ಸ್ವಾತಂತ್ರ್ಯ ಬಂದ ಕೂಡಲೇ ಭಾರತದಾದ್ಯಂತ ಎದ್ದ ಪ್ರಜಾಪ್ರಭುತ್ವದ ಅಲೆ ಎಲ್ಲವನ್ನೂ ವ್ಯಾಪಿಸುತ್ತಾ ಪ್ರಾಚೀನ ಫ್ಯೂಡಲಿಸಂನ ಬುನಾದಿಯನ್ನು ಕೊಚ್ಚಿ ಹಾಕುತ್ತದೆ ಎಂಬ ಭಯ ಹೈದ್ರಾಬಾದಿನ ಜಮೀನ್ದಾರನನ್ನು ಚಿಂತೆಗೀಡು ಮಾಡಿತ್ತು. ಆದರೆ ಅವನಿಗಿಂತ, ಅವನನ್ನು ಆಳುತ್ತಿದ್ದ ನಿಜಾಮ ಹೆಚ್ಚು ಕಳೆದುಕೊಳ್ಳಬೇಕಾಗಿತ್ತು.

ನಿಜಾಮ ಭಾರತದ ಅತಿ ದೊಡ್ಡ ಭೂಮಾಲೀಕನಾಗಿದ್ದ. ಹೈದ್ರಾಬಾದ್ ಮತ್ತು ಬೇರಾರ್ ರಾಜ್ಯಗಳ ಹದಿನೈದನೇ ಒಂದು ಭಾಗದಷ್ಟು ಪ್ರದೇಶ ಆತನ ವಶದಲ್ಲಿತ್ತು. ಇಟಲಿಗೆ ಹೋಲಿಸಬಹುದಾದಷ್ಟು ವ್ಯಾಪ್ತಿಯ ಈ ಪ್ರದೇಶ ಒಂದು ನೂರು ಸಾವಿರ ಚದರ ಮೈಲಿಗಳನ್ನೂ ಮೀರಿತ್ತು. ಹೈದ್ರಾಬಾದ್ ರಾಜ್ಯದ ಒಟ್ಟು ಆದಾಯದ ಶೇ. ೧೫ರಷ್ಟು ಭಾಗ ಆತನ ಕೈ ಸೇರುತ್ತಿತ್ತು. ಇದರ ಜೊತೆ, ತನಗೆ ಹಾಗೂ ತನ್ನ ಇಬ್ಬರು ಗಂಡುಮಕ್ಕಳಿಗಾಗಿ ಸಾರ್ವಜನಿಕ ಬೊಕ್ಕಸದಿಂದ ಹೆಚ್ಚುವರಿ ಹಣವೂ ದೊರೆಯುತ್ತಿತ್ತು. ಈ ಮೊತ್ತವೇ ಹಲವು ಮಿಲಿಯನ್‌ಗಳಷ್ಟಿತ್ತು. ಭಾರತದ ಇತರ ರಾಜರುಗಳಿಗಿಂತ ಅಧಿಕ ಬಿರುದನ್ನು ಹಾಕಿಕೊಳ್ಳುವ ಹೆಚ್ಚುಗಾರಿಕೆ ಈತನದಾಗಿತ್ತು. ಬೇರೆಯ H.H. (ಹಿಸ್ ಹೈನೆಸ್) ಎಂದರೆ ಈತ H.E.H. ಅಂದರೆ, ಹಿಸ್ ಎಕ್ಸಾಲ್ಟೆಡ್ ಹೈನೆಸ್ ಆಗಿದ್ದ. ವಯಸ್ಸು ಮೀರಿದನಂತರವೂ ಈತ ಅನೇಕರನ್ನು ಮದುವೆಯಾಗಿದ್ದ ಕಾರಣ ಬಹಳಷ್ಟು ಬಾರತೀಯರು ಈತನ್ನು H.E.H. ಅಂದರೆ, ಹಿಸ್ ಎಕ್ಸಾಸ್ಟೆಡ್ ಹೈನೆಸ್ ಎಂದು ಉಲ್ಲೇಖಿಸುತ್ತಿದ್ದರು.

ನಿಜಾಮನೆಂದರೆ ಭಾರತದ ಕುಬೇರ. ಈತನಲ್ಲಿ ಎಷ್ಟೊಂದು ವಿಧದ ರತ್ನಗಳಿವೆಯೆಂದರೆ ಅವುಗಳನ್ನು ವರ್ಗೀಕರಿಸುವುದು ಅಸಾಧ್ಯ. ಈತನಲ್ಲಿದ್ದ ಮುತ್ತುಗಳು ಎಣಿಕೆಗೆ ಮೀರಿದ್ದವು ಮತ್ತು ಬಂಗಾರಕ್ಕೆ ನೆಲಮಾಳಿಗೆಯ ಕೋಣೆಗಳು ಪ್ರಚಲಿತವಿದ್ದ ಒಂದು ದಂತಕಥೆ ಹೀಗಿತ್ತು. ೧೯೧೪ರಲ್ಲಿ ಈತ ಎರಡು ಲಾರಿಗಳ ಭರ್ತಿ ಬಂಗಾರದ ಗಟ್ಟಿಗಳಲ್ಲಿ ಖರೀದಿಸಿ ತಂದನಂತೆ. ಆದರೆ ಇವುಗಳನ್ನಿಡಲು ಅರಮನೆಯಲ್ಲಿ ಸ್ಥಳವೇ ಇರಲಿಲ್ಲವಂತೆ. ಹೀಗಾಗಿ ಚಿನ್ನದ ಗಟ್ಟಿಗಳನ್ನು ಹೊತ್ತ ಎರಡೂ ಲಾರಿಗಳು ಅರಮನೆಯ ಅಂಗಳದಲ್ಲಿ ಅರ್ಧ ಹೂತ ಸ್ಥಿತಿಯಲ್ಲಿ ಹಾಗೇ ನಿಂತಿವೆಯಂತೆ. ಜನ ಈತನ ಐರ್ಶ್ವಯದ ಬಗ್ಗೆ ಇನ್ನೂ ಒಂದು ಕಥೆ ಹೇಳುತ್ತಿದ್ದರು; ಕೆಲವು ವರ್ಷಗಳ ಹಿಂದೆ ರತ್ನ ಪರಿಣತರು, ತಲತಲಾಂತರದಿಂದ ಕತ್ತಲ ಕೋಣೆಯಲ್ಲೇ ಉಳಿದು ಹೋಗಿರುವ ಮುತ್ತಗಳಿಗೆ ಗಾಳಿಯಾಡುವಂತೆ ಮಾಡಬೇಕು. ಇಲ್ಲದಿದ್ದರೆ ಅವು ಹಾಳಾಗುತ್ತವೆ ಎಂದು ಹೇಳಿದರು. ಆಗ ನಿಜಾಮನು ಸೂಕ್ತಕಾವಲಿನಲ್ಲಿ ಮುತ್ತಗಳನ್ನು ಅರಮನೆಯ ಮಾಳಿಗೆಯ ಮೇಲೆ, ಪಕ್ಕದ ಕಟ್ಟಡಗಳು ಹಾಗೂ ತನ್ನ ಬಂಧುಗಳ ಮನೆ ಮಾಳಿಗೆಗಳ ಮೇಲೆಲ್ಲ ಹರಡಿಸಿದನಂತೆ. ಆದರೂ ಜಾಗ ಸಾಲದೆ ಬಂದ ಕಾರಣ ಎಲ್ಲ ಮುತ್ತುಗಳನ್ನೂ ಗಾಳಿಗೆ ಹರಡುವ ಪ್ರಯತ್ನ ಕೈಬಿಡಬೇಕಾಯಿತಂತೆ.

ಭಾರತದ ಇತರ ರಾಜ ಮಹಾರಾಜರುಗಳ ಬಳಿಯೂ ಇಷ್ಟೇ ಪ್ರಮಾಣದ ಮುತ್ತುರತ್ನಗಳ ಸಂಗ್ರಹ ಹಾಗೂ ಎಣಿಸಲಾರದಷ್ಟು ಸಂಪತ್ತು ಇರುವುದು ನಿಜ. ಈ ಎಲ್ಲರಿಗೂ ಮತ್ತು ನಿಜಾಮನಿಗೂ ಇದ್ದ ಮತ್ತೊಂದು ಸಮಾನ ಸಂಗತಿ ಏನೆಂದರೆ, ಇವರೆಲ್ಲರೂ ತಮ್ಮ ಪ್ರಜೆಗಳ ಮೇಲೆ ಪರಮಾಧಿಕಾರ ಹೊಂದಿದ್ದರು. ಪ್ರತಿಯೊಬ್ಬರೂ ಫ್ಯೂಡಲ್ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದರು. ಇವರಿಗೆ ತಮ್ಮ ಪ್ರಜೆಗಳ ಹುಟ್ಟು ಸಾವಿನ ವೈಯಕ್ತಿಕ ವಿಷಯವೊಂದನ್ನು ಹೊರತುಪಡಿಸಿ ಇನ್ನೆಲ್ಲ ಅಧಿಕಾರಗಳೂ ಇದ್ದವು. ಕೆಲವರು ಈ ಅಧಿಕಾರವನ್ನೂ ಹೊಂದಾಣಿಸಿಕೊಂಡಿದ್ದರು. ತಾವು ಸಾಕ್ಷಾತ್ ಸೂರ್ಯ, ಚಂದ್ರ ವಂಶಜರಾದ ಕಾರಣ ತಮಗೆ ಸಹಜವಾಗಿಯೇ ಈ ಅಧಿಕಾರ ಪ್ರಾಪ್ತವಾಗಿದೆ ಎಂಬುದು ಅವರ ಹೇಳಿಕೆಯಾಗಿರುತ್ತಿತ್ತು.

ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವ ಸಂದರ್ಭದಲ್ಲಿದ್ದ ರಾಜ ಮಹಾರಾಜರ ಸಂಖ್ಯೆ ಸೋಜಿಗವೆನಿಸುಷ್ಟು ಹೆಚ್ಚಾಗಿತ್ತು. ಸುಮಾರು ೫೦೦ ರಾಜರು ಮಹಾರಾಜರು, ನವಾಬರು ಇದ್ದರು. ಕೆರವರ ಅಧಿಕಾರ ಹೈದ್ರಾಬಾದ್‌ನಷ್ಟು ವಿಸ್ತಾರ ಪ್ರದೇಶಕ್ಕೆ ವ್ಯಾಪಿಸಿದ್ದರೆ ಇನ್ನೂ ಕೆಲವರದು ಒಂದು ದೊಡ್ಡ ಹೊಲದಷ್ಟು ಮಾತ್ರ. ಸರಿಯಾಗಿ ಹೇಳುವುದಾದರೆ ರಾಜ ಅಥವಾ ಮಹಾರಾಜನೆಂದರೆ ಮತ್ತು ಭಾರತದಲ್ಲಿ ಇವರ ಸಂಖ್ಯೆಯೇ ಹೆಚ್ಚಾಗಿತ್ತು. ಆದರೆ ಅಲ್ಲಲ್ಲಿ ಸಾಕಷ್ಟು ಮುಸ್ಲಿಂ ರಾಜರೂ ಹರಡಿಕೊಂಡಿದ್ದರು. ಅವರನ್ನು ನವಾಬಾರೆಂದು ಕರೆಯುತ್ತಿದ್ದರು. ನವಾಬರದಲ್ಲಿ ಅತಿ ಉನ್ನತ ನವಾಬನೇ ನಿಜಾಮ.

ಅವಳಿ ರಾಷ್ಟ್ರಗಳ ಉದಯದ ನಂತರ ತಾವು ಯಾವ ಅಧಿಪತ್ಯದ ಕೆಳಗ ಎಹೋಗಬೇಕು ಎಂಬುದನ್ನು ನಿಶ್ಚಯಿಸುವ ಆಯ್ಕೆಯನ್ನು ರಾಜರುಗಳಿಗೇ ಮಿಡಲಾಯಿತು. ಅವರ ಸರಹದ್ದು ಪ್ರದೇಶ ಅವರು ಆಯ್ಕೆ ಮಾಡಿಕೊಳ್ಳುವ ದೇಶಕ್ಕೆ ಹೊಂದಿಕೊಂಡಿರಬೇಕು ಎಂಬ ಷರತ್ತುನ್ನು ಮಾತ್ರ ಅವರಿಗೆ ವಿಧಿಸಲಾಯಿತು. ಆದರೆ ಅನೇಕ ರಾಜ್ಯಗಳ ಗಡಿರೇಖೆಗಳು ಎರಡೂ ರೇಖೆಗಳಿಗೆ ಹೊಂದಿಕೊಂಡಂತಿದ್ದವು. ಅಂತಹ ಸಂದರ್ಭದಲ್ಲಿ ತಮ್ಮ ಧರ್ಮಕ್ಕನುಗುಣವಾಗಿ ತಾವ ಸೇರಬೇಕಾದ ಅಧಿಪತ್ಯದ ಬಗ್ಗೆ ನಿಶ್ಚಯಿಸಿದರು. ಹೀಗೆ ಮಾಡುವಾಗ ರಾಜಧಾನಿ ತನ್ನ ಧರ್ಮ ಮುಖ್ಯವಾಯಿತೇ ಹೊರತು ಪ್ರಜೆಗಳದ್ದಲ್ಲ ಅನೇಕ ಸಣ್ಣ ಪುಟ್ಟ ರಾಜ್ಯಗಳು ವಿಲೀನಗೊಂಡು ದೊಡ್ಡ ರಾಜ್ಯದ ವ್ಯಾಪ್ತಿ ಪಡೆದವು ಮತ್ತು ಹೊಸ ಗುಂಪುಗಳು ರೂಪಿತವಾದವು. ಸಂಬಂಧಪಟ್ಟ ಅನೇಕ ರಾಜರುಗಳು ಸೇರಿ ಒಂದು ಸಮಿತಿಯಂತೆ ಮಾಡಿಕೊಂಡು ಆಯಾ ಪ್ರದೇಶವನ್ನು ಆಳುವ ವ್ಯವಸ್ಥೆ ಮಾಡಿಕೊಂಡರು. ಆದರೆ ಪಟೀಲರ ಪ್ರಬಲ ಒತ್ತಡಕ್ಕೆ ಮಣಿದು ಬಹುತೇಕ ರಾಜ್ಯಗಳು ಭಾರತದೊಂದಿಗೆ ವಿಲೀನಗೊಳ್ಳುವಂತಾಯಿತು.

