚ್ಚರಾಗು
ನಿಲಕಸಿ ತುದಿಗಾಲಮೇಲೆ ನಿಂತು
ನೆನಿ ವಾಸಿಸು
ನೆಲವಳ್ಳ ನೆಲದಲ್ಲಿ ಹುಗಿದ ಒರಳು
ನೆಲಿ ಆಳ
ನೆಲಿಮುರಿ ಆಳ ಮೀರು
ಪರಜೆ ಪರದೆ
ಪವಾಳಿ ಪೌಳಿ
ಪಾತರದಾಕಿ ನರ್ತಿಸುವಾಕೆ
ಬಕ್ಕ್ಯೂಟ ಬಯಕೆಯ ಊಟ
ಬಗಸಿ ಬಗ್ಗಿನೆ, ಜಗ್ಗಿ
ಬತ್ತಿ ಚಿಲುಮಿ
ಬನ್ನೀಮುರಿದು ಮಾನವಮಿಯಂದು ಸೀಮೋಲ್ಲಂಘನೆ ಮಾಡಿ ಬನ್ನೀಮುಡಿದು.
ಬರಿ ಓದು
ಬಾದುರ ಬಹಾದ್ದುರ, ವೀರ
ಬಾಸಳಿ ಬಾಸುಂಡೆ
ಬ್ಯಾಂಗಡಿ ಹೊಳೆಯುವ ಕಾಗದ
ಬಿನ್ನಕಹೇಳು ಬಿನ್ನಾಯಕ್ಕೆ, ಊಟಕ್ಕೆ ಹೇಳು
ಬೀಸಬಡಿಗಿ ಉದ್ದಕೋಲು
ಬುಗುಡಿಕಳಸ ಕಿವಿಯ ಆಭರಣದ ಕಳಸದಂಥ ಮೇಲ್ತುದಿ
ಬೆಚ್ಚ ಇಡು ಬೆದರುಗಳನ್ನು ಇಡು
ಬೆರಗಾಳ ಬೆರಗಾದಾಳ
ಮದಡ ದಡ್ಡ
ಮಲಕು ತೊಡಕು, ಗಂಟು
ಮಲಪುರಿಮಲ್ಲವ್ವ ಮಲಪ್ರಭಾ ನದಿ
ಮಾತುತರು ಅಪವಾದತರು
ಮಾನೇದಹೊಲ ಉಂಬಳಿಯ ಹೊಲ
ಮಾಯದವರು (ಮಾಯೆ ಮಾಡು, ಅತಿಯಾಗಿ ಪ್ರೀತಿಸು)  ಬಹಳ ಪ್ರೀತಿಯಿದ್ದವರು
ಮಾಲ ಮಹಲ
ಮಿಣಿ ಹಗ್ಗ
ಮುಯ್‌ ಆಹೇರು, ಕೊಡುಗೆ
ಮುರುವು ದನಕ್ಕೆ ಹಿಂಡುವಕಾಲಕ್ಕಿಡುವ ತಿನಿಸು
ಲೆಗ್ಗಿಹೂಡು ಕದನಹೂಡು, ಜಗಳವಾಡು
ಲೋಡ ದಿಂಬು
ವಾದೀಕಾರ ವಿನಾಕಾರಣ ಹಟ ಮಾಡುವವ
ವಾಲ್ಯಾಡಿ ಓಲೆ ಅಲುಗಿ
ಶಾಣ್ಯಾ ಜಾಣ
ಸದರ ಮನೆ
ಸಪನಿದ್ದೆ ಗಾಢನಿದ್ರೆ
ಸಬರಬಿಗಿ ಸಿದ್ಧಮಾಡು
ಸಯನಂಗಿ ಒಂದು ಬಗೆಯ ಬಟ್ಟೆಯ ಅಂಗಿ
ಸರಗಿ ಕೊರಳ ಆಭರಣ
ಸಲ್ಲ ಸೊಲ್ಲ, ಮಾತು
ಸಂಗಾಟ ಜೊತೆಯಾಗಿ
ಸಾಲಾವಳಿ ಜಾತಕ
ಸಿಕ್ಕೇದುಉಂಗುರ ಗುರುತಿನ ಉಂಗುರ
ಸಿರಿಮಾನದವರು ಶ್ರೀಮಂತರು
ಸುತ್ತೀನ ಸುತ್ತಮುತ್ತಲಿನ
ಸುದ್ದುಳ್ಳ ಸುಂದರ  
ಸೆಳೆ ಸ್ವಚ್ಛಮಾಡು, ತೂಗು, ಜಗ್ಗು
ಸೆಳೆಮಂಚ ತೂಗುಮಂಚ
ಸೋಸಿನಡಿ ಎಚ್ಚರಿಕೆಯಿಂದ ಬಾಳು
ಹರದೇರು ಪತಿವ್ರತೆಯರು
ಹರ್ಯಾಗ ಮುಂಜಾನೆ, ಸೂರ್ಯೋದಯದ ಸಮಯ
ಹಸಬಂದೆ ಸ್ವಚ್ಛಬರು, ಚೆನ್ನಾಗಿ ತಾಳಿಕೆ ಬರು
ಹಳಬರು ಗೌಡನ ಕೈಕೆಳಗಿನವರು, ಊರ ಕಾಯುವವರು
ಹಾರೂರು ಬ್ರಾಹ್ಮಣರು
ಹಾಲುಂಬನುಡಿ ಶುಭನುಡಿ
ಹೊಡಿ ಗುಡಿಸು.
ಹೊತಿಗಿ ತಗಿಸು ಜ್ಯೋತಿಷ್ಯ ತೆಗೆಸು
ಹೊಳಿಗಾರ ಸವೆದ ಬೀಸುವ ಕಲ್ಲನ್ನು ಪುನಃ ಹೊಯ್ದು ಒರಟಾಗಿಸುವವನು, ಹೊಳಿಹೊಯ್ಯುವವನೆಂದೂ ಹೆಸರು, ಒಡ್ಡ