೧೫೨
ಇನ್ನು ಷಡ್ವಿಧ ಲಿಂಗದ ನೆಲೆ, ಅದೆಂತೆದಡೆ :
ಆಧಾರ ಚಕ್ರದಲ್ಲಿ ನಾದ ಸ್ವರೂಪವಾಗಿ ಆಚಾರಲಿಂಗವಿಹುದು.
ಸ್ವಾಧಿಷ್ಠಾನಚಕ್ರದಲ್ಲಿ ನಾದ ಸ್ವರೂಪವಾಗಿ ಗುರುಲಿಂಗವಿಹುದು.
ಮಣಿಪೂರಕಚಕ್ರದಲ್ಲಿ ನಾದ ಸ್ವರೂಪವಾಗಿ ಶಿವಲಿಂಗವಿಹುದು.
ಅನಾಹತಚಕ್ರದಲ್ಲಿ ನಾದ ಸ್ವರೂಪವಾಗಿ ಜಂಗಮಲಿಂಗವಿಹುದು.
ವಿರುದ್ಧಿಚಕ್ರದಲ್ಲಿ ನಾದ ಸ್ವರೂಪವಾಗಿ ಪ್ರಸಾದಲಿಂಗವಿಹುದು.
ಆಜ್ಞಾಚಕ್ರದಲ್ಲಿ ನಾದ ಸ್ವರೂಪವಾಗಿ ಪ್ರಸಾದಲಿಂಗವಿಹುದು.
ಆಜ್ಞಾಚಕ್ರದಲ್ಲಿ ನಾದ ಸ್ವರೂಪವಾಗಿ ಮಹಾಲಿಂಗವಿಹುದು. ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೫೩
ಶಿವಲಿಂಗಸಾರೇ ಸಾಕ್ಷಿ-
ಆಧಾರೇ ಭೃತ್ಯಲಿಂಗಂ ಚ ಸ್ವಾಧಿಷ್ಠೇ ಗುರುಲಿಂಗಕಂ |
ಶಿವಂ ಚ ಮಣಿಪೂರೇ ಚ ಜಂಗಮಂ ಚ ಅನಾಹತೇ ||
ಪ್ರಸಾದಂ ಚ ವಿಶುದ್ಧಿಶ್ಚ ಆಜ್ಞಾಯಾಂ ಮಹಾಲಿಂಗಕಂ |
ಇತಿ ಲಿಂಗಸ್ಥಲು ಜ್ಞಾತ್ವಾ ಸುಸೂಕ್ಷ್ಮಂ ಕಮಲಾನನೇ || ಎಂದುದಾಗಿ
ಅಪ್ರಮಾಣ ಕೂಡಲಸಂಗಮದೇವ.

೧೫೪
ಇನ್ನು ಷಟ್ಕಲೆಗಳುತ್ಪತ್ಯ, ಅದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ ಜ್ಯೋತಿಸ್ವರೂಪದಲ್ಲಿ,
ಶಾಂತ್ಯತೀತೋತ್ತರ ಕಲೆ ಉತ್ಪತ್ಯವಾಯಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಶಾಂತ್ಯತೀತ ಕಲೆ ಉತ್ಪತ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಶಾಂತಿ ಕಲೆ ಉತ್ಪತ್ಯವಾಯಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ವಿದ್ಯಾ ಕಲೆ ಉತ್ಪತ್ಯವಾಯಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಪ್ರತಿಷ್ಠಾ ಕಲೆ ಉತ್ಪತ್ಯವಾಯಿತ್ತು.
ಆ ಪ್ರಣವದ ತಾರಕಸ್ವರೂಪದಲ್ಲಿ ನಿವೃತ್ತಿಕಲೆ ಉತ್ಪತ್ಯವಾಯಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೫೫
ನಿಃಕಲಾತೀತಾಗಮೇ ಸಾಕ್ಷಿ-
ಓಂಕಾರಜ್ಯೋತಿರೂಪೇ ಚ ಮಹಾಕಲಾ ಚ ಜಾಯತೇ |
ಓಂಕಾರದರ್ಪಣಾಕಾರೇ ಶಾಂತ್ಯತೀತೇ ಚ ಜಾಯತೇ ||
ಓಂಕಾರೇಚಾರ್ಧಚಂದ್ರೇಚ ಶಾಂತಿಕಲಾ ಚ ಜಾಯತೇ |
ಓಂಕಾರಕುಂಡಲಾಕಾರೇ ವಿದ್ಯಾಕಲಾ ಚ ಜಾಯತೇ ||
ಓಂಕಾರದಂಡರೂಪೇ ಚ ಪ್ರತಿಷ್ಠಾಚ ಸಜಾಯತೇ |
ಓಂಕಾರತಾರಕಾರೂಪೇ ನಿವೃತ್ತಿಶ್ಚ ಸಜಾಯತೇ ||
ಇತಿ ಷಷ್ಠಕಲಾದೇವಿ ಸ್ಥಾನೇಸ್ಥಾನೇ ಸಜಾಯತೇ | ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೧೫೬
ಇನ್ನು ಷಟ್ಕಲೆಯ ನೆಲೆ ಅದೆಂತೆಂದಡೆ :
ಆಧಾರಚಕ್ರದಲ್ಲಿ ನಿವೃತ್ತಿ ಕಲೆ ಇಹುದು.
