ಸಾರಂಗಮಠದ ಬಾವಿಯ ಹತ್ತಿರ ನಿಲ್ಲಿಸಿದ ಶಾಸನ, ಬಸವನ ಬಾಗೇವಾಡಿ
ಕ್ರಿ.ಶ. ೧೦೪೯, ಚಾಳುಕ್ಯ ಅರಸ ಮೊದಲನೆಯ ಸೋಮೇಶ್ವರ ಕಾಲ
(S.I.I., XI-I, No.83)

೧.  @ಸ್ವಸ್ತಿ ಭುವನಾಸ್ರಯ ಶ್ರೀಪೃ[ಥ್ವೀ] ವಲ್ಲಭ ಮಹಾರಾಜಾಧಿರಾಜ ಪರಮೇಸ್ವರ

೨.  ಪರಮಭಟ್ಟಾರಕ [೦ ಸತ್ಯಾಶ್ರಯಕುಳತಿಳಕಂ] ಚಾಳುಕ್ಯಾಭರಣಂ ಶ್ರೀಮ-

೩.  ತ್ತ್ರೈಳೋಕ್ಯಮಲ್ಲದೇವರ ವಿಜಯ [ರಾಜ್ಯಮು]ತ್ತರೋತ್ತರಾಭಿ[ವೃ]ದ್ಧಿ-

೪.  ಪ್ರವರ್ದ್ಧಮಾನಮಾಚನದ್ದ್ರಾರ್ಕ್ಕತಾರಂಬರಂ ಸಲುತ್ತಮಿರೆ ಪಲ್ಲವ-

೫.  ದಿಗ್ವಿಜೆಯಂ ಗೆಯ್ದು ಕರಹಡನಾಡೊಳಗಣ ವಗ್ಘಾಪುರದ ನೆಲೆ [ವೀಡಿ]-

೬.  ನೊೞ್ಸು ಖಸಂಕತಾವಿನೋದದಿಂ ರಾಜ್ಯ [ಗೆ]ಯ್ಯುತ್ತಮಿರೆ ಸ್ವಸ್ತ್ಯನವ

೭.  ರತಪರಮಕಲ್ಯಾಣಾಭ್ಯುದಯಸಹಸ್ರ [ಫ]ಳಭೋಗಭಾಗಿನಿ ದ್ವಿತೀ –

೮.  ಯಲಕ್ಷ್ಮಿ ವಿಳಾಸವಿದ್ಯಾಧರಿ ದಾನ [ಚಿನ್ತಾ]ಮಣಿ ಸವತಿಮದಭಂಜನೆ

೯.  [ಸಮಸ್ತಾ]ನ್ತ [ೞ್ಪು] ರಮಖಮಣ್ದನಿ [ಶ್ರೀ]ಮತ್ತ್ರೈಳೋಕ್ಕಮಲ್ಲದೇವ ವಿಶಾ –

೧೦. ಳವ [ಕ್ಷ] ಸ್ಥಳನಿವಾಸಿನಿಯರಪ್ಪ [ಶ್ರೀ] ಮತ್ಪಿರಿಯರಸಿಯ ರ್ಮ್ಮೈಳಲ –

೧೧. ದೇವಿ [ಸ್ವಸ್ತಿ] ಸಕವರ್ಷ ೯೭೧ನೆಯ [ವಿರೋ]ಧಿ ಸಂವತ್ಸರದ ಭಾದ್ರಪದದ

೧೨. ಪುಣ್ನಮೆ ಭೌಮ [ವಾರ ಸೋಮ] ಗ್ರಹಣ ಪರ್ವ್ವನಿಮಿತ್ತ ಲಕ್ಷೆ ಹೋಮದೊ-

೧೩. ಳ್ ಶ್ರೀ[ಬ]ಲ್ಲ ವರಸರ ಸಂಮುಖದೇಸೆದೊಳಂ ಭೊಂಥಾ ದೇವ [ನ]ಯಱ ಚಿದ್ದ –

೧೪. ಯ್ಯ ..ತಿಯೊ[ಳಂ] ಸಮಸ್ತಪ್ರಧಾನರಂ ಪೇಱ್ದೆಱ್ದು ತರ್ದ್ದವಾಡಿಸಾಸಿರದೊಳ –

೧೫. [ಗ]ಣ[ಮುಂ]ಬಾಡದ ಬಳಿಯ ಭತ್ತಗ್ರಾಮ ಹೊಂನವಾಡಿ [ಯೊ]ಳೆ ಯಮನಿಯಮಾಸ-

೧೬. ನಪ್ರಾ[ಣಾ]ಯಾಮ ಪ್ರತ್ಯಾಹಾರಧ್ಯಾನಧಾರಣಾಜಪಸಮಾಧಿಸಂಪನ್ನರಪ್ಪ

೧೭. ಪಾಸುಪತಯೋಗಾಚಾರ್ಯ್ಯ ರ್ಜ್ಞಾನರಾಸಿ ವ್ಯಾಖ್ಯಾನದೇವರ ಸ್ಥಾನದ ಸೋಮೇ-

೧೮. ಸ್ವರದೇವರ ದೇಗುಲದ ಖಣ್ಡ ಸ್ಪುಟಿತನವಕರ್ಮ್ಮದ ಬೆಸಕ್ಕಂ ದೇವರ ಭೋಗಕ್ಕ[೦]

