ದೃಶ್ಯ : 10

ತಾರಾ ಮಲ್ಲಮ್ಮ ಸೇರಿ, ನನ್ನನ್ನು ಈ ರೀತಿ ಮಾಡಿದರೆಂದು ಬಲವಂತ ತಾಪ ಪಡುತ್ತಾ ಅಣ್ಣನ ದಾರಿ ಕಾಯುತ್ತ, ಮನಸ್ಸಿನಲ್ಲಿ ಮರುಗುತ್ತಿದ್ದನು.

ಬಲವಂತ

ಅಣ್ಣಾ ಯೆಂದ ಬಂದಾನೊ
ಕಾಯುವೆ ಅಣ್ಣನ ದಾರಿ ॥
ಏನಾತೊ ಎನ್ನ ಜನ್ಮಾ
ಆಗೇತೊ ನಾಯಿ ಪಾಡಾ
ಅತ್ತಿಗಿ ಮಾಡ್ಯಾಳೊ
ಮಾಡಿಕಿ ಮಾಡಿಸ್ಯಾಳೊ
ಮಲ್ಲಮ್ಮ ಹಚ್ಚಾಳೊ
ನನ್ನ ಮಾರಿಗಿ ಮಡಿ ॥
ಮಲ್ಲಿ ಮಾಡ್ಯಾಳೊ
ನನ್ನ ಮನಕ ಘಾತ
ನನ್ನ ಮರಗದ ಶಾಪ
ಹತ್ತಬೇಕೊ ಅವರಿಗೆ ಪಾಪ ॥

ಅಣ್ಣ ಮಾಡ್ಯಾಣುನನ್ನ ಜೋಪಾನ
ಈಟಿರತ ಪ್ರೀತಿಯಿಂದಸಾಕಿ ಬೆಳಿಸ್ಯಾನೊ
ತಾಯಿ ತಂದಿ ಗುರುತುಇದ್ದಿಲೋ ನನಗ
ಆಡಿನ ಮಲಿಯಂಗಜೋಡಯಿದ್ದೆವು
ಚಿಲಕದ ಕೊಂಡಿಯಂಗಬೆಸೆದೆ ಬಂದೇವು
ತಾರಾ ಹರಿಸ್ಯಾಳೊಅಣ್ಣ ತಮ್ಮರ ಜೋಡಿ
ಅಣ್ಣನ ಮಾರಿ ನೋಡಿಬಿಡುವೇನು ನಾ ಪ್ರಾಣ
ಸತ್ಯುಳ್ಳ ರಾಮಲಿಂಗನೋಡಿಕೊಳ್ಳಲಿ ॥

* * *

ದೃಶ್ಯ : 11

ಬಲವಂತ ನಾಯಿಯಾಗಿ ಹೋದನೆಂದು ತಾರಾ, ಮಲ್ಲಮ್ಮ ತುಂಬ ಸಂತೋಷಪಟ್ಟರು. ನಾಳೆ ಗಂಡ ಬಂದ ಕೇಳಿದರೆ ಬಲವಂತ ಮನೆಯಲ್ಲಿ ಬಂಗಾರ ತೆಗೆದುಕೊಂಡು ಮನೆ ಬಿಟ್ಟು ಹೋಗಿದ್ದಾನೆಂದು ಹೇಳುವ ಹಂಚಿಕೆ ಮಾಡಿದರು.

ತಾರಾ

ಮಲ್ಲಮ್ಮ ತೀರಿತನಮ್ಮ ಪಂಥ
ನಾಯಾಗಿ ಹೋಗ್ಯಾನಬಲವಂತ ॥ಪ ॥
ಶಿರಗೇಡಿ ಹೆಂಗಕುಂತತಿ ನೋಡ
ನಮ್ಮ ಮಾತ ಕೇಳಿದರಹಿಂಗ ಆದಿತೇನ
ಒದಿಯಮ್ಮ ಮಲ್ಲಮ್ಮಮನಿ ಬಿಟ್ಟ ಹೋಗಂತ
ಹೇಳಮ್ಮ ಮಲ್ಲಮ್ಮಓಣೋಣಿ ತಿರಗಂತ
ನಾಳಿ ಹಿರ‌್ಯಾ ಬಂದ ಕೇಳಿದ್ರಏನ್ ಹೇಳೋಣ
ಮಲ್ಲಮ್ಮ ನೀ ಮಾಡಬೇಕಒಂದ್ ಬೇತಾ

