ಶ್ರೀ ಬಳ್ಳಾರಿ ಎಂ.ಶೇಷಗಿರಿ ಆಚಾರ್ ಅವರು ಬಳ್ಳಾರಿಯಲ್ಲಿ ಜೂನ್‌ ೨೪, ೧೯೩೫ ರಲ್ಲಿ ಜನಿಸಿದರು. ಇವರ ತಾಯಿ ಶ್ರೀಮತಿ ಕಮಲಮ್ಮ, ತಂದೆ ಎಂ. ರಾಘವೇಂದ್ರಾಚಾರ್.

ರಾಘವೇಂದ್ರಾಚಾರ್ಯರ ತಂದೆ ನರಸಿಂಹಾಚಾರ್, ತಾತ ವೆಂಕಣ್ಣಾಚಾರ್. ಇವರು ಗದಗ್‌ ಜಿಲ್ಲೆಗೆ ಸೇರಿದ ಮುಂಡರಗಿ ಗ್ರಾಮಕ್ಕೆ ಸೇರಿದವರು. ಇವರಿಗೆ ಅರವತ್ತನಾಲ್ಕು ಎಕರೆಗಳಷ್ಟು ಭೂಮಿ ಇದ್ದ ಸಾಕಷ್ಟು ಸುಖ ಜೀವನ ನಡೆಸಿದ್ದರೆಂದು ತಿಳಿದು ಬರುತ್ತದೆ.

ಶ್ರೀ ನರಸಿಂಹಾಚಾರ್ಯರು ದಾಸ ಪಂಥಾನುಯಾಯಿ ಆಗಿದ್ದು ಬಹಳ ನಿಷ್ಠಾವಂತ ಬ್ರಾಹ್ಮಣರಾಗಿದ್ದರು. ಪುರಾಣ ಕಥನಕಾರರೂ ಆಗಿದ್ದರು. ರಾಮಾಯಣ, ಭಾರತ, ಭಾಗವತ ಮುಂತಾದ ಕಾವ್ಯಗಳ ಶ್ಲೋಕಗಳನ್ನು ಹಾಡಿ ಕದಕ್ಕೆ ವ್ಯಾಖ್ಯಾನ ಮಾಡುತ್ತಿದ್ದರಂತೆ. ಸುತ್ತಮುತ್ತಲ ಊರುಗಳಲ್ಲಿ ಅವರ ಪ್ರವಚನಗಳನ್ನು ಪುರಾಣ ಕಥನಗಳನ್ನು ಕೇಳಲು ತುಂಬಾ ಜನರು ಸೇರುತ್ತಿದ್ದರಂತೆ. ಮನೆಯಲ್ಲೂ ಸಹ ಮಡಿಯಲ್ಲಿ ಕುಳಿತು ಕಣ್ಣು ಮುಚ್ಚಿ ಶ್ಲೋಕಗಳನ್ನು ಹಾಡುತ್ತಿದ್ದರಂತೆ. ಹಾಗೊಮ್ಮೆ ಅವರ ಮೈ ಮರೆತು ಹಾಡಿಕೊಳ್ಳುತ್ತಿರುವಾಗ ಹಾವೊಂದು ಅವರ ತೊಡೆಯೇರಿ ಕೊಂಚಕಾಲ ಕುಳಿತಿದ್ದು, ನಂತರ ಸದ್ದಿಲ್ಲದೆ ಹರಿದು ಹೋಯಿತಂತೆ! ಅವರ ಪತ್ನಿ ಗಾಬರಿಗೊಂಡು ‘ನಿಮಗೇನಾದರೂ ಅಪಾಯವಾದರೆ, ಎಂದು ಕೇಳಿದರೆ ‘ಅವೆಲ್ಲ ನಮ್ಮ ಸ್ನೇಹಿತರು ನಮಗೇನೂ ತೊಂದರೆ ಮಾಡುವುದಿಲ್ಲ’-ಎಂದು ಸಮಾಧಾನದಿಂದ ಹೇಳುತ್ತಿದ್ದಂತೆ, ನರಸಿಂಹಾಚಾಯ್ರು ಸೀತಾಪರಹರಣದ ಕತೆ ಹೇಳುವಾಗ ಮುಂಡರಗಿಯಲ್ಲಿ ಕೆಲವು ದಿವಸಗಳು ಕೋತಿಯೊಂದು ಬಂದು ಕುಳಿತು ಕಣ್ಣೀರು ಹರಿಸುತ್ತಿತ್ತಂತೆ. ಕತೆ ಮುಗಿಯುವಾಗ್ಗೆ ಅದರ ಸುಳಿವೇ ಇರುತ್ತಿರಲಿಲ್ಲವಂತೆ. ಇವೆಲ್ಲ ಕಟ್ಟು ಕತೆಗಳಲ್ಲ. ಸ್ವಯಂ ರಾಘವೇಂದ್ರಾಚಾರ್ಯರು ತಮ್ಮ ಮಕ್ಕಳಿಗೆ ಹೇಳಿದ ಸ್ವತಃ ಕಂಡ ಸಂಗತಿಗಳು!

ನರಸಿಂಹಾಚಾರ್ಯರ ಆರು ಮಕ್ಕಳಲ್ಲಿ ರಾಘವೇಂದ್ರಾಚಾರ್ ಒಬ್ಬರು. ಮುಂಡರಗಿ ಗ್ರಾಮ ಬಿಟ್ಟು ಹೆಚ್ಚಿನ ಅವಕಾಶಗಳಿಗಾಗಿ ಶ್ರೀ ರಾಘವೇಂದ್ರಾಚಾರ್ಯರು ಬಳ್ಳಾರಿಗೆ ಬಂದರಂತೆ. ಮನೆಯಲ್ಲಿ, ತಂದೆ ತಾತಂದಿರು ಹಾಡುತ್ತಿದ್ದುದರಿಂದ ಸಂಗೀತ ಅವರಿಗೆ ಜನ್ಮತಃ ಬಂದಿತ್ತು. ಹಾರ್ಮೋನಿಯಂ, ಪಿಟೀಲು, ಜಲತರಂಗ್‌ ಮತ್ತು ಖಂಜರಿಗಳನ್ನು ನುಡಿಸಲು ಕಲಿತರು. ಇವರ ವಿದ್ಯಾಭ್ಯಾಸ ಹೆಚ್ಚು ಮುಂದುವರೆಯಲಿಲ್ಲ. ಬಳ್ಳಾರಿಯಲ್ಲಿ ಕೊಲಾಚಲಂ ಶ್ರೀನಿವಾಸರಾವ್‌ ಎಂಬುವರು ನಡೆಸುತ್ತಿದ್ದ ನಾಟಕದ ಕಂಪೆನಿಯಲ್ಲಿ ಹಾರ್ಮೋನಿಯಂ ವಾದಕರಾಗಿ ಸೇರಿದರು, ಇಲ್ಲಿ ನಾಟಕಗಳಿಗೆ ರಾಗ ಹಾಕಿಕೊಡುವುದು, ಅಭ್ಯಾಸ ಮಾಡಿಸುವುದು ಇವರ ಕೆಲಸವಾಯಿತು. ಆಗಾಗ್ಗೆ ಬರುತ್ತಿದ್ದ ಕಂಪನಿಯ ನಾಟಕಗಳಿಗೂ ರಾಘವೇಂದ್ರಾಚಾರ್ ಹಾರ್ಮೋನಿಯಂ ನುಡಿಸುತ್ತಿದ್ದರು. ಕಚೇರಿಗಳಿಗಾಗಿ ಆಗಮಿಸುತ್ತಿದ್ದ ಪ್ರಸಿದ್ಧ ಸಂಗೀತಗಾರರಾದ ಬಿಡಾರಂ ಕೃಷ್ಣಪ್ಪ, ಚಿಂತಲಪಲ್ಲಿ ವೆಂಕಟರಾಯರು ಮುಂತಾದ ವಿದ್ವಾಂಸರ ಸಂಗೀತ ಕೇಳಿ ಇವರು ತಮ್ಮ ವಿದ್ಯೆಯನ್ನು ಬಲಪಡಿಸಿಕೊಂಡರಂತೆ.

