ಬಾಗಿಲು ತೆರೆದಿದೆ ನೋಡಣ್ಣ ನಿನ್ನ ಮೂಗಿನ | ಮೇಲೆ ತಿಳಿಯಣ್ಣಾ
ಯೋಗಾನಂದ ಕೇಳಾಣ್ಣ | ಭವ ರೋಗಿಗೆ ಕಾಣುವುದಿಲ್ಲಣ್ಣಾ ||
ಶಾಂಭವಿ ಮುದ್ರೆಯ ಹಿಡಿಯಣ್ಣ ನಿನ ಕಣ್ ಮನ
ಮುಟ್ಟಲಿ ನೋಡಣ್ಣ || ಉನ್ಮವೆ ಸ್ಥಳವನ್ನೇರಣ್ಣಾ || ನಿನ್ನ
ಜನ್ಮವು ಸಾರ್ಥಕವಹುದಣ್ಣಾ | ಹತ್ತನೆ ಬಾಗಿಲು ತೆರೆದಿತ್ತೆ | ಅಲ್ಲಿ
ಪುತ್ತಾಳಿ ಗೊಂಬೆಯು ನಿಂತಿತ್ತೆ ಚಿತ್ತ ಪ್ರಕಾಶದಿ ಹೊಳೆ
ಯಂತೆತೇ ದಾತ್ರಿಯ ನೆಲ್ಲವ ಒಳಗೊಂಡಿದ್ದೆತೆ || ಪ ||

ಲಿಂಗದೊಳಗೆ ಶಿವಲಿಂಗವಿದೇ ಕಂಗಳ ಮಧ್ಯದೀ
ಕಾಣುತಿದೇ | ನಮ್ಮ ಗುರುಲಿಂಗಕ್ಕೆ ಗುರುವೇ ತಾನಾಗಿದೆ
ಮೋಕ್ಷಕೆ ಸಾಧನ ಗುರಿಯಾಗಿದೆ || ಪ ||

ಮೂರು ಕಾಲೀನ ಪಕ್ಷಿ ಇದೇ ಅದು ನಿಜದಿ ಮಧ್ಯದೀ
ನಿಂತು ಇದೇ ದೃಷ್ಟಿಸಿ ನೋಡಲು ಕಾಣುತಿದೆ
ದುರಹಂಕಾರಿಗೆ ದೂರವಿದೇ || ಪ ||

ಎನ್ನ ದೇಹದೊಳಗೆ ಮನೆ ಮಾಡಿತ್ತೇ ಅಲ್ಲಿ ಸೂತ್ರದ
ಗೊಂಬೆಯು ನಿಂತು ಇದೇ ಚಿತ್ತದಿ ತಾನಾಗಿ ಬೆಳಗುತ್ತಿತ್ತೆ
ಅಖಂಡದೊಳಗೆ ||