ದೃಶ್ಯ : 5

ಮಲ್ಲಮ್ಮ ಬಲವಂತನ ಹತ್ತಿರ ಹೋಗಿ ನಿನಗೆ ಸುಂದರವಾದ ಹೆಣ್ಣನ್ನು ತಂದಿದ್ದೇನೆ. ನಮ್ಮ ಮನೆಗೆ ಬಾ ಎಂದು ಬಿನ್ನೈಸಿಕೊಳ್ಳುತ್ತಾಳೆ. ಮಲ್ಲಮ್ಮನ ಮೇಲೆ ವಿಶ್ವಾಸವಿಟ್ಟು ಅರಿಯದ ಬಲವಂತ ಮಲ್ಲಮ್ಮಳ ಜೊತೆಗೆ ಹೋಗುವನು.

ಮಲ್ಲಮ್ಮ

ಅದಿಯೇನೋ ಬಲವಂತ ಮನಿಯಾಗ
ಹಂತಾದೇನ ಮಾಡೇನಿಬರದಂತಾದ ॥ಪ ॥
ದಿನಾ ಬಂದಕೂಡ್ರತಿದ್ದಯನ್ನ ಬದಿಯಾಗ
ಇಂದ್ಯಾಕ ಮುನಿಸೋನಿನ್ನ ಮಾರಿ ಮ್ಯಾಗ
ನಾ ಕರೆದರ ಹೋಗಬ್ಯಾಡಂತಅತ್ತಿಗೆ ಹೇಳ್ಯಾಳೇನೊ
ಮನದಾಗಿನ ಒಂದ ಬೇತಾಬಿಚ್ಚಿ ಹೇಳಾಕ ಬಂದೀನ
ಚಿತ್ತ ಕೊಟ್ಟ ಕೇಳಬೇಕಬಲವಂತ ಆ ಬೇತಾ ॥

ಬಲವಂತ

ಓಹೋ ಮಲ್ಲಮ್ಮಹಿಡಿಬ್ಯಾಡ ಸಂಶಯ
ಬರತೀನ ಮನೀತನನಡಿಯವ್ವ ಹೋಗೋಣ ॥ಪ ॥
ಅಣ್ಣ ವ್ಯಾಪಾರಕ್ಕೆಹೋಗ್ಯಾನ ಅವನು
ಬರುವತನಕಪುರುಸೊತ್ತಿಲ್ಲ ಯಮ್ಮ ನನಗ ॥
ಮಲ್ಲಮ್ಮ ಈಗನಾಜೂಕದ ದಿನಮಾನ
ಕಳ್ಳರ ವಾಹೀನಮನಿ ಮುಂದ ಇರುವೆ ನಾನಾ ॥

ಮಲ್ಲಮ್ಮ

ಬಲವಂತ ಹೇಳ್ತನ ಕೇಳೊಒಂದ ಮಾತ
ಆಗ ಬ್ಯಾಡ ನೀ ಸಿಟ್ಟನನ್ನ ಮ್ಯಾಲ ॥
ಉದ್ದಲ್ಲ ಗಿಡ್ಡಲ್ಲತುಂಬಿದ ಮೈಕಟ್ಟ
ಕೆಂಪಲ್ಲ ಕರ‌್ರಲ್ಲಸಾದಗಂಪ ಹೆಣ್ಣ
ಅಂಥಾ ಹೆಣ್ಣ ತಂದೀನಿಬಾರೊ ಲಗು ಹೊಂಟ
ರೂಪದಾಗ ಅಕಿಯಂಗಊರಾಗ ಯಾರಿಲ್ಲ ॥
ಆಕಿ ನಿನ್ನಮ್ಯಾಲಮನಸ್ಸಿಟ್ಟ ಬಾಳ ದಿನಾ
ನಮ್ಮ ಮನಿಯಾಗ ಕುಂತಿದ್ದಾಳೊಮಾತನಾಡುತ ॥

ಬಲವಂತ

ನಡಿ ಮಲ್ಲಮ್ಮ ಬರ‌್ತಿನಿಮನಿ ತನಕಾ ॥ಪ ॥
ನಮ್ಮ ನಿಮ್ಮ ಮಾತಾಇರಬೇಕ ಒಂದ ಗುಟ್ಟ
ಊರಾಗ ಸುದ್ದಿಯಾಗದಂತ ಇರಬೇಕ
ಜನದಾಗ ಆಗಬಾರದ ಅವಮಾನ ॥
ಆ ಹೆಣ್ಣ ಯಾರಂತಹೇಳಬೇಕ ನನಗ
ಗುರುರಾಮಲಿಂಗನ ಪಾದ ಮುಟ್ಟಿ ಬೇಡಿಕೊಳ್ಳುವೆ
ಆಕಿ ಕೂನಾ ಗುರ್ತ ಹೇಳಿದರಬರುವೆ ನಾ ಹೊಂಟ
ನಾಜೂಕದ ಕಾಲಮಾನಾಹೊರಲಾರೆ ಹರಲಿಯ ॥

