ಕೂಡ್ಲಿಗಿ : ಬಳ್ಳಾರಿಯಿಂದ ಸುಮಾರು ೮೦ ಕಿ.ಮೀ. ದೂರದಲ್ಲಿ ಪಶ್ಚಿಮಕ್ಕೆ ಇದೆ. ಗುಡೇಕೋಟೆ, ಜರ್ಮಲಿ, ಕೋಟೆಗಳು ಹಾಳಾದ ಮೇಲೆ ಅಲ್ಲಿ ವಾಸಿಸಿದ್ದ ಜನರು ಇಲ್ಲಿಗೆ ಬಂದು ಸೇರಿದ್ದಾರೆ. ಬೇಡ ಕೋಮಿನ ಜನಾಂಗ ಹೆಚ್ಚಾಗಿ ಇಲ್ಲಿ ಕಂಡುಬರುತ್ತದೆ. ಈ ಪಟ್ಟಣಕ್ಕೆ ಇತಿಹಾಸದ ಮಹತ್ವವಿಲ್ಲ. ಪಟ್ಟಣದ ನೈರುತ್ಯ ದಿಕ್ಕಿನಲಿ ಶ್ರೀ ಸಿದ್ಧೇಶ್ವರ ಸ್ವಾಮಿಯ ದೇವಾಲಯವಿರುವುದು.

ಗುಡೇಕೋಟೆ : ಕೂಡ್ಲಿಗಿಗೆ ಪೂರ್ವದಿಕ್ಕಿನಲ್ಲಿ ೨೮ ಕಿ.ಮೀ. ದೂರದಲ್ಲಿದೆ. ೧೬ನೇ ಶತಮಾನದಲ್ಲಿ ಗುಡೇಕೋಟೆ ಒಂದು ಚಿಕ್ಕ ರಾಜ್ಯ. ಹೈದರಾಲಿಯು ಧಾಳೀ ಮಾಡಿ ಕ್ರಿ.ಶ. ೧೭೭೭ ರಲ್ಲಿ ಗುಡೇಕೋಟೆಯನ್ನು ವಶಪಡಿಸಿಕೊಂಡನು ಆಗ ಪಾಳೇಗಾರಿಕೆ ಅಲ್ಲಿಗೆ ಮುಗಿಯಿತು.

ಪರ್ವತದ ಮೇಲೆ ಒಂದು ತೊಟ್ಟಿಲು ಭಾವಿ ಮತ್ತೊಂದು ಸಾಲುಗಲ್ಲಿನ ಭಾವಿ ಅನೇಕ ದೇವಾಲಯಗಳಿವೆ. ಆರು ಅಡಿ ಎತ್ತರದ ಹಾವುಗಲ್ಲುಗಳಿವೆ. ಒಂದು ಕೆರೆಯಿದೆ. ಬೊಮ್ಮಲಿಂಗನಕೆರೆ ಎಂದು ಕರೆಯುತ್ತಾರೆ. (ಗುಡ್ಡದ + ಕೋಟೆ = ಗುಡೇಕೋಟೆ)

ಜರ್ಮಲಿ : ಹಿಂದೆ ಪಾಳೇಗಾರರ ರಾಜ್ಯವಾಗಿತ್ತು. ಮೊದಲ ಅರಸ ಪೆನ್ನಪ್ಪ ನಾಯಕ. ವಿಜಯನಗರದ ಅರಸರಿಂದ ದೊರಕಿದ ರಾಜ್ಯ ಅದಾಗಿತ್ತು. ಬಿಜಾಪುರದ ಆದಿಲ್ಶಾಹಿಯು ರಾಜ್ಯದ ಮೇಲೆ ಧಾಳಿ ಮಾಡಿ ವಶಪಡಿಸಿಕೊಂಡ ಕೆಲವು ಭಾಗಗಳನ್ನು ನಾಯಕರಿಗೆ ಬಿಟ್ಟುಕೊಟ್ಟನು. ಕ್ರಿ.ಶ. ೧೭೪೨ ನಂತರ ಕ್ರಿ.ಶ. ೧೭೭೭ರಲ್ಲಿ ಹೈದರಾಲಿಗೆ ಚಿತ್ರದುರ್ಗದ ಅರಸರ ಮೇಲೆ ಕೊಟ್ಟ ದೂರಿನಿಂದ ಕೊಲ್ಲಲ್ಪಟ್ಟನು.