ಮಲ್ಲಮ್ಮ

ಕೇಳ ತಾರಾ ಹೇಳುವೆಒಂದು ಬೇತಾ ॥ಪ ॥
ಮನಿ ಬಿಟ್ಟ ಹೋಗ್ಯಾನಬಲವಂತ
ಹಿಂತಾ ದೊಡ್ಡ ಮನ್ಯಾಗಒಬ್ಬಳನ ಬಿಟ್ಟು ಹೋಗ್ಯಾನ
ಹೊಲಕ್ಕ ಹೊಕ್ಕನಂತಹೇಳಿ ಹೋಗ್ಯಾನ
ಸೂಳಿ ಮನಿ ಸೇರಿ ಕುಂತಿರಬೇಕಬಲವಂತ
ನನ್ನ ಸರಿಗಿ ಬಂಗಾರಬಳಿಯ ತುಡಗ ಮಾಡ್ಯಾನ
ತಾರಾ ಹೇಳಬೇಕ ಹಿಂಗನಿನ್ನ ಹಿರ‌್ಯಾನ ಮುಂದ ॥

* * *

ದೃಶ್ಯ : 12

ಬಸವಂತ ವ್ಯಾಪಾರದಿಂದ ಬರುತ್ತಾನೆ. ಮನೆಯಲ್ಲಿ ತಮ್ಮ ಇರುವುದಿಲ್ಲ. ಅವನಿಗೂ ಒಂದು ರೀತಿಯ ಆತಂಕ, ಹಳಹಳಿಯಾಗುತ್ತದೆ. ತಮ್ಮನ ಮುಗ್ಧ ಸ್ವಭಾವವನ್ನು ಗುಣಗಾನ ಮಾಡುತ್ತ ಓಣೋಣಿ ತಿರುಗುವನು.

ಬಸವಂತ

ನನ್ನ ಮೋಜಿನ ತಮ್ಮನಎಲ್ಲಿ ಕಳುಹೀದಿಯಾ ॥ಪ ॥
ನನ್ನ ಹೊಟ್ಟ್ಯಾಗಇಲ್ಲ ಸಮಾಧಾನ
ಓಣೋಣಿ ತಿರುಗುತಬಂದೇನು ನಾನಾ
ಮನಿ ಮನಿ ತಿರುಗುತಹುಡಿಕಿದಿನಿ ನಾನಾ ॥
ನನ್ನ ತಮ್ಮ ಎಲ್ಲಿಯೂ ಕಾಣವಲ್ಲನೊ
ತಮ್ಮನ ಮಾರಿಯನೋಡದೇ ಬಾಳ ದಿನಾ ॥
ಕೂಳ ನೀರ ಸವಿಯಹತ್ತವಲ್ಲದೊ ಯನಗ
ಈಟಿರತ ಕೂಡಿಬೆಳೆದೇವ್ರ ನಾವು ॥
ತಂದೆ ತಾಯಿ ಗುರ್ತಅವನಿಗಿಲ್ಲೊ
ನಾನು ಮಾಡೀನಿಅವನ ಜೋಪಾನ
ಯೆನ್ನ ಧ್ವನಿಯ ಕೇಳಿದರಓಡಿ ಬರುವ ಬಲವಂತ
ಯಾಕೊ ಏನೂ ಸಂಶಯಬಂದತಿ ನನಗ ॥
ಮನದಾಗ ಇಲ್ಲೊ ಚೇತನಜೀವಕ್ಕಿಲ್ಲೊ ಸಮಾಧಾನ
ಎಲ್ಲಿ ಹುಡಕಲಿ ಎಲ್ಲಿ ನೋಡಲಿನನ್ನ ಮೋಜಿನ ತಮ್ಮನ ॥

