ಪ್ರಾರಂಭ
ನಿಮ್ಮ ಅನುಮತಿಯಿಲ್ಲದೇ ಯಾರೂ ನಿಮ್ಮಲ್ಲಿ ಕೀಳರಿಮೆ ತುಂಬಲು ಸಾಧ್ಯವಿಲ್ಲ.
– ಎಲಿನಾರ್ ರೂಸ್ವೆಲ್ಟ್
‘ನಾವು ಏನಾಗಿದ್ದೇವೆ’, ‘ಏನಲ್ಲ’ ಎನ್ನುವುದನ್ನೂ ಹಾಗೂ ‘ನಮ್ಮ ನಿಜವಾದ ಅಗತ್ಯಗಳೇನು ಹಾಗೂ ಬಯಕೆಗಳೇನು’ ಎನ್ನುವುದನ್ನು ನಾವೇ ಕಂಡುಕೊಳ್ಳಬೇಕು. ನಮ್ಮ ಕುರಿತಾಗಿ ನಮಗೇ ಉತ್ತಮ ಭಾವನೆ ಬರಲು ಏನು ಮಾಡಬೇಕು? ಇನ್ನೂ ಹೆಚ್ಚು ಸಂತೋಷ-ತೃಪ್ತಿಗಳಿಂದ ಇರುತ್ತ, ಹಂಚಿಕೊಂಡು ಬಾಳುತ್ತ, ಸೌಹಾರ್ದದ ಬದುಕನ್ನು ಬದುಕುವುದು ಹೇಗೆ?
ಅಧ್ಯಾಯದ ಪರಿಕಲ್ಪನೆ–
ಅಧ್ಯಾಯದ ಉದ್ದೇಶಗಳು–
ಅರಿವು ಎಂದರೇನು ಎಂದು ಅರಿಯುವುದು
ಅರಿವಿನ ವಿವಿಧ ಅಂಶಗಳನ್ನು ಅರಿಯುವುದು
ಅರಿವನ್ನು ಮೂಡಿಸಿಕೊಳ್ಳುವ ವಿಧಾನಗಳು
SWOT analysis (ತನ್ನ ಸಾಮರ್ಥ್ಯ-ದೋಷ-ಅವಕಾಶಗಳು ಮತ್ತು ಅಡತಡೆಗಳ ವಿಮರ್ಶೆಯ) ಮೂಲಕ ತನ್ನನ್ನು ತಾನೂ ಉತ್ತಮವಾಗಿ ತಿಳಿಯುವುದು
ಪರಿಚಯ
ಕೆಳಕಂಡ ಸರಣಿಯಿಂದ ಆಯ್ದ ಅಕ್ಷರಗಳ್ನು ಬಳಸಿ ಒಂದು ವ್ಯಕ್ತಿಯನ್ನು ವರ್ಣಿಸುವ ಗುಣ/ವಿಶೇಷಗಳನ್ನು ಎಷ್ಟು ಸಾಧ್ಯವೋ ಅಷ್ಟು ಗುರುತಿಸಿ-
(ಶಬ್ದಗಳು- ಪ್ರಾಮಾಣಿಕತೆ, ದಯೆ, ಪ್ರೇಮ, ಆತ್ಮವಿಶ್ವಾಸ, ಸ್ನೇಹಪರತೆ, ಕಾಳಜಿ, ಹೊಂದಾಣಿಕೆ, ಔದಾರ್ಯ, ವಿಶ್ವಸನೀಯತೆ, ಸಂಯಮ, ಸಂತೋಷ———– ಇನ್ನೂ ತುಂಬ ಇವೆ— ಹುಡುಕಿ)
ನಿರೀಕ್ಷಿತ ಪ್ರತಿಕ್ರಿಯೆ–
ಕಾಳಜಿ, ಸಂಯಮ, ಸೃಜನಶೀಲತೆ, ಧೃಢನಿಶ್ಚಯ, ಶಕ್ತಿ, ಹೊಂದಾಣಿಕೆ, ಸ್ನೇಹಪರತೆ, ಪ್ರಾಮಾಣಿಕತೆ, ವ್ಯವಸ್ಥಿತತೆ, ತಾಳ್ಮೆ, ಕಾರ್ಯಶೀಲತೆ, ಸಮಯಪ್ರಜ್ಞೆ, ವಿಶ್ವಸನೀಯತೆ, ಎಲ್ಲರೊಂದಿಗೆ ಬೆರೆಯುವಿಕೆ, ವಿನಯ, ಶಾಂತಿ.
ಈಗ ಆತ್ಮ ನಿರೀಕ್ಷಣೆ ಮಾಡಿಕೊಳ್ಳೋಣ–
ಕೆಳಕಂಡ ಪದಗಳನ್ನು ಓದಿ ಸರಣಿಯನ್ನು ಪೂರೈಸಿ- (ಮೇಲಿನ ಸರಣಿಯಿಂದಲೂ ಪದಗಳನ್ನು ಆಯ್ದುಕೊಳ್ಳಿ)
ಹಸನ್ಮುಖಿ, ಶುಚಿ, ಜಾಗರೂಕತೆ, ಸಮಯಪಾಲನೆ, ಸಮಚಿತ್ತ, ಮೃದುಮಾತು, ಪ್ರಾಮಾಣಿಕತೆ, ಪರಿಶ್ರಮಶೀಲತೆ, ಆತ್ಮವಿಶ್ವಾಸ, ಸತ್ಕೀರ್ತಿ, ಸ್ವತಂತ್ರ–ಮನೋಭಾವ, ಮಹತ್ವಾಕಾಂಕ್ಷೆ, ತಾಳ್ಮೆ, ದಯೆ, ವಿಶ್ವಸನೀಯತೆ, ವ್ಯವಸ್ಥಿತತೆ |
ಈ ಸರಣಿಯು ನಿಮ್ಮ ವೈಯಕ್ತಿಕ ಸ್ವಭಾವವನ್ನು ತೋರಿಸುತ್ತದೆ, ಸಂಕೋಚವಿಲ್ಲದೆ ಇದನ್ನು ಪೂರೈಸೋಣ. ಕೆಳಕಂಡ ಕೊಂಬೆಗಳ ಮೇಲೆ ಬರೆಯಿರಿ–
ನಾನು ಉತ್ತಮ ಪಡಿಸಿಕೊಳ್ಳಲು ಬಯಸುವ ವೈಯಕ್ತಿಕ ಗುಣಗಳು–
|
ಅರಿವಿನ ಪರಿಜ್ಞಾನ–
೧. ನಿಮ್ಮ ಭಾವನೆಗಳ ಅರಿವು.
೨. ನಿಮ್ಮ ಆಲೋಚನಾ ವಿಧಾನವನ್ನು ಅರಿತು ಯಾವ ಸಂದರ್ಭದಲ್ಲಿ ಯಾವ ಆಲೋಚನಾ ವಿನ್ಯಾಸವನ್ನು ಬಳಸುತ್ತೀರಿ ಎನ್ನುವುದನ್ನು ಗಮನಿಸುವುದು.