“ರಾಜ್ಯಗಳ ಪ್ರಜಾಪ್ರಭುತ್ವೀಕರಣ’’ವನ್ನು ಸಾಧಿಸುತ್ತಿರುವ “ರಕ್ತರಹಿತ ಕ್ರಾಂತಿ’’ಯ ಬಗ್ಗೆ ಎಲ್ಲೆಲ್ಲೂ ಹರುಷ ಸಂಭ್ರಮಗಳು ವ್ಯಕ್ತವಾದವು. ಈ ಸಂಭ್ರದಲ್ಲಿ ರಾಜರು ಬಳಿಸಿಕೊಳ್ಳಬಹುದಾದ ಹಳೆಯ ಸವಲತ್ತುಗಳ ವ್ಯಾಪ್ತಿಯನ್ನು ಕುರಿತಂತೆ ಅಷ್ಟಾಗಿ ಜನರ ಗಮನ ಹೋಗಲಿಲ್ಲ. ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ನಡುವಳಿಗಳನ್ನು ತಮ್ಮ ವಿರುದ್ಧ ಜರುಗಿಸದಂತೆ ಹಿಂದಿನಿಂದಲೂ ಇದ್ದ ಸವಲತ್ತು ಹಾಗೇ ಉಳಿಯುತ್ತದೆ ಎಂಬ ಖಾತರಿಯನ್ನು ಅವರಿಗೆ ನೀಡಲಾಯಿತು. ಹೀಗಾಗಿ ರಾಜರುಗಳಿಂದ ಅಥವಾ ಅಧಿಕಾರ ಮೇರೆಗೆ ಹಿಂದೆ ಮಾಡಲಾದ ಅಥವಾ ಮಾಡದೇ ಬಿಟ್ಟಿದ್ದ ಯಾವುದೇ ಲೋಪದೋಷಗಳನ್ನು ಕುರಿತಂತೆ ಅವರ ಪ್ರಜೆಗಳಾಗಲೀ, ನ್ಯಾಯಾಲಯವಾಗಲೀ ಯಾವುದೇ ಕ್ರಮ ಜರುಗಿಸುವಂತಿರಲಿಲ್ಲ.

ಈ ಮಹಾರಾಜರುಗಳಲ್ಲಿ ಅತ್ಯಂತ ಆಡಂಬರದ ವ್ಯಕ್ತಿ ಆಳ್ವಾರ್ ಮಹಾರಾಜನೇ ಇರಬೇಕು. ಆತನ ಅತಿರೇಕಗಳು ಎಷ್ಟು ನಾಚಿಕೆಗೇಡಿನವಾಗಿದ್ದವೆಂದರೆ ಬ್ರಿಟಿಷರಿಂದಲೇ ಪದಚ್ಯುತಗೊಂಡ ಅಪರೂಪದ ಅಗೌರವಕ್ಕೆ ಆತ ಪಾತ್ರನಾಗಿದ್ದ. ಈ ಮುದಿ ಖದೀಮನ ಕಥೆಗಳನ್ನು ಬಾಯಲ್ಲಿ ಹೇಳುವುದಕ್ಕೂ ಅಸಹ್ಯ ಎನ್ನುತ್ತಾ ನನ್ನ ಫೋಟೋಗ್ರಾಫರ್ ಮಿತ್ರ ಒಂದು ಮಾಮೂಲಿ ಕಥೆಯನ್ನು ಹೇಳಿದ್ದ. (ಆದರೆ ಈತನಷ್ಟು ಸಂಕೋಚ ಪಡದ ಇನ್ನೊಬ್ಬ ಮಿತ್ರ ಸುನಿಲನ ಮಾತುಗಳಿಂದ ಈ ರಾಜನ ಕಥೆಗಳ ಬಗ್ಗೆ ನನಗೆ ಸುಳಿವು ಸಿಕ್ಕಿತ್ತು. ನಮ್ಮ ಮಹಾರಾಜರು ಚಿಕ್ಕ ಹುಡುಗರಿಂದ ಈ ರಾಜನ ಕಥೆಗಳ ಬಗ್ಗೆ ನನಗೆ ಸುಳಿವು ಸಿಕ್ಕಿತ್ತು. ನಮ್ಮ ಮಹಾರಾಜರು ಚಿಕ್ಕ ಹುಡುಗರಿಂದ ಹಿಡಿದು ಆನೆಗಳವರೆಗೆ ಯಾರನ್ನೂ ಬಿಟ್ಟಿಲ್ಲ ಎಂದು ಆದಷ್ಟೂ ಸಭ್ಯ ಮಾತುಗಳಲ್ಲಿ ಸುನಿಲ್ ತನ್ನ ರಾಜನ ವ್ಯಕ್ತಿತ್ವ ಬಣ್ಣಿಸಿದ್ದ. ಇದೇನೇ ಇರಲಿ. ಬಾಯಲ್ಲಿ ಹೇಳಲು ಅಸಹ್ಯವೆನಿಸದಂಥ ಒಂದು ಕಥೆಯನ್ನು ಸುನಿಲ ನಿರೂಪಿಸಿದ. ಅದು ಒಬ್ಬ ಮಹಾರಾಣಿಯ ನಿಗೂಢ ಸಾವಿಗೆ ಸಂಬಂಧಿಸಿದ್ದು.

ಹುಡುಗನಾಗಿದ್ದಾಗ ಸುನಿಲ್ ಬೇಸಿಗೆ ರಜೆಯಲ್ಲಿ ಅಳ್ವಾರ್‌ಗೆ ಹೋಗಿ ಚಿಕ್ಕಪ್ಪಂದಿರ ಮನೆಯಲ್ಲಿರುತ್ತಿದ್ದ. ಈ ಇಬ್ಬರು ಚಿಕ್ಕಪ್ಪಂದಿರಲ್ಲಿ ಒಬ್ಬರು, ರಾಜ್ಯ ಭೂಗರ್ಭ ವಿಜ್ಞಾನಿ, ಇನ್ನೊಬ್ಬರು ರಾಜ್ಯ ವಿದ್ಯುತ್ ಇಂಜಿನಿಯರ್ ಆಗಿದ್ದರು. ‘ನೋಡಿ, ಇದು ರಾಜ್ಯದ ಸ್ವಜನ ಪಕ್ಷಪಾತಕ್ಕೆ ಉದಾಹರಣೆ. ಕುಟುಂಬದಲ್ಲಿ ಒಬ್ಬರು ಮಹಾರಾಜರಿಂದ ಕೆಲಸ ಗಿಟ್ಟಿಸಿದರೆ ಸಾಕು ಆತ ಇಡೀ ಕುಟುಂಬವನ್ನೇ ಒಳಸೇರಿಸಿಬಿಡುತ್ತಿದ್ದ… ನನ್ನ ಚಿಕ್ಕಪ್ಪಂದಿರಿಗೆ ಅರ್ಹತೆ ಇರಲಿಲ್ಲವೆಂದಲ್ಲ… ಆದರೆ ಆಗ ನಡೆಯುತ್ತಿದ್ದುದೇ ಹಾಗೆ’ ಎಂದ ಸುನಿಲ್. ಹೀಗೇ ಒಂದು ರಜೆಯಲ್ಲಿ ಆತ ಚಿಕ್ಕಪ್ಪಂದಿರ ಮನೆಗೆ ಹೋಗಿದ್ದಾಗ ಇತ್ತೀಚಿನ ಹೊಸ ಮಹಾರಾಣಿಗಾಗಿ ಅರಮನೆ ಕಟ್ಟಿಸುವ ಕೆಲಸದಲ್ಲಿ ಚಿಕ್ಕಪ್ಪಂದಿರುತೊಡಗಿದ್ದರು. ಅದು ಬೆಟ್ಟದ ಮೇಲಿದ್ದ ಒಂದು ಪುಟ್ಟ ಸುಂದರ ಅರಮನೆಯಾಗಿತ್ತು. ವಿದ್ಯುತ್ ಇಂಜಿನಿಯರ್ ಆಗಿದ್ದ ಚಿಕ್ಕಪ್ಪ. ಕಾರಂಜಿಗಳಿಗೆ ಬಣ್ಣ-ಬಣ್ಣದ ಹೊನಲು ಬೆಳಕಿನ ವಿದ್ಯುದ್ದೀಪಗಳ ವ್ಯವಸ್ಥೆಯಲ್ಲಿ ನಿರತರಾಗಿದ್ದರು. ಭೂಗರ್ಭ ವಿಜ್ಞಾನಿ ಚಿಕ್ಕಪ್ಪ ಅಲಂಕಾರಿಕ ಬಣ್ಣ-ಬಣ್ಣದ ಕಲ್ಲುಗಳ ಜೋಡಣೆಯ ಕೆಲಸ ನೋಡುತ್ತಿದ್ದರು. ಮಹಾರಾಣಿ ಅರಮನೆಯನ್ನು ತ್ಯಜಿಸಿ ಹೋಗುವುದಕ್ಕೆ ಅಥವಾ ಅಲ್ಲಿಂದ ಆಕೆಯನ್ನು ಹೊರಹಾಕುವುದಕ್ಕೂ ಮೊದಲು ಈ ರತ್ನದಂಥ ಅರಮನೆಯಲ್ಲಿ ಆಕೆ ವಾಸಮಾಡಿದ್ದು ತೀರ ಕಡಿಮೆ. ಮಹಾರಾಜರ ಕುಖ್ಯಾತ ಚಟುವಟಿಕೆಗಳ ಪಟ್ಟಿಯಲ್ಲಿ ಕೊಲೆಯೂ ಸೇರಿತು ಎಂದು ಈ ಹಿಸ್ ಹೈನಸ್ ಕುರಿತು ಕೆಲವರು ಬಹಿರಂಗವಾಗೇ ಆಡಿಕೊಳ್ಳುತ್ತಿದ್ದರು. ಆದರೆ ಅಧಿಕೃತ ಪ್ರಕಟಣೆಯಲ್ಲಿ ಅದಕ್ಕೆ ಕೊಟ್ಟ ಹೆಸರು ‘ಆತ್ಮಹತ್ಯೆ’.

ಇದೇನೇ ಇರಲಿ, ರಾಜನಿಗೆ ಈ ಅರಮನೆಯ ನೋಟವನ್ನು  ಸಹಿಸುವುದು ಅಸಾಧ್ಯವಾಯಿತು. ಹೀಗಾಗಿ ಅದನ್ನು ಡೈನಮೈಟ್ ಇಡಿಸಿ, ನೆಲಸಮ ಮಾಡಿಸಿದ. ಅನಂತರದಿಂದ ನಗರದ ಮುಖ್ಯ ರಸ್ತೆಯ ಕೊನೆಯಲ್ಲಿದ್ದ ಬೆಟ್ಟದ ತುದಿ ಬೋಳಾಗಿ ಕಾಣಿಸುತ್ತಿತ್ತು. ಜನ ಆ ಬಗ್ಗೆಯೇ ಸದಾ ಮಾತಾಡಿಕೊಳ್ಳುತ್ತಿದ್ದರು. ಇದನ್ನು ತಾಳಿಕೊಳ್ಳುವುದು ರಾಜನಿಗೆ ಸಾಧ್ಯವಿರಲಿಲ್ಲ. ಈ ಬೋಳುಬೆಟ್ಟ ಕಣ್ಣೆದುರು ಇರಬಾರದೆನ್ನಿಸತೊಡಗಿತು. ಹೀಗಾಗಿ ಆ ಬೆಟ್ಟವನ್ನೇ ಸ್ಫೋಟಿಸಿ ನೆಲಸಮ ಮಾಡಿಸಿದ. ನಾನು ಬೇಸಿಗೆ ರಜೆಯಲ್ಲಿ ಅಲ್ಲಿದ್ದಷ್ಟು ದಿನವೂ ಡೈನಮೈಟ್‌ಗಳನ್ನಿಟ್ಟು ಸ್ಫೋಟಿಸುವ ಕೆಲಸ ನೋಡುವುದೇ ಆಯಿತು. ಪ್ರತಿ ರಾತ್ರಿ, ಬೆಟ್ಟವನ್ನು ಸ್ಫೋಟಿಸುವ ಸದ್ದು ನನ್ನ ಚಿಕ್ಕಪ್ಪಂದಿರ ಮನೆಗೆ ಕೇಳುತ್ತಿತ್ತು. ನನ್ನ ರಜೆ ಮುಗಿಯುವ ಹೊತ್ತಿಗೆ ಬೆಟ್ಟ ನೆಲಸಮವಾಗಿತ್ತು ಎಂದು ಸುನಿಲ್ ಕಥೆ ಮುಗಿಸಿದ.

