ದೃಶ್ಯ : 16

ಕಳ್ಳರನ್ನು ಹಿಡಿಯಲಿಕ್ಕೆ ತಿಮ್ಮ ತನ್ನ ಸರಬೂತ್ಯಾ ಎಂಬ ನಾಯಿಯ ಸಮೇತವಾಗಿ ಹೋಗುತ್ತಾನೆ. ಗುಡ್ಡ ಗಂವಾಹರ ಸುತ್ತುವನು. ಕಳ್ಳರಿಗೂ ಆಳುಕು ಪ್ರಾರಂಭವಾಯಿತು. ತಿಮ್ಮನ ನಾಯಿ ಕಳ್ಳರನ್ನು ಹಿಡಿಯುತ್ತದೆ. ರಾಜ, ಮಂತ್ರಿ, ತಿಮ್ಮ ಸೇರಿ ಕಳ್ಳರನ್ನು ಹೊಡೆದು ತಮ್ಮ ಎಲ್ಲ ಸಂಪತ್ತನ್ನು ಮರಳಿ ಪಡೆದು ಕೊಳ್ಳುವರು.

ಕಳ್ಳರು

ನಮ್ಮನ್ನ ಹಿಡಿಬೇಕಂತ
ಹಾಕ್ಯಾನೊ ರಾಜ ಅಕಲ
ರಾಜ ಹೊಡಿಸ್ಯಾನೊ ಡಂಗುರ
ಆ ಬ್ಯಾಡ್ರ ತಿಮ್ಮಹಿಡದಾನೊ ವಿಳ್ಳೆಯನಾ
ಇದಕ ಅಂಜು ಕಳ್ಳರ ನಾವಲ್ಲ
ಹೇಳಿ ಕೇಳಿದರೋಡಿ ಮಾಡ್ತೇವಿ
ನಮ್ಮ ಹೆಸರು ಗಡದ್ಯಾ ಗುಡದ್ಯಾ ॥

ತುಡಗ ಮಾಡಬೇಕತುಡಗ ಮಾಡಬೇಕ
ಹತ್ತು ವರ್ಷ ಕುಂತ ಉಂಡರುಸವಿದಷ್ಟು ಮಾಡಬೇಕ
ಪೊಲೀಸ ಗೌಡರಿಗೆಕುಮ್ಮಕ್ಕು ಇರಬೇಕ
ಹುಗ್ಗಿ ಹೋಳಿಗಿ ಮಾಡಿ ನಾವುಉಣಬೇಕ
ಹುಗ್ಗಿ ಹೋಳಿಗಿ ಉಂಡ ನಾವುಕುಮ್ಮಕ್ಕು ಮಾಡಬೇಕ
ಕುಮ್ಮಕ್ಕು ಮಾಡಿರಾಜನ ಮನಿ ಒಡಿಬೇಕ ॥

ರಾಜ

ಎಲೆ ತಿಮ್ಮ ನಿದ್ದಿ ಮಾಡಿಕಳೆದೆ ನನ್ನ ಬದುಕ
ಕಳ್ಳರು ನುಗ್ಗಿ ತೊಳದರುನನ್ನ ಬದುಕ
ಕೆಟ್ಟ ಮಂತ್ರಿ ಮಾತ ಕೇಳಿಬಿದ್ದಿನೊ ಪಾಶೇಕ
ನಿನ್ನ ಬಿಡುದಿಲ್ಲೊ ತಿಮ್ಮಏರಿಸುವೆ ಸುಲಿಗೆ
ತಲೆ ಒಡೆದ ಹಾಕುವೆ ಬೇಲ್ಯಾಗ
ಇಸವಾಸ ಕೊಟ್ಟಿನೊಗೋಣ ಕೊದ್ಯೊ ತಿಮ್ಮ ॥
ಭಾಸಿ ಕೊಟ್ಟ ಮ್ಯಾಲ ತಿಮ್ಮಮೋಸ ಮಾಡೀದಿ
ನಿದ್ದಿ ಮಾಡಾಕ ಬಂದಿದ್ದೇನೊಯೆನ್ನ ವಾಡೇಕ ॥

