ಶ್ರೀ ಗುರುವರ ಶಂಭು ಭಾಗೀರಥೀಶನೆ | ನಾಗಭೂಷಣ ನಂದಿಕೇಶ |
ಭೂಮಿ ಬ್ರಹ್ಮಾಂಡಕ್ಕೆ ಆಧಾರಕರ್ತನೆ | ಶ್ರೀಗಿರಿವರನೆ ಕೊಡುಮತಿಯ               || ೧ ||

[ಮ]ರಗಿವಿ ನಾಲ್ಕು ದೇಹಗಳೆರಡು ಮೂರಾಗಿ | ಬಾಲಗಳೆರಡು ಕರ ನಾಲ್ಕು |
ಆವ ಮೃಗವ ಬೇಡುವೆ ನಯನವು ಹದಿನೆಂಟು | ಜಿಹ್ವೆ ಹದಿನಾರರಲಿ ಕೊಡು ಮತಿಯ        || ೨ ||

ರಣವ ಕಾಣುತ ರಾಮ ಕಲಿಯಾಗಿ ಮನದೊಳು | ಸರಸಿಜ ರವಿಯ ಕಂಡಂತೆ |
ಮುಗುಳು ನಗೆ ನಗುತ ತುರುಕರ ಕೆಡವುತ್ತ | ಅಲ್ಲಾ ಖುದಾಯೆಂದು ಬೀಳೆ ಕೆಡಹಿ    || ೩ ||

ಬ್ಯಾಡರು ಉಪಕಾರಿ ಹೇಳೇಳಿ ಹೋದವರು | ಏರುವರು ನೆಗೆದು ಬೀಳ್ವಂತೆ |
“ಹ ತೇರಿ ಮಾಕಿ” ಬೈದು ಹಾರಿಸಿ ತುರಗವ | ಏರುವರು ಕೋಟೆ ಬುಡಕಾಗಿ          || ೪ ||

ರಾಮನಿಲ್ಲದ ಮೇಲೆ ಊರ ನಾವು ಬಿಡುತಿವೆ | ಕೋವಿ ಯಾರಿಗೆ ಇಡುಲಡಿ |
ಸಾಲ ದಾವಣಿ ಕಟ್ಟಿ ಹೊಡೆಯದಿರಲು ನಿಮ್ಮ | ಸುರಿತಾಳನ ಬಂಟರೆ ನಾವು         || ೫ ||

ಆದೀತು ಅರೆಘಳಿಗೆ ಜೀವವ ಸೈರಿಸಿ | ಗೋರಿಗೆ ಗತಿಗಾಣದಂತೆ |
ಸಾರುತ ಬೈಚಪ್ಪ ಆಲಿಂಗದ………. | ತಾವು ಒಂದಾಗಿ ನಿಲದಂತೆ                  || ೬ ||

ಬಾದುರನಾ ಕೇಡು ಭಾಯಿ ಪ್ರಧಾನ ಒಳ್ಳೆವನಿದ್ದಿ | ಬಾರ ಹನ್ನೆರಡಾಗೆ ಬಿಡೆ ನಿಮ್ಮ |
ಮೇಲೆರಡು ತುಂಬಿದರೆ ಊರ ಕೊಟ್ಟೆವೆ ನಿಮಗೆ | ಆರು ಲಕ್ಷವು ಗೋರಿ ಇಡದೆ       || ೭ ||

“ಹ ತೇರಿಕೆ ರಕ್ಕ ಹತ್ತೆ ಬುಲಾವರೆ” | ಕಿತ್ತು ಒಗೆವೆನು ಇವ [ನ] ಗೋಡೆ |
ಹತ್ತಿಹುದೇ ಯಾ ನೇಮಿ ವಜೀರಖಾನರ ಕರೆಸಿ | ನೀವು ಹತ್ತೀರೆ ತನಗೆ ಬಿಟ್ಟೀರೆ      || ೮ ||

“ಹತ್ತೇರಿ ಬೇರಿಕು ಹತ್ತೆ ಬುಲಾವಾರೆ” | ಕಿತ್ತುವದೇನು ಇವ[ಳ್ಗೊ]ಡೆ |
ವಾಲೆಯ ಬರೆದಂಥ ಪಾಳ್ಯಗಾರರ ಕರೆಸಿ | ನೀರ ನೀಡಿದನು ಮುಖದಿಂದ           || ೯ ||

ಹೊಲೆಯರ ಬಣ್ಣದ ಮೂಳದೊರೆಗಳು ಎಲ್ಲ | ಬೇರಾರೆ ಮಾಡ ಮಲತಿಹನು |
ಹೊಡ [ದೇ]ವು ಗಳಿಗೇಲಿ ಬೇರ ಕೀಳುವೆನೆಂದು | ಆಡಿದರು ಸುರಿತಾಳನೊಡನೆ     || ೧೦ ||

ಹೇಳಲೀಕ್ಷಣವಾಗಿ ಮಂದಲಗಿರಿಯಾಯ್ತು | ಸೇರಿತು ಯಮನೂರ ಲಕ್ಷ |
ಮೋರೆ ತೋರಲು ಪಾಶ್ಚಾತಾ ತಾ ಮೊದಲು ಎಲ್ಲರನು | ಕೀಳಿಸನೆ ಕಣ್ಣು ನಾಲಗೆಯ        || ೧೧ ||

ಮೂಳ ಖಾನರು ಬಂದು ನೋಡುತ ಕುಮ್ಮಟವ | ಜೋಗಿಗೆ ಕಡೆಯಾದರೆನಲು |
ಬಂದುದಕೆ ಬಾದುರನ ಕೊಂಡುಹೋ[ಗ]ರೆ ಎಮ್ಮ | ಮಂಡೇದ ಚಿಂದಿ ಉಳಿವುದಾ  || ೧೨ ||

ದಂಡೆಲ್ಲ ಲಯವಾಗಿ ಮುಂಡೆರಂದದಿ ಹೋಗಿ | ಮುಖತುಂಬ ಉಗಿಸನೆ ಸೂಳೆರೊಡನೆ |
ನೇಮಿ ಆಡುವ ನುಡಿಯ ಹೀನ ಸ್ವರಗಳ ಕೇಳಿ | ಖಾನ ಖಾನರು ಛಲ ಮಸಗಿ        || ೧೩ ||

ಪಾಳೆಗಾರರು ಎಲ್ಲ ಧ್ಯಾನಿಸುತ ಮನದೊಳಗೆ | ಮಾಡಿದೆವು ನಮ್ಮಿಂದ ಮೇಲೆ |
ಹಳೆಯಬೀಡವನಂತೆ ಇರದೆ ಮನೆಯೊಳು ನಾವು | ಬರೆದು ಕಟ್ಟೆವು ವಾಲೆಯನು    || ೧೪ ||

ಕಡೆಗೆಮ್ಮ ಕಂಪಿಲನು ಸುಡದೆ ಬಿಡುವನೆ ಬೀರ | ಇದರೊಳಗಿವನು ಮಿ‌ಕ್ಕುಳಿಯ |
ಯಾವ ತೆರದೊಳು ನಮಗೆ ಉಳಿಗಾಲ ಕಾಣುವುದಿಲ್ಲ | ಪಾಳೆಯಗಾರರು ಛಲವಿರಿ  || ೧೫ ||