ಮುಂದೆ ಇವರು ಮದ್ರಾಸು ಪ್ರೆಸಿಡೆನ್ಸಿಯ ಕ್ವೀನ್‌ ಮೇರಿಸ್‌ ಕಾಲೇಜಿನಲ್ಲಿ ಸಂಗೀತ ಶಿಕ್ಷಕರ ಹುದ್ದೆಗೆ ಆಯ್ಕೆಯಾದರು. ಪ್ರೊ.ಪಿ. ಸಾಂಬಮೂರ್ತಿಯವರೂಪ ಆ ಸಮಯದಲ್ಲಿ (೧೯೨೬ರಲ್ಲಿ) ಸಂಗೀತ ಶಾಸ್ತ್ರದ ಅಧ್ಯಾಪಕರಾಗಿದ್ದರು. ಶ್ರೀ ರಾಘವೇಂದ್ರಾಚಾರ್ಯರು ಹಾಡುಗಾರಿಕೆ ಮತ್ತು ಪಿಟೀಲು, ಹಾರ್ಮೋನಿಯಂ ವಾದ್ಯಗಳೆಲ್ಲದರ ಅಧ್ಯಾಪಕರಾಗಿ ಸುಮಾರು ನಾಲ್ಕು ವರ್ಷಗಳು ಸೇವೆ ಸಲ್ಲಿಸಿದರು. ಆಗ್ಗೆ ತೆಗೆದ ಭಾವಚಿತ್ರ ಒಂದು (ಪ್ರೊ. ಸಾಂಬಮೂರ್ತಿ, ರಾಘವೇಂಧ್ರಾಚಾರ್ ಮತ್ತಿತರ ಅಧ್ಯಾಪಕರೂ ಶಿಷ್ಯರೂ ಇರುವಂಥದು) ಶ್ರೀ ಎಂ. ವೆಂಕಟೇಶಾಚಾರ್ ಅವರ ಬಳಿ ಲಭ್ಯವಿದೆ. ರಾಘವೇಂದ್ರಾಚಾರ್ಯರು ಪದವೀಧರರಲ್ಲ. ಮುಂದೆ ವಿಶ್ವವಿದ್ಯಾನಿಲಯಗಳಲ್ಲಿ ಬಂದ ನಿಯಮದ ಪ್ರಕಾರ ಪದವೀಧರರೇ ಸಂಗೀತ ಅಧ್ಯಾಪಕಿರಾಗಿರಬೇಕೆಂಬ ಕಾರಣದಿಂದ, ರಾಘವೇಂದ್ರಾಚಾರ್ಯರು ತಮ್ಮ ಅಧ್ಯಾಪಕ ವೃತ್ತಿ ಬಿಟ್ಟು ೧೯೩೧ರ ವೇಳೆಗೆ ಬಳ್ಳಾರಿಗೆ ಹಿಂತಿರುಗಿದ್ದರು. ಅನಂತರ ಬಳ್ಳಾರಿ ಹೈಸ್ಕೂಲಿನಲ್ಲಿ ಸಂಗೀತ ಮಾಸ್ತರರಾಗಿದ್ದರು. ರಾಯಲಸೀಮ ಸಂಗೀತ ಪರೀಕ್ಷೆಗಳ ಬೋರ್ಡು ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.

ಶ್ರೀ ರಾಘವೇಂದ್ರಾಚಾರ್ ಮತ್ತು ಕಮಲಮ್ಮ ದಂಪತಿಗಳಿಗೆ ಜನಿಸಿದವರು ನರಸಿಂಹಮೂರ್ತಿ, ವೆಮಕಟೇಶಾಚಾರ್, ಶೇಷಗಿರಿ ಆಚಾರ್, ರಮೇಶ್‌, ಕೇಶವ ಮೂರ್ತಿ ಮತ್ತು ಮಗಳು ಕೃಷ್ಣವೇಣಿ ಎಂಬುವರು, ನರಸಿಂಹಮೂರ್ತಿಯವರಿಗೆ ತಂದೆಯಲ್ಲೇ ಪಿಟೀಲು ಪಾಠ. ವೆಂಕಟೇಶ್‌, ಶೇಷಗಿರಿ ಇವರು ತಂದೆ ಹಾಡುವುದನ್ನು ಕೇಳಿದ್ದರು, ಕೊಂಚ ಪಾಠವೂ ಆಗುತ್ತಿತ್ತು. ತಂದೆಯಂತೆಯೇ ಹಾಡುವುದು, ವಾದ್ಯಗಳನ್ನು ನುಡಿಸುವುದೂ ಎಲ್ಲರಿಗೂ ಸಹಜವಾಗಿ ಬಂದಿತು. ಕಂಠ ಪರಂಪರೆ ಒಟ್ಟೊಟ್ಟಾಗಿ ಮುಂದುವರೆಯುವುದು ಅಪರೂಪವೇ!

ವೆಂಕಟೇಶ್‌ ಮತ್ತು ಶೇಷಗಿರಿ ಒಟ್ಟೊಟ್ಟಾಗಿ ಆಡಿ ಬೆಳೆದರು. ವೆಂಕಟೇಶ್‌ ೧೯೩೩ ರಲ್ಲೂ ಶೇಷಗಿರಿ ೧೯೩೫ರಲ್ಲೂ ಜನಿಸಿದರು. ಇವರು ಒಟ್ಟಾಗಿಯೇ ಸಂಗೀತ ಕಲಿತು ಒಟ್ಟಾಗಿಯೇ ಹಾಡಿ, ಮುಂದೆ ಬಳ್ಳಾರಿ ಸೋದರರೆಂದು ಖ್ಯಾತಿ ಗಳಿಸಿದರು. ಮಾಡುತ್ತಿದ್ದುದು, ಅವರ ಉಪಧ್ಯಾಯರುಗಳು ಈತನ ಉತ್ತರ ಪತ್ರಿಕೆಗಳನ್ನು ಬೇರೆ ತರಗತಿಗಳಲ್ಲಿ ಓದಿ ಮಕ್ಕಳಿಗೆ ತೋರಿಸುತ್ತಿದ್ದುದು; ಇವುಗಳಿಂದಾಗಿ ಸ್ತಂಭಗಳ ಮರೆಯಿಂದ ಹೊರಬರಲು, ಶಾಲೆಯ ಬಗೆಗಿನ ಆಸ್ಥೆ ಹೆಚ್ಚಿಸಲು ಸಾಧ್ಯವಾಯಿತು.

