ಬಳ್ಳಾರಿಯ ಏಳು ತಾಲೂಕುಗಳಲ್ಲಿ ಬಳ್ಳಾರಿ ತಾಲೂಕು ಒಂದು. ಈ ತಾಲೂಕಿನ ನೋಡುವ ಬೀಡುಗಳೆಂದರೆ ಬಳ್ಳಾರಿ, ಕುರುಗೋಡು, ಚೆಳ್ಳಗುರ್ಕಿ, ಅಲ್ಲೀಪುರ, ಸಂಗನಕಲ್ಲು, ಜೋಳದರಾಶಿ, ಕೋಳೂರುಗಳನ್ನು ಗುರುತಿಸಬಹುದಾಗಿದೆ.

೧. ಬಳ್ಳಾರಿ : ಪ್ರಮುಖ ವ್ಯಾಪಾರಿ ಕೇಂದ್ರ ಹಾಗೂ ಸಿದ್ಧುಡುಪು ತಯಾರಿಕಾ ಕೇಂದ್ರವಾದ ಬಳ್ಳಾರಿ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರವೂ ಹೌದು. ಬಳ್ಳಾರಿಯಲ್ಲಿ ನೋಡಬಹುದಾದ ಪ್ರಮುಖ ತಾಣಗಳೆಚಿದರೆ ಏಕ ಶಿಲಾ ಬೆಟ್ಟ, ಅಲ್ಲೀಪುರ ಸೆರೆಮನೆ, ಕೋಟೆ, ಮಲ್ಲೇಶ್ವರ ದೇವಸ್ಥಾನ, ರೇಲ್ವೇನಿಲ್ದಾಣ, ಜಿಲ್ಲಾಧಿಕಾರಿ ಕಛೇರಿ, ನ್ಯಾಲಯದ ಕಟ್ಟಡ, ಮಿಂಚೇರಿ ಗುಡ್ಡದ ಜಡ್ಜ್ ಬಂಗಲೆ, ಸಕ್ಕರೆ ಕರಡೇಶ ಚೌಕಿ, ಟ್ರಿನಿಟಿ ಚರ್ಚ ಹಾಗೂ ಇತ್ತೀಚೆಗೆ ರೂಪಗೊಂಡಂತ ಟರ್ಕಿ ಪಾರ್ಕ, ಮೇರಿ ಮಾತೆ ಆಲಯ, ರಾಜಕುಮಾರ್ ಪಾರ್ಕ್, ನಾರಯಾಣರಾವ್ ಪಾರ್ಕ್ ಇತ್ಯಾದಿಗಳನ್ನು ಗುರುತಿಸಬಹುದು.

ಏಕಶಿಲಾ ಬೆಟ್ಟ :– ಆಕರ್ಷಕ ಕೋಟೆಯನ್ನು ಒಳಗೊಂಡಂತೆ ಏಕಶಿಲಾ ಬೆಟ್ಟವಿದೆ.ಇದನ್ನು ಕೋಟೆ ಬೆಟ್ಟವೆಚಿದು ಕರೆಯಲಾಗಿದ್ದು ಒಂದುವರೆ ಎಕರೆ ಮೈಲುಸುತ್ತಳತೆ ಹೊಂದಿದೆ, ಭೂಮಟ್ಟದಿಂದ ೪೮೦ ಅಡಿ ಎತ್ತರವಿದೆ. ಇದು ದೇಶದ ಎರಡನೆ ಬೆಟ್ಟವಾಗಿದೆ.

 ಕೋಟೆ ಬಂಡೆ ಮೇಲೆ ದುರ್ಗವಿದ್ದು ದುರ್ಗದ ಹೊರಭಾಗದಲ್ಲಿ ಕೆಲವು ಸಣ್ಣ ಸಣ್ಣ ಗುಂಡಿಗಳು ಹಾಗೂ ಆಳವಾದ ನೀರಿನ ಕೊಳಗಳಿವೆ. ಕೋಟೆಯು ಬೃಹತ್ ಕಲ್ಲಿನ ಬುರುಜುಗಳಿಂದ ಕೂಡಿದ ಗೋಡೆ ಹಾಗೂ ಆಳವಾದ ಕಂದಕಗಳಿಂದ ಕೂಡಿದ ಗೋಡೆ ಹಾಗೂ ಆಳವಾದ ಕಂದಕಗಳಿಂದ ಸುತ್ತುವರೆದಿದೆ.