ತಾರಾ

ನಿಮ್ಮ ತಮ್ಮನ ಮಾತಚಿತ್ತವಿಟ್ಟ ಕೇಳರಿ
ನೀವು ವ್ಯಾಪಾರಕ್ಕೆಹ್ವಾದ ಮರದಿನಾ
ಒಬ್ಬಳನ್ನ ಬಿಟ್ಟಹೋಗ್ಯಾನ ಮನಿಬಿಟ್ಟ
ನೆರೆಹೊರೆಯವರ‌್ನುಕೇಳರಿ ಮಲ್ಲವ್ವನ
ನನ್ನ ಕಡೆ ಏನೇನುತಪ್ಪಿಲೋ ಪ್ರೀಯಾ

* * *

ದೃಶ್ಯ : 13

ಬಸವಂತ ತಮ್ಮನನ್ನು ಹುಡುಕುತ್ತ ಮನೆ : ಮನೆಗೆ, ಬೀದಿ : ಬೀದಿಗೆ ಹೋಗುವನು. ಮಲ್ಲಮ್ಮ, ತಾರಾ ಸರಿಯಾದ ಮಾಹಿತಿ ಕೊಡುವುದಿಲ್ಲ. ಬಲವಂತ ಕಳ್ಳತನ ಮಾಡಿ ಹೋಗಿದ್ದಾನೆಂದು, ಕೆಟ್ಟ ಹವ್ಯಾಸಕ್ಕೆ ಅಂಟಿಕೊಂಡಿದ್ದಾನೆ ಎಂದು ಹೇಳುವರು. ಬಸವಂತ ಅವರ ಮಾತುಗಳನ್ನು ನಂಬುವುದಿಲ್ಲ. ತಾರಾಳೇ ಜಗಳವಾಡಿ ತಮ್ಮನನ್ನು ಕಳಿಸಿರಬೇಕೆಂದು ಸಂಶಯ ತಾಳುತ್ತಾನೆ. ಅವಳ ಮೇಲೆ ಸಿಟ್ಟಿಗೇಳುತ್ತಾನೆ. ತಮ್ಮನನ್ನು ಆಗಲಿದ್ದರಿಂದ ಬಸವಂತನ ಜೀವಕ್ಕೆ ಸಮಾಧಾನವೇ ಇಲ್ಲ. ತಮ್ಮನನ್ನು ಹುಡುಕಲಿಕ್ಕೆ ಅವನು ಮನೆ ಬಿಟ್ಟು ಹೋಗುವನು.

ಬಸವಂತ

ಕಂಡಿರೇನ ತಾಯವ್ವ ತಮ್ಮನ ॥ಪ ॥
ಶಿರಬಾಗಿ ಮಾಡುವೆ ಶರಣ
ತಮ್ಮ ಯೆನ್ನಬಿಟ್ಟ ಹೋಗ್ಯಾನ
ಪುಣ್ಯ ಬರತತಿತೋರಿಸರಿ
ಏನು ಅರಿಯದಮಂದ ಬುದ್ಧಿ ಅವನ
ಏನು ತಿಳಿಯದಮುಗ್ದ ಬುದ್ದಿ ಅವನ
ಹಿಗ್ಗಾಸಿಗ್ಗಾ ಅವಗಗೊತ್ತು ಇದ್ದಿಲ್ಲೊ
ಎಲ್ಲಿ ಹ್ವಾದನವ್ವಾಎತ್ತ ಹ್ವಾದನವ್ವ
ಒಡಹುಟ್ಟಿದ ತಮ್ಮಬಲವಂತ
ಶ್ರೀ ರಾಮಲಿಂಗ ದಯೆಇರಲಿ ನಮ್ಮ ಮ್ಯಾಗ
ಶಿರವಿಟ್ಟು ಪಾದಕ್ಕಮಾಡುವೆ ಶರಣ ॥