ಕ್ವಿಟ್‌ ಇಂಡಿಯಾ ಅಲೆ: ಆಗಿನ ಮೈಸೂರು ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡಿದ್ದರಿಂದಾಗಿ ಬ್ರಿಟೀಷರ ಅಧೀನ ಸಂಸ್ಥಾನಗಳಲ್ಲೊಂದಾಗಿತ್ತು. ೧೯೪೨ ರಲ್ಲಿ ಚಲೇಜಾವ್‌ ಚಳುವಳಿಗೆ ಗಾಂಧೀಜಿ ಕರೆಕೊಟ್ಟಿದ್ದು ಭರತಖಂಡದಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿತು. ಈ ಹುಡುಗನಿಗೂ ಅಂತರ್ಗತವಾಗಿದ್ದ ದೇಶಪ್ರೇಮ ಪುಟಿದೆದ್ದ ಸಮಯ. ತನ್ನ ಸಮವಯಸ್ಕರಾದ ಶಾಲೆಯ ಹುಡುಗರನ್ನೆಲ್ಲಾ ಈ ಹುಡುಗನಿಗೂ ಅಂತರ್ಗತವಾಗಿದ್ದ ದೇಶಪ್ರೇಮ ಪುಟಿದೆದ್ದ ಸಮಯ. ತನ್ನ ಸಮವಯಸ್ಕರಾದ ಶಾಲೆಯ ಹುಡುಗರನ್ನೆಲ್ಲಾ ಈ ಕೆಲಸಕ್ಕೆ ಕರೆಯುವುದು; ರಾತ್ರಿಯೆಲ್ಲಾ ದೀಪದ ಬೆಳಕಿನಲ್ಲಿ ‘ಭಾರತೀಯರ ಸಿಂಹಗಾಥೆ’ ಗಳನ್ನು ಬರೆಯುವುದು; ಬಾಲಿಶವಾಗಿಯೇ ಆದರೂ ಭಾರತೀಯರನ್ನು ಸಿಂಹಗಳೆಂದೂ ಬ್ರಿಟೀಷರನ್ನು ನರಿಗಳೆಂದೂ ಕಲ್ಪಿಸಿಕೊಂಡು, ತಾಯಿ, ಮಲಗು ಎಂದರೂ ಕೇಳದೆ ಸಾಹಿತ್ಯಗಳನ್ನು ಸೃಷ್ಟಿಸಿ ಬರೆದು ಹಂಚುವುದು ಇತ್ಯಾದಿ.

ವಿದೂಷಕನಾಗಿ: ಮೈಸೂರು ಸಹೋದರರಾದ ಈ ನಾಲ್ವರದ್ದೂ ಮೊದಲಿನಿಂದ ಸೃಜನಶೀಲವಾದ ವ್ಯಕ್ತಿತ್ವ. ತಮ್ಮ ತಮ್ಮಲ್ಲಿ ಸುಪ್ತವಗಿದ್ದ ಪ್ರತಿಭೆಗಳನ್ನು ಸರಿಯಾಗಿ ರೂಪಿಸಿಕೊಳ್ಳಲು ಮಾರ್ಗದರ್ಶನ ತಾಯಿಯವರಾದ ವರಲಕ್ಷಮ್ಮನವರದ್ದು. ರಾ.ಚಂದ್ರಶೇಖರಯ್ಯನವರನ್ನೂ, ಸೀತಾರಾಮ್‌ರನ್ನೂ ಗಾಯನದಲ್ಲೂ ರಾ.ಸ. ರವರನ್ನು ಅವರ ಅಭಿರುಚಿಗೆ ತಕ್ಕಂತೆ ಶಾಸ್ತ್ರದಲ್ಲೂ. ರಾ. ವಿಶ್ವೇಶ್ವರನ್‌ರನ್ನು ವೀಣೆಯಲ್ಲೂ ಪರಿಣತಿ ಪಡೆಯಲು (ಅಷ್ಟೆ ಅಲ್ಲದೆ ರಾ. ಸೀತಾರಾಮ್‌ರವರನ್ನು ವೀಣಾವಾದನ, ಚಿತ್ರಕಲೆ, ಶಿಲ್ಪಕಲೆಗಳಲ್ಲೂ ಪ್ರಾವೀಣ್ಯ ಪಡೆಯಲು) ಪ್ರೋತ್ಸಾಹಿಸಿದ್ದೇ ಅಲ್ಲದೆ ಚಿಕ್ಕ ಚಿಕ್ಕ ನಾಟಕಗಳನ್ನು ತಮ್ಮ ಮಕ್ಕಳಿಂದ ಬರೆಸಿ ಬೇರೆ ಮಕ್ಕಳ ಕೈಯಲ್ಲಿ ಆಡಿಸುವುದು, ತಮ್ಮ ಮಕ್ಕಳು ನಾಟಕಗಳನ್ನೂ ಆಡಲು ಪ್ರೇರೇಪಿಸುವುದು ಇತ್ಯಾದಿಗಳನ್ನು ಮಾಡಿದರು. ಮುಂದೆ ವರಲಕ್ಷ್ಮೀ ಸಂಗೀತ ಅಕಾಡೆಮಿಯ ಸ್ಥಾಪನೆಗೂ ಸ್ಪೂರ್ತಿಯಾದರು.

ಮನೆಯಲ್ಲಿನ ಈ ಸಾಂಸ್ಕೃತಿಕ ವಾತಾರವಣದಿಂದಾಗಿ ರಾ. ಚಂ., ರ. ಸ. ರವರಿಬ್ಬರೂ ಸೇರಿ ಟಿ.ಪಿ. ಕೈಲಾಸಂರವರ ಟೊಳ್ಳುಗಟ್ಟಿ, ಬಂಡ್ವಾಳಿಲ್ಲದ ಬಡಾಯಿ, ಅಮ್ಮಾವ್ರ ಗಂಡ ಮುಂತಾದ ನಾಟಕಗಳನ್ನು ಮಾಡಿದ್ದುಂಟು. ಇಂತಹ ನಾಟಕಗಳಲ್ಲಿ ‘ಮೊದ್ದುಮಣಿ’ ಯಂತಹ ಹಾಸ್ಯದ ಪಾತ್ರಗಳು ರಾ.ಸ.ರವರಿಗೆ. ಕಾರಣವೆಂದರೆ ಚಿಕ್ಕಂದಿನಲ್ಲಿ ಉಯ್ಯಾಲೆಯಾಡುವಗ ಕೆಳಗೆ ಬಿದ್ದು ಹಲ್ಲು ಮುರಿದುಕೊಂಡು, ಮುಂದೆ ಒಂದು ಹಲ್ಲು ತಕ್ಕ ಮಟ್ಟಿಗೆ ವಿಕಾರವಾಗಿ ಹೊರಬಂದಿದ್ದುದು ಚಿಕ್ಕಂದಿನ ತಮ್ಮ ಈ ತಾತ್ಕಾಲಿಕ ಕುರೂಪವನ್ನೂ ಸೃಜನಶೀಲ ಪ್ರಕ್ರಿಯೆಯಲ್ಲಿ ಅಸ್ತ್ರವಾಗಿ ಬಳಸಿಕೊಂಡುಬಿಟ್ಟರು.

ಕಾಲೇಜಿನಲ್ಲಿ ಬೆಳೆದ ಭಾಷಣದ ಜಾಡ್ಯ: ನಮ್ಮ ಮನೆತನದಲ್ಲಿ ಅತಿಮಾತಿನ ಜಾಡ್ಯ ಮೊದಲಿಂದಲೂ ಇದ್ದದ್ದೇ. ನನಗೂ ಸ್ಕೂಲಿನಲ್ಲೇ ಈ ಜಾಡ್ಯ ಅಂಟಿತ್ತು. ಆದರೆ ಬೆಳೆದದ್ದು ಹೆಚ್ಚಿಗೆ ಕಾಲೇಜಿನಲ್ಲಿ ಎನ್ನುತ್ತಾರೆ ರಾ.ಸ., ತಮಗೆ ವರವಾದ ವಾಕ್‌ಶಕ್ತಿಯ ಸ್ತ್ರೋತ್ರವನ್ನು ಕುರಿತು.