ಮಲ್ಲಮ್ಮ

ಬಲವಂತ ನಿನಗ್ಯಾಕೊ ಹೆಣ್ಣಿನ ಗುರ್ತ
ಇಲ್ಲೆನೊ ನನ್ನ ಮ್ಯಾಲ ವಿಶ್ವಾಸ ॥
ಚಿನ್ನ ಬಣ್ಣದಂಥಾ ಹೆಣ್ಣ
ಮಲಗೆತೊ ಮನಿಯೊಳಗ ॥
ಹೋಗಿ ಮಾತಾಡಿಸೊ ನೀ ಒಳಗ
ಮಂದ್ಯಾಗ ಆಗದೋ ಅಪಮಾನ ॥

* * *

ದೃಶ್ಯ : 6

ಮುಸುಕು ಹಾಕಿಕೊಂಡು ಕುಳಿತಿದ್ದ ತಾರಾ, ಬಲವಂತನನ್ನು ನೋಡುವಳು. ತನ್ನ ಪ್ರೀತಿ, ಮೋಹವನ್ನು ಅವನ ಮುಂದೆ ತೋಡಿಕೊಳ್ಳುವಳು. ಬಲವಂತ ಸಂಪೂರ್ಣವಾಗಿ ತಿರಸ್ಕರಿಸುತ್ತಾನೆ. ಮಲ್ಲಮ್ಮ ನನ್ನನ್ನು ಮೋಸ ಮಾಡಿ ತಾರಾಳ ಹತ್ತಿರ ಕರೆದುಕೊಂಡು ಬಂದಳೆಂದು ತಾಪ ಪಟ್ಟುಕೊಂಡನು.

ತಾರಾ

ಬಾರೊ ನನ್ನ ಬಲವಂತ ॥ಪ ॥
ನಿನ್ನ ಮ್ಯಾಲ ನನ್ ಮನಸ್ಸಾ
ಬಾಯಿ ತೆರೆದ ಕೇಳಿದರ
ಒಲ್ಲಿ ಅಂದ ಹೋಗತಿ
ಗಂಡನ ಮ್ಯಾಲ ಆಸೆಯಿಲ್ಲ
ಹತ್ತೇತಿ ನಿನ್ನ ಭ್ರಾಂತಿ
ನಿನ್ನ ಮ್ಯಾಲ ಆಗೇತಿ ಪ್ರೀತಿ
ಬಾ ಬಲವಂತ ಕೂಡಿ ಇರೋಣ ॥

ಬಲವಂತ

ಒಲ್ಲಿನೊಗಒಲ್ಲಿನೊಗತಾಯವ್ವ
ಕರಿಬ್ಯಾಡ ಸುಮ್ಮನ
ನಾ ಮಾಡುದಿಲ್ಲ ಇಂಥಾ ಕೆಲಸ
ಊರಾಗ ಮರ‌್ಯಾದಿಮನಿತನದ ನಮ್ಮದು
ಅಣ್ಣ ಊರಾಗ ಹಿರ‌್ಯಾ ಆಗ್ಯಾನು
ಅಬ್ರು ಹ್ವಾದೀತು ಮನಿತನದಾ
ಕಾಮನ ಅಳಿಬ್ಯಾಡ ಜನದಾಗ
ಅಲ್ಲದ್ದ ಆಡಬ್ಯಾಡ ಕೆಟ್ಟ ಹ್ವಾದಿ ನೀನಾ
ಬಲ್ಲವಳಾಗಿ ತಿಳಕೊರ ನನ್ನ ಮಾತಾ ॥

ಬಲವಂತ

ಏನೊ ಸೋಜಿಗ ಕಾಣುವದೊ
ಮಲ್ಲವ್ವ ಮಾಡ್ಯಾಳೊ ಅಪಮಾನ ॥
ಅಣ್ಣನ ಹೆಂಡತಿ ಹತ್ತಿರ ತಂದಾಳೊ
ಅಯ್ಯ ಏನ್ ಮಾಡಲಿ ನಾನಾ
ಮಲ್ಲಿ ನಿನ್ನ ಮ್ಯಾಗಯಿತ್ತ ನನ್ನ ಬರೋಸ
ನಿನ್ನ ಮಾತ ಕೇಳಿ ಬಂದೀನಿ ನಾನಾ
ಅಂಜೀಕಿ ಬಂದತಿ ನನಗ
ಮಂದೀಗ ಮಾರಿ ಹೆಂಗ ತೋರಲಿ ॥
ಅತ್ತಿಗೆಯೆಂದರ ತಾಯಂತ ತಿಳಿದೀನ
ಮಲ್ಲಿ ಮಾಡ್ಯಾಳೋ ನನಗೆ ಘಾತ ॥

