೧. ಕೆಂಚನಗುಡ್ಡ : ಸಿರುಗುಪ್ಪದಿಂದ ಸುಮಾರು ಎರಡು ಮೈಲುದೂರ ಐತಿಹಾಸಿಕ ದಾಖಲೆಗಳ ಅನ್ವಯ ಇದು ಕಾಂಚನಗಡ. ಈ ಕಾಂಚನಗಡದ ರಾಣಿಯೇ ರಾಜಾರಾಣಿ ತಂಗಮ್ಮನವರು. ಹಳೆಯಗ್ರಾಮ ಪ್ರವೇಶಿಸುವಾಗಲೇ ಪ್ರಕೃತಿಯ ಸೊಬಗು ಪ್ರಾರಂಭ.

ಇಲ್ಲಿ ರಾಜಾರಾಣಿ ತಂಗಮ್ಮನವರ ಸಂಬಂಧಿಕರ ಸಮಾಧಿಗಳು ಹಾಗೂ ರಾಣಿ ಉಪಯೋಗಿಸುತ್ತದ್ದ ಉಯ್ಯಾಲೆ ಇದರ ಮುಂದೆ ನಿಂತಾಗ ಹಂಪೆಯ ತುಲಾಭಾರ ನೆನಪಾಗುತ್ತದೆ.

 

ಶ್ರೀ ಕೇತಳೇಶ್ವರ ಸ್ವಾಮಿ ದೇವಸ್ಥಾನ

ಈ ದೇವಾಲಯವು ಈಗ ಶ್ರೀ ಶಂಭುಲಿಂಗೇಶ್ವರಸ್ವಾಮಿ ದೇವಸ್ಥಾನವೆಂದೂ ಕರೆಯಲ್ಪಡುತ್ತದೆ.

ಚಾರಿತ್ರಿಕ ಶಾಸನಗಳ ಮೇರೆಗೆ ಚಾಲುಕ್ಯರ ಶ್ರೇಷ್ಠ ದೊರೆ ತ್ರಿಭುವನಮಲ್ಲನ ಪಟ್ಟ ಮಹಿಷಿ ಅಭಿನಯ ಸರಸ್ವತಿ ಪಿರಿಯ ಕೇತಾಳದೇವಿಯವರು ಕಟ್ಟಿಸಿದ ದೇವಾಲಯವಿದು.

ತುಂಗಭದ್ರಾ ನದಿಯ ದಡದಲ್ಲಿ ಈ ದೇವಾಲಯವಿದೆ.ಬರಬರುತ್ತಾ ಮೂಲ ಶಂಭುಲಿಂಗೇಶ್ವರ ದೇವಸ್ಥಾನದ ಹೆಸರೇ ಈ ದೇವಾಲಯಕ್ಕೆ ಬಂದುಬಿಟ್ಟಿದೆ ಸಧ್ಯ ಈ ದೇವಸ್ಥಾನದ ಆವರಣದಲ್ಲಿ ಮನೆ ವಸತಿಗಳನ್ನು ನಿರ್ಮಿಸಿ ವಿವಾಹ ಇನ್ನಿತರ ಕಾರ್ಯಗಳಿಗೆ ಅನುಕೂಲತೆಯನ್ನು ಒದಗಿಸಿದ್ದಾರೆ.

 

