ಯಾರು ಇರಿಸಿದ್ದಾನೊ ತನ್ನ ಬಾಯಲ್ಲೊಂದು
ಚಪ್ಪಲಿಯ ಕಾರ್ಖಾನೆ,
ಅವನು ಎಲ್ಲರನ್ನೂ ಮೆಟ್ಟಿ ಬದುಕುತ್ತಾನೆ.

ಯಾರು ಬೆಳೆಸಿದ್ದಾನೊ ತನ್ನ ಬಾಯಲ್ಲೊಂದು
ಹೂವಿನ ತೋಟ
ತಪ್ಪಿದ್ದಲ್ಲ ಅವನಿಗೆ ಸದಾ
ತುಡುಗು ದನಗಳ ಕಾಟ.