ಬಲವಂತ

ಎಲೆ ಮಲ್ಲಿಯೆಂತಾ ಕೆಲಸ ಮಾಡೀದಿ ॥ಪ ॥
ನಿನ್ನ ಮನದಾಗ ಹೀಗಿತ್ತೇನಮಾಡೀದಿ ನೀ ಮೋಸ
ತಿಳಿದು ತಿಳಿದು ಮಾಡೀದಿಹುಚ್ಚ ಕಾರಭಾರ
ಮುದಿಕ್ಯಾದಿ ಬಿಡಲಿಲ್ಲಇಂಥ ಕಾರಭಾರ
ಮಲ್ಲಿ ಇಂಥ ಕೆಲಸಯಾರ ಕಲಿಸಿದರು
ಇಂತಾ ಕೆಲಸ ಮಾಡುವದು ಬಲುಹೀನಾ
ನಿನ್ನ ಒದ್ದ ನಡಾ ಮುರದ ಬಿಡ್ತೆನ ನಾನಾ
ಬೆನ್ನ ತ್ವಾಟಿ ಕಿತ್ತ ಗೂಟಕ್ಕ ಹಾಕತೆನ
ನಿನ್ನ ಹೆಣ ಹಾಡಾಹಗಲಿ ಹುಗಿತೆನ
ನಿನ್ನ ಜೀವನ ಕೊಡತೆನ ಯಮಧೂತರ ಕೈಯಾಗ ॥

* * *

 ದೃಶ್ಯ : 7

ತಾರಾ ತನ್ನ ಮೋಹವನ್ನು ವಿವಿಧ ದೃಷ್ಟಾಂತಗಳೊಂದಿಗೆ ಹೇಳಿ, ಅವನನ್ನು ಒಲಿಸಿಕೊಳ್ಳಲು ಸರ್ವ ಪ್ರಯತ್ನ ಮಾಡುವಳು. ತಾಯವ್ವ ಇದು ಸರಿಯಲ್ಲ. ನಾಳೆ ನಿನ್ನ ಮತ್ತು ನಮ್ಮ ಮರ‌್ಯಾದೆ ಹೋಗುವುದು. ಅತ್ತಿಗೆಯೆಂದರೆ ತಾಯಿಯ ಸಮಾನ. ಮಾಯಕ್ಕೆ ಬಿಳಬ್ಯಾಡ. ಕಾಯುವ ಸುಣ್ಣದಲ್ಲಿ ಕೈ ಹಾಕಬೇಡ ಎಂದು ಅನೇಕ ರೀತಿಯಿಂದ ಹೇಳಿ ಹೋಗುವನು.

ತಾರಾ

ಬಲವಂತ ನಿನ್ನಮ್ಯಾಲ ನನ ಮನಸ್ಸಾ ॥ಪ ॥
ಜೀವಕ್ಕಿಲ್ಲ ಚೇತನನೆನಿತತಿ ನನ್ನ ಮನಾ
ಗಂಡ ಮೈದುನ ಎಲ್ಲಾಒಂದೆ ಸಮಕ
ನಿಮ್ಮಣ್ಣನ ಕುವ್ವತ್ತಗೊತ್ತತಿ ಯೆನಗ
ಹೋಗೋಣ ನಡಿ ನಾವುಮ್ಯಾಲ ಮಾಡಿಗೆ
ಯಾರಿಗೆ ಹೇಳೋಣ ಬ್ಯಾಡಹೋಗೋಣ ಸುಮ್ಮನ
ಜೀವನದಾಗ ಸವಿಬೇಕೊರತಿ ಸುಖಾ
ಯಾವ ನೆವಾ ಹೇಳ ಬ್ಯಾಡಬಲವಂತ
ಮಂಚ ತಯಾರಾಗೇತಿಕೂಡಿ ಮಲಗೋಣ ನಾವು ॥

