ಪ್ರಾರಂಭ

ಚಿತ್ರವನ್ನು ಗಮನಿಸಿ

ನೀವು ಪರ್ವತದ ಶಿಖರವನ್ನು ಹೇಗೆ ತಲುಪುವಿರಿ?

ಅಲ್ಲಿ ಮುಟ್ಟಲು ಹೇಗೆ ಸಾಧ್ಯ? ನಿಮ್ಮ ಅನಿಸಿಕೆಗಳನ್ನು ಕೆಳಗೆ ಕೊಟ್ಟಿರುವ ಸ್ಥಳದಲ್ಲಿ ಬರೆಯಿರಿ.

 

ಅಧ್ಯಾಯದ ಪರಿಕಲ್ಪನೆ

ಅಧ್ಯಾಯದ ಧ್ಯೇಯಗಳು :

೧. ‘ಗುರಿ’ ಶಬ್ದದ ಅರ್ಥವನ್ನು ತಿಳಿದುಕೊಳ್ಳುವುದು.

೨. ಅಲ್ಪಾವಧಿ ಮತ್ತು ಧೀರ್ಘಾವಧಿ ಗುರಿಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು.

೩. ಗುರಿ ನಿರ್ಧಾರದ ಲಾಭಗಳ ಬಗ್ಗೆ ಅರಿವು.

೪. ಗುರಿ ನಿರ್ಧಾರ ಮಾಡುವಾಗ ಕ್ರಮಿಸಬೇಕಾದ ಹಂತಗಳು.

೫. ಜೀವನ ವೃತ್ತಿಯ ಗುರಿಗಳನ್ನು ಗುರುತಿಸುವುದು ಮತ್ತು ಅದನ್ನು ಮುಂದುವರೆಸುವುದರ ಬಗ್ಗೆ ಯೋಚನೆ.

೬. ಗುರಿಯನ್ನು ತಲುಪುವ ವಿಧಾನದ ಶೋಧನೆ.

ಪ್ರಸ್ತಾವನೆ

ಗುರಿ ಎಂದರೇನು?

ಗುರಿ ಎಂದರೆ ‘ಒಂದು ನಿಶ್ಚಿತ ಅವಧಿಯೊಳಗೆ ಸಾಧಿಸಬೇಕಾದ ಸಾಫಲ್ಯ’. ಗುರಿ ಎಷ್ಟು ನಿಖರವಾಗಿ ಮತ್ತು ನಿಚ್ಚಳವಾಗಿ ಇರುತ್ತದೆಯೋ, ಸಫಲತೆಯೂ ಅಷ್ಟೇ ವೇಗದಲ್ಲಿರುತ್ತದೆ. ನಾವು ಗುರಿಯನ್ನು ನಿರ್ಧರಿಸುವಾಗ ಹೇಳುತ್ತೇವೆ, “ನಾನು —— ಮಾಡಬೇಕು” ಎಂದು. ನಮ್ಮ ಧ್ಯೇಯ ‘ಒಂದು ಸಾಕು ನಾಯಿಯನ್ನು ಕೊಂಡುಕೊಳ್ಳುವುದು’, ‘ಒಂದು ನೃತ್ಯವನ್ನು ಕಲಿಯುವುದು’ ಅಥವಾ ‘ಕಾಲೇಜಿನಲ್ಲಿ ಒಳ್ಳೆಯ ಅಂಕಗಳನ್ನು ಪಡೆಯುವುದು ಇತ್ಯಾದಿಯಾಗಿ ಇರಬಹುದು.

ನಿಮಗೆ ಏನು ಬೇಕು ——-ನಿಮ್ಮ ಆಶಯಗಳು ——– “ಗುರಿ ಎಷ್ಟು ದೊಡ್ಡದಾಗಿರುತ್ತದೆಯೋ ಅದಕ್ಕೆ ಪಡುವ ಶ್ರಮವೂ ಅಷ್ಟೇ ದೊಡ್ಡದಾಗಿರಬೇಕು”.

ಆಶಯಗಳು Vs ಗುರಿ  

ಆಶಯ: ನಾವು ಏನನ್ನು ಇಷ್ಟಪಡುತ್ತೇವೆಯೋ ಅದು ಆಶಯ. ಅದು ‘ಕೆಲಸ ಮಾಡುವ ಹಂಬಲ’ ಎನ್ನಬಹುದು.ನಿಮ್ಮ ಅನಿಸಿಕೆಗಳ ಬಗ್ಗೆ ಒಂದು ಪಟ್ಟಿ ಮಾಡಿ.

ಗುರಿ: ಒಂದು ನಿಶ್ಚಿತ ಅವಧಿಯಲ್ಲಿ ಸಾಧಿಸಬೇಕಾದದ್ದು ಗುರಿ.
ಒಂದು ಆಶಯವನ್ನು ಗುರಿಯನ್ನಾಗಿ ಮಾಡುವುದಕ್ಕೆ
ನಮ್ಮ ಮನಸ್ಸನ್ನು ಒತ್ತಾಯಿಸಬೇಕು
.

 ಗುರಿ ನಿರ್ಧಾರ ಎಂದರೇನು?

ನಿರ್ದಿಷ್ಟ ಪ್ರಯತ್ನದಿಂದ ನಾವು ಸಾಧಿಸುವ ಅಂತ್ಯವೇ ಗುರಿ. ನಾವೇನನ್ನು ಸಾಧಿಸಬೇಕು ಎನ್ನುವುದನ್ನು ಗುರುತಿಸಿ, ರೂಪುರೇಷೆಗಳನ್ನು ಮಾಡಿಕೊಳ್ಳೊವುದೇ ‘ಗುರಿ-ನಿಶ್ಚಯ’ ಎನಿಸುತ್ತದೆ. ಗುರಿಯನ್ನು ಸಾಧಿಸಲು ಬೇಕಾಗುವ ನಿರ್ದಿಷ್ಟ ಸಂಪನ್ಮೂಲಗಳು ಹಾಗೂ ಮೌಲ್ಯಗಳ ಕುರಿತಾಗಿ ಮೊದಲೆ ಸ್ಪಷ್ಟ ಚಿತ್ರಣ ಮಾಡಿಕೊಳ್ಳುವುದು ಮುಖ್ಯ.

ನಿರ್ದಿಷ್ಟ ಪ್ರಯತ್ನದಿಂದ ನಾವು ಸಾಧಿಸುವ ಅಂತ್ಯವೇ ಗುರಿ. 

ಗುರಿಗಳು ಹೀಗಿರಬಹುದು

ಮಹತ್ತರ ಗುರಿಗಳು: ಇದು ಒಂದು ಸಂದರ್ಭದ ಎಲ್ಲ ಅಂಶಗಳ ‘ಸಮಗ್ರ ಚಿತ್ರಣ’ವನ್ನು ಕಾಣುವ ಸಾಮರ್ಥ್ಯ. ಈ ಮಹತ್ತರ ಚಿತ್ರಣವೇ ನಮ್ಮ ಗುರಿ/ಲಕ್ಷ್ಯವಾಗಿರುತ್ತದೆ. ಜೀವನದ ವಿವಿಧ ವಿಷಯಗಳ ಅರ್ಥ ಇಲ್ಲಿ ಸೇರಿರುತ್ತದೆ. ಈ ಗುರಿಗಳನ್ನು ಕೇವಲ ಒಂದು ಹೆಜ್ಜೆಯಲ್ಲಿ ಸಾಧಿಸಲಾಗದು- ಬದಲಾಗಿ ಗುರಿಯನ್ನು ಮುಟ್ಟಲು ಒಂದು ದೀರ್ಘ ಪ್ರಯಾಣವನ್ನೇ ಕೈಗೊಳ್ಳಬೇಕಾಗುತ್ತದೆ.

ಮೈಲಿಗಲ್ಲು ಗುರಿಗಳು: ನಮ್ಮ ಗುರಿಯನ್ನು ಮಟ್ಟಿಲು ಮಾರ್ಗದಲ್ಲಿ ಸಾಧಿಸುತ್ತ ಸಾಗಬೇಕಾದ ಅನೇಕ ಸಣ್ಣ ಗುರಿಗಳ ಸರಣಿ.