ಇಂಟರ್ ಮೀಡಿಯೆಟ್‌ ನಂತರ ಮನೆಯವರಿಗೆ ಇಂಜಿನಿಯರಿಂಗ್‌ ಅಥವಾ ಮೆಡಿಕಲ್‌ಗೆ ಸೇರುವ ಆಸೆಯಿದ್ದರೂ ‘ಹೆಣಕುಯ್ಯಬೇಕು’ ಎಂಬ ಕಾರಣಕ್ಕಾಗಿ ವೈದ್ಯಕೀಯಕ್ಕೂ, ಅಪ್ಲಿಕೇಷನ್‌ನಲ್ಲಿ ಆದ ಗೊಂದಲದಿಂದಾಗಿ ಇಂಜಿನಿಯರಿಂಗ್‌ಗೂ ಸೇರಲು ಆಗಲಿಲ್ಲ. ಕೊನೆಗೆ ಸೆಂಟ್‌ಫಿಲೋಮಿನಾ ಕಾಲೇಜಿನಲ್ಲಿ ಬಿ.ಎಸ್ಸಿಗೆ ಸೇರಿದರು. ಅಲ್ಲಿ ‘ಫಿಸಿಕ್ಸ್‌ ಅಸೋಸಿಯೇಷನ್‌’ ಇದ್ದು ಅದರಲ್ಲಿ ಒಂದು ಭಾಷಣಕೊಡಬೇಕಾದ ಪ್ರಸಂಗ ಒದಗಿತು. ‘ಹಿಸ್ಟರಿ ಆಫ್‌ ರಿಲೇಟಿವಿಟಿ’ ಬಗ್ಗೆ ಹಾಗೂ ‘ಅಕೌಸ್ಟಿಕ್ಸ್’ ಬಗ್ಗೆ ಲೆಕ್ಚರ್ ಗಳನ್ನು ನೀಡಿದಾಗ ಅಲ್ಲಿದ್ದ ಪ್ರೊ. ಶೇಷಾದ್ರಿಯವರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.ಗೊತ್ತಾದಷ್ಟು ವಿಷಯಗಳನ್ನು ಹೇಳಿದರೂ ತಿಳಿಯದ ಸಂದರ್ಭದಲ್ಲಿ ಗಾಬರಿಯೂ ಕೆಲವೊಮ್ಮೆ ಅವರ ಪ್ರಶ್ನೆಗಳೂ ಅರ್ಥವಾಗದ ಸ್ಥಿತಿಯೂ ಆಗ ಉಂಟಾದ್ದರಿಂದ ಅಂದೇ ಯಾವುದೇ ವಿಷಯವನ್ನು ತೆಗೆದುಕೊಂಡರೂ ಅದರಲ್ಲಿ ಅಮೂಲಾಗ್ರವಾಗಿ ಓದಲೇ ಬೇಕಾದ ಅನಿವಾರ್ಯತೆಯನ್ನು ಅರ್ಥಮಾಡಿಕೊಂಡರು. ಅದೂ ಅವರಿಗೆ ವರವೇ ಆಯಿತು. ಪ್ರತಿಯೊಂದು ವಿಷಯವನ್ನೂ ತಲಸ್ಪರ್ಶಿಯಾಗಿ ಅಧ್ಯಯನಮಾಡುವ, ನಿರ್ದಿಷ್ಟವಾಗಿ ಬರೆಯುವ ಅವರ ಲೇಖನ ಸಾಮರ್ಥ್ಯ ಇಲ್ಲಿಂದಲೇ ಅವರಿಗೆ ರೂಪಿತವಾಗಿರಬೇಕು.

ಇವರು ಅಭೇದ್ಯರು: ತಾಯಿಯವರ ಆಶೀರ್ವಾದದೊಂದಿಗೆ ೧೯೪೫ರಲ್ಲಿ ಪ್ರಾರಂಭವಾದ ವರಲಕ್ಷ್ಮಿ ಅಕಾಡೆಮಿ ಕೆಲಕೆಲದಲ್ಲಿಯೇ ನಾಲ್ಕೈದು ಶಾಖೆಗಳನ್ನು ತೆರೆಯುವಷ್ಟು ವಿಸ್ತಾರವಾಗಿ ಬೆಳೆದದ್ದರಿಂದ ಅಣ್ಣಂದಿರು ಎಲ್ಲಿ ಹೋಗಲು ಸಾಧ್ಯವಿಲ್ಲವೋ ಅಲ್ಲಿ ರಾ.ಸ. ರವರು ಹೋಗಿ ವಿದ್ಯಾರ್ಥಿಗಳಿಗೆ ಸಂಗೀಥ ಪಾಠ ಹೇಳುವ ಹೊಣೆಯನ್ನು ಹೊತ್ತರು. ಈ ಸಹೋದರರು ತಮ್ಮ ಮನೆಯಲ್ಲೇ ನಡೆಸುತ್ತಿದ್ದ ರಾಮೋತ್ಸವಕ್ಕೆ ಮೈಸೂರು ವಾಸುದೇವಾಚಾರ್ಯ, ದ್ವಾಶರಂ, ವೆಂಕಟಗಿರಿಯಪ್ಪ ಮುಂತಾದವರೆಲ್ಲಾ ಬಂದು ಪಾಲ್ಗೊಳ್ಳುತ್ತಿದ್ದುದು ಆಗಿನ ವಿಶೇಷಗಳಲ್ಲೊಂದು. ಸಂಸ್ಥೆಯ ಆಯೋಜನೆಯ ಸಾಮರ್ಥ್ಯಗಳೂ ಈ ನಿಟ್ಟಿನಿಂಧ ಸಹೋದರರಿಗೆ ಕರಗತವಾದವು. ಟೈಗರ್ ವರದಾಚಾರ್ಯ, ಬೂದಲೂರು ಕೃಷ್ಣಮೂರ್ತಿ ಮುಂತಾದ ಎಲ್ಲ ಮಹಾನುಭಾವರುಗಳೊಡನೆ ಸಂಪರ್ಕ-ಸಾಹಚರ್ಯಗಳೊಂದಿಗೆ ಹಗಲಿರುಳೂ ಮನೆಯಲ್ಲಿ ಸಂಗೀತವೇ. ಒಟ್ಟಿಗೆ ಅವಿಭಕ್ತವಾಗಿದ್ದ ಕುಟುಂಬದಲ್ಲಿ ಊಟಕ್ಕೆ ಕುಳಿತಾಗಲೂ ಬರೀ ಸಂಗೀತದ ಚರ್ಚೆಯೇ. ಚರ್ಚೆಗೆ ಎಚ್ಚರಿಕೆಯ ವಿರಾಮ ನೀಡುತ್ತಿದ್ದುದು ಮನೆಯ ಹೆಂಗಸರು. ಊಟ ಮುಗಿದು ಕೈ ಒಣಗಿದೆಯೆಂಬುದರ ಅರಿವು ಈ ಸಹೋದರರಿಗೆ ಆಗುತ್ತಿದ್ದುದು ಆಗ.

ನಾಲ್ಕೂ ಜನರು ಶುಭ್ರವಾದ ಬಿಳಿಯ ಬಟ್ಟೆಗಳನ್ನು ಧರಿಸಿ ತಮ್ಮ ತಾಯಿಯನ್ನೂ ಕೂಡಿಸಿಕೊಂಡು ದೊಡ್ಡ ಕಾರಿನಲ್ಲಿ ಕುಳಿತು ಕಚೇರಿ, ಬಾಷಣಗಳಿಗೆ ಹೊರಡುವುದು ಅಂದಿನ ಸಾಮಾನ್ಯ ದೃಶ್ಯಗಳಲ್ಲೊಂದಾಗಿತ್ತು. ಡಾ. ರಾ. ಸ. ರವರಿಗೆ FRAS London ಬಂದಾಗ ಬಿ. ವಿ. ಕೆ ಯವರು ‘ಸುಧಾ’ ಮಾಸಪತ್ರಿಕೆಯಲ್ಲಿ ಬರೆದದ್ದು ಹೀಗೆ ‘ಇವರು ಅಭೇದ್ಯರು’! ಇವರ ಅಭೇದತವ ಸಮಕಾಲೀನ ಸಂಗೀತಲೋಕಕ್ಕೆ ವಿಶೇಷವಾದ ಪ್ರಯೋಜನವನ್ನು ನೀಡಿತ್ತು. ಅಪರೂಪ ಕೃತಿಗಳ, ತಾಳಗಳ ಗಾಯನ, ಆ ಗಾಯನಕ್ಕೆ ಬೇಕಾದ ಶಾಸ್ತ್ರಸಂಬಂಧವಾದ ಹಿನ್ನೆಲೆ, ವಿಶೇಷ ವಾದನ ಶೈಲಿಗಳು ಒಂದರೊಡನೊಂದು ಸಮ್ಮಳಿತವಾಗಿ ಲಕ್ಷ್ಮ-ಲಕ್ಷಣಗಳೆರಡಕ್ಕೂ ವಾದನ-ಬೋಧನಗಳಿಗೂ ಬೃಹತ್ತಾದ, ಮಹತ್ತದ ಕೊಡುಗೆಗಳನ್ನು ನೀಡಿತ್ತು.