ತಾರಾ

ಕಾಮ ತಡೆದು ಪರಿ ಪರಿ
ಬೋರಾಡತನಕರುಣ ಇಲ್ಲಪ್ಪ ನಿನಗ ॥
ನಾಳಿ ಹಿರ‌್ಯಾನ ಮುಂದ ಹೇಳುವೇನು
ಬಲವಂತ ಎಳಿದಾಡಿ ಕೆಡಿಸಾಕ ಬಂದಿದ್ದ ॥
ಬಾಗಲದೂಡಿ ಕ್ಯಾರಿನನ್ನ ಮಂಚಕ್ಕ ಬಂದಿದ್ದ
ನನ್ನ ತೆಕ್ಕಿ ಹಾಯಾಕಹವಣಿಸುತ್ತಿದ್ದ ॥
ಬಲವಂತ ಯಾಕ ಸುಮ್ಮನ ನಾಶಕ್ಕಿ ಬಾರೊ
ಕೂಡಿ ಸವಿ ಸುಖ ಸವಿಯೋಣ ಬಾರೊ ॥

ಬಲವಂತ

ಚೀ ಚೀ ತಾಯವ್ವ
ಮಾಡುವೆ ನಿಮಗೆ ಶರಣ ॥ಪ ॥
ಕೈ ಮುಗಿದೆ ಕಾಲ ಬೀಳುವೆ
ಆಗದೋ ಈ ಕೆಲಸ ॥
ನಾಳಿ ಅಣ್ಣ ಬಂದ ಕೂಡಲೆ
ಕೊಡುವೇನು ಯನ್ನ ಪ್ರಾಣ ॥
ಈ ಮಾತ ಯಾರಾರ ಕೇಳಿದರ
ಹರಿದ ಹ್ವಾದೀತ ಒಗತಾನ ॥

ತಾರಾ

ಸುಂದರ ಸುರತಾ ನೋಡಿ ನಿಂತನ ಬೆರತಾ ॥ಪ ॥
ಕಾಮಸ್ತಾನ ಏರಿ ಬಂದೇತಿ ಮಸ್ತಾ
ಇಬ್ಬರು ಕೂಡಿ ಜೋಡಿಆಗೋಣ ಬಲವಂತ
ಬಲವಂತ ನೀ ಮಾತಾಡೊಜರಾ ಸೋಕ
ಚಂದ್ರಹಾರ ಕೊಡಸತನೊ ಕೊಳ್ಳಾಗ
ನಾಕು ಬೆರಳಿಗೆ ನಾಕ ನಾಕಉಂಗರಾ ಇಡಸತನೊ
ಜರದ ರುಮಾಲಕೊಡಸತನೊ ನಿನ್ನ ತಲಿಗೆ
ಮನ ಮುರಿದ ಬಂದರಆಗುದೊ ಸಮಾಧಾನ
ಹಗಲಿ ರಾತ್ರಿ ಬಿಳತಾವ ನಿನ್ನ ಕನಸಾ
ತಡ ಮಾಡಬ್ಯಾಡ ಬಲವಂತ ಲಗುಬಗಿ ಬಾರೊ ॥

ಬಲವಂತ

ಅಲ್ಲ ತಾರಾ ನಿನ್ನ ರೀತಿಮಾಯಕ ಬಿದ್ದ ಕೆಡತಿ
ನೀ ಯಾಕ ಮರುಳಾದಿನನ್ನ ರೂಪಕ್ಕ
ಪಕ್ಕದ ಹುಳಾ ದೀಪಕ್ಕಬಿದ್ದಂಗಾದೀತು
ಕಾಯುವ ಸುಣ್ದಾಗಕೈಯಿಟ್ಟಂಗಾದೀತು
ಸುಟ್ಟ ಸಾಯತಿ ಯಾಕತಿಳಕೋರ ನಿನ್ನ ಮನಕ
ದೇಹಕ ಚೌವರಾಸಿಬಂದ ಬೀಳ ಬ್ಯಾಡ ಪಾಪಕ್ಕ
ನಾಳಿ ಯಮದೂತಗ ಒಯ್ಯುವಾಗ ಏನ್ ಜಡತಿ ಕೊಡತಿ ॥

ತಾರಾ

ದೊಡ್ಡ ಗಂಡಸಾಗಿಧೈರ‌್ಯ ಇಲ್ಲೊ ನಿನಗ
ಸೀರಿ ಉಟಗೊಂಡಅಂಗಳ ಕಸಾ ಹೊಡಿಯೊ
ಬಳಿ ಹಾಕ್ಕೊಂಡಹೋಗು ಯಲ್ಲಮ್ಮನ ಗುಡ್ಡಕ್ಕ
ಕುವ್ವತ್ತಿದ್ದರೆ ಮಾತಾಡಿಆಗೋ ಗಂಡಸ
ಇದರ ಹತ್ತೇಲಿ ಏನೂ ಇಲ್ಲಇದೈತಿ ನಪುಂಸಕ
ಗುರು ರಾಮಲಿಂಗನ ಪಾದಕ್ಕಶಿರವಿಟ್ಟ ನಮಸ್ಕಾರ ॥