ಈ ಕೋಟೆಯನ್ನು ಪಾಳೆಗಾರರ ಕಾಲದಲ್ಲಿ ನಿರ್ಮಿಸಲಾಗಿದ್ದು ೧೭ನೇ ಶತಮಾನದ ಆದಿಭಾಗದಲ್ಲಿ ಹನುಮಪ್ಪನಾಯಕನೆಂಬ ಪಾಳೇಗಾರ ಆಳಿದ. ನಂತರ ಈಶ್ವರಮ್ಮ , ಸುಲ್ತಾನರು, ಮರಾಠರು, ಮೊಘಲರು ೧೭೭೫ ರಲ್ಲಿ ಹೈದರಾಲಿ ನಂತರ ಬ್ರಿಟೀಷರ ವಶವಾಯಿತು.

ಅಲ್ಲೀಪುರ ಸೆರೆಮನೆ : ಅಲ್ಲೀಪುರ ಐತಿಹಾಸಿಕ ಸೆರೆಮನೆಯನ್ನು ಹೊಂದಿದ್ದು ಸ್ವಾತಂತ್ರ ಹೋರಾಟ ಕಾಲದಲ್ಲಿ ರಾಷ್ಟ್ರೀಯ ನಾಯಕರನ್ನು ಇಲ್ಲಿ ಇಡಲಾಗಿದ್ದಿತ್ತು. ಇದು ಇಂದು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಪುನರ್ವಸತಿ ಶಾಲೆಯಾಗಿದೆ ಜೊತೆಗೆ ಈ ಊರಿನ ಆದಿಭಾಗದಲ್ಲಿ ಮಹಾಶರಣ ಮಹಾದೇವತಾತನವರ ಜಾಗೃತ ಮಠವಿದೆ.

ಕೋಟೆ ಮಲ್ಲೇಶ್ವರ ದೇವಾಲಯ : ಬಳ್ಳಾರಿಯ ಕೋಟೆಯ ಒಳಗೆ ವಾಯುವ್ಯ ದಿಕ್ಕಿನಲ್ಲಿರುವ ಈ ಆಲಯವು ವಿಶಾಲವಾಗಿ ಹರವಿಕೊಂಡಿದೆ. ೩ ಅಂಕಣದ ಸಭಾ ಮಂಟಪ, ತೆರೆದ ಸುಕನಾಸಿ, ೮”*೮” ಅಳತೆಯ ಗರ್ಭಗೃಹ ಸಭಾಮಂಟಪಕ್ಕೆ ಹೊಂದಿಕೊಂಡು ೩೫”*೨೫” ಅಳತೆ ಹಜಾರ ಹೊಂದಿದೆ.

ಗರ್ಭಗೃಹದಲ್ಲಿ ಭೂಮಟ್ಟಕ್ಕೆ ಒಂದೂವರೆ ಅಡಿ ಎತ್ತರದ ಲಿಂಗವಿದೆ.ಪಾಣಿಪೀಠವಿಲ್ಲ. ಈ ಗುಡಿಯು ಕದಂಬ ನಾಗರ ಶೈಲಿಯ ಸುಂದರ ಶಿಖರ ಹೊಂದಿದೆ.ಆಲಯದ ಹೊರಗೋಡೆಯಲ್ಲಿ ದೇವತೆಗಳು,ಶಿವಶರಣರ ಭಕ್ತರ, ಮದನಿಕ ವಿಗ್ರಹಗಳನ್ನು ಖಂಡರಿಸಲಾಗಿದೆ.ಇತಿಹಾಸ ಐತಿಹ್ಯವಾಗಿ ಬಳ್ಳೀಶ ಮಲ್ಲಯ್ಯನ ಕೆತ್ತನೆ ಕಾಣಬಹುದಾಗಿದೆ.

