ಪಲ್ಲವಿ : ಬಾಲ ಗೋಪಾಲನನ್ನು ಭಜಿಸಿ
ವೇಣುನಾದವನ್ನು ನೀವು ಆಲಸಿ

ಚರಣ :  ಪ್ರಳಯ ಕಾಲದಲ್ಲಿ ಶ್ರೀಕೃಷ್ಣನು
ಅರಳಿ ಎಲೆಯ ಮೇಲೆ ಮಲಗಿ ತೇಲಿದ      

ಮೈ ಹೊಳಪು ನೀಲವರ್ಣ ಗಗನದಂತೆ
ಎಲ್ಲರಲ್ಲಿ ತುಂಬಿ ಇದ್ದ ಹಬ್ಬಿದಂತೆ

ತಲೆಯ ಮೇಲೆ ನವಿಲು ಗರಿಯ ಇಟ್ಟುಕೊಂಡ
ಮೈಯೆಲ್ಲಾ ಕಣ್ಣಾಗಿ ನೋಡಿಕೊಂಡ

ತುಳಸಿ ಮಾಲೆ ಹಾಕಿಕೊಂಡ ವನಮಾಲಿಯ
ಗೋಪಗೋಪಿ ಜನರೆಲ್ಲ ಮುತ್ತಿಕೊಂಡರು

ಸಾಧಾರಣ ನರನಂತೆ ಸುತ್ತಿ ತಿರುಗಿದ
ಜಗಕೆ ಜಯವು ಲಭಿಸುವಂತೆ ಅವನು ಮಾಡಿದ