೩. ನಿಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯಗಳ ಅರಿವು.
೪. ನಿಮ್ಮನ್ನು ಸ್ಫೂರ್ತಿಗೊಳಿಸುವ ವಿಚಾರ ಯಾವುದು ಹಾಗೂ ಜೀವನದಲ್ಲಿ ಏನನ್ನು ಪಡೆಯಬಯಸುವಿರಿ ಎನ್ನುವುದರ ಅರಿವು.
೫. ಜನರ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರುತ್ತೀರಿ ಎನ್ನುವುದರ ಅರಿವು.
ಅರಿವು ಎಂದರೆ ಆತ್ಮಪ್ರಜ್ಞೆ –
- ಬಯಕೆಗಳು Vs ಅಗತ್ಯಗಳು
- ಸಾಮರ್ಥ್ಯಗಳು ಮತ್ತು ದೌರ್ಬಲ್ಯಗಳು
- ನಮ್ಮನ್ನು ಸ್ಫೂರ್ತಿಗೊಳಿಸುವುದು ಯಾವುದು?
- ಈ ವರೆಗಿನ ನಿಮ್ಮ ಸಾಧನೆಗಳೇನು?
- ಇತರರೊಡನೆ ವ್ಯವಹರಿಸುವುದು ಹೇಗೆ?
- ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮಗೊಳ್ಳಬೇಕು.
- ನಮ್ಮ ಅತಿ ಮುಖ್ಯ ನಂಬಿಕೆಗಳು ಹಾಗೂ ಮೌಲ್ಯಗಳು ಯಾವುವು?
ಅರಿವಿನ ಅಂಶಗಳು–
ನಮ್ಮ ಅರಿವು ಉತ್ತಮಗೊಳ್ಳಬೇಕಾದರೆ, ವಿವಿಧ ರಂಗಗಳಲ್ಲಿನ ನಮ್ಮ ಪಾತ್ರ-ಸಾಮರ್ಥ್ಯಗಳನ್ನು ಅರಿಯಬೇಕು.
ಅರಿವು ಎನ್ನುವುದು ನಮ್ಮ ವ್ಯಕ್ತಿತ್ವದ ವಿವರಗಳನ್ನು, ಮೌಲ್ಯಗಳನ್ನು, ನಂಬಿಕೆಗಳನ್ನು, ಸಹಜ ಪ್ರವೃತ್ತಿಗಳನ್ನು, ಹಾಗೂ ಒಲವುಗಳನ್ನು ಸಂಶೋಧಿಸುವ ಮಾಧ್ಯಮ. ಸಂದರ್ಭಗಳಿಗೆ ಪ್ರತಿಕ್ರಿಯೆ ತೋರುವ, ಕಲಿಯುವ ಹಾಗೂ ಮಾಹಿತಿಯನ್ನು ಗ್ರಹಿಸುವ ವಿಧಾನ ಮುಂತಾದವುಗಳಲ್ಲಿ ನಮ್ಮೆಲ್ಲರ ರೀತಿ ನೀತಿಗಳು ಬೇರೇ ಬೇರೆ; ಆದ್ದರಿಂದ ಆಗಾಗ ಆತ್ಮ ನಿರೀಕ್ಷೆಯಲ್ಲಿ ತೊಡಗಿ ನಮ್ಮ ಕುರಿತಾಗಿ ನಾವೇ ಅಂತರ್ದೃಷ್ಟಿಯನ್ನು ಬೆಳೆಸಿಕೊಳ್ಳುವುದು ಸಹಾಯಕ.
ನಾವು ಏನನ್ನು’ ಮಾಡುತ್ತೇವೆ ಹಾಗೂ ‘ಏಕೆ’ ಮಾಡುತ್ತೇವೆ ಎನ್ನುವುದನ್ನು ಅರಿಯುವುದು
ನಮ್ಮ ಕುರಿತಾಗಿ ನಾವೇ ಹೆಚ್ಚು ತಿಳಿಯೋಣ ಬನ್ನಿ–
ನಮ್ಮ ಕುರಿತಾಗಿ ನಮ್ಮ ಪರಿಚಿತರ ಅಭಿಪ್ರಾಯವನ್ನು ಪಡೆಯುವುದರಿಂದ, ಆತ್ಮ ನಿರೀಕ್ಷಣ-ಪರೀಕ್ಷಣಗಳಿಂದ ಹಾಗೂ ನಮ್ಮ ಭಾವನೆ-ವಿಚಾರ-ನಡವಳಿಕೆಗಳ ಪರಿಣಾಮಗಳನ್ನು ಸದಾ ಗಮನಿಸುವುದರಿಂದ ನಮ್ಮ ಅರಿವು ಹೆಚ್ಚುತ್ತದೆ.
ಈ ಕೆಳಕಂಡ ಅಭ್ಯಾಸವು ನಮ್ಮ ಇಷ್ಟ, ಅನಿಷ್ಟಗಳನ್ನು, ವಿಚಾರ ಹಾಗೂ ಒಲವುಗಳನ್ನು ಅರಿತುಕೊಳ್ಳಲು ಸಹಾಯಕ-
ನನಗಾದ ಅತ್ಯುತ್ತಮ ಅನುಭವ —– | ನನ್ನ ಅತ್ಯಂತ ಪ್ರಿಯ ಸಂಗೀತವೆಂದರೆ—- | ನನ್ನ ಕೌಶಲ ಚೆನ್ನಾಗಿರುವುದು ಈ ವಿಷಯದಲ್ಲಿ —- |
ನಾನು ಏನಾಗಬೇಕೆಂದಿದ್ದೇನೆಂದರೆ— | ನನಗೆ ಅತ್ಯಂತ ಸಂತೋಷವಾಗುವುದು ಯಾವಾಗೆಂದರೆ———- | ನನಗೆ ಚಿಂತೆಯುಂಟುಮಾಡುವ ವಿಷಯವೆಂದರೆ——– |
ನಾನು ತುಂಬ ಚೆನ್ನಾಗಿ ಕೆಲಸ ಮಾಡುವುದು ಯಾವಾಗೆಂದರೆ—— | ನನಗೆ ಇಷ್ಟವಿಲ್ಲದ್ದು—— | ನನ್ನ ಅತ್ಯಂತ ಪ್ರಿಯ ಸ್ಥಳ—– |
ಜನರು ಹೀಗೆ ಮಾಡಿದರೆ ಚೆನ್ನ ಎಂದು ನನಗೆನಿಸುತ್ತದೆ——– | ನನಗೆ ಕಷ್ಟವಾಗುವುದು ಯಾವಾಗೆಂದರೆ– | ನನ್ನ ಆದರ್ಶ ವ್ಯಕ್ತಿ——- |
ನನಗೆ ತುಂಬ ಆತ್ಮವಿಶ್ವಾಸವುಂಟಾಗುವುದು ಈ ವಿಷಯದಲ್ಲಿ—— | ನನ್ನ ಹವ್ಯಾಸಗಳು——– | ನನಗೆ ಭಯ ಉಂಟುಮಾಡುವ ವಿಷಯ—— |
ನಮ್ಮ ಶೈಕ್ಷಣಿಕ ಸಾಮರ್ಥ್ಯವನ್ನು ತಿಳಿಯೋಣ–
ನಮ್ಮೆಲ್ಲರ ಕಲಿಕೆಯ ಕ್ರಮ ಒಂದೇ ಅಲ್ಲ. ನಮ್ಮ ಮಟ್ಟಿಗೆ ಅನುಕೂಲವೆನಿಸುವ ಮಾದರಿಯಲ್ಲಿ ಮಾಹಿತಿಯನ್ನು ಗ್ರಹಿಸಿ ಅರ್ಥಮಾಡಿಕೊಳ್ಳುತ್ತೇವೆ. ನಮ್ಮ ಕಲಿಕೆಯ ರೀತಿಯ ಪರಿಚಯ ನಮಗಿದ್ದರೆ ಒಳ್ಳೆಯದು. ಆಗ ಅನುಕೂಲಕರವಾದ ಒಂದು ಕಲಿಕೆಯ ಪದ್ಧತಿಯನ್ನು ತಿಳಿದು ನಮ್ಮ ದೌರ್ಬಲ್ಯದ ಮೂಲಗಳನ್ನು ಪತ್ತೆಹಚ್ಚಿ ನಮ್ಮನ್ನು ನಾವೇ ಉತ್ತಮಗೊಳಿಸಿಕೊಳ್ಳುತ್ತ ಸಾಗಬಹುದು.
