ನಮ್ಮ ರಕ್ಷಣೆ ಪರಂಪರೆಯ ಪ್ರತೀಕಗಳಾಗಿ ಕೋಟೆಗಳು ನಿರ್ಮಾಣಗೊಂಡಿದ್ದವು. ಅವುಗಳ ನವೀಕರಣ ವಿಧಾನ ಹೊಸ ಬಗೆಯ ರಕ್ಷಣಾ ವ್ಯವಸ್ಥೆ ಇಂದು ಏರ್ಪಟ್ಟಿದೆ. ಮಹತ್ವದ ರಕ್ಷಣಾ ವಾಸ್ತುವನ್ನು ಕಾಪಾಡಿಡುವುದು ಮತ್ತು ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯಗಳಲ್ಲಿ ಒಂದು. ಕಾಪಾಡುವ ಹಾಗೂ ಸಂರಕ್ಷಿಸುವ ಹೊಣೆಗಾರಿಕೆ ಬರುವುದು ಅವುಗಳ ಹಿನ್ನೆಲೆ, ಮಹತ್ವ ತಿಳಿದಾಗ. ಹೀಗಾಗಿ ಈ ಕೆಲಸವನ್ನು ಮಾತ್ರ ಈ ಕೃತಿಯಲ್ಲಿ ಆಗು ಮಾಡಲು ಪ್ರಯತ್ನಿಸಿದೆ.

ಕನ್ನಡ ವಿಶ್ವವಿದ್ಯಾಲಯವನ್ನು ನಾಡಿನ ಸಾರಸ್ವತ ಲೋಕದ ಕೇಂದ್ರವನ್ನಾಗಿಸಲು ಹಿಂದಿನ ಕುಲಪತಿಗಳ ಹಾಗೆ ಶ್ರಮಿಸಿದ ಪ್ರಸ್ತುತ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ, ಮಾನ್ಯ ಕುಲಸಚಿವರು ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಡಾ.ಮಂಜುನಾಥ ಬೇವಿನಕಟ್ಟೆ ಅವರನ್ನು ಇಲ್ಲಿ ಸ್ಮರಿಸುವೆ.

ನನ್ನನ್ನು ತಿದ್ದಿ, ತೀಡಿ ಅಧ್ಯಯನ ಕೆಲಸಕ್ಕೆ ತೊಡಗಿಸಿದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ರವಿ ಕೋರಿಶೆಟ್ಟರ್ ಅಧ್ಯಯನಾಂಗದ ನಿರ್ದೇಶಕರಾದ ಡಾ. ವೀರೇಶ ಬಡಿಗೇರ ವಸ್ತುಸಂಗ್ರಾಲಯದ ನಿರ್ದೇಶಕರಾದ ಡಾ.ಕೆ.ಎಂ. ಸುರೇಶ್, ಅಧ್ಯಯನದ ಕ್ಷೇತ್ರಕಾರ್ಯದಲ್ಲಿ ಸಹಕರಿಸಿದ ಬಳ್ಳಾರಿ ಜಿಲ್ಲೆಯ ಸಂಬಂಧಿಸಿದ ಗ್ರಾಮದ ಜನರಿಗೆ, ಶಾಸನಶಾಸ್ತ್ರ ವಿಭಾಗದ ಗೆಳಯರಿಗೆ, ಪ್ರಸಾರಾಂಗದ ಮಿತ್ರರಿಗೆ ನನ್ನ ಅಕಾಡೆಮಿಕ್ ಕ್ಯಾರಿಯರ್ ನ್ನು ಬೆಳಸಿಕೊಳ್ಳಲು ಸದಾ ಪ್ರೋತ್ಸಾಹಿಸುತ್ತಿರುವ ಡಾ.ಕೆ.ವಿ. ನಾರಾಯಣ, ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಮತ್ತು ಬೆಂಗಳೂರಿನ ಕೆ.ಓ.ಎಫ್ ನ ಶ್ರೀ ಜೆ.ರಮಾನಂದ ಮಿಥಿಕ್ ಸೊಸೈಟಿಯ ಸ್ಥಾಪನ ಸದಸ್ಯರಾದ ಶ್ರೀ ವಿ.ನಾಗರಾಜ್, ಹಂಪಾಪಟ್ಟಣ ಪ್ರೌಢಶಾಲಾ ಶಿಕ್ಷಕರಾದ ಶ್ರೀ ಟಿ.ಪ್ರಸನ್ನ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಅಂತಿಮವಾಗಿ ಅಧ್ಯಯನದ ಸಮಯದಲ್ಲಿ ತಾಳ್ಮೆಯಿಂದ ಸಹಿಸಿ ಸಹಕರಿಸಿದ ಪ್ರೀತಿಯ ಪತ್ನಿ ಸುಧಾ, ತುಂಟವಾಡುವ ಪುತ್ರರಾದ ಚಿಂಟು, ಚಿನ್ನು, ಅಪ್ಪ-ಅವ್ವ, ಹಾಗೂ ಒಡನಾಡಿ ಸಹೋದರ-ಸಹೋದರಿಯರನ್ನು ಮನತುಂಬಿ ನೆನೆಯುವೆನು.

ಈ ಕೃತಿಗೆ ಕಟ್ಟಾಗಿ ಅಕ್ಷರ ಸಂಯೋಜನೆ ಮಾಡಿಕೊಟ್ಟ ಡಾ.ಮಲ್ಲಿಕಾರ್ಜುನ ವಣೇನೂರು, ಶ್ರೀ ಕೆ. ಆಂಜನೇಯ ಅವರಿಗೆ ಹಾಗೂ ಮುಖಪುಟ ವಿನ್ಯಾಸ ಮಾಡಿದ ಶ್ರೀ ಕೆ.ಕೆ ಮಕಾಳಿ ಅವರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ಡಾ.ಎಂ.ಕೊಟ್ರೇಶ್