ಬಳ್ಳಾರಿ ರೈಲ್ವೆ ನಿಲ್ದಾಣ
ಬ್ರಿಟೀಷ್ ಕಾಲದ ಭದ್ರ ಕಟ್ಟಡಗಳು : ಬ್ರಿಟೀಷರಿಂದ ರಾವ್ ಬಹದ್ದೂರ್ ಬಿರುದಾಂಕಿತ ಸಕ್ಕರೆ ಕರಡೇಶ ರೇಲ್ವೇ ಗುತ್ತಿಗೆದಾರರಿಂದ ನಿಮಾಣಗೊಂಡ ರೇಲ್ವೆ ನಿಲ್ದಾಣವಿದೆ. ಇಲ್ಲಿಗೆ ಗಾಂಧೀಜಿಯವರು ಆಗಮಿಸಿ ವೈಯಕ್ತಿಕ ಕಾರಣಗಳಿಂದಾಗಿ ಒಂದು ರಾತ್ರಿ ಇಲ್ಲಿ ತಂಗಿ ಹೋಗಿದ್ದಾರೆ. ಜೊತೆಗೆ ಜಿಲ್ಲಾಧಿಕಾರಿ ಕಛೇರಿ, ನ್ಯಾಯಾಲಯ ಕಟ್ಟಡಗಳು ಭದ್ರ ಹಾಗೂ ಸುಂದರ ವಾಸ್ತು ಶೈಲಿ ಹೊಂದಿರುತ್ತವೆ.

ಮಿಂಚೇರಿ ಗುಡ್ಡದ ಜಡ್ಜ್ ಬಂಗಲೆ : ಬ್ರಿಟೀಷರ ಕಾಲದಲ್ಲಿ ನ್ಯಾಯಾಧೀಶರ ವಾಸಸ್ಥಳಕ್ಕೆ ಬಳ್ಳಾರಿಯಿಂದ ೧೮ ಕಿ.ಮೀ ದೂರದ ಮಿಂಚೇರಿ ಗುಡ್ಡದಲ್ಲಿ ನ್ಯಾಯಾಧೀಶರ ಬಂಗಲೆ ನೆಲೆಗೊಂಡಿದೆ.

ಸಕ್ಕರೆ ಕರಡೀಶ ಚೌಕ : ಶಿಕ್ಷಣದ ಸೌಲಭ್ಯವಿರದಿದ್ದ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಅದರಲ್ಲೂ ಸಂಸ್ಕೃತ ಆಶ್ರಯ ವಿದ್ಯೆಯ ಕೇಂದ್ರವಾಗಿ ವಸತಿಶಾಲೆಯನ್ನು ಶ್ರೀ.ಸಕ್ಕರೆ ಕರಡೇಶಪ್ಪನವರು ಖಾಸಗಿಯಾಗಿ ಆರಂಭಿಸಿದ ವಸತಿ ನಿಲಯ ಇದಾಗಿದೆ.

ಟ್ರಿನಿಟಿ ಚರ್ಚ್ : ಕೋಟೆಯ ಒಳಗಡೆ ಚರ್ಚ್ ಆಫ್ ಸೌತ್ ಇಂಡಿಯಾಕ್ಕೆ ಸೇರಿದ ಕ್ರೈಸ್ತ ಮಂದಿರ ಇದಾಗಿದ್ದು ಇದನ್ನು ೧೮೧೧ ರಲ್ಲಿ ನಿರ್ಮಿಸಲಾಗಿದೆ.

ಟರ್ಕಿ ಪಾರ್ಕ್ : ವಿಮಾನ ನಿಲ್ದಾಣದ ಬಳಿ ಟರ್ಕಿ ಸೈನಿಕರ ಸಮಾಧಿಸ್ಥಳ ಹೊಂದಿದ ಜಾಗವನ್ನು ಪಾರ್ಕನ್ನಾಗಿ ಮಾರ್ಪಾಡಿಸಲಾಗಿದೆ.