ಸ್ವಾಧಿಷ್ಠಾನಚಕ್ರದಲ್ಲಿ ಪ್ರತಿಷ್ಠಾಕಲೆ ಇಹುದು.
ಮಣಿಪೂರಕಚಕ್ರದಲ್ಲಿ ವಿದ್ಯಾಕಲೆ ಇಹುದು.
ಅನಾಹತಚಕ್ರದಲ್ಲಿ ಶಾಂತಿಕಲೆ ಇಹುದು.
ವಿಶುದ್ಧಿಚಕ್ರದಲ್ಲಿ ಶಾಂತ್ಯತೀತ ಕಲೆ ಇಹುದು.
ಆಜ್ಞಾಚಕ್ರದಲ್ಲಿ ಶಾಂತ್ಯತೀತೋತ್ತರ ಕಲೆ ಇಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೫೭
ಆದಿಸೂತ್ರೇ ಸಾಕ್ಷಿ-
ಆಧಾರೇ ಚ ನಿವೃತ್ತಿಂ ಚ ಸ್ವಾಧಿಷ್ಠಾನೇ ಪ್ರತಿಷ್ಠಾಂ ಚ |
ವಿದ್ಯಾಂ ಚ ಮಣಿಪೂರೇ ಚ ಅನಾಹತೇ ಚ ಶಾಂತಿಕಂ ||
ಶಾಂತ್ಯತೀತಂ ವಿಶುದ್ಧೌ ಚ ಆಜ್ಞಾಚಕ್ರೇ ಮಹಾಕಲಾಂ |
ಇತಿ ಷಷ್ಠಕಲಾನ್ಯಾಸಂ ಸಂಸೂಕ್ಷ್ಮಂ ಕಮಲಾನನೇ || ಎಂದುದಾಗಿ
ಅಪ್ರಮಾಣ ಕೂಡಲಸಂಗಮದೇವ.

೧೫೮
ಇನ್ನು ಷಟ್ಸಾದಾಖ್ಯದುತ್ಪತ್ಯ, ಅದೆಂತೆಂದಡೆ :
ಶಾಂತ್ಯತೀತೋತ್ತರಕಲೆಯಲ್ಲಿ ಮಹಾಸಾದಾಖ್ಯ ಉತ್ಪತ್ಯವಾಯಿತ್ತು.
ಶಾಂತ್ಯಶಾಂತ್ಯತೀತಕಲೆಯಲ್ಲಿ ಶಿವಸಾದಾಖ್ಯ ಉತ್ಪತ್ಯವಾಯಿತ್ತು.
ಶಾಂತಿಕಲೆಯಲ್ಲಿ ಅಮೂರ್ತಸಾದಾಖ್ಯ ಉತ್ಪತ್ಯವಾಯಿತ್ತು.
ವಿದ್ಯಾಕಲೆಯಲ್ಲಿ ಮೂರ್ತಸಾದಾಖ್ಯ ಉತ್ಪತ್ಯವಾಯಿತ್ತು.
ಪ್ರತಿಷ್ಠಾಕಲೆಯಲ್ಲಿ ಕರ್ತೃಸಾದಾಖ್ಯ ಉತ್ಪತ್ಯವಾಯಿತ್ತು.
ನಿವೃತ್ತಿಕಲೆಯಲ್ಲಿ ಕರ್ಮಸಾದಾಖ್ಯ ಉತ್ಪತ್ಯವಾಯಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೫೯
ವಾತುಲಸಾರೇ-
ಶಾಂತ್ಯತೀತೋತ್ತರೇ ಚೈವ ಮಹಾಸಾದಾಖ್ಯಮುದ್ಭವಂ |
ಶಾಂತ್ಯತೀತಕಲಾಯಾಂ ಚ ಶಿವಸಾದಾಖ್ಯಮುದ್ಭವಂ ||
ಅಮೂರ್ತಸಾದಾಖ್ಯಂ ದೇವಿ ಶಾಂತಿಕಲಾಯಾಂ ಉದ್ಭವಂ |
ಮೂರ್ತಿಸಾದಾಖ್ಯಕಂ ಚೈವ ವಿದ್ಯಾಕಲಾಯಾಂ ಉದ್ಭವಂ ||
ಕರ್ತೃಸಾದಾಖ್ಯಕಂ ಚೈವ ಪ್ರತಿಷ್ಠೇ ಚ ಸಮುದ್ಭವಂ |
ಕರ್ಮಸಾದಾಖ್ಯಕಂ ಚೈವ ನಿವೃತೌ ಚ ಸಮುದ್ಭವಂ ||
ಷಡ್ವಿಧ ಸಾದಾಖ್ಯಂ ದೇವಿ ಷಟ್ಕಲಾಯಾಂ ಚ ಜಾಯತೇ | ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೧೬೦
ಇನ್ನು ಷಡ್ವಿಧ ಷಡ್‌ಸಾದಾಖ್ಯದ ನೆಲೆ, ಅದೆಂತೆಂದಡೆ :
ಆಧಾರ ಚಕ್ರದಲ್ಲಿ ಕರ್ಮಸಾದಾಖ್ಯವಿಹುದು.