೧೯. ಧಾರಾಪೂರ್ವ್ವಕಂ ಸರ್ವ್ವನಮಸ್ಯಂ ಗುಡೆ ಚನ್ದೆಯಭಟ್ಟ ರ್ಪ್ಪ[ಡೆ]ದು ಕುಡೆ

೨೦. ಕೇತಯ್ಯಂ ಬಿಟ್ಟ ದೋಣಿಯ ನೆಲ ಮತ[ರು ನಾ]ಲ್ವತ್ತು ರೇವಣಯ್ಯ

೨೧. ಬಿಟ್ಟ [ದೋಣಿಯ] ಮತ್ತರ್ ಪತ್ತು ಅನ್ತು ದೋಣಿಯ ನೆಲ ಮತ್ತರ್ ಅಯ್ವತ್ತು

೨೨. ಅಂಕದೊಳಂ ನೆಲ ಮತ್ತ [ರ್] ೫೦ [ಮಾಣಿಯಬ್ರಹ್ಮ]ಪುರಿಗೆ ಚನ್ದೆಯ ಭಟ್ಟೋ –

೨೩. ಪಾಧ್ಯಾಯರ್ಗ್ಗೆ ಧಾರಾಪೂರ್ವ್ವಕ [ದಿಂದೆ] ಬಾಚಿಮಯ್ಯ ಸೆಟ್ಟಿಯರ ಮಗ ಕಾ –

೨೪. ಳಿದಾಸಯ್ಯಂ ಬಿಟ್ಟ ದೋಣಿಯ ನೆಲ ಮತ್ತರ್ ಅಯ್ವತು ಅಂಕದೊಳಂ ನೆಲಂ

೨೫. ಮತ್ತರ್ ೫೦ ಅನ್ತು ಮತ್ತರ್ ನೂ[ಱು] ಅಂಕದೊಳಂ ನೆಲ ಮತ್ತರ್ ೧೦೦ ಮಂ

೨೬. ಸ್ವಸ್ತಿ | [ವಿನುತಾ] ನೇಕವೇದೆವೇದಾಂಗ ತತ್ವಜ್ಞಾನಮಾರ್ತ್ತಣ್ಡಜ್ವಾಳಾಮೆಣ್ಡಿತ ಪುಣ್ಡರೀ-

೨೭. ಕಾಕ್ಷ ಬ್ರಹ್ಮಲಕ್ಷ್ಮೀಲಕ್ಷಿತವಿಶಾಳವಕ್ಷ ಸ್ಥಳ[ರ್ಹಂ] ಸಯುವತಿಸರಾ –

೨೮. ಜಿವಿರಾಜಮಾನರಪ್ಪ ಶ್ರೀಮತ್ ಬಾ[ಗ]ವಾಡಿಯ ಮಹಾಜನ ಮ –

೨೯. ಯ್ನೂರ್ವ್ವರು ಮೀ ಧರ್ಮ್ಮಮಂ ಕೈ [ಕೊ] ಣ್ಡು ಪ್ರತಿಪಾಳಿಸುವರ್  ||

೩೦. ಸಾಮಾನ್ಯೋಯಂ ಧರ್ಮ್ಮಸೇತುರ್ನೃಪಾಣಾಂ ಕಾಳೇ ಕಾಳೇ ಪಾಳನೀಯೋ [ಮ]-

೩೧. [ಹ]ದ್ಭಿಃ ಸರ್ವ್ವಾನೇತಾಂ ಭಾಗಿನಃ ಪಾರ್ತ್ಥಿವೇ [ನ್ದ್ರಾಂ ಭೂ]ಯೋ ಭೊಯೋ

೩೨. [ಯಾಚ]ತೇ ರಾಮಚನ್ದ್ರಃ  | ಸ್ಥಾನಪತಿ ಗೊರಮಸಿಕ್ಕೀ ಸ್ಥಾನ-

೩೩. [ದ] ಭಿಕ್ಷಾರ್ತ್ರಿ….೦ ಪಟಣಸ್ಥಾನ ದೊಳಿರಲಾ

೩೪. ……ಗಳು.. ಕಳೆಯಲ್ಲವೇರೞ್ದು |

* * *

ಸಾರಂಗಮಠದ ಬಾವಿಯ ಹತ್ತಿರ ನಿಲ್ಲಿಸಿದ ಶಾಸನ, ಬಸವನ ಬಾಗೇವಾಡಿ
ಕ್ರಿ.. ೧೧೬೯, ಕಳಚುರಿ ಅರಸ ರಾಯಮುರಾರಿ ಸೋವಿದೇವನ ಕಾಲ
(S.I.I., XV, No. 112)

೧. ನಮಸ್ತುಂಗಶಿರ [ಶ್ಚುಂಬಿ ಚಂದ್ರಚಾಮರಚಾರವೇ ತ್ರೈ]

೨. [ಳೋಕ್ಯ] ನಗರಾರಂಭ ಮೂಲಸ್ತಂಭಾಯ ಶಂ [ಭವೇ ||]

೩. @ಸ್ವಸ್ತಿ ಶ್ರೀಮತ್ಕಳಚುರ್ಯ್ಯ ಚಕ್ರವರ್ತ್ತಿ ನಾಯಮುರಾರಿ

೪. ಸೋಯಿದೇವ ವರ್ಶದ ೩ನೆಯ ವಿರೋಧಿ ಸಂವತ್ಸ –

೫. ರದ ಪುಷ್ಯ ಶುದ್ಧ ೫ ವ್ರಿಹಸ್ಪತಿವಾರದಂದುನುತ್ತರಾಯ –

೬. ಣ ಸಂಕ್ರಾನ್ತಿ [ಪರ್ವ್ವ] ನಿಮಿತ್ತದಿಂ ಶ್ರೀಮದುತಮದ –

೭. ಗ್ರಹಾರಂ ಬಾ[ಗೆ]ವಾಡಿಯ ಶ್ರೀಮಲ್ಲಿಕಾರ್ಜ್ಜುನದೇವ –

೮. ರ ಧೂಪದೀಪನೈವೇದ್ಯ ಚೈತ್ರಪವಿತ್ರ ಖಂಡಸ್ಪುಟಿ [ತ]

೯. ಜೀರ್ಣ್ನೋದ್ಧಾರಕ್ಕವಲ್ಲಿಯ ಮಾಲಗಾಱ [ಗೊ]-

೧೦. ತ್ತ [ಳಿ] ವೊಕ್ಕಲಲು [ಬಿಟ್ಟ] ಮದುವೆ ಮದವಣಿಗನ –

೧೧. ಲ್ಲಿ ಹಾಗ ೧ ಮದೆವಳಿಗೆ[ಯ]ಲ್ಲಿ ಹಾಗ ೧ ಜೋಳ ಕೊಳಗ ೩

೧೨. ಪೂಜಾರಿ ತಫೋಧನನ ಕಾಪಿಂಗೆ ಬೇಳೆ ಸಂಕ್ರಾನ್ತಿಯ ಬೇಳೆ [ಕೊ]

೧೩. ತ್ತಳಿಯಯ್ನೂರ್ವ್ವರ್ಗ್ಗವರ ಸಂಗತ ಹೂವಂ ಕಟ್ಟಿ ಹಡದುದು

೧೪. ಗೌಜೆದೇವರ್ಗ್ಗೆ ವ್ರಿತ್ತಿಯಿಂ ಧಾರೆಗೊಂಡವರಲ್ಲಿ ಹಾಗ ೧

೧೫. ಬೇ[ಱೂ] ರಿಂ ಬಂದ ಬಾಡು ಕಾಯ ಭಣ್ಡಿ ೧ ಕ್ಕಂ ಕಾಲರೂ ೧೨ ಉಳ್ಳಿಯ ಸ

೧೬. [ರ್ವ್ವಬಾಧ] ಕಟ್ಟು ೧……..[ನಹಿ]… ಕೊ

* * *

ತಾಲೂಕು ಕಛೇರಿ ಹತ್ತಿರ ನಿಲ್ಲಿಸಿದ ಶಾಸನ, ಬಸವನ ಬಾಗೇವಾಡಿ
ಕ್ರಿ.ಶ. ೧೧೭೦, ಕಳಚುರಿ ಅರಸ ರಾಯಮುರಾರಿ ಸೋವಿದೇವನ ಕಾಲ
(S.I.I., XV, No. 113)