ಮತ್ತೊಂದು ಬೇಸಿಗೆಯಲ್ಲಿ, ಯಥಾ ಪ್ರಕಾರ ಸುನಿಲ್ ಚಿಕ್ಕಪ್ಪಂದಿರ ಮನೆಗೆ ಬಂದಾಗ, ಬೆಟ್ಟ ನೆಲಸಮವಾಗಿದ್ದ ಜಾಗದಲ್ಲಿ ಜೇನುಗೂಡಿನಂಥ ಚಟುವಟಿಕೆ ನಡೆದಿತ್ತು. ಅಲ್ಲಿ ಹೊಸದೊಂದು ಅರಮನೆಯ ನಿರ್ಮಾಣಕ್ಕೆ ರಾಜ ಆಜ್ಞೆಮಾಡಿದ್ದ. ಅದು ಎತ್ತರಕ್ಕೆ ಹೊಳೆಯುತ್ತಿದ್ದ ಕಟ್ಟಡ. ಫಳಫಳನೆ ಹೊಳೆವ ಕಲ್ಲುಗಳ ಹೊದಿಕೆ ಹಾಗೂ ಭಾರೀ ವಿದ್ಯುತ್ ಸಲಕರಣೆಗಳನ್ನು ಅಳವಡಿಸಿದ ಆಧುನಿಕ ರೀತಿಯ ಅರಮನೆ. ಒಟ್ಟಿನಲ್ಲಿ ಈ ಅರಮನೆಯೂ ನನ್ನ ಇಬ್ಬರೂ ಚಿಕ್ಕಪ್ಪಂದಿರಿಗೆ ಬಿಡುವು ಸಿಗದಷ್ಟು ಕೆಲಸ ಒದಗಿಸಿತ್ತು. ಭೂಗರ್ಭ ವಿಜ್ಞಾನಿ ಚಿಕ್ಕಪ್ಪ ಅರಮನೆಯ ಪ್ರತಿಯೊಂದು ಕೋಣೆಗೂ ಆಳ್ವಾರಿನಲ್ಲಿ ಸಿಗುವ ಸ್ಥಳೀಯ ಕಲ್ಲು ಚಪ್ಪಡಿಗಳ ಹಾಸನ್ನು ಮಾಡಿಸಬೇಕಿತ್ತು. ಒಂದು ಕೋಣೆಯದಕ್ಕಿಂತ ಇನ್ನೊಂದು ಕೋಣೆಯ ಕಲ್ಲಿನ ಬಣ್ಣ ಸಂಪೂರ್ಣ ಬೇರೆಯೇ ಆಗಿರಬೇಕಿತ್ತು. ಅದಕ್ಕಾಗಿ ಕಲ್ಲುಗಳ ಹುಡುಕಾಟ ನಡೆಸಿದ್ದರು. ವಾಸ್ತವವಾಗಿ ಅವರು ಕಲ್ಲಿದ್ದಲ ಗಣಿಗಾರಿಕೆ ಅಭಿವೃದ್ಧಿಯ ಕೆಲಸ ನೋಡಿಕೊಳ್ಳಬೇಕಿತ್ತು. ಆದರೆ ಈಗ ಅದನ್ನು ಅರ್ಧಕ್ಕೆ ಬಿಟ್ಟು ಬಣ್ಣದ ಕಲ್ಲುಗಳನ್ನು ಹುಡುಕುತ್ತಾ ತಿಂಗಳಾನುಗಟ್ಟಲೆ ಅಲೆಯುತ್ತಿದ್ದರು. ಅರಮನೆಯ ನೆಲಕ್ಕೆ ಕಲ್ಲುಗಳ ಶೋಧನೆ ಅವರ ಪೂರ್ಣ ಕೆಲಸವಾಗಿಬಿಟ್ಟಿತು.

ಇನ್ನೊಬ್ಬ ಚಿಕ್ಕಪ್ಪನ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಅರಮನೆಯ ದೀಪದ ಸ್ವಿಚ್ಚುಗಳ ಅಳವಡಿಕೆ, ಲ್ಯಾಂಪ್ ಶೇಡುಗಳ ಹೊಂದಾಣಿಕೆಯಾಗುವ ತನಕ ಅವರ ಜಲವಿದ್ಯುತ್ ಯೋಜನೆಗಳು ಸ್ಥಗಿತವಾಗಿದ್ದವು. ಮಹಾರಾಜರ ಅರಮನೆಗೆ ಮಾಮೂಲಿ ವಿದ್ಯುತ್ ಫಿಟಿಂಗ್‌ಗಳನ್ನು ಹಾಕುವಂತಿರಲಿಲ್ಲ. ಅದಕ್ಕಾಗಿ ಭಾರತದ ವಿವಿಧ ಪಟ್ಟಣಗಳಿಗೆ ಹೋಗಿ ಹುಡುಕಬೇಕಿತ್ತು. ಮಹಾರಾಜರ ನಿರ್ದಿಷ್ಟ ಸೂಚನೆಗೆ ತಕ್ಕಂಥ ಫಿಟಿಂಗ್‌ಗಳಿಗಾಗಿ ಅಮೆರಿಕೆಗೂ ಜನರನ್ನು ಕಳಿಸಬೇಕಿತ್ತು. ಎಲ್ಲವನ್ನೂ ಡಜನ್‌ಗಟ್ಟಲೆ, ನೂರುಗಟ್ಟಲೆ ಪ್ರಮಾಣದಲ್ಲಿ ತರಿಸಬೇಕಿತ್ತು.

ನಾವೆಲ್ಲಾ ಆಗ ಚಿಕ್ಕ ಹುಡುಗರು, ಈ ನಿರ್ಮಾಣ ಕಾರ್ಯ ನಡೆಯುವಾಗ ನಮ್ಮ ಅಲೆದಾಟವೆಲ್ಲ ಅರಮನೆಯ ಸುತ್ತಮುತ್ತಲಲ್ಲಿಯೇ. ಬಾತ್‌ರೂಮ್‌ಗಳು ಝಗಝಗಿಸುತ್ತಿದ್ದವು. ಒಂದು ಬಾತ್‌ರೂಮಿನಲ್ಲಿ ಭಾರೀ ಸ್ನಾನದ ಟಬ್ ಇತ್ತು. ನೀರಿನಲ್ಲಿ ಕಿರು ಅಲೆಗಳನ್ನು ಏಳಿಸುವ, ನೊರೆಯನ್ನು ಉಕ್ಕಿಸುವಂಥ ವಿವಿಧ ಸಲಕರಣೆಗಳನ್ನು ಅದಕ್ಕೆ ಅಳವಡಿಸಲಾಗಿತ್ತು. ನಮಗೆ ಕುತೂಹಲ. ನಾನು ಟಬ್ ಇತ್ತು. ನಮಗೆ ಕುತೂಹಲ. ನಾನು ಟಬ್‌ನಲ್ಲಿ ಕುಳಿತು ಒಂದು ಸ್ವಿಚ್ ಒತ್ತಿದೆ. ನದಿಯಲ್ಲಿರುವಂತೆಯೇ ಕಿರು ಅಲೆಗಳು ಏಳತೊಡಗಿದವು. ಇನ್ನೊಂದು ಸ್ವಿಚ್ ಒತ್ತಿದರೆ ಎಲ್ಲ ಕಡೆಯಿಂದ ನೀರಿನ ಧಾರೆಗಳು ಕಾರಂಜಿಯಂತೆ ಚಿಮ್ಮಿ ಬಂದು ಕಚಗುಳಿಯಿಡುತ್ತಿದ್ದವು. ಯಾವ ಸ್ವಿಚ್ ಒತ್ತಿದರೆ ಏನಾಗುತ್ತೋ ಗೊತ್ತಾಗುತ್ತಿರಲಿಲ್ಲ. ಒಟ್ಟಿನಲ್ಲಿ ತಬ್ಬಿಬ್ಬು ಮಾಡುವಂಥ ವ್ಯವಸ್ಥೆ. ‘ನೋಡಿ ಇದೆಲ್ಲವೂ ರಾಜ್ಯದ ವಿದ್ಯುತ್ ಇಂಜಿನಿಯರ್ ಮಾಡಬೇಕಾಗಿದ್ದ ಕೆಲಸ’’ ಎಂದು ಹೇಳಿದ ಸುನಿಲ್.

ಹೀಗೆ ವಿದ್ಯುದೀಕೃತ ಸ್ನಾನದ ಟಬ್ ಹಾಗೂ ನವಿಲುಗಳು ನಲಿದಾಡುವಂಥ ಉದ್ಯಾನವನ ಎಲ್ಲ ಸಿದ್ಧವಾದ ಮೇಲೆ. ಮಹಾರಾಜ ಹಳೆಯ ಅರಮನೆಯನ್ನು ಬಿಟ್ಟು ಹೊಸ ಅರಮನೆಗೆ ಹೊರಡಲು ಸಿದ್ಧನಾದ. ಅದಕ್ಕಾಗಿ ‘ಗೃಹಪ್ರವೇಶ’ ಸಮಾರಂಭವಾಗಬೇಕಿತ್ತು. ರಾಜ-ಪುರೋಹಿತರ ಧಾರ್ಮಿಕ ವಿಧಿಗಳನ್ನು ವಿದ್ಯುಕ್ತವಾಗಿ ನೆರವೇರಿಸಿದರು. ಕೆಲವೊಂದು ಆಹುತಿಗಳೂ ನಡೆದವು. ಮಹಾರಾಜರು ಪ್ರಾರ್ಥನೆಗಳನ್ನು ಸಲ್ಲಿಸಿದ್ದೂ ಮುಗಿಯಿತು.

ಸೂಕ್ತ ಪರಿವಾರ, ವೈಭವೋಪೇತ ಸಂಭ್ರಮಗಳಿಂದ ಮಹಾರಾಜರು ಮುಂಬಾಗಿಲಿನತ್ತ ನಡೆಯತೊಡಗಿದರು. ಅವರ ಪಾದ ಹೊಸ್ತಿಲನ್ನು ಸ್ಪರ್ಶಿಸಿತ್ತು. ಅವರು ಅದನ್ನು ದಾಟಿ ಒಳಗೆ ಅಡಿಯಿಡುವ ಹೊತ್ತಿಗೆ ಸರಿಯಾಗಿ ಬಾಗಿಲ ಮೇಲು ಚೌಕಟ್ಟಿನಿಂದ ಅಲಂಕಾರಿಕ ಪ್ಲಾಸ್ಟರ್ ಚೂರೊಂದು ಕಳಚಿ ಅವರ ತಲೆಯ ಮೇಲೆ ಬಿತ್ತು. ಅದು ‘ರಾಜಶಿರ’ವನ್ನು ಘಾಸಿಗೊಳಿಸುವಷ್ಟು ದೊಡ್ಡ ಚೂರೇನೂ ಆಗಿರಲಿಲ್ಲ. ಆದರೆ ಮೂಢನಂಬಿಕೆಗಳ ಈ ಮನುಷ್ಯ ಇದನ್ನು ಅಪಶಕುನವೆಂದು ಪರಿಗಣಿಸಲು ಇಷ್ಟೇ ಸಾಕಾಯಿತು.

ಚಿಕ್ಕ ಹುಡುಗರಿಗೆ ನೀಡಿದ ರೋಮಾಂಚನದ ಸಂತೋಷವನ್ನು ಮಹಾರಾಜರಿಗೆ ನೀಡುವ ಅವಕಾಶ ಬಾತ್‌ಟಬ್‌ಗೆ ಲಭಿಸಲೇ ಇಲ್ಲ. ಸುನಿಲ್ ನೆನಪಲ್ಲಿ ಉಳಿದಂತಹ ಚಿಮ್ಮುಧಾರೆಗಳಿಗೆ ಮಹಾರಾಜರ ನೀಳಕಾಯಕ್ಕೆ ಕಚಗುಳಿಯಿಡುವ ಅವಕಾಶ ಸಿಗಲೇ ಇಲ್ಲ. ಅಲಂಕಾರಿಕ ವಿದ್ಯುತ್ ದೀಪಗಳ ಸ್ವಿಚ್ಚುಗಳಿಗೆ ಮಹಾರಾಜರ ಕಂಪಿಸುವ ಬೆರಳುಗಳ ಸ್ಪರ್ಶ ಆಗಲೇ ಇಲ್ಲ. ಮತ್ತೆ ತೆಗೆಯಲಾಗದಂತೆ ಅರಮನೆಯ ಬಾಗಿಲುಗಳನ್ನು ಸೀಲ್ ಮಾಡಲಾಯಿತು. ಹೊಸ ಅರಮನೆಯಲ್ಲಿ ಮಹಾರಾಜ ಎಂದೂ ನೆಲೆಸಲಿಲ್ಲ.

ಇಂಥ ಪ್ರದರ್ಶನ ಆಡಂಬರಗಳ ತಂದೆಯ ಪದಚ್ಯುತಿಯ ನಂತರ ಗದ್ದುಗೆಯನ್ನು ಏರಿದ ಆಳ್ವಾರಿನ ಯುವ ಮಹಾರಾಜನ ದೃಷ್ಟಿ ಬೇರೆಯೇ ಥರದ್ದಾಗಿತ್ತು. ಮಹಾರಾಜನು ಪ್ರಜೆಗಳ ಧರ್ಮದರ್ಶಿ ಇದ್ದಂತೆ ಎಂಬುದನ್ನು ಆತ ಎಂದೂ ಮರೆಯಲಿಲ್ಲ. ತುಂಬ ಗಂಭೀರ ಹಾಗೂ ಧರ್ಮಭೀರು ಸ್ವಭಾವದ ಈ ಯುವಕನ ಹಾಗೆ ಬಹುಶಃ ಯಾರೂ ಕೂಡ ಇಷ್ಟು ಚೆನ್ನಾಗಿ ಟ್ರಸ್ಟೀಶಿಪ್ ತತ್ವವನ್ನು ಎತ್ತಿ ಹಿಡಿದಿರಲಿಕ್ಕಿಲ್ಲ. ಹಿರಿಯ ಮಹಾರಾಜನ ವೈಯಕ್ತಿಕ ರಂಗುರಂಗಿನ ಬದುಕಿಗೆ ಪ್ರತಿಯಾಗಿ ಈತನ ಖಾಸಗಿ ಜೀವನ ಕುರಿತಂತೆ ಯಾವೊಂದು ಪುಕಾರೂ ಇರಲಿಲ್ಲ. ಜನ ಈತನನ್ನು ಧರ್ಮನಿಷ್ಠ ವಿರಕ್ತ ಎಂದು ಪರಿಗಣಿಸುವಷ್ಟರ ಮಟ್ಟಿಗೆ ಈತನ ಬದುಕು ಊಹಾಪೋಹಗಳಿಂದ ಮುಕ್ತವಾಗಿತ್ತು.