ಆನೆ ಕುದುರೆಯ ಮಂದಿ ವಾರಂತೆ ಶೃಂಗರಿಸಿ | ಮುಂದೇಳಲು ಮುಖಲ್ದಾರರೆಲ್ಲ     || ೧೬ ||

ಕೊಟ್ಟಗಾರನು ಮುದ್ದ ಹತ್ತಲು ಲೆಗ್ಗೆಯನು | ಮಿಕ್ಕದಳವೆಲ್ಲ ಭೋರೆನುತ |
ಸತ್ತು ಮುಳುಗುವೆನೆಂದು ಕಡಲುಕ್ಕಿದಂದದಿ ಏರೆ | ಪೃಥ್ವಿ ತಲ್ಲಣಿಸಿ ಒದರ್ವಂತೆ      || ೧೬ ||

ಮಾರುತನರ್ಭಟಿಗೆ ವಾರುಧಿ ತಲ್ಲಣಿಪ | ಮೇರೆಲಿಪುರ ಊದಗಾಪು |
ವೀರ ಮನ್ನೆಯರೆಲ್ಲ ಪ್ರಧಾನಿ ಸಹಿತ ಕಂಡು | ತೀರಿತೆ ಭೋಗದ ಸ್ಥಿತಿಯು            || ೧೭ ||

ಕವಿಯಲು ಮಾರ್ಬಲವು ಭುವನವ ಕಾರ್ಗುಡಿಸಿ | ನೆ[ಲೆ] ಕಾಣದಂತೆ ದಿನಕರನು |
ಸವಲಕ್ಷ ಬಾಣಗಳನು ಸರಳೊಂದು ಕೊಲೆಯು | ನಗರವ ಜರ್ಝರಿಸುವಂತೆ        || ೧೮ ||

ಕತ್ತಿ ಭಲ್ಲೆಯು ಈಟ ಕಿತ್ತು ಖಾನರು ಬಂದು | ಸತ್ತ ಹೆಣಗಳನು ತುಳಕೊಂಡು |
ಹೊಕ್ಕರು ಜೀಬಿಯ ಹೊರಸುತ್ತ ಕೋಟೆಯ | ಬಿಟ್ಟು ಓಡಲು ಪುರದ ಮಂದಿ          || ೧೯ ||

ಹೊಳರೊಳ ಕೈಯೆಲ್ಲ ಉಡುಗಿ ಬಂದವು ಎಂದು | ನುಡಿಯಲು ಶೆಟ್ಟಿ ಲಿಂಗಣ್ಣ |
ಮೃಡನ ನೆನೆವುತ ಎದ್ದ ಮಗನ ರಕ್ಷಿಸಿಯೆಂದು | ದೃಢಚಿತ್ತವಾಗಿ ಮನದೊಳಗೆ       || ೨೦ ||

ರಾಯ ಕಾಟಣ್ಣ ಪೇಳ್ದ ರಣಧೀರ ಇನ್ಯಾಕೆ | ಹೋಯಿತು ಹೊರಸುತ್ತ ಕೋಟೆ |
ಬ್ಯಾಡರೆಲ್ಲರು ಓಡಿ ಹುಡೆವು ಹೊಕ್ಕರು ಸ್ವಾಮಿ | ಹೋಹುದು ಪೇಟೆ ಗಳಿಗೆಯಲಿ     || ೨೧ ||

ಹರ ಶಂಭ ಜಟ್ಟಂಗಿ ವರದ ರಾಮೇಶ್ವರ | ತಾ ಮುನಿಯಲು ಅಪಕೀರ್ತಿ ನಿಮಗೆ |
ಶ್ರೀ ಮಹಾದೇವ ಕಾ[ವನೀ] ಧನ ಮನೆ | ದೇವರ ಸ್ತುತಿಯ ಮಾಡಿದನು             || ೨೨ ||

ಮಾಯಮರ್ದನರೂಪ ಮಂಡೆ ಕಂಟಿಕ ಎತ್ತು | ಕಾದೇಯ ಕರುಣ ದೃಷ್ಟಿಯಲಿ |
ಆರು ತಿಂಗಳಿಗಿಂದು ದಯಮಾಡಿದೆ ಕಾರ್ಯವ | ನೋಡುವುದ ಮಗನ ಸಾಹಸವ   || ೨೩ ||

ಗಿರಿಜಾವಲ್ಲಭ ಬಂದು ನೆರೆಯಲು ಬಲಭಾಗ | ಶರೀರದ ರೋಮ ಸರಳಾಗೆ |
ತೇಜಿಯ[ನೇ] ರುತ ಕಹಳೆಯ ಹಿಡಿಯೆನಲು | ಬಿರುದನು ಕಡಿಕಡಿಯೆಂದು ಸಾರಿಸಲು        || ೨೪ ||

ನಡೆಯಲು ಮೂರು ತುರಗವೇರಿ ಜೋಡಿನ | ಒಡೆಯವರು ಆಗ ಮುದ್ಧಯನು |
ಒದಗಲು ಬಾದುರಖಾನ ಮುದ್ದನು ಹಂಪ | ಆನಂಜೆಯ ರಮಣ ಸಂಗಯ್ಯ          || ೨೫ ||

ತಾರಕದ ಗಳ ಕಿತ್ತು ಹಾರೊಡಿಸಿ ನಡೆಯಲು | ಊರು ಎಚ್ಚರವೆಂದು ಪೇಳೆ |
ಏರಲು ಹೊರಕೋಟೆ ಬೀದಿಸಾಲಿನ ವಾಲೆ | ಗೋವಿಗೆ ವ್ಯಾಘ್ರ ಹೊಕ್ಕಂತೆ           || ೨೬ ||

ಕೋಯೆಂದು ಕೂಗುತ ಕೋಟಿ ಸಿಡಿಲಿನ ಭರಕೆ | ತಾರ ಕಡಿಯಲು ಕೊಂದುಕೊಂಡು |
ಬಾಳೆಯನರಿದಂತೆ ಹದಿನಾರು ಬಾರಿಯ ಹೊಡೆಯೆ | ಮಾರಿ ಬಡಿದಂತೆ ಕುರಿಹಿಂಡ || ೨೭ ||

ವೀರ ಕಾಟನು ಹೊಕ್ಕು ಜೇಬಿ ಅಗಳೊಳು ಕಡಿದ | ಮೋರೆ ಮುಸುಡಿಯ ಏಕವಾಗಿ |
ವೀರಸಂಗನು ಲಿಂಗ ಕೆರೆ ಬೀದಿಯ ಒಳಗೆ | ತಾರಗಡಿಯಲು ಕುರಿಗಳಂತೆ           || ೨೮ ||

ಹುಚ್ಚುಕೋಣನ ತೆರದಿ ಹೊಕ್ಕು ಬಾಣಿಯ ಮುದ್ದ | ಸಿಕ್ಕಿದವರ ಮೆಟ್ಟಿ ತುಳಿದು |
ರಟ್ಟೆ ಕಾಲ್ಗಳ ಪಿಡಿದು ಒತ್ತಿ ಹಣಿಯುತ ಕೋಟೆ | ಕೋಟೆ ತಿಂದವಳು ಇಲಿ ಹೂಡಿ     || ೨೯ ||