ಆದರೆ, ಮುಂದೆ……… ಕಾಲಾಯ ತಸ್ಮೈ ನಮಃ-ಸಾಂಸಾರಿಕವಾದ, ಅಥವಾ ಇನ್ನಿತರ ಕಾರಣಗಳಿಗಾಗಿ ಈ ಅವಿಭಕ್ತ ಕುಟುಂಬ ಚೆದುರಿತು. ಆದಗ್ಯೂ ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಭದ್ರವಾದ ಶಕ್ತಿಯಿಂದಾಗಿ ಆ ಕುಟುಂಬದ ಸಂಗೀತ ಸೇವೆ ಹಾಗೆಯೇ ಭಿನ್ನ ಭಿನ್ನ ರೀತಿ, ನಿಲುವುಗಳಲ್ಲಿ ಉಳಿದು ಬೆಳೆದು ಬಂದಿತು.

ಈಗಲೂ ಆಗೊಮ್ಮೆ ಈಗೊಮ್ಮೆ ಮಾತನಾಡುವಾಗ ಡಾ ರಾ. ಸ.ರವರೋ, ನಂದಕುಮಾರರೋ ಹಿಂದಿನ ‌‌flashbAckಗೆ ಹೋದೊಡನೆಯೇ ಅವರು ನೀಡುವ ಚಿತ್ರ ಅನುಪಮವಾದದ್ದು. ಆ ಕುಟುಂಬಕ್ಕು ವಿ. ಬಾಲಾಚಂದರ್ ರವರಿಗೂ ಇದ್ದ ಸಖ್ಯ, ತಮ್ಮ ಸಹೋದರರಲ್ಲಿ ಅವರನ್ನು ಒಬ್ಬರಾಗಿ ಭಾವಿಸಿ ತಮ್ಮಂತೆ ಅವರಿಗೂ ಒಂದು ಬೆಳ್ಳಿಯ ತಟ್ಟೆಯನ್ನು ಊಟಕ್ಕಾಗಿ ಮಾಡಿಸಿಟ್ಟಿದ್ದದ್ದು. ರಾತ್ರಿ ಊಟದ ಸಮಯದಲ್ಲಿ ಆರಂಭವಾದ ಹೊಸ ಸಂಗತಿ, ಪ್ರಯೋಗಗಳ ಚರ್ಚೆಯ ಫಲಿತಾಂಶವಾಗಿ ರಾತ್ರಿಯೆಲ್ಲಾ ವಾದನ ನಡೆಯುತ್ತಿದ್ದುದು. ಹೊಸದೊಂದು ಸಂಗತಿ ಹುಟ್ಟಿದಾಗಲೂ ಆನಂದ, ಅಮೃತವನ್ನು ಕುಡಿದ ಸಂತಸ, ಭಾವಾಭಿವ್ಯಕ್ತಿಯಿಂದುಂಟಾಗುವ, ರಸ ನಿಷ್ಪತ್ತಿಯಿಂದೊದಗುವ ಭಾಷ್ಪ ಇತ್ಯಾದಿಗಳ ವರ್ಣನೆಗಳು ಹೊಸಲೋಕವನ್ನೇ ಸೃಷ್ಟಿಸುತ್ತವೆ.

ಭರತವಿಳಿತಗಳ ಮಧ್ಯೆ: ಜೀವನದಲ್ಲಿ ಏರುಪೇರುಗಳಿದ್ದದ್ದೇ. ಮದುವೆ, ರೋಹಿಣಿ ನಂದಕುಮಾರರ ಜನನ, ಪತ್ನಿಯ ವಿಯೋಗ, ಕುಟುಂಬ ವರ್ಗದ ಬೇರ್ಪಡುವಿಕೆ ಮುಂತಾದ ಹತ್ತು ಹಲವು ಭರತವಿಳಿತಗಳ ಮಧ್ಯೆಯೂ ‘ಭರತ’ವನ್ನು ಕುರಿತ ಅವರ ಆಸಕ್ತಿ ಕಡಿಮೆಯಾಗಲಿಲ್ಲ. “ಪುಸ್ತಕಗಳೇ ನನ್ನ ಸ್ನೇಹಿತರು, ಬಂಧುಗಳು ಎಲ್ಲವೂ. ನನಗೆ ಕೊಡಬಹುದಾದ ದೊಡ್ಡ ಚಿತ್ರಹಿಂಸೆಯೊಂದಿದ್ದರೆ ಅದು ನನ್ನನ್ನು ಪುಸ್ತಕಗಳಿಂದ ಬೇರ್ಪಡಿಸುವುದು.”

ಇದು ಅವರ ಆತ್ಮೀಯ ಲೋಕವನ್ನು ಕುರಿತು ಅವರ ಅನಿಸಿಕೆ. ತಮ್ಮೆಲ್ಲ ಕಷ್ಟಕಾರ್ಪಣ್ಯಗಳನ್ನೂ ಮರೆಸಿದ ಪುಸ್ತಕ ಪ್ರಪಂಚ ಆಗ್ಗೆ ಅವರಲ್ಲಿ ಅಡಗಿದ್ದ ಬಹುಶ್ರುತತ್ವವನ್ನು ನಮಗಾಗಿ ತೆರೆದಿಟ್ಟಿತು. ಏರಿಳಿತಗಳ ಮಧ್ಯೆಯೇ ಅವಿರತವಾದ ಅವರ ಪರಿಶ್ರಮ, ಪ್ರತಿಭೆ, ಪಾಂಡಿತ್ಯಗಳಿಂದಾಗಿ ನೂರಾರು ಪ್ರಕಾರಗಳಲ್ಲಿನ ಅವರ ಆಸಕ್ತಿಯ ಫಲವಾಗಿ ನೂರಾರು ಉದ್ಗಂಥಗಳು ಬರಲು ಸಹಾಯಕವಾಯಿತು.

ಅಧ್ಯಾಪನ ವೃತ್ತಿಯಲ್ಲಿ: ೧೯೪೫ರಲ್ಲಿ ಮೈಸೂರಿನ ಶಾರದಾವಿಲಾಸ್‌ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಉಪನ್ಯಾಸಕರಾಗಿ, ಇನಾರ್ಗ್ಯಾನಿಕ್‌ ಕೆಮಿಷ್ಟ್ರಿಯ ಪ್ರೊಫೆಸರ್ ಆಗಿ ೧೯೮೪ರವರೆಗೆ ಸತತ ಸೇವೆ ಸಲ್ಲಿಸಿರುವ ಡಾ ರಾ.ಸ.ರವರು ಕೆಲಕಾಲ ಮೈಸೂರಿನ ಯುವರಾಜ ಕಾಲೇಜಿನಲ್ಲಿಯೂ ಲೆಕ್ಚರರ್ ಆಗಿ ಸೇವೆಯಲ್ಲಿದ್ದರು. ಅವರ ವಿದ್ಯಾರ್ಥಿಗಳಲ್ಲಿ ಹಲವಾರು ಇಂದಿಗೂ ಅವರ ಬೋಧನೆಯ ಸವಿಯನ್ನು ಮೆಲುಕು ಹಾಕುವುದುಂಟು.