ಬಲವಂತ

ಹಲಕಟ್ಟ ಮಾತಾಡ ಬ್ಯಾಡ
ಮುರದಿನ ನಿನ್ನ ಸೊಕ್ಕ
ನಾ ಸಿಟ್ಟಿಗೆದ್ದರಲತ್ತಿ ತಿಂದಿನೀನಾ
ಅತ್ತಿಗಿಗಂತಮರ್ಜಿ ಕಾದೀನ ನಾನಾ
ನಾಲಿಗಿ ಬಿಗಿ ಹಿಡಿದಮಾತನಾಡ ನೀನಾ
ಅಲ್ಲದ ಆಡಬ್ಯಾಡಸಲ್ಲದೊ ನನಗಿದಾ
ಜಡದೀನ ಹೋಗಅಂಜುದ್ಯಾಕೊ
ಪಾಪು ಪುಣ್ಯವನಿನ ಕೂಡ ಇರಲಿ
ಗುರು ರಾಮಲಿಂಗಪಾದಕ್ಕ ಶಿರಯಿಟ್ಟ ॥

* * *

ದೃಶ್ಯ : 8

ಬಲವಂತ ತನಗೆ ಒಲಿಯದಿದ್ದಾಗ ಹೇಗಾದರೂ ಮಾಡಿ ಅವನನ್ನು ಮಾಯಮಾಡಬೇಕೆಂದು ತಾರಾ, ಮಲ್ಲಮ್ಮಳ ಮುಂದೆ ಹೇಳುವಳು. ಇಬ್ಬರೂ ಸೇರಿ. ಊರ ಹೊರಗಡೆ ಬೀಡು ಬಿಟ್ಟಿರುವ ಗಾಂಜಿ ಸಿದ್ಧಪ್ಪ ಎಂಬ ಮಂತ್ರಗಾರನ ಹತ್ತಿರ ಹೋಗುವರು.

ತಾರಾ

ಅಯ್ಯಅಯ್ಯಮಾಡಲ್ಯಾಂಗೊ ॥ಪ ॥
ಪರಿಪರಿ ಕಾಡಿದ ಬಲವಂತ
ಚಂಡಾಲರ ಕೈಯಿಂದ ಹೊಡೆಸುವೆ ಅವನ
ಕೈ ಕಾಲ ಮುರಿದ ಚೆಲ್ಲುವೆ ಬಾವ್ಯಾಗ
ಹೆಂಗಾರ ಮಾಡಿ ಅವನ ಮಾಯ ಮಾಡಬೇಕು
ನಾಳಿ ಹಿರ‌್ಯಾ ಬಂದ ನಂತರಹೇಳ್ತಾನ ನಮ್ಮ ಗುಟ್ಟ
ಆಗ ನಾನಾ ಏನ್ ಹೇಳಲಿ ಪಂಟ
ಅಯ್ಯ ಸೂರ‌್ಯ ಚಂದ್ರ ಕಣ್ಣ ಮುಚ್ಚಿರೊ ನನ್ನದಾ ॥

ತಾರಾ

ಅಯ್ಯ ಪರಮೇಶ್ವರ ಮಾಡುವೆ ದುಃಖ
ಹಕ್ಕಿಪಕ್ಕಿಯಂಗ ಹಲಬತೇನೊ ॥
ತಾಯಿ ತಂದೆಯಿಲ್ಲದಪರದೇಶಿ ನಾನು
ಮರಾ ಮರಾ ಮರಗತೇನೊ ಮನದಾಗ ॥
ನಾಳಿ ಹಿರ‌್ಯಾ ಬಂದ ಕೇಳಿದರ ಏನ್ ಹೇಳಲಿ
ಕಣ್ಣಿಗಿ ನಿದ್ದಿಬರವಲ್ಲದೊ ಯೆನಗ ॥
ಹೊಟ್ಟಿಗಿ ಊಟ ಹತ್ತವಲ್ಲದೊ ಯೆನಗ
ಅಯ್ಯ ಪರಮೇಶ್ವರದೂರ ಮಾಡೊ ದುಃಖ ॥