ರಾಯ ರಾಮನು ಹಿಂದೆ ಬಾದುರ ಕಡಿದನು | ಆತುಕೊಳ್ಳುತ ಉಳಿದವರು |
ತಾರ ಮಲಗಲು ಹೊಕ್ಕು ಖಾನರು ಕರಿತುರಗ | ಬೀಜ ಕೊಂಬರು ಇರದಂತೆ        || ೩೦ ||

[ಹೋರುವ] ಕಲಿಯಾಗಿ ರಾಮಗೆ ಪ್ರತಿಭೀಮ | ರಾಯ ರಾಹುತನೆನ್ನಬಹುದು
ಜೋಕೆನುತ ಹೊರಡಲು ಕಾಲಾಳು ಕರಿತುರಗ | ಮೂರೆಂಟು ಸಾವಿರ ಬರಲು       || ೩೧ ||

ಹೊಡೆವ ತಮ್ಮಟ ಭೇರಿ ನುಡಿವ ಬಿರುದಿನ ಕಹಳೆ | ನಡೆಯಲು ರಾಮ ಬಯಲಿಂಗೆ |
ಎಡಬಳಸಿ ನಿಂದಿರಲು ಪವುಜು ಕಾಣುತ ರಾಮ | ಒಡನೇರೆ ತೇಜಿ ಕುಪ್ಪಳಿಸೆ        || ೩೨ ||

ಗಿರಿಗೆರಗು ಸಿಡಿಲಂತೆ ನಡು ಪವುಜವೊಳು ಹೊಕ್ಕು | ಕಡಿವ ಕಾಕ್ಹೊಡೆದು ಆರ್ಭಟಿಸಿ |
ಒರಗಲು ಸುತ್ತೊಂದು ಬಾಣ ದೆಸೆಗೆಯೊಳಗೆ | ಹರಿಯಲು ರಕ್ತದ ಹಳ್ಳ               || ೩೩ ||

ಕದಳಿಯ ವನದೊಳು ಮದಕರಿಯು ಹೊಕ್ಕಂತೆ | ಸದೆಬಡಿದು ಸವರಿದರವರು |
ಬೆದರಿತು ಮಾರ್ಬಲವೆಲ್ಲ ಅರೆ ಅರೆ ಇವರ್ಯಾರು | “ಕುಮಟಾ ಉಟೀ” ಬೇಗ ಎನಲು        || ೩೪ ||

ಮುತ್ತಿಗೆಯ ಬಿಟ್ಟೋಡಿ ತಿಟ್ಟಿ ದಿಬ್ಬವ ಹತ್ತಿ | ಬೆಚ್ಚಿ ಬೀಳುವರ ನೋಡುತಲಿ |
ಹತ್ತು ಬಾರ್ಯಗೆಹುದು ಅಲ್ಲಾಯೆಂಬುವರ್ಯಾರು | ಕೆಟ್ಟಗೊಂಡೆವು ನೀ ನೋಡು    || ೩೫ ||

ಅಹುದು ಎಂಬರು ಕೆಲರು ಅಲ್ಲ ಎಂಬರು ಅರ್ಧ | ತಮತಮಗೆಲ್ಲ ಜೂಜಾಡಿ |
ಬಿಡು ನಿಮ್ಮ ಮಾತುಗಳ ಸುಡಲೇಳಿ ತಿಳಿದವರು | ಒಳವರಿದು ಹಿಂದೆ ಜಾರುವರು   || ೩೬ ||

ಕಾಣಬಾರದು ಎ[ಚ್ಚು] ಕಡಿವ ಮೋಡಿಯ ಬಗೆಯ | ತಾರ ಬಲಗಾಲು ಬಾಣದೆಸೆಗೆ |
ಪಾಳೆಗಾರರು ನೋಡಿ ಕೇಡು ಬಂದಿತು ನಮಗೆ | ಯಾವ ಕಡೆಯೊಳು ಮುಳುಗು ತೆರನೊ    || ೩೭ ||

ಸತ್ತ ರಾಮನು ಎಂದು ಹುಟ್ಟಿಸಿ ಸುದ್ದಿಯ | ಯುಕ್ತಿ ಮಾಡಿದರು ಕೆಡಿಸಲ್ಕೆ |
ನೆಟ್ಟಗಾಣದ ಹಾಗೆ ಮುಚ್ಚಿ ಮೋರೆಯ ಸೆರಗ | ದಿಕ್ಕು ದೆಸೆಗೆ ಓಡುವರು              || ೩೮ ||

ಕೆಡಿಸಿಕೊಂಡೆವು ತಮ್ಮ ಇರುವ ಗೂಡಿನ ನೆಲೆಯ | ಎರಡಕ್ಕೆ ಬಿಟ್ಟಿ ತೆರವದು |
ಸುರಿತಾಳನೊಡನೆ ನಾವು ಬರಿದೆ ಸುದ್ದಿಯ ಪೇಳಿ | ಬಡಿಕಲ್ಲ ಮಾಡಿ ಕೊಂದಂತೆ    || ೩೯ ||

ದೇಶದ ನೃಪರೆಲ್ಲ ಈ ಪರಿಯ ಗರ್ಜಿಸಿ | ವಸ ಸೈರ್ಯಗಳ ಬಿಟ್ಟವರು |
ಮಸುಕು ಮಾಜಲನವ ಸೋನೆಯ ಕಂಡಂತೆ | ವಾಸ ಗ್ರಾಮಗಳ ಕಂಡಂತೆ         || ೪೦ ||

ನೋಡಿ ಖಾನರು ಎಲ್ಲ [ಓ] ಡಿದರು ಬಂದಂತೆ | ಪಾಳೆಗಾರರ ದಂಡು ಎಲ್ಲ |
ಓಡಿದರು ಎನಲಾಗ ನೇಮಿ ಕೋಪವ ತಾಳೆ | ಪ್ರಾಣವುಳಿಯಲೆನ್ನ ನೋಡುವೆನು    || ೪೧ ||

ಕಾಣದ ಸುರಿತಾಳಗೆ ವಾಲೆ ಕಾಗದ ಬರೆದು | ರಾಮನ ಮಡಗಿಟ್ಟ ಇವರು |
ತಾವು ಬಂದವರಾಗಿ ಸ್ನೇಹಗಾರನು ಬರಲು | ಗೇರಾಹಳರಂತೆ ತೊಗಿದರು          || ೪೨ ||

ಆಗಲಿ ಅದಕೇನು ಕಾಳಗದಿ ಕಳೆದುಳಿದು | ಹೋದಾಗ ಯಾವ ಮಾತುಗಳು |
ಜೋಳಿಗೆಯ ಕೊಡದಿರಲು ತಾ ನೇಮಿ ಅಲ್ಲವೆಯೆಂದು | ವಾರಂತೆ ಏರಿರೆ ಪೌಜಾಗಿ || ೪೩ ||

ಬೆದರಗೊಡದೆ ದಂಡ ಎದುರಾಗಿ ಕಾವರು | ಕದನ ಸಂಗ್ರಾಮಕ್ಕೆ ನಿಲಲು |
ಹದಿನಾರು ಸಾವಿರ ಬಲವ ಬೆನ್ನಿಗೆ ಕಟ್ಟಿ | ದೊರೆ ರಾಮ ನಿಂದ ಪೂರ್ವದಲಿ          || ೪೪ ||