ತಿಮ್ಮ

ನನ್ನ ಹಾಕತಾರೊ ಸೂಲಿಗಿ
ಏನ್ ಮಾಡಲಿ ನಾನಾ ॥
ಕೆಟ್ಟ ನಾಯಿ ಮಾಡೇತಿ ಕೇಡವನ
ರಾಜ ಮಂತ್ರಿ ಸೇರಿಹರಿದ ಬಿಡ್ತಾರ ನನ್ನ
ದೂರಿ ಶರಣ ಮಾಡಿ ಕೇಳುವೆ
ಅಪ್ಪಣೆ ಕೊಡು ಹಿಡಿಯುವೆ ಕಳ್ಳರನ ॥

ನಾಯಿ ಹೋಗೆತಿ ನೋಡಿದರೇನು
ಇಂದಿಗಿ ಮೂರ ದಿನ ಆಗೇತಿ ॥
ಗುಡ್ಡ ಗಂವಾಹರಹುಡಿಕಿ ಬಂದೇನಿ ನಾನಾ
ಕುಂತೀರಿ ಜನ ನೀವುನೋಡಿರೆನೊ ನಾಯಿನ
ರಾಜ ಮಂತ್ರಿ ಯೆನ್ನಜಗ್ಗಾಡತಾರೊ
ಶಿರ ಕತ್ತರಸತನಅಂತಾರೊ
ಯಾರ‌್ಯಾರೊ ಬಂದಉಳಿಸಿರೊ ನನ್ನ ಪ್ರಾಣ ॥

ಏನ್ ಹೇಳಲಿ ತಂದೆ ಕಳ್ಳರ ಮುಂದ
ಕುಂತತಿ ಯೆಮ್ಮ ನಾಯಿ ॥
ರಾಜ್ಯ ಬಿಟ್ಟ ಹೋಗಂತ ಅಂತೀರಿ
ನನ್ನ ಕೊಲ್ಲಾಕ ಹವಣಸತಿರಿ
ನನ್ನ ಮ್ಯಾಲ ಇರಲೆಪ್ಪ ನಿಮ್ಮ ಕರುಣ
ತಡ ಮಾಡೋಣ ಬ್ಯಾಡ ನಾವು ॥
ಕಳ್ಳರನ ಹಿಡಿದ ಮಾಡೋಣ ಊಟವ
ಬಂದದ್ದು ಬರಲಿ ಗುರುವಿನ ದಯೆಯಿರಲಿ ॥

ರಾಜ

ನಡಿ ಹೋಗೊಣ ತಿಮ್ಮ
ಕಳ್ಳರನ ಹಿಡಿಯಾಕ
ಯಾವ ಗುಡ್ಡಕ್ಕ ಮುತ್ತಿಗಿ
ಹಾಕಿ ಬರೋಣ
ಯಾವ ಗುಡ್ಡ ಗಂವಾಹರ
ಸುತ್ತಿ ಬರೋಣ
ಕಳ್ಳರನ ಹಿಡಕೊಂಡ
ಬರಬೇಕೊ ನಾವು ॥

ಮಂತ್ರಿ

ಏನ್ ಸಿಕ್ಕಿರಿ ಕಳ್ಳರ‌್ಯಾ ನೀವು
ನಮ್ಮ ಕೈಯಾಗ ॥
ದೊರಿ ರಾಜನ ಮನಿ ನೀವುಮಾಡಿದಿರಿ ಕಳ್ಳತನ
ಪರಿಪರಿ ಕಾಡಿದಿರೊ ನಮ್ಮನ್ನ
ನಮ್ಮ ವಜ್ರ ವೈಡೂರ‌್ಯ ಬಿಚ್ಚಿ ಚೆಲ್ಲರಿ
ಮುತ್ತು ಮಾಣಿಕದ ಹವಳ ಬಿಚ್ಚಿ ಚೆಲ್ಲರಿ ॥
ನಿಮ್ಮನೊದ ಹಾಕುವೆ ಶೂಲಕ್ಕ
ಜೀವದಿಂದ ಬಿಡುದಿಲ್ಲ ನಿಮ್ಮನ್ನ ॥