ಸಣ್ಣ ಗುರಿಗಳು: ಸಾಧಿಸಲು ಸುಲಭವಾಗುವಂತೆ ಮೈಲಿಗಲ್ಲು ಗುರಿಯನ್ನು ವಿಭಜಿಸಿ ಹೆಚ್ಚು ಸುಲಭಸಾಧ್ಯವಾಗಿಸಲು ಮಾಡಿಕೊಳ್ಳುವ ಸಣ್ಣ ಗುರಿಗಳು.


ಇದನ್ನು ಚಿತ್ರದ ಮೂಲಕ ತಿಳಿಸಲಾಗಿದೆ- ಅನೇಕ ಸಣ್ಣ ಗುರಿಗಳನ್ನು ಸಾಧಿಸುತ್ತ ಮೈಲಿಗಲ್ಲು ಗುರಿಗಳನ್ನು ಸಾಧಿಸುವುದು, ಅನೇಕ ಮೈಲಿಗಲ್ಲು ಗುರಿಗಳನ್ನು ಪೂರೈಸುತ್ತ ಮಹತ್ತರ ಗುರಿಯನ್ನು ತಲುಪುವುದು.


ಅಲ್ಪಾವಧಿ ಮತ್ತು ದೀರ್ಘಾವದಿಯ ಗುರಿಗಳು:

ಅಲ್ಪಾವಧಿ ಗುರಿಗಳು ಶೀಘ್ರದಲ್ಲೇ ಸಾಧಿಸಬಹುದಾದ ಗುರಿಗಳನ್ನು ಅಲ್ಪಾವಧಿ ಗುರಿಗಳನ್ನು ಎನ್ನಲಾಗುತ್ತದೆ. (ಉದಾ: ಒಂದು ದಿನದಲ್ಲಿ, ವಾರದಲ್ಲಿ ಅಥವಾ ಕೆಲವು ತಿಂಗಳ ಅವಧಿಯಲ್ಲಿ)ಉದಾಹರಣೆ-

 • ೨ ತಿಂಗಳಲ್ಲಿ ೫ ಕೆ.ಜಿ ತೂಕವನ್ನು ಇಳಿಸಬೇಕು
 • ೨೦ ದಿನಗಳಲ್ಲಿ ಒಂದು ಕಂಪ್ಯೂಟರ್ ಕೋರ್ಸನ್ನು ಮುಗಿಸುವುದು

ನನ್ನ ಭಾವನೆಗಳನ್ನು ಡೈರಿಯಲ್ಲಿ ಬರೆದಿಟ್ಟು, ಕೋಪವನ್ನು ಸಂಯಮ ಮಾಡಿಕೊಂಡ ಸಂದರ್ಭಗಳಲ್ಲಿ ನನಗೆ ನಾನೆ ಮೆಚ್ಚುಗೆಯನ್ನು ತೋರುವುದು. 

ದೀರ್ಘಾವಧಿ ಗುರಿಗಳು ದೀರ್ಘಕಾಲದಲ್ಲಿ ಸಾಧಿಸಬೇಕಾದ ಗುರಿ. (ಉದಾ: ಸೆಮಸ್ಟರ್ (ಅರ್ಧ ವರ್ಷ), ಒಂದು ವರ್ಷ, ೫ ವರ್ಷ, ಅಥವಾ ೨೦ ವರ್ಷಗಳು, ಇತ್ಯಾದಿ)ಉದಾಹರಣೆ-

 • ಒಂದಷ್ಟು ತೂಕ ಇಳಿಸುವುದು
 • ಕಂಪ್ಯೂಟರ್ ಬಗ್ಗೆ ತಿಳಿಯುವುದು
 • ಕೋಪವನ್ನು ಕಡಿಮೆ ಮಾಡಿಕೊಳ್ಳುವುದು 

ನಮ್ಮ ಗುರಿಯ ಬಗ್ಗೆ ಬರೆಯೋಣ

 
ಗುರಿ ನಿರ್ಧಾರ ಮಾಡುವುದು ಮುಖ್ಯವಾದ ಕೌಶಲಗಳಲ್ಲಿ ಒಂದು. ನಾವು ಎಲ್ಲಿಗೆ ತಲುಪಬೇಕು, ಏನನ್ನು ಸಾಧಿಸಬೇಕು ಎನ್ನುವುದಕ್ಕೆ ದಾರಿದೀವಿಗೆಯಾಗಿ ಸಹಕರಿಸುತ್ತದೆ.

ಗುರಿನಿರ್ಧಾರವೆನ್ನುವುದು ಒಂದು ಮಹತ್ವಪೂರ್ಣಕೌಶಲ. ನಾವು ಎಲ್ಲಿಂದ ಎಲ್ಲಿಗೆ ಸಾಗಬೇಕು ಹಾಗೂ ಏನನ್ನು ಸಾಧಿಸಬೇಕು ಎನ್ನುವುದರ ಸ್ಪಷ್ಟ ಮಾರ್ಗದರ್ಶನ ಮಾಡುತ್ತದೆ.

 • ಅವರವರ ಹಿತಚಿಂತನೆಯನ್ನು
 • ಅಗತ್ಯಗಳನ್ನು ಹಾಗೂ
 • ಬಯಕೆಗಳನ್ನು ಆಧರಿಸಿ – ಒಬ್ಬಬ್ಬೊರ ಜೀವನ ಗುರಿಯೂ ಬೇರೆ ಬೇರೆಯಾಗಿರುತ್ತದೆ.


ಭವಿಷ್ಯದಲ್ಲಿ ನಿಶ್ಚಿತವಾದ ಮಾರ್ಗವನ್ನು ಹಿಡಿಯಲು ಈ ಗುರಿನಿರ್ಧಾರ ಸಹಾಯಕ. ಗುರಿಯನ್ನು ನಿರ್ಧರಿಸುವುದರಿಂದ ಮುಂದಿನ ಕಾರ್ಯಪ್ರಣಾಲಿಯನ್ನು ಸಮಯಸರಣಿಯನ್ನೂ  ಪೂರ್ವಯೋಜನೆ ಮಾಡಿಕೊಂಡು ಸಾಧನೆಯಲ್ಲಿ ತೊಡಗಲು ಅನುಕೂಲವಾಗುತ್ತದೆ. ಒಂದೊಂದು ಹಂತವನ್ನು ಏರುತ್ತ ಹೋದಂತೆ ನಮ್ಮ ಕನಸು ನನಸಾಗುವ ಸಂದರ್ಭ ಹತ್ತಿರವಾಗುತ್ತಿರುವುದು ನಮಗೇ ಅನುಭವಕ್ಕೆ ಬರುತ್ತದೆ.

ಗುರಿಯ ನಿರ್ಧಾರ ಏಕೆ ಮಾಡಬೇಕು?

ವ್ಯಾಪಾರ ಕ್ಷೇತ್ರದಲ್ಲಿ ಹಾಗೂ ಸಫಲ ಜೀವನಕ್ಕಾಗಿ “ಗುರಿ” ಮುಖ್ಯವಾದದ್ದು.  ಗುರಿಗಳು ಮುಖ್ಯ ಗಮ್ಯಗಳನ್ನು (Objectives) ಆಯ್ಕೆ ಮಾಡಿಕೊಂಡು, ಅದರ ಕುರಿತಾಗಿ ಯೋಜನ ಹೂಡಲು ಹಾಗೂ ಅಪೇಕ್ಷಿತ ಫಲವನ್ನು ಪಡೆಯುವಂತ ರೀತಿಯಲ್ಲಿ ಅದನ್ನು ಕಾರ್ಯಗತಗೊಳಿಸಲು (Mission) ಸಹಾಯಕವಾಗುತ್ತವೆ. ಗುರಿ-ನಿರ್ಧಾರವು ನಮ್ಮ ಶಕ್ತಿಯನ್ನು ವರ್ಧಿಸುತ್ತದೆ. ನಮ್ಮ ಕುರಿತಾಗಿಯೂ ಇತರರ ಕುರಿತಾಗಿಯೂ ನಮಗೆ ಒಳ್ಳೆಯ ಭಾವ ಮೂಡುವಂತೆ ಮಾಡುತ್ತದೆ.  ಇದರಿಂದ ನಮ್ಮ ಜೀವನ ಉಲ್ಲಾಸಮಯವಾಗುತ್ತದೆ!