೧. ಶ್ರೀ ನಾರಾಯಣ || ನಮಸ್ತುಂಗಶಿರಶ್ಚುಂಬಿ ಚಂದ್ರಚಾಮರಚಾರವೇ  |

೨. ತ್ರೈಳೋಕ್ಯನಗರಾರಂಭ ಮೂಲಸ್ತಂಭಾಯ ಶಂಭವೇ || ಪಾನ್ತು

೩. ವೋ ಜಲದೆಸ್ಯಾಮಾ: ಶಾರ್ಙ್ಗಜ್ಯಾಘಾತ ಕರ್ಕ್ಕಶ್ಯಾತ್ರೈಳೋಕ್ಯ

೪. ಮಂಡಪಸ್ತಂಭಾಶ್ಚತ್ವಾರೋ ಹರಿಬಾಹವಃ  || ವ್ರಿತ್ತ  || ಶ್ರೀಮದ –

೫. ಪಾರವಾರಿಧಿಗಭೀರರಮರ್ತ್ತ್ಯರಿ [ಗೋ] ಸಮೋಂನತಭೀ[೯ಮ ಪರಾಕ್ರಸ್ಸೆ [೯]-

೬. ಕಲವೇದವಿಶಾರದರಾಶ್ರಿತಾವ್ಯತೌಘಾಮರಭೂರುಹರ್ಮ್ಮ-

೭. ನುಚರಿತ್ರರರೊಳು ನೆಗರ್ದ್ದಗ್ರಹಾರ ಚೂಡಾಮಣಿ ಬಾಗವಾಡಿಯ

೮. ಧರಾಮರರೊಳು ದೊ[ರ] ಯಾರ್ದ್ಧರಿತ್ರಿಯೊಳು  ||ಕಂದೆ || ವೇವವಿದರಖಿಲ

೯. ಧರ್ಮ್ಮೋಪಾ[ದೇ]ಯರ್ಸ್ಸಕಲಶಾಸ್ತ್ರ ಪರಿಣತಕಧಿಕ  | ಭೂದೇವಾಕ್ಯಯತಿಳಕರ್ಮ್ಮೇದಿ

೧೦. ನಿಯೊಳ್ಬಾಗವಾಡಿಯೆಸೆವಯ್ನೂರ್ವ್ವರು  || ಸ್ವಸ್ತಿ ಸಮಸ್ತಭು –

೧೧. [ವ] ನಾಶ್ರಯಂ ಶ್ರೀ ಪ್ರಿಥ್ವೀವಲ್ಲಭ ಮಹಾರಾಜಾಧಿರಾಜ ಪರಮೇಶ್ವರ

೧೨. ಪರಮಭಟ್ಟಾರಕ ರಿಪುರಾಯಕುಳಕುಧರಕುಳಿಶದಂಡ ರಾಜಮಾರ್ತ್ತಂಡ

೧೩. ಚೋೞ ಮಾಳವ ಬಳಬಳಾಹ ಕಶಮೀಱನ ವಿಜಯಲಕ್ಷ್ಮೀಭವರವ ಹಾತೋರಣಂ  |

೧೪. ಶಸ್ತ್ರ ಶಾಸ್ತ್ರ ವಿದ್ಯಾಧರ ರಾಜ್ಯಲಕ್ಷ್ಮೀಧರ  | ಬಪ್ಪನಸಿಂಗ | ಸಾಹಸೋತ್ತುಂಗಂ ಶೃಮ-

೧೫. ತು ಕಳಚುರಿಯ ಚಕ್ರವರ್ತ್ತಿ ರಾಯಮುರಾರಿ ಸೋವಿದೇನವರ್ಷ [ದ] ೩ನೆಯ ವಿರೋಧಿ

೧೬. ಸಂವತ್ಸರದ ಪಾಲ್ಗುಣ [ಶುದ್ಧಿ] ೧೧ ಆದಿವಾರ [ದಂದ]! ಸ್ವಸ್ತಿ ವಜ್ಞಾತಾನೇಕ ವೇದವೇದಾಂಗ

೧೭. ತತ್ವಜ್ಞಾನ ಮಾರ್ತ್ತಂಡೋಜ್ಜಳ ಮಿಂಡಿ . . . . . . [ಬ್ರ]ಹ್ಮ ಲಕ್ಷ್ಮೀ ಲಕ್ಷಿತ ವಿ-

೧೮. ಶಾಳ ವಕ್ಷಸ್ಥಳ . . . . . . . . . . ವಿರಾಜಮಾನರ

೧೯. ಪ್ಪ ಶ್ರೀಮದುತ್ತಮ [ದಗ್ರಹಾರ] ಬಾಗವಾಡಿಯಶೇಷಮಹಾಜನವಯ್ನೊರ್ವ್ವ

೨೦. ರುಂ  || ಸವಿಟ್ಯಾಣದಲ್ಲು ಸಬಾಲವ್ರಿದ್ಧೆ . . . . . . . . . ದೇಕಸ್ಥರಾಗಿಱ್ದು ತಂಮಪ್ರಿಯ.

೨೧. ಪುತ್ರಂ ಸ್ವಸ್ತಿ ಸಮಸ್ತರಾಜ್ಯ . . . . . . [ಮಹಾಮಾತ್ಯ] ಪದವೀರಾಜಮಾನ –

೨೨. ಮಾನೋಂನತ ಪ್ರಭುಮಂತ್ರೋತ್ಸಾಹ [ಶಕ್ತಿತ್ರಯಸಂ]ಪನ್ನರಪ್ಪ ಶ್ರೀಮತು ಹಿ-

೨೩. [ರಿ]ಯರಸಿ ಪಟ್ಟಮಹಾದೇವಿ ಸೋವಲದೇವಿಯ [ರಮನೆಯ] ಸೇನಬೋವ ರಾಜಾಧ್ಯಕ್ಷ

೨೪. [ರೇ]ವಣಯ್ಯನಾಯಕರು ಚಂದ್ರಾರ್ಕ್ಕಸ್ಥಾ . . . . . . . ಮಾಗಿ ಮಾಡಿಸಿದ ಶ್ರೀ ಸೋ –

೨೫. [ಮ]ನಾಥ ದೇವರ್ಗ್ಗಂ ಶ್ರೀ ಚೆಂನಕೇಶವದೇವರ್ಗ್ಗಂ  || ಅಂಗಭೋಗ ನೈವೇದ್ಯ ಖಂಡಸ್ಸು

೨೬. [ಟಿತ] ಜೀರ್ಣ್ನೋದ್ಧಾರನಿಮಿತ್ತದಿಂ ಶ್ರೀ ಬಕುಳೇಶ್ವರದೇವರ್ಗ್ಗೆ ಸರ್ವ್ಯನಮಶ್ಯ[ದ]

೨೭. [ಭೂ]ಮಿಯೊಳಗಣ . . . . ಶ್ಯವಾಗಿ . . . . . . . . .