ಕಲಿಕೆಯ ಕ್ರಮಗಳು ನಮ್ಮ ವ್ಯಕ್ತಿತ್ವದ ಬಿಂಬಗಳಲ್ಲ ಎನ್ನುವುದನ್ನು ಮೊದಲು ತಿಳಿಯಬೇಕು. ಬೇರೆ ಬೇರೆ ಸಂದರ್ಭಗಳಲ್ಲಿ ನಾವು ಬೇರೆ ಬೇರೆ ಕಲಿಕೆಗಳ ಶೈಲಿಗಳನ್ನು ಬಳಸುತ್ತೇವೆ. ಆದರೂ ಯಾವುದಾದರೂ ಒಂದೋ ಎರಡೋ ಶೈಲಿಗಳಲ್ಲೇ ನಮ್ಮ ಒಲವು ಹೆಚ್ಚು ಇರುತ್ತದೆ. ಇನ್ನಿತರ ಶೈಲಿಗಳಲ್ಲೂ ಕಲಿಯಲು ನಾವು ನಿರಾಕರಿಸಿದಲ್ಲಿ, ನಮ್ಮ ಕಲಿಕೆಯ ಪ್ರಕ್ರಿಯೆಯೇ ಕುಂಠಿತವಾದೀತು.
ಕಲಿಕೆಯ ಕ್ರಮಗಳ ಆತ್ಮ–ಪರೀಕ್ಷಣ
ಕೆಳಗೆ ನಿಮಗೆ ಸರಿಯೆನಿಸುವ ವಾಕ್ಯವನ್ನು ಗುರುತು (√) ಮಾಡಿ
೧. ಮನಸ್ಸಿನಲ್ಲಿ ಚಿತ್ರಣ ಮಾಡಿಕೊಳ್ಳುವುದರ ಮೂಲಕ ನಾನು ಚೆನ್ನಾಗಿ ನೆನಪಿಟ್ಟುಕೊಳ್ಳಬಲ್ಲೆ.
೨. ಬರೆದುಕೊಟ್ಟ ಸಂದೇಶಗಳಿಗಿಂತ ಬಾಯಲ್ಲಿ ಹೇಳಿದ್ದನ್ನು ನೆನಪಿಟ್ಟುಕೊಳ್ಳುವುದು ನನಗೆ ಸುಲಭ.
೩. ಪುಸ್ತಕ ಓದುವುದಕ್ಕಿಂತ ಉಪನ್ಯಾಸ ಕೇಳುವುದರಲ್ಲಿ ನನಗೆ ಹೆಚ್ಚು ಆಸಕ್ತಿ.
೪. ನಾನು ಸದಾ ಏನನ್ನಾದರೂ ಮಾಡುತ್ತಲೇ ಇರುತ್ತೇನೆ (ಲೇಖನಿಯಿಂದ ಬಡಿಯುವುದು, ಬೀಗದಕೈಯೊಂದಿಗೆ ಆಟವಾಡುವುದು, ಇತ್ಯಾದಿ).
೫. ನನಗೆ ನಕ್ಷೆ, ಗ್ರಾಫ್ ಹಾಗೂ ಚಿತ್ರಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ವಿವರಣೆಯನ್ನು ಅಪೇಕ್ಷಿಸುತ್ತೇನೆ.
೬. ಉಪನ್ಯಾಸ ಕೇಳುವುದಕ್ಕಿಂತ ನನಗೆ ನಕ್ಷೆ, ಚಿತ್ರ ಹಾಗೂ ಗ್ರಾಫ್ಗಳೇ ಹೆಚ್ಚು ಇಷ್ಟವಾಗುತ್ತವೆ.
೭. ಕೆಲಸ ಮಾಡುವಾಗ ನಿಂತಿರಲು ಇಷ್ಟಪಡುತ್ತೇನೆ.
೮. ಬಾಯಲ್ಲಿ ಹೇಳಿದಕ್ಕಿಂತ ಬರೆದುಕೊಟ್ಟ ನಿರ್ದೇಶನಗಳನ್ನೇ ನಾನು ಚೆನ್ನಾಗಿ ಪಾಲಿಸುತ್ತೇನೆ.
೯. ಗ್ರಾಫ್, ಚಾರ್ಟ್ ಹಾಗೂ ಪ್ರದರ್ಶನದ ವಸ್ತುಗಳನ್ನು (ಕ್ರಾಫ್ಟ್ಸ್) ತಯಾರಿಸುವುದರಲ್ಲಿ ನನ್ನ ಕೌಶಲ ಹೆಚ್ಚು.
೧೦. ನಾನು ವೇಗವಾಗಿ ಮಾತನಾಡುತ್ತೇನೆ. ಮಾತನಾಡುವಾಗ ಕೈಗಳನ್ನು ಇತರರಿಗಿಂತ ಹೆಚ್ಚಾಗಿ ಬಳಸುತ್ತೇನೆ.
೧೧. ನನ್ನೊಳಗೆ ನಾನೇ ಹಾಡುವುದು, ಸೀಟಿ ಹೊಡೆಯುವುದು ಅಥವಾ ಗುನುಗುವುದು ಜಾಸ್ತಿ.
