ವಿಹಂಗಮ ನೋಟ (ಬೆಟ್ಟಗಳು) :
೧. ಕುಮಾರಸ್ವಾಮಿ ಬೆಟ್ಟ.
೨. ರಾಮನ ಮಲೈ ಬೆಟ್ಟ.
೩. ಜಂಬುನಾಥ ಶಿಖರ.
೪. ನರಸಿಂಹ ದೇವರಗುಡ್ಡ.
೫. ಜರಮಲೆ ದುರ್ಗ.
೬. ಮಕ್ಕಳಿಗೆ ನೋಡಲು ಎತ್ತರದ ನೋಟ ಮನೋಹರ.
ನೈಸರ್ಗಿಕ ಸಂಪನ್ಮೂಲ : ಮ್ಯಾಂಗನೀಸ್, ತಾಮ್ರ, ಸೀಸ, ಜಿಪ್ಸಂ, ಮ್ಯಾಗ್ನೈಟ್, ಕ್ಯಾಲ್ಸೈಟ್, ಗಾರ್ನೆಟ್, ರೆಡ್ ಆಕ್ಸೈಡ್, ಕಾವಿ ಮಣ್ಣು, ಸೋಪಿನಕಲ್ಲು ಈ ಎಲ್ಲಾ ಗಣಿಗಳು ನೋಡಲು ಮಕ್ಕಳಿಗೆ ಲಭ್ಯ.
ಅರಮನೆ : ಘೋರ್ಪಡೆ ರಾಜವಂಶದ ಅಧಿಕೃತ ರಾಜನಿವಾಸ, ಮೈಸೂರು ಅರಮನೆ ಶೈಲಿಯಲ್ಲಿ ೧೯೨೮ರಲ್ಲಿ ಇದರ ನಿರ್ಮಾಣ. ಸುಂದರೆ ಕಮಾನುಗಳು, ಮೊಗಸಾಲೆಗಳು, ಪರಿಚಾರಕ ನಿವಾಸಗಳು, ಇದರ ವಿಸ್ತೀರ್ಣ ೧೫೦ ಅಡಿ ಉದ್ದ, ೧೫೦ ಅಡಿ ಅಗಲ, ಅರಮನೆ ಸುತ್ತಳತೆ ೧೫ – ೨೦ ಎಕರೆ ವಿಸ್ತೀರ್ಣ. ಇದು ಅರಸರ ಖಾಸಗೀ ಒಡೆತನದಲ್ಲಿ ಇಂದಿಗೂ ಸುಸಜ್ಜಿತವಾಗಿದೆ. ವಸ್ತುಸಂಗ್ರಹಾಲಯದಲ್ಲಿ ರಾಜರ ಕಾಲದ ಕುರುಹುಗಳನ್ನು ನೋಡಬಹುದು.
ಕುಮಾರಸ್ವಾಮಿ ದೇವಸ್ಥಾನ
ಸಂಡೂರಿನಿಂದ ೧೨ ಕಿ.ಮೀ. ದೂರದಲ್ಲಿರುವ ಚಾಲಿಕ್ಯ ಶೈಲಿಯ ವಿಶೇಷ ಶಿಲೆಯಲ್ಲಿ ನಿರ್ಮಾಣವಾದ ಭವ್ಯ ಕುಮಾರಸ್ವಾಮಿ ಮಂದಿರ. ಪಕ್ಕದಲ್ಲಿ ಸುಂದರ ಪುಷ್ಕರಣಿ. ಸುಮಾರು ೯ ನೇ ಶತಮಾನಕ್ಕೂ ಆಚೆಗಿನ ಇತಿಹಾಸದ ಬೆಳಕು ಚೆಲ್ಲುತ್ತದೆ. ಘೋರ್ಪಟೆ ಮನೆತನದ ಕುಲದೇವರು. ಪಕ್ಕದಲ್ಲಿ ಜನ್ಮದಾತೆ ಪಾರ್ವತಿದೇವಿ ದೇಗುಲವೂ ನೋಡಲು ರಮಣೀಯ. ಇಂದಿಗೂ ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸುವ ಕುಲದೈವವಾಗಿದೆ.
