ಹಂಪಿ: ಬಳ್ಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿದೆ ಹೊಸಪೇಟೆಯಿಂದ ೧೨ ಕಿ.ಮೀ ದೂರದಲ್ಲಿದೆ.

ವಿರುಪಾಕ್ಷ ದೇವಾಲಯ: ೧೫೧೦ ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಜೀರ್ಣೋದ್ಧಾರ ವಾಯಿತು .ವಿರುಪಾಕ್ಷ ದೇವಾಲಯಕ್ಕೆ ಮೂರು ಗೋಪುರಗಳಿವೆ.ಪಾತಾಳೇಶ್ವರ, ಮುಕ್ತಿ ನರಸಿಂಹ,ಸೂರ್ಯನಾರಾಯಣ ಗುಡಿಗಳಿವೆ, ಲಕ್ಷ್ಮಿನರಸಿಂಹ, ಮಹಿಷಾಸುರ ಮರ್ಧಿನಿ, ಶ್ರೀ ವೆಂಕಟೇಶ್ವರ ದೇವಾಲಯಗಳಿವೆ.

ಕಿಷ್ಕಿಂದ: ತ್ರೇತ್ರಾಯುಗದಲ್ಲಿ ಶ್ರೀ ರಾಮನು ವನವಾಸ ಮಾಡುತ್ತಾ ಈ ಸ್ಥಳಕ್ಕೆ ಬಂದು ಶ್ರೀ ಪಂಪಾಪತಿಯ ದರ್ಶನ ಪಡೆದು ಸುಗ್ರೀವ, ವಾಲಿ ಹನುಂತನನ್ನು ಭೇಟಿಯಾಗುತ್ತಾನೆ.

ಮಾತಂಗ ಬೆಟ್ಟ : ಈ ಮಾತಂಗ ಬೆಟ್ಟದ ಮೇಲೆ ಹೋದರೆ ಪರಿಸರ ರಮ್ಯ ನೋಟವನ್ನು ಸೊಗಸಾಗಿ ನೋಡಬಹುದು.

ಕೋದಂಡರಾಮ ದೇವಾಲಯ : ವಿರುಪಾಕ್ಷ ರಥ ಬೀದಿಯಿಂದ ಸಾಗಿ ಮುಂದೆ ಬಂದರೆ ತುಂಗಭದ್ರಾ ನದಿಯ ದಂಡೆಯ ಮೇಲೆ ಕಾಣಸಿಗುತ್ತದೆ.ಇಲ್ಲಿ ಒಚಿದೇ ಬಂಡೆಯಲ್ಲಿ ಶ್ರೀರಾಮ ಲಕ್ಷ್ಮಣ ಸೀತೆ ವಿಗ್ರಹಗಳನ್ನು ಕೆತ್ತಲಾಗಿದೆಸುಮಾರು ೬ ರಿಂದ ೯ ಅಡಿ ಎತ್ತರವಾಗಿದೆ.

ಯಂತ್ತೋದ್ಧಾರಕ ಆಂಜನೇಯ: ಈ ದೇವಾಲಯವು ಕೋದಂಡರಾಮನ ದೇವಾಲಯದ ಹಿಂಭಾಗದಲ್ಲಿದೆ,ಈ ಮೂರ್ತಿಯನ್ನು ವ್ಯಾಸರಾಯರು ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ಪ್ರತಿಷ್ಠಾಪಿಸಿದರು ಎಂದು ತಿಳಿದು ಬರುತ್ತದೆ.

ಅಚ್ಯುತರಾಯ ದೇವಸ್ಥಾನ: ಈ ದೇವಾಲಯವನ್ನು ಕೃಷ್ಣದೇವರಾಯನ ಸಹೋದರ ಅಚ್ಯುತದೇವರಾಯನಿಂದ ನಿರ್ಮಿತವಾಗಿದೆ.