೨೮. . . ಯಲು ಸರ್ವ್ವನಮಸ್ಯಂ || ಭರಣದ [ಕೋ]ಲ ಮತ್ತರು ಅಯ್ವತ್ತು . . . . .

೨೯. . . ಭರಣದ ಮತ್ತರು ಅಯ್ವತ್ತು ಅನ್ತು ಸರ್ವ್ವನಮಶ್ಯಂ ಮತ್ತರು ೧೦[೦] . . .

೩೦. . . ಪದಿ [ಇ]ಡಾವುರದ ಬಟ್ಟೆಯಿಂ ಮೂಡ ಮಧ್ಯಮವಸುಗೆಯ [ಗಡಿಂ] . . .

೩೧. . . ಮತ್ತರು ೧೬ ನಿ ಸಾ[ಧ್ಯ]ವಾಡಿಗೆಯ ಬಟ್ಟೆಯಿಂ ಬಡಗ ಕಾ[ಕಂಡಿ]ಗೆಯ ಸೀ . . .

೩೨. . . ಮೊಗೆ ವಸುಗೆಯ ಮತ್ತರು ೧೨[ಇ] ವಣಿಯ ಬಟ್ಟೆಯಿಂ ಮೂಡ

೩೩. . . ಗೆ ವಸುಗೆಯ ಮತ್ತರ್ರು[ ||*]

* * *

ಬಸವೇಶ್ವರ ದೇವಾಲಯದ ನಂದಿ ಮಂಟಪದ ಕಂಬಗಳಲ್ಲಿಯ ಶಾಸನಗಳು ಬಸವನ ಬಾಗೇವಾಡಿ
(ಕ.ಭಾ.ಸಂ. ೨೭, ಸಂ.೨, ನವಂಬರ್, ೧೯೯೪)

ಬಲಭಾಗ ಕಂಬದ ಪೂರ್ವ ಮುಖ :

ಕ್ರಿ.ಶ. ೧೧೭೮, ಕಳಚುರಿ ಅರಸ ಸಂಕಮದೇವನ ಕಾಲ

ಭಾಗ
೧. ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ ತ್ರೈಳೋಕ್ಯನಗರಾರಂಭ
೨. ಮೂಲಸ್ತಂಭಾಯ ಶಂಭವೇ  ||ಶ್ರೀಮತು ಕಳಚುರ್ಯ
೩.ಭುಜಬಳ ಚಕ್ರವರ್ತ್ತಿ ಸಂಕಮದೇವ ವರ್ಷದ ೩ನೆಯ ವಿಳಂಬಿ

ಭಾಗ
೪. ಸಂವತ್ಸರದ ಆಶಾಡ ಶುದ್ಧ ೧ ಬೃಹಸ್ಪತಿ
೫. ವಾರದಂದು ದಕ್ಷಿಣಾಯನ ಸಂಕ್ರಾಂತಿ ಭ್ಯತಿ
೬. ಪಾತ ನಿಮಿತ್ತದಿಂ ದಾರಾಪೂರ್ವಕಂ ಮಾಡಿ
೭. ಶ್ರೀಮತು ಬೊನ್ತೇಸ್ವರ ದೇವರಿಗೆ ಸಾಸಿರ್ವರು
೮. ಬಿಟ್ಟರು ಹೇಱೆಂಗೆ (ಲೆ) ದೆಱಿ ತಳದ್ಯೆ
೯. ನೂರ್ವರುಯಿಂತೀಧರ್ಮ್ಮಮಂ ಪ್ರತಿಪಾೞೆಸು
೧೦. ವರು

ಭಾಗ
೧೧. ಸ್ವದಂತ್ತಂ ಪರದತ್ತಂ ವಾಯೋ ಹರೇತಿ ವ
೧೨. ಸುಂದರ ಸಷ್ಠಿರ್ವ್ವರ್ಷ ಸಹಸ್ರಾಣಿ ವಿ
೧೩. ಷ್ಠಾಯಾಂ ಜಾಯತೇ ಕ್ರಿಮೀ ||

ಬಲಭಾಗ ಕಂಬದ ಉತ್ತರ ಮುಖ (ಕೆಳಭಾಗದಲ್ಲಿ):
೧. ಶ್ರೀಮತು ಬೊಂತೇಸ್ವರ ದೇವರ್ಗ್ಗೆ
೨. ಮರುಳಯ್ಯ ಸೋಮೂ
೩. ವಾರ ಅಮವಾಸ್ಯಿ ಸೂರಿಯ
೪. ಗ್ರಹಣದಲ್ಲಿ ತನ್ಹೆಸರ ಗೆಯ್ಯ

* * *

ಎಡಭಾಗ ಕಂಭದ ಉತ್ತರ ಮುಖ:

ಕ್ರಿ.ಶ. ೧೧೯೯, ಯಾದವ ಅರಸ ಇಮ್ಮಡಿ ಜೈತುಗಿಯ ಕಾಲ

ಭಾಗ
೧. ಶ್ರೀ ಜಯತ್ಯಾಯುರ್ಬ್ಬವನಂ ಭೊಃತಾಂಗವಾಡ ಜಠಂ ವ
೨. ಪುಃ ವಾಮಾಂಘ್ರಿ ನೂಪುರಾಕಾರಂ ಬಹುಬ್ರ
೩. ಹ್ಮಾಂಡಮಂಡಳಂ  || ನಮಸ್ತುಂಗ ಶಿರಶ್ಚುಂಬಿ ಚಂ