ಕಳ್ಳರು

ನಮ್ಮ ತಂದೆ ತಾಯಿಬಂಧು ಬಳಗಾ
ಯಾರ‌್ಯಾರಿಲೊ ಜೋಡಾ
ಕಾಲ ಬೀಳುವೆವುಕೈಯಾರೆ ಮುಗಿಯುವೆವು
ಕಳ್ಳತನ ಮಾಡಿದ್ದು ತಪ್ಪಾಯಿತು
ನಿಮ್ಮ ಸಾಮಾನು ನಿಮಗೆ ಕೊಟ್ಟ ಹೋಗುವೆವು
ಜನ್ಮದಾಗ ಕಳ್ಳತನ ಮಾಡುದು ಬಿಟ್ಟೆವು
ಶರಣ ಮಾಡುವೆವುಗಲ್ಲಿಗೆ ಹಾಕಬೇಡಿರಿ ॥

* * *

ದೃಶ್ಯ : 17

ರಾಜ ಮಾತು ಕೊಟ್ಟಂತೆ ತನ್ನ ಮಗಳು ಪೊಲಾವತಿಯನ್ನು ನಾಯಿಯ ಜೊತೆಗೆ ಲಗ್ನ ಮಾಡಿಕೊಡುವನು. ಪೊಲಾವತಿಗೂ ವ್ಯಥೆಯಾಯಿತು. ನನ್ನ ಹಣೆಬರಹ ಇದೇ ಇರಬೇಕೆಂದು ತಿಳಿದು ನಾಯಿಯನ್ನು ಮದುವೆಯಾದಳು.

ತಿಮ್ಮ

ರಾಜ ಮಾಡಬ್ಯಾಡ್ರಿಅನುಮಾನ
ನಮ್ಮ ನಾಯಿ ಹಿಡದತಿ ಕಳ್ಳರನ ॥
ನಾಯಿ ಕೂಡಮಾಡಬೇಕರಿ ಲಗ್ಗನ
ನಿಮ್ಮ ಮಗಳನಕೊಡಬೇಕರಿ ನಾಯಿಗೆ
ನೀವು ಕೊಟ್ಟ ವಚನಉಳಿಸಿಕೊಳ್ಳಿರಿ ॥

ರಾಜ

ಮಗಳೆ ಪೊಲಾವತಿ ಬಾ ಬಾ
ರಾಹ ಹಂಸೆ ಬಾ ಬಾ ॥
ಹಣ್ಣು ಹಾಲ ತಿನಿಸಿನ್ನಿ
ಪಂಜರದ ಗಿಳಿಯಂತ ॥
ದೊಡ್ಡ ಸಂಸ್ಥಾನಕ ಕೊಡಬೇಕೆಂದ
ಅಕಲ ಹಾಕಿದ್ದೆ ॥
ಸೆಟವಿ ಬರೆದ ಹಣೆಬರಹ
ಹರಿದರು ತಪ್ಪದು ॥

ಪೊಲಾವತಿ

ಕರಸೀದ ಕಾರಣವೇನು ತಂದೆ
ತೀವ್ರದಿಂದ ಬಂದೇನು ॥
ಗೆಳತಿಯರೊಳಗೆ ಕೂಡಿ ಆಡುತ್ತಿದ್ದೆ
ಯಾಕೊ ಸಪ್ಪಗೆ ಮಾರಿ ಆಗೇತಿ ನಿಮ್ಮದು ॥
ಮಾರಿ ಯಾಕೊ ಬತ್ತಿದಾಂಗ ಆಗೇತಿ
ನೀವು ತಡೆಯದೇ ಹೇಳರಿ ನಮ್ಮ ಮುಂದ ॥

ರಾಜ

ಅಯ್ಯ ಮಗಳೆಏನ್ ಹೇಳಲಿ
ತಿಮ್ಮನ ನಾಯಿಹಿಡದತಿ ಕಳ್ಳರನ ॥ಪ ॥
ಕಳ್ಳರನ ಹಿಡಿದವರಿಗೆ ಕೊಡುವೆನು ಮಗಳನ
ವಚನ ಕೊಟ್ಟಿದ್ದೆ ನಾನು ॥
ಸುತ್ತ ರಾಜ್ಯಕ್ಕೆಲ್ಲಡಂಗುರ ಹೊಡಿಸಿದ್ದೆ
ಹಿಂಗ ಆಗುತ್ತದೆಂದುಗೊತ್ತಿರಲಿಲ್ಲ ನನಗ ॥
ಕೊಟ್ಟ ವಚನತಪ್ಪಿದರ ಹತ್ತುವದು ಪಾಪ
ನಾಯಿ ಕೂಡಮಾಡುವೆ ನಿನ್ನ ಲಗ್ನನ ॥