ಮಲ್ಲಮ್ಮ

ಬಸವಂತ ಕೇಳಪ್ಪಚಿತ್ತ ಕೊಟ್ಟ
ತಾರಾನ ಕಡೆ ತಪ್ಪಿಲ್ಲಎಳ್ಳಷ್ಟ ॥ಪ ॥
ಪ್ರೀತಿ ಅತ್ತಿಗಿ ಬಿಟ್ಟಹೋಗ್ಯಾನ ಹೊಂಟ
ಪರಿಪರಿ ಹೇಳಿನೂಬಲವಂತಗ
ಅವನು ಯೆನ್ನಮಾತ ಕೇಳಲಿಲ್ಲೊ
ಹೊಲಕ್ಕ ಹೋಗಿಬರ‌್ತನಂತ ಭಾಸಿ ಕೊಟ್ಟ
ಭಾಸಿ ಕೊಟ್ಟ ಹೋಗಿಮೋಸ ಮಾಡಿ ಬಿಟ್ಟ
ಶ್ರೀ ರಾಮಲಿಂಗನಿಗೆಮಾಡುವೆ ನಮಸ್ಕಾರ ॥

ಬಸವಂತ

ತಾರಾ ಜಗಳಾಡಿತಮ್ಮನ ಕಳಿಸಿದೇನ
ಸಂಶೇ ಬಂದತಿಯೆನಗ ॥
ಅಣ್ಣ ತಮ್ಮರ ಮನಸ್ಸಒಡಿಲಂತ ಮಾಡಿಯೇನ
ಬಾಳ ನಂಬೀನಿ ತಾರಾಮಾಡೀದಿ ನೀ ಮೋಸಾ
ಬಿಡ ನಿನ್ನ ಬಡಿವಾರಮಾಡಿದಿ ಕಾರಭಾರ
ಆಕಳಂತಹ ತಮ್ಮನ್ನಎಲ್ಲಿ ಕಳಸಿದೀ ನೀನಾ
ಹೊಲಿ ರಂಡಿ ನೀನಾಮಾಡಿದಿ ಕೇಡವನಾ
ಛೀ ರಂಡಿ ಕಳಿದೀನೀ ನನ್ನ ಮಾನಾ ॥

ತಾರಾ

ಪ್ರಿಯಾ ಮಾಡತೇವ್ರಿನಿಮಗ ಶರಣ
ಅಂದಿಲ್ಲ ಆಡಿಲ್ಲಬೈಬ್ಯಾಡರಿ ನೀವು ॥
ಎಂದೂ ಬೈಯದಪ್ರಿಯಾ ನೀವು
ಏನೂ ಅನ್ನದಪ್ರಿಯಾ ನೀವು
ಈಗ್ಯಾಕೊ ನನ್ನ ಮ್ಯಾಗಸಂಶೆ ತಾಳತೀರಿ
ಸುಮ್ಮನ ನನ್ನ ಮ್ಯಾಗಹರಿಯ ಹಾಯಬ್ಯಾಡ್ರಿ
ಮರಮರಾ ಮರುಗುವೆಮನದಾಗ ॥

ಬಸವಂತ

ಬಲವಂತನ ಹುಡುಕುತಹೋಗುವೆ ಓಣೋಣಿ
ತಮ್ಮ ಬಿಟ್ಟ ನನ್ನ ಜೀವ ತಾಳಂಗಿಲ್ಲ ॥
ದೇಹ ಎರಡಿದ್ದರೂಒಂದಿತ್ತು ನಮ್ಮ ಮನಾ
ಬಲವಂತ ಹ್ವಾದಾಗಿಂದಹೊಟ್ಟಿಗಿ ಉಂಡಿಲ್ಲ
ಕಣ್ಣಿಗಿ ನಿದ್ದಿಲ್ಲಹೋಗುದಿಲ್ಲ ಮುಕ್ಕ ನೀರ
ದೇಹ ಎರಡಿದ್ದರೂಒಂದಿತ್ತು ನಮ್ಮ ಮನಸ್ಸ
ಒಂದಿನ ನಾವುಕದನವ ಮಾಡಿಲ್ಲ
ಬಲವಂತ ನಿನ್ನ ಬಿಟ್ಟುಇಲ್ಲೊ ನನಗೆ ಚೇತನ ॥