ಭಾಗ
೪. ದ್ರಚಾಮರ ಚಾರವೇ || ತ್ರೈಲೋಕ್ಯ ನಗರಾರಂಭ ಮೂ
೫. ಲಸ್ತಂಭಾಯ ಸಂಭವೇ  || ಸ್ವಸ್ತಿ ಶ್ರೀ
೬. ಮತು ಯಾದವ ನಾರಾಯಣ ಪ್ರತಾಪ ಚ
೭. ಕ್ರವರ್ತ್ತಿ ಜಯಿತಪಾಲದೇವರುಷದ ಎಣ್ಪನೆಯ ಕಾ
೮. ಳಯುಕ್ತ ಸಂವವ್ಫರದ ಮಾಘ ಸುಧ ದಸಮಿ ಸೋಮವಾರ
೯. ರದಲು || ಸ್ವಸ್ತಿ ಶ್ರೀಮದುತ್ತಮದಗ್ರಹಾರಂ ಭಾಗ
೧೦. ವಾಡಿಯ ಅಶೇಷ ಮಹಾಜನಂಗಳುಂ ಸಭಾಮಂಟಪದ
೧೧. ಲು ನೆರೆದೇಕಕಸ್ತರಾಗಿರ್ದ್ದು ಮೂಗುಳ ಬುದ್ಧಿಯ ನಾರಣದೇ
೧೨. ವನ ಕೈಯಲು ದ್ರಬ್ಯವ ಕೊಂಡು ಶ್ರೀ ಬೊಂನ್ತೇಸ್ವರ ದೇ

ಭಾಗ
೧೩. ವರ ಕೇರಿಯಿಂ ತೆಂಕದಿಸೆಯ ಕೇರಿಯನು ಧಾರೆಯಿಂ ಕೊಟ್ಟರು ಆ
೧೪. ನ (ನಾ) ರಣದೇವನ ಕೈಯಲು ಶ್ರೀ ಬೊಂನ್ತೇಸ್ವರ ದೇವರ ಮಟದಾಚಾ
೧೫. ರ್ಯ್ಯ ದೇವರಾಶಿ ಪಂಡಿತದೇವರು ಆ ನಾರಣದೇವನೆ
೧೬. ದ್ರಬ್ಯವಂ ಕೊಟ್ಟು ಆ ಕೇರಿಯನು ಶ್ರೀ ಮದೇ(ದ್ದೇ)ಸಿ
೧೭. ಯ ದಣ್ಡನಾಯಕ ಮಧುವರಸೈಂಗಳು
೧೮. ಮುದ್ರಹಸ್ತ ನಾಗರಸಂಗಳ ಸಂನಿದಾನದಲು ಅ
೧೯. ಯಿನೊರ್ಬ್ಬರುಂ ಸಭಾಂಟಪದಲು ನೆರೆದೇಕಸ್ತರಾ
೨೦. ಗಿರ್ದ್ದು ಶ್ರೀ ದೇವರಾಸಿ ಪಂಡಿತ ದೇವರ ಕೈಯಲು
೨೧. ದ್ರಬ್ಯವಂ ಕೊಂಡು ಆ ತೆಂಕದೆಸೆಯ ಕೇರಿಯಂ
೨೨. ಸರ್ವನಮಶ್ಯವಾಗಿ ಶ್ರೀಬೊಂನ್ತೇಸ್ವರ ದೇವರಿಗೆ ದಾ
೨೩. ರಾಪೂರ್ವಕಂ ಮಾಡಿಕೊಟ್ಟರು.* ಮುಂನಾದುತ್ತ
೨೪. ಮವ್ರಿತ್ತಿ ನಿಂದುದೆಡೆಯೊಳು ಸುಸ್ತಾಪಸಾಚಾರ್ಯ
೨೫. ರಿಂದಿಂನ್ನಾನ್ನಿಂದುದನೆಲ್ಲವಂ ಬಿಡಲ್‌ಸಮರ್ತ್ತೆಂದು (ಪಡೆವೆನಾಂ ಮತ್ತೆಂದು) ದೇವರಾ
೨೬. ಸಿ ಪಂಡಿತದೇವರು ನಾನಾಗುಣಮುಳ್ಳ ಅಇನೂರ್ವರಿ
೨೭. ಗೊ-ಸಸಕ್ಕಿ ಸಂಪಂನ್ನಂ ತಾಂ ಪಡೆದೀಗಳೀ ಕೇರಿಯಂ ಶ್ರೀ
೨೮. ಬೊಂನ್ತೇಶ್ವರಂಗಿತ್ತನು * ಸ್ವದತ್ತಂ ಪರದತ್ತಂ ವಾಯೋ
೨೯. ಹರೇತಿ ವಸುಂದರಾಂ ಷಷ್ಠಿರ್ವರ್ಷ ಸಹಸ್ರಾಣಿ ವಿ
೩೦. ಷ್ಠಾಯಾಮ ಜಾಯತೇ ಕ್ರಿಮಿಃ

* * *

ವಿಠಲಸಿಂಗ ರಜಪುತ್ಅ ವರ ಮನೆಯ ದಕ್ಷಿಣದ ಗೋಡೆಯಲ್ಲಿ ಕಟ್ಟಿದ ಶಾಸನ  ಬಸವನ ಬಾಗೇವಾಡಿ
೧೦ನೆಯ ಶತಮಾನ ( S.I.I., XV, No. 523)

೧. ಧಾರಾಧರಿ

* * *

ತೆಗ್ಗಿನ ಮಠದ ಹತ್ತಿರದಲ್ಲಿರುವ ಶಾಸನ, ಬಸವನ ಬಾಗೇವಾಡಿ
೧೩ನೆಯ ಶತಮಾನ ( S.I.I., XV, No. 640)

೧. [ಮ] ಸಗವಸ್ಯ

* * *

 

ಲಕ್ಕವ್ವಕೆರೆ ಹೊಲದಲ್ಲಿಯ ಶಾಸನ, ಬಸವನ ಬಾಗೇವಾಡಿ
೧೩ನೆಯ ಶತಮಾನ ( S.I.I., XV, No. 641)

೧. ಹರಿಯಣ ನಾಯಕ

೨. ಸ್ವಸ್ತಿ ಸೋಮನಾಥದೇವ

೩. ರ ಸರ್ವ್ವನಮಸ್ಯೆದ ಮ

೪. ತರು ೨೪

* * *

ಬಸಪ್ಪ ಗುರಪ್ಪ ಮುರಾ ಎಂಬುವರ ಹೊಲಹಳ್ಳದ ಹತ್ತಿರ ನಿಲ್ಲಿಸಿದ ಶಾಸನ ಬಸವನ ಬಾಗೇವಾಡಿ
೧೪ನೆಯ ಶತಮಾನ ( S.I.I., XI-i, No. 662)

೧. ಅಕೆಸಲಿ ಬಾಗೋ

೨. ಜನ ವ್ರಿತ್ತಿ ಇಪ್ಪತ

೩. ನಾಕು ಮತ್ತರು ಕೆ ೨೪

೫. [ಯಿ] ೦ದ. ಸಾಲಹು-

೬. ಣುಸೆ ಬಳಿ. [ಕಾ] ಕ್ಕು-

೭. ಳದ ಮಾಂನ್ಯವನು

೮. ಕೊಟೆಉ ನೀನು ಸುಖ-

೯. ದಲು ಅನುಭಯಿ-

೧೦. ಸುವದು ಯಿದಕೆ ಅ-

೧೧. ರು ತಪಿದರೆ . . .