ಸದಾಕಾಲ ವೇದಾಧ್ಯಯನದಲ್ಲಿ ನಿರತನಾಗಿರುತ್ತಿದ್ದ ಈತ ಯಾವಾಗಾದರೊಮ್ಮೆ ಸಾರ್ವಜನಿಕವಾದ ಹೇಳಿಕೆಗಳನ್ನು ಕೊಡುವುದಕ್ಕಾಗಿ ಇಲ್ಲವೇ ಯಾವುದಾದರೂ ನಿಯೋಗಗಳನ್ನು ಭೇಟಿ ಮಾಡಲು ಮಾತ್ರ ನನ್ನ ಅಧ್ಯಯನ ಬಿಟ್ಟು ಈಚೆ ಕಾಣಿಸಿಕೊಳ್ಳುತ್ತಿದ್ದ ಪ್ರಜಾಮಂಡಳಿಯ ಸ್ಥಳೀಯ ಸದಸ್ಯರೊಂದಿಗೆ ಆತನ ಭೇಟಿ ಮುಗಿದ ಸನಿಹದಲ್ಲಿಯೇ ನಾನು ಅಳ್ವಾರ್ ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭ ಒದಗಿತ್ತು. ರಾಜನು ಭರವಸೆ ನೀಡಿದ್ದ ಆಶ್ವಾಸನೆಗಳನ್ನು ಇದುವರೆಗೆ ಜಾರಿಗೆ ತರದಿರುವ ಬಗ್ಗೆ ಆತನಿಗೆ ನೆನಪಿಸುವುದು ಪ್ರಜಾ ಮಂಡಳಿಯವರ ಭೇಟಿಯ ಉದ್ದೇಶವಾಗಿತ್ತು. ಇದಕ್ಕೆ ಮಹಾರಾಜ ನೀಡಿದ ಉತ್ತರ ಧರ್ಮಶಾಸ್ತ್ರ ತೀರ್ಮಾನ ನುಡಿಯಂತೆ ಇತ್ತು. ಆತ ಹೇಳಿದ್ದೇನೆಂದರೆ “ನಾವು ಸೂರ್ಯದೇವನ ವಂಶಜರು. ಪ್ರಜೆಗಳೇ ನಮ್ಮ ಮಕ್ಕಳು. ಇದು ತಂದೆ ಮಗನ ಸಂಬಂಧದಂತೆ. ಧರ್ಮಗ್ರಥಗಳಲ್ಲಿ ಸುಧಾರಣೆಗಳ ವಿಷಯ ಹೇಳಿಲ್ಲ. ತಂದೆ ಮಗನ ನಡುವೆ ಸುಧಾರಣೆಗಳ ಪ್ರಶ್ನೆ ಏಳುವುದಿಲ್ಲ.’’

ಆದರೆ ಈ ತಂದೆ ಮಗನ ಸಂಬಂಧದ ಫಲಿತಾಂಶವೇನು ಎಂಬುದು ಕೆಲವು ಕಾಲೇಜು ವಿದ್ಯಾರ್ಥಿಗಳೊಡನೆ ಮಾತನಾಡಿದಾಗ ಅರಿವಾಯಿತು. ಈ ಹುಡುಗರು ‘ಕುರ್ಚಿ ಬಿಟ್ಟು ಇಳಿಯಿರಿ’ ಎಂಬ ಬ್ಯಾನರ್‌ಗಳನ್ನು ಹಿಡಿದು ಮುಖ್ಯರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರಯುಕ್ತ ಲಾಠಿಚಾರ್ಜ್ ನಡೆಸಲಾಗಿತ್ತು. ಅನೇಕ ಹುಡುಗರು ಹೊಡೆತ ತಿಂದಿದ್ದರು.  ಕೆಲವರ ಬೆರಳುಗಳು ಮುಂದಿದ್ದವು. ಅನೇಕರನ್ನು ಜೈಲಿಗೆ ಹಕಲಾಗಿತ್ತು.

“ಕುರ್ಚಿ ಬಿಟ್ಟು ಇಳಿಯಿರಿ’’ ಎಂಬುದು “ಬೇಜವಾಬ್ದಾರಿಯುತ ಸಚಿವರನ್ನು ಒದೊಡಿಸಿ, ಸರ್ಕಾರದಲ್ಲಿರಬೇಕಾದ ನಮ್ಮ ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡಿಕೊಳ್ಳುತ್ತೇವೆ’’ ಎಂದು ತಿಳಿಸುವ ಭಾರತೀಯ ಶೈಲಿ. ಈ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಪ್ರತಿಭಟನಾ ಮೆರವಣಿಗೆಗಳನ್ನು, ಸಭೆಗಳನ್ನು ಅಥವಾ ೫ ಜನಕ್ಕಿಂತ ಹೆಚ್ಚು ಜನ ಗುಂಪು ಗೂಡುವುದನ್ನು ನಿಷೇಧಿಸುವ ಸಂವಿಧಾನದ ೧೪೪ನೇ ಅನುಚ್ಛೆಚದವನ್ನು ಈ ಹುಡುಗರು ಉಲ್ಲಂಘಿಸಿದಂತಾಗಿತ್ತು.

ಚಿಕ್ಕ ಚಿಕ್ಕ ಶಾಲಾ ಹುಡುಗರೂ ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು ಮತ್ತು ಧರ್ಮದರ್ಶಿಯ ನಂಬಿಕೆಯ ವೀರಭಟರು ಚಿಕ್ಕ ಶಾಲಾ ಮಕ್ಕಳಿಗೆ ನೀಡಿದ ಶಿಕ್ಷೆಯಲ್ಲಿ ಏನೂ ವ್ಯತ್ಯಾಸವಿರಲಿಲ್ಲ. ಅವರು ಈ ಹುಡುಗರನ್ನು ಎರಡು ಮಿಲಟರಿ ಲಾರಗಳನ್ನು ತುಂಬಿದರು. ಸುಮಾರು ೪೦ ಮಂದಿ ಸಶಸ್ತ್ರ ಸೈನಿಕರ ಬೆಂಗಾವಲಿನಲ್ಲಿ ಹೊರಟ ಈ ಲಾರಿಗಳು ಮಕ್ಕಳನ್ನು ದೂರದ ಕಾಡಿನಲ್ಲಿ ಬಿಟ್ಟು ಹಿಂದಿರುಗಿದವು.

ಅಳ್ವಾರಿನಲ್ಲಿ ಬಹು ವಿಶೇಷ ರೀತಿಯ ಕಾಡುಗಳಿವೆ. ಹುಲಿಬೇಟಿಗೆ ಈ ರಾಜ್ಯ ಹೆಸರಾದ ತಾಣ ಮತ್ತು ಭಾರತದಲ್ಲಿ ಈ ಅರಣ್ಯಗಳನ್ನು ಬಿಟ್ಟರೆ ಇನ್ನೆಲ್ಲಿಯೂ ಸಿಂಹಗಳು ಕಾಣಬರುವುದಿಲ್ಲ. ಲಾರಿಗಳು ಹುಡುಗರನ್ನು ಈ ಅರಣ್ಯದಲ್ಲಿ ಬಿಟ್ಟುಬಂದವು. ಸೈನಿಕರು ಬಂದೂಕಿನ ಗುರಿ ಹಿಡಿದು ಹೆದರಿಸಿ ಹುಡುಗರನ್ನು ಅಲ್ಲಿ ಇಳಿಸಿದ್ದರು. ಆದರೆ ಈ ಹುಡುಗರು ಹೆದರದೆ ಅನೇಕ ರೀತಿಯ ಸಾಹಸಗಳನ್ನು ಮಾಡಿದ್ದ ಸಂಗತಿಯನ್ನು ಇದೇ ಲಾರಿಗಳ ಡ್ರೈವರ್‌ಗಳಲ್ಲಿ ಒಬ್ಬ ನನಗೆ ತಿಳಿಸಿದ. ಅಲ್ಲಿ ಒಟ್ಟು ೫೨ ಹುಡುಗರಿದ್ದರು. ಅವರೆಲ್ಲರೂ “ನಾವು ನಿಮ್ಮ ಬಂದೂಕುಗಳಿಗೆ ಹೆದರುವುದಿಲ್ಲ’’ ಎಂದೂ ಕೂಗಿದ್ದರು. ಎತ್ತರಕ್ಕಿದ್ದ ಒಬ್ಬ ಹುಡುಗನ ವಶಕ್ಕೆ ಒಂದು ಕೊಡದಷ್ಟು ಕುಡಿಯುವ ನೀರನ್ನು ಮಾತ್ರ ಕೊಡಲಾಗಿತ್ತು. ಆಮೇಲೆ ಆ ಗುಂಪಿನ ಜಯಂತಿಪ್ರಸಾದ್ ಎಂಬ ೧೨ ವರ್ಷದ ಒಬ್ಬ ಚಿಕ್ಕ ಹುಡುಗನನ್ನು ನಾನು ಮಾತಾಡಿಸಿದ್ದೆ. ದೊಡ್ಡ ಕಣ್ಣುಗಳ ತುಂಬುಗಲ್ಲದ ಹುಡುಗ ಅವನಲ್ಲಿ ವಯಸ್ಸಿಗೆ ಮೀರಿದ ಗಾಂಭೀರ್ಯವಿತ್ತು. “ನಮ್ಮನ್ನು ಬಂಧಿಸಿ ಎಂದು ಹೇಳಿ ನಾವೇ ಮುಂದೆ ಬಂದೆವು. ನೀವು ಕೊಡುವ ನೀರೂ ನಮಗೆ ಬೇಕಿಲ್ಲ ಎಂದು ಹೇಳಿದೆವು’’ ಎಂದು ತಿಳಿಸಿದ. ಇದು ಪ್ರತಿಭಟನಾ ನಿರಾಕರಣದ ಪಕ್ಕಾ ಭಾರತೀಯ ರೀತಿ. ಈ ಹುಡುಗರ ತಂದೆ-ತಾಯಿಗಳೂ ಸಹ ಪ್ರಜಾರಾಜ್ಯದ ಬೇಡಿಕೆಗಾಗಿ ಸಶಸ್ತ್ರ ಪೊಲೀಸರ ಆಜ್ಞೆಗಳನ್ನು ತಿರಸ್ಕರಿಸಿದವರಾಗಿದ್ದರು.

ಇಂಥ ಸಂಗತಿಗಳನ್ನು ಬಲವಾಗಿ ನೋಡಿದಾಗ, ಪ್ರಜಾಮಂಡಳಿಗಳು ರಾಜರ ಆಡಳಿತದ ಭಾರತದಲ್ಲಿ ಯಾಕೆ ಬಲವಾಗಿ ಬೆಳೆಯುತ್ತಿವೆ ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ದಮನಕ್ಕೊಳಗಾದ ವಿವಿಧ ವೃತ್ತಿಗಳ ಹಾಗೂ ವಿವಿಧ ಪ್ರದೇಶಗಳ ಜನರು ಜವಾಬ್ದಾರಿಯುತ ಸರಕಾರಕ್ಕಾಗಿ ನಡೆಯುತ್ತಿರುವ ಚಳವಳಿಗಳಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದರು. ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಸುದೀರ್ಘ ಚಳುವಳಿಯಲ್ಲಿ ಜನತೆಯ ಚಳುವಳಿಗೆ ನೆಹರೂ ಸಮರ್ಥ ಕ್ರಿಯಾಶೀಲ ನಾಯಕತ್ವ ಒದಗಿಸಿದ್ದರು. ಲಿಂಗನ್ ಹೇಳಿದ ಮಾತುಗಳಿಗೇ ನೆಹರೂ ಧ್ವನಿ ನೀಡಿದ್ದರು. ಅದು ಭಾರತದಾದ್ಯಂತ ಮಾರ್ದನಿಸುತ್ತಿತ್ತು. “ಭಾರತವು ಅರ್ಧ ಗುಲಾಮಗಿರಿಯಲ್ಲಿದ್ದು ಅರ್ಧ ಸ್ವತಂತ್ರವಾಗಿರಲು ಸಾಧ್ಯವಿಲ್ಲ.’’