* * *

ದೃಶ್ಯ : 14

ಬೇಡರ ತಿಮ್ಮನೆಂಬುವನು ಬಿಸಿಲಲ್ಲಿ ಬಾಯಾರಿ ಸಿಂದಿ ಅಂಗಡಿಯಲ್ಲಿ ಸಿಂದಿ ಕುಡಿಯುತ್ತಿರುತ್ತಾನೆ. ಅಲ್ಲಿ ಅವನಿಗೆ ಸುಂದರವಾದ ಮೋಜಿನ ನಾಯಿ ಸಿಕ್ಕಿತು. ಇದು ನನಗೆ ಬೇಟೆಗೆ ಬರುತ್ತದೆಂದು ಅವನು ಅದನ್ನು ಪ್ರೀತಿಯಿಂದ ಜೋಪಾನ ಮಾಡುವನು. ಅದಕ್ಕೆ ಸರಬೂತ್ಯಾ ಎಂಬ ಹೆಸರಿಟ್ಟನು.

ತಿಮ್ಮ

ಸಿಂದಿ ಅಂಗಡಿ ಎಲ್ಲೇತಿಹೇಳೊ ತಮ್ಮ
ಬಿಸಿಲಾಗ ಬಾಯಾರಿ ಬಂದಿನ ನಾನಾ
ನೀರಡಿಸಿ ಗಂಟ್ಲ ಆರಿಬಂದಿನ ನಾನಾ
ದಿಕ್ಕದೇಶಿ ತಿರುಗುತಬಂದಿನ ನಾನಾ
ಅಡವಿ ಅರ‌್ಯಾಣತಿರುಗುತ ಬಂದಿನ ನಾನಾ
ಸಿಂದಿ ಅಂಗಡಿ ಎಲ್ಲೇತಿ ಹೇಳೊ ತಮ್ಮ ॥

ದಾರಿಕಾರ

ಏನೊ ಹಿರ‌್ಯಾ ನಿನ್ನ ಮಾರಿ ನೋಡಿದರ
ಬಾಳ ನೀರಡಿಸಿದಂಗ ಕಾಣತತಿ
ಈ ದಾರಿಗುಂಟ ಹೋಗ್ರಿ ಹಳ್ಳ ಬರ‌್ತತಿ
ಅದನ ದಾಟಿ ಒಂದೂರ ಐತಿ ॥

ತಿಮ್ಮ

 

ಏನಪಾ ನಾಲ್ಕ ದಿನದಿಂದ
ಬ್ಯಾಟಿ ಆಡಿ ಆಡಿ ಬ್ಯಾಸರ ಬಂದೈತಿ
ನಾಲ್ಕು ದಿನ ಆರಾಮ ತಗೊಂಡ
ಹೋಗಬೇಕಂತ ಈ ಕಡೆ ಬಂದೀನ ॥

ತಿಮ್ಮ

ಊರ ಸಮೀಪ ಬಂದತಿ
ಸಿಂದಿ ಅಂಗಡಿ ಕಾಣಸತತಿ ॥
ಸಿಂದಿ ಅಂಗಡಿಗಿ ಹೋಗಿ
ಮಗಿ ಇಸಗೋ ಬೇಕು
ಮಗಿ ತುಂಬ ಸಿಂದಿ ಕುಡಿದು
ಢರಕಿ ಹೊಡಿಬೇಕು
ಏನ್ ಸಿಂಧ್ಯೊಏನ್ ಸಿಂಧ್ಯೊ
ಹೊಟ್ಟಿ ತನ್ನಗಾತ ನೋಡೊ
ಇನ್ನಮ್ಯಾಲ ಹೋಗಬೇಕೊ ಊರಾಗ ॥

ಸಿಂದಿಗಾರ

ಏನೊ ಹಿರ‌್ಯಾ ಗೊಬ್ಬಿ ಕುಡದಹಂಗ ಹ್ವಂಟಿ
ಹಿರ‌್ಯಾ ರೊಕ್ಕಾಕೊಟ್ಟ ಹೋಗ
ನಮ್ಮ ಸಿಂದಿ ಹೆಸರಸುತ್ತ ಮುತ್ತ ಬಾಳ ಐತಿ
ತುಡಗರಂಗ ಸುಮ್ಮನ ಯಾಕ ಹ್ವಂಟಿಯೊ ನೀನಾ
ಯಾತರ ಮರ್ಜಿನಿಂದ ಯೆನಗ
ಕೊಡದಿದ್ದರ ಚಾವಡಿಗೋಗಿನಾನಾ ತಿಳಿಸ್ತನ
ಸುಮ್ಮನ ಕೊಟ್ಟ ಹೊಗುಕುಡದ ಸಿಂದಿ ಲೆಕ್ಕ ॥

