೧. ಕಂಪ್ಲಿ ೨. ಕಮಲಾಪುರ ೩. ಕೃಷ್ಣಾನಗರ ೪. ಕುರುಗೋಡು ೫. ಕೆಂಚನಗುಡ್ಡ ೬. ಗುಡೇಕೋಟೆ ೭. ಜರಿಮಲೆ ೮. ತಂಬ್ರಹಳ್ಳಿ ೯. ತೆಕ್ಕಲಕೋಟೆ ೧೦. ದರೋಜಿ ೧೧. ದೇವಲಾಪುರ ೧೨. ನಡವಿ ೧೩. ಪಾಪಿನಾಯಕನಹಳ್ಳಿ ೧೪. ಪಾಲಯ್ಯನ ಕೋಟೆ ೧೫. ಬಳ್ಳಾರಿ ೧೬. ರಾಮಸಾಗರ ೧೭. ವೀರನದುರ್ಗ ೧೮. ಶಿರುಗುಪ್ಪ ೧೯. ಹಂಪಾಪಟ್ಟಣ ೨೦. ಹಂಪಿ ೨೧. ಹನಸಿ ೨೨. ಹ್ಯಾರಡ ೨೩. ಹೂವಿನ ಹಡಗಲಿ ೨೪. ಹೊಸಮಲೆದುರ್ಗ ೨೫. ಹೊಸಪೇಟೆ ೨೬. ಹೊಳಲು.

ಕೋಟೆ ಪದಕೋಶ

ಅಂಬುಗುಡಿ: ಬಾಣ, ಬಂದೂಕುಗಳನ್ನು ಪ್ರಯೋಗಿಸಲು ಮಾಡಿದ ಕೋಟೆ ಗೋಡೆಯಲ್ಲಿ ರಚಿಸಲಾದ ರಂಧ್ರ

ಅಗಸೆ: ಊರ ಹೆಬ್ಬಾಗಿಲು

ಅಗಳು: ಕೋಟೆಯ ಸುತ್ತಲೂ ಅಗೆದು ತಗ್ಗು – ಕಂದಕ

ಅಟ್ಟಣೆ: ಮಂಚಿಕೆ

ಅರಿ: ಶತ್ರು

ಆಳ್ವೇರಿ: ಕೋಟೆ ಗೋಡೆ

ಕತ್ತಿಯಪರಜು: ಕತ್ತಿಯ ಹಿಡಿ, ಮೊನೆ

ಕಿರಾತ: ಬೇಡ, ಪರಾಕ್ರಮ, ಬೇಟೆಗಾರ, ಬೇಡರ ಪಡೆ

ಕೇತು: ಧ್ವಜ

ಕೊತ್ತಳ: ಬುರುಜು

ಕೋವಿ: ಗುಂಡು ಹಾರಿಸುವ ಸಣ್ಣ ತುಪಾಕಿ, ಬಂದೂಕು

ಗೊಂಟು: ಕೋಟೆ ಗೋಡೆಗಳು ಒಂದಕ್ಕೊಂದು ಸಂಧಿಸುವ ಸ್ಥಳ

ಜಬರಜಂಗಿ: ಒಂದು ಬಗೆಯ ಫಿರಂಗಿ

ಜೆಂಗಿ : ಯುದ್ಧ, ಕದನ

ತುಕಡಿ: ಸೇನಾದಳ, ಪಡೆ, ಭಾಗ

ತೆನೆ: ಕೋಟೆಯ ಮೇಲ್ಭಾಗದ ತೆನೆಯಾಕಾರದ ರಚನೆ

ದಂಡು: ಸೇನೆ, ತುಕಡಿ

ದಿಡ್ಡಿ: ಸಣ್ಣ ಬಾಗಿಲು ಬಟ್ಟದೆನೆ: ಕೋಟೆ ತೆನೆ

ಪಟ: ಧ್ವಜ

ಪಾಳೆಯ: ಶಿಬಿರ, ಬೀಡು

ಫಿರಂಗಿ: ಗುಂಡು ಹಾರಿಸುವ ಬೃಹತ್ ಗಾತ್ರದ ತುಪಾಕಿ

ಪುಲಿಮೊಗ: ಕೋಟೆಯ ದಿಡ್ಡಿಬಾಗಿಲು, ಹೆಬ್ಬಾಗಿಲು

ಮನ್ನೆಯರು: ಮಾನ್ಯರು, ಸಾಮಂತರು, ಮಾಂಡಲಿಕರು

ಮುಗಿಲಟ್ಟಣೆ: ಮೂರು ಮೊನೆಯುಳ್ಳ ಆಯುಧ

ಮೊಗರಂಭ: ಮುಖವಾಡ

ರಣದುಂದುಭಿ: ರಣವಾದ್ಯ

ಲಗ್ಗೆ: ದಾಳಿ

ಲಾಳಿ: ವಿಂಡಿಗ ಅಗುಳಿ

ಲೌಡಿ: ಕಬ್ಬಿಣದ ಗದೆ

ವಂಕಿ: ಒಂದು ಬಗೆಯ ಕತ್ತಿ

ಶತಫ್ನಿ: ತೋಪು, ಸುಮಾರು ನೂರು ಜನರನ್ನು ಕೊಲ್ಲುವ ಒಂದು ಬಗೆಯ ಆಯುಧ

ಸಾರ ಮಾರಿ: ಇದೊಂದು ವಿಶೇಷ ಸಾಧನ

ಹುಯಿಲು: ಕದನ, ಯುದ್ಧ, ಕಾಳಗ

ಹುಲಿಮೊಗ: ಕೋಟೆಯ ಬಾಗಿಲು

ಹುಡೇವು: ಕೊತ್ತಳ, ಬುರುಜು