ಗುರಿಗಳು :

 • ಪ್ರಚಲಿತ ಕಾರ್ಯಗಳಿಗೆ ದಿಕ್ಕನ್ನು ಸೃಷ್ಟಿಸುತ್ತವೆ.
 • ನಿರೀಕ್ಷಿತ ಪರಿಣಾಮವನ್ನು ಗಮನಿಸುವಂತೆ ಮಾಡುತ್ತದೆ.
 • ಸಮಾನ-ಧ್ಯೇಯವನ್ನು ರೂಪಿಸಿ ತಂಡದ ಕಾರ್ಯಕೌಶಲವನ್ನು ಹೆಚ್ಚಿಸುತ್ತದೆ.
 • ಲಕ್ಷ್ಯವನ್ನು ನೆನೆಪಿಸುತ್ತ ನಮ್ಮ ಕಾರ್ಯಕೌಶಲವನ್ನು ಉತ್ತಮ ಪಡಿಸುತ್ತದೆ.

ಗುರಿಗಳು ಸ್ಫೂರ್ತಿಯನ್ನಿತ್ತು ಪ್ರಗತಿ ಮತ್ತು ಯಶಸ್ಸಿಗೆ ಬೇಕಾದ ಮಾರ್ಗದರ್ಶನವನ್ನು ಮಾಡುತ್ತದೆ. ಹೇಗೆಂದರೆ

 • ಗುರಿಯೇ ಇಲ್ಲದಿದ್ದಲ್ಲಿ ನಾವು ಎತ್ತ ಸಾಗುತ್ತಿದ್ದೇವೆ ಎಂದು ತಿಳಿಯುವುದಾದರೂ ಹೇಗೆ?
 • ಗುರಿಯಿಲ್ಲದಿದ್ದರೆ ಪ್ರಗತಿ ಆಗುತ್ತಿದೆಯೋ ಇಲ್ಲವೋ ಎನ್ನುವುದು ಗೊತ್ತಾಗುವುದಾದರೂ ಹೇಗೆ?
 • ಗುರಿ ಎನ್ನುವುದು ಇಲ್ಲದಿದ್ದಲ್ಲಿ ಯಶಸ್ಸು ಬರುವುದು ಯಾವಾಗ ಎಂದು ತಿಳಿಯುವುದಾದರೂ ಹೇಗೆ?

ಆಲೋಚಿಸಿ:  

ನಾವು ಬಸ್ ನ್ನು ಹತ್ತಿ ಕುಳಿತುಕೊಂಡಿದ್ದೇವೆ. ಆದರೆ ಅದು ಎಲ್ಲಿಗೆ ಹೋಗಿ ತಲುಪುತ್ತದೆ ಎನ್ನುವುದು ನಮಗೆ ತಿಳಿಯದಿದ್ದರೆ ಹೇಗೆ? ಸ್ವಲ್ಪ ಆಲೋಚಿಸೋಣ- ಪಯಣಿಗನೊಬ್ಬ ನಡೆಯುತ್ತ ಎರಡು ರಸ್ತೆಗಳು ಕವಲೊಡೆಯುವ ಜಾಗಕ್ಕೆ ಬಂದು ನಿಂತ. ಅಲ್ಲಿದ್ದ ಹಿರಿಯರೊಬ್ಬರನ್ನು ಕೇಳಿದ, “ಈ ದಾರಿ ಎಲ್ಲಿಗೆ ಹೋಗುತ್ತದೆ?” “ಹಿರಿಯರು ಕೇಳಿದರು, “ನೀನು ಎಲ್ಲಿಗೆ ಹೋಗಬೇಕು?”.  ಈತ ಉತ್ತರಿಸಿದ, “ನನಗೆ ಗೊತ್ತಿಲ್ಲ”. ಆ ಹಿರಿಯರು ಹೇಳಿದರು – “ಹಾಗಾದರೆ ಇಷ್ಟ ಬಂದ ದಾರಿಯಲ್ಲಿ ಹೋಗಬಹುದು. ನೀನು ಎಲ್ಲಿಗೆ ಹೋಗಬೇಕೆಂದು ನಿನಗೇ ತಿಳಿದಿಲ್ಲದಿದ್ದ ಮೇಲೆ ಯಾವ ದಾರಿಯಾದರೇನು? ಏನೂ ವ್ಯತ್ಯಾಸವಾಗುವುದಿಲ್ಲ”.

ಕೆಳಗೆ ಕೊಟ್ಟಿರುವ ಪ್ರಶ್ನೆಗಳನ್ನು ಉತ್ತರಿಸಿ :

ಈ ಸಂದರ್ಭದಿಂದ ನಿಮಗೇನು ತಿಳಿದುಬರುತ್ತದೆ?

—————————————————————————————-

—————————————————————————————-

—————————————————————————————-

ಎಂದಾದರೂ ನಿಮಗೆ ಹೀಗೆ ಆಗಿದೆಯೇ? “ಹೌದು” ಎಂದಾದರೆ ವಿವರಿಸಿ

—————————————————————————————-

—————————————————————————————-

—————————————————————————————-

ಮನುಷ್ಯನಿಗೆ ತಾನು ಹೋಗುವ ದಾರಿ ಗೊತ್ತಿದ್ದರೆ ಜಗತ್ತು ಅವನಿಗೆ ದಾರಿ ಮಾಡಿ ಕೊಡುತ್ತದೆ.
ರಾಘ್ ವಾಲ್ಡೊ ಎಮರ್ಸನ್ 

ಗುರಿನಿರ್ಧಾರದಲ್ಲಿನ ನಿರೀಕ್ಷೆಗಳು

ನಾವು ಗುರಿಯನ್ನು ನಿರ್ಧರಿಸಿದಾಗ ನಮ್ಮ ಸುತ್ತಲಿನ ಜನರು ನಮ್ಮಲ್ಲಿ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಆ ನಿರೀಕ್ಷೆಯ ಮೂಲಗಳು ಯಾವುವೆಂದರೆ-

ಗುರಿನಿರ್ಧಾರದ ಕ್ಷೇತ್ರಗಳು

ಗುರಿ ನಿರ್ಧಾರದ ಸ್ಥಾನಗಳು:

ಗುರಿ ನಿರ್ಧಾರದ ದೃಷ್ಟಿಯಲ್ಲಿ ಅನೇಕ ರೆಂಬೆಗಳ ಸಹಾಯದಿಂದ ಕೆಳಕಂಡ ಚಿತ್ರವನ್ನು ಪೂರ್ತಿ ಮಾಡಿ.

ನೀನು ಬರೆದಿಡುವವರೆಗೂ ಅದು ಒಂದು ಕನಸು, ನಂತರ ಅದೇ ಗುರಿಯಾಗುತ್ತದೆ.
SMART (ಚುರುಕು / ಚತುರ) ಗುರಿ 

ನಿಶ್ಚಿತ: ನಮ್ಮ ಗುರಿ ಒಂದು ನಿಗದಿತ ದಿಕ್ಕಿನಲ್ಲಿ ಇರುತ್ತದೆ. ನಿಶ್ಚಿತ ಅಂದರೆ ನಿಗದಿತವಾಗಿ ಕೇಂದ್ರೀಕೃತವಾದದ್ದು. ಯಾವುದನ್ನು ಸಾಧಿಸಬೇಕೆಂಬುದು ನಮಗೆ ತಿಳಿದಾಗ ‘ನಿಶ್ಚಿತ ಗುರಿ’ಯಿಂದಾಗಿ ಕಾರ್ಯ ಪೂರ್ಣಗೊಳ್ಳುತ್ತದೆ.

