ಹೆಸರು: ಗ್ರೀಷ್ಮ
ಊರು: ಕೊಡಗು

ಪ್ರಶ್ನೆ: ನನಗೆ ೧೯ ವರ್ಷ. ದ್ವಿತೀಯ ವರ್ಷದ ಡಿಗ್ರಿ ಓದುತ್ತಿದ್ದೇನೆ. ನನ್ನ ತೂಕ ೪೯ ಕೆ.ಜಿ. ನನ್ನ ಸಮಸ್ಯೆ ಏನೆಂದರೆ ನಾನು ೧೫ ವರ್ಷ ವಯಸ್ಸಿನವಳಿದ್ದಾಗ ನನ್ನ ಗುಪ್ತಾಂಗದ  ಬಲಬದಿಯಲ್ಲಿ ಒಂದು ಚಿಕ್ಕ ಗೋಲಿಯಾಕಾರದ ಗಂಟು ಬೆಳೆದಿತ್ತು. ಅದನ್ನು ಬೆರಳಿನಿಂದ ಒತ್ತಿದರೆ ಒಳಹೋಗಿ ಸ್ವಲ್ಪ ಸಮಯದ ನಂತರ ಹೊರಬರುತ್ತಿತ್ತು. ಆದರೆ ಈಗ ಎರಡು ತಿಂಗಳಿನಿಂದ ಅದು ಗಟ್ಟಿಯಾಗಿ ಚಿಕ್ಕ ಮಣಿಯ ರೀತಿ ಇದೆ. ಇದರಿಂದ ಮುಂದೆ ನನಗೇನಾದರೂ ತೊಂದರೆ ಆಗಬಹುದೆಂಬ ಭಯ, ನನ್ನ ಮೈಯಲ್ಲಿ ರಕ್ತ ಇಲ್ಲದಂತೆ ಇದೆ ದಯವಿಟ್ಟು ಪರಿಹಾರ ತಿಳಿಸಿ.

ಉತ್ತರ: ನಿಮ್ಮ ವಿವರಗಳನ್ನು ಓದಿದರೆ ನಿಮಗೆ ಬರ್ಥೋಲಿನ್ ಗಂಟು (BARTHOLINCYST) ಇರುವಂತಿದೆ. ಯಾವುದೇ ಸಂಕೋಚ ಪಟ್ಟುಕೊಳ್ಳಬೇಡಿ. ಒಮ್ಮೆ ನಿಮಗೆ ಪರಿಚಯ ಇರುವ ವೈದ್ಯರಿಗೆ ತೋರಿಸಿ. ಇಲ್ಲದಿದ್ದರೆ ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞರಿಗೆ ತೋರಿಸಿ, ನಿರ್ಲಕ್ಷಿಸಬೇಡಿ.

ನೀವು ರಕ್ತಹೀನತೆಯಿಂದ ಬಳಲುತ್ತಿದ್ದರೆ ANOFER ಮಾತ್ರೆಗಳನ್ನು ದಿನಕ್ಕೆ ೧ ರಂತೆ ಒಂದು ತಿಂಗಳು ತೆಗೆದುಕೊಳ್ಳಿ. ಒಮ್ಮೆ ರಕ್ತ ಪರೀಕ್ಷೆ (Hb%) ಮಾಡಿಸಿಕೊಳ್ಳಿ.