ಸ್ವಾಧಿಷ್ಠಾನ ಚಕ್ರದಲ್ಲಿ ಕರ್ತೃಸಾದಾಖ್ಯವಿಹುದು.
ಮಣಿಪೂರಕ ಚಕ್ರದಲ್ಲಿ ಮೂರ್ತಸಾದಾಖ್ಯವಿಹುದು.
ಅನಾಹತಚಕ್ರದಲ್ಲಿ ಅಮೂರ್ತ ಸಾದಾಖ್ಯವಿಹುದು.
ವಿರುದ್ಧಿಚಕ್ರದಲ್ಲಿ ಶಿವಸಾದಾಖ್ಯವಿಹುದು.
ಆಜ್ಞಾಚಕ್ರದಲ್ಲಿ ಮಹಾಸಾದಾಖ್ಯವಿಹುದು, ನೋಡಾ
ಅಪ್ರಮಾಣ ಕೂಡಲಸಂಗಮದೇವ.

೧೬೧
ವಾತುಲಸೂತ್ರೇ ಸಾಕ್ಷಿ-
ಆಧಾರೇ ಕರ್ಮಸಾದಾಖ್ಯಂ ಸ್ವಾಧಿಷ್ಠಾನೇ ಚ ಕರ್ತೃಕಂ |
ಮಣಿಪೂರೇ ಚ ಮೂರ್ತಂ ಚ ಅಮೂರ್ತಿಂ ಚ ಅನಾಹತೇ ||
ವಿಶುದ್ಧೌಚ ಶಿವಂ ಚೈವ ಆಜ್ಞಾಯಾಂ ಮಹಾಸಾದಾಖ್ಯಂ |
ಇತಿ ಷಟ್ಸಾದಾಖ್ಯಂ ಚೈವ ಸ್ಥಾನೇಸ್ತಾನೇ ಸಮಾಚರೇತ್ || ಎಂದುದಾಗಿ
ಅಪ್ರಮಾಣ ಕೂಡಲಸಂಗಮದೇವ.

೧೬೨
ಇನ್ನು ಷಡ್ವಿಧಹಸ್ತದುತ್ಪತ್ಯವದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ ಜ್ಯೋತಿಸ್ವರೂಪದಲ್ಲಿ,
ಭಾವಹಸ್ತ ಉತ್ಪತ್ಯವಾಯಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಜ್ಞಾನಹಸ್ತ ಉತ್ಪತ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಸುಮನ ಹಸ್ತ ಉತ್ಪತ್ಯವಾಯಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ನಿರಹಂಕಾರ ಹಸ್ತ ಉತ್ಪತ್ಯವಾಯಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಸುಬುದ್ಧಿಹಸ್ತ ಉತ್ಪತ್ಯವಾಯಿತ್ತು.
ಆ ಪ್ರಣವದ ತಾರಕಸ್ವರೂಪದಲ್ಲಿ ಸುಚಿತ್ತಹಸ್ತ
ಉತ್ಪತ್ಯವಾಯಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೬೩
ಅಸಿಪದಾತೀತಾಗಮೇ ಸಾಕ್ಷಿ-
ಓಂಕಾರಜ್ಯೋತಿಸ್ವರೂಪೇ ಚ ಭಾವಹಸ್ತಂ ಚ ಜಾಯತೇ |
ಓಂಕಾರದರ್ಪಣಾಕಾರೇ ಜ್ಞಾನಹಸ್ತಂ ಚ ಜಾಯತೇ ||
ಓಂಕಾರೇಚಾರ್ಧಚಂದ್ರೇ ಚ ಮನೋಹಸ್ತಂ ಚ ಜಾಯತೇ |
ಓಂಕಾರಕುಂಡಲಾಕಾರೇ ನಿರಹಂಕಾರಂ ಚ ಜಾಯತೇ ||