“ಶಿಸ್ತು, ಸಂಯಮ, ಸೂಟು-ಬೂಟುಗಳ ನೀಟಾದ ನಿಲುವು, ಪಠ್ಯದ ಪರಿವಿಡಿಯಲ್ಲಿ ಪ್ರತಿಯೊಂದು ವಿಷಯಕ್ಕೂ ಮಾಡಿಕೊಂಡು ಬರುತ್ತಿದ್ದ ಅಡಿಟಿಪ್ಪಣಿಗಳು, Indexಗಳು, ಭಾಷೆಯಲ್ಲಿ ಪ್ರಮಾಣೀಕೃತವಾದ ಆಂಗ್ಲಭಾಷೆ, ಅತ್ಯಂತ ಓಜಸ್ಸನ್ನು ಹೊಂದಿರುವ ಶಬ್ದಗಳ ಬಳಕೆ” ಹೀಗೆ ಶಿಸ್ತಿನ ಅಧ್ಯಾಪಕ ವೃತ್ತಿ ಅವರು ಕೈಗೊಂಡದ್ದು.

ಶ್ರೀ ವಿದ್ಯೆಯ ಶಕ್ತಿಲೋಕದಲ್ಲೆ: ರಾ.ಸ. ರವರ ಜೀವನದ ದಿಕ್ಕೇ ವೈವಿಧ್ಯಮಯವಾದದ್ದು. ಕಾಲಕಾಲಕ್ಕೇ ಅದು ಪಡೆದುಕೊಂಡ ಸ್ವರೂಪಗಳೂ ಸಹಾ ಹಾಗೆಯೇ. ೧೯೪೫ರಲ್ಲಿ ಅವರ ಉಪನಯನ. ಅದು ಆದದ್ದು ಆಗಿನ ಮಹಾನ್‌ ತಪಸ್ವಿಗಳೂ, ಶ್ರೀ ವಿದ್ಯಾ ಉಪಾಸಕರೂ, ತಂತ್ರಜ್ಞರೂ ಆಗಿದ್ದ ಶ್ರೀ ಬ್ರಹ್ಮವಿದ್ಯಾನಂದನಾಥರು, ಚಿತ್ತೂರು ಜಿಲ್ಲೆ ಅವರಿಂದ.

ನಗರಂ ಹಳ್ಳಿಯ ಆಶ್ರಮದಲ್ಲಿ ರಾ.ಸ. ರವರನ್ನು ಸನ್ಯಾಸಕ್ಕೆ ಎಳೆಯಬೇಕೆಂದು ಬ್ರಹ್ಮವಿದ್ಯಾನಂದರು ಪ್ರಯತ್ನಿಸಿ ವರಲಕ್ಷಮ್ಮನವರಿಗೆ ತಮ್ಮ ಮಗನನ್ನು ಶಿಷ್ಯನನ್ನಾಗಿ ನೀಡಬೇಕೆಂದು ಕೇಳಿದರು. ಆಕೆ ಒಪ್ಪಲಿಲ್ಲ. ಆದರೆ ಬ್ರಹ್ಮವಿದ್ಯಾನಂದರು ಗುಟ್ಟಾಗಿ ಈ ಹುಡುಗನನ್ನು ಕರೆದು ಸನ್ಯಾಸಿಗಳು ಉಪಾಸನೆ ಮಾಡುವ ಗಾಯಿತ್ರಿಯನ್ನೇ ಹೇಳಿಕೊಟ್ಟುಬಿಟ್ಟರು. ತಿಳಿಯದ ಹುಡುಗ ಅನೇಕಕಾಲ ಮಾಡಿದ್ದು ಈ ಗಾಯಿತ್ರಿಯನ್ನೇ. ರಾ.ಸ. ರವರ ಮಾತಾಮಹರಾದ ಶೇಷಗಿರಿಅಯ್ಯನವರೂ ಶ್ರೀ ವಿದ್ಯಾ ಉಪಾಸಕರೇ. ತಾಯಿ ವರಲಕ್ಷಮ್ಮನವರಿಗೆ ಚಿಕ್ಕಂದಿನಲ್ಲೇ ಶೃಂಗೇರಿಯ ಜಗದ್ಗುರುಗಳಾಗಿದ್ದ ಚಂದ್ರಶೇಖರ ಭಾರತಿಗಳಿಂದ ಬಾಲಾ ಮಂತ್ರೋಪದೇಶವಾಗಿತ್ತು.

ಮುಂದೆ ಡಾ ರಾ.ಸ. ರವರಿಗೆ ಮಲ್ಲಾಡಿಹಳ್ಳಿಯಲ್ಲಿನ ರಾಘವೇಂದ್ರ ಗುರೂಜಿಗಳ ಆಶ್ರಮದಲ್ಲಿ ಶ್ರೀ ಸೂರದಾಸ್‌ಜಿಯವರ ಮೂಲಕ ಯಜ್ಞ ನಾರಾಯಣ ಸೋಮಯಾಜಿಗಳ (ಪುಂಡರೀಕಾಕ್ಷಾನಂದನಾಥರು) ಪರಿಚಯವಾಯಿತು. ಸೋಮಯಾಜಿಗಳ ಆಜ್ಞೆಯ ಮೇರೆಗೆ ರಾ.ಸ.ರವರು ಅಭಿಷಿಕ್ತರಾಗಿ ‘ಸತ್ಯಾನಂದನಾಥ’ರೆಂಬ ದೀಕ್ಷಾನಾಮದೊಂದಿಗೆ ಶ್ರೀ ವಿದ್ಯಾ ಉಪದಿಷ್ಟರಾದರು. ಪವಾಡವೋ ಎಂಬಂತೆ ಮುಂದೆ ಸೋಮಯಾಜಿಗಳ ಬಳಿ ಅವರ ಗುರುಗಳು ಯಾರೆಂದು ಪ್ರಶ್ನೆ ಮಾಡಲಾಗಿ ತಿಳಿದು ಬಂದದ್ದು ಅವರು ಶ್ರೀ ಬ್ರಹ್ಮವುದ್ಯಾನಂದನಾಥರ ಶಿಷ್ಯರೆಂದು. ಇಂತಹ ಸ್ವಗುರು, ಪರಮಗುರುಗಳನ್ನು ಪಡೆದ ರಾ. ಸ. ರವರಿಗೆ ‘ಕಾದಿ’ ಮತಾನುಸರಾರವಾದ ಉಪಾಸನೆ ಪರಮಪ್ರಿಯವಾದದ್ದು. ಆ ಉಪಾಸನೆಯು ನೀಡುವ ಬ್ರಾಹ್ಮೀಭಾವದಲ್ಲಿ ಅವರು ವಿವರಿಸುವ, ಅಲೌಕಿಕವಾದ ಅನುಭವವನ್ನು ಅವರು ಪಡೆಯುವ ವಿಷಯವು ಅವರನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ವೇದ್ಯವಾಗುವಂಥದ್ದು. ಅಮೃತೇಶ್ವರಿ, ಮಹಾಷೋಡಶೀ ಮುಂತಾದ ಅಪೂರ್ವ ಮಂತ್ರಗಳ ಸಿದ್ಧಿ ಅವರಿಗಿರುವುದು ನನಗೆ ಚೆನ್ನಾಗಿ ತಿಳಿದ ವಿಷಯ. ಮಂತ್ರಗಳ ಸಿದ್ಧಿ ಅವರಿಗಿರುವುದು ನನಗೆ ಚೆನ್ನಾಗಿ ತಿಳಿದ ವಿಷಯ. ಮುಂಚೆಯಿಂದಲೂ ಭಾರತೀಯತತ್ತ್ವ ಜ್ಞಾನ, ಯೋಗ, ಮಂತ್ರ-ತಂತ್ರ, ಅದ್ವೈತ, ವೇದ-ಉಪನಿಷತ್ತುಗಳ ಆಳವಾದ ಅರಿವಿರುವ ಅವರು ಶ್ರೀ ವಿದ್ಯೆಯ ಪ್ರಯೋಗ ಹಾಗೂ ಅದರ ತಂತ್ರದ ಬಗ್ಗೆ ಅಧಿಕಾರಯುತವಾಗಿ ತಿಳಿಸಿಕೊಡಬಲ್ಲ ಪೂಜ್ಯರು. ಅವರಿಂದ ಉಪದೇಶವನ್ನು ಪಡೆದಿರುವ ಎಲ್ಲ ಶಿಷ್ಯರೂ ಗುರು ಪೌರ್ಣಿಮೆಯಂದು ನಡೆಸುವ ಪೂಜಾಕಲಾಪಗಳು ಅನುಪಮವಾದದ್ದು .