* * *

ಕಂಚಗಾರ ಗಂಗಪ್ಪನ ಹೊಲದಲ್ಲಿಯ ಶಾಸನ, ಬಸವನ ಬಾಗೇವಾಡಿ
೧೫ನೆಯ ಶತಮಾನ ( S.I.I., XV. No. 680)

೧. ಡನಿಲ್ಲಕಟ

* * *

ಅರ್ಜುನವಾಡ ಶಾಸನ
ಕ್ರಿ.ಶ. ೧೨೬೦, ಸೇವುಣ ಅರಸ ಕನ್ನರದೇವನ ಕಾಲ
(Basavesvara and His Times, P.371-74)

೧. ನಮಸ್ತುಂಗಶಿರಶ್ಚುಂಬಿಚಂದ್ರಚಾಮರಚಾರ-

೨. ವೇ ತ್ರೈಳೋಕ್ಯನಗರಾರಂಭಮೂಲಸ್ತಂಭಾಯ ಶಂ-

೩. ಭವೇ  || ಶ್ರೀಯಂ ಶ್ರೀಕಲ್ಲಿನಾಥಂ ಕುಡು-

೪. ಗೆ ಭವಹರಂ ಭಕ್ತಬ್ರಿಂದಕೆ ಗೌರೀಜಾಯಾಕಾಯಾ-

೫. ನುಷಂಗಾಕಳಿತಲಳಿತತಾಪ್ರೋಲ್ಲಸದ್ವಾಮಭಾಗಂ ಸ್ವೀಯಸ್ವಾ-

೬. ಯತ್ತ ಶಕ್ತಿತ್ರಯಮಯಮಹಿಮಂ ದೇವದಾಯಾದಮಾ-

೭. ಯಾಪಾಯಾಭಿಪ್ರಾಯಲೀಲಂ ಪ್ರಣತಜನದುರಂತಾಘಸಂಘಟ್ಟಶೀಲಂ  ||

೮. ಮತ್ತಂ ತದ್ದವಾಡಿಮಧ್ಯಗ್ರಾಮ ಬಾಗವಾಡಿಪುರವರಾಧೀಶ್ವರ ಮಾದಿರಾಜನ ತನ—

೯. ಜಂ ಬಸವರಾಜನ ಮಹಿಮೆಯೆಂತೆಂದೆಡೆ || ಮಂಗಳ ಕೀರ್ತ್ತಿ ಪುರಾತನ ಜಂಗಮ ಲಿಂ-

೧೦. ಗೈಕಭಕ್ತಿನಿರ್ಭ್ಪರಲೀಲಾಸಂಗಂ ಸಂಗನಬಸವಂ ಸಂಗತಿಯಂ ಮಾಳ್ಕೆ ಭಕ್ತಿಯೊಳು (ಳ)-

೧೧. ಗನವರತಂ  || ಯಾದವ ಭೂಮಿಪಾಳರಿಳೆಯಂ ಚತುರದ್ಧಿ(ಬ್ಧಿ) ಪರೀ-

೧೨. ತೆಯಂ ನಿಸರ್ಗ್ಗೋದಯರಾಳ್ವರನ್ತವರೊಳಸ್ವಚಮೂಚಯವಾರ್ದ್ಧಿ ಸಿಂಹಣ-

೧೩. ಕ್ಷ್ಮಾದಯಿತಂ ತದಗ್ರತನಯಪ್ರಭವಂ ನೃಪ ಕನ್ನರಂ ಸಮಸ್ತೋದಧಿ-

೧೪. ವೇಳೆಯಿಂ ಪೊಱಗೆ ಬೆಳ್ಗೊಡೆಯೊಳ್ನೆಳಲಂ ನಿಮಿರ್ಚ್ಚಿದಂ  || ಸಲೆ ಭೂದೇವ-

೧೫. ರ್ಕ್ಕಳ್ಗಿತ್ತಲಸದೆ ಗೋಭೂಮಿಹೇಮವಸ್ತ್ರಾದಿಗಳಂ ಮಲೆವರಸುಗಳೊ-

೧೬. ಳ್ಕೊಂಬಂ ಬಲವಂತಂ ಕನ್ನರ ಪ್ರತಾಪಸಹಾಯಂ  || ಸ್ವಸ್ತಿ ಸಮಸ್ತ-

೧೭. ಭುವನಾಶ್ರಯ ಶ್ರೀಪ್ರಿಥ್ವೀವಲ್ಲಭ ಮಹಾರಾಜಾಧಿರಾಜಪರಮೇ-

೧೮. ಶ್ವರ ಪರಮಭಟ್ಟಾರಕ ದ್ವಾರಾವತೀಪುರವರಾಧೀಶ್ವರ ಯಾ-

೧೯. ದವಕುಳಕಮಳಕಳಿಕಾವಿಕಾಸಭಾಸ್ಕರ ಯರಿರಾಯ-

೨೦. ಜಗಜ್ಝಂಪ  ಮಾಳವರಾಯಮದನತ್ರಿನೇತ್ರ ಗೂರ್ಜ್ಜರರಾಯಭಯಂಕರ

೨೧. ತೆಲುಂಗರಾಯಸ್ಥಾಪನಾಚಾರ್ಯ್ಯ ಇತ್ಯಾದಿ ನಾಮಾವಳೀ ಸಮಾಳಂಕ್ರಿತ

೨೨. ಶ್ರೀಮತ್ಪ್ರೌಢಪ್ರತಾಪಚಕ್ರವರ್ತ್ತಿ ಶ್ರೀಕನ್ನರದೇವಂ ದೇವಗಿ-

೨೩. ರಿಯ ನೆಲವೀಡಿನೊಳು ಸುಖಸಂಕಥಾವಿನೋದದಿ ನನವರತಂ ರಾ-

೨೪. ಜ್ಯಂ ಗೆಯ್ಯುತ್ತುಮಿರೆ ತತ್ಪಾದಪದ್ಮೋಪಜೀವಿ || ಚಿಕ್ಕನ ಚಿಕ್ಕ ಮಗಂ ವಿಭವಕ್ಕೆ