ಪುರಂದರ ಮಂಟಪ , ಅರಸನ ತುಲಾಭಾರ, ವಿಜಯ ವಿಠಲ ದೇವಾಲಯ : ಶ್ರೀ ಕೃಷ್ಣದೇವರಾಯನು ೧೫೧೩ ರಲ್ಲಿ ಕಟ್ಟಿಸಿದನೆಚಿದು ತಿಳಿದುಬರುತ್ತದೆ. ಈ ದೇವಾಲಯದಲ್ಲಿ ಸಂಗೀತದ ಕಲ್ಲಿನ ಕಂಬಗಳಿವೆ.ಇವನ್ನು ಈಗಲೂ ಸಹ ನೋಡಬಹುದು ಹಾಗೂ ಸಂಗೀತವನ್ನು ಕೇಳಬಹುದು. ಈ ದೇವಾಲಯದ ಎದುರು ಭಾಗದಲ್ಲಿ ಕಲ್ಲಿನಿಂದ ಕೆತ್ತಿರುವ ಶಿಲಾ ರಥವಿದೆ, ಈ ದೇವಾಲಯದ ಪ್ರಾಂಗಣದಲ್ಲಿ ಕಲ್ಯಾಣ ಮಂಟಪ, ಸಭಾ ಮಂಟಪಗಳು ಇವೆ ಹಾಗೂ ಉತ್ತಮವಾದ ಕೆತ್ತನೆಗಳಿವೆ.

ಹೇಮಕೂಟ: ಹೇಮಕೂಟದಲ್ಲಿ ವಿಶಾಲವಾದ ಒಂದೇ ಬಂಡೆಯ ಮೇಲೆ ಅನೇಕ ಜೈನ ದೇವಸ್ಥಾನಗಳಿವೆ.

ಕಡ್ಲೇಕಾಳು ಗಣೇಶ : ಈ ಮೂರ್ತಿಯು ಏಕಶಿಲೆಯಿಂದ ನಿರ್ಮಿತವಾಗಿದೆ. ಸುಮಾರು ೧೮ ಅಡಿ ಎತ್ತರವಿದೆ.

ಸಾಸಿವೆಕಾಳು ಗಣೇಶ : ಈ ಮೂರ್ತಿಯು ಸುಮಾರು ೧೨ ಅಡಿ ಎತ್ತರವಿದೆ. ಇದರ ಪಕ್ಕದಲ್ಲಿ ಒಂದು ಶಿಲಾಶಾಸನವಿದೆ ಹಾಗೂ ಧಾನ್ಯ ಮಳಿಗೆಗಳು ಕಂಡುಬರುತ್ತವೆ.

ಕ್ರಿಷ್ಣ ದೇವಸ್ಥಾನ : ಶ್ರೀಕೃಷ್ಣದೇವರಾಯನು ಈ ದೇವಸ್ಥಾನವನ್ನು ಕಟ್ಟಿಸಿದನೆಂದು ೧೫೨೩ ರಲ್ಲಿ ಬಾಲಕ್ರಿಷ್ಣನ ವಿಗ್ರಹವನ್ನು ಉದಯಗಿರಿಯಿಂದ ತರಿಸಿ ಪ್ರತಿಷ್ಠಾಪಿಸಿದನು. ಆದರೆ ಈಗ ಆ ಮೂರ್ತಿಯು ಮದ್ರಾಸಿನ ವಸ್ತು ಸಂಗ್ರಹಾಲಯದಲ್ಲಿ ಇದೆ. ಹಾಗೂ ಇದರ ಎದುಗಡೆ ಮಾರುಕಟ್ಟೆಯ ಬೀದಿಯಿದೆ.. ಇಲ್ಲಿ ದವಸ ಧಾನ್ಯಗಳನ್ನು ಮಾರುತ್ತದ್ದರೆಂದು ತಿಳಿದು ಬಂದಿದೆ ಹಾಗೂ ಸುಂದರವಾದ ಪುಷ್ಕರಣಿಯಿದೆ.

ಉಗ್ರನರಸಿಂಹ :  ಈ ಮೂರ್ತಿಯನ್ನು ಯೋಗನರಸಿಂಹ ಲಕ್ಷ್ಮಿನರಸಿಂಹ ಮೂರ್ತಿ ಎಂದು ಕರೆಯುತ್ತಾರೆ. ಶ್ರೀ ಕೃಷ್ಣದೇವರಾಯನು ೧೫೨೮ ರಲ್ಲಿ ನಿರ್ಮಿಸಿದನು. ಇದು ದಾಳಿಕೋರರ ದಾಳಿಗೆ ಸಿಲುಕಿ ಭಗ್ನವಾಗಿದೆ.

ನೆಲಮನೆ ಶಿವ ದೇವಾಲಯ: ಈ ದೇವಾಲಯವನ್ನು ಪ್ರಸನ್ನ ವಿರುಪಾಕ್ಷ ದೇವಾಲಯವೆಂದು ಕರೆಯುತ್ತಾರೆ.