ತಾರಾ

ಕೇಳವ್ವ ಮಲ್ಲವ್ವ ಆಗೇತಿ ಅಪಮಾನ
ದುಷ್ಟ ಬಲವಂತ ಬಲ್ಲಂಗ ಬೈದಾನ ॥
ಒಟ್ಟ ಗಂಡಸನಮಾತ ಬಾಳ ಬಿರಸಾ
ನಿನ್ನ ಕಡಿಂದಾಗಲಿಲ್ಲನನ್ನ ಕಡಿಂದಾಗಲಿಲ್ಲ ॥
ನಾಳಿ ಹಿರ‌್ಯಾನ ಮುಂದ ಏನಾದರ ಹೇಳ್ತಾನ
ಹಿರ‌್ಯಾನ ಮುಂದ ನಾವು ಏನಂತ ಹೇಳೋಣ ॥
ಹೆಂಗ ಮಾಡೋಣಯಮ್ಮಾ ಮಸಲತ್ತಾ
ಯಮ್ಮಾ ಬಲ್ಲಂತಾಕಿ ನೀನಾಮಾಡವ್ವ ಒಂದ್ ಕಲ್ಪನಾ ॥

ಮಲ್ಲಮ್ಮ

ತಾರಾ ಮೊನ್ನಿ ಜನದಾಗಕಳದಾನ ನನ್ನ ಮಾನ
ನನ್ನ ಬೈದ ನಿನ್ನೂ ಬೈದತುಂಬಿದ ಜನದಾಗ ॥
ಅಂದಾಕರ ಕೊಟ್ಟಿ ಮನಸ್ಯಾಅದಾನ ಬಲವಂತ
ತಾರಾ ನಿನ್ನ ದಶಿಂದಹೋತವ್ವ ನನ್ನ ಮಾನ ॥

ತಾರಾ ಇಷ್ಟಾಕ ಚಿಂತಿ ಮಾಡಕೊತ
ಕುಂತಿದಿ ಸುಮ್ಮನ ॥
ಊರ ಹೊರಗಿನ ಮಠದಾಗ
ಗಾಂಜಿ ಸಿದ್ಧಪ್ಪ ಐದಾನ
ಮಾಟ ಮಂತ್ರದಾಗ ಬಾಳ ನಿಪುಣ ಅದಾನ
ಅವನ ಹತ್ತಿರ ಹೋಗಿ ನಾವು
ಮಂತ್ರ ಮಾಡಿಸೋಣ ॥
ಅವನು ಬೇಡಿದಷ್ಟರೊಕ್ಕಾ ರೂಪಾಯಿ ಕೊಡೋಣ
ಬಲವಂತನ ಮಾಯಮಾಡಿಸಿ ಬಿಡೋಣ ॥

***

ದೃಶ್ಯ : 9

ಗಾಂಜಿ ಸಿದ್ಧಪ್ಪ ಮಂತ್ರ ವಿದ್ಯೆಯಲ್ಲಿ ಬಹಳ ನಿಪುಣ. ಮನುಷ್ಯರನ್ನು ನಾಯಿಯಾಗಿ, ನಾಯಿಯನ್ನು ಮನುಷ್ಯನನ್ನಾಗಿ ಮಾಡುತ್ತಿದ್ದನು. ಬಲವಂತನನ್ನು ನಾಯಿಯಾಗಿ ಮಾಡಿದರೆ, ನೀನು ಬೇಡಿದಷ್ಟು ರೊಕ್ಕ, ರೂಪಾಯಿ ಕೊಡುತ್ತೇನೆಂದು ತಾರಾ, ಮಲ್ಲಮ್ಮ ಸೇರಿ ಸಿದ್ದಪ್ಪನಿಗೆ ಹೇಳಿದರು. ಸಿದ್ಧಪ್ಪ ಗಂಡಗಾರಿಯ ಮುಳ್ಳಿಗೆ ಮಂತ್ರ ಹಾಕಿ ಅದನ್ನು ಬಲವಂತನ ನಡುನೆತ್ತಿಯ ಸುಳಿ ನೋಡಿ ಚುಚ್ಚಿದರೆ, ಬಲವಂತ ನಾಯಿಯಾಗಿ ಹೋಗುತ್ತಾನೆಂದನು. ತಾರಾ, ಮಲ್ಲಮ್ಮ ಸೇರಿ ಉಪಾಯ ಮಾಡಿ ಬಲವಂತನ ನೆತ್ತಿಗೆ ಚುಚ್ಚಿದರು. ಬಲವಂತ ನಾಯಿಯಾದನು.