SMART ಗುರಿಯಲ್ಲಿ ನಿಶ್ಚಿತ ಅಂದರೆ ಏನು, ಏಕೆ ಮತ್ತು ಹೇಗೆ ಒಂದು ಮಾದರಿ.

 • ನಾವು ಏನು ಮಾಡುತ್ತೇವೆ? ಇದಕ್ಕೆ ಕ್ರಿಯಾಶಬ್ದಗಳ ಬಳಕೆ ಮಾಡಬೇಕು – ನೇರವಾಗಿ, ಸಂಘಟನೆ, ಸಹಕಾರ, ನಾಯಕತ್ವ, ಬೆಳವಣಿಗೆ, ಯೋಜನೆ, ನಿರ್ಮಾಣ, ಇತ್ಯಾದಿ.
 • ಈ ಸಮಯದಲ್ಲಿ ಇದರ ಮಹತ್ವ ಹೇಗೆ? ಪೂರ್ಣಗೊಳಿಸಲು ನಾವೇನು ಮಾಡಬೇಕು?
 • ನಾವು ಅದನ್ನು ಹೇಗೆ ಮಾಡುತ್ತೇವೆ? (ಯಾವ ಶೈಲಿಯಲ್ಲಿ—)

ನಿಮ್ಮ ಗುರಿ ‘ನಿಶ್ಚಿತ’ವೂ, ಸ್ಪಷ್ಟವೂ ಸುಲಭವೂ ಆಗಿದೆಯೇ ಎನ್ನುವುದನ್ನು ಮೊದಲು ಖಚಿತ ಪಡಿಸಿಕೊಳ್ಳಿ. ‘ಆರೋಗ್ಯಕ್ಕಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು’ ಎನ್ನುವುದಕ್ಕಿಂತ ‘ಸೊಂಟದ ಅಳತೆಯನ್ನು ೨ ಸೆಂ.ಮೀ ಕಡಿಮೆ ಮಾಡಬೇಕು ಅಥವಾ ವ್ಯಾಯಾಮ ದೄಷ್ಟಿಯಿಂದ ೫ ಕಿ.ಮಿ. ದೂರವನ್ನು ವೇಗವಾಗಿ ನಡೆಯುವ ಅಭ್ಯಾಸ ಇಟ್ಟುಕೊಳ್ಳುವೆ’ ಎನ್ನುವ ಗುರಿಯ ನಿಶ್ಚಯ ಲೇಸು. ‘ಸವಾಲೋ ಎಂಬಂತೆ ೫ ಮೈಲಿಗಳ ದೂರವನ್ನು ಅತಿ ವೇಗವಾಗಿ ನಡೆಯುವುದು’ ಆಗುವುದಿಲ್ಲ.


ಉದಾ: ಒಂದು ವೇಳೆ ನಿಮ್ಮ ಹೇಳಿಕೆ – “ನಾನು ಡಾಕ್ಟರ್ ಆಗಬೇಕು” ಎಂದು ಆಗಿದ್ದರೆ ಸಾಲದು. ‘ನಾನೊಬ್ಬ ಹೃದ್ರೋಗ-ತಜ್ಞನಾಗಬೇಕು’ ಎಂದು ನಿರ್ದಿಷ್ಟವಾಗಿ ನಿಶ್ಚಯಿಸಿದಾಗ ಮಾತ್ರ ನೀವು ಗುರಿಯನ್ನು ಮುಟ್ಟುವಿರಿ. ಅಲ್ಲೂ ‘ಶಿಶುಗಳ ಹೃದ್ರೋಗದ ಬಗ್ಗೆ ಶೋಧನೆಯನ್ನು ಮಾಡುತ್ತೇನೆ” ಎಂದು ಒಂದು ನಿರ್ದಿಷ್ಟ ಕೇಂದ್ರದ ಮೇಲೆ ಏಕಾಗ್ರವಾಗಿ ಚಿಂತಿಸಿದಾಗ ಮಾತ್ರವೇ ಗುರಿಸಾಧನೆ ಸಾಧ್ಯ.

ಗಣನೆಗೆ ನಿಲುಕುವಂತಹದ್ದು ನಾವು ಯಾವಾಗ ಗುರಿ ತಲುಪುತ್ತೇವೆಂಬುದು ನಮಗೇ ತಿಳಿಯುತ್ತದೆ. ಅಳೆಯಬಹುದಾದ ಗುರಿಯನ್ನು ಪರಿಮಾಣಿಸಬಹುದು. ಗುರಿ ಸಾಧಿಸಿರುವ ಬಗ್ಗೆ ಇರುವ ಸಾಕ್ಷಿಗಳನ್ನು ನೆನೆಸಬೇಕು.

ಉದಾ: “ಚೆನ್ನಾಗಿ” ಅಥವಾ “ವೇಗವಾಗಿ” – ಈ ಪದಗಳು ಪರಿಮಾಣ ಸೂಚಕವಾಗುವುದಿಲ್ಲ.  ನಮ್ಮ ಮುನ್ನಡೆಯನ್ನು ಗಮನಿಸಲು ‘ಮುನ್ನಡೆಯ ಅಳತೆ’ ಬಹಳ ಮುಖ್ಯವೆನಿಸಿಕೊಳ್ಳುತ್ತದೆ. ಒಂದು ‘ಅಳೆಯಬಹುದಾದ’ (ಸ್ಪಷ್ಟ ಪರಿಮಿತಿಯ) ಗುರಿಯನ್ನು ತೆಗೆದುಕೊಂಡಾಗ ಮಾತ್ರ ನಾವು ಬದಲಾವಣೆಯನ್ನು ಗಮನಿಸಬಹುದು. ಗುರಿ ಮುಟ್ಟುವುದು ಹೇಗೆ? ನಿರ್ದಿಷ್ಟತೆ ಇರಲಿ. “ನನ್ನ ಹುಟ್ಟುಹಬ್ಬಕ್ಕಿಂತ ಮೊದಲೇ ಈ ೧೦೦ ಪುಟಗಳ ಪುಸ್ತಕದಲ್ಲಿ ೩ ಅಧ್ಯಾಯಗಳನ್ನು ಓದಿ ಮುಗಿಸುವೆ”. ಇದು ಒಂದು ನಿರ್ದಿಷ್ಟವಾದ, ಅಳೆಯಬಹುದಾದ ಗುರಿ. ಆದರೆ “ನಾನು ಒಬ್ಬ ಒಳ್ಳೆಯ ಓದುಗನಾಗಬೇಕು” – ಇದು ಅಳೆಯಬಹುದಾದ ಗುರಿಯಲ್ಲ. (ನಿರ್ದಿಷ್ಟವಾಗಿಲ್ಲ) ಉದಾ: ಹಿಂದಿನ ೨೪ನೇ ನವೆಂಬರ್ ಟೆಸ್ಟಿಗಿಂತ ಈ ಬಾರಿ ೧೦% ಹೆಚ್ಚಾಗಿ ಅಂಕ ಪಡೆಯಬೇಕು.

ಸಾಧಿಸಬಹುದಾದದ್ದು: ನಾವು ಕೆಲವು ಗುರಿಗಳನ್ನು ಸಾಧಿಸಬಲ್ಲೆವು ಅನಿಸುತ್ತದೆ. ಸಾಧಿಸಬಹುದಾದಂತಹ ಗುರಿಗಳು ಎಂದರೆ ನಾವು ಸ್ವತಃ ನಿಭಾಯಿಸುವಂತಹದ್ದು. ಗುರಿಸಾಧ್ಯತೆ ‘ನಮಗೆ’ ಸೀಮಿತವಾದದ್ದು. ನಮ್ಮ ಗುರಿ ನಮ್ಮ ನಿಯಂತ್ರಣದಲ್ಲಿರುವ ವಸ್ತುಗಳನ್ನು ಸಾರುವಂತಿರಬೇಕು. ಗುರಿಯು ಕೈಗೆ ಎಟುಕಲಾರದಂತಹದ್ದಾಗಿರದೆ, ನಿರಾಶೆ ಮೂಡಿಸದೆ, ‘ಸವಾಲು’ ಮಾತ್ರ ಆಗಿರಬೇಕು.