ಆಳ್ವಾರ್ ಒಂದು ಚಿಕ್ಕ ರಾಜ್ಯವಾಗಿದ್ದರೂ ಸಹ ಬದಲಾವಣೆಗಾಗಿ ಹಾತೊರೆಯುತ್ತಿತ್ತು. ಎಲ್ಲೆಲ್ಲೂ ಪ್ರತಿಭಟನೆಗಳು ನಡೆಯುತ್ತಿದ್ದವು. ಪ್ರಜಾಪ್ರಭುತ್ವವನ್ನು ಹತ್ತಿಕ್ಕುವಂತಹ ಪ್ರಯತ್ನಗಳ ವಿರುದ್ಧ ಹೋರಾಟ ನಡೆಸುವಾಗ ಜನತೆ ಎದುರಿಸಬೇಕಾದ ಯಾವುದೇ ಅಪಾಯಗಳಿಗೆ ಹಿಂದೂ ಮುಸ್ಲಿಮರಿಬ್ಬರೂ ಸಮಾನವಾಗೇ ಸಿದ್ಧವಾಗಿದ್ದರು. ಬೃಹತ್ ಕಾಶ್ಮೀರದಿಂದ ಹಿಡಿದು ಚಿಕ್ಕ ಭರತ್‌ಪುರದವರೆಗೆ ಎಲ್ಲೆಲ್ಲಿಯೂ ದೈವಾಂಶಸಂಭೂತರ ಆಳ್ವಿಕೆಯಲ್ಲಿ ತಮ್ಮ ಶಕ್ತಿಗೂ ಮೀರಿ ಬವಣೆಗಳನ್ನು ಅನುಭವಿಸಿದ್ದಂತಹ ರೈತರು, ಕೈಕಸುಬುದಾರರು, ವರ್ತಕ ವರ್ಗದವರು ಈಗ ಜಾಗೃತಗೊಂಡಿದ್ದರು.

ಆದರೆ ಮಹಾರಾಜರ ದೈವಿಕ ಹಕ್ಕು ಅಷ್ಟು ಸುಲಭವಾಗಿ ನಾಶವಾಗುವುದಿಲ್ಲ. ಬಲವಾದ ಹೋರಾಟವಿಲ್ಲದೆ ಇಂತಹ ಅಸಾಧಾರಣ ಸುಯೋಗವನ್ನಾಗಲೀ, ಅಧಿಕಾರವನ್ನಾಗಿಲೀ ನಿರ್ಮೂಲನ ಮಾಡಲು ಸಾಧ್ಯವಿಲ್ಲ. ಪ್ರಜೆಗಳ ಕೈಗೆ ಅಧಿಕಾರ ಸಿಕ್ಕರೆ ತಮ್ಮ ರಾಜಯೋಗ್ಯ ಸಲವತ್ತುಗಳೆಲ್ಲ ಮೇಲೇಳುತ್ತಿರುವ ಪ್ರಜಾಪ್ರಭುತ್ವದ ಅಲೆಯಲ್ಲಿ ದುಡುಮ್ಮನೆ ಮುಳುಗಿ ಹೋಗಿಬಿಡುತ್ತವೆ ಎಂಬುದು ರಾಜರುಗಳಿಗೆ, ನವಾಬಾದರಿಗೆ ಬಹಳ ಚೆನ್ನಾಗಿ ಗೊತ್ತಿತ್ತು.

ಆಗ ಧರ್ಮಯುದ್ಧಗಳ ರೂಪದಲ್ಲಿ ವಿಧಿಯೇ ಅವರ ನೆರವಿಗೆ ಬಂತು. ಸ್ವಾತಂತ್ರ್ಯ ದಿನದಂದು ಅಷ್ಟೊಂದು ಶಕ್ತಿಯುತವಾಗಿ, ಪೂರ್ಣ ಆಶಾಯುತವಾಗಿ ನಡೆಯುತ್ತಿದ್ದ ಆಳ್ವಾರ್ ಚಳವಳಿಯ ಬೆನ್ನೆಲುಬು ಕೇವಲ ಆರು ತಿಂಗಳೊಳಗಾಗಿ ಮುರಿದು ಬಿತ್ತು. ತಮ್ಮ ಪಕ್ಕದ ಬೀದಿಯಲ್ಲೇ ಅತ್ಯಂತ ಬರ್ಬರವಾದ ಧಾರ್ಮಿಕ ಯುದ್ಧದ ರಕ್ತಪಾತವಾಗುವ ಭೀತಿ ಜನಗಳಲ್ಲಿರುವಾಗ, ಅವರೆಲ್ಲ ಒಂದುಗೂಡಿ ತಮ್ಮ ನಾಗರಿಕ ಹ್ಕುಗಳಿಗಾಗಿ ಹೊರಾಡುವುದು ಬಹಳ ಕಷ್ಟ. ಹೀಗೆ ಪ್ರಜಾಮಂಡಳಿಯ ಹೋರಾಟ ದುರ್ಬಲಗೊಳ್ಳುತ್ತಿದ್ದಂತೆ ಮೂಲಭೂತವಾದೀ ಆಗಿದ್ದ ರಾಷಿಯ  ಸ್ವಯಂ ಸೇವಕ ಸಂಘದ ಕೈ ಬಲವಾಗುತ್ತ ಹೋಯಿತು.

ರಾಜ್ಯದ ಪ್ರಜಾಪಕ್ಷಗಳಿಗೆ ದೊರೆಯದಿದ್ದಂಥ ಪ್ರಾಯೋಜಕತ್ವದ ಸೌಲಭ್ಯ ಆರ್.ಎಲ್.ಎಸ್.ನ ಮತಭ್ರಾಂತ ಯುವಕರಿಗೆ ಸುಲಭವಾಗಿ ದೊರಕಿತ್ತು. ಮಹಾರಾಜರ ಅರಮನೆಯಲ್ಲಿ ಅವರ ಬಹಿರಂಗ ಸಭೆಗಳು ಹಾಗೂ ಅನೇಕ ರಹಸ್ಯ ಸಮಾವೇಶಗಳು ನಡೆಯುತ್ತಿದ್ದುದು ನಿಸ್ಸಂದೇಹ. ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿದ್ದ ಜನರ ವಿರುದ್ಧ ಬಹಳ ಅನುಕೂಲಕಾರಿಯಾಗಿದ್ದ ೧೪೪ನೇ ಅನುಚ್ಛೇದ ಅಥವಾ ಇದರಷ್ಟೇ ಕುಪ್ರಸಿದ್ಧವಾಗಿದ್ದ ಸಾರ್ವಜನಿಕ ಸುರಕ್ಷಣಾ ಕಾಯಿದೆಗಳನ್ನು ಸುಲಭವಾಗಿ ಚಲಾಯಿಸಬಹುದಿತ್ತು. ಆದರೆ, ತೀರಾ ಧರ್ಮನಿಷ್ಠನಾದ ಹಿಂದೂ ಮಹಾರಾಜನ ಆಳ್ವಿಕೆಯಲ್ಲಿ ಹಿಂದೂ ಪಾರಮ್ಯತೆಯ ಗಡಪುರಾತನ ವೈಭವವನ್ನು ಪುನರುಜ್ಜೀವಗೊಳಿಸಲು ಯತ್ನಿಸುತ್ತಿದ್ದಂಥ ಸಂಘಟನೆಯ ವಿರುದ್ಧ ಅದನ್ನು ಚಲಾಯಿಸುವುದು ಅಷ್ಟು ಸುಲಭವಾಗಿರಲಿಲ್ಲ.

ಇದರ ಮುಂದಿನ ಹಂತವೆಂದರೆ, ಜನರ ಬಡತನ ಸಂಕಷ್ಟಗಳಿಗೆ ಮಹಾರಾಜರು ಮತ್ತು ಅವರ ಭ್ರಷ್ಟ ಮಂತ್ರಿಗಳು ಕಾರಣವಲ್ಲ, ಮುಸ್ಲಿಮರೇ ಕಾರಣ ಎಂಬ ಭಾವನೆಯನ್ನು ಬಿತ್ತುವುದು. ಅಷ್ಟು ಮಾಡಿದರೆ ಸಾಕು ಮುಂದಿನ ಇತಿಹಾಸ ತನ್ನ ಜಾಡು ಹಿಡಿಯುತ್ತದೆ. ಅದು ಆಗಿದ್ದು ಹೀಗೆಯೇ, ಕೆಲವು ರಾಜ್ಯಗಳಲ್ಲಿ ಮತಾಂಧತೆಯ ಕ್ರೌರ್ಯ ಮುಗಿಲು ಮುಟ್ಟಿತು.

ರಾಜರ ಆಳ್ವಿಕೆಯಲ್ಲಿದ್ದ ಕೆಲವು ಸಂಸ್ಥಾನಗಳು ಮಾತ್ರ ಆಶ್ಚರ್ಯಕರ ರೀತಿಯಲ್ಲಿ ಧಾರ್ಮಿಕ ರಕ್ತಪಾತನದಿಂದ ಮುಕ್ತವಾಗಿದ್ದವು. ಆದರೆ ಬಹುತೇಕ ಸಂದರ್ಭಗಳಲ್ಲಿ ಅದು ಕೆಲವರ ಹಿತಾಸಕ್ತಿಗೆ ಮಾತ್ರ ಅನುಕೂಲವಾಗಿರುವಂಥ ಒಂದು ವಿಚಿತ್ರ ಪರಿಸ್ಥಿತಿಯನ್ನು ಕಾಣಬಹುದಿತ್ತು. ಆಳುವ ಮಹಾರಾಜನ ಧರ್ಮಕ್ಕೆ ಸೇರಿರದ ಯಾವ ಪ್ರಜೆಯನ್ನೂ ಆ ರಾಜ್ಯದ ಧಾರ್ಮಿಕ ಗಲಭೆಗಳು ತಟ್ಟದೆ ಇರಲಿಲ್ಲ. ಹಿಂದೂ ಮುಸ್ಲಿಂ ಎಂಬ ಎರಡು ಬಹುಸಂಖ್ಯಾತ ಧರ್ಮಗಳಲ್ಲಿ ಜನ ಯಾವುದಕ್ಕೆ ಸೇರಿದ್ದರೂ ಈ ತತ್ವ ಸಮಾನವಾಗಿ ಆನ್ವಯಿಸುತ್ತಿತ್ತು. ಮುಸ್ಲಿಂ ನವಾಬಾನ ಆಳ್ವಿಕೆ ಹೊಂದಿದ ಬಹಾವಲ್‌ಪುರದಲ್ಲಿ ಹಿಂದೂಗಳನ್ನು ಎಷ್ಟು ಕ್ರೂರವಾಗಿ ಹೊಡೆದೋಡಿಸಲಾಯಿತೆಂದರೆ ಗಾಂಧೀಜಿಯವರು ಶಾಂತಿಪಾಲನೆಗಾಗಿ ಅಲ್ಲಿಗೆ ತಮ್ಮ ಅನುಯಾಯಿಗಳ ನಿಯೋಗವನ್ನು ಕಳುಹಿಸಬೇಕಾಯಿತು. ಪಾಕಿಸ್ತಾನ ಗಡಿರೇಖೆಯ ಭಾಗಗಳಲ್ಲಿದ್ದ ಸಿಖ್ ರಾಜ್ಯಗಳಲ್ಲ ಮಲುಸ್ಲಿಮರ ಉಚ್ಛಾಟನೆ ಪರಮಾವಧಿ ಮುಟ್ಟಿತು. ಸರಿಯಾಗಿ ಹೇಳುವುದಾದರೆ ಇಂತಹ ಕೆಲವೊಂದು ರಾಜ್ಯಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಅಲ್ಪಸಂಖ್ಯಾತರಾಗಿರಲೇ ಇಲ್ಲ. ಅತಿ ದೊಡ್ಡ ಸಿಖ್ ರಾಜ್ಯವಾಗಿದ್ದ ಪಾಟಿಯಾಲಾದಲ್ಲಿ ಜನಸಂಖ್ಯೆಯ ಅರ್ಧದಷ್ಟು ಜನ ಮುಸ್ಲಿಮರೇ ಆಗಿದ್ದರು. ಕಪುರ್ತಲದಲ್ಲಿ ಸೇ. ೬೫ರಷ್ಟು ಮುಸ್ಲಿಮರಿದ್ದರು.

‘ಧಾರ್ಮಿಕ ಸಮಸ್ಯೆ’ಯನ್ನು ಅತ್ಯಂತ ಕುಶಲಗಾರಿಕೆಯಿಂದ ಪರಿಹರಿಸಿದ ದಾಖಲೆ ಕಪುರ್ತಲ ರಾಜನದು. ನಯಗಾರಿಕೆಗೆ ಹೆಸರಾದ ಈ ಮಹಾರಾಜ ಸೌಹಾರ್ಧಯುತವಾಗೇ ಪರಿಸ್ಥಿತಿಯನ್ನು ನಿಭಾಯಿಸಿದ್ದ. ೭೫ರ ಯವಸ್ಸಿನ ಕಪುರ್ತಲದ ದೊರೆ ತನ್ನ ‘ರಾಷ್ಟ್ರಾತೀತ’ ಅಭಿರುಚಿಯಿಂದಾಗಿ ಭಾರತದ ಇತರ ಮಹಾರಾಜರುಗಳಿಗಿಂತ ವಿಭಿನ್ನ. ಆತನ ಹೆಂಡತಿಯರು ಬೇರೆ ಬೇರೆ ದೇಶಗಳ ಸುಂದರಿಯರು. ಸ್ಪ್ಯಾನಿಶ್, ಸರ್ಕೇಶಿಯನ್, ಜಾರ್ಜಿಯನ್, ಫ್ರೆಂಚ್ ಹಾಗೂ ಭಾರತ ಹೀಗೆ ಒಂದೊಂದು ರಾಷ್ಟ್ರದಿಂದ ಒಬ್ಬೊಬ್ಬರು. ಆದರೂ ಸಾಂಸ್ಕೃತಿಕವಾದ ಇತರ ಎಲ್ಲ ವಿಚಾರಗಳಲ್ಲೂ ಆತನ ಆದ್ಯತೆ ಇದ್ದುದು ಫ್ರಾನ್ಸ್‌ಗೆ. ಆತನ ಆಸ್ಥಾನಿಕರು ಭಾಷಾ ತಜ್ಞರಾಗಿದ್ದು ತಮ್ಮ ರಾಜನ ಸುಸಂಸ್ಕೃತ ಕಿವಿಗೆ ಫ್ರೆಂಚ್ ಭಾಷೆ ಮಾತ್ರ ಕೇಳಿಸುವಂತೆ ನೋಡಿಕೊಳ್ಳಬೇಕಿತ್ತು. ಆಗ ತನ್ನ ಡೈರಿ ಬರೆಯುತ್ತಿದ್ದುದು ಫ್ರೆಂಚ್ ಭಾಷೆಯಲ್ಲಿ. ಆತನ ಅರಮನೆ ವಾರ್ಸೈಲಿಸ್ ಅರಮನೆಯ ಯಥಾವತ್ ಅನುಕರಣೆಯಾಗಿತ್ತು. ಆಯಾ ಕಾಲಕ್ಕೆ ಒದಗಿಬಂದ ಕ್ಲಿಷ್ಟ ಪರಿಸ್ಥಿತಿಗಳನ್ನು ಆತ ಸಭ್ಯ ರೀತಿಯಲ್ಲಿ ಪರಿಹರಸುತ್ತಾನೆಂದು ನಿರೀಕ್ಷಿಸುವುದು ಸಹಜವೇ ಆಗಿತ್ತು.

