‘ಬಸವತತ್ವ : ಸಾಮಾಜಿಕ ಬದಲಾವಣೆ’ ಪುಸ್ತಕವು ಮರುಮುದ್ರಣಗೊಳ್ಳುತ್ತಿರುವುದು ಸಂತೋಷದ ಸಂಗತಿ. ಯಾವುದೇ ಯುಗವಾದರೂ ಮೂಲ ಸಂವೇದನೆಗಳು ವಿಸ್ತರಿಸುತ್ತಲೇ ಸಾಗುತ್ತವೆ ಎಂಬುದು ನನ್ನ ವಿಶ್ವಾಸ. ೨೧ನೇ ಶತಮಾನದಲ್ಲೂ ಕೂಡ ಬಸವತತ್ವದ ಅಧ್ಯಾತ್ಮದ ಬೆಳಕು ವರ್ತಮಾನದ ಸಂಗತಿಯಂತೆಯೇ ಸಾಗಿ ಬಂದಿದೆ. ಹಾಗಾಗಿಯೇ ನಮ್ಮಲ್ಲಿ ಪ್ರಾಚೀನ, ಆಧುನಿಕ ಎರಡೂ ಮೌಲ್ಯ ಪದ್ಧತಿಗಳು ಜೀವನಕ್ರಮ ದಲ್ಲಿ ಅಳವಡಿಕೆಯಾಗಿವೆ. ಅಂತಹ ಒಂದು ಸಂವೇದನೆಯ ವಿಸ್ತರಣೆಯೇ ‘ಬಸವತತ್ವ : ಸಾಮಾಜಿಕ ಬದಲಾವಣೆ’. ಈ ಕೃತಿಯ ವೈಚಾರಿಕ, ಸಾಮಾಜಿಕ, ಸಾಂಸ್ಕೃತಿಕ, ಚಾರಿತ್ರಿಕ ಹಾಗೂ ಅನೇಕ ಅಲಕ್ಷಿತ ಸಂಗತಿಗಳು ಪ್ರಸ್ತುತ ಸಮಾಜಕ್ಕೆ ಮತ್ತೆ ಮತ್ತೆ ಬೇಕಾಗುತ್ತವೆ. ಈ ಹಿನ್ನೆಲೆಯಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಕೃತಿಯನ್ನು ಕನ್ನಡದ ಓದುಗಲೋಕ ವಿಶಿಷ್ಟ ಬಗೆಯಲ್ಲಿ ಅನುಸಂಧಾನ ಮಾಡುತ್ತದೆಂದು ಆಶಿಸುವೆ. ಇಂತಹ ಕೃತಿಗೆ ಮೌಲಿಕ ಲೇಖನಗಳನ್ನು ನೀಡಿದ ಎಲ್ಲ ಲೇಖಕರನ್ನು ಪ್ರಾಂಜಲವಾಗಿ ಗೌರವಿಸುವೆ.

ಈ ಪುಸ್ತಕದ ಮೊದಲ ಮುದ್ರಣ ರೂಪಗೊಳ್ಳುವಲ್ಲಿ ಹಾಗೂ ವಿಚಾರ ಸಂಕಿರಣ ಸಂಘಟಿಸುವಲ್ಲಿ ನೆರವಾದ ಎಲ್ಲ ಮಹನೀಯರನ್ನು ಈ ಸಂದರ್ಭದಲ್ಲಿ ನೆನೆಯುವೆ.

ಎರಡನೇ ಮುದ್ರಣಕ್ಕೆ ನೆರವಾದ ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪನವರಿಗೆ ಮತ್ತು ಮಾನ್ಯ ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ ಕೃತಜ್ಞತೆಗಳು. ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್ ಅವರಿಗೆ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೂ ನನ್ನ ಕೃತಜ್ಞತೆಗಳು. ಮುಖಪುಟ ವಿನ್ಯಾಸ ರೂಪಿಸಿದ ಶ್ರೀ ಕೆ.ಕೆ. ಮಕಾಳಿ ಅವರಿಗೆ, ಪುಟವಿನ್ಯಾಸ ಮಾಡಿದ ಜೆ. ಬಸವರಾಜ ಅವರಿಗೆ ಹಾಗೂ ಇದನ್ನು ಓದುವ ಆಸಕ್ತ ಓದುಗರಿಗೆ ಕೃತಜ್ಞತೆಗಳು.

ಮಹೇಶ ತಿಪ್ಪಶೆಟ್ಟಿ
ಮಕ್ಕಳ ದಿನಾಚರಣೆ
ಶನಿವಾರ, ೨೦೦೯