ರಾಮನೆ ನಿಜವಾಗಿ ನೋಡಿರೆ ಬಲ್ಲವರು | ನಾವಂತು ಅವನ ಕಂಡಿಲ್ಲ
ಈಗೇನು ಮಾಡುವುದು ಮೇಲುಗೋಟೆಯ ಮಿಂಡ | ಓಡಿದರೆ ಬ್ಯಾರೆ ಬಿಡುವನೆ      || ೪೫ ||

ಮಲಗಿದ್ದ ವ್ಯಾಘ್ರಕೆ ಕೆಣಕಿದ ಬಳಿಕಿನ್ನು | ಹೆದರಿ ಓಡಲು ಬಿಡುವವನೆ |
ಕಡಿದಾಡಿ ಸಾಯಲು ಧರೆಯೊಳು ಕೀರ್ತಿಗಳು | ಹರನೆಡೆಗೆ ಗೋಚರಿಸುವರು        || ೪೬ ||

ಕಾಯವಳಿಯಲು ತಮ್ಮ ಕೀರ್ತಿ ನಡೆಯವೆ ಕೇಳಿ | ಖಾನಾಖಾನರು ಛಲವೇರಿ |
ಮೂರು ಲಕ್ಷದ ದಂಡು ಮೂರು ಪೌಜನೆ ಮಾಡಿ | ಭೇರಿ ನಗಾರಿ ಮೊಳಗುತಲಿ       || ೪೭ ||

ರಾಮ ರಾಮನು ಎಂದು ಭೂಮಿಗಾತ್ರವ ಮಾಡಿ | ರಾವಣನೆ ದೇವೇಂದ್ರಸುತನೆ |
ಭೀಮನೆ ಮಾರುತನ ಕುವರರಂದದೆ ದಶರಥನ | ಕುಮಾರನೆ ನೀವು ಪೇಳೆಮಗೆ    || ೪೮ ||

ನಿತ್ಯವ ಪಡೆದಿಹನೆ ಸತ್ಯಹರಿಶ್ಚಂದ್ರನೆ | ಕ್ಷಾತ್ರವ ತೆರದೊಳಗಿಹನೆ |
ಬತ್ತಿ ತೀರಿದ ಬೆಳಗು [ಹತ್ಯ] ವಾದನೆ ಅವನು | ಮುಂದಿವನ ಮಾತೇನು ಎನಲು    || ೪೯ ||

ಬಿಡುವೆನು ಸಂತೋಜಿ ಗೋಲ್ವಡೆನು ಕತ್ತಿಗೊಂಡು | ಹೊಡೆವೆ ರಾಮನ ಬಿಡಿಯೆನಲು |
ಒಡೆಯನುಪ್ಪಿಗೆ ಎರಡುಂಟು ಮಾಡುವಗೆ | ಯ[ಮ] ರಾಜನಾಜ್ಞೆ ಮಾಡುವನು       || ೫೦ ||

ಹೆಚ್ಚಲು ಉರಿಗಿಚ್ಚು ಬಿದ್ದಂತೆ ಬತ್ತಿ | ಬಾಣವನು ಸುರಿಸುತ್ತ |
ಸತ್ತನೆನಿಸಿಕೊಂಡು ಹುಟ್ಟಿಬಂದರೆ ನಿನ್ನ | ಬಿಟ್ಟೇನೆ ಗೋಲ್ವಡನೆ ರಾಮ               || ೫೧ ||

ಬಿಡುವನಲ್ಲದ ನಿಮ್ಮ ಒಡೆಯ ರಾಮನ ಬಂಟ | ಎಡಗೈಯ ಹಂಪ ಸವರಿದನು |
ಕಡೆಗೆ ನಿನ್ನನು ಹಿಡಿದು ಕೊಡುವವನು ನಾನೇ | ಇಡು ನಿನ್ನ ಹೆಜ್ಜೆಯ ಮುಂದೆ        || ೫೨ ||

ಅರೆ ಲವುಡಿ ಸಕರಿಯಾ ಗಡಣೆ ಮಾಡುವೆನೆಂದು | ಕಡಿಕಡಿಯೆನುತ ಬೊಬ್ಬಿಡುತ |
ಅಡರಲು ಮೇಘದ ವದನೆಯೆಂದದಿ ಬಂದು | ಸುರಿ[ವ] ರಂಬಿನ ಮಳೆಯನು        || ೫೩ ||

ಬಾದುರ ಬಲವಂತ ಗೋವಿಂದ ನಾಯಕನು ಹೊಕ್ಕು | ವೀರ ಸಂಗನೆ ಲಿಂಗಣ್ಣ |
ಮಾರಿಯ ಕೋಣನ ತೆರದ ಮುದ್ದನು ಹೊಕ್ಕು | ಚಿಮ್ಮುವರೊಂದು ಕಡೆಗೆ            || ೫೪ ||

ಮಾಚನು ಮಡಿವಾಳ ರಾಚೂರ ಮಲ್ಲನು | ಕಾಕೊಡದು ಲೆಂಕೆಯ ಹನುಮ |
ಏಕಾಂಗಿ ವೀರರು ಏರಿದನು ಏಳ್ನೂರು | ಭೂಪ ರಾಮನು ಮನ್ನೆಯರು               || ೫೫ ||

ಸಮರಂಗ ಜಗಳಕೆ ಬಗೆಯ ವರ್ಣಿಪರಾರು | ನಿಗಮಗೋಚರನೆ ತಾ ಬಲ್ಲ |
ಹೊಗಲೇರಿ ತುರುಕರು ಒಗೆವ ಸರಳಿನ ಗಾಯ | ಮಿಗುವರಿಯೆ ಬಂಟ ರಾಮಯಗೆ  || ೫೬ ||

ಸರಳಿನ ಮಳೆಯನು ನಿರ್ಣಯಿಸಲಾರದೆ ಎಲ್ಲ | ಮುರಿದರು ಹೆದರಿ ಹಿಮ್ಮೆಟ್ಟಿ |
ಮೇಘದಾರ್ಭಟದೊಳು ತರಗ ನೂಕಲು ಕಂಡು | ಪರಬಲದ ಭೇರುಂಡ ರಾಮ      || ೫೭ ||

ಹತ್ತಿದ ಬೊಲ್ಲನ ತಟ್ಟಿ ಸವಮಾಡಿ ಹೊಕ್ಕರು | ಬರುವರು ಮತ್ತೆ ಜಗಳಕ್ಕೆ |
ಎತ್ತಿ ಹೊಡೆಯಲು ತುರಗ ಏರಿದ ರಾವುತನು | ಬೆಚ್ಚಿ ಬೆದ[ರಿತು] ನಾಲ್ಕು ಪೌಜು    || ೫೮ ||

ಏರಿದ ಮುಖದೊಳು ಮೂರಾರು ಬೀದಿಯ ಹೊಡೆಯೆ | ಪಾರಾಗಿ ಓಡೆ ತುರುಕರು |
ಏರಲು ಹಿಂದೆಗೆದು ರಾಯ ರಾಮನ ಮಂದಿ | ಗೋಣನರಿವುತ್ತ ಉಳಿದವರ          || ೫೯ ||