ಪೊಲಾವತಿ

ಅಯ್ಯ ಯೆನ್ನ ಅದೃಷ್ಟ
ಜನದಾಗ ಆತೊ ಅಪಮಾನ ॥
ನಾಯಿ ಕೂಡ ಲಗ್ಗನ ಆಗುದ ಬಂತೊ
ಕಳೆಯಿತೊ ನನ್ನ ಅಭಿಮಾನ ॥
ನನ್ನ ಹಣೆ ಮೇಲೆ ಬರದಾಳೊ ಸೆಟವಿ
ತಂದಿ ಮಾತ ಮೀರಿದರ ಹತ್ತುವದು ಪಾಪ ॥

ರಾಜ

ಪಾಪದಾಗ ಬಿದ್ದೇನುಪಾಪ ಮಾಡಿ ಕೆಟ್ಟೆನೊ
ಪೊಲಾವತಿ ಮಗಳನ್ನಬಂಗಾರದಂತಹ ಮಗಳನ್ನ
ರತ್ನ ತೂಕದ ಮಗಳನ್ನನಾಯಿ ಸ್ವಾಧೀನ ಮಾಡಿನೊ
ನಾಯಿ ನನ್ನ ಅಳಿಯ ಆಯಿತೊಬ್ರಹ್ಮ ಬರೆಹ ಹಿಂಗಿತ್ತೇನೊ ॥

ಪ್ರಧಾನಿ ಮಾಡಪ್ಪ ಲಗ್ಗನನೋಡಲಾರೆನೊ ನಾನಾ
ಹೆಂಗ ನೋಡಲೊನಾಯಿಯ ಮಾರಿಯ
ಕೊಟ್ಟ ವಚನತಪ್ಪದು ಮಾಡಪ್ಪ ಲಗ್ಗನವ ॥

* * *

ದೃಶ್ಯ : 18

ಪೊಲಾವತಿ ತನ್ನ ಪತಿ ನಾಯಿಯ ಜೊತೆ ಪ್ರೇಮದಿಂದ ಸರಸವಾಡುವಾಗ, ಪ್ರೀತಿಯಿಂದ ಅದರ ತಲೆಯ ಮೇಲೆ ಕೈಯಾಡಿಸುವಾಗ, ಅವಳಿಗೆ ಮುಳ್ಳು ಹತ್ತಿತು. ಅದನ್ನು ಕಿತ್ತಳು. ತಕ್ಷಣ ನಾಯಿ ಮನುಷ್ಯವಾಗುತ್ತದೆ. ಅವನೇ ಬಲವಂತ. ಅವನು ಹಿಂದೆ ನಡೆದ ವೃತ್ತಾಂತವನ್ನೆಲ್ಲ ಹೇಳುವನು. ಪೊಲಾವತಿಗೂ ತುಂಬ ದುಃಖವಾಯಿತು. ಅವಳು ತಾರಾ, ಮಲ್ಲಮ್ಮರಿಗೆ ಶಿಕ್ಷೆ ಕೊಡಲು ಹಂಚಿಕೆ ಹಾಕಿದಳು.

ಪೊಲಾವತಿ

ಅಯ್ಯ ಯೆನ್ನ ನಾಯಿಕ ರಾಜ
ಮಾಡುವೆ ನಿಮಗ ಶರಣ ॥
ಮಾತನಾಡೊ ನೀನಾ ಇರದಿದ್ದರ
ಬಿಡುವೇನು ನಾನಾ ಪ್ರಾಣ ॥
ಪ್ರೇಮದಿಂದಲಿ ಕಾಯೊ
ಯೆನ್ನ ಮುತ್ತೈದ ತನವ ॥
ಗಂಡ ಹೆಂಡತಿಯಾಗಿ
ಮಾಡೋಣಹರುಷದಿಂದ ಬಾಳೆ
ಸುಖ ಸರಸದಿಂದ ಇರೋಣ ನಾವು ॥

