ಹುಟ್ಟಿದ್ದು ಒಂದು ಹೊರೆ ಮನೆನ
ಬಿಟ್ಟು ಹೊರಟ | ಇಂಥ ಖಾಲಿ ಮನೆ
ಎಂಟು ಬಾಗಿಲು ಮುಚ್ಚಿ ಒಂಬತ್ತು
ಹೋಗುವಾಗ ಗಂಟೆ ಭಾರಿಸಿದಂತೆ ಖಾಲಿಮನೆ
ಮನೆ ಮನೆ ಇದು ಯಾರ ಮನೆ ಸತ್ತ
ಮೇಲೆ ಸುಡುಗಾಡು ಮನೆ | ಅಲ್ಲಿರುವುದೆ ನಮ್ಮ
ಮನೆ ಇಲ್ಲಿರುವುದು ನಾವು ಸುಮ್ಮನೆ || ಹುಟ್ಟಿದ್ದು ||

ಹಸ್ತಿ ಹುಡುವ ಮನೆ ರಸ್ತೆ ತಿರುಗುವ ಮನೆ
ಶಿಸ್ತಾಗಿ ಕಾಣುವೆವು ಶಿವನ ಮನೆ ಅದು
ನೇರವಾಗಿ ಕಾಣುವುದು ಹರನ ಮನೆ || ಹುಟ್ಟಿದ್ದು ||

ಆತನಿರುವ ತನಕ ಜಾತವಾಯಿತಾ ಮನೆ
ಅತ ಸತ್ತ ಮೇಲೆ ನಾತಮನೆ || ಹುಟ್ಟಿದ್ದು ||

ಬಯಲಿಗೆ ಬಯಲಾಯ್ತು ನಮ್ಮ ಮನೆ
ಬಯಲೊಳಡಗಿದೆ ನಮ್ಮ ಮನೆ
ಕೀಳು ಮೇಲಿಲ್ಲವು ನಮ್ಮ ಮನೆ
ಮಧ್ಯದೊಳಗಿವೆ ನಮ್ಮ ಮನೆ || ಹುಟ್ಟಿದ್ದು ||