ಇಸ್ಲಾಂ ಅನುಯಾಯಿಗಳಾಗಿದ್ದ ತನ್ನ ರಾಜ್ಯದ ಮೂರನೇ ಎರಡು ಭಾಗದಷ್ಟು ಜನಗಳಿಗೆ ಆತ, ಅನಿಶ್ಚಿತ ಪರಿಸ್ಥಿತಿಗಳಿಂದಾಗಿ ತಾನು ಅವರ ಸುರಕ್ಷಣೆಯ ಬಗ್ಗೆ ಖಾತರಿ ನೀಡಲಾರೆ ಅದಕ್ಕಾಗಿ ವಿಷಾದಿಸುತ್ತೇನೆ ಎಂದು ಪ್ರಕಟಿಸಿದ. ಆದರೆ ರಾಜನು ಪ್ರಜೆಗಳ ಧರ್ಮದರ್ಶಿ ಎಂಬುದನ್ನು ನಿಮಿಷಕ್ಕೂ ಮರೆಯದ ಆತ ತನ್ನ ಪಡೆಗಳವರೇ ಜನರನ್ನು ಸುರಕ್ಷಿತವಾಗಿ ಗಡಿ ಮುಟ್ಟಿಸುವ ಕೆಲಸ ಮಾಡುತ್ತಾರೆ ಎಂದ. ಇದನ್ನು ಅವನ ಸೈನಿಕರು ಮಾಡಿದ್ದರು. ಈ ನಿರಾಶ್ರಿತರು ಗಡಿಯನ್ನು ದಾಟಿದ್ದೇ ತಡ. ಅವರ ಮೇಲೆ ಘಾತುಕರ ದಂಡು ಎರಗಿತು. ಈಗಷ್ಟೇ ಅವರಿಗೆ ಬೆಂಗಾವಲು ನೀಡಿದ ಸೈನಿಕರೂ ಸೇರಿದಂತೆ ಅವರನ್ನು ಹೊಡೆದು, ದೋಚಿ ಲೂಟಿಮಾಡಿದರು. ಇದರಲ್ಲಿ ಎಷೊ ಮಂದಿ ಸತ್ತರು. ಹೀಗಾಗಿ ಈ ದೊರೆಯ ಧರ್ಮದರ್ಶಿತ್ವ ರಾಜ್ಯದ ಗಡಿ ರೇಖೆಯವರೆಗೆ ಮಾತ್ರ ಇತ್ತು ಎಂಬುದು ಸ್ಪಷ್ಟ. ಈತ ಮೂರನೇ ಎರಡರಷ್ಟು ಭಾಗದ ಜನರಿಗೆ ಸೇರಿದ್ದ ಭೂಮಿಯನ್ನು ರಾಜ್ಯದ ಬಲಿದ ಪ್ರಜೆಗಳಿಗೆ ಹಂಚಿದ್ದರಿಂದ ರೈತವರ್ಗದವರ ಕೃತಜ್ಞತೆ ನಿಷ್ಠೆಗಳನ್ನು ಪಡೆಯುವುದು ರಕಷ್ಟವಾಗಲಿಲ್ಲ. ಹೀಗಾಗಿ ಜವಾಬ್ದಾರಿ ಸರ್ಕಾರ ಬೇಕು ಎಂಬ ಕಿರಿಕಿರಿಯ ಬೇಡಿಕೆ ಸ್ವಲ್ಪಕಾಲದವರೆಗಾದರೂ ಇಲ್ಲಿನ ಜನರಿಂದ ಬರದೇ ಇದ್ದುದು ಸಹಜವೇ ಆಗಿತ್ತು.

ನಿರಂಕುಶಾಧಿಕಾರದ ಬೇರೆ ಬೇರೆ ರಾಜರ ಕೆಳಗೆ ಬೇಕಾಬಿಟ್ಟಿಯಾಗಿ ಕಲಸುಮೇಲೋಗರದಂತ ಇದ್ದ ರಾಜ್ಯಗಳು ನವಭಾರದ ಒಗ್ಗಟ್ಟಿಗೆ ಬೆದರಿಕೆ ಉಂಟು ಮಾಡುವಂಥವಾಗಿದ್ದವು. ಇಂತಹ ಗೊಂದಲದ ಮಧ್ಯೆ ಪಟೇಲರು ಸಣ್ಣಪುಟ್ಟ ರಾಜ್ಯಗಳನ್ನು ಪಕ್ಕದ ಪ್ರಾಂತ್ಯಗಳೊಂದಿಗೆ ವಿಲೀನಗೊಳಿಸುವ ಅಥವಾ ಅವುಗಳನ್ನು ಪಕ್ಕದ ರಾಜ್ಯಗಳೊಂದಿಗೆ ಸೇರಿಸುವ ಭಗೀರಥ ಪ್ರಯತ್ನ ಕೈಗೊಂಡರು. ಹೀಗೆ ವಿಲೀನಗೊಂಡ ಪ್ರದೇಶಗಳ ರಾಜರು ಒಂದು ಅಧ್ಯಕ್ಷೀಯ ಮಂಡಳಿ (Presidencies) ಮಾಡಿಕೊಂಡು ಈ ಪ್ರದೇಶದ ಚೇರಮನ್‌ಗಳಾಗಿಯೋ, ರಾಜ ಪ್ರಮುಖರಾಗಿಯೋ ಸರದಿಯನುಸಾರ ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ಮಾಡಲಾಯಿತು.

ಪಟೇಲರು ವಿಲಿನೀಕರಣದ ದಸ್ತಾವೇಜಿಗೆ ರಾಜರಿಂದ ಸಹಿ ಮಾಡಿಸಿಕೊಂಡರು. ಈ ಒಪ್ಪಂದಗಳ ಪ್ರಕಾರ ರಾಜರ ರಕ್ಷಣೆ, ಸಂಪರ್ಕ ಹಾಗೂ ವಿದೇಶಾಂಗ ವ್ಯವಹಾರ ಇಲಾಖೆಗಳ ತಮ್ಮ ಅಧಿಕಾರವನ್ನು ಭಾರತ ಸರ್ಕಾರಕ್ಕೆ ಬಿಟ್ಟುಕೊಡಬೇಕಾಯಿತು. ಪಟೇಲರು ರಾಜರನ್ನು ಕರೆಸಿಕೊಂಡಾಗ ಅವರೆಲ್ಲ ದುಂಡಾಗಿ ಬಂದ ದೃಶ್ಯ ನಾಟಕೀಯವಾಗಿತ್ತು. ರಾಜ್ಯಗಳ ಮಂತ್ರಿಯಾಗಿ ಪಟೇಲರು, ಚುಕ್ಕಿಗೆರೆಯ ಮೇಲೆ ಸಹಿ ಹಾಕುವುದಕ್ಕಾಗಿ ಅವರಿಗೆಲ್ಲ ಕೇವಲ ೫ ನಿಮಿಷಗಳ ಕಾಲಾವಕಾಶ ನೀಡಿದರು. ವಾರ್ತಾ ಸಚಿವರೂ ಆಗಿದ್ದ ಪಟೇಲರು ರಾಜರ “ದೇಶಭಕ್ತಿ ಹಾಗೂ ಸ್ವಪ್ರೇರಿತ ತ್ಯಾಗ’’ಕ್ಕೆ ಸೂಕ್ತ ಪ್ರಚಾರವನ್ನೂ ನೀಡಿದರು.

ಪೂರ್ವ ಪಂಜಾಬಿನ ರಾಜ್ಯಗಳನ್ನು ಒಂದುಗೂಡಿಸಿ ತನ್ನ ರಾಜ್ಯದಲ್ಲಿದ್ದ ಶೇ. ೪೮ರಷ್ಟು ಮುಸ್ಲಿಮರನ್ನು ಬೇರೆ ಯಾರೂ ಮಾಡದಷ್ಟು ಕ್ಷಿಪ್ರ ಅವಧಿಯೊಳಗಾಗಿ ರಾಜ್ಯದಿಂದ ಹೊರಹೊಗುವಂತೆ ಮಾಡಿದ್ದ ಹಾಗೂ ಮುಂದೆ ಪ್ರಬಲ ವ್ಯಕ್ತಿಯಾಗಿ ಬೆಳೆಯಬಹುದು ಎಂದು ಬಹಳಷ್ಟು ಭಾರತೀಯರು ಆತಂಕ ಪಡುತ್ತಿದ್ದ ಪಾಟಿಯಾಲಾದ ಮಹಾರಾಜನನ್ನು ಹೊಸ ಸಿಖ್ ಒಕ್ಕೂಟದ ರಾಜಪ್ರಮುಖನನ್ನಾಗಿ ಮಾಡಿದಾಗ ರಾಜರ ಆಡಳಿತ ವಿರೋಧಿಗಳಿಗೆ ಸಹಜವಾಗಿಯೇ ಅಸಮಾಧಾನವಾಗಿತ್ತು. ವಿಲೀನಿಕರಣದಲ್ಲಿ ಅನುಸರಿಸಲಾಗುತ್ತಿದ್ದ ಸಾಮಾನ್ಯ ನೀತಿಯ ಪ್ರಕಾರ ಆತನಿಗೆ ಸರದಿಯ ಪ್ರಕಾರ ನಿರ್ವಹಿಸುವಂತೆ ಈ ಕಾರ್ಯಭಾರವನ್ನು ಒಪ್ಪಿಸಿದ್ದು ಮಾತ್ರವೇ ಅಲ್ಲ ಆತನ ‘ಸ್ವಪ್ರೇರಿತ’ ತ್ಯಾಗಕ್ಕೆ ಮನ್ನಣೆಯಾಗಿ ಜೀವನ ಪರ್ಯಂತ ರಾಜಪ್ರಮುಖನಾಗಿರುವ ಅವಕಾಶವನ್ನು ನೀಡಲಾಯಿತು. ಆತನಿಗೆ ಮಿಲಿಯನ್‌ಗಟ್ಟಲೆ ಪಿಂಚಣಿಯನ್ನೂ ಅನುಗ್ರಹಿಸಲಾಯಿತು. ಇದೂ ಕೂಡ ಇಂತಹ ಎಲ್ಲ ರಾಜಾದಾಯಗಳಂತೆ ವರಮಾನ ತೆರಿಗೆಯಿಂದ ಮುಕ್ತವಾಗಿತ್ತು. ರಾಜ ಪ್ರಮುಖರ ಕೈಯಲ್ಲಿರುವ ಸರ್ಕಾರಗಳು ಹೆಚ್ಚು ಆಧುನಿಕವೂ, ಸುವ್ಯವಸ್ಥಿತವೂ  ದಕ್ಷವೂ ಆಗಿರುತ್ತದೆ ಎಂಬ ಬಗ್ಗೆ ಜನರಿಗೆ ಅಪಾರವಾದ ಆಶ್ವಾಸನೆಗಳನ್ನು ನೀಡಲಾಯಿತು. ಆದರೆ ಎರಡು ಪೊಲೀಸ್ ಬಲಗಳ ಕೂಡಿಕೆಯಿಂದ ಹೆಚ್ಚಿದ ‘ದಕ್ಷತೆಯ’ ಅಪರಾಧಗಳನ್ನು ಹತ್ತಿಕ್ಕುವುದಕ್ಕೆ ಬದಲಾಗಿ ನಾಗರಿಕರ ಸ್ವಾತಂತ್ರ್ಯ ದಮನಕ್ಕೆ ಬಳಕೆಯಾಗುವ ಸಾಧ್ಯತೆಯೇ ಹೆಚ್ಚು ಎಂಬ ಭಯ ನಾಗರಿಕರನ್ನು ಕಾಡುತ್ತಿತ್ತು.