ರಾಜಕುಮಾರ ಪಾರ್ಕ್

ನಾರಾಯಣರಾವ್ ಪಾರ್ಕ್‌ಗಳು ಇತ್ತೀಚೆಗೆ ರೂಪಗೊಂಡಂತಹ ಬಳ್ಳಾರಿಯ ನೋಡುವ ನೆಲೆಗಳಾಗಿರುತ್ತವೆ. ಜಿಲ್ಲೆಯಿಂದ ಇರುವ ದೂರ ೩೦ ಕಿ.ಮೀ.

ಮೇರಿ ಮಾತೆ ಆಲಯ ರಾಜಕುಮಾರ ಪಾರ್ಕ್, ನಾರಾಯಣರಾವ್ ಪಾರ್ಕ್‌ಗಳು ಇತ್ತೀಚೆಗೆ ರೂಪಗೊಂಡಂತಹ ಬಳ್ಳಾರಿಯ ನೋಡುವ ನೆಲೆಗಳಾಗಿರುತ್ತವೆ.

೨. ಕುರುಗೋಡು : ಬಳ್ಳಾರಿಯಿಂದ ೩೦ಕಿ.ಮೀ ದೂರದಲ್ಲಿರುವ ಕುರುಗೋಡುಕ್ರಿ.ಶ.೯೫೦ ರಿಂದ ೧೨೦೦ರ ವರೆಗೆ ‘ಬಲ್ಲಕುಂದೆ ಮುನುರು’ ಎಂಬನಾಡಿದ ರಾಜಧಾನಿ ಎನಿಸಿದ್ದಿತು ಇದು ಶಿಲಾಯುಗ ಕಾಲದಿಂದ ನವೀನ ಯುಗದವರೆಗೂ ಇತಿಹಾಸಕತೆ ಕಾಲದಿಂದ ನವೀನಯುಗದವರೆಗೂ ಇತಿಹಾಸಕತೆ ಹೊಂದಿದೆ.ಇಲ್ಲಿ ನೋಡುವ ತಾಣಗಳು ಹೇರಳವಾಗಿದ್ದು ಎದ್ದು ಕಾಣುವ ಮತ್ತು ನೋಡಲೇಬೇಕಾದ ತಾಣಗಳನ್ನು ಈ ಕೆಳಕಂಡಂತೆ ಗುರುತಿಸಬಹುದು.

ಬಾದನಹಟ್ಟಿ, ಬೇಡರ ಬೆಳಗಲ್ಲು, ಹಲಕುಂದಿ, ದೊಡ್ಡಬಸವೇಶ್ವರ ದೇವಾಲಯ, ಹಿಂಡಸಲಸಂಗಿ ಸಂಗಮೇಶ್ವರ ದೇವಾಲಯ, ಏಕಶಿಲಾ ಮಹಾಗಣಪತಿ ಮೂರ್ತಿ, ಪಂಚಮುಖಿ ವೀರಭದ್ರ, ಬೆಟ್ಟದ ಗುಹೆಯಲ್ಲಿಯ ಚಿತ್ರಗಗಳು, ಚೌಕಿನೀಲಮ್ಮನ ಗುಡಿ,ಕತ್ತಿಬಂಡೆ ಶಾಸನ ಮುಂತಾದವುಗಳಾಗಿವೆ.

ಬಾದನಹಟ್ಟಿ , ಬೇಡರ ಬೆಳಗಲ್ಲು, ಹಲಕುಂದಿ ಈ ಗ್ರ್ರಾಮದಲ್ಲಿ ಶಿಲಾಯುಗದ ಪಳಿಯುಳಿಕೆಗಳು ದೊರೆತಿರುತ್ತವೆ.