ವಿಭೂತಿ ಕಣಿವೆ : ಕರ್ನಾಟಕ ರಾಜ್ಯದಲ್ಲಿ ಎಲ್ಲೂ ಸಿಗದ ವಿಶೇಷ ಸ್ಥಾನ ಶೈವ ಆರಾಧಕರಿಗೆ ಅತಿ ಮುಖ್ಯ ಸ್ಥಳ. ಇದಕ್ಕೆ ವೈಜ್ಞಾನಿಕ ಪೌರಾಣಿಕ ಹಿನ್ನೆಲೆಗಳು ಸಾಕಷ್ಟಿವೆ. ಪೂಜೆಗೆ ಇಂದಿಗೂ ಬಳಸುತ್ತಾರೆ.
ಪೌರಾಣಿಕ ಹಿನ್ನೆಲೆ : ಜಗನ್ಮಾತೆ ಪಾರ್ವತಿದೇವಿ ತನ್ನ ಮಗನಾದ ಕುಮಾರಸ್ವಾಮಿಗೆ ಮದುವೆ ಮಾಡಲು ನಿಶ್ಚಯಿಸಿ ವಧು ಗೊತ್ತುಪಡಿಸಿದಾಗ ಮಗನಾದ ಕುಮಾರಸ್ವಾಮಿಯು ತಾಯಿಯನ್ನು ಕೇಳಲಾಗಿ ವಧು ನನ್ನಂತೆ ಇದ್ದಾಳೆ ಎಂದಾಗ. ಕುಮಾರಸ್ವಾಮಿ ಹಾಗಾದರೆ ಆಕೆಯು ತಾಯಿಯಂತೆ ಎಂದು ನಿರಾಕರಿಸಿದಾಗ ತಾಯಿ ಕೋಪದಿಂದ ನನ್ನ ಮಾತು ಕೇಳದ ನೀನಿ ನಾ ಕೊಟ್ಟ ಹಾಲನ್ನು ಹಿಂದಿರುಗಿಸಿ ಕೊಡು ಎಂದಾಗ ಕುಮಾರಸ್ವಾಮಿ ಬಾಯಿಂದ ಬಂದ ಹಾಲು ವಿಭೂತಿ ಕಣಿವೆ ಆಯಿತು. ರಕ್ತವೆಲ್ಲ ಮ್ಯಾಂಗನೀಸ್ ಸುರುಮವಾಯಿತೆಂಬ ಕಥೆ.
ಭೈರವತೀರ್ಥ : ಸಂಡೂರಿನಿಂದ ಈಶಾನ್ಯ ಭಾಗಕ್ಕೆ ಸುಮಾರು ೧೦ – ೧೨ ಕಿ.ಮೀ. ದೂರದಲ್ಲಿ ಸುಂದರೆ ದುರ್ಗಮವಾದ ಎತ್ತರದ ಕಣಿವೆ ಪ್ರದೇಶ ಪ್ರಕೃತಿ ಸವಿಯಲು ಸೂಕ್ತಸ್ಥಳ. ಇಲ್ಲಿ ಈಶ್ವರನ ಲಿಂಗವಿದೆ.
ಈಶ್ವರ ತೀರ್ಥ : ಸಂಡೂರಿನಿಂದ ಈಶಾನ್ಯ ಭಾಗಕ್ಕೆ ಪ್ರಕೃತಿ ಸಂಪತ್ತು ವೀಕ್ಷಿಸಲು ಸಸ್ಯಗಳಿಂದ ಕೂಡಿದ ಪ್ರದೇಶ ಇಲ್ಲಿ ನೀರಿನ ಪುಷ್ಕರಣೆ ಮತ್ತು ಶಿವನ ದೇವಸ್ಥಾನ ಇದೆ.
ರಾಮಘಡ್ : ಕಡಿದಾದ ಬೆಟ್ಟಗುಡ್ಡಗಳಿಂದ ಪ್ರಕೃತಿ ಸಸ್ಯರಾಶಿಯಿಂದ ತುಂಬಿದ ಪ್ರದೇಶ. ಇದು ಸಂಡೂರಿನಿಂದ ಸುಮಾರು ೧೫ ಕಿ.ಮೀ. ಅಂತರದಲ್ಲಿದೆ. ಅಲ್ಲಿ ಬ್ರಿಟೀಷ್ ಅಧಿಕಾರಿಗಳ ಪುರಾತನ ವಸತಿ ಗೃಹಗಳು ಸೇನಾತುಕಡಿಗಳಿದ್ದ ಸ್ಥಳ.