ನಮ್ಮ ರಾಜನ ನೆತ್ತಿಯೊಳಗ
ಏನಿದು ಯಾವ ಮುಳ್ಳ ॥ ॥ಪ ॥
ಗಂಟಾಗಿ ಸೋರುವದು ಕೀವಾ
ನಮ್ಮ ಪ್ರಿಯಗೆಮಾಡುವೆ ಅಡುಗೆ
ನಮ್ಮ ಕಾಂತಗವೇಳೆ ಆದೀತೊ
ತುತ್ತ ಮಾಡಿಉಣಿಸುವ ಬಾಯಾಗ
ನಮ್ಮ ರಾಜಾಗಮುಳ್ಳಿನ ಬ್ಯಾನಿ
ಆಗುವದೊ ಯೆನಗಜೀವ ಮರುಗುವದೊ
ನೆತ್ತಿ ಮ್ಯಾಲಿನ ಮುಳ್ಳ ಕಿತ್ತ ಬಿಡುವೆನು ನಾನಾ ॥

ಬಲವಂತ

ನೀ ಕೇಳ ಪೊಲಾವತಿಯೆನ್ನ ಕಾಂತಿ
ಯೆನ್ನ ಹೆಸರ ಬಲವಂತನಬಸವಂತನ ತಮ್ಮ ನಾನಾ ॥ಪ ॥
ಅಣ್ಣನ ಹೆಂಡತಿ ತಾರಾ ಮಾಡ್ಯಾಳ ಈ ರೀತಿ
ಮಲ್ಲಿ ಮಾಡ್ಯಾಳ ಪಿತೂರ ಈ ರೀತಿ ॥
ನಾನಾ ನಾಯಾಗಿ ದೇಶಾವರಿ ಹೋಗಂತ
ಮಾಡ್ಯಾರೊ ಮಾಡಿಕಿ ಮಂತ್ರ ಮಾಡಿ
ನಾಯಿ ಮಾಡ್ಯಾರೊಮರಗತನ ಮನದಾಗ ॥

ಪೊಲಾವತಿ

ಪ್ರಾಣಕಾಂತ ನಿಮ್ಮ ಮಾತ ಕೇಳಿ
ಜೀವಕ್ಕಿಲ್ಲೊ ಸಮಾಧಾನ
ಆಗಿಂದೀಗ ಕರೆಸುವೆ ತಂದಿಯ
ಆ ತಾರಾ ಮಲ್ಲಿ ಶಿರಾ ಹೊಡಿಸುವೆ
ಇದಕ್ಯಾಕ ಮಾಡುವಿರಿ ಅನುಮಾನ ॥

* * *

ದೃಶ್ಯ : 19

ನಾಯಿಯ ಜೊತೆಗೆ ಮದುವೆ ಮಾಡಿದ ಮಗಳು, ಈಗ ಮತ್ತೊಬ್ಬನನ್ನು ಮದುವೆಯಾದಳೆಂದು ರಾಜ ಸಂಶಯ ತಾಳುತ್ತಾನೆ. ಮಗಳನ್ನು ಬೈಯುವನು. ಪೊಲಾವತಿ ಮತ್ತು ಬಲವಂತ ವಾಸ್ತವವನ್ನು ಹೇಳಿದಾಗ ರಾಜನಿಗೆ ವಿಷಯ ಮನವರಿಕೆಯಾಗುತ್ತದೆ.

ರಾಜ

ಕೆಟ್ಟ ಮಗಳೆಕಳದಿ ನೀ ಮಾನಾ
ಕುಂದ ತಂದೀಯ ನಮಗ
ಈಗಿಂದೀಗ ಕೀಳುವೆ ಎರಡೂ ಕಣ್ಣ
ಕಾಲ ಮ್ಯಾಲ ಮಾಡಿ ಹಾಕುವೆ ಗೂಟಕ
ನಾಯಿ ಕೊಂದ ಮಾಡಿಕೊಂಡೆ ಮತ್ತೊಬ್ಬನ
ನಿನ್ನ ತಲಿ ಬಿಡಿಸಿ ಚೆಲ್ಲುವೆ ಬಾವ್ಯಾಗ ॥