ಗುರಿಗಳು ಅಸಾಧ್ಯವೆನಿಸಿ ಬಹಳ ದೂರ ಉಳಿದರೆ ಪ್ರಾಯಶಃ ನಾವು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಒಳ್ಳೆಯ ಸಂಕಲ್ಪದಿಂದಲೇ ಶುರು ಮಾಡಿದ್ದರೂ ಇದು ‘ನನ್ನ ಶಕ್ತಿಗೆ ಮೀರಿದ್ದು’ ಎನ್ನುವ ಭಾವ ನಮ್ಮ ಅಂತರಂಗದ ಮೂಲೆಯಲ್ಲಿದ್ದು ಕೆಲಸ ಮಾಡುತ್ತಿರುತ್ತದೆ, ನಮ್ಮಿಂದ ಆಗಬಹುದಾದ ಅತ್ಯುತ್ತಮ ಕಾರ್ಯ ಪ್ರದರ್ಶನಕ್ಕೆ ಇದು ತಣ್ಣೀರೆರಚುತ್ತದೆ.

ಉದಾ: ನಾನು ಗಣಿತದಲ್ಲಿ ೬೦% ಅಂಕ ಪಡೆದಿದ್ದೇನೆ ಎಂದು ಇಟ್ಟುಕೊಳ್ಳಿ; ಮುಂದಿನ ಸಲಕ್ಕೆ ಹಠಾತ್ತನೆ ೯೯% ಪಡೆಯಬೇಕು ಎಂದು ಅಪೇಕ್ಷಿಸಿದಲ್ಲಿ ಅದು ಅಸಾಧ್ಯ. ಆದರೆ ನಾನು ಗಣಿತದಲ್ಲಿ ೬೦% ಪಡೆದಿದ್ದಲ್ಲಿ, ಈಗ ೭೦% ಪಡೆಯಬೇಕು ಎಂದು ಅಪೇಕ್ಷಿಸುವುದು ‘ಸಾಧ್ಯ’ ಹಾಗೂ ‘ಸವಾಲು’ ಎನಿಸುವಂತಹ ಗುರಿ.

ವಾಸ್ತವಿಕ:

ಮುಟ್ಟಲು ಅಸಾಧ್ಯವಾಗದಂತಹ ‘ವಾಸ್ತವಿಕ’, ‘ನೈಜ’ ಮತ್ತು ‘ಸಾಧ್ಯ’ ಗುರಿಯಿರಬೇಕು. ವಾಸ್ತವ ಗುರಿಯು ಕಠಿಣ ಮತ್ತು ಸುಲಭ-ಸಾಧ್ಯವೆನಿಸುವ ಪ್ರಯತ್ನಗಳ ಸಮರಸ ಸಂಗಮವಾಗಿರುತ್ತದೆ. ಅವುಗಳನ್ನೇ ಸ್ವಲ್ಪ ವಿಸ್ತರಿಸಿಕೊಳ್ಳಬೇಕು. ಸ್ವಲ್ಪ ಅವಕಾಶಕೊಡುವುದರ ಮೂಲಕ ಸುಧಾರಣೆ ಮತ್ತು ವಿಕಾಸ ಸಾಧ್ಯ.

ವಾಸ್ತವಿಕ ಗುರಿಯನ್ನು ಹೊಂದಲು, ಮೊದಲು ಅಗತ್ಯವಾದ ಯೋಜನೆಯನ್ನು ರೂಪಿಸಬೇಕು. ಗುರಿಗಳು ನಮ್ಮನ್ನು ಇರುವ ಸ್ಥಿತಿಯಿಂದ ವಾಸ್ತವಿಕ ಗುರಿಯತ್ತ ತೆಗೆದುಕೊಂಡು ಹೋಗಬೇಕು. ಸಹಜವಾಗಿ ಯಾರಾದರೂ ಸಿಹಿತಿಂಡಿಯನ್ನು ಬಯಸುವವರು ಎಂದಿಟ್ಟುಕೊಳ್ಳಿ, ‘ಇನ್ನು ಮುಂದೆ ಸಿಹಿ ತಿಂಡಿಯಾಗಲೀ, ಕೇಕ್ ಆಗಲೀ, ಚಾಕೊಲೇಟ್ ಆಗಲೀ ತಿನ್ನುವುದೇ ಇಲ್ಲ’ ಎಂದು ಹೇಳುವುದು ಕಷ್ಟ ಸಾಧ್ಯ. ಬದಲಾಗಿ- ‘ಪ್ರತಿದಿನವೂ ಸಿಹಿತಿಂಡಿಗೆ ಬದಲಾಗಿ ಯಾವುದಾದರೂ ಹಣ್ಣನ್ನು ತಿನ್ನುವೆ’ ಎನ್ನುವುದು ವಾಸ್ತವಿಕ ಗುರಿ.

ಸ್ವಲ್ಪ ಪರಿಶ್ರಮದಿಂದ ಗುರಿಸಾಧನೆ ನಿಶ್ಚಿತವಾಗುತ್ತದೆ. ಬಹಳ ಕಠಿಣವಾದರೆ ನಾವು ಸೋಲೊಪ್ಪಿಕೊಳ್ಳಲು ಸಿದ್ಧರಾಗುತ್ತೇವೆ. ಉದಾ: ‘ಪಠ್ಯಕ್ರಮದಲ್ಲಿರುವ ಎಲ್ಲಾ ವಿಷಯಗಳನ್ನು ಒಂದು ದಿನದಲ್ಲಿ ಓದುತ್ತೇವೆ’- ಎನ್ನುವುದು ವಾಸ್ತವಿಕವೆನಿಸುವುದಿಲ್ಲ. ಅಂತೆಯೇ ಗುರಿಯು ಒಂದು ವೇಳೆ ಬಹಳ ಕೆಳಮಟ್ಟದ್ದಾಗಿದ್ದರೆ ಅಸಡ್ಡೆ ಭಾವನೆ ಹುಟ್ಟುತ್ತದೆ. ಆದ್ದರಿಂದ ಸಫಲತೆಯ ಹಾಗೂ ಸಂತೃಪ್ತಿಗಳ ಅಪೇಕ್ಷೆಯನ್ನು ಇರಿಸಿಕೊಂಡಿರಬೇಕು.