ಕ್ರಿ.ಶ. ೧೮೦೦ ರಲ್ಲಿ ಜರ್ಮಲಿ ಬಳ್ಳಾರಿ ಕಂಪನಿ ಸರ್ಕಾರದ ವಶವಾಯಿತು. ಹಾಳಾದ ಕೋಡೆ ಅರಮನೆಗಳನ್ನು ನೋಡಬಹುದು.

ಕೊಟ್ಟೂರು : ಶೈಕ್ಷಣಿಕ ಕ್ಷೇತ್ರವು ಹಾಗೂ ೧. ಶ್ರೀ ಗುರು ಕೊಟ್ಟೂರು ಬಸವೇಶ್ವರ ದೇವಸ್ಥಾನ : – ಈ ದೇವಸ್ಥಾನವನ್ನು ಹಿರೇಮಠ ಮತ್ತು ಆಶೀರ್ವಾದ ಮಠವೆಂದು ಕರೆಯುತ್ತಾರೆ. ದರ್ಬಾರು ಮಠವೆಂದು ಸಹ ಕರೆಯುತ್ತಾರೆ. ಹರಪನಹಳ್ಳಿ ಪಾಳೇಗಾರರಾದ ರಂಗಪ್ಪ ನಾಯಕನು ಕಟ್ಟಿಸಿದ್ದಾನೆ.

ತೊಟ್ಟಿಲುಮಠ : ಸಂತಾನ ಬಯಸುವ ಸ್ತ್ರೀಯರು ತೊಟ್ಟಿಲು ತೂಗಿ ಸಂತಾನ ಪಡೆಯುವರೆಂಬ ಐತಿಹ್ಯವಿದೆ.

ಮೂರುಕಲ್ಲುಮಠ : ಮೂರು ಗೋಪರ ಹೊಂದಿರುವ ವಿಶಿಷ್ಠ ಶಿಲ್ಪಕಲೆಯನ್ನು ಹೊಂದಿರುವ ದೇವಸ್ಥಾನ.

ಗಚ್ಚಿನ ಮಠ :  ಕಲ್ಲಿನ ಕೆತ್ತನೆಯ ಸುಂದರ, ಭವ್ಯವಾದ ಶಿಲ್ಪಕಲೆಯನ್ನು ಹೊಂದಿದೆ. ಶ್ರೀ ಗುರು ಯೋಗ ಸಮಾಧಿ ಹೊಂದಿದ ನೆಲ ಮಾಳಿಗೆ ಇದೆ. ದಿಲ್ಲಿ ಮೊಘಲ್ ಚಕ್ರವರ್ತಿಯಾದ ಅಕ್ಬರ್ ಬಾದಷಹನು ಶ್ರೀ ಮಠಕ್ಕೆ ಅರ್ಪಿಸಿದ ಅತ್ಯಂತ ಸುಂದರ ಕೆತ್ತನೆಯ ಮಣಿ ಮಂಚ ಇಲ್ಲಿದೆ.

