ಚಿತ್ರಾವತಿ ಅಣೆಕಟ್ಟು :

ತಾಲ್ಲೂಕು ಕೇಂದ್ರದಿಂದ: ೫ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೪೦ ಕಿ.ಮೀ

21_Kolar

ಚಿತ್ರಾವತಿ ಜಿಲ್ಲೆಯ ಒಂದು ಸಣ್ಣ ನದಿ. ಇದು ಉತ್ತರ ಪಿನಾಕಿನಿ ನದಿಯ ಉಪ ನದಿಯಾಗಿದೆ. ನಂದಿ ಬೆಟ್ಟದ ಉತ್ತರಕ್ಕೆ ೧೪ ಕಿ.ಮೀ ದೂರದಲ್ಲಿರುವ ಕರಗಾನಪಾಳ್ಯ ಬೆಟ್ಟದ ಮೇಲೆ ಬೀಳುವ ಮಳೆಯ ನೀರು ಸಣ್ಣ ಝರಿಯಾಗಿ ರೂಪಿತಗೊಂಡು ಮುಂದೆ ಚಿತ್ರಾವತಿ ನದಿಯಾಗಿ ಹರಿಯುತ್ತದೆ. ಈ ನದಿಗೆ ಅಡ್ಡಲಾಗಿ ಪರಗೋಡು ಗ್ರಾಮದ ಬಳಿ ಒಂದು ಸಣ್ಣ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಸಣ್ಣ ಜಲಾಶಯದ ವ್ಯಾಪ್ತಿ ೧೬೪ ಎಕರೆ ಜಮೀನನ್ನು ಒಳಗೊಂಡಿರುತ್ತದೆ. ಇಲ್ಲಿ ಸಂಗ್ರಹವಾಗುವ ನೀರನ್ನು ಬಾಗೇಪಲ್ಲಿ, ಗುಡಿಬಂಡೆ ಪಟ್ಟಣ ಮತ್ತು ಸುತ್ತಮುತ್ತಲಿನ ೮೮ ಗ್ರಾಮಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಬಹುದಾಗಿರುತ್ತದೆ. ಜಲಾಶಯದ ನೀರನ್ನು ಶುದ್ದೀಕರಿಸಿ ಜನರಿಗೆ ಸರಬರಾಜು ಮಾಡುವುದರಿಂದ ಫ್ಲೋರೋಸಿಸ್ ಖಾಯಿಲೆಯಿಂದ ಮುಕ್ತರನ್ನಾಗಿಸುವ ಉದ್ದೇಶವನ್ನು ಹೊಂದಲಾಗಿದೆ.

 

ಗುಮ್ಮನಾಯಕನ ಪಾಳ್ಯ :

ತಾಲ್ಲೂಕು ಕೇಂದ್ರದಿಂದ : ೨೬ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೭೦ ಕಿ.ಮೀ

ಗುಮ್ಮನಾಯಕನ ಪಾಳ್ಯದ ಬೆಟ್ಟ

ಗುಮ್ಮನಾಯಕನ ಪಾಳ್ಯದ ಬೆಟ್ಟ

ಗುಮ್ಮನಾಯಕನ ಪಾಳ್ಯದ ಪಾಳೇಗಾರರು ಆಂಧ್ರಪ್ರದೇಶದ ಈಗಿನ ಚಿತ್ತೂರು ಜಿಲ್ಲೆಯ ದೊಡ್ಡಪಾಳ್ಯದವರಾಗಿರುತ್ತಾರೆ. ಖಾದ್ರಿಪತಿ ನಾಯಕನು ಗುಮ್ಮನಾಯಕನ ಪಾಳ್ಯದ ಮೂಲ ಪಾಳೇಗಾರನಾದರೆ, ನರಸಿಂಹ ನಾಯಕನು ಕೊನೆಯ ಪಾಳೆಗಾರನಾಗಿರುತ್ತಾನೆ ಎಂದು ತಿಳಿದು ಬಂದಿದೆ. ಗುಮ್ಮನಾಯಕನ ಪಾಳ್ಯದ ಬೆಟ್ಟವು ಏಳು ಸುತ್ತಿನ ಕೋಟೆ ಕೊತ್ತಲಗಳಿಂದ ಕೂಡಿದ್ದು, ಕೋಟೆಯ ಮಧ್ಯ ಭಾಗದಲ್ಲಿ ರಾಣಿಯರ ಅಂತಃಪುರಗಳು, ಪಿರಂಗಿಗಳ ಬಾವಿ, ಮದ್ದು ಗುಂಡುಗಳನ್ನು ತಯಾರಿಸುವ ಕೊಠಡಿ ಮತ್ತು ದೇವಾಲಯಗಳಿವೆ. ಬೆಟ್ಟದ ತಲಿನಲ್ಲಿ ಗುಮ್ಮನಾಯಕನ ಪಾಳ್ಯ ಗಾ  ವಿದು , ಪಾಳೇಗಾರರು ನಡೆಸುತ್ತಿದ್ದ ಹಠಾರ (೧೮ ಇಲಾಖೆಗಳಿಗೆ ಸಂಬಂಧಿಸಿದ) ಕಛೇರಿ ಇರುತ್ತದೆ. ಹಾಗೂ ಇನ್ನೊಂದು ಬದಿಯಲ್ಲಿ ಸಿಹಿ ನೀರಿನ ಕೆರೆ, ಕೆರೆಯ ದಂಡೆಯಲ್ಲಿ ಸೇತುವೆ ನರಸಿಂಹಸ್ವಾಮಿ ದೇವಾಲಯವಿದೆ.