ಸಮಯಬದ್ಧ-: ಗುರಿಯನ್ನು ಮುಟ್ಟಲು ನಮ್ಮ ಬಳಿ ಸಾಕಷ್ಟು ಸಮಯ ಇರಬೇಕು. ಅದು ತುಂಬ ಅಧಿಕವೋ ಅಥವಾ ಕಡಿಮೆಯೂ ಆಗಿರಕೂಡದು. ಸಾಧಿಸಲು ಬೇಕಾದ ಸಮಯವನ್ನು ನಾವೇ ನಿರ್ಧರಿಸಬೇಕು. ‘ಸಮಯದ ಗುರಿ’ ಎಂದರೆ ಅದು ‘ವ್ಯವಸ್ಥಿತವಾಗಿ ಯೋಜನೆ ಗೊಂಡಿರುವುದು’ ಎಂದೇ ಅರ್ಥ. ನಮ್ಮ ಪ್ರಯತ್ನಕ್ಕೆ ಒಂದು ನಿಶ್ಚಿತವಾದ ಕಾಲಾವಧಿ ಇರಬೇಕು. ಇಲ್ಲದಿದರೆ ಸ್ವಭಾವ ಸಹಜವಾಗಿಯೇ ಮನುಷ್ಯ ಮಾಡಬೇಕಾದ ಕೆಲಸವನ್ನು ಬದಿಗೊತ್ತಿ ಮತ್ಯಾವುದೋ ಕೆಲಸವನ್ನು ತೆಗೆದುಕೊಳ್ಳುತ್ತಾನೆ. ಆದ್ದರಿಂದ ಗುರಿಯನ್ನು ಮುಟ್ಟುವುದಕ್ಕೆ ಸಮಯದ ಚೌಕಟ್ಟನ್ನು ನಿರ್ಮಿಸುವುದು ಮುಖ್ಯ. ಮುಂಬರುವ ‘೩ ವಾರಗಳಿ’ರಬಹುದು, ‘೩ ತಿಂಗಳಿ’ರಬಹುದು, ನಮ್ಮ ಗುರಿಯನ್ನು ನಿರ್ಧರಿಸಿದಾಗ ಮಾತ್ರ ಗುರಿಯತ್ತ ಮನ್ನಡೆಯುವ ನಿಚ್ಚಳವಾದ ಧ್ಯೇಯ ನಮ್ಮಲ್ಲಿ ಬಲಿಯುತ್ತದೆ. ನಾವು ಸಮಯವನ್ನು ನಿರ್ಧರಿಸದಿದ್ದರೆ ನಮ್ಮ ಕಾರ್ಯಾನುಸರಣೆಯೂ ಕುಂಠಿತವಾಗುತ್ತದೆ. ಏಕೆಂದರೆ ‘ನಾವು ಕೆಲಸವನ್ನು ‘ಯಾವಾಗಬೇಕಾದರೂ ಮಾಡಿಕೊಂಡರಾಯಿತು’ ಎಂಬ ಭಾವನೆ ಬರುತ್ತದೆ. ಕೆಲಸದ ಬಗ್ಗೆ ಆತುರವಿರುವುದಿಲ್ಲ.  ಆದ್ದರಿಂದ ಸಮಯವು ‘ಅಳೆಯಬಹುದಾಗಿದ್ದು, ‘ನೆರವೇರಿಸಬಹುದಾಗಿದ್ದು’, ‘ವಾಸ್ತವಿಕ’ವಾಗಿಯೂ ಇರಬೇಕು.


ಉದಾ: ನಾನು ‘ಭೌತಶಾಸ್ತ್ರವನ್ನೆಲ್ಲ ಓದಿ ಮುಗಿಸಬೇಕು’ – ಎನ್ನುವುದು ವಾಸ್ತವವಲ್ಲ. ಆದರೆ ನಿಖರವಾದ ಹೇಳಿಕೆ ಹೀಗಿರುತ್ತದೆ – “ನಾನು ಭೌತಶಾಸ್ತ್ರದ ಪುಸ್ತಕದ ಎಲ್ಲಾ ಅಧ್ಯಾಯಗಳನ್ನು ನವೆಂಬರ್ ೩೦ರೊಳಗಾಗಿ ಮುಗಿಸುತ್ತೇನೆ”.

ಜೀವನದಲ್ಲಿ ಗುರಿಯಿದ್ದರೆ ಅದು ನಮಗೆ ಒಳ್ಳೆಯ ಸ್ನೇಹಿತರನ್ನು, ಶಾಲೆಯನ್ನು, ನೌಕರಿಯನ್ನು ಮತ್ತು ಬಂಧುಗಳನ್ನು ಆಯ್ದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ.

ಪ್ರಸಂಗವನ್ನು ಓದಿ:

ಬಿಸಿಗಾಳಿಯ ಬಲೂನಿನಲ್ಲಿ ಕುಳಿತಿದ್ದ ಒಬ್ಬ ಮನುಷ್ಯ ದಾರಿತಪ್ಪಿ ಕಳೆದುಹೋಗಿದ್ದ.  ಅವನ ಭೂಮಿಯ ಮೇಲಿದ್ದ ಮತ್ತೊಬ್ಬ ಮನುಷ್ಯನನ್ನು ನೋಡಿ ಅವನ ಜೊತೆ ಮಾತನಾಡಲು ಬಲೂನನ್ನು ಸ್ವಲ್ಪ ಕೆಳಗಿರಿಸಿ ಹೇಳಿದ, “ಕ್ಷಮಿಸಿ, ನಾನೆಲ್ಲಿದ್ದೇನೆಂದು ತಾವು ಹೇಳಬಲ್ಲಿರಾ?”

ಆ ಮನುಷ್ಯ ಉತ್ತರಿಸಿದ “ನೀವು ಹಾರಾಡುತ್ತಿರುವ ಬಿಸಿಗಾಳಿಯ ಬಲೂನಿನಲ್ಲಿದ್ದೀರಿ, ಈ ಮೈದಾನದ ಮೇಲೆ ೩೦ ಅಡಿ ಎತ್ತರದಲ್ಲಿ ಹಾರಾಡುತ್ತಿದ್ದೀರಿ”.‘ನೀವು ಮಾಹಿತಿ ತಂತ್ರಜ್ಞಾನ ಸಂಬಂಧೀ ಕೆಲಸ ಮಾಡುತ್ತಿದ್ದೀರಿ ಅನಿಸುತ್ತದೆ’ಎಂದ ಬಲೂನಿನವನು.

“ಹೌದು, ನಿಮಗೆ ಹೇಗೆ ಗೊತ್ತು?”ಎಂದು ಕೇಳಿದ ಆ ಮನುಷ್ಯ.

ಬಲೂನಿನವ- “ನೀವು ಹೇಳಿದ್ದೆಲ್ಲಾ ಸರಿ, ಆದರೆ ಇದರಿಂದ ಯಾರಿಗೂ ಉಪಯೋಗವಿಲ್ಲ”.

“ನೀವು ವ್ಯಾಪಾರ ಮಾಡುತ್ತಿರಬಹುದು” ಎಂದ ಮನುಷ್ಯ.

“ಹೌದು” ಎಂದ ಬಲೂನಿನವ.  “ಇದು ನಿಮಗೆ ಹೇಗೆ ಗೊತ್ತು?”

“ ‘ನೀವು ಎಲ್ಲಿದ್ದೀರಿ’ ಎಂದು ನಿಮಗೆ ಗೊತ್ತಿಲ್ಲ’, ‘ಎಲ್ಲಿಗೆ ಹೋಗಬೇಕು’ ಎಂಬುದು ಗೊತ್ತಿಲ್ಲ, ಆದರೆ ನಾನು ನಿಮಗೆ ಅದನ್ನು ಹೇಳಬೇಕೆಂದು ಅಪೇಕ್ಷಿಸುತ್ತೀರಿ!  ನಾವಿಬ್ಬರೂ ಭೇಟಿಯಾಗುವ ಮೊದಲು ಎಲ್ಲಿದ್ದೆವೋ ಈಗಲೂ ಅದೇ ಸ್ಥಳದಲ್ಲೇ ಇದ್ದೀರಿ. ಆದರೆ ಈಗ ತಪ್ಪುನನ್ನದು!

ನಿಮ್ಮ ನಿರ್ಧಾರಿತ ಗುರಿಗಳೇನು?

 

ಸಫಲತೆಯ ಸೂತ್ರಗಳು ಬೇಕೇ? ಅದು ಬಹಳ ಸುಲಭ. ಸೋಲನ್ನು ಎರಡು ಪಟ್ಟು ಮಾಡಿ, ಸೋಲು ಸಫಲತೆಯ ವೈರಿ ಎಂದು ನಿಮಗೂ ಗೊತ್ತಿರಬಹುದು. ಆದರೆ ಇದಿಷ್ಟೇ ಅಲ್ಲ. ನಿಮ್ಮ ಸೋಲಿನಿಂದಾಗಿ ನೀವು ನಿರುತ್ಸಾಹಿಗಳಾಗಬಹುದು ಅಥವಾ ಅದರಿಂದ ಪಾಠ ಕಲಿಯಬಹುದು. ಮುನ್ನಡೆಯಿರಿ, ಎಷ್ಟು ಸಾಧ್ಯವೋ ಅಷ್ಟು ತಪ್ಪುಗಳನ್ನು ಮಾಡಿರಿ. ನೆನಪಿಡಿ, ಅಲ್ಲಿಯೇ ಯಶಸ್ಸನ್ನು ಕಾಣುವಿರಿ. ಥಾಮಸ್. ಜೆ. ವಾಟ್ಸನ್

“ಸಫಲತೆಗೆ ಯಾವ ಗುಟ್ಟೂ ಇಲ್ಲ. ನಮ್ಮ ಸಿದ್ಧತೆ, ಪರಿಶ್ರಮ ಮತ್ತು ಸೋಲಿನಿಂದಾಗಿ ಕಲಿತ ಕೆಲವು ಪಾಠಗಳು ಪರಿಣಾಮ ತೋರಿಸುತ್ತವೆ”.