ಪೊಲಾವತಿ

ತಂದಿ ಯಾಕೊ ನನ್ನ ಮ್ಯಾಲ ಕೋಪವ ನಾ
ನಾಯಿ ಕೊಂದಆಗಿಲ್ಲ ಮತ್ತೊಬ್ಬನ ॥
ಪಾಪ ಪುಣ್ಯವ ಎರಡು ಮಾಡಿರಿ ತೂಕವನ
ಅನ್ನೆದ ಮಾತಆಡಿ ಕೆಡಬ್ಯಾಡ್ರಿ ನೀವಾ
ಈಗೀಂದೀಗ ನಾಯಿಮಾಡಿ ತೋರಿಸುವೆ
ಮಾಡಿರಿ ಚೆಂದವಾಗಿ ಜೋಪಾನ
ನಿಮ್ಮ ಪಾದಕ್ಕಶಿರ ಬಾಗಿ ಬೇಡಿಕೊಳ್ಳುವೆ ॥

ಬಲವಂತ

ಶರಣ ಶರಣ ಮಾವ
ಮಾಡಿರಿ ನನ್ನ ಜೋಪಾನ ॥
ಅಣ್ಣನ ಹೆಂಡತಿಮಾಡ್ಯಾಳೊ ಈ ರೀತಿ
ಮಲ್ಲಿ ಯೆನಗ ಮೋಸ ಮಾಡ್ಯಾಳೊ
ನನ್ನ ಮ್ಯಾಲ ಸಂಶಯ ಪಡಬ್ಯಾಡರಿ
ಶರಣ ಮಾಡುವೆ ನಿಮಗ ॥

* * *

ದೃಶ್ಯ : 20

ರಾಜ ಬಲವಂತನನ್ನು ಪ್ರೀತಿಯಿಂದ ಕರೆದನು. ಅವರ ಅಣ್ಣನನ್ನು ಕರೆಸಿದನು. ಅಣ್ಣ : ತಮ್ಮಂದಿರರು ಪರಸ್ಪರ ಭೇಟಿಯಾದರು. ಬಲವಂತ ನಡೆದ ಸಂಗತಿಗಳನ್ನೆಲ್ಲ ಅಣ್ಣನಿಗೆ ತಿಳಿಸಿದನು. ಬಲವಂತನನ್ನು ನಾಯಿಯನ್ನಾಗಿ ಮಾಡಿದ ತಾರ, ಮಲ್ಲಮ್ಮಳಿಗೆ ಶಿಕ್ಷೆಯಾಯಿತು. ರಾಜನು ಬಲವಂತ : ಬಸವಂತರ ವ್ಯಕ್ತಿತ್ವಕ್ಕೆ ಮಾರು ಹೋಗಿ ಅವರಿಗೆ ಅರ್ಧ ರಾಜ್ಯ ಹಾಗೂ ಅರ್ಧ ಸಂಪತ್ತನ್ನು ಒಪ್ಪಿಸಿದನು. ಇಬ್ಬರು ಸಹೋದರರು ಸುಖ ಸಂತೋಷದಿಂದ ಬಾಳ ತೊಡಗಿದರು.

ರಾಜ

ಬಾರೊ ಬಲವಂತ ಯೆನ್ನ ಅಳಿಯ
ಬಲವಂತ ನೀ ಗುಣವಂತ ಅಳಿಯ ॥ ॥ಪ ॥
ತಿಳಿಲಿಲ್ಲಪಾ ಯೆನಗಮಾಡುವೆ ಶರಣ
ನಿನ್ನ ನಾಯಿ ಮಾಡಿದವರನ್ನ
ಕರಿಸುವೆ ಈ ಗಳಿಗಿಯಲಿ
ತಾರಾ ಮಲ್ಲಿ ಶಿರಾ ಹರಿಸುವೆ
ನಿಮ್ಮಣ್ಣ ಬಸವಂತನನ್ನ
ಕರೆಸುವೆ ಈ ಕ್ಷಣದಾಗ ॥