ಸಿರಿ ಮಠ : ಈಶ್ವರಲಿಂಗ – ಬಸವಮೂರ್ತಿ ಇರುವ ಸುಂದರ ದೇವಸ್ಥಾನವಾಗಿದೆ. ಗದ್ದಿ ಕಲ್ಲೇಶ್ವರ, ಚಿರಬಿ ಊರಮ್ಮನ ದೇವಸ್ಥಾನ, ಮೂಗಬಸವೇಶ್ವರ ಮುಂತಾದ ದೇವಸ್ಥಾನಗಳು ಹಾಗೂ ಶಿಲಾ ಶಾಸನಗಳಿವೆ. ಸಾವಿರದ ಎಂಟು ಶಿವಲಿಂಗಗಳ ದೇವಸ್ಥಾನವಿದೆ.

ಬೆಳ್ಳಿ ರಥ : ಸುಂದರ ಕೆತ್ತನೆಯುಳ್ಳ ಶ್ರೀ ಗುರು ಕೊಟ್ಟೂರು ಬಸವೇಶ್ವರ ರಥವಿದೆ. ಪಂಚಗಣಾಧೀಶರಲ್ಲಿ ಕೊಟ್ಟೂರು ಗುರುಬಸವೇಶ್ವರರು ಒಬ್ಬರು.

ಉಜ್ಜನಿ :

ಮರುಳು ಸಿದ್ದೇಶ್ವರ ದೇವಾಲಯ :

 

ವೀರಶೈವ ಪಂಚ ಪೀಠಗಳಲ್ಲಿ ಒಂದು ಉಜ್ಜಯಿನಿ ಸದ್ಧರ್ಮ ಪೀಠ ಕೊಟ್ಟೂರಿನಿಂದ ೧೪ ಕಿ.ಮೀ. ದೂರವಿದೆ. ಹೊಸಪೇಟೆಯಿಂದ ೪೧ ಕಇ.ಮೀ. ಇದೆ. “ಹಂಪೆ ಸುತ್ತಿನೋಡು, ಉಜ್ಜನಿ ಒಳಗೆ ನೋಡು” ಎಂಬಂತೆ ಸುಂದರ ಕೆತ್ತೆಯ ಭವ್ಯವಾದ ಸುಂದರವಾದ ದೇವಾಲಯ – ವಾಸ್ತು ಶಿಲ್ಪದ ಕುಸುರಿ ಕೆಲಸ ಕೆತ್ತನೆಯು ವೈಶಿಷ್ಠ್ಯಪೂರ್ಣವೆನಿಸಿದೆ.

ಶ್ರೀ ಮಠದ ಶಿವಾಚಾರ್ಯರ ಗದ್ದುಗೆಗಳು, ಗೌರಮ್ಮ, ಬಂಗಾರದ ಬಸವಣ್ಣ, ನಂದಿ ದೇವಾಲಯಗಳು, ದಾರುಕ ಮಂದಿರ, ಗೋಶಾಲೆ ಪಂಚಾಚಾರ್ಯರ ಸಭಾ ಭವನ ಮತ್ತು ನ್ಯಾಯಪೀಠವಿದೆ.

ಶ್ರೀ ಮರುಳ ಸಿದ್ಧ ಸ್ವಾಮಿಯ ರಥೋತ್ಸವ ಶಿಖರದ ತೈಲಾಭಿಷೇಕ ಅನೇಕ ಸಾಂಸ್ಕೃತಿಕ ಚಟುವಟಿಕೆಗಳು ಜರುಗುತ್ತವೆ.

ದೇವಾಲಯದ ಎದುರಿಗೆ ಒಂಭತ್ತು ಪಾದಗಟ್ಟೆಗಳಿರುವ ಭೂ ಪ್ರದೇಶವಿದೆ. ಪ್ರತಿ ವೈಶಾಖ ಮಾಸದಲ್ಲಿ ರಥೋತ್ಸವದೊಂದಿಗೆ ಜಾತ್ರೆ ಜರುಗುವುದು.

 

ಶಾಸನಗಳು :

೧. ಗುಡಿ ಕಂಬದ ಶಾಸನ.