ಹಜಾರರಾಮ ದೇವಸ್ಥಾನ : ಈ ದೇವಾಲಯವು ಕೇವಲ ರಾಜರಿಗೆ ಮಾತ್ರ ಪ್ರವೇಶವಾಗಿತ್ತು. ರಾಜನು ದೇವರ ದರ್ಶನ ಪಡೆದು ಪಕ್ಕದಲ್ಲಿರುವ ರಾಜಸಭಾ ಹಾಲ್ ದರ್ಬಾರಿಗೆ ಹೋಗುತ್ತಿದ್ದನೆಂದು ತಿಳಿದುಬಂದಿದೆ. ಈ ದೇವಸ್ಥಾನದ ಕೋಟೆ ಗೋಡೆ ಸುತ್ತಲೂ ಸುಂದರಾವದ ಶ್ರೀ ರಾಮಾಯಣ ದರ್ಶನದ ಶಿಲಾ ಮೂರ್ತಿಗಳಿವೆ.

ಮಹಾನವಮಿಯ ದಿಬ್ಬ : ಇದನ್ನು ದಸರಾ ದಿಬ್ಬ ಎಂದು ಕರೆಯುತ್ತಾರೆ. ಇದರ ಸುತ್ತಲೂ ಆಶ್ಚರ್ಯಕರ ರೀತಿಯಲ್ಲಿ ಉಬ್ಬು ಚಿತ್ರಗಳು ಕೆತ್ತಲ್ಪಟ್ಟಿವೆ ಹಾಗೂ ಇದು ರಾಜ ಪ್ರಾಂಗಣಕ್ಕೆ ಹೊಂದಿಕೊಂಡು ಇದರ ಹತ್ತಿರ ವಿಜಯನಗರ ಕಾಲದ ಕಲ್ಲಿನ ಕಾಲುವೆಗಳು, ನೀರಿನ ಕೊಳಗಳು, ವಿಶೇಷ ಕೊಳಗಳು ಹಾಗೂ ರಾಜನ ಅರಮನೆ, ಸೈನಿಕರ ಮನೆಗಳು ಹಾಗೂ ಕಲ್ಲಿನ ಬಾಗಿಲನ್ನು ನೋಡಬಹುದು.

ಕಪ್ಪು ಕಲ್ಲಿನ ಬಾವಿ

ಸುಮಾರು ೧೯೭೬-೧೯೮೦ರ ಅವಧಿಯಲ್ಲಿ ಉತ್ಖನನದ ಸಚಿದರ್ಭದಲ್ಲಿ ಈ ಪುಷ್ಕರಣಿ ಸಿಕ್ಕಿದೆ. ಈ ಕಲ್ಯಾಣಿಯ ಪ್ರತಿಯೊಂದು ಕಲ್ಲು ಕಪ್ಪುಕಲ್ಲಿನದಾಗಿದ್ದು ಪ್ರತಿಯೊಂದು ಕಲ್ಲಿಗೂ ತೆಲುಗಿನಿಂದ ಸಂಖ್ಯೆಗಳನ್ನು ಬರೆಯಲಾಗಿದೆ.

ಲೋಟಸ್ ಮಹಲ್

ದಸರಾ ದಿಬ್ಬದ ಉತ್ತರದ ಕಡೆಗೆ ಇದೆ. ಕಮಲ ಮಹಲ್, ಚಿತ್ರಾಂಗಿಣಿ ಮಹಲ್ ಎಂತೆಲ್ಲ ಕರೆಯುತ್ತಾರೆ. ಇದು ಹಿಂದೂ ಮುಸಲ್ಮಾನರ ಶೈಎಲಿಂದ ಅಚ್ಚುಗಾರೆಯಿಂದ ನಿರ್ಮಿಸಲ್ಪಟ್ಟಿದೆ. ಇದು ೨ ಅಂತಸ್ತಿನಿಂದ ಕೂಡಿದೆ.ಎಂತಹ ಬೇಸಿಗೆಯಲ್ಲೂ ಇದು ತಂಪಾಗಿರುವಂತೆ ನೀರಿನ ಕೊಳವೆಗಳನ್ನು ಅಳವಡಿಸಲಾಗಿದೆ. ರಾಣಿಯು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸ್ಥಳವಾಗಿದೆ. ಈ ಅಂಕಣವನ್ನು ರಾಣಿಯ ಅರಮನೆಯ ಬುನಾದಿ ನೋಡಬಹುದು ಹಾಗೂ ಇದರ ಸುತ್ತಲೂ ಕೋಟೆ ಇದ್ದು ೩ ಕಾವಲು ಗೋಪುರಗಳಿವೆ.