೧೨. ಕಲೆಗಳಲ್ಲಿ ನನಗೆ ಪರಿಣತಿ.
೧೩. ಕ್ರೀಡೆಗಳಲ್ಲಿ ನನಗೆ ಪರಿಣತಿ.
೧೪. ಪುಸ್ತಕಗಳನ್ನು ಓದಿ ಮಾರ್ಜಿನ್ ಗಳಲ್ಲಿ ಟಿಪ್ಪಣಿ ಮಾಡಿಕೊಳ್ಳುವುದರಲ್ಲಿ ನನಗೆ ಒಲವು.
೧೫. ಸಭೆಗಳಲ್ಲಿ ನನಗೆ ಬೇಕಾದ ಶೈಲಿಯಲ್ಲಿ ಟಿಪ್ಪಣಿ ಬರೆದುಕೊಳ್ಳಲು ಇಚ್ಛಿಸುತ್ತೇನೆ.
೧೬. ಉಪನ್ಯಾಸ ಅಥವಾ ಚರ್ಚೆಗಳಲ್ಲಿ ನಡೆದ ವಿಚಾರವನ್ನು ಗುರುತು ಹಾಕಿಕೊಂಡು ನಂತರ ಪುನರವಲೋಕನ ಮಾಡಲು ಬಯಸುತ್ತೇನೆ.
೧೭. ಸಂಪಾದಕೀಯ ಲೇಖನಗಳನ್ನು ಓದಲು ಇಷ್ಟ. ಪತ್ರಿಕೆಗಳಲ್ಲಿನ ಹೊಸ ಲೇಖನಗಳ ಕುರಿತಾಗಿ ನನ್ನ ಅನಿಸಿಕೆಗಳನ್ನು ಬರೆಯಲು ಇಷ್ಟಪಡುತ್ತೇನೆ.
೧೮. ಒಂಟಿಯಾಗಿ ಓದಲು ಇಷ್ಟಪಡುತ್ತೇನೆ ಹಾಗೂ ಪುಸ್ತಕದಿಂದ ಕಲಿಯಲು ಬಯಸುತ್ತೇನೆ.
೧೯. ನನ್ನ ವಾಕ್ಚಾತುರ್ಯ ಚೆನ್ನಾಗಿದೆ. ಚರ್ಚೆಗಳಲ್ಲಿ, ಸಂವಾದಗಳಲ್ಲಿ ಭಾಗವಹಿಸಲು ಇಷ್ಟಪಡುತ್ತೇನೆ.
೨೦. ನಕ್ಷೆಯಲ್ಲಿನ ನಿರ್ದೇಶನಗಳನ್ನು ಅರ್ಥಮಾಡಿಕೊಂಡು ಅನುಸರಿಸುವುದು ನನಗೆ ಸುಲಭವೆನಿಸುತ್ತದೆ.
೨೧. ಉಪನ್ಯಾಸಕರ ಮುಖಭಾವ ಹಾಗೂ ಹಾವಭಾವಗಳನ್ನು ಗಮನಿಸುವುದರ ಮೂಲಕ ಅವರ ಇಂಗಿತವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇನೆ.
೨೨. ಒಂಟಿಯಾಗಿರುವಾಗ ನನ್ನಲ್ಲಿ ನಾನೇ ಮಾತನಾಡಿಕೊಳ್ಳುತ್ತೇನೆ.
೨೩. ಚಟುವಟಿಕೆಯಲ್ಲಿ ಭಾಗವಹಿಸುವುದರ ಮೂಲಕ ಕಲಿಯುವುದು ನನಗೆ ಅಗತ್ಯವೆನಿಸುತ್ತದೆ.
೨೪. ಪ್ರತಿಕೃತಿಗಳನ್ನು ಅಥವಾ ಕರಕುಶಲ ವಸ್ತುಗಳನ್ನು ತಯಾರಿಸುವುದು ನನಗೆ ಇಷ್ಟವಾಗುತ್ತದೆ.
ಗಣನೆಯ ಸಾಧನ–
ಕಲಿಕೆಯ ಕ್ರಮ | ಪ್ರಶ್ನೆಗಳು | ಪ್ರತಿಯೊಂದು ಕಲಿಕಾ ವಿನ್ಯಾಸಕ್ಕೆ ನನ್ನ ಅಂಕಗಳು– | ||
ದೃಶ್ಯ | ೧ | ೬ ೯ | ೧೨ ೨೦ ೨೧ | |
ಶ್ರಾವ್ಯ | ೨ | ೩ ೫ | ೧೧ ೧೯ ೨೨ | |
ಓದುವ/ ಬರೆಯುವ | ೮ | ೧೪ ೧೫ | ೧೬ ೧೭ ೧೮ | |
ಕ್ರಿಯಾತ್ಮಕ | ೪ | ೭ ೧೦ | ೧೩ ೨೩ ೨೪ |
ನಾವೆಲ್ಲರೂ ಬೇರೆ ಬೇರೆ ಕ್ರಮಗಳಲ್ಲಿ ಕಲಿಯುತ್ತೇವೆ. ಕಲಿಕೆಯಲ್ಲಿ ೪ ವಿಧಾನಗಳಿವೆ-
ದೃಶ್ಯ ಕಲಿಕೆಯ ವಿಧಾನದವರು
|
ಓದುವ/ ಬರೆಯುವ ಕಲಿಕೆಯ ವಿಧಾನದವರು
|
ಶ್ರಾವ್ಯ ಕಲಿಕೆಯ ವಿಧಾನದವರು
|
ಕ್ರಿಯಾತ್ಮಕ ವಿಧಾನದ ಕಲಿಕೆಯವರು
|
ನನ್ನ ಕಲಿಕೆಯ ವಿಧಾನ / ವಿಧಾನಗಳು ಯಾವುವೆಂದರೆ —-
|
ಅರಿವು ಏಕೆ ಬೇಕು?
- ನಮ್ಮ ಚಿಂತನ-ಕೌಶಲವನ್ನು ಹೆಚ್ಚಿಸಲು.
- ಸಮಸ್ಯೆಗಳನ್ನು ಮೊದಲೇ ಗುರುತಿಸಲು ಹಾಗೂ ಪರಿಹರಿಸಲು.
- ಭಾವನೆಗಳನ್ನು ನಿರ್ವಹಿಸಲು.
- ಒತ್ತಡವನ್ನು ನಿಯಂತ್ರಿಸಲು.
- ಉನ್ನತ ಮಟ್ಟದ ಪ್ರೇರಣೆ-ಉತ್ಸಾಹಗಳನ್ನು ಜಾರಿಯಿಡಲು.
- ನಾಯಕತ್ವದ ಕೌಶಲವನ್ನು ಬೆಳೆಸಿಕೊಳ್ಳಲು.