ವಿಲ್ಮಾ ಗ್ಲೊಡಿಯನ್ ರುಡೋಲ್ಫ್ನ ಬಗ್ಗೆ ಓದಿರಿ:

ವಿಲ್ಮಾ ಗ್ಲೊಡಿಯನ್ ರುಡೋಲ್ಫ್ (೨೩ ಜೂನ್ ೧೯೪೦-೧೨ ನವೆಂಬರ್ ೧೯೯೪ ಅಮೇರಿಕಾ ದೇಶದ ಆಟಗಾರ್ತಿ. ೧೯೬೦ ರ ಅವಧಿಯಲ್ಲಿ ಅವಳು ೧೯೬೦ರ ದಶಕದಲ್ಲಿ ಪ್ರಪಂಚದಲ್ಲೇ ಅತ್ಯಂತ ವೇಗದ ಮಹಿಳಾ ಓಟಗಾರ್ತಿ ಎನಿಸಿಕೊಂಡಿದ್ದಳು. ಅವಳು ೧೯೫೬ ಮತ್ತು ೧೯೬೦ ರ ಒಲಿಂಪಿಕ್ ಆಟಗಳಲ್ಲಿ ಭಾಗವಹಿಸಿದ್ದಳು. ೧೯೫೨ರಲ್ಲಿ ೧೨ ವರ್ಷದ ವಿಲ್ಮಾ ರುಡೋಲ್ಫ್ ತನ್ನ ಕನಸನ್ನು ನನಸಾಗಿಸಲು ತನ್ನ ಅಂಗವಿಕಲತೆಯಿಂದ ಹೊರಬಂದು ಬೇರೆ ಮಕ್ಕಳಂತೆ ಆಡಲು ಉತ್ಸುಕಳಾದಳು. ವಿಲ್ಮಾಳು ಬ್ಯಾಸ್ಕೆಟ್ಬಾಲ್ ತಂಡದಲ್ಲಿದ್ದ ತನ್ನ ಅಕ್ಕನನ್ನು ಅನುಸರಿಸಿದಳು. ಅವಳು ಹೈಸ್ಕೂಲಿನಲ್ಲಿದ್ದಾಗಲೇ ಬಾಸ್ಕೆಟ್ಬಾಲ್ ತಂಡದಲ್ಲಿದ್ದಳು. ಅವಳನ್ನು ಗುರುತಿಸಿದ್ದು ರಾಜ್ಯಮಟ್ಟದ ಕೋಚ್ ಎಡ್ವರ್ಡ್ ಎಸ್. ಟೆಂಪಲ್.  ಎಡ್ವರ್ಡ್ ರ ಈ ಶೋಧಕಾರ್ಯವೇ ಈ ಪುಟ್ಟ ಕ್ರೀಡಾಪಟುವಿಗೆ ವರದಾನವಾಯಿತು. ಅವರು ಈ ಹತ್ತನೇ ದರ್ಜೆಯ ಹುಡುಗಿಯನ್ನು ಮೊದಲನೇ ಸಾರಿ ನೋಡಿದರು. ಆಗ ಅವರಿಗೆ ಈಕೆ ಓರ್ವ ‘ನಿಜವಾದ ಕ್ರೀಡಾಪಟು’ ಅನ್ನಿಸಿತು.  ಈ ಮಧ್ಯೆ ವಿಲ್ಮಾಗೆ ಎರಡು ವರ್ಷಗಳಲ್ಲಿ ಬರ್ಟ್ ಹೈಸ್ಕೂಲ್ನ ಟ್ರಾಕ್ ತಂಡದ ಅನುಭವವಾಗಿತ್ತು. ಜೊತೆಗೆ ಬಾಸ್ಕೆಟ್ಬಾಲ್ ಪಂದ್ಯಗಳ ಸರಣಿಯಲ್ಲಿ ತೊಡಗಿಸಿಕೊಳ್ಳುತ್ತಲೂ ಇದ್ದಳು.


ಅವಳು ಬರ್ಟ್ ಹೈಸ್ಕೂಲಿನಲ್ಲಿದ್ದಾಗ, ರುಡೋಲ್ಫ್ ಬಾಸ್ಕೆಟ್ಬಾಲ್ ಆಟದ ತಾರೆಯಾಗಿದ್ದಳು. ರಾಜ್ಯಮಟ್ಟದಲ್ಲಿ ಚಾಂಪಿಯನ್ ಶಿಫ್ ಪಡೆದು ತನ್ನ ತಂಡವನ್ನು ಮುನ್ನಡೆಗೆ ತಂದಿದ್ದಳು. ಅವಳ ೧೬ನೇ ವಯಸ್ಸಿನಲ್ಲಿ ಯನೈಟೆಡ್ ಸ್ಟೇಟ್ಸ್ ಪಂದ್ಯದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಳು. ೧೯೫೬ರಲ್ಲಿ ಮೆಲ್ಬೋರ್ನ್ ಆಟದಲ್ಲಿ ಒಂದು ಒಲಂಪಿಕ್ ಕಂಚಿನ ಪದಕವನ್ನು ಪಡೆದಳು (4 x ೧೦೦ ಮೀ. ರಿಲೇ).