ದೊಡ್ಡಬಸವೇಶ್ವರ ದೇವಾಲಯ : ಕುರುಗೋಡಿನಲ್ಲಿರುವ ಈ ಆಲಯ ದೊಡ್ಡದಾಗಿದ್ದು ಇಲ್ಲಿ ಕರ್ನಾಟಕದ ಅತ್ಯಂತ ಎತ್ತರವಾದ ದಕ್ಷಿಣ ಬಾರತದಲ್ಲಿ ೨ನೇ ಅತ್ಯಂತ ಎತ್ತರವಾದ ೧೨‘ ಅಡಿ ಎತ್ತರವಾದ ಬಂಡೆಮೇಲೆ ಕುಳಿತ ನಂದಿ ವಿUಹ ಹೊಂದಿದೆ, ಪಶ್ಚಿಮಕ್ಕೆ ಇರುವ ೬೦” ಅಡಿ ಎತ್ತರದ ಮಹಾದ್ವಾರದ ಗೋಪುರವಿದೆ. ಸೋಮವಾರದ ಬಾಗಿಲೆಚಿದು ಕರೆಯುವ ಉತ್ತರ ದಿಕ್ಕಿನ ಬಾಗಿಲ ಗೋಪುರ ೩೦“ ಅಡಿಯ ಮೂರು ಅಂತಸ್ತು ಹೊಂದಿದೆ. ೩ ಎತ್ತರದ ಜೋಡು ಆನೆಗಳ ಸ್ವಾಗತದ ೧೨ ಸ್ತಂಭಗಳ ನವರಂಗದಿಂದ ಕೂಡಿ ನೋಡಲು ಆಕರ್ಷಣೀಯವಾಗಿದೆ.

ಹಿಂಡುಲಿ ಸಂಗಮೇಶ್ವರ ಗುಡಿ : ಶೈವ ವೈಷ್ಣವ ಸಂಸ್ಸೃತಿಯ ಸಾಮರಸ್ಯದ ಸಂಕೇತವಾದ ಸಂಗಮೇಶ ಗುಡಿ ಹಿಂಡುಲಿ ಎಂದು ಕರೆಯಿಸಿಕೊಳ್ಳಲು ಕಾರಣ ಇಲ್ಲಿ ಬೆಟ್ಟದ ಹುಲಿಗಳು ಹಿಂಡು ಹಿಂಡಾಗಿ ಬಂದು ಸೇರುತ್ತದ್ದವಂತೆ.

ಏಕ ಶಿಲಾ ಮಹಾಗಣಪತಿ ವಿUಹ : ಕುರುಗೋಡಿನ ಕೆಳಗಿನ ಪೇಟೆಯ ಓಣಿಯಲ್ಲಿ ೨೪’-೨೫’ ಎತ್ತರದ ಗುಂಡಿನ ಮುಂಭಾಗದಲ್ಲಿ ಬೃಹದಾಕಾರದ ಗಣಪತಿ ಮೂರ್ತಿ ಕೆತ್ತಲಾಗಿದೆ, ಕಾಲು ಮಡಚಿ ಕುಳಿತ ಭಂಗಿಯಲ್ಲಿದೆ.

ಪಂಚಮುಖಿ ವೀರಭದ್ರ : ಬಾಳೇಕಿಲ್ಲಿ ಗುಡ್ಡದಲ್ಲಿ ೧೦೦ ಅಡಿ ಎತ್ತರದ ಮೂರ್ತಿ ದೇವಸ್ಥಾನದಲ್ಲಿದೆ.ಐದು ಮುಖ ಹನ್ನೆರಡು ತೂಳುಗಳಿಂದ ನಿರ್ಮಿತವಾಗಿದೆ. ಪ್ರತಿ ಮುಖದಲ್ಲಿ ಹಣೆಗಣ್ಣು, ಕೋರೆ ಮೀಸೆ,ಅಲಂಕೃತ ಕಿರೀಟ, ಮಧ್ಯಕಿರೀಟದಲ್ಲಿ ಶಿವಲಿಂಗ ಮುದ್ರೆ ಹೊಂದಿ ಬಹು ಆಕರ್ಷಣೀಯವಾಗಿದೆ.