- ಆತ್ಮವಿಶ್ವಾಸ ಹಾಗೂ ತನ್ನ ಚಿಂತನೆಯ ಮಂಡನೆಯನ್ನು (ತನ್ನ ಅಭಿಮತವನ್ನು ಬಲವಾಗಿ ಮಂಡಿಸುವುದು) ಮಾಡುವ ಅರ್ಹತೆಯನ್ನು ಬೆಳೆಸಿಕೊಳ್ಳಲು.
- ಪ್ರಾಮಾಣಿಕತೆ ಹಾಗೂ ಉದಾರ ಮನೋಭಾವವನ್ನು ಬೆಳೆಸಿಕೊಳ್ಳಲು.
- ಅರಿವಿನಿಂದ ಕೂಡಿದ ನಿರ್ಧಾರಗಳನ್ನು ತೆಗೆದುಕೊಳ್ಳಲು.
- ತನ್ನನ್ನು ತಾನೇ ಭಾವನಾತ್ಮಕವಾಗಿ ಅರಿಯುವುದು-
- ನಿಮ್ಮ ಬಗ್ಗೆ ನಿಮಗೆ ಅಭಿಮಾನವಿದೆಯೆ? ನೋಡೋಣ-
ಸ್ವಾಭಿಮಾನವು ಅತಿ ಮುಖ್ಯವಾಗಿದ್ದು ಜೀವನದ ಕುರಿತಾದ ನಮ್ಮ ಸಕಾರಾತ್ಮಕ ದೃಷ್ಟಿಯನ್ನು ಅದು ನಿರ್ಧರಿಸುತ್ತದೆ.
ಸ್ವಾಭಿಮಾನವನ್ನು ಅರ್ಥ ಮಾಡಿಕೊಳ್ಳಲು ಆತ್ಮಾಭಿಮಾನ ಪದವನ್ನು ಎರಡಾಗಿ ವಿಂಗಡಿಸೋಣ- ಆತ್ಮ + ಅಭಿಮಾನ. ‘ಆತ್ಮ’ವೆಂದರೆ ನಾವೇ, ‘ಅಭಿಮಾನ’ವೆಂದರೆ ನಮ್ಮ ಕುರಿತಾಗಿ ನಮಗೆ ಇರುವ ಭಾವನೆ.
೧. ಉನ್ನತ ಸ್ವಾಭಿಮಾನವೆಂದರೆ ನಮ್ಮ ಕುರಿತಾಗಿ ನಮಗೆ ಇರುವ ಉತ್ತಮ ಭಾವನೆ.
೨. ಕೀಳು ಅಭಿಮಾನವೆಂದರೆ ನಮ್ಮ ಕುರಿತಾಗಿ ನಮಗೆ ಇರುವ ಕೀಳು ಭಾವನೆ.
೩. ಉತ್ತಮ ಭಾವನಾತ್ಮಕ ಚಾತುರ್ಯ (ಭಾವನಾಸೂಚ್ಯಂಕ/EI) ಉಳ್ಳಂತಹ ವ್ಯಕ್ತಿಯಲ್ಲಿ ಸ್ವಾಭಿಮಾನವಿರುತ್ತದೆ, ಆದರೆ ಅಹಂಕಾರವಿರುವುದಿಲ್ಲ. ತನ್ನ ದೌರ್ಬಲ್ಯಗಳನ್ನು ಗುರುತಿಸಿ ಅವುಗಳನ್ನು ತಿದ್ದಿಕೊಳ್ಳುವತ್ತ ಪ್ರವೃತ್ತನಾಗುತ್ತಾನೆ.
ನಾವು ಉತ್ತಮ ಸ್ವಾಭಿಮಾನವುಳ್ಳವರೆ? ಪರೀಕ್ಷಿಸಿ ನೋಡಿಕೊಳ್ಳೋಣ–
ನಿಮಗೆ ಸರಿಯೆನಿಸಿದ ವಾಕ್ಯಗಳನ್ನು ಗುರುತು (√) ಮಾಡಿ
ಕ್ರ ಸಂ | ವಾಕ್ಯಗಳು | ಹೌದು | ಇಲ್ಲ |
೧
೨
೩
|
ನಾನು ಉತ್ತಮ ಕಾರ್ಯವನ್ನು ಮಾಡಿದ್ದರೂ ನನ್ನ ತಾಯ್ತಂದೆಯರು ಮೆಚ್ಚುವುದಿಲ್ಲ ಎನಿಸುತ್ತದೆ. ನಾನು ಬೇರೆಯವರ ಅಭಿಪ್ರಾಯವನ್ನು ಅಷ್ಟಾಗಿ ತೆಗೆದುಕೊಳ್ಳುವುದಿಲ್ಲ, ಏಕೆಂದರೆ ಅದು ನನ್ನದಕ್ಕಿಂತ ಹೆಚ್ಚು ಗಣನೆಗೆ ಬರುವುದಿಲ್ಲ.
ಬೇರೆಯವರು ನನ್ನ ಕಾರ್ಯವನ್ನು ಯಾವಾಗಲೂ ಟೀಕಿಸುತ್ತಾರೆ ಎನಿಸುತ್ತದೆ. ಬೇರೆಯವರು ಏನೆಂದುಕೊಳ್ಳುತ್ತಾರೋ ಎಂದು ನನ್ನ ಸ್ವಂತ ಮಾತುಗಳನ್ನು ಹೇಳಲು ಅಥವಾ ನನ್ನ ಸ್ವಂತ ವಿಧಾನದಲ್ಲಿ ಕಾರ್ಯಗಳನ್ನು ಮಾಡಲು ಹಿಂಜರಿಯುತ್ತೇನೆ. |
||
೫
೬
೭
೮ |
ಏನಾದರೂ ತಪ್ಪಾದಾಗ ನಾನು ನನ್ನನ್ನೇ ದೂಷಿಸಿಕೊಳ್ಳುತ್ತೇನೆ.ಏನನ್ನಾದರೂ ಮಾಡುವಾಗ ನನಗೆ ಮೊದಲು ಅದರ ನಕಾರಾತ್ಮಕ ಪರಿಣಾಮಗಳೇ ಮನಸ್ಸಿಗೆ ಬರುತ್ತವೆ.
ನಾನು ಸ್ಪರ್ಧೆಯಲ್ಲಿ ಗೆದ್ದಾಗ ನನಗೆ ಆ ಅರ್ಹತೆ ಇಲ್ಲ ಎಂದೆನಿಸುತ್ತದೆ. ನಾನು ಯಾವುದೇ ಕೆಲಸವನ್ನು ಮಾಡಿ ಮುಗಿಸುವುದು ಕೇವಲ ಅದೃಷ್ಟದಿಂದ ಎಂದೆನಿಸುತ್ತದೆ. |
||
೯ ೧೦
|
ನಾನು ಏಕೆ ಇನ್ನೂ ಹೆಚ್ಚು ‘ಯಶಸ್ವಿಯಾಗಲಾರೆ’ ಎಂದು ಸದಾ ಆಲೋಚಿಸುತ್ತಿರುತ್ತೇನೆ. ನಾನು ಒಂದು ಗುರಿಯನ್ನು ಸಾಧಿಸಲು ಆಗದಿದ್ದಾಗ ಅದನ್ನು ‘ವೈಫಲ್ಯ’ ಎಂದು ಪರಿಗಣಿಸುತ್ತೇನೆ.