ಚಿಕ್ಕಪುಟ್ಟ ಸಂಸ್ಥಾನಗಳ ವಿಲಿನೀಕರಣದಿಂದಾಗಿ ಭಾರತದ ರಾಜ ಸಂಸ್ಥಾನಗಳ ಸಂಖ್ಯೆ, ಮೊದಲಿದ್ದ ೫೬೨ರಿಂದ ಒಂದೆರಡು ಡಜನ್‌ಗಳಷ್ಟಕ್ಕೆ ಇಳಿಯಿತು. ರಾಜರನ್ನು ಭಾರತದ ಪ್ರಾಂತ್ಯಗಳೊಂದಿಗೆ ವಿಲೀನಗೊಳಿಸುವ ಸರ್ದಾರರ ಮುತ್ಸದ್ಧಿತನವನ್ನು ಶ್ಲಾಘಿಸುವುದರ ಜೊತೆ ಜೊತೆಗೇ ಪಟೇಲರ ಕೆಲವೊಂದು ಸಾರ್ವಜನಿಕ ಹೇಳಿಕೆಗಳಲ್ಲಿ ಪ್ರಜಾಪ್ರಭುತ್ವ ಬಹುದೂರ ತನ್ನ ಕೈ ಜಾಚದಂತೆ ನೋಡಿಕೊಳ್ಳುವ ಸೂಚನೆಯೂ ಇರಬಹುದೇ ಎಂಬ ಅನುಮಾನವನ್ನೂ ಅನೇಕರು ವ್ಯಕ್ತಪಡಿಸುತ್ತಿದ್ದರು. ಜವಾಬ್ದಾರಿ ಸರ್ಕಾರಕ್ಕಾಗಿ ಯಾವುದೇ ಚಳವಳಿಗಳನ್ನು ನಡೆಸಬಾರದು. ಹೀಗೆ ಮಾಡುವುದರಿಂದ ಶಂತಿಯು ಅಧಿಕಾರ ಹಸ್ತಾಂತರಕ್ಕೆ ತೊಂದರೆಯೇ ಹೆಚ್ಚು ಎಂದು ವೃತ್ತಪತ್ರಿಕೆಗಳಲ್ಲಿ ಸರ್ದಾರರು ಮನವಿ ಮಾಡಿಕೊಳ್ಳುತ್ತಿದ್ದರು. ರಾಜರ ಘನತೆ ಹಾಗೂ ಅಂತಸ್ತನ್ನು ಕಾಪಾಡುವ ಮಗ್ಗೆ ತೀವ್ರವಾದ ಬದ್ಧತೆಯಿರಬೇಕು ಎಂದು ಅವರು ಸಂಸ್ಥಾನಗಳ ಪ್ರಜೆಗಳಿಗೆ ತಿಳಿಸುತ್ತಿದ್ದರು. ‘ರಾಜರು ವಂಶಪಾರಂಪರ್ಯವಾಗಿ ಹಾಗೂ ಚಾರಿತ್ರಿಕವಾಗಿ ಪ್ರಜೆಗಳ ಮೇಲೆ ಕೆಲವೊಂದು ಅದಿಕಾರಗಳನ್ನು ಪಡೆದಿದ್ದಾರೆ. ಅದನ್ನು ಗೌರವಿಸಬೇಕಾದ್ದು ಪ್ರಜೆಗಳ ಕರ್ತವ್ಯ’’ ಎಂದೂ ತಮ್ಮ ಭಾಷಣವೊಂದರಲ್ಲಿ ಹೇಳಿದ್ದರು. ಇನ್ನೊಂದು ಭಾಷಣದಲ್ಲಿ “ನಿಮ್ಮ ಮುಂದೆ ಈಗ ಉದಯಿಸುತ್ತಿರುವ ಮೆಲಗಿನ ಸೌಂದರ್ಯವನ್ನು ಯಾವುದೇ ಕಹಿ, ದ್ವೇಷ ಭಾವನೆ ಹಾಳು ಮಾಡದಿರಲಿ’’ ಎಂಬ ಭಾವನಾತ್ಮಕ ಕರೆಯನ್ನು ನೀಡಿದರು.

ಆದರೆ ಹೈದರಾಬಾದ್ ಸಂಸ್ಥಾನದ ಸಾವಿರಾರು ಲಕ್ಷಾಂತರ ರೈತರು, ಆಕರ್ಷಕ ನುಡಿಗಟ್ಟುಗಳಲ್ಲಿ ಹೇಳಿದ ಈ ‘ಬೆಳಗಿನ ಸೌಂದರ್ಯ’ಕ್ಕಾಗಿ ಕಾಯಲು ಸಿದ್ಧವಿರಲಿಲ್ಲ. ತಾವೇ ಉತ್ತುಬಿತ್ತು ಶ್ರಮಿಸಿದರೂ ಎಂದಿಗೂ ತಮ್ಮದಾಗದಂತಹ ಹೊಲಗಳ ಮೇಲಿನ ಸೂರ್ಯೋದಯವನ್ನು ತಲೆ ತಲೆಮಾರುಗಳಿಂದಲೂ ಅಸಹಾಯಕರಾಗಿ ನೋಡಿದ ನಂತರ ಅವರ ದೃಷ್ಟಿಯಲ್ಲಿ ಸ್ವಾತಂತ್ರ್ಯ ಎಂಬ ಪದಕ್ಕೆ ಇದ್ದ ಅರ್ಥ ಒಂದೇ ಒಂದು. ಅದೇನೆಂದರೆ ‘ತಾವು ಬೆವರು ಸುರಿಸಿ ದುಡಿದ ನೆಲ ತಮ್ಮದಾಗಬೇಕು’.

ವಿಸ್ತಾರವಾದ ಭೂಪ್ರದೇಶದ ಮೇಲಿನ ನಿಮ್ಮ ಸ್ವಾಮಿತ್ವಕ್ಕೆ ಯಾವುದೇ ಧಕ್ಕೆಯಾಗದು ಎಂಬ ಖಾತರಿ ನೀಡುತ್ತ ಪಟೇಲರು ರಾಜರೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿರುವಾಗ ಮತ್ತು ಜಮೀನುದಾರರಿಗೆ ಪರಿಹಾರ ನೀಡುವ ಕ್ರಮಗಳ ಕರಡು ರೂಪುಗೊಳ್ಳುತ್ತಾ ಪರಿಷ್ಕಾರಗೊಳ್ಳುತ್ತಾ, ಚರ್ಚೆಗೊಳಪಡುತ್ತಾ, ಮುಂದೂಡಲ್ಪಡುತ್ತಾ ಇದ್ದಾಗ, ಹೈದ್ರಾಬಾದಿನ ಫಲವತ್ತಾದ ಪೂರ್ವಭಾಗಕ್ಕೆ ಸೇರಿದ ರೈತರು ತೆಲುಗು ಮಾತಾಡುವ ಪ್ರದೇಶದ ಸಮಸ್ಯೆಯನ್ನು ತಾವೇ ಕೈಗೆತ್ತಿಕೊಂಡು ಭೂಮಿಯನ್ನು ವಶಪಡಿಸಿಕೊಂಡರು. ಈ ಚಳುವಳಿ ಹಳ್ಳಿಯಿಂದ ತಾವೇ ಕೈಗೆತ್ತಿಕೊಂಡು ಭೂಮಿಯನ್ನು ವಶಪಡಿಸಿಕೊಂಡರು. ಈ ಚಳುವಳಿ ಹಳ್ಳಿಯಿಂದ ಹಳ್ಳಿಗೆ ಹಬ್ಬಿತು. ಸಾಂಪ್ರದಾಯಿಕ ಅಂದಾಜಿನ ಪ್ರಕಾರ ಈ ಚಳುವಳಿ ನಡೆದಿದ್ದು ೫೦೦ ಹಳ್ಳಿಗಳಲ್ಲಿ. ಆದರೆ ವಾಸ್ತವವಾಗಿ ೨೫೦೦ ಹಳ್ಳಿಗಳಲ್ಲಿ ಎಂದು ಇತರರು ಹೇಳಿದರು. ನಿಜವಾದ ಸಂಖ್ಯೆ ಎಷ್ಟೆಂದು ಯಾರಿಗೂ ಗೊತ್ತಿಲ್ಲ. ಯಾಕೆಂದರೆ ವೃತ್ತಪತ್ರಿಕೆಗಳು ವಾರ್ತಾ ಮಂತ್ರಿ ಪಟೇಲರ ಅಧೀನದಲ್ಲಿದ್ದುದರಿಂದ ತೆಲಂಗಾಣ ಚಳುವಳಿ ಕುರಿತಂತೆ ಒಂದೇ ಒಂದು ಶಬ್ದ ಕೂಡ ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗಲಿಲ್ಲ ಅಥವಾ ಪಟೇಲರೇ ರಾಜ್ಯಗಳ ಸಚಿವರೂ ಆದ ಕಾರಣ, ಈ ಖಾತೆಯ ಯಾವ ಪ್ರಕಟಣೆಯಲ್ಲೂ ಅದರ ದನಿ ಕೇಳಲಿಲ್ಲ.

ರೈತರು ಹೀಗೆ ವಶಪಡಿಸಿಕೊಂಡ ಬಹುತೇಕ ಭೂಮಿಯು (Absentee Ownership)  ಗೈರುಹಾಜರೀ ಭೂಮಾಲೀಕರದ್ದಾಗಿತ್ತು. ಆ ದೊಡ್ಡ ದೊಡ್ಡ ಜಮೀನುದಾರರ ಸಶಸ್ತ್ರ ಗೂಂಡಾಗಳ ಹಾಗೂ ಉಗ್ರಗಾಮೀ ರಜಾಕಾರರ ಭಾರೀ ಕಾವಲು ಅದಕ್ಕಿತ್ತು. ರಜಾಕಾರರೆಂದರೆ ನಿಜಾಮ ಹೇಳಿದಂತೆ ಕೇಳುತ್ತಿದ್ದ ಮತಾಂಧ ಮುಸ್ಲಿಮರು. ರಜಾಕಾರರು ಹಳ್ಳಿಗಳ ಮೇಲೆಲ್ಲ ಧಾಳಿ ನಡೆಸಿದರು. ರೈತರ ಗುಡಿಸಲುಗಳನ್ನು ಸುಟ್ಟು ಹಾಕಿದರು. ಅವರ ದವಸಧಾನ್ಯ, ಜಾನುವಾರು ಹಾಗೂ ಎಷ್ಟೋ ವೇಳೆ ರೈತರ ಹೆಂಡತಿಯರು ಮತ್ತು ಹೆಣ್ಣುಮಕ್ಕಳನ್ನೂ ಹೊತ್ತೊಯ್ದರು. ರೈತರೂ ಇದಕ್ಕೆ ಪ್ರತಿಯಾಗಿ ಹೋರಾಟ ಮಾಡಿದರು. ಎರಡೂ ಕಡೆ ಸಾಕಷ್ಟು ರಕ್ತಪಾತ, ಹಿಂಸಾಚಾರ ನಡೆದವು. ಈ ‘ಅವ್ಯವಸ್ಥೆ’ಯನ್ನು ಹತ್ತಿಕ್ಕಲು ರಜಾಕಾರರಿಗೆ ನೆರವಾಗುವುದಕ್ಕಾಗಿ ನಿಜಾಮನು ಮಿಲಟರಿ ಹಾಗೂ ಅರಬ್‌ಕೂಲಿ ಸಿಪಾಯಿಗಳನ್ನು ಕಳುಹಿಸಿದ. ಆದರೂ ದಂಗೆ ನಿಲ್ಲದೆ ಇತರೆಡೆಗಳಿಗೆ ಹಬ್ಬಿತು. ಸುಮಾರು ಐದರಿಂದ ಹತ್ತು ಸಾವಿರ ಚದರ ಮೈಲಿಗಳು ಎಂದು ಅಂದಾಜು ಮಾಡಲಾದ ಪ್ರದೇಶದಲ್ಲಿ ಒಂದು ರೈತರ ಸರ್ಕಾರ ಸ್ಥಾಪಿತವಾಯಿತು. ಗ್ರಾಮ ಸಮಿತಿಗಳನ್ನು ಚುನಾಯಿಸಲಾಯಿತು. ದಾನ್ಯಗಳ ಸಂಗ್ರಹ ಬೀಜವಿತರಣೆ ಹಾಗೂ ಭೂಮಿಯ ಸಂಚಿಕೆಗಾಗಿ ಸಮುದಾಯ ಕೃಷಿ (Collective) ವ್ಯವಸ್ಥೆ ಮಾಡಲಾಯಿತು. ಉಳದೆ ಬಿಟ್ಟಿದ್ದ ಹೊಲಗಳನ್ನು (ಭಾರತದಲ್ಲಿ ಸಾಮಾನ್ಯವಾಗಿ ಗೈರುಹಾಜರೀ ಒಡೆತನದ ಇಂಥ ವಿಸ್ತಾರವಾದ ಭೂಮಿ ಹಾಗೇ ಬೀಳು ಬಿದ್ದಿರುವುದು ಸಾಮಾನ್ಯ) ಭೂರಹಿತ ದುಡಿಮೆಗಾರರಿಗೆ ವಿತರಿಸಲಾಯಿತು. ಚಿಕ್ಕ ಪುಟ್ಟ ಹಿಡುವಳಿದಾರರಿಗೆ ಅದು ಖುಷ್ಕಿ ಭೂಮಿಯೋ ತರಿ ಭೂಮಿಯೋ ಎಂಬುದನ್ನು ಆಧರಿಸಿ ೫೫ರಿಂದ ೧೦೦ ಎಕರೆಗಳವರೆಗೆ ಇಟ್ಟುಕೊಳ್ಳಲು ಅನುಮತಿ ನೀಡಲಾಯಿತು. ಈ ಮಿತಿಯನ್ನು ದಾಟಿ ಉಳಿದ ಭೂಮಿಯನ್ನೆಲ್ಲ ರೈತರಿಗೆ ಕೊಡಲಾಯಿತು. ರೈತರನ್ನು ಭಯಪಡಿಸಲು ಖಾಸಗಿ  ಪೊಲೀಸರನ್ನು ಕಳಿಸಿದ್ದಂತ ಜಮೀನ್ದಾರರ ಎಲ್ಲ ಜಮೀನುಗಳನ್ನೂ ವಶಪಡಿಸಿಕೊಳ್ಳಾಯಿತು. ಎಲ್ಲ ಹಳೆಯ ಸಾಲುಗಳನ್ನೂ “ರದ್ದು ಮಾಡಲಾಗಿದೆ’’ ಎಂದು ಗ್ರಾಮ ಸಮಿತಿಗಳು ಅಪ್ಪಣೆ ಹೊರಡಿಸಿದವು. ಈ ಮೊದಲು ವ್ಯಾಪಾರದಾರರು ವಿಧಿಸುತ್ತಿದ್ದ ಬೇಕಾಬಿಟ್ಟಿ ಹಾಗೂ ಅತಿಯಾದ ಬಡ್ಡಿಗಳಿಗೆ ಬದಲಾಗಿ ವಾರ್ಷಿಕ ೬% ಬಡ್ಡಿಯನ್ನು ವಿಧಿಸಲಾಯಿತು.