೨. ಕಟ್ಟೆ ಮೇಲಿನ ಶಾಸನ

೩. ಗುಡಿ ಪೂರ್ವ ದ್ವಾರದ ಕಟ್ಟೆಯ ಮೇಲಿನ ಶಾಸನ.

೪. ಗುಡಿಯ ಪ್ರಕಾರದ ಶಾಸನಗಳಿವೆ.

 

ಇಲ್ಲಿರುವ ವಿಗ್ರಹಗಳು : ಶ್ರೀ ಕೃಷ್ಣ, ವಿನಾಯಕ, ಚಕಣಾಚಾರಿ, ಮರುಳಾರಾಧ್ಯ, ರೇಣುಕಾರಾಧ್ಯ, ಪಂಡಿತಾರಾಧ್ಯ, ವೀರಭದ್ರ ವಿಗ್ರಹಗಳಿವೆ.

ಪತ್ರೆ ಮರದ ತೋಪು : – (ಜುಂಜ್ಪ ತೋಪು) ಬಸವೇಶ್ವರ ದೇವಸ್ಥಾನ, ಬಣವಿಕಲ್ಲು, ಅಮಲಾಪುರ.

ಗುಣಸಾಗರ : ಶ್ರೀ ಕೃಷ್ಣನ ವಿಗ್ರಹ ಅತ್ಯಂತ ಸುಂದರವಾಗಿದೆ. ಉತ್ತಮ ಕೆತ್ತನೆ. ಗ್ರಾಮಗಳ ಮಧ್ಯೆ ಇದೆ. ಬಣವಿಕಲ್ಲಿನಿಂದ ೫ ಕಿ.ಮಿ. ಎನ್. ಹೆಚ್. ೧೩ ಒಳಗಿದೆ.

 

ಸರ್ವೋದಯ ಗ್ರಾಮ : ಶಾಲೆ, ಗುಡೇಕೋಟೆ ಸಮೀಪ.

ಕುಮತಿ :  ಗ್ರಾಮದ ಹತ್ತಿರ ದೊಡ್ಡ ಮಾನವಾಕೃತಿಯ ಶಿಲಾಬಂಡೆ.

ಜೋಳದ ಕೂಡ್ಲಿಗಿ : ದೊಡ್ಡ ಆಲದ ಮರವಿದೆ.

ಕಾನಾಮಡುಗು : ಶ್ರೀ ಶರಣಬಸವೇಶ್ವರರ ಮಠ, ಶೈಕ್ಷಣಿಕ ಕೇಂದ್ರವಾಗಿದೆ. ಉಜ್ಜಯಿನಿಯಿಂದ ೪೦ ಕಿ.ಮೀ. ದೂರವಿದೆ.

ಏಳು ದೇವರ ಗುಡ್ಡ : – ಪುರಾತನ ಕೋಟೆ ಕೊತ್ತಲುಗಳಿವೆ.

 

ಕೂಡ್ಲಿಗಿ : ಗಾಂಧೀಜಿಯವರ ಚಿತಾಭಸ್ಮ ಇಡಲಾಗಿದೆ. ಸ.ಪ.ಪೂ. ಕಾಲೇಜ್ ಆವರಣದಲ್ಲಿ ಇಡಲಾಗಿದೆ.

ಅರಣ್ಯ ಪ್ರದೇ : ಮರಿಯಮ್ಮನ ಹಳ್ಳಿಯಿಂದ ಕುಡ್ಲಿಗಿಯವರೆಗೆ ಕುರುಚಲು ಕಾಡು ಹೇರಳವಾಗಿದ್ದು (ತಾಳೆಮರ, ಶ್ರೀಗಂಧ).

ಅರಣ್ಯ ಪ್ರೇಶದಲ್ಲಿರುವ ವನ್ಯ ಪ್ರಾಣಿಗಳು : ಕರಡಿ, ತೋಳ, ನರಿ, ಚಿgಚಿve, ನವಿಲು, ಮೊಲ, ಜಿಂಕೆ.