ಬೇರೆಯವರು ನನ್ನ ವಿಷಯದಲ್ಲಿ ಒಳ್ಳೆಯದಾಗಿ ವ್ಯವಹರಿಸಿದಾಗ ನನಗೆ ಅನುಮಾನವುಂಟಾಗುತ್ತದೆ. |
||
೧೨ | ಇತರರನ್ನು ಅವರ ಸಾಮರ್ಥ್ಯಗಳಿಗಾಗಿ ಮೆಚ್ಚುವಾಗ ನನಗೆ ಮುಜುಗರವೆನಿಸುತ್ತದೆ. | ||
೧೩ | ನನ್ನ ಸ್ನೇಹಿತರು ತುಂಬ ಯಶಸ್ವಿಯಾದಾಗ ಕಸಿವಿಸಿಯಾಗುತ್ತದೆ. ನಾನು ಅವರಿಗಿಂತ ಹೆಚ್ಚು ಅರ್ಹ ಎಂದೆನಿಸುತ್ತದೆ. | ||
೧೪ ೧೫
|
‘ತಪ್ಪಾಯಿತು’ ಎಂದು ಹೇಳಲು ನನಗೆ ಕಷ್ಟವೆನಿಸುತ್ತದೆ.ನನಗೆ ನಾನೆ ಹೇಳಿಕೊಳ್ಳುತ್ತಿರುತ್ತೇನೆ- “ಯಾಕಾದರೂ ಪ್ರಯತ್ನಿಸಬೇಕು? ಹೇಗಿದ್ದರೂ ನಾನು ಸಫಲನಾಗಲಾರೆ” ಎಂದು.
ನನ್ನ ಉಪನ್ಯಾಸಕರು / ಅಧ್ಯಾಪಕರು ನನ್ನನ್ನು ಹೊಗಳಿದಾಗ ನಾನು ಅವರ ಮಾತನ್ನು ನಂಬುವುದಿಲ್ಲ. |
||
೧೭ | ನನ್ನ ಸ್ನೇಹಿತರು ನನ್ನನ್ನು ಮೆಚ್ಚುತ್ತಾರೆ ಎನಿಸುವುದಿಲ್ಲ. ನನಗೆ ಅವರ ಮಾತುಗಳಲ್ಲಿ ವಿಶ್ವಾಸವಿಲ್ಲ. ನನ್ನನ್ನು ಕಂಡರೆ ಇವರಿಗೆ ಇಷ್ಟವಿಲ್ಲ ಎಂದೆನಿಸುವಂತಹ ಜನರಿಂದ ನಾನು ದೂರವಿರುತ್ತೇನೆ. | ||
ಒಟ್ಟು ‘ಹೌದು’ ಗಳ ಸಂಖ್ಯೆ – | |||
ಒಟ್ಟು ‘ಇಲ್ಲ’ಗಳ ಸಂಖ್ಯೆ – |
ಮೌಲ್ಯಮಾಪನ–
ಹೆಚ್ಚಿನ ಸಂಖ್ಯೆಯಲ್ಲಿ ‘ಹೌದು’ಗಳಿಗೆ ಗುರುತು ಹಾಕಿದ್ದಲ್ಲಿ ನಿಮ್ಮ ಸ್ವಾಭಿಮಾನ ಹೆಚ್ಚು ಎಂದರ್ಥ. ‘ಇಲ್ಲ’ಗಳಿಗೆ ಹೆಚ್ಚು ಗುರುತು ಹಾಕಿದ್ದಲ್ಲಿ ನೀವು ನಿಮ್ಮ ಸ್ವಾಭಿಮಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರ್ಥ.
ಉನ್ನತ ಸ್ವಾಭಿಮಾನವಿರುವವರು ಎಂದರೆ ನಿಮಗೆ ನಿಮ್ಮ ಕುರಿತಾಗಿ ಹೆಚ್ಚಿನ ಬೆಲೆಯಿದೆ ಎಂದರ್ಥ.
ನೀವು ನಿಮ್ಮ ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕೆ?
ಸ್ವಾಭಿಮಾನದ ೬ ಕಂಬಗಳನ್ನು ಆಶ್ರಯಿಸೋಣ
ಸ್ವಸ್ಥ ಸ್ವಾಭಿಮಾನವನ್ನು ಬೆಳೆಸಿಕೊಂಡು ಕಾಪಾಡಿಕೊಳ್ಳಲು ೬ ಮುಖ್ಯ ಅಭ್ಯಾಸಗಳನ್ನು ಮಾಡಬೇಕಾಗುತ್ತದೆ. ಇವುಗಳೇ ೬ ಕಂಬಗಳು-
೧. ಅರಿವಿನಿಂದ ಬದುಕುವುದು
೧. ವಾಸ್ತವವನ್ನು ಗೌರವಿಸಿ.
೨. ವರ್ತಮಾನದಲ್ಲಿ ಬದುಕಿ ಮತ್ತು ದುಡಿಯಿರಿ.
೩. ಮಾಹಿತಿ, ಜ್ಞಾನ ಹಾಗೂ ಪ್ರತಿಸ್ಪಂದನಗಳನ್ನು ಉದಾರವಾಗಿ ಸ್ವಾಗತಿಸಿ.
೪. ಹೊರಗಿನ ಪ್ರಪಂಚದೊಂದಿಗಿನ ನಿಮ್ಮ ಸಂಬಂಧವನ್ನು ಅರ್ಥಮಾಡಿಕೊಳ್ಳಿ.
೫. ನಿಮ್ಮೊಳಗಿನ ಪ್ರಪಂಚವನ್ನು ಅರಿಯಿರಿ, ಉತ್ತಮ ಪಡಿಸಿಕೊಳ್ಳಿ.
೨. ಆತ್ಮ ಸ್ವೀಕಾರ
೧. ನಿಮ್ಮ ಭಾವನೆ, ವಿಚಾರ ಹಾಗೂ ಕೃತಿಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಿ.
೨. ನೀವೇ ವೈಫಲ್ಯಕ್ಕೆ ಜವಾಬ್ದಾರರಾದ ಪಕ್ಷದಲ್ಲಿ, ಅದನ್ನು ಒಪ್ಪಿಕೊಳ್ಳಿ.
೩. ವಸ್ತುಸ್ಥಿತಿಯಿಂದ ಭಾವನೆಯನ್ನು ಬೇರ್ಪಡಿಸಿ ವಿವೇಚಿಸಿ.