ಬಿಟ್ಟೆನೆಂದರೂ ಬಿಡದ ವೈದ್ಯವೃತ್ತಿ: ಹೆಣ ಕುಯ್ಯಬೇಕೆಂಬ ಕಾರಣಕ್ಕಾಗಿ ವೈದ್ಯಕೀಯಕ್ಕೆ ತಾವು ಸೇರದೇ ಹೋದರೂ ಮುಂದೆ ಸ್ವತಃ ತಾವೇ ಅಲೋಪತಿಯ ಜೊತೆಗೆ ಹೋಮೀಯೋಪಥಿ, ಆಯುರ್ವೇದ, ಸಿದ್ಧೌಷಧ, ಇತ್ಯಾದಿ ಪ್ರಕಾರಗಳಲ್ಲಿ ಅಧ್ಯಯನಮಾಡಿಕೊಂಡರು. ಈಗಲೂ ಡಾ. ರಾ.ಸ. ರವರು ಹೋಮಿಯೋಪಥಿ, ಆಯುರ್ವೇದಗಳಲ್ಲಂತೂ ಒಳ್ಳೆಯ ಹಸ್ತಗುಣವಿರುವ ವೈದ್ಯರು ಸಹಾ. ಅವರು ಹೊರಟಲ್ಲಿ ವಿಧ-ವಿಧವಾದ ಔಷಧಿಗಳ ಒಂದು ಕಿಟ್‌ ಜೊತೆಯಲ್ಲಿ ಹೊರಡುತ್ತದೆ. ಅದು ಸ್ವಪ್ರಯೋಜನಕ್ಕಲ್ಲದೇ ಪರೋಪಕಾರಕ್ಕೂ ಸಹಾ.

ಅವರು ಕಾರ್ಯಕ್ರಮಗಳಿಗೆ ಬರುವ ಎಡೆಗಳಲ್ಲಿ ಅನೇಕ ವೈದ್ಯರುಗಳೂ ಬರುವುದುಂಟು.ಅವರೊಡನೆ ವೈದ್ಯಕೀಯ ವಿಷಯವಾಗಿ ನಡೆಸುವ ಚರ್ಚೆಗಳೂ ಅದ್ಭುತವಾಗಿರುತ್ತವೆ. ಪ್ರಾಣಾಯಾಮ, ಷಟ್ಕರ್ಮವಿಧಿ, ಯೋಗಾಸನಗಳು. ಅಂಗಮರ್ದನ, ಸೂರ್ಯ ನಮಸ್ಕಾರಗಳ ಬಗ್ಗೆ ಅವರ ಲೇಖನಗಳನ್ನು ಪುಸ್ತಕಗಳನ್ನು ಓದಿದವರಿಗೆ ಅವರ ಈ ಪ್ರಾವೀಣ್ಯದ ಬಗ್ಗೆಯೂ ಅರಿವಿದ್ದೀತು.

ಬ್ರಹ್ಮವಿದ್ಯೆಯ ಮಂದಿರ: ಡಾ.ರಾ.ಸ. ರವರ ಮನೆ ಶಾರದೆಯ ಸ್ಥಿರ ವಾಸಸ್ಥಾನ, ಬ್ರಹ್ಮವಿದ್ಯೆಯ ಮಂದಿರ, ಸದಾ ಮನೆಯಲ್ಲಿ ದೈವೀಕ ವಾತಾವರಣ. ‘ನಾದ’ ಸಂಬಂಧಿತವಾದ ವಾದ-ಸಂವಾದ-ವಿವಾದಗಳಿಂದ ಕೂಡಿ ಶೋಭಾಯಮಾನವಾಗಿರುವುದು ಅಲ್ಲಿ ಕಾಣುವ ಸಹಜದೃಶ್ಯ (ಸಂಪಾದಕರಿಗೆ) ಇದಾದ ನಂತರ ‘ವಾಜ್ಞಾಯದಯಂದೆ ಮೂಕವಾಗಿ’ ಎಂಬ ಭಾಗವನ್ನು ತೆಗೆದುಕೊಂಡು. ನಂತರ ಶಬ್ದದ ಸೋಲನ್ನು ಸಮಾಪ್ತಿಗೆ ಹಾಕುವುದು.

ಶಬ್ದದ ಸೋಲು: ಡಾ.ರಾ.ಸ. ಒಂದು ವ್ಯಕ್ತಿ ಮಾತ್ರವಲ್ಲ, ಭಾರತೀಯ ಪರಂಪರೆಯ ಕ್ರತುಶಕ್ತಿ. ಒಬ್ಬರೇ ವ್ಯಕ್ತಿಯ ಇಷ್ಟೊಂದು ಸಾಧನೆಗಳು ದಂಗುಬಡಿಸುತ್ತವೆ ಮಾತ್ರವಲ್ಲ, ಅದನ್ನು ವಿವರಿಸಹೋದರೆ ನಮಗೆ ಇರಬಹುದಾದ ಅಲ್ಪಸ್ವಲ್ಪ ಶಬ್ದ, ಶಕ್ತಿಗಳೂ ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಸಾಗರಕ್ಕೆ ಸಾಗರವೇ ಸಾಟಿ. ಇದಲ್ಲದೆ ಇನ್ನೇನನ್ನೂ ತಾನೇ ಹೇಳಲು ಸಾಧ್ಯವಾದೀತು? ಶಬ್ದದ ಸೋಲು-‘ಶಬ್ದ’ ಗೆಲುವು ಅಲ್ಲವೇ.