ಗಜ ಶಾಲೆ : ಇದು ಅರಸನ ಪಟ್ಟದ ಆನೆಗಳನ್ನು ಕಟ್ಟಲು ನಿರ್ಮಿಸಿದ ಕಟ್ಟಡ. ಇದು ಇಂಡೋ ಆಂಗ್ಲ ಶೈಲಿಯಲ್ಲಿ ನಿರ್ಮಿತವಾಗಿದೆ.

ರಾಣಿಸ್ನಾನಗೃಹ : ರಾಣೀಯರ ಸ್ನಾನ ಗೃಹವು ಅಚ್ಚುಗಾರೆಯಿಂದ ನಿರ್ಮಿತವಾಗಿದೆ ಹಿಂದೂ ಹಾಗೂ ಮುಸಲ್ಮಾನರ ಶೈಲಿಯ ರೀತಿಯಲ್ಲಿ ನಿರ್ಮಿತವಾಗಿದೆ.

ಜಂಬೂನಾಥ ದೇವಸ್ಥಾನ, ಅಂಜನಾದ್ರಿ ಪರ್ವತ : ಆಂಜನೇಯ ಜನ್ಮತಾಳಿದ ಅಂಜನಾದ್ರಿ ಪರ್ವತವನ್ನು ನೋಡಬಹುದು. ಈ ಪರ್ವತಕ್ಕೆ ಹೋಗುವಾಗ ಪಂಪಾಸರೋವರವನ್ನು ನೋಡಬಹುದು.

ಕಮಲಾಪುರದ ವಸ್ತುಸಂಗ್ರಹಾಲಯ : ಈ ವಸ್ತುಸಂಗ್ರಹಾಲಯಕ್ಕೆ ನಾವು ಭೇಟಿ ಕೊಟ್ಟರೆ ಹಂಪಿಯ ವಿಜಯನಗರದ ಸುಂದರ ತಾಣದ ಒಂದು ನೋಟವನ್ನು ಒಂದು ಮಾದರಿಯ ರೂಪದಲ್ಲಿ ನಾವು ಕಾಣಬಹುದು. ಈ ಮಾದರಿಯನ್ನು ನೋಡುವದರಿಂದ ಹಂಪಿಯ ಪ್ರೇಕ್ಷಣೀಯ ಸ್ಥಳಗಳ ಪರಿಚಯ ಸುಂದರವಾದ ಪ್ರಾಕೃತಿಕ ಗುಡ್ಡಗಳ ನೈಸರ್ಗಿಕ ಪರಿಚಯವಾಗುತ್ತದೆ.ಉತ್ಖನದಲ್ಲಿ ದೊರೆತಿರುವ ವಿಗ್ರಹಗಳುವಿಜಯನಗರಕಾಲದ ಚಿನ್ನದ ನಾಣ್ಯಗಳು, ಅವರು ಬಳಸುತ್ತಿದ್ದ ಆಯುಧಗಳು ಹಾಗೂ ವಿಜಯನಗರವು ಪುಂಡರಿಂದ ಭಗ್ನಗೊಳಗಾದ ಮೂರ್ತಿಗಳನ್ನು ನೋಡಬಹುದು.

ತುಂಗಭದ್ರಾ ಆಣೆಕಟ್ಟೆ : ಇದು ಹೊಸಪೇಟೆಯಿಂದ ೪ ಕಿ.ಮೀ ದೂರದಲ್ಲಿದೆ.ಇದರ ಕೆಳಬದಿಯಲ್ಲಿ ಸುಂದರವಾದ ಬೃಂದಾವನವಿದೆ. ಈ ಆಣೆಕಟ್ಟೆ ತ್ತಿರ ಸರ್ಕಾರಿ ಅತಿಥಿಗೃಹವಿದೆ. ಈ ಬೃಂದಾವನವನದಲ್ಲಿ ವಿವಿಧ ಬಣ್ಣ ರೀತಿಯ ಕಾರಂಜಿಗಳು ರಾತ್ರಿ ವೇಳೆ ಬಣ್ಣದ ದೀಪಗಳಿಂದ ಅಲಂಕೃತವಾದ ಕಾರಂಜಿಯನ್ನು ನೋಡಲು ಮನಮೋಹಕವಾಗಿದೆ.

ತುಂಗಭದ್ರಾ ಆಣೆಕಟ್ಟೆ

ಕರಡಿಧಾಮ : ಕಮಲಾಪುರದಿಂದ ಬಳ್ಳಾರಿಗೆ ಹೋಗುವ ಮಾರ್ಗ ಮಧ್ಯೆ ಸುಮಾರು ೧೨ ಕಿ.ಮೀ. ದೂರ ದಾರಿಯಲ್ಲಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ :

ಉದಯಗೋಳ ಮತ್ತು ನಿಘಂಟು: ಇಲ್ಲಿ ಅಶೋಕನ ಶಿಲಾ ಶಾಸನಗಳಿವೆ.