ಚೌಕಿನೀಲಮ್ಮನ ಗುಡಿ : ೨೦ನೇ ಶತಮಾನದಲ್ಲಿ ನಿಮಾಣಗೊಂಡ ಚಿಕ್ಕಗುಡಿ. ೭’ ಚೌಕದ ಗರ್ಭಗೃಹ ಮಾತ್ರವಿದ್ದು ಪೂರ್ವಕ್ಕೆ ಮುಖಮಾಡಿದೆ. ಕೋಳಿಗುಡ್ಡದ ಪಕ್ಕದಲ್ಲಿ ೮೦: ಅಡಿ ಎತ್ತರದಲ್ಲಿ ಇದೆ. ಒಂದು ಪೀಠದ ಮೇಲೆ ೨.೯” ಅಡಿ ಎತ್ತರದ ಕಪ್ಪು ಶಿಲೆಯ ಪದ್ಮಾಸನ ಹಾಕಿ ಧ್ಯಾನ ಮುದ್ರೆಯಲ್ಲಿರುವ ಸ್ತ್ರೀ ವಿಗ್ರಹ ಶಿವಶರಣೆ ನೀಲಮ್ಮನ ಸ್ಮರಣಾರ್ಥ ನಿರ್ಮಾಣವಾದ “ ಚೌಕಿ ನೀಲಮ್ಮ” ವಿಗ್ರಹ ಇದು.

ಕತ್ತೆಬಂಡೆ ಶಾಸನ : ಇದೊಂದು ಅಪರೂಪದ ಮಾಪನ ನಿರ್ದೇಶನವನ್ನು ಹೊಂದಿದ ಶಾಸನವಾಗಿದೆ. ಇದು ಕುರುಗೋಡಿನ ಉತ್ತರ ದಿಕ್ಕಿಗೆ ಉಚ್ಚಾಳಪೇಟೆ ಗ್ರಾಮದಿಂದ ಉತ್ತರಕ್ಕೆ ಅರ್ಧ ಕಿ.ಮೀ ದೂರದಲ್ಲಿಯ ನೈಸರ್ಗಿಕ ಹಾಸು ಬಂಡೆಯ ಮೇಲೆ ಕೆತ್ತಲಾಗಿದೆ. ಈ ಶಾಸನದಲ್ಲಿ ಆಕಳು,ಕರು, ಹಂದಿಯ ಚಿತ್ರಗಳು ಇದ್ದು  ಜನ ತಪ್ಪಾಗಿ ಕತ್ತೆಯೆಂದು ಭಾವಿಸಿ ಕತ್ತೆಬಂಡೆ ಶಾಸನವೆಂದು ಕರೆದಿದ್ದಾರೆ.

ಗುಹಾ ಚಿತ್ರಗಳು : ಸಂಗನಕಲ್ಲು , ಕಪ್ಪಗಲ್ಲು, ಕುರುಗೋಡಿನ ಬೆಟ್ಟಗಳಲ್ಲಿ ಸ್ವಾಭಾವಿಕ ಗವಿಗಳಿದ್ದು ಗವಿಯ ಒಳಗಡೆ ಕೆಂಪು, ಕಪ್ಪು , ಕಂದು , ಬಿಳಿ ಬಣ್ಣಗಳಿಂದ ಬರೆದ ದನ, ಎತ್ತು, ಜಿಂಕೆ, ಹುಲಿ, ಚಿರತೆ , ಆನೆ ಚಿತ್ರಗಳಿವೆ. ಜನರು ಕೈಯಲ್ಲಿ ಬರ್ಚಿ, ಗುರಾಣಿ ಹಿಡಿದು ಜನ ಪ್ರಾಣಿಗಳನ್ನು ಬೆನ್ನಟ್ಟಿ ಬೇಟೆ ಆಡುವ ಚಿತ್ರ, ಆನೆ ಮೇಲೆ ಕುಳಿತು ಸವಾರಿ ಮಾಡುವ ಚಿತ್ರ, ಸಮೂಹ ನೃತ್ಯ, ಕಾಮ ಕೇಳಿಯಲ್ಲಿ ತೊಡಗಿದ ಗಂಡು ಹೆಣ್ಣುಗಳ ವಿವಿಧ ಭಂಗಿಗಳ ಚಿತ್ರಗಳನ್ನು ಕಾಣಬಹುದು.