೩. ಜವಾಬ್ದಾರಿ
೧. ನಮ್ಮ ಆಯ್ಕೆ ಹಾಗೂ ಕೃತಿಗಳಿಗೆ ನಾವೇ ಕಾರಣ.
೨. ಗುರಿ-ಸಾಧನೆಯವರೆಗೂ ಲಕ್ಷ್ಯವನ್ನೇ ಅವಿರತ ಜಪಿಸಿ.
೩. ಸ್ವಾತಂತ್ರ್ಯ ಹಾಗೂ ಪರಸ್ಪರ ಸಹಕಾರ ಎರಡನ್ನೂ ಆಧರಿಸಿ.
೪. ವ್ಯಕ್ತಿಯ ಮೇಲಲ್ಲ, ಕಾರ್ಯದ ಮೇಲೆ ಗಮನವಿರಲಿ.
೪. ಸ್ವಮತ ಮಂಡನೆ (ತನ್ನ ಅಭಿಮತವನ್ನು ಬಲವಾಗಿ ಮಂಡಿಸುವುದು)
೧. ಮಾಡುವ ಎಲ್ಲ ಕಾರ್ಯವನ್ನೂ ಅಧಿಕೃತವಾಗಿ ಮಾಡಿ.
೨. ಇತರರ ನಂಬಿಕೆ ಹಾಗೂ ಮೌಲ್ಯಗಳನ್ನು ಗೌರವಿಸಿ.
೩. ಅಭಿಪ್ರಾಯವನ್ನು ಒಪ್ಪಿಕೊಳ್ಳಿ.
೪. ನಿಮಗಾಗಿ ಹಾಗೂ ನಿಮ್ಮ ಸಿದ್ಧಾಂತಗಳಿಗಾಗಿ ಧೃಡತೆಯನ್ನು ಪ್ರದರ್ಶಿಸಿ.
೫. ಉದ್ದೇಶಪೂರ್ವಕವಾಗಿ ಬದುಕುವುದು
೧. ದೀರ್ಘ ಹಾಗೂ ಸಣ್ಣ ಕಾಲಾವಧಿಯ ಗುರಿಗಳನ್ನು ಗುರುತಿಸಿಕೊಳ್ಳಿ.
೨. ಲಕ್ಷ್ಯ ಸಾಧನೆಗೆ ಸಂಬಂಧಿಸಿದಂತೆ ಭಾವನೆಗಳನ್ನು, ಕೌಶಲಗಳನ್ನು ಹಾಗೂ ಜ್ಞಾನವನ್ನು ಯೋಜಿಸಿಕೊಳ್ಳಿ.
೩. ವಿಮರ್ಶಿಸಿ- ಗುರಿ ಹಾಗೂ ಸಾಧನಾಕ್ರಮವನ್ನು ಪುನರವಲೋಕನ ಮಾಡಿಕೊಳ್ಳಿ.
೬. ಪ್ರಾಮಾಣಿಕತೆ
೧. ನುಡಿದಂತೆ ನಡೆಯಿರಿ.
೨. ಭಾವನೆ ಹಾಗೂ ಕೃತಿಗಳ ನಡುವೆ ವಿರೋಧವಿಲ್ಲದಿರಲಿ.
೩. ಮೌಲ್ಯಗಳನ್ನು ಉಪದೇಶಿಸುವುದಕ್ಕಿಂತ ಅನುಷ್ಠಾನ ಮಾಡಿ.
ಸ್ವಾಭಿಮಾನವನ್ನು ಸಂಸ್ಕರಿಸೋಣ
ನನ್ನ ಸ್ವಾಭಿಮಾನವನ್ನು ಬೆಳೆಸಿಕೊಳ್ಳಲು ನಾನು ೬ ಮೆಟ್ಟಿಲ ಏಣಿಯನ್ನು ಬಳಸುವೆ.
ಅವುಗಳು ಯಾವುವೆಂದರೆ-
SWOT ANALYSIS
SWOT Analysis ಎಂದರೆ ಕಾರ್ಯವೆಸಗುವಲ್ಲಿನ ನಮ್ಮ ಸಾಮರ್ಥ್ಯ, ದೌರ್ಬಲ್ಯ, ಅವಕಾಶಗಳು ಹಾಗೂ ಅಡತಡೆಗಳನ್ನು ವಿವೇಚಿಸುವ ವ್ಯವಸ್ಥಿತವಾದ ಯೋಜನಾಕ್ರಮ. ಇದು ಇನ್ನೂ ಉತ್ತಮ ನಿರ್ಣಯ ಹಾಗೂ ಸಮಸ್ಯಾ-ಪರಿಹಾರಗಳನ್ನು ಹುಡುಕುವ ಕ್ರಮ.
ಸಾಮರ್ಥ್ಯಗಳು– ನಮ್ಮ ಕಾರ್ಯದಲ್ಲಿ ನೆರವಾಗುವಂತಹ ಸಕಾರಾತ್ಮಕ ಗುಣ-ಸಾಧ್ಯತೆಗಳು.
ದೌರ್ಬಲ್ಯಗಳು– ಕಾರ್ಯದಲ್ಲಿ ತಡೆ ಉಂಟು ಮಾಡುವಂತಹ ನಕಾರಾತ್ಮಕ ಅಂಶಗಳು.
ಅವಕಾಶಗಳು– ಲಕ್ಷ್ಯ ಸಾಧನೆಯಲ್ಲಿ ಅನುಕೂಲವೊದಗಿಸುವಂತಹ ಬಾಹ್ಯ ಸಂದರ್ಭಗಳು.
ಅಡತಡೆಗಳು– ನಮ್ಮ ಕಾರ್ಯದಲ್ಲಿ ತಡೆಯುಂಟು ಮಾಡುವಂತಹ ಬಾಹ್ಯ ಕಾರಣಗಳು.
SWOT analysis ಮೂಲಕ ನಮ್ಮ ಹಿಂದಿನ ಜೀವನವನ್ನು ಒಳಹೊಕ್ಕು ನೋಡಿ ವಿವೇಚಿಸಿ, ಇಂದಿನ ಅಥವಾ ಮುಂದೆ ಬರಬಹುದಾದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪರಿಹಾರಗಳನ್ನು ಹುಡುಕಬಹುದು.