ಹಳೇಕೋಟೆ ವೀರಭದ್ರೇಶ್ವರ ಸ್ವಾಮಿ

ಸಿರುಗುಪ್ಪದಿಂದ ಸುಮಾರು ೮ ಕಿ.ಮೀ ದೂರ ಇದೆ. ಇಲ್ಲಿಯ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಪುರಾತನ ಶೈಲಿಯ ಕಟ್ಟಡವಾಗಿದ್ದು ಅತೀ ಸುಂದರವಾಗಿದೆ. ಪ್ರತೀ ವರ್ಷ ಜಾತ್ರೆಯು ನಡೆಯುತ್ತದೆ. ಈಲ್ಲೆಯ ತುಂಬಾ ಪ್ರಸಿದ್ಧವಾದ ಜಾತ್ರೆ ವಶೇಷವಾಗಿ ಉದಯಕಾಲದಲ್ಲಿ ನಡೆಯುವ ಅಗ್ನಿಕುಂಡ ಕಾರ್ಯಕ್ರಮಕ್ಕೆ ಜನರು ಭಯ ಕೌತುಕದಿಂದ ಹಾಜರಾಗುತ್ತಾರೆ. ಹರಕೆಯಂತೆ ಅಗ್ನಿಕುಂಡ ತುಳಿಯುತ್ತಾರೆ.

ಇದೊಂದು ಭಕ್ತಿಯ ರಮ್ಯ ದೃಶ್ಯ.ಸಿರುಗುಪ್ಪ ತಾಲೂಕಿನಲ್ಲಿ ಒಮ್ಮೆ ನೋಡಲೇ ಬೇಕಾದ ಜಾತ್ರೆಯಾಗಿದೆ.

 

ಗಂಗಾಧರ ಸ್ವಾಮಿ ದೇವಾಲಯ :

ಕಾಂಚನಗಡದ ಮಹಾದ್ವಾರದ ಹೆಬ್ಬಾಗಿಲು ದ್ವಾರ ನಿಂತು ವೀಕ್ಷಿಸಿದಾಗ ಶಿಖರದ ಮೇಲೆ ಕಂಡುಬರುವದೇ ಗಂಗಾಧರಸ್ವಾಮಿ ದೇವಾಲಯ.

ಈಗ ದೇವಾಲಯದಲ್ಲಿ ಪೂಜೆ ನಡೆಯುತ್ತಿಲ್ಲವೆಂದು ತಿಳಿದುಬಂದಿದೆ.ಆದರೆ ವೀಕ್ಷಿಸಲು ಹೊರಟ ಪ್ರಯಣಿಗರಿಗೆಅಲ್ಲಿಯ ಯಾವುದೋ ಶಕ್ತ ಭಕ್ತಿಯ ಪರವಶತೆಗೊಯ್ಯುತ್ತದೆ.

ಈ ಕಟ್ಟಡದ ವೈಶಿಷ್ಠತೆ ಮನಸೆಳೆಯುತ್ತದೆ.ಇಟ್ಟಿಗೆಯ ಕೈಚಳಕದ ರಚನೆ, ಆಲಯದ ಪ್ರವೇಶಕ್ಕೆ ಮುನ್ನ ಬರುವ ದುರ್ಗಮ ಕೋಟೆಯ ಕಟ್ಟಡ ಎಲ್ಲವೂ ಘನತೆಯನ್ನು ಪ್ರತಿಬಿಂಬಿಸುತ್ತವೆ.

ಸಂಪೂರ್ಣ ತೈಎಲವರ್ಣ ಚಿತ್ರಗಳಿಂದ ಕೂಡಿದ್ದ ದೇವಾಲಯದಲ್ಲಿ ಅಳಿದು ಉಳಿದಿರುವ ಕೆಲ ತೈಲವರ್ಣ ಚಿತ್ರಗಳಿವೆ. ಇವು ಹಂಪೆಯ ವಿರುಪಾಕ್ಷಸ್ವಾಮಿ ದೇವಸ್ಥಾನದ ಕಲ್ಯಾಣ ಮಂಟಪದ ಚಿತ್ರಗಳನ್ನು ಹೋಲುತ್ತವೆ.

 

ಶ್ರೀ ಶ್ರೀ ವಸುಧೇಂದ್ರ ತೀರ್ಥ ಶ್ರೀಪಾದಂಗಳವರ ವೃಂದಾವನ

ಕೆಂಚನಗುಡ್ಡದಲ್ಲಿ ಪ್ರಧಾನ ಇನ್ರ್ನೆಂದು ಆಕರ್ಷಣೆ,ಆಧ್ಯಾತ್ಮಿಕ ತಪಸ್ವೀ ಶಕ್ತಿಯಿಂದ ಪ್ರಸಿದ್ಧರಾಗಿದ್ದ ಶ್ರೀಪಾದಂಗಳವರ ವೃಂದಾವನ.