ತಿಮ್ಮ

ಯಾಕೊ ನಾನಾಯಾರ ಗೊತ್ತಿಲ್ಲೇನು
ನನ್ನ ಹೆಸರ ಬ್ಯಾಡರ ತಿಮ್ಮ
ನನ್ನ ಹೆಸರ ಕೇಳಿದರ ಜನ ನಡಗತಾರ
ನೀ ಸಿಂದಿ ರೊಕ್ಕಾಕೇಳತಿ
ಎಷ್ಟತೊ ನಿನ್ನ ಸೊಕ್ಕಇಲ್ಲಿ ನೋಡ ಚಪಕೊಡ್ಲಿ
ಕಡದ ಬಿಡುವೇನು ನಿನ್ನಕೂಡ್ರಬೇಕು ಸುಮ್ಮನ ॥

ಒಂದ ಮೋಜಿನ ನಾಯಿ ಸಿಕ್ಕತಿ
ಕರಿ ಬಣ್ಣದತಿನೋಡಾಕ ಕಳಾ ಐತಿ ॥
ಇದ ನೋಡ ಮಾಡುವೆಜೋಪಾನ
ನಾಳಿ ಬ್ಯಾಟಗಿ ಹೋಗುದತಿ
ಇದು ಬ್ಯಾಟಗಿ ನನಗೆ ಬೇಕಾಗತತಿ
ಇದಕ್ಕೆ ಹೆಸರ ಏನ್ ಇಡಬೇಕೊ
ಸರಬೂತ್ಯಾ ಅಂತ ಇಡಲೇನೊ ॥

* * *

ದೃಶ್ಯ : 15

ಒಂದು ದಿನ ಆ ಊರಿನ ರಾಜ ಮತ್ತು ಮಂತ್ರಿ ಸೇರಿ, ಬೇಟೆಯಾಡಲಿಕ್ಕೆ ಹೋಗುವರು. ಅವರು ಹೋದನಂತರ ರಾಜನ ಅರಮನೆ ಕಳುವಾಗಿತ್ತು. ರಾಜನ ಸಂಪತ್ತೆಲ್ಲ ಕಳ್ಳರ ವಶವಾಯಿತು. ರಾಜ, ಮಂತ್ರಿಗಳಿಗೆ ತುಂಬ ಆಘಾತವಾಯಿತು. ಕಳ್ಳರನ್ನು ಹಿಡಿದು ಕೊಟ್ಟವರಿಗೆ ತನ್ನ ಮಗಳನ್ನು ಲಗ್ನ ಮಾಡಿಕೊಡುತ್ತೇನೆಂದು ರಾಜ ಡಂಗುರ ಹಾಕಿಸಿದನು. ಕಳ್ಳರನ್ನು ಹಿಡಿದುಕೊಡಲಿಕ್ಕೆ ಬೇಡರ ತಿಮ್ಮ ವಿಳ್ಯೆ ತೆಗೆದುಕೊಳ್ಳುತ್ತಾನೆ.

ರಾಜ

ನಡಿ ಮಿತ್ರಹೋಗೋಣ ಶಿಕಾರಿಗಿ
ಗುಡ್ಡ ಗಂವಾರಹೋಗೋಣ ತಿರುಗುತ
ಬೇಟೆ ಯಾಡುತಶಿಕಾರಿ ಹೊಡೆಯುತ
ಬಿದ್ದಾವ ಯಮಗಮಿಕಗಳು
ಗುರಿಯಿಟ್ಟ ಹೊಡಿಬೇಕೊಮಿಕದ ಹೊಟ್ಟಿಗೆ
ಮಿಕ ತಂದ ಬಿಟ್ಟೇವೊ ರಾಜಕ್ಕ ॥