ಕಾಟಣ್ಣ ಕೋಪದ ಕಾಲನಾರ್ಭಟದೊಳು | ಕೊರೆದ್ಹಾಕುವರು ಕಳಿಲೆಯಂದದಲಿ |
ತಾಕಲು ಸಂತೋಜಿ ಗೋಲ್ವಡೆಯ ಕಾಟನ ಮೇಲೆ | ನೂಕಿದನೊಂಟಿ ಕುದುರೆಯಲಿ || ೬೦ ||

ಹೊಡೆಯಲು ಗೋಲ್ವಡೆಯ ಎದೆಯ ಅಂಬನು ಕಿತ್ತು | ಜಗಳ ಸಂದಿರಲು ಯುವಕರಿಗೆ |
ಎದುರ ಸರಳನೆ ಕೊಟ್ಟು ಎಂಬತ್ತು ಕೋಲ್ಗಳ ಕಿತ್ತು | ಒಗೆದನು ಕೈಚಳಕದಲಿ         || ೬೧ ||

ಇತ್ತೊಂದು ಗಾಯದ ಸೊಕ್ಕಿಗೆ ರಾಮನ | ಮತ್ತಾರು ಬಂದು ಮುತ್ತೆ |
ಸಿಕ್ಕಿದ[ನೆ] ಗೋಲ್ವಡೆಯ ಎಡಗೈಯ ಹಂಪನು | ರಟ್ಟೆಯ ತೆಗೆದು ಮೂಗರಿದು      || ೬೨ ||

ಆಡಿದ ಛಲಪದಕೆ ಮೂಗರಿದು ಪಡೆಯನು | ಇನ್ನಾರು ಇದ್ದಿರಿ ಹೊರಟು ಬನ್ನಿ |
ಅಚ್ಛಾ [ಅರೆ] ಮರ[ಗಯಾ] ರಣಧೀರ ಗೋಲ್ವಡೆಯ | ಬೆದರೋಡಲು ಉಳಿದ ರಾವುತರು    || ೬೩ ||

ಮುಳುಗಿದ ಮೂವತ್ತು ಸಾವಿರದ ಗೋಲ್ವಡೆಯ | ಖಾನರು ಶಿರಮುಂಡೆ ತೂಗೆ |
ರಾಯ ಸುರಿತಾಳಗೆ ಮೋಹದ ಅಳಿಯನ ಕೊಂದು | ಹೋದರೆ ಎಮ್ಮ ಸಿಗಿಸು[ವ]ನು         || ೬೪ ||

ನೇಮಿಖಾನಗೆ ಸುದ್ದಿ ಪೇಳುವನು ಸಂತೋಜಿ | ಗೋಲ್ವಡೆಯ ಮರಗಯಾ ಎಂದು
ಇದ್ದವಗೆ ಇದ ಮಾರ್ಗ ಪ್ರಸಿದ್ಧಯೆಂಬುದನರಿದು | ಜಗ್ಗಲು ನೇಮಿಯ ಮನಸು        || ೬೫ ||

ರಾಯ ಸುರಿತಾಳ ಸೋದರಳಿಯ [ನು] ಗಯಾ | ಹೋದರೆ ತಮಗೇನು ಉಳುವಿ |
ಶೂಲವಲ್ಲದೆ ಮುಂದೆ ಅಪರಾಧ ಸಾಧನವುಂಟೆ | ಖಾನರು ಚಿಂತೆಯೊಳು ಇರಲು   || ೬೬ ||

ಚಿಂತೆಮಾಡಲು ಅಳಿದ ಸಂತೋಜಿ ಬರಲರಿಯ | ಇಂತೆಂದರು ಇಲ್ಲಿ ಉಳಿದವರು |
ಪಂಥಾಡಿ ಎನ್ನಾಳಿ ಅನವರ್ದಿಖಾನನ ಕೋಪ | ಎಂಥವರಿಗು ಪೇಳುವರಳವೆ        || ೬೭ ||

“ಕೋಣ ಅರೆ ಕರೆಯದೆ ಕುದಮುಲ್ಲ” ಅವನಂಥ | ಖಾನರೆಲ್ಲಿಹರು ಸಾಹಸದಿ |
ಬಂದಬಂದವ ನೋಡು ಮಕರ ಶಾಸ್ತ್ರವು ಎಂದು | ಎದ್ದನು ಗೋಲ್ವಡೆಯ            || ೬೮ ||

ಸೋದರಳಿಯನ ಅಲ್ಲ ಮಾವನಳಿಯಲು ಮತ್ತೆ | ಮಾಡುವುದೇನು ಫಲ ತೀರಿದರೆ |
ಜಾಡರಂದದಿ ಕುಳಿತು ಸಂಪಾದನೆಯ ಮಾಡಲು | ಮತ್ತೆ ಭಾವ ಬರುವನು ರಾಮನೊಳೆ     || ೬೯ ||

ರಾಚೂರ ಮುದಿಗಲ್ಲ ರಸದುಲ್ಲಖಾನನು ಎದ್ದು | ಕೋಪದಿ ಕಿಡಿಗರೆಯುತಲಿ |
ಹಾಕುವೆ ರಾಮನ ಹಣೆಯಬರಹವ ಕಿತ್ತು | ನೂಕಲು ತನ್ನಯ ಪೌಜು                 || ೭೦ ||

ಅನವರ್ದಿ ರಸದುಲ್ಲ ಯಮನ ಕೋಪಗಳಾಗಿ | ಗುಡಿಗುಣಿಸಿ ಮದಗಜದೊಳಗೆ |
ನಡೆಯಲು ಎಂಬತ್ತು ಸಾವಿರ ತುರಗದಿ | ಜೀರಿಯ ಮುಸ್ತಾಪಿನ ತೇಜಿ               || ೭೧ ||

ಕರಿಯಿಂದ ತುರಗದ ರವದಿಂದ ಭೇರಿಯ | ಭರದಿಂದ ಭೂಮಿ ಜರ್ಝರಿಸಿ |
ದೊರೆ ರಾಮ ಎನ್ನಲು ಬಲವ ಬೆನ್ನಿಗೆ ನಿಲಿಸಿ | ಎದೆಗೆಡದೆ ನಿಂದು ನೋಡಿದನು      || ೭೨ ||

ಗಾಯೊಡೆದು ಮನ್ನೆಯರ ಕಾಲಿಯಾದವರನು | ಸುಡಿಸಿ ಮೇಲಾಗಿ ಮತ್ತೆಂಟು |
ಸಾವಿರ ಕರಿ ತುರಗ…………………………. | ಕಾಲಾಳು ಬಂದು ಕೂಡಿದವು         || ೭೩ ||

ಇತ್ತರದ ಭೇರಿಗಳು ವೀರದ ಕೋಳಾಹಳ | ಎತ್ತಿ ಸಾರುವ ರಣ ಕಹಳೆ |
ಮುತ್ತಲು ರಣಧೂಳು ಅನವರ್ದಿ ರಸ್ತು [ಲ] ಖಾನ | ಕಿಚ್ಚು ಹರವುತ ಜಾಣವನು      || ೭೪ ||