ಈ ಚಳುವಳಿಯು ಪೂರ್ತಿಯಾಗಿ ಅಲ್ಲದಿದ್ದರೂ ಬಹುತೇಕವಾಗಿ ಕಮ್ಯುನಿಸ್ಟ್ ಚಳುವಳಿಯಾಗಿತ್ತು. ಕೆಲವು ಸೋಶಿಯಲಿಸ್ಟರೂ ಇದರಲ್ಲಿ ಭಾಗವಹಿಸಿದ್ದರು. ಇದರ ಕೆಲವು ಭಾಗ ಮುಂದಾಳತ್ವವನ್ನು ಸ್ಥಳೀಯ ರಾಜ್ಯ ಪ್ರಜಾ ಕಾಂಗ್ರೆಸ್ ವಹಿಸಿಕೊಂಡಿತ್ತು. ನೆಹರೂ ಅವರೇ ಈ ಸಂಘಟನೆಯ ಮೊದಲ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು ಮತ್ತು ಈ ಪಕ್ಷವು ರಾಜರ ಆಳ್ವಿಕೆಯಿದ್ದ ವಿವಿಧ ಸಂಸ್ಥಾನಗಳಲ್ಲಿ ಪ್ರಜಾಸರ್ಕಾರಕ್ಕಾಗಿ ಹೋರಾಟ ನಡೆಸಿತ್ತು. ಇದು ಕಮ್ಯುನಿಸ್ಟ್‌ರ ಚಳುವಳಿ ಎಂದು ಆಡಳಿತದಲ್ಲಿದ್ದವರು ಪ್ರಲಾಪಿಸುತ್ತಿದ್ದರು. ಆದರೆ ಎಲ್ಲೆಡೆಯೂ ಸಹ ಜನರ ಸಹಾನುಭೂತಿಯಿದ್ದುದು ದಟ್ಟ ದಾರಿದ್ರ್ಯ ಹಾಗೂ ಶೋಷಣೆಯಲ್ಲಿ ಬೇಯುತ್ತಿದ್ದ ರೈತರ ಪರವಾಗಿ. ಎಷ್ಟು ತುರ್ತಾಗಿ ಭೂಸುಧಾರಣೆಯಾಗಬೇಕಿದೆ ಎಂಬುದರ ಸೂಚನೆಯಾಗಿ ಈ ಚಳುವಳಿಯನ್ನು ಪರಿಣಿಸಬೇಕೇ ಹೊರತು ರಾಜಕೀಯ ಬಂಡಾಯ ಎಂದಲ್ಲ ಎಂಬ ದೃಷ್ಟಿ ಎಲ್ಲ ಕಡೆ ವ್ಯಕ್ತವಾಗುತ್ತದೆ.

ಒಬ್ಬ ಸ್ವತಂತ್ರ ರಾಜನಾಗಿ ತನ್ನ ವಿಸ್ತಾರವಾದ ಹೈದ್ರಾಬಾದ್ ರಾಜ್ಯವನ್ನು ಆಳಬೇಕೆಂದು ಕನಸು ಕಾಣುತ್ತಿದ್ದ ನಿಜಾಮನು ಕರಾರಿನ ಮೇಲೆ ಭಾರತೀಯ ಸೇನೆಗೆ ಶರಣಾಗತನಾದಾಗ, ಭೂಸುಧಾರಣಾ ಕ್ರಮದಲ್ಲಿ ಅಷ್ಟೇನೂ ಪ್ರಗತಿ ಸಾಧಿಸಿರದಿದ್ದ ಭಾರತ ಸರ್ಕಾರ ಕೂಡಲೇ ಚಳುವಳಿಗಾರರ ಮೇಲೆ ಕ್ರಮ ಕೈಗೊಳ್ಳಲು ಮುಂದಾಯಿತು. ಹೈದ್ರಾಬಾದಿನ ಕಮ್ಯೂನಿಷ್ಟರ ಮೇಲೆ ತೀವ್ರ ಕ್ರಮ ಜರುಗಿಸಿ ಸುಮಾರು ೨೦೦೦ ಕಮ್ಯುನಿಸ್ಟರನ್ನು ಬಂಧಿಸಿದರೂ ಸಹ, ಭೂ ಮಾಲೀಕರಿಗೆ ಭೂಮಿಯನ್ನು ಹಿಂದುರುಗಿಸುವುದು ಸುಲಭದ ಮಾತಲ್ಲ ಎಂಬುದು ಸರ್ಕಾರದ ಗಮಕ್ಕೆ ಬಂದಿತು. ನನ್ನೊಂದಿಗೆ ಮಾತಾಡಿದ ಸರ್ಕಾರದ ವಕ್ತಾರರೊಬ್ಬರು ‘ರೈತರು ಭೂಮಿಯನ್ನು ಭೂಮಾಲೀಕರಿಗೆ ಹಿಂದಿರುಗಿಸುವಂತೆ ಮಾಡುವುದು ಬಹಳ ಕಷ್ಟ’ ಎಂದು ವ್ಯಕ್ತಪಡಿಸಿದರು.

ರೈತರು ದಂಗೆಯೆದ್ದುದರ ಒಂದು ಫಲಶ್ರುತಿಯಾಗಿ ವಯಸ್ಕ ಮತದಾನದ ಆಧಾರದ ಮೇಲೆ ಹೈದ್ರಾಬಾದಿನಲ್ಲಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಕೆಲಸ ಭರದಿಂದ ಆರಂಭವಾಯಿತು. ಇದರಿಂದ ಅಸೆಂಬ್ಲಿ ಚುನಾವಣೆ ನಡೆದು ಅದರಿಂದ ರೂಪುಗೊಳ್ಳುವ ಸಂವಿಧಾನದ ಮೂಲಕ ಸುಧಾರಣೆಗಳನ್ನು ಕೈಗೊಳ್ಳಲು ಅವಕಾಶ ಸಿಕ್ಕಂತಾಯಿತು. ಇದರಲ್ಲಿ ಕೆಲವೊಂದು ವಿಳಂಬಗಳು ಅನಿವಾರ್ಯವಾಗಿದ್ದವು. ಮುಖ್ಯವಾಗಿ “ಪ್ರಮುಖವಾದ ಎಲ್ಲ ನಿರ್ಧಾರಗಳನ್ನೂ ನಿಜಾಮನು ಅನುಮೋದನೆಯ ಮೇರೆಗೆ ಕೈಗೊಳ್ಳಲಾಗುವುದು’’ ಎಂಬ ಆಶ್ವಾಸನೆಯನ್ನು ನಿಜಾಮನಿಗೆ ನೀಡಿದ್ದುದು ಇದಕ್ಕೆ ಕಾರಣವಾಗಿತ್ತು. ಆದರೆ ಈ ಮಧ್ಯೆ ತನ್ನ ೭೦೦೦ ಚದರ ಮೈಲಿಗಳ ಖಾಸಗಿ ಭೂಪ್ರದೇಶವನ್ನು ಹೈದ್ರಾಬಾದ್ ರಾಜ್ಯಕ್ಕೆ ಒಪ್ಪಿಸುವಂತೆ ಹಿಸ್ ಎಕ್ಸಾಲ್ಟೆಡ್ ಹೈನೆಸ್‌ನ್ನು ಪ್ರೇರೇಪಿಸುವ ಒಂದು ಒಳ್ಳೆಯ ಕ್ರಮವನ್ನು ಸರ್ಕಾರ ಕೈಗೊಂಡಿತು. ಅದೇ ರೀತಿ ಆತನ ಆಸ್ಥಾನ ಶ್ರೀಮಂತರ ವಿಸ್ತಾರವಾದ ಭೂ ಪ್ರದೇಶವೂ ಸಹ ಕ್ರಮೇಣ ಸರ್ಕಾರದ ನಿಯಂತ್ರಣಕ್ಕೆ ಬರಬೇಕಾಯಿತು. ಈ ಭೂಮಿಯಲ್ಲಿ ದುಡಿಯುತ್ತಿದ್ದ ರೈತರನ್ನು ಉಚ್ಛಾಟಿಸದಂತೆ ಸರ್ಕಾರವು ನೋಡಿಕೊಳ್ಳುವ ಭರವಸೆ ನೀಡಿತು. ಹೀಗಾಗಿ ಇನ್ನು ಮುಂದೆ ಸರ್ಕಾರವೇ  ಭೂಮಾಲೀಕನಾಗಿರುತ್ತದೆ. ಜಮೀನ್ದಾರನಲ್ಲ ಎಂದಾಯಿತು. ಈ ಪೂರ್ವನಿದರ್ಶನದ ಪ್ರಕಾರ ಉಳಿದ ರಾಜರೂ ಸಹ ತಮ್ಮ ವಶದಲ್ಲಿರುವ ನಿಖರವಾದ ಭೂಮಿಯ ಪಟ್ಟಿಯನ್ನು ಸಲ್ಲಿಸಬೇಕಾಯಿತು. ಇದುವರೆಗೆ ಇದು ಯಾರಿಗೂ ತಿಳಿಯದಿದ್ದ ಅತಿರಹಸ್ಯದ ವಿಷಯವಾಗಿತ್ತು. ಸರ್ಕಾರವು ತಿಳಿಸಿದಂತೆ ಇಂತಹ ಅತಿ ವಿಸ್ತಾರವಾದ ಭೂ ಪ್ರದೇಶಗಳನ್ನೂ ಸರ್ಕಾರದ ಉಪಯೋಗಕ್ಕೆ ಬಳಸಿಕೊಳ್ಳುವುದು ಈ ಕ್ರಮದ ಉದ್ದೇಶವಾಗಿತ್ತು.

ಆದರೇನು, ನಿಜಾಮನಾಗಲಿ, ಆತನ ಆಸ್ಥಾನ ಶ್ರೀಮಂತರಾಗಲೀ ಅಥವಾ ಮುಂದೆ ಉಚ್ಛಾಟಿಸಲ್ಪಡಲಿರುವ ಯಾವುದೇ ರಾಜರುಗಳಾಗಲೀ ಪರಿಹಾರ ಧನವಿಲ್ಲದೆ ಇದಕ್ಕೆ ಒಪ್ಪಬೇಕಾದ್ದೇನೂ ಇರಲಿಲ್ಲ. ನಿಜಾಮನಿಗೆ ಮೂರು ಮುಕ್ಕಾಲು ಮಿಲಿಯನ್ ಪೌಂಡುಗಳ ಇಡಿಗಂಟು ಸಂದಾಯದ ಜೊತೆಗೆ ಆತನ ಅರಮನೆಗಳು, ಬಂಗಾರ, ಬಿಲಿಯನ್ ಡಾಲರ್‌ಗಳಿಗೂ ಅಧಿಕ ಮೌಲ್ಯದ ರತ್ನಾಭರಣಗಳು, ಬ್ಯಾಂಕ್ ಚೆಕ್ಕುಗಳನ್ನು ಹಾಗೇ ಇಟ್ಟುಕೊಳ್ಳುವ ಆವಕಾಶ ನೀಡಲಾಯಿತು ಮತ್ತು ಆತನಿಗೆ ನೀಡುತ್ತಿದ್ದ ೩,೭೦,೦೦೦ ಪೌಂಡುಗಳ ಆದಾಯ ತೆರಿಗೆ ಮುಕ್ತ ರಾಜಧನದ ಮೊತ್ತವನ್ನು ಸಹ ದ್ವಿಗುಣಗೊಳಿಸಲಾಯಿತು.

ಹೀಗೆ ನಿಜಾಮನ ಅದಿಕಾರವನ್ನು ಇಳಿಸಿದರೂ ಸಹ ಹೆಚ್ಚಿನ ಪ್ರಜೆಗಳಿಗೆ ಸಂತೋಷವಾಗಲಿಲ್ಲ. ಇಡೀ ರಾಜಾಳ್ವಿಕೆಯ ವಿರುದ್ಧ ಇಷ್ಟು ದೀರ್ಘಕಾಲ ಹೋರಾಟ ನಡೆಸಿಯೂ ಪಿಂಚಣಿ ಕೊಟ್ಟು ರಾಜನನ್ನು ಇಟ್ಟುಕೊಳ್ಳುವುದು – ಅದು ಮೂರು ಮುಕ್ಕಾಲು ಮಿಲಿಯನ್ ಪೌಂಡುಗಳಷ್ಟು ಕಡಿಮೆ ಎಂದರೂ ಒಂದು ಅನಗತ್ಯ ವೈಭೋಗವಲ್ಲವೇ ಎಂಬುದು ಅವರ ಅನಿಸಿಕೆಯಾಗಿತ್ತು.

* * *