೨೫. ಕುಬೇರಂಗೆ ಸೆಣಸುವಂ ರಾಯರುಮಂ ಮಿಕ್ಕ ಬೀಚುಗಿ ಯೌ-

೨೬. ದಾರ್ಯಕ್ಕಾರಿಂ ಪಿರಿಯ ನಾತನಂಣಂ ಮಲ್ಲಂ  ||ಆತನ ತನೂಭವಂ ||

೨೭. ಚಾವುಂಡಂ ಪಾರ್ವ್ವತೀವಲ್ಲಭಚರಣಸರೋಜದ್ವಯಾಮೋದಭ್ರಿಂಗಂ ಚಾವುಂಡಂ

೨೮. ಡಂ ತ್ಯಾಗಭೋಗಾನುಭವಭವಸುಖಶ್ರೀವಧೂನ್ರಿತ್ಯರಂಗಂ ಚಾವುಂಡಂ ಸಾಮ-

೨೯. ಭೇದಪ್ರಭ್ರುತಿ ಸಕಳಮಂತ್ರಾಂಗವಿದ್ಯಾಸಮುದ್ರಂ ಚಾವುಂಡಂ ವೀರವೈರಿಪ್ರ-

೩೦. ಕರಸಮರಸಂಘಟ(ಟ್ಟ)ಕಾಳಾಗ್ನಿರುದ್ರಂ || ಯೆನೆ ನೆಗಳ್ದಾ ಚಾವುಂಡನ ಮನದನ್ನಂ

೩೧. ನಾಗರಾಜನಕ್ಷಿ(ಖಿ)ಲ ನಿಯೋಗ[ಮ] ನೆನಿಪ್ಪಂ ದಿವಾಕರದೇವನ ಪುತ್ರಂ ವಾಣಸಾನ್ವ-

೩೨. ಯಾಂಬರಮಿತ್ರಂ  || ತ್ಯಾಗಗುಣಕ್ಕೆ ತಾಯ್ವನೆ ಸಮಸ್ತನ್ರಿಪಾಳ ನಿಯೋಗವ-

೩೩. ರ್ತ್ತನಾಶ್ರೀಗೆ ನಿವಾಸಮಿಷ್ಟರ ವಿಶಿಷ್ಟರ ತೋಷಣಪೋಷಣಂಗಳೊಳ್ಳಾಗ-

೩೪. ರ[ವಾದ] ಬಂಣ್ನಿಸುವುದೀ ಧರೆ ಪಂಡಿತಪಾರಿಜಾತನಂ ನಾಗನನಾ ಜನಾರ್ದ್ದನನ ಭ-

೩೫. ಕ್ತಿಭರಪ್ರಭವನುರಾಗನಂ  || ಸಂಗನಬಸವನ ಅಗ್ರ [ ಜ ಲಿಂಗೈ] ಕಂ

೩೬. ದೇವರಾಜಮುನಿಪನ ತನಯಂ ಜಂಗಮಪರುಸಂ [ಕಾವ] ರ-

೩೭. ಸಂಗಂ ಪ್ರಿಯಸುತನೆನಿಪ್ಪ ಕಲಿದೇವರಸಂ || ಕಲಿದೇವಮುನಿ-

೩೮. ಪನಾತ್ಮಜ ಸಲೆ ಮೂಜಗದೊಳಗೆ ಮೆಱೆವ ಮಾನವದೇವಂ ಗೆಲಿದಂ ಅಸ(ಶ)ನ-

೩೯. ಬೆಸನವ ಛಲರಧಿಕಂ ಹಾಲಬಸವಿದೇವಮುನೀಸಂ  || ಸ್ವಸ್ತಿ ಸಮಸ್ತ-

೪೦.  ಭುವನಾಸ್ರೆಯಂ ಮಹಾಮಾಹೇಸ್ವರಂ ಕವಿಳಾಸಪುರವ-

೪೧. ರಾಧೀಸ್ವರರುಂ ಸುವಂರ್ಣ್ನವ್ರಿಸಭಧ್ವಜಂ ತೇಸಠ್ಠಿಪುರಾಥ(ತ) ಪಾದಾರ್ಚ್ಚಕ-

೪೨. ರುಂ ಮಹಾಲಿಂಗಜಂಗಮಪ್ರಸಾದನಿಯತರುಂ ಸಮ-

೪೩. ಯಭಕ್ತಿಸಂಪಂನ್ನ ಶ್ರೀಬಸವರಾಜನಂ ನ್ವಯರುಮಪ್ಪ ತಪಚಕ್ರ-

೪೪. ವರ್ತ್ತಿ ವೀರಬ್ರತಿ ಹಾಲಬಸವಿದೇವಂಗೆ ಆ ಮಹಾಪ್ರಧಾನಂ ಱ-

೪೫. [ಟ್ಟ] ರಾಜ್ಯಪ್ರತಿಷ್ಠಾಚಾರ್ಯ್ಯನುಮಪ್ಪ ನಾಗರಸರು ಸಕವರುಷಂ ಸಾಸಿರ-

೪೬. ದ ನೂಱಯೆಂಭತ್ತ ಯೆರಡನೆಯ ಸಿದ್ಧಾರ್ಥಿಸಂವಛರದ ಚೈ-

೪೭. ತ್ರ ಬಹುಳ ಅಮಾಸೆ ಸೋಮವಾರ ಸೂರ್ಯ್ಯಗ್ರಹಣದಲ್ಲಿ ಹುಲಿಗೆ-

೪೮. ಱೆಯ ಸೋಮನಾಥದೇವರ ಸಂನಿಧಿಯಲ್ಲಿ ಆ ಚೌಡಿಸೆಟ್ಟಿಯರು

೪೯. ತೀರ್ತ್ಥವಿಶೇಸಮಂ ಬೆಸಗೊಳಲು ನೂಲೆನಾಡೊಳ [ಗಿ] ನ [ಮನಿತನದಿ] ಕವಿಳಲಸತೀ [ರ್ಥ್ಥಂ]