೧೯೬೦ ರ ರೋಮ್ ನ  ಗ್ರೀಷ್ಮ ಒಲಂಪಿಕ್ಸ್ ನಲ್ಲಿ ಅವಳು ೩ ಒಲಂಪಿಕ್ ಪದಕಗಳನ್ನು ಪಡೆದಳು (೧೦೦ ಮೀ, ೨೦೦ ಮೀ ಮತ್ತು ೪ x ೧೦೦  ಮೀ ರಿಲೇ) ಆಟದ ಮೈದಾನದ ತಾಪಮಾನ ೧೧೦ ಡಿಗ್ರಿಯಾಗಿದ್ದು ೮೦,೦೦೦ ಪ್ರೇಕ್ಷಕರಿಂದ ಕಿಕ್ಕಿರಿದಿತ್ತು ಆ ಒಲಂಪಿಕ್ ಸ್ಟೇಡಿಯಂ. ರುಡೋಲ್ಫ್ ೧೦೦ ಮೀ. ದೂರವನ್ನು ಕೇವಲ ೧೧ ಸೆಕೆಂಡುಗಳಲ್ಲಿ ಓಡಿದ್ದಳು. ಆದರೆ ವಿಶ್ವದಾಖಲೆಯಾಗಲಿಲ್ಲ ಏಕೆಂದರೆ ಆ ಓಟದಲ್ಲಿ ಗಾಳಿಯ ರಭಸವನ್ನು ಗಣನೆಗೆ ತೆಗೆದುಕೊಂಡಿದ್ದರು.  ನಂತರ ಅವಳು ೨೦೦ ಮೂ. ದೂರವನ್ನು ಕೇವಲ ೨೩೨ ಸೆಕೆಂಡುಗಳಲ್ಲಿ ಅಳೆದಳು. ಇದು ಒಂದು ಒಲಂಪಿಕ್ ನ ವಿಶ್ವದಾಖಲೆಯಾಗಿತ್ತು. ಈ ಎರಡೂ ಪ್ರಯೋಗಗಳೂ ವಿಜಯಭೇರಿಯನ್ನು ಮೊಳಗಿದವು. ‘ಅಪ್ರತಿಮ ವೇಗದ ಮಹಿಳಾ ಕ್ರೀಡಾಪಟು’ ಎಂದು ಅವಳ ಹೆಸರು ವಿಶ್ವದ ನಕ್ಷೆಯಲ್ಲಿ ಅಚ್ಚಳಿಯದೇ ಉಳಿಯಿತು. ೧೧ನೇ ಸೆಪ್ಟೆಂಬರ್ ೧೯೬೦ರಲ್ಲಿ ಅವಳು ರಾಜ್ಯಮಟ್ಟದ ಟೆನ್ನಿಸ್ ಆಟಗಾರ್ತಿ ಮಾರ್ಥಾ ಹಡ್ಸನ್, ಲ್ಯುಸಿಂಡಾ ವಿಲಿಯಮ್ಸ್ ಮತ್ತು ಬಾರ್ಬರಾ ಜೋನ್ಸ್ ಜೊತೆಗೆ ೪೦೦ ಮೀ. ರಿಲೇ ಪಂದ್ಯವನ್ನು ೪೪.೫ ಸೆಕೆಂಡುಗಳಲ್ಲಿ ಪೂರ್ತಿಗೊಳಿಸಿ ವಿಶ್ವದಾಖಲೆಯನ್ನು ಸೃಷ್ಟಿಸಿದಳು. ರುಡೋಲ್ಫ್ ಗೆ ಒಂದು ವಿಶೇಷವಾದ ವೈಯಕ್ತಿಕ ಕಾರಣವಿತ್ತು. ಅದೇನೆಂದರೆ ವಿಜಯಿಯಾಗಿ ಜೆಸ್ಸಿ ಒವನ್ಸ್ಗೆ ಶ್ರದ್ದಾಂಜಲಿಯನ್ನು ಕೊಡಬೇಕೆಂದು ಹಂಬಲ. ಜೆಸ್ಸಿ ಒವನ್ಸ್ ಅಮೆರಿಕಾದ ಬಹಳ ಖ್ಯಾತ ಕ್ರೀಡಾಪಟು – ರುಡೋಲ್ಫ್ ಳ ಮನಸ್ಸನ್ನು ಸೂರೆಗೊಂಡ ವ್ಯಕ್ತಿ ಈ ೧೯೩೬ ಒಲಂಪಿಕ್ಸ್ ನ ತಾರೆ. ೧೯೬೯ರಲ್ಲಿ ರುಡೋಲ್ಫ್ ಟ್ರ್ಯಾಕ್ ಪಂದ್ಯಗಳಿಂದ ನಿವೃತ್ತಳಾದಳು. ಆಗ ಅವಳ ವಯಸ್ಸು ೨೨, ಅದೂ ಅಮೆರಿಕಾ ಮತ್ತು ಸೋವಿಯತ್ ಪಂದ್ಯಗಳಲ್ಲಿ ಜಯಗಳಿಸಿದ ನಂತರ. ಜುಲೈ ೧೯೯೪ರಲ್ಲಿ, ಅವಳ ತಾಯಿಯ ಮರಣದ ನಂತರ, ವಿಲ್ಮಾ ರುಡೋಲ್ಫ್ ಗೆ ಮಿದುಳು ಮತ್ತು ಗಂಟಲು ಕ್ಯಾನ್ಸರ್ ಇದೆ ಎಂದು ಕಂಡುಹಿಡಿಯಲಾಯಿತು. ನವೆಂಬರ್ ೧೨, ೧೯೯೪ರಲ್ಲಿ ೫೪ನೇ ವಯಸ್ಸಿನಲ್ಲಿ ನ್ಯಾಷ್ ವಿಲ್ಲೆಯಲ್ಲಿದ್ದ ತನ್ನ ಮನೆಯಲ್ಲಿ ಕೊನೆಯುಸಿರೆಳೆದಳು. ಆಗ ಅವಳಿಗೆ ನಾಲ್ಕು ಮಕ್ಕಳು ಎಂಟು ಮೊಮ್ಮಕ್ಕಳೂ ಇದ್ದರು. ೧೯೯೪ರ ೧೭ನೇ ನವೆಂಬರ್ನಲ್ಲಿ ಯುನಿವರ್ಸಿಟಿ ಕ್ವೀನ್ ಹಾಲ್ ನಲ್ಲಿ ಸಾವಿರಾರು ಕ್ರೀಡಾಪ್ರೇಮಿಗಳು ಅವಳಿಗೆ ಶ್ರದ್ಧಾಂಜಲಿ ನೀಡುವುದಕ್ಕೆ ಸೇರಿದ್ದರು. ಅನೇಕರು ಕ್ಲಾರ್ಕ್ ವಿಲ್ಲೆಯ First Baptist Churchನಲ್ಲಿ ಅಂತಿಮ ಕ್ರಿಯೆಯನ್ನು ನೋಡಲು ಸೇರಿದ್ದರು. ರಾಜ್ಯಾದ್ಯಂತ ಟೆನ್ನಿಸ್ ರಂಗದವರು ಬಾವುಟವನ್ನು ಅರ್ಧ ಹಾರಿಸಿ ಅವಳಿಗೆ ಗೌರವ ಸಲ್ಲಿಸಿದ್ದರು.

೯ ತಿಂಗಳ ನಂತರ Tennessee State Universityಯ ೧೯೯೫ ಆಗಸ್ಟ್ ೧೧ರಂದು ೬ ಅಂತಸ್ತಿನ ಡಾರ್ಮಿಟರಿ “Wilma. G. Rudolph Residence Centre”ನ್ನು ಅವಳಿಗೆ ಅರ್ಪಿಸಿದ್ದರು. ಒಂದು ಕರಿಯ ಕಲ್ಲಿನ ಪ್ರತಿಮೆಯನ್ನು ಅವಳ ಸಮಾಧಿಯ ಮೇಲೆ ಸ್ಥಾಪಿಸಿದರು. ಅಂದಿನಿಂದ ಜೂನ್ ೨೩ರನ್ನು ‘ವಿಲ್ಮಾ ರುಡೋಲ್ಫ್ ದಿನ’ವೆಂದು ಪರಿಗಣಿಸಲಾಗುತ್ತಿದೆ.

ವಿಲ್ಮಾಳ ಕಥೆಯನ್ನು ಓದಿ, ಆಕೆಯ ಗುರಿ ಚುರುಕು ಹೇಗೆ ಎನ್ನುವುದನ್ನು ಗುರುತಿಸಿ ಬರೆಯಿರಿ?

೧.೨.೩.

೪.

೫.

ನಿಮ್ಮ ಸ್ಮಾರ್ಟ್ಗುರಿಯ ಬಗ್ಗೆ ಬರೆಯಿರಿ:

ನಿಶ್ಚಿತ  
ಅಳೆಯಬಹುದಾದ  
ಸಾಧ್ಯ  
ವಾಸ್ತವಿಕ  
ಗುರಿಯಿಂದ ತನ್ನ ಗಮನವನ್ನು ತೆಗೆದಾಗ ಕಾಣುವಂತಹ ಅಂಶಗಳೇ ವಿಘ್ನಗಳು 

ಗುರಿಗಳನ್ನು ಸಣ್ಣಸಣ್ಣದಾಗಿ ವಿಭಜಿಸಿ ಹಂತಹಂತವಾಗಿ ಸಾಧಿಸಿದಾಗ ಮುಖ್ಯವಾದ ಗುರಿ ಸಾಧಿಸಲು ಸಾಧ್ಯ.  ಈಗ ಒಂದು ಧೋರಣೆಯನ್ನು ನಿರ್ಮಿಸೋಣ.


ಈಗಲೆ ಒಂದು ಮೈಲಿಗಲ್ಲನ್ನು ಇಟ್ಟುಕೊಳ್ಳೋಣ:ಗುರಿಗಳು ಸಮಯದ ಮಿತಿಯಿರುವ ಕನಸುಗಳು – ಡಯನ ಶಾರ್ಫ್ ಹಂಟ್ 

ಗ್ರಂಥ ಸಲಹೆ: 

Goal setting-Viva Publication

Winning the inner game of selling, Richard F Gerson, Viva Book Private Limited

ಅಂತರ್ಜಾಲ ಮೂಲ:

http://www.youtube.com/watch?v=Ae-VJ_lauCw

www.mindtool.com