ಬಸವಂತ

ಬಾರೊ ನನ್ನ ತಮ್ಮ ಬಲವಂತ
ಎಲ್ಲಿಗೆ ಹೋಗಿದ್ಯೋ ನೀನಾ ॥
ನಿನ್ನ ಮಾರಿ ನೋಡಿಆಗೀತು ಬಾಳ ದಿನಾ
ಕೂಳ ನೀರ ಸವಿಹತ್ತವಲತೊ ಯೆನಗ
ಗುಡ್ಡ ಗಂವಾಹರಸುತ್ತಿ ಬಂದೀನ
ಒಂದು ದಿನ ನಾವು ಕದನ ಮಾಡಿಲ್ಲ
ತಂದೆ ತಾಯಿ ಗುರ್ತ ಇಲ್ಲೊ ನಮಗ
ಚಿಕ್ಕಂದಿರತ ಕೂಡಿಬೆಳೆದೇವು ನಾವು ॥

ಬಲವಂತ

ಅಣ್ಣ ಕೇಳೊ ಚಿತ್ತ ಕೊಟ್ಟಯೆನ್ನಮಾತ
ಹೆಂಗಸರ ಮಾತಪಿತೂರವೆಷ್ಟ ॥ಪ ॥
ನಿನ್ನ ಹೆಂಡತಿಮಾಡ್ಯಾಳೊ ಮಸಲತ್ತ
ಪಕ್ಕದ ಮನಿ ಮಲ್ಲಿಮಾಡ್ಯಾಳೊ ಕೆಟ್ಟಬೇತಾ
ಸಾಹಸ ಮಾಡಿ ಕದಿಯಾಕಬಂದಿದ್ರ ಯೆನ್ನ ಮನಸ್ಸ
ಆಗದೆಂದು ಒತ್ತಿ ಹೇಳಿದೆ ನಾನಾ
ತಾರಾ ಮಲ್ಲಿ ಮಾಡಿಕಿಮಾಡಿಸ್ಯಾರೊ ಯೆನಗ
ನಾಯಿಯಾಗಿ ನನ್ನ ಪಾಡು ಅಲೆದಾಡುದಾತು
ತಿಮ್ಮ ಕೂಳ ನೀರ ಹಾಕಿ ಸಲುವ್ಯಾನ ಯೆನ್ನ ॥

ಅಣ್ಣಾ ಕೇಳೊ ಚಿತ್ತ ಕೊಟ್ಟ ಯೆನ್ನ ಕಷ್ಟ
ಊರಿನ ದೊರಿ ಮನಿ ಕಳು ಆಯಿತೊ ॥ಪ ॥
ಕಳ್ಳನ ಹಿಡಿದವರಿಗೆಕೊಡುವೆ ಮಗಳನ
ನುಡಿಸ್ಯಾನ ದೊರಿಊರಾಗ ಡಂಗರು
ತಿಮ್ಮ ನಾಯಿ ಹಿಡಿದೇನುನಾನಾ ಕಳ್ಳರನ
ದೊರಿ ಮಾಡ್ಯಾನಹೆಸರ ಪೊಲಾವತಿ
ಆಕಿ ಬಾಳ ರೂಪವತಿಬಾಳ ಗುಣವಂತಿ
ಪೊಲಾವತಿ ಪ್ರೇಮದಿಂದ ಶಿರ ಕೈಯಾಡಿಸಿದಾಗ
ಹತ್ತಿತು ಗಂಡಗಾರಿಯೆಂಬ ಮಾಡಿಕಿ ಮುಳ್ಳ
ಕಿತ್ತಳು ಪೊಲಾವತಿಗಂಡ ಗಾರಿ ಮುಳ್ಳ
ನಿಜ ರೂಪ ಆದೇನು ಈ ಬಲವಂತ
ತಾರಾ ಮಲ್ಲಿ ಮಾಡ್ಯಾರೊ ಈ ರೀತಿ ॥

ರಾಜ

ತಾರಾ ನಿನ್ನ ಹಾಕುವೆ ನೇಣ ಕಂಬಿಗಿ
ಮಾಡಿದಿ ಮೋಸದಾಟ ನೀನಾ ॥
ಅಣ್ಣ ತಮ್ಮರ ಅಗಲಿಸಿ ಬಿಟ್ಟಿ ನೀನಾ
ಹಾಕಿ ಬಿಡುವೇನು ನೇಣಕ್ಕ ॥
ತಲೆಯನು ಬೋಳಿಸಿ, ಸುಣ್ಣವ ಹಚ್ಚಿ
ಕೊರಳಿಗಿ ಹಾಕುವೆ, ಸುಣ್ಣವ ಹಚ್ಚಿ
ಕೊರಳಿಗಿ ಮ್ಯಾಲ ಕುಳ್ಳಿರಿಸಿ ಊರೆಲ್ಲ ಮೆರೆಸಿ
ಕಳೆಯುವೆ ನಿನ್ನ ಮಾನವ ನಾ ॥
ಜನದಾಗ ಮಾರಿಯೆತ್ತದಂಗ ಮಾಡುವೆ
ತಿಳಿಕೋರ ನಿನ್ನ ಮನಕ ॥