ಸಿದ್ಧಪ್ಪ

ಜೈ ಶಂಕರಾಜೈ ಶಂಕರಾ
ಜೈ ಪಂಡರೀನಾತಾ ಜೈ ಜೈ ॥
ಮಾಟ ಮಂತ್ರಮಾಡಾಕ ಬಂದೇವು
ಯೆನ್ನ ನಾಲಿಗಿ ಎಡದಾಗಕಪ್ಪ ಮಚ್ಚಿ ಐತಿ
ನಾನಾ ಹೇಳಿದ ವಚನಹುಸಿ ಹೋಗುದಿಲ್ಲ
ಜನರ ಮನಸ್ಸಿನೊಳಗಿಂದನಾ ಬಲ್ಲೆ
ಅಂಗೈ ನೋಡಿಆಯುಷ್ಯ ಅಳಿಬಲ್ಲೆ
ಆಗದವರನ್ನುಕೊಲ್ಲುಸುವುದು ಬಲ್ಲೆ ॥

ಮಲ್ಲಮ್ಮ

ಬಾಬಾ ಸಾಹೇಬರೆನೀವು ಯಾವ ಊರಿನವರು
ಈ ಉರಿಗೆ ಯಾಕೆ ಬಂದೀರಿ ॥

ಸಿದ್ಧಪ್ಪ

ತಾಯವ್ವ ನಾವು ಬಬಲಾದಿ ಕಡೆಯವರು
ಯಲ್ಲಮ್ಮನ ಗುಡ್ಡಕ್ಕೆ ಹೊರಟಿದ್ದೇವೆ
ರಾತ್ರಿಯಾಯಿತು ಈ ಊರಲ್ಲಿ
ವಸ್ತಿಯಿದ್ದ ನಾಳಿಗೆ ಹೋದರಾಯಿತ್ತೆಂದು ಉಳಿದೆ

ಮಲ್ಲಮ್ಮ

ಬಾಬಾ ಸಾಹೇಬರೆ ಈ ಊರಾಗ
ನೀವು ಎಲ್ಲಿ ವಸ್ತಿ ಇರ‌್ತೀರಿ ॥
ನಿಮಗೆ ಇಲ್ಲಿ ಯಾರು ಗೊತ್ತಿದ್ದಾರೆ

ಸಿದ್ಧಪ್ಪ

ತಾಯವ್ವ ನಾವು ಬಾವಾಗಳು
ಈ ಊರಾಗಾ ಯಾರ‌್ಯಾರು ಗೊತ್ತಿಲ್ಲ ॥
ನೀರ ಕಂಡಲ್ಲಿ ನೀರ ಕುಡಿತ್ತೇವಿ
ಕೂಳ ಸಿಕ್ಕಲಿ ಊಟ ಮಾಡ್ತೇವಿ
ರಾತ್ರಿಯಾದಲ್ಲಿ ವಸ್ತಿ ಮಾಡ್ತೇವಿ
ನಾಲ್ಕು ದಿಕ್ಕ ನಮಗೆ ಕಾವಲು
ಈ ಊರಿನ ಅಡಿವೆಪ್ಪನ ಮಠದಾಗ
ವಸ್ತಿಯಿದ್ದ ನಾಳಿ ಪ್ರಯಾಣ ಬೆಳೆಸುತ್ತೇವೆ ॥

ಮಲ್ಲಮ್ಮ

ಬಾಬಾ ಸಾಹೇಬರೆ
ನೀವು ಯಾವ ಯಾವ
ವಿದ್ಯಾಬುದ್ಧಿ ಕಲಿತ್ತೀರಿ
ಏನೇನ ಮಾಯ ಮಾಟ
ಮಾಡತೇರಿ ಹೇಳ್ರಿ ಯಮಗ ॥

ಸಿದ್ಧಪ್ಪ

ತಾಯವ್ವ ನಾವುಕಲಿತ ವಿದ್ಯೆಯೊಂದರೆ
ಮನುಷ್ಯನ್ನ ನಾಯಿ, ನರಿ, ಹುಲಿ, ಕರಡಿ ಮಾಡ್ತೇವಿ
ನಾಯಿ, ನರಿ, ಹುಲಿ ಕರಡಿಯನ್ನ ಮನುಷ್ಯನ್ನ ಮಾಡ್ತೇವಿ
ಮಾಯ ಮಂತ್ರ ಮಾಡುವ ಕಲಾ ನಮಗೆ ಸಿದ್ಧಿ ಆಗೇತಿ ॥