ಘಾತವಾಯಿತೊಮಂತ್ರಿಸುತ
ಅರಮನೆಯ ಬದುಕುಮಾಯ ಆಗೇತಿ
ಮುತ್ತು ಮಾಣಿಕ ಹವಳಎಲ್ಲ ಹೋಗ್ಯಾವೊ
ವಜ್ರ ವೈಡೂರ‌್ಯಕಾಣದಾಗ್ಯಾವೊ
ಬೆಳ್ಳಿ ಬಂಗಾರದಹವಳ ಇಲ್ಲದಾಗ್ಯಾವೊ
ಕಳ್ಳರ ವಾಹಿನಾಹಬ್ಬೆತಿ ಊರಾಗ
ನಮ್ಮ ಬದುಕ ಭಾಗ್ಯಕಳ್ಳರ ಪಾಲಾತು
ಜಾಣ ಮಂತ್ರಿ ನೀನುಮಾಡಬೇಕ ಒಂದ ಅಕಲಾ
ಕರುಣ ತೋರಿ ಹಾಕಬೇಕೊಒಂದ ಹಂಚಿಕೆ ॥

ಮಂತ್ರಿ

ಈ ಸುದ್ಧಿ ಕೇಳಿ ಘಾತವಾಯಿತೊ ಮನಕ
ಶರಣ ಮಾಡಿ ಹೇಳುವೆ ಭೂಪಾಲ ॥
ಚಿಂತೀಯ ಮಾಡಬ್ಯಾಡ್ರಿಉಪಾಯ ಹುಡುಕೋಣ
ಊರಾಗ ಡಂಗುರ ಹೊಡಿಸೋಣ
ಕಳ್ಳರನ ಹಿಡಿದವರಿಗೆಕೊಡವೇವು ಮಾನೆವ
ಭೂಪಾಲ ಇಂದ ಚಾವಡಿಕರೆದು ಸಾರಿ ಹೇಳೋಣ ॥

ರಾಜ

ಒಳ್ಳೆಯ ಹಂಚಿಕಿಹಾಕೀದಿ ಪ್ರಧಾನಿ
ಡಂಗುರ ಹೊಡಿಸರಿಸುತ್ತು ರಾಜ್ಯಕ್ಕೆಲ್ಲ ॥
ಕಳ್ಳರನ್ನ ಹಿಡಿದವರಿಗೆಕೊಡುವೆನು ಮಗಳನ್ನ
ವಜ್ರ ವೈಢೂರ‌್ಯಕೊಟ್ಟ ಕಳಿಸುವೆನು
ಅರಮನೆಯ ಅರ್ಧ ಪಾಲು ಕೊಡುವೆನು ॥

ತಿಮ್ಮ

ದೊರಿ ವಿಳ್ಯೆವ ಕೊಡರಿ ಯಮಗ
ಹಿಡಿದು ಕೊಡುವೆನು ಕಳ್ಳರನ
ನಮ್ಮ ನಾಯಿ ತಗೊಂಡ ಬರತೇನ ನಾನಾ
ನಾಯಿ ಹಿಡಿತತಿ ಕಳ್ಳರನ್ನ ॥

ರಾಜ

ನೀ ಬಾರೊ ತಿಮ್ಮವಿಳ್ಳೆ ಹಿಡಿಯೊ
ಹಿಡಕೊಂಡ ಬಾರೊ ಕಳ್ಳರನ್ನ ॥
ಇಂದ ರಾತ್ರಿ ಸುತ್ತೆಲ್ಲನಿನ್ನ ಕಾವಲಿರಲಿ
ಇದಕ್ಕ ತಪ್ಪಿದರಒಡೆದ ಹಾಕುವೆ ಶಿರವ
ಇಂದ ರಾತ್ರಿ ಬಂದಮಲಗು ವಾಡೇದ ಅಗಸ್ಯಾಗ
ವಾಡೇದ ಸುತ್ತಮುತ್ತಇರಲೊ ನಿನ್ನ ಕಾವಲ ॥

* * *