ಒಂದೊಂದನ್ನೂ ವಿವರವಾಗಿ ನೋಡೋಣ–
ಉದಾಹರಣೆ– ನಾನು ಒಬ್ಬ real estate ಉದ್ಯಮಿಯಾಗಲು ಬಯಸುತ್ತೇನೆ
ಸಾಮರ್ಥ್ಯಗಳು
|
ದೌರ್ಬಲ್ಯಗಳು
|
ಅವಕಾಶಗಳು
|
ಅಡತಡೆಗಳು
|
ಈ ಅಭ್ಯಾಸವು ನಮ್ಮ ಮೌಮಾಪನ ಮಾಡುತ್ತ ನಮ್ಮ ನಿರ್ಧಾರ ಶಕ್ತಿಯನ್ನು ಹೆಚ್ಚಿಸುತ್ತದೆ. ಬನ್ನಿ ಮಾಡೋಣ. SWOT Analysis ಪತ್ರವನ್ನು ಭರ್ತಿ ಮಾಡಿ-
ಸಾಮರ್ಥ್ಯಗಳು
|
ದೌರ್ಬಲ್ಯಗಳು
|
ಅವಕಾಶಗಳು
|
ಅಡತಡೆಗಳು |
ಜೊಹಾರಿ ಕಿಟಕಿ–
ಅಮೇರಿಕದ ಮನೋವಿಜ್ಞಾನಿಗಳಾದ ಜೋಸೆಫ್ ಲುಫ್ ಹಾಗೂ ಹ್ಯಾರಿ-ಇಂಗ್-ಹಮ್ರವರು ೧೯೫೦ ರಲ್ಲಿ ಈ ‘ಕಿಟಕಿ’ಯನ್ನು ತಯಾರಿಸಿದರು. ಇದು ಆತ್ಮ ಪ್ರಜ್ಞೆ, ವ್ಯಕ್ತಿತ್ವ ನಿರ್ಮಾಣ, ಸಮೂಹ ಪ್ರಗತಿ ಹಾಗೂ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು ಬಳಸಲಾಗುತ್ತದೆ.
1
ಮುಕ್ತ ರಿಕ್ತ ಪ್ರದೇಶ
|
2
ಅಂಧಪ್ರದೇಶ |
3
ಗುಪ್ತಪ್ರದೇಶ |
4
ಅಜ್ಞಾತಪ್ರದೇಶ
|
ಜೋಹಾರಿ ಕಿಟಕಿಯ ನಾಲ್ಕು ಭಾಗಗಳು–
೧. ವ್ಯಕ್ತಿಗೆ ತನ್ನ ಬಗ್ಗೆ ಗೊತ್ತಿರುವುದು ಇತರರಿಗೂ ಗೊತ್ತಿರುವ ಅಂಶಗಳು- ಮುಕ್ತ– ರಿಕ್ತ ಪ್ರದೇಶ, ಮುಕ್ತ ವ್ಯಕ್ತಿತ್ವ/ಬಯಲು
೨. ವ್ಯಕ್ತಿಗೆ ತನ್ನ ಕುರಿತಾಗಿ ತನಗೆ ಗೊತ್ತಿಲ್ಲದಿದ್ದು, ಇತರರಿಗೆ ಗೊತ್ತಿರುವ ಅಂಶಗಳು – ಅಂಧ ಪ್ರದೇಶ, ಅಂಧ ವ್ಯಕ್ತಿತ್ವ ಅಥವಾ ಅಂಧ ಮೂಲೆ
೩. ತನ್ನ ಬಗ್ಗೆ ತನಗೆ ಗೊತ್ತಿದ್ದು ಇತರರಿಗೆ ಗೊತ್ತಿರದ ಅಂಶಗಳು- ಗುಪ್ತ ಪ್ರದೇಶ, ಗುಪ್ತ ವ್ಯಕ್ತಿತ್ವ, ಉದಾಸೀನ ಮಾಡಿದ ವ್ಯಕ್ತಿತ್ವ.
೪. ತನಗೂ ಇತರರಿಗೂ ತನ್ನ ಬಗ್ಗೆ ಗೊತ್ತಿರದ ಅಂಶಗಳು- ಅಜ್ಞಾತ ವ್ಯಕ್ತಿತ್ವ ಅಥವಾ ಅಜ್ಞಾತ ಆತ್ಮ.
ಜೊಹಾರಿ ಚತುರ್ಭುಜ–೧ ಮುಕ್ತ ವ್ಯಕ್ತಿತ್ವ/ ಪ್ರದೇಶ/ ಸಾರ್ವಜನಿಕ ಪ್ರದೇಶ ಮುಕ್ತ ಚಟುವಟಿಕೆಯ ಪ್ರದೇಶ
– ನಡವಳಿಕೆಯ ಶೈಲಿಗಳು – ಮನೋಭಾವಗಳು – ಭಾವನೆಗಳು
|
ಜೊಹಾರಿ ಚತುರ್ಭುಜ–೨ ಕತ್ತಲೆಯ ವ್ಯಕ್ತಿತ್ವ/ ಪ್ರದೇಶ/ ಮೂಲೆ / ಗುಣ/ ದೃಷ್ಟಿಕೋನಗಳು / ಮೌಲ್ಯಗಳು
ಇತರರಿಗೆ ಗೊತ್ತು ಆದರೆ ತನಗೇ ಗೊತ್ತಿಲ್ಲ.
|
ಜೊಹಾರಿ ಚತುರ್ಭುಜ–೩ – ಗುಪ್ತ ವ್ಯಕ್ತಿತ್ವ / ಪ್ರದೇಶ ಅಥವಾ ಉದಾಸೀನ ಮಾಡಿದ ಭಾಗ
|
ಜೊಹಾರಿ ಚತುರ್ಭುಜ–೪–ಅಜ್ಞಾತ ವ್ಯಕ್ತಿತ್ವ/ ಪ್ರದೇಶ ಅಥವಾ ಚಟುವಟಿಕೆ.
ಅಜ್ಞಾತ ಚಟುವಟಿಕೆಗಳ ಪ್ರದೇಶ
|
ನಮಗೆ ಯಾವುದು ಮುಖ್ಯವೆಂಬುದನ್ನು ಮರಳಿ ತಿಳಿಯೋಣ.
ಜೊಹಾರಿ ಚತುರ್ಭುಜವನ್ನು ಪೂರೈಸಿ
ಮುಕ್ತ ಪ್ರದೇಶ | ಅಂಧ ಪ್ರದೇಶ |
|
|
ಗುಪ್ತ ಪ್ರದೇಶ | ಅಜ್ಞಾತ ಪ್ರದೇಶ |
|
ನಾವು ಅನನ್ಯರು
ಇಡೀ ಜಗತ್ತಿನಲ್ಲಿ ನಿನ್ನಂತೆಯೇ ಇರುವವನು ಒಬ್ಬನೇ ವ್ಯಕ್ತಿ – ಅದು ನೀನೇ! ನೀನು ಹೇಗಿದ್ದೀಯೋ ಹಾಗೆ ನನಗೆ ಇಷ್ಟವಾಗುತ್ತೀಯೆ– ಅದೇ ಸರಿ!”
– ರೋಜರ್ಸ್, ಸಾರ್ವಜನಿಕ ಪ್ರಸರಣ ಸೇವೆ
ಗ್ರಂಥ ಸಲಹೆ:
You can win by Shiv Khera, New Dawn Press Group
Self Awareness, Viva Publication, New Delhi
ಅಂತರ್ಜಾಲ ಮೂಲ:
Leave A Comment