ಶ್ರೀ ಶ್ರೀಮದ್ ವಸುಧೇಂದ್ರ ತೀರ್ಥರು ಪೂರ್ವಾಶ್ರಮದಲ್ಲಿ ಪುರುಷೋತ್ತಮಾಚಾರ್ಯರು. ಇವರು ೧೭೪೫-೪೬ ರಲ್ಲಿ ಶ್ರೀ ಶ್ರೀ ವಾದೀಂದ್ರ ತೀರ್ಥರಿಂದ ಆಶ್ರಮ ಸ್ವೀಕರಿಸಿ ೧೭೫೦-೫೧ ರಲ್ಲಿ ವೇದಾಂತ ಸಾಮ್ರಾಜ್ಯವನ್ನು ಆಳಿದರು.

ಶ್ರೀಪಾದಂಗಳವರು ಮಂತ್ರಾಲಯದ ಮಠದ ಸಮಸ್ಯೆಯನ್ನೂ ಆಗಿನ ನವಾಬನಾಗಿದ್ದ ಸಬ್ಬಲ್ ಜಂಗ್ ಬಹದ್ದೂರ್ ನೊಂದಿಗೆ ತವ್ಮ್ಮಗಳ ತಪಶಕ್ತಿ ಹಾಗೂ ಜ್ಞಾನಮಾರ್ಗದಿಂದ ರಾಜಕೀಯ ಸಮಸ್ಯೆ ಪರಿಹರಿಸಿ ಮಠದ ಆಸ್ತಿಯನ್ನು ಶಾಶ್ವತವಾಗಿ ಮಠಕ್ಕೆ ಸೇರುವಂತೆ ಮಾಡಿದರು.

ಪ್ರತಿ ವರ್ಷ ಆಶ್ವೀಜ ಬಹುಳ ಸಪ್ತಮಿಯಂದು ಯತಿ ಸಾರ್ವಭೌಮರ ಆರಾಧನೆಯು ಕೆಂಚನಗುಡ್ಡದಲ್ಲಿ ಅತಿ ವೈಭವದಿಂದ ನಡೆಯುತ್ತದೆ.ಇದೊಂದು ತಾಲೂಕಿನ ಪ್ರೇಕ್ಷಣೀಯ ಜಾಗೃತ ಸ್ಥಳವಾಗಿದೆ.

 

ಆಣೆಕಟ್ಟುಗಳು

ಇಲ್ಲಿಯ ಆಣೆಕಟ್ಟುಗಳು ಬಹು ಪುರಾತನ ಕಾಲದವು. ಇವು ವಿಜಯನಗರದ ಅರಸರಾಗಿದ್ದ ಶ್ರೀ ದೇವರಾಯನ ಕಾಲದವು. ಇವು ಸುಮಾರು ಕ್ರಿ.ಶ.೧೪೬೬ ಅಥವಾ ಶಾಲಿವಾಹನ ಶಕೆ ೧೩೩೮ ರ ವ್ಯಯನಾಮ ಸಂವತ್ಸರದಲ್ಲಿ ಕಟ್ಟಲ್ಪಟ್ಟಿವೆ.ಈ ಬಗ್ಗೆ ಕಟ್ಟಡದ ಆಧಾರಕ್ಕೆ ಒಂದು ಶಾಸನವನ್ನೂ ಕೆಂಚನಗುಡ್ಡದ ಆಣೆಕಟ್ಟಿನಲ್ಲಿ ಕಾಣಬಹುದು. ಶತಮಾನಗಳು ಕಳೆದಿರುವ್ಯದರಿಂದ ಆಣೆಕಟ್ಟುಗಳು ಶಿಥಿಲಗೊಂಡಿವೆ.ಇವುಗಳನ್ನು ಒಣ ಕಲ್ಲುಗಳಿಂದ ಕಟ್ಟಿದ್ದಾರೆ.