ಈ ಅನುವಾದ ಕೃತಿ ಕರ್ನಾಟಕದಾದ್ಯಂತ ಓದುಗರ ಗಮನ ಸೆಳೆದು, ಪ್ರಕಟವಾದ ಒಂದೆರಡು ವರ್ಷಗಳಲ್ಲಿಯೇ ಇದರ ಎಲ್ಲ ಪ್ರತಿಗಳು ಮುಗಿದುಹೋದವು. ಅನೇಕ ಕಡೆಗಳಲ್ಲಿ ಕೃತಿಯ ಬಗ್ಗೆ ವಿಚಾರ ಸಂಕಿರಣಗಳು ನಡೆದ ಸಂಗತಿ ತಿಳಿಯಿತು. ಈ ಕೃತಿಯ ಕೆಲವು ಭಾಗಗಳನ್ನು ಪ್ರಕಟಿಸಿದ ಐಕ್ಯರಂಗ ಪತ್ರಿಕೆಯು ‘ಇದು ಎಲ್ಲ ಪ್ರಜಾಪ್ರಭುತ್ವ ಪ್ರೇಮಿಗಳೂ ಅವಶ್ಯವಾಗಿ ಓದಲೇಬೇಕಾದ ಪುಸ್ತಕ’ ಎಂದು ಬರೆಯಿತು. ಇದನ್ನು ಪೂರ್ತಿಯಾಗಿ ಓದಬಯಸಿದವರು ಪುಸ್ತಕದ ಪ್ರತಿಗಳ ಬಗ್ಗೆ ಪದೇ ಪದೇ ವಿಚಾರಿಸುತ್ತಿದ್ದರು. ದ್ವಿತೀಯ ಮುದ್ರಣಕ್ಕೆ ಇದೆಲ್ಲವೂ ಕಾರಣ.

ಮೂಲ ಕೃತಿಯಲ್ಲಿ ಬರ್ಕ್‌ವೈಟ್, ತೆಗೆದ ಕಪ್ಪು ಬಿಳುಪಿನ ಅಪೂರ್ವ ಛಾಯಾಚಿತ್ರಗಳಿವೆ. ಕನ್ನಡದ ಮೊದಲ ಮುದ್ರಣದಲ್ಲಿ ಯಾವ ಛಾಯಾಚಿತ್ರಗಳೂ ಇಲ್ಲ. ಪ್ರಸ್ತುತ ಮುದ್ರಣದಲ್ಲಿ ಕೆಲವು ಛಾಯಾಚಿತ್ರಗಳಿವೆ. ಅಲ್ಲದೆ, ಮೊದಲ ಮುದ್ರಣದಲ್ಲಿ ಕೈಬಿಡಲಾಗಿದ್ದ, ‘ರಾಜಮಹಾರಾಜರು ಮತ್ತು ಅವರ ಪ್ರಜೆಗಳು’ ಹಾಗೂ ‘ಭಾರತ ಏನು ಮಾಡಬೇಕು’ ಎಂಬ ಎರಡು ಅಧ್ಯಾಯಗಳನ್ನು ಈಗ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ದ್ವಿತೀಯ ಮುದ್ರಣಕ್ಕೆ ಅನುವು ಮಾಡಿಕೊಟ್ಟ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರಿಗೂ ಹಾಗೂ ಸಮಿತಿಯ ಎಲ್ಲ ಸದಸ್ಯರಿಗೂ ನನ್ನ ಕೃತಜ್ಞತೆಗಳು.

ಎಂದಿನಂತೆ ಅಚ್ಚುಕಟ್ಟಾಗಿ, ಸುಂದರವಾಗಿ ಮುದ್ರಿಸಿಕೊಟ್ಟಿರುವ ಇಳಾ ಮುದ್ರಣದ ಬಿ. ಗುರುಮೂರ್ತಿ ಅವರಿಗೂ ಅವರ ಸಿಬ್ಬಂದಿಯವರಿಗೂ ನನ್ನ ಪ್ರೀತಿಪೂರ್ವಕ ವಂದನೆಗಳು.

ಡಾ. ಕೆ. ಆರ್. ಸಂಧ್ಯಾರೆಡ್ಡಿ
೧೦.೬.೨೦೦೭