 

ಗಡಿದಂ :

ತಾಲ್ಲೂಕು ಕೇಂದ್ರದಿಂದ : ೩ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೪೮ ಕಿ.ಮೀ

ಗಡಿದಂ ಪುಣ್ಯ ಕ್ಷೇತ್ರ

ಗಡಿದಂ ಪುಣ್ಯ ಕ್ಷೇತ್ರ

ಗಡಿದಂ ಪುಣ್ಯ ಕ್ಷೇತ್ರವು ದೇವರಗುಡಿಪಲ್ಲಿ ಗ್ರಾಮಕ್ಕೆ ಸೇರಿದ್ದಾಗಿದೆ. ಈ ಕ್ಷೇತ್ರವು ಜನಮೇಜಯರಾಜನ ಕಾಲದಿಂದಲೂ ಹೆಸರುವಾಸಿಯಾದ ಐತಿಹಾಸಿಕ ಸ್ಥಳವಾಗಿದೆ. ಇಲ್ಲಿ ಶ್ರೀ ವೆಂಕಟರಮಣಸ್ವಾಮಿ ದೇವಾಲಯವಿದ್ದು, ದೇವಾಲಯದ ಒಂದೇ ಪೀಠದ ಮೇಲೆ ಶ್ರೀ ವೆಂಕಟರಮಣಸ್ವಾಮಿ, ಸ್ವಾಮಿಯ ಇಕ್ಕೆಲಗಳಲ್ಲಿ ಶ್ರೀದೇವಿ, ಭೂದೇವಿಯರು ಶೋಭಿಸುತ್ತಿದ್ದಾರೆ. ದೇವಾಲಯದ ಪ್ರವೇಶ ದ್ವಾರದಲ್ಲಿ ನಿರ್ಮಿಸಲಾಗಿರುವ ಮಹದ್ವಾರದ ಗೋಪುರ ೧೦೮ ಅಡಿ ಎತ್ತರವಿದೆ. ಈ ಪುಣ್ಯ ಕ್ಷೇತ್ರದಲ್ಲಿ ಶ್ರಾವಣ ಮಾಸದ ಕಡೇ ಶ್ರಾವಣ ಶನಿವಾರದಂದು ಅಸಂಖ್ಯಾತ ಭಕ್ತ ಮಹಾಶಯರು ದೇವಾಲಯಕ್ಕೆ ಆಗಮಿಸಿ ದೇವರ ಅನು‌ಗ್ರಹಕ್ಕೆ ಪಾತ್ರರಾಗುತ್ತಾರೆ. ಪ್ರತಿ ವರ್ಷ ವೈಶಾಖ ಶುದ್ಧ ಹುಣ್ಣಿಮೆಯಂದು ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯುತ್ತದೆ. ಈ ಸಮಯದಲ್ಲಿ ಎತ್ತುಗಳ ಜಾತ್ರೆಯು ನಡೆಯುತ್ತದೆ. ಇತ್ತೀಚೆಗೆ ದಾನಿಗಳು ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗಾಗಿ ನಿತ್ಯ ಅನ್ನ ದಾಸೋಹವನ್ನು ನಡೆಸಿಕೊಡುತ್ತಿರುತ್ತಾರೆ