ಸಂಗನಕಲ್ಲು : ಬಳ್ಳಾರಿಯಿಂದ ಸುಮಾರು ೮ ಕಿ.ಮೀ. ದೂರದಲ್ಲಿರುವ ಚಿಕ್ಕ ಗ್ರ್ರಾಮ ಇದಾಗಿದ್ದು ಊರನ್ನು ಆವರಿಸಿರುವ ಗುಡ್ಡದಲ್ಲಿ ಆವರಿಸಿರುವ ಗುಡ್ಡದಲ್ಲಿ ಆದಿ ಮಾನವನ ನೆಲೆಯಾಗಿದ್ದಿತು. ಇದಕ್ಕೆ ನಿದರ್ಶನವಾಗಿ ಆದಿ ಮಾನವ ನಿರ್ಮಿತ ಚಿತ್ರಗಳು ಕೆಲ ಅಪರೂಪದ ನಕ್ಷೆಗಳ ಚಿತ್ರಗಳನ್ನು ನಾವು ನೋಡಬಹುದಾಗಿದೆ.

ಚೆಳ್ಳಗುರ್ಕಿ : ಇದೊಂದು ಗಡಿಭಾಗದ ಶಿವಶರಣರ ಜಾಗೃತ ಕ್ಷೇತ್ರ ಮಹಾತಪಸ್ವಿ ಎಂದೆನಿಸಿದ ಎರ್ರಿತಾತನವರು ಜೀವ ಸಮಾಧಿಯನ್ನು ಹೊಂದಿದ ಜಾಗೃತ ಸ್ಥಳವಾಗಿದೆ.ವಿಶಾಲವಾದ ಮರವಿದ್ದು ನಿತ್ಯ ತ್ರಿಕಾಲ ಪ್ರಜೆ ಉತ್ಸವಗಳು ಜರುಗುತ್ತವೆ.ನಾಡಿನುದ್ದಕೂ ಭಕ್ತರನ್ನು ಹೊಂದಿದೆ ಈ ಕ್ಷೇತ್ರ.

ಜೋಳದರಾಶಿ : ಇದೊಂದು ಗಡಿ ಭಾಗದ ಚೆಳ್ಳಗುರ್ಕಿಗೆ ಮೊದಲೇ ಬರುವ ಚಿಕ್ಕಗ್ರಾಮ.ಆದರೆ ಇದು ರಾಷ್ಟ್ರೀಯ ಖ್ಯಾತವೆತ್ತ ನಟ, ಗಾಯಕ, ಗಮಕಿಗಳಾಗಿದ್ದಂತಹ ದೊಡ್ಡನಗೌಡರಿಗರ ಜನ್ಮ ನೀಡಿದ, ಕಾರ್ಯಭೂಮಿಯಾಗಿದ್ದ ಸ್ಥಳ. ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರ ಮನೆ ಅವರ ಗಾಯನದ ಧ್ವನಿಸುರುಳಿಗಳು, ಅವರು ಬಳಸುತ್ತಿದ್ದ ವಸ್ತುಗಳು, ಗ್ರಂಥಭಂಡಾರಗಳನ್ನು ಒಳಗೊಂಡ ಗ್ರಾಮಾಂತರ ವಸ್ತು ಸಂಗ್ರಹಾಲಯವನ್ನು ಇಲ್ಲಿ ನಾವು ನೋಡಬಹುದು.

ಕೋಳೂರು : ಬಳ್ಳಾರಿಗೆ ೯ಕಿ.ಮೀ ಅಂತರದಲ್ಲಿರುವ ಕೋಳೂರಿನಲ್ಲಿ ಅಪರೂಪದ ಪಂಚಕೂಟ ದೇವಾಲಯ ಕಾಣಬಹುದು. ಇಲ್ಲಿ ಸೂರ್ಯನಾರಾಯಣನ ೪’ ಅಡಿ ಎತ್ತರದ ಶಿಲ್ಪವಿದೆ.ಸಮ ಭಂಗಿಯಲ್ಲಿ ನಿಂತಿರುವ ಈ ಮೂರ್ತಿಯ ಎರಡೂ ಕೈಗಳಲ್ಲೂ ಕಮಲಗಳು, ಎಡಬಲಗಳಲ್ಲಿ ಉಷೆ ಪ್ರತ್ಯುಷಿಯರ ಶಿಲ್ಪಗಳಿವೆ.

 

ಕುಡಿತಿನಿ ಶಾಖೋತ್ಪನ್ನ ಕೇಂದ್ರ