೫೦. ನಾಲ್ಕು ಯುಗದ ಪುರಾಣೋಕ್ತದಿಂ ಬಂದ ಕ್ಷೇತ್ರವದೆಂತೆಂದಡೆ ಕ್ರಿತ [ಯು] –

೫೧. ಗದಲ್ಲಿ ಕವಿಳಾಸಮುನಿ ಕವಿಳಾಸನಾಥ ತ್ರತೆಯಲಿ ಅಂಕರಾಜಮುನಿ ಅಂಕ-

೫೨. ನಾಥ ದ್ವಾಪರದಲ್ಲಿ ಮಹಾರಾಜಮುನಿ ಮಹಾಲಿಂಗದೇವ ಕಲಿಯುಗದಲ್ಲಿ

೫೩. ಕಲಿರಾಜಮುನಿ ಕಲಿದೇವನಾಮ ಇ (ಈ) ಮುನಿಗಳು ಮುಕ್ಷ (ಖ್ಯ) ಸಮಸ್ತ ಗಣೇಸ್ವ-

೫೪. ರರು ಆರಾಧಿಸಿ ಸಾಲೋಕ್ಯ ಸಾರೂಪ್ಯ ಸಾಮೀಪ್ಯ ಸಾಯುಜ್ಜ (ಜ್ಯ) ವಂ ಪ [ಡೆ] –

೫೫. ದ ಮಹಾದೇವರಿಗೆ ಅಂಕನಾಥವೆಸರಿಂ ಅಂಕವಲ ತಳವಿರ್ತ್ತಿ ಕೊ-

೫೬. ತ್ತಸಿ ಕುರುವನಿಗೆ ಇ (ಈ) ಹಳ್ಳಿ ಮಾಂಧಾತಚಕ್ರವರ್ತ್ತಿ ಬಿಟ್ಟ ಧಂರ್ಮ್ಮ ಆ-

೫೭. ತೀರ್ಥಕ್ಕದು ಸಾ(ಶಾ)ಸನಸ್ಥವೆಂಬುದಂ ಚವುಡಿಸೆಟ್ಟಿಯರು ಕೇಳಿ(ಳ್‌)ದು ನಾಗ-

೫೮. ರಸರೂ ತಾವು ಏಕಸ್ಥರಾಗಿ ಕವಿಳಾಸಪುರದೊಳಗೆ ಸ್ವಯಂಭು ಮ-

೫೯. ಲ್ಲಿಕಾರ್ಜ್ಜುನ ಸಂಗಮೇಸ್ವರ ನಾಗೇಸ್ವರ ಯೀಯುಱು ಲಿಂಗಕಂ ಅಂಗ-

೬೦. ಭೋಗ ರಂಗಭೋಗ ಜೀರ್ಣ್ನೋಧಾರಕ್ಕಂ ಪಾರಣೆಯ ಜಂಗಮಾ-

೬೧. ರಾಧನೆಗಂ ಕೊತ್ತಿಸಿ ಕುರುವನಿಗೆ ತಳವಿತ್ತಿ ಅಂಕವಲ ಕೂಂಡಿ

೬೨. ನಾಡೊಳು ಸಲುವಂತೆ ಹೆಜ್ಜುಗಿಯ ಹಬ್ಬ ವೊ [೦] ಭತ್ತು ದಾನ ಸುಂಕ

೬೩. ನೂಱೆತ್ತಿನ ಪರಿಹಾರ ಇಂತಿನಿತುಮಂ ಸರ್ವ್ವಬಾಧಿ (ಧೆ)

೬೪. ಸರ್ವ್ವನಮಸ್ಯವಂ ಮಾಡಿ ಚವುಡಿಸೆಟ್ಟಿಯರು ನಾಗರಸರು

೬೫. ಯತಿರಾಯ ಹಾಲಬಸವಿದೇವಂಗೆ ಪೂರ್ವ್ವದತ್ತವೆಂದು

೬೬. ಧಾರಾಪೂರ್ವ್ವಕಂ ಮಾಡಿ ಕೊಟ್ಟರು [ ||*] ಆ ಚವುಡಿಸೆಟ್ಟಿಯರ ನಿ-

೬೭. ಯಾಮದಿಂ ನಾಗರಸರು ಪುರದಿಂ ಪಡುವಲು ತೊಱೆಯ ಕೂ-

೬೮. ಡಿದ ಹಳ್ಳ ನೀರುವರಿಎ ಮೇರೆಯಾಗಿ ಮೇಗೆ ಕಲುಕಂಟಿಗಗೆಱೆ

೬೯. [ಬ]ಸವಗೋಡಿ ಬಡಗಲು ಮೊಸರಗುತ್ತಿ [ಎ] ರಾರವಿಡಿದು ಮೂಡಲು

೭೦. ಜಂಬೆಗಲ್ಲ ಕಣಿ ಕುಚ್ಚಗೋಡಿಯಿಂ ಬಂದ ಹಳ್ಳ ನೀರುವರಿಎ ತೆಂಕ-

೭೧. ಲು ತೊಱೆಯ ಕೂಡಲು ಯೀ ಚತುಸಿಮಾಭ್ಯಂತರ ಕವಿಳಾಸಪು-

೭೨. ರದಲ್ಲಿ ಸುಂಕ ಸಾದ ತಳ ಸಾರಿಗೆ ಬಟೆಯ ಬಾಧೆ ಗ್ರಾಮಬ್ರಯ ನಿ-

೭೩. ಧಿನಿಕ್ಷೇಪ ಅಂಕ ಟಂಕ ಆಣೆ ಗೋಸನೆ ಮುದ್ರೆ ನಾಗೇಸ್ವರಕೆ ಮಲ್ಲೇಸ್ವರ-

೭೪. ಕೆ ಕುಱುವನಿಗೆ ಸಂಗಮೇಸ್ವರಕೆ ಪಾರಣೆಯ ಜಂಗಮಾರಾಧ-

೭೫. ನೆಗೆ ಕೊತ್ತಸಿಗೆ ಇ (ಈ) ಧರ್ಮ್ಮಕೆ ಇದು ವಿವರವೆಂದು ನಾಗರಸರು ಕೊಟ್ಟ

೭೬. ಸಾಸನ ನಾಲ್ಕುಂ ಪಟ್ಟಣಂಗಳು ನೂಲೆ ನಾಡೊಳಗೆ ಸಂತೆಗಳ

೭೭. ಆಯದಾಯ ಇಪಂತು ಕೋಣನ ಮೆಯಿದೆಱೆ ಸುಂಕ ಹದಿನೆಂ-

೭೮. ಟ್ಟು ಸಮೆಯವು ಅಱುವತಮೂವರು ಬಣಜು ಭಕುತಿ ಭೇದವಿ-

೭೯. ಲ್ಲ ಕವಿಳಾಸಪುರವೇ ಸಾಸನದ ಮನೆ ಬಸವರಾಜನೇ ಸಾಸನಿಗನೆಂ-

೮೦. ದು ವುಭಯ ನಾನಾದೇಸಿ ಮುಂಮುರಿದಂಡಂಗಳು ಕೊಟ್ಟ [ಶಾ] ಸನ [ ||*]