ವಾಜ್ಞಯದ ಮುಂದೆ ಮೂಕನಾಗಿ: ಡಾ.ರಾ.ಸ ರವರ ರಸಪೂರಿತವೂ ಆಗಾಧವೂ ಆದ ಗ್ರಂಥರಾಶಿಯನ್ನು ಕುರಿತು ಹೇಳಲು ಬಹುಶಃ ಇಡೀ ಲೇಖನ ಸಂಕಲನದ ಸಮಸ್ತ ಸ್ಥಳವೂ ಬೇಕಾದೀತು. ಹಾಗೆಹೇಳಿದರೂ ಅದರ ಪೂರ್ಣಸಾರವನ್ನು ಕೊಟ್ಟಿರುವ ಧೈರ್ಯ ಖಂಡಿತ ಆಗಲಾರದು. ಅವರ ಕರ್ನಾಟಕ ಸಂಗೀತವಾಹಿನಿಯಾಗಲಿ, Music of madhwa monks ಆಗಲಿ ನರ್ತನ ನಿರ್ಣಯ, ಬೃಹದ್ದೇಶೀ, ಪುಂಡರೀಕಮಾಲಾಗಳಿಗೆ ಬರೆದಿರುವ ಪ್ರವೇಶಿಕೆಯಾಗಲಿ ಯಾವುದನ್ನು ನೋಡಿದರೂ ಒಂದೇ ನೋಟಕ್ಕೆ ಎದ್ದು ಕಾಣುವ ಅಂಶವೆಂದರೆ ಅದರ ತಲಸ್ಪರ್ಶಿತ್ವ, ಮಾಡಬೇಕಾದನ್ನು ನಖಶಿಖಾಂತ, ಬುಡಮಟ್ಟಮಾಡಿ, ನೀಡಬೇಕಾದ್ದನ್ನು ಪರಿಪೂರ್ಣವಾಗಿ ನೀಡಿಯೇ ನೀಡುವ ಅವರ ಅಪಾರವಾದ ಪಾಂಡಿತ್ಯ ಪೂರ್ಣವಾದ ವ್ಯಾಪ್ತಿ. ಅವರು ಕೈಹಾಕಿದ ವಿಷಯದಲ್ಲಿ ಇನ್ನೊಬ್ಬರು ಮಾಡಲು ಉಳಿಯದಂತೆ ನೀಡಿಬಿಡುವ ಆ ವಿಶೇಷ ಗುಣ. ಪ್ರತಿಯೊಂದು ವಿಷಯವನ್ನು ಬಿಡಿಸಿನೋಡುವ, ತೂಗುವ ಬೆಲೆಕಟ್ಟುವುದರ ಜೊತೆಗೆ ಅವುಗಳನ್ನು ಬರಹಕ್ಕಿಳಿಸುವುದರ ಹಿಂದಿನ ಅವರ ಸಾಗರೋಪಮವಾದ ಉತ್ಪತ್ತಿ. ಅವುಗಳನ್ನು ತಮ್ಮ ಪ್ರತಿಭೆಯ ಸಿಂಚನದಿಂದ ನಿರ್ದಿಷ್ಟ. ನಿರ್ದುಷ್ಟತೆಗಳಿಂದ, ಅಷ್ಟೇ ಖಚಿತತೆಯಿಂದ ಕೆಲವೊಮ್ಮೆ ಹಿಗ್ಗಿಸಿ,ವಿಸ್ತರಿಸಿ, ಆ ಗ್ರಂಥ ಸೌಧವನ್ನು ಹೊಸ ಹೊಸ ಶಬ್ದಗಳ ಸೃಷ್ಟಿಯತಳಿರು ತೋರಣಗಳಿಂದ ಅಲಂಕರಿಸಿ, ಓದುಗರಿಗೆ ಪಥದಲ್ಲಿ ಬೃಹತ್ತಾದ ಮಹತ್ತಾದ ‘ಮಯಸಭೆ’ಯೊಂದನ್ನು ಸೃಷ್ಟಿಸುವ ಸೃಷ್ಟಿಶೀಲತೆ.

ಒಮ್ಮೆ “ಡಾ. ರಾ. ಸ ರವರ ಬರಹವೆಂದರೆ ಮೊದಲು ಸಿದ್ಧವಾಗುವುದೇ ಅಪಾರವಾಗಿರುವ Indexಗಳು. ಗ್ರಂಥಕ್ಕಿಂತ ಮೊದಲೇ ಅವರಲ್ಲಿ ಅನುಕ್ರಮಣಿ ತಯಾರಾಗಬೇಕು” ಎಂದ ಮಾತು ಅವರ ಸಂಶೋಧನೆಯ Methedology ಬಗ್ಗೆ ಹಿಡಿದ ಕೈಗನ್ನಡಿ.

ಅದರಲ್ಲೂ ದಾಖಲೆಗಳ ವರ್ಗೀಕರಣ ಅನುಕ್ರಮಣಿ, ದತ್ತ ಸಂಗ್ರಹ ಮುಂತಾದವುಗಳಲ್ಲಿ ಆಯಾಕಾಲಕ್ಕೆ ಯಾವುದು ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವದೋ ಅಂತಹದೇ ವಿಧಾನದಲ್ಲಿ ಹಾಗೂ ಕೆಲವೊಮ್ಮೆ ಇವುಗಳೆಲ್ಲದರ ಆಧಾರದಲ್ಲಿ ತಮ್ಮದೇ ಆದ ಹೊಸ ‘ಪದ್ಧತಿ’ಗಳನ್ನು ಸೃಷ್ಟಿಸುವ ಅವರ ಈ ವಿನೂತನತೆಯಿಂದಾಗಿಯೇ ಒಂದು ಪುಸ್ತಕವಿದ್ದಂತೆ ಮತ್ತೊಂದಿಲ್ಲ. ಪ್ರತಿಯೊಂದೂ ಧಾಡಿ, ಶೈಲಿ, ಪ್ರಸನ್ನತೆಗಳಲ್ಲಿ ವಿಭಿನ್ನ, ಸ್ವಂತಿಕೆಯ ಪ್ರತ್ಯಕ್ಷ ಆಕರ್ಷಣೆ ಹೊಂದಿರುವಂಥದ್ದು. “ನಾನು ಯಾವಾಗ ಬರೆಯ ಹೊರಟರೂ ಬರೆಯಬೇಕೆಂಬ ಕೇವಲ ಉದ್ದೇಶಕ್ಕಾಗಿ ಬರೆದಿಲ್ಲ. ಏನಾದರೊಂದು ವಿಚಾರವನ್ನು ಆಲೋಚಿಸುತ್ತಿದ್ದಂತೆ ಅವು ನನ್ನನ್ನು ತನ್ನ ತನವನ್ನು ಪೂರ್ತಿ ತೋರುವವರೆಗೆ ಕಾಡಿಸಿ ವಿಚಾರದ ಕಾಡಿನಲ್ಲಿ ಕೈಬಿಟ್ಟು ಹೋಗುತ್ತವೆ. ಅಲ್ಲಿರುವ ಪ್ರತಿಯೊಂದನ್ನು ಬಿಡಿಸಿಕೊಂಡು, ಓರಣಮಾಡಿ ಇಡೀ ಪುಸ್ತಕಕ ಕಲ್ಪನೆ ಮನಸ್ಸಿನಲ್ಲಿ ಮೂಡುತ್ತದೆ. ಆಗಲೇ ನಾನು ಬರೆಯುವುದು. ಈ ತುಡಿತವೇ ನನಗೆ ಈಗಲೂ ಬರೆಯಲು ಹಚ್ಚಿದೆ.” ಎಂದಿದ್ದರು ಒಮ್ಮೆ ಡಾ.ರಾ.ಸ ತಮ್ಮಲ್ಲಿ ಬರವಣಿಗೆ ತೊಡಗಿಸುವ ಒತ್ತಡವನ್ನು ಕುರಿತು.

ಹೀಗಾಗಿಯೇ ವಿಷಯ-ಶೈಲಿ-ಗಾತ್ರ-ವ್ಯಾಪ್ತಿಗಳಲ್ಲಿ ಬೃಹತ್ತಾದ ಮಹತ್ತಾದವು ಸೃಷ್ಟಿಯಾಗುತ್ತಿವೆ. ವಿಷಯವೂ ಒಂದೇ ಎರಡೇ? ಯೋಗ, ವ್ಯಾಕರಣ, ಮಂತ್ರ, ತಂತ್ರ, ಸಂಗೀತ ಶಾಸ್ತ್ರ, ಪ್ರಯೋಗ ನೃತ್ಯ, ವೇದ, ವೇದಾಂತ ಮಿಮಾಂಸೆ, ಛಂದಸ್ಸು…. ಹೀಗೆ ಬೆಳೆಯುತ್ತ ಹೋಗುತ್ತವೆ. ಒಬ್ಬ ವ್ಯಕ್ತಿ ಒಂದು ಜೀವ ಮಾನದಲ್ಲಿ ಇಷ್ಟು ಮಾಡುತ್ತಿರುವುದರ ಬಗ್ಗೆ ಕೌತುಕ, ಆಶ್ಚರ್ಯಗಳು ಹುಟ್ಟುತ್ತವೆ. ಅವುಗಳ ಮುಂದೆ ನಿಬ್ಬೆರಗಾಗಿ ಆವಾಕ್ಕಾಗಿ ನಮ್ಮನ್ನು ನಿಲ್ಲಿಸುತ್ತವೆ.