ಹರಿಶಂಕರ ತೀರ್ಥ : ಇದು ಸಂಡೂರಿನಿಂದ ೧೨ ಕಿ.ಮೀ. ಕಾಡಿನ ಮಾರ್ಗ ಮಧ್ಯದಲ್ಲಿ ಅತೀ ತಿಳಿನೀರಿನ ಜಲಧಾರೆಗಳು, ನೀರಿನ ಬುಗ್ಗೆಗಳಿರುವ ರಮಣೀಯ ಸ್ಥಳ ನೋಡಲು ಮನೋಹರ.
ನಾರಿಹಳ್ಳ : ಸಂಡೂರಿನ ಮುಖ್ಯ ಆಕರ್ಷಕ ಮಳೆನೀರಿನ ಸಂಗ್ರಹ ಸ್ಥಳ. ಇಲ್ಲಿ ಮಳೆಗಾಲದಲ್ಲಿ ನೀರಿನಿಂದ ಶೇಖರಣೆಗೊಂಡ ಜಲರಾಶಿ, ಹೊರದೇಶದ ಮಾದರಿ ದೈವ ನಿರ್ಮಿತ ಪ್ರಕೃತಿ ಸ್ಥಳ, ನರಿಗಳು ಇಂದಿಗೂ ಹಿಂಡು ಹಿಂಡಾಗಿ ರಾತ್ರಿವೇಳೆ ನೀರುಕುಡಿಯಲು ಬರುತ್ತವೆ. ಇಲ್ಲಿ ಬೋಟಿಂಗ್ ವ್ಯವಸ್ಥೆ ಇದೆ. ಇಂದಿಗೂ ಚಲನಚಿತ್ರ ಚಿತ್ರೀಕರಣಕ್ಕೆ ಆಯ್ದುಕೊಳ್ಳುವ ಸೊಬಗಿನ ಸ್ಥಳ.
ವಿರಕ್ತಮಠ : ರಾಜರುಗಳ ಕಾಲದಿಂದ ಪೋಷಿಸಲ್ಪಡುವ ಸರ್ವರಿಗೂ ಊಟ ವಸತಿಯ ತಾತ್ಕಾಲಿಕ ತಂಗುದಾಣ ಹಾಗೂ ಧಾರ್ಮಿಕ ತಾಣ.
ನವಿಲುತೀಥ : ಸಂಡೂರಿನ ಅತಿ ಸುಂದರ ಪ್ರದೇಶ. ಇಲ್ಲಿ ನವಿಲುಗಳು ವಾಸಿಸುತ್ತವೆ ಎಂಬ ವಾಡಿಕೆ. ಸಂಡೂರಿನಿಂದ ೧೨ ಕಿ.ಮೀ. ದೂರದಲ್ಲಿ ಅತಿ ಎತ್ತರ ಸ್ಥಳ ಇದಾಗಿದ್ದು ಸುಂದರ ನೀರಿನ ಸರೋವರ ಮನೋಹರವಾಗಿದೆ.
ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ : ಗುಲ್ಬರ್ಗ ವಿಶ್ವವಿದ್ಯಾನಿಲಯದ ಕೇಂದ್ರ. ಸ್ನಾತಕೋತ್ತರ ಕೇಂದ್ರ ಭವ್ಯ ಕಟ್ಟಡ. ಸುಂದರ ಪರಿಸರದ ತಾಣ.
ಅದಿರು ಕಾರ್ಖಾನೆಗಳು :
ಸಂಡೂರು ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಸ್ವಾಮ್ಯದ ಅದಿರು ವಿಲೇವಾರಿ ಸುವ್ಯವಸ್ಥಿತ ಗಣಿಗಾರಿಕೆ ಯಂತ್ರಗಳಿಂದ ವ್ಯವಸ್ಥಿತ ಎನ್.ಎಂ.ಡಿ.ಸಿ. ಸಂಸ್ಥೆ ನೋಡಲು ಸುಂದರವಾಗಿದೆ.
ತುಂಬಾ ಚೆನ್ನಾಗಿದೆ.