ಹಿರೇಬೆಣಕಲ್ : ಇದು ಆನೇಗೊಂದಿಯಿಂ ಹೊಸಪೇಟೆಗೆ ಬರುವ ಮಾರ್ಗದಲ್ಲಿ ಸಿಗುತ್ತದೆ.ಈ ಗುಡ್ಡದ ಮೇಲೆ ಹೋದರೆ ಸುಮಾರು ೮ ಅಡಿಗಳಷ್ಟು ಎತ್ತರದ ಆದಿಮಾನವರ ಮನೆಗಳು ಸಿಗುತ್ತವೆ.

ಅಕ್ಕ ತಂಗಿಯರ ಗುಡ್ಡ : ಕಮಲಾಪುರದಿಂದ ಹಂಪಿಗೆ ಹೋಗುವ ಮಾರ್ಗದಲ್ಲಿ ಕಂಡುಬರುತ್ತದೆ.

ಪಟ್ಟಣದ ಎಲ್ಲಮ್ಮ ದೇವಾಲಯ : ಇದು ಹಜಾರರಾಮ ದೇವಾಲಯದ ಮುಂಭಾಗದಲ್ಲಿ ಕಂಡುಬರುತ್ತದೆ.

ಮರಿಯಮ್ಮನಹಳ್ಳಿ ನಾರಾಯಣ ದೇವರ ಕೆರೆ : ಇದು ತುಂಗಭದ್ರಾ ಹಿನ್ನೀರಿನ ಹತ್ತಿರ ಕಂಡುಬರುತ್ತದೆ. ವ್ಮರಿಯಮ್ಮನಹಳ್ಳಿಯಲ್ಲಿ ಆಂಜನೇಯ ದೇವಸ್ಥಾನ ಕಂಡುಬರುತ್ತದೆ. ಅದರ ಪಕ್ಕದಲ್ಲಿ ರಾಮಲಕ್ಷ್ಮಣ ದೇವಸ್ಥಾನವಿದೆ. ಈ ಊರಿನ ವಿಶೇಷತೆಯೆಂದರೆ ೨ ರಥಗಳು ಶ್ರೀರಾಮನವಮಿ ದಿವಸ ಆಂಜನೇಯ ಶ್ರೀರಾಮನ ರಥಗಳನ್ನು ಎಳೆಯುತ್ತಾರೆ.

ಚರ್ಚ್‌ಗಳು : ಹೊಸಪೇಟೆ ತಾಲೂಕಿನಲ್ಲಿ ದೇವಾಲಯ ಮಸೀದಿಗಳಂತೆ ಕ್ರೈಸ್ತರ ಚರ್ಚ್‌ಗಳು ಕಂಡು ಬರುತ್ತವೆ. ಮೊದಲಯದಾಗಿ ಹೊಸಪೇಟೆಯ ಕೇಂದ್ರಭಾಗದಲ್ಲಿರುವ ಪವಿತ್ರ ಇಗರ್ಜಿಯ ಕ್ಯಾಥೋಲಿಕ್‌ಗೆ ಸಂಬಂದಿಸಿದೆ.

ವಿಜಯನಗರ ಕಾಲದ ನೀರಾವರಿ ವ್ಯವಸ್ಥೆಯು ಪ್ರಮುಖವಾಗಿದೆ. ಕಮಲಾಪುರದ ಕೆರೆಯಿಂದ ಅವರು ರಾಜ್ಯಕ್ಕೆ ನೀರಾವರಿ ಒದಗಿಸುತ್ತಿದ್ದರು ಹಾಗೆಯೇ ಅವರು ಕಟ್ಟಿದ ಸಣಾಪುರ ಆಣೆಕಟ್ಟು ಇಂದಿಗೂ ನೋಡಬಹುದು.

ಹೊಸೂರಮ್ಮ ದೇವಾಲಯ 

ವಾಲಿಕಾಷ್ಟ : ವೆಂಕಟಾಪುರದ ಸಮೀಪವಿರುವ ಬೂದಿ ದಿಬ್ಬವನ್ನು ವಾಲಿಕಾಷ್ಟ ಅಥವಾ ವಾಲಿ ದಿಬ್ಬ ಎಂದು ಕರೆಯುತ್ತಾರೆ.