“ಮಾರು ಮಾರೆ” ನುತಲಿ ಏರಿಸಿ ಸರಳನು | [ಸೂ]ಸಿ ಸೋನೆ ಮಳೆಯಂತೆ |
ರಾಮನು “ಯಾ ಅಲ್ಲಾ ಅರೆ ಜೋಕು ಬೋದು” ನಮ್ಮ | ಗೋಲ್ವಡನ ಮೂಗರಿದ ಲೌಡಿ      || ೭೫ ||

ಬಾರಣ್ಣ ಸಾಕೀಗ ರಣದ ಲಾಲಾವರ್ಧಿಯಖಾನ | ಮಾದಿಗರ ಹಂಪನೆಂದರಿಯಾ |
ಜೋಡೆಳೆದ ಮುಗಿಲೇನು ಬಹಳ ಚಿಂತಿಸುತಿರ್ದೆ | ನಾ ಬೇರೆ ಉಳಿದೆನೊ ಬಾರೊ  || ೭೬ ||

ಸತ್ಯವರೆ ನಾವಿತ್ತ ಲವುಡಿ ಮಾರೆನುತಲಿ | ಏರಲು ಫೌಜು ಫಲ ಮಸಗಿ |
ಓಡಲು ಕಾರ್ಗುಡಿಸಿ ಭೂಮಿ ನುಂಗುವ ತೆರದಿ | ರಾಮ ನೂಕಲು ಬೆದರುವರು       || ೭೭ ||

ಮಳೆಯೊಲು ಬಾಣವ ಸವಲಕ್ಷ ಅಂಬನು | ಮೊಗವಿಡಿಯರಂತೆ ಮಾನ್ಯಯರ |
ತುಕುಡಿ ಮಾಡದೆ ನಿಮ್ಮ ರಾಮನ ನಾ ಹೋಗೆ | ರಸ್ತುಲಖಾನನು ಅಹುದೆ           || ೭೮ ||

ಆಗುವದು ಗಳಿಗೆಯಲಿ ಹೋದಿಯೆ ರಸ್ತುಲ | ಗೋರಿಗೆ ಹತ್ತಿಗಾಣದಂತೆ |
ಬಾದುರಖಾನನು ಭೇರುಂಡ ಕಾಟನು | ಹಾರಿಸಿ ತುರಗ ನೂಕಿದರು                  || ೭೯ ||

ವೀರಸಂಗನು ಹೊಕ್ಕು ಪ್ರಾಣದಾಸೆಯ ತೊರೆದು | ಬಾಣಿ ಮುದ್ದನು ಹಂಪ ಸಹಿತ |
ಬಾಣರ ಬಡಗಿ ಪಂಚಾನರ ಗಂಗಯ್ಯ | ನಾಗ ರಾಹುತನು ಲಿಂಗಣ್ಣ                  || ೮೦ ||

ಜಗಲೂರ ಮಾರಜೆಟ್ಟಿ ಹಗಲು ಪಂಜಿನ ಹನುಮ | ಬಿರಿದಂಕ ಜಂಗಮ ಬಸವ
ನೆಗೆದು ಹಾರುತ ಬಂದ ಲೆಂಕೆ ಹನುಮನು ಒಬ್ಬ | ಸರದಾರ ಖಾನನ ಒಗೆಯೋ     || ೮೧ ||

ಮುತ್ತಿದ ಫೌಜನು ಮುರಿದೊತ್ತಲು ಕಡಿಕೊಂಡು | ಸುತ್ತ ಬಾಣದ ಎಸಗೆಯನು |
ಮತ್ತೊಬ್ಬ ಖಾನನು ಬಂದು…………. | ಮುತ್ತಿಕೊಳ್ಳಲು ಹೊರಡದಂತೆ              || ೮೨ ||

ಮುತ್ತಲು ನಾಲ್ಕು ಮುಖದಿ ಪೌಜೆಲ್ಲ ಒಂದಾಗಿ | ಲವುಡಿ ಲಡೆರಾಬ್ಬಾಡೆ ಇವರ |
ಇರುಬಿನ ಗಜದಂತೆ ಹೆಣಗುವರು ಒಂದಾಗಿ | ಒಡೆಯದೆ ಕಾಟಣ್ಣ ಗುಂಪ             || ೮೩ ||

ಹೇಳುವರಳವಲ್ಲ ಖಾನರ ಛಲಪದವ | ಬದೂರ ಬಂದು ಸಿಕ್ಕಿದನು |
ಸೇರಿಸಿ ಅಂಬಿನ ಮಳೆಯ ಮೊತ್ತಗಳಿಂದ | ರೋಸಿ ಮುತ್ತಲು ನಾಕು ಮುಖದಿ       || ೮೪ ||

ಹರಹರ ತನ್ನಯ ಬಲವೆಲ್ಲ ಲಯಗಾಲ | ಒದಗಿತು ಎತ್ತಣ ರಾಮ |
ಪಡೊವಗಡೆ ತುರಗವ ಮುಂಗಾರ ಸಿಡಿಲಂತೆ | ಒದವುತಿರಲು ರಣಮುಖಕೆ         || ೮೫ ||

ಗರುಡನು ಒಗೆವಂತೆ ತಲೆಗಳನು ಮೆಟ್ಟುತ | ಒಗೆಯುತ ಬಾಯಿಂದ ಪಿಡಿದು |
ಕೊರೆಯುತ್ತ ಕಣಿಕೆಯನರಿದಂತೆ ಕೊರೆದ | ಕರದಿಂದ ರಾಮನ ಭೀಮ               || ೮೬ ||

ತೃಷೆಯಾದ ಕರಿಗೊಂದು ರಸದಾಳೆ ಕಬ್ಬಿನ | ಹಸನಾದ ಹೊಲನು ದೊರೆತಂತೆ |
ಬಿಸಿಗಣ್ಣನಭವನ ಬೆಮರ ಸುತನು ದಕ್ಷ | ಅಸುರರ ಕಡಿದಂತೆ ಕಡಿವ                 || ೮೭ ||

ನುಗ್ಗಲು ರಾಮನ ಜಗ್ಗು ಜಾಳಿನ ಮಂದಿ | ಬಿದ್ದು ಎದ್ದವರ ಗೋಣ ಹರಿದು |
ಸದನಕ್ಕೆ ನಡೆವವರ ತಿರುಗುವಂದದಿ ಪೋಗಿ | ಕವಿದಿರ್ದ ಪೌಜನೆ ತರಿಗಡಿದ        || ೮೮ ||

ಮೆಳೆಯನು ತರಿದಂತೆ ಹೊಳವರಿತು ಕೊಲ್ಲುತ ರಾಂ | ದುಮುಕಿದ ಕಾಟಯನ ಬಳಿಗೆ |
ಮರಳಿ ಪಡೆದೆವು ತಮ್ಮ ಶರಿರವೆನುತಲಿ ಅವರು | ಬಿಡಿಸಿಕೊಂಡರು ತಮತಮಗೆ   || ೮೯ ||

ಹೋಗುವ ಒಳಿಕೆಯ ವೀರರುಪಚರಿಸಿ | ತಿರುಹಿ ಒಗೆಯುತಲಿ ತುರಗವನು |
ಎಡಗೈಯ ಹಂಪನ ಪಿಡಿದು ಕಾಲ್ಗೆರೆಯುತ ಒಗೆದು | ಅರಿವುತ ಮೂಗು ಮುಸುಡಿಯರು      || ೯೦ ||