ಮಲ್ಲಮ್ಮ

ಬಾಬಾ ಸಾಹೇಬರೆ ನಿಮ್ಮ ಹೆಸರೇನು ॥

ಸಿದ್ಧಪ್ಪ

ತಾಯವ್ವ ನನಗೆ ಗಾಂಜಿ ಸಿದ್ಧಪ್ಪ ಅಂತಾರ
ತಾಯವ್ವ ನಿನ್ನ ಹೆಸರೇನು ॥

ಮಲ್ಲಮ್ಮ

ಬಾಬಾ ಸಾಹೇಬರೆ ನನಗೆ ಪುಟಾಣಿ ಮಲ್ಲಮ್ಮ ಅಂತಾರ
ಇದೇ ಊರಿನಲ್ಲಿ ನನ್ನ ವಾಸ ॥

ಗಾಂಜಿ ಸಿದ್ಧಪ್ಪ ಕೇಳೊಯೆನ್ನ ಮಾತಾ
ಯಾರಿಗೆ ತಿಳಿದಂಗಮಾಡೋ ಬೇತಾ ॥
ಬಲವಂತನ ಮಟಾಮಾಯ ಮಾಡಬೇಕು
ಬಲವಂತ ಮಾಡ್ಯಾನೊನಮಗ ಮೋಸ ॥
ಬಲವಂತ ಕಳದಾನಮಂದ್ಯಾಗ ಮಾನ
ಬಲವಂತನ ಮಾಡಬೇಕೊ ನಾಯಿನ ॥
ನಾಯಿಯಂಗನಮ್ಮ ಬೆನ್ನ ಹತ್ತಬೇಕೊ
ನೀ ಬೇಡಿದಷ್ಟು ರೊಕ್ಕ ರೂಪಾಯಿ ಕೊಡುವೆವು ॥

ಸಿದ್ಧಪ್ಪ

ಒಳ್ಳೆದು ಮಲ್ಲಮ್ಮಮಾಡತೇನು ನಾನಾ
ನಾನೂರು ರೂಪಾಯಿಕೊಡರೆವ್ವ ಕೈಯಾಗ
ಗಂಡ ಗಾರಿಯ ಮುಳ್ಳತಂದ ಕೊಡಬೇಕು
ಗಂಡಗಾರಿಯ ಮುಳ್ಳಿಗಿಹಾಕುವೆ ಮಂತ್ರವ
ಗಂಡಗಾರಿಯ ಮುಳ್ಳಅಂತರಲಿ ಒಯ್ದು
ಬಲವಂತನ ನಡುನೆತ್ತಿಸುಳಿ ನೋಡಿ ಚುಂಚಬೇಕು
ಆಗ ಬಲವಂತ ಹೋಗ್ತಾನಕರಿ ಸ್ವಾನಾಗಿ

ಮಲ್ಲಮ್ಮ

ಸಿದ್ಧಪ್ಪ ಮಾಡುವೆನಿಮಗ ಶರಣಾ
ನಾನೂರು ರೂಪಾಯಿತಗೋರಿ ನೀವು
ಇನ್ನೇನು ಬೇಕಹೇಳರಿ ನೀವು
ನೀವು ಬಯಸಿದ್ದಕೊಟ್ಟ ಕಳಿಸುವೆವು
ಕೊಡುವಂತರಾಗೀರಿಗಂಡಗಾರಿಯ ಮುಳ್ಳ
ಜೋಕಿಂದ ಒಯ್ಯುವೆನಾನು ಮನಿಗೆ
ಸಿದ್ಧಪ್ಪ ಸಾಹೇಬರೆಯಾವಾಗ ಚುಂಚಬೇಕು
ಈ ಗಂಡಗಾರಿಯ ಮುಳ್ಳಹೇಳರಿ ನೀವಾ ॥

ಸಿದ್ಧಪ್ಪ

ಮಲ್ಲಮ್ಮ ಅಕ್ಕಿಕಾಳಗಿಮಂತ್ರ ಹಾಕುವೆ
ಅಕ್ಕಿಕಾಳ ಬಲವಂತನಮೈಮ್ಯಾಗ ಒಗಿಬೇಕು
ಬಲವಂತ ಸುಸ್ತಾಗಿಮಲಗತಾನ ಮನಿಯಾಗ
ಮೈಮ್ಯಾಲ ಖಬರಇರುದಿಲ್ಲ ಅವಗ
ಆಯಾಳಿ ನೋಡಿನಡುನೆತ್ತಿನ ಸುಳಿ ನೋಡಿ
ಚುಂಚಬೇಕುಈ ಗಂಡಗಾರಿಯ ಮುಳ್ಳ
ಆಗ ಬಲವಂತನಾಯಾಗಿ
ಹೋಗತಾನಕಂಡ ಕಂಡವರ ಮನಿಗಿ
ಗಾಂಜಿ ಸಿದ್ಧಪ್ಪನ ಕೈಯಂದರಸಿದ್ಧಿಸಿದ ಕೈ ॥

***