ತಾರಾ

ಅನ್ನೆ ಮಾಡಿನಿ ನಾನಾ ಒಪ್ಪಿಕೊಳ್ಳಿರಿ ನೀವಾ
ಹರೆಯದ ಕಾಲಕ್ಕ ಹಾದರ ಮಾಡಿ ॥
ಮುಪ್ಪಿನ ಕಾಲಕ್ಕ ಮುಲಗಾ ಹೋಗುವುದು
ದೇವರಂತ ಮೈದುನ ನಮ್ಮ ಬಲವಂತ ॥
ಬಲವಂತನ ಮ್ಯಾಲ ಮನಸ್ಸ ಮಾಡಿ ಕೆಟ್ಟೆನು ನಾನಾ
ನಿಮ್ಮ ಮಗಳೊಳಗೆ ನಾನು ಒಬ್ಬ ಮಗಳೆಂದು ॥
ನಾನು ಮಾಡಿದ ಅನ್ನೆ ಒಪ್ಪಿಕೊಳ್ಳರಿ ನೀವಾ
ಕೈಕಾಲು ಬಿದ್ದು ಶರಣು ಮಾಡುವೆನು ॥

ಚಾಂಡಲಗಳಿರಾಬಿಡರೋ ನನ್ನ
ಅಡವಿ ಪಾಲ ಆಗುವೆ ನಾನಾ ॥
ಮೈಮ್ಯಾಗಿನ ದಾಗೀನಎಲ್ಲ ತಗೋರಿ ನೀವಾ
ಬಿಟ್ಟ ಬಿಡ್ರಿ ಯೆನ್ನ ॥
ಹೆಣ್ಣಿನ ಕೊಲ್ಲುವದುಕಲ್ಯಾಣ ಅಲ್ಲೊ
ಪಾಪಕ್ಕೆ ಹೋಗಿ ಕಡಿ ಬ್ಯಾಡರಿ ನೀವಾ ॥
ಕೈಕಾಲು ಬಿದ್ದು ಹೇಳುವೆ ಬಿಟ್ರ ಬಿಡ್ರಿ ಯೆನ್ನ ॥

ರಾಜ

ಬಾರೊ ಬಲವಂತಒಪ್ಪಿಸುವೆ ಈ ರಾಜ್ಯ
ಧನ ದ್ರವ್ಯ ಐತಿಕೊಡುವೆ ನಿನಗ ॥
ಅರ್ಧ ರಾಜ್ಯ ಪಟ್ಟ ಕೊಡುವೆ ನಿನ್ನ ಸ್ವಾಧೀನ
ಅರಸನಾಗಿ ಆಳೋ ನೀನಾಯೆನ್ನ ರಾಜ್ಯದೊಳಗ ॥
ಗುಣವಂತ ಬಲವಂತಇರಪ್ಪ ರಾಜ್ಯದೊಳಗೆ
ನಿಮ್ಮಣ್ಣನ ರಾಜ್ಯಕ್ಕೆಕರಕೊಂಡ ಬಾರೊ ನೀನಾ ॥
ಅಣ್ಣ ತಮ್ಮ ಇರಬೇಕೊ ಸುಖವಾಗಿ
ಅದನ್ನೋಡಿ ನಾನಾಸಂತಸ ಪಡತನೊ ॥
ಅಣ್ಣ ತಮ್ಮ ಇರುಬೇಕೊ ನಿಮ್ಮಂಗ
ನಿಮ್ಮನ ನೋಡಿಕಲಿಬೇಕೊ ಜನವೆಲ್ಲ ॥
ಬಲವಂತ : ಬಸವಂತನಿಮಗ ಶರಣು ಶರಣು ॥

ಮಂಗಳಂ

 ***