ಕಾಟಣ್ಣ [ಕಲಿ]ಉಗ್ರ ಕೋಪಾಗ್ನಿಯೊಳು ಹೊಕ್ಕು | ಅಕ್ಕಿದ ಹಮ್ಮೀರನ ಮೇಲೆ
ನೂಕಿ ಕಡಿದ ಬಂದು ಬಾದುರ ಬಾಣಿಯ ಮುದ್ದ | ಕಾಲನಾರ್ಭಟದೊಳು ಕಡಿಯೆ     || ೯೧ ||

ಜೇರಿಯ ಭಕ್ತರಾದ ತುರಗ ರಾಹುತರು ಕೇಳಿ | ಮುಂದಾಗಿ ನಾಯಿಗೆ ಕಡೆಯಾ |
ಹರುಷದಿ ಕಡಿದರು ಹನುಮ ಬಾಣಿಯ ಮುದ್ಧ | ದನಗಳ ಬಡಿದ ರೀತಿಯಲಿ          || ೯೨ ||

ಸಂದುದು ಅರ್ಥ ಎಂಬತ್ತು ಸಾವಿರದೊಳು | ಹೊಂದಲು ಯಮನ ಸಂಬಳವ |
ಕುಂಜರದ ಪೌಜಿಗೆ [ಕಂದ] ರಾಮನು ಹೊಕ್ಕು | ಸುಂಡಿಲ ಸೆಳೆಯೆ ನೂರಾರು       || ೯೩ ||

ಕಂಡನು ರಸ್ತುಲ ಅನವರ್ದಿಖಾನನ ಮುಖವ | ಚೆಂಡಿಕೆ ಹೊಡೆದು ಹಾಕುವರು |
ಬಂದೆನಗೆ ದಯಮಾಡಿ ಇವ[ನಂ]ದ ಮಾತಿಗೆ ಮೂಗ | ಮಂಡಗತ್ತಿಯನು ಮುಟ್ಟಿಸುವೆ       || ೯೪ ||

ಹಂಪನು ಮಾತಿಗೆ ಛಲದಂಕ ರಾಮನು ನಗುತ | ತುಂಬ ಹಮ್ಮೀರ ಏರೆ |
ಸವರಲು ಎಡಬಲದ ಪುಡಿವುಳ್ಳೆ ಖಾನರನೆಲ್ಲ | ಹಿಡಿಯಲು ಹಮ್ಮೀರನ ಸೆರೆಯ      || ೯೫ ||

ಕೊಡಬೇಕು ಎನ್ನೊಡೆಯ ಕುಮ್ಮಟಕೆ ಪ್ರೇಮದಿ ಬರಲು | ಹೊಗಲೆಂದ ಲವುಡಿ ಮಗನೆ |
ಘನವಲ್ಲ ಎಲೆ ಹಂಪ ಕೈಸೆರೆಯ ಪಿಡಿದನ ಕೊಳ್ಳೆ | ಮುನಿವನು ನನಗೆ ಮಹದೇವ   || ೯೬ ||

ಮುತ್ತಿದ ಬಲವೆಲ್ಲ ಮುಕ್ತಾಯವಾಗಲು ಭೂಮಿ | ರಕ್ತದ ಮಳೆ ಬಂದಂತೆ |
ಸುತ್ತೊಂದು ಬಾಣದ ಪ್ರಯೋಗದ………ಲದಿ | ಮತ್ತೆ ಒಪ್ಪುವುದು ಹೆಣಮಯದ     || ೯೭ ||

ಹತ್ತುವರಲ್ಲದೆ ಹಾರುವರ ಮನೆಯನು | ಕತ್ತೆಯಂದದಿ ಮೆಲುತಿರಲು
ಲಕ್ಷದೊಳರ್ಧಯ ತಿಟ್ಟ ತೆವರನು ಹತ್ತಿ | ಆಸ್ತರಿಲ್ಲದೆ ಚೆರಿಸ್ಯಾಡೆ                      || ೯೮ ||

ಅನವರ್ದಿ ರಸ್ತೂಲು ಯಮನ ಸೇರಲು ಒಬ್ಬ | ಅಮರಂಗಿಖಾನನು ಏಳೆ |
“ತುಮೆ ಆವು” ತುಕ್ಕೋಜಿ ರಣದುಲ್ಲ ಕಾಫರಖಾನ | ಮದಗಳ ಕೊಂಡು ಮೇಜಾಗಿ   || ೯೯ ||

ಹೋದವರು ಜಗಳಕೆ ಮೋರೆ ತೋರರು ಮರಳಿ | ಭೂಮಿ ನುಂಗುವುದೊ ಶಿವಬಲ್ಲ |
ರಾಮಗೆ ತಲೆಯೆಷ್ಟು ಬಾಣಾಸುರನ ತೆರದಿ ಸಾವಿರ ತೋಳ ಪಡೆದಿಹನೆ             || ೧೦೦ ||

ಮರಗಯಾ ಅಂತವನು ಇವನು ಮಿಕ್ಕುವನೆಂದು | ಯಮನ ರೋಷದಲಿ ನಡೆಯುವರು |
ಕರಿತುರಗ ಕಾಲ್ಬರದಿ ಅರುವತ್ತು ಸಾವಿರದೊಳು ಧರಣಿ ಜರ್ಝರಿಪಂತೆ ಬರಲು     || ೧೦೧ ||

ಭೇರಿ ಆರ್ಭಟೆಯೊಳು ಭೂಮಿಯನೊದರಿಸಿ | ಕಾರಮೇಘವು ಕವಿವಂತೆ |
ದೂರಿಯನಾಡುತಲಿ ಹಾರಿಯ ಮದದೊಳು | ತೋರಿದೆ ರಾಮನೆಂಬವನ           || ೧೦೨ ||

ಸಿಂಗಾಳದ್ವೀಪದ ಕುಂಜರ ಲೌಡಿಯ ಕುಂತು | ಮಂಜುಲ ಕಾಫರಖಾನ |
ಸಾಂಬ್ರಾಣಿ ತುರಗದ ಮೇಲೆತ್ತು ಕೋಚಿಯು | ಸಂಗ್ರಾಮ ಅಪವಕ್ಕೆ ನೂಕಿದರು      || ೧೦೩ ||

ಸರಳದ ಬಾಣದ ಭರದಿಂದ ಕೂಗುವ ಗಗನಕ್ಕೆ ಏರುವ ಭರದೊಳಗೆ |
ತುಳಿಸುತಿರ್ಪರು ನಾಲ್ಕು ಕಡೆಯವರು ಬಂದು | ಕೊಡು ಲವುಡಿ ಬಾದುರನ ಬೇಗ   || ೧೦೪ ||

ಕಾಫರಖಾನನ ಕುಕ್ಷಿ ಗಾತ್ರದ ಕೇಳಿ | ಚಿಕ್ಕದು ಕಪುಳೆಯೋ ಬಾನಿ |
ಹತ್ತಿದ ಮದಕರಿಗೆ ಹವಣಾಗಿ ವರನದು | ನಕ್ಕನು ಬಾಣಿಯ ಮುದ್ದ                   || ೧೦೫ ||

ಬಾದುರನ ಕೇಳುವಕ್ಕನಕ ತರನಹುದು | ದೋಣಿ ಸಂತೊಡಪಲನೊಡೆದು |
ಕೆಂಬಾಣಿಯ ಗುಡಿಗೆಯನು ನೋಡಿ ಸಾಬರು ಮತ್ತೆ | ಬಾದುರನ ಹೆಸರನ ಹಡಿಯೆನಲು      || ೧೦೬ ||

ಏನೆಂಬೆ ಲವುಡಿ ನೀ ಕುಣಿಬಿ ಮಾರೆನುತಲಿ | ಏರುವರು ಪವುಜ ಹಮ್ಮೀರರು
ಮಾರೊರು ಮನೆಯನು ಬಿಬ್ಬಿಯಿನ್ನೊಬ್ಬಗೆ | ನೀ ಹೋದನೆಂಬಾಸೆ ಬೇಡ            || ೧೦೭ ||

ಕುಣಿಬಿನ ಕರಿಯ ಮಾಡಿ ಎದೆಗರ್ವ ನುಡಿವ[ವ] | ಕಡಿ ಇವ[ನ] ಕೈಕಾಲು ಮುರಿವಂತೆ |
ಕಡಿಯಲು ನಿಮ್ಮವ್ವ ಹಡೆದಾಳೆ ಗಂಡೆಂದು | ಬಡಿದರು ಮುಂದೆ ಬಂದವರ          || ೧೦೮ ||

ಶಾಭಾಸು ಲವುಡಿಯ ಹೋರಾ ಹಚ್ಚನುಯೆಂದು | ಏರಲು ತುಕ್ಕೋಜಿ ಮುನಿದು |
ಝೇರಿಸಿ ಬರುವರು ಕೂರ್ಗಣೆಯ ಸೂಲಂಗಿಯ | ನೂರಲು ಬಡಿದು ಕಣ್ಗೆಡಲು        || ೧೦೯ ||

ಬಾದುರಖಾನನ ಮಗನು ಹಮ್ಮಿರಖಾನ | ನೀಲಕಂಠನು ಸಂಗಯ್ಯ |
ಏರಲು ಕಡಿಕೊಂಡು ವ್ಯಾಘ್ರನು ಉಗ್ರದಿ | ಗೋವ ಹೊ‌ಕ್ಕಂತೆ ಮುರಿದಿಡುತ         || ೧೧೦ ||

ಮುತ್ತಿದ ಫೌಜನು ಕೊಚ್ಚಿ ಬಯಲು ಮಾಡಿ | ಒತ್ತಿಗೆ ಮುದ್ದನ ತೆಗೆದು |
ಹತ್ತಲು ಬೆನ್ನೊಡನೆ ಕಾಫರ ಮಂಜುಲಖಾನ | ಉಕ್ಕಿನ ಮಳೆಯನು ಸುರಿಸುತಲಿ    || ೧೧೧ ||

ಅಂಬಿನ ಮಳೆಯೊಳು ಓಕುಳಿಯನಾಡುವರು | ಒಂದರೆ ಗಾಯ ಸಂಧಿಸಲು |
ಕಂಡನು ಕಲಿಪಾರ್ಥ ಕುಂಜರವ ತಾನಿಳಿದು | ತಂದ್ಹಿಡೆಯೆ ಬೊಲ್ಲನ ಏರೆ            || ೧೧೨ ||

ಉರಗಗೆ ಎರಗುವ ಸಿಡಿಲಂತೆ ಕಾರ್ಮಿಂಚು | ಹೊಳೆವಂತೆ ಖಡ್ಗ ಕರದೊಳಗೆ |
ರಣದುರ್ಗಿ ಹಸಿವಾಗಿ ಕುರಿಹಿಂಡ ಬಡಿತಿಂಬ | ತೆರದಿ ಕೊಂದರು ಈರ್ವರು           || ೧೧೩ ||

ಮದವೆದ್ದು ಗಜಬಂದು ಕದಳಿಯ ಹೊಕ್ಕಂತೆ | ಸದೆವುತ ಸಪ್ಪೆ ಕೊರೆದಂತೆ |
ಕಡು ದೋಷದೊಳಗವರು ಎತ್ತಿ ಹೊಡೆಯಲು | ಎಚ್ಚತ್ತು ಭಾಗವಾಗಿ ಮಲಗುವರು   || ೧೧೪ ||

ಹೆಣನ ತಿಂಬುವ ತೇಜಿ ತುಳಿದುಕೊಂದುದು ಒಂದು | ಎರಡೆಂಟು ಸಾವಿರ ತಲೆಯ |
ಇದಿರಾಗಿ ಒದಗಲು ತುಕ್ಕೋಜಿಖಾನನ ಹೊಡೆದು | ನಡೆಯಲು ಕಾಫರನಿದಿರ       || ೧೧೫ ||

ಎದೆಯ ಅಂಬನು ಕಿತ್ತು ರಣಧೀರ ಕಾಫರನ | ಎಡೆಬಿಡದೆ ಒಗೆದ ಮುನ್ನೂರ |
ತಿಳಿದಿಲ್ಲವೆ ಹರೀರಾ ಕಾಫರಖಾನನ ಸುದ್ದಿ | ಕೊಡವೆ ಲಿಖಿಯನು ನಿನ್ನ ನೋಡು     || ೧೧೬ ||

ಹೇಳುವದ ಕೇಳಿರಿವ ಭೇರಿವಡಲೆಂಬುವುದ | ಮೋರೆ ಶಕ್ತಿಯ ಕಂಡುದೀಗ |
ತಾರಿಕೆ ಹಾರ್ಯಾಡೆ ಗುಂಗುರದ ಸರಳಂಬು | ನೋಡೆನಲು ವಾಹಕ ಕೊಡುವೆ      || ೧೧೭ ||

ಏರಿಸಿದ ಪಂಚೇರು ಮೂರಕೊಂದದ ಸರಳ | ಭೀಮನಂದದಿ ಹೊಡೆಯೆ ತೆಗದು |
ಸೇರಿದ ಕಪ್ಪರನ ಕೀಲುಂಟೆಗೆ ಎರಡ | ಭೇರಿ ಒಡಲಿಗೆ ಮೂರು ಕೊಡಲು             || ೧೧೮ ||

ಅರೆ ಮುಲ್ಲ ಖುದಾ ಎನುತ ಒರಗಲು ಕಪ್ಪರನು | ಉರಿವ ಮಂಜುಲಖಾನ ಬೆದರಿ |
ಕರಿಯ ಮೆಲ್ಲನೆ ಇಳಿದು ತುರಗ ಏರುತಲೋಡೆ | ಹೊಡೆದ ಬಾದುರಖಾನ ಬಿಡದೆ    || ೧೧೯ ||

ಬಯಲಾಗೆ ಬಲವೆಲ್ಲ ಒಡನೆ ಒಬ್ಬರಖಾನ | ನಡೆಯಲು ತುಂಬುರ ಸಹಿತ |
ತುಂಬೆ ರಾಮನ ಊರ ಹೋಗಲು ಬಿಡದೆ | ಎಂಬತ್ತು ಸಾವಿರ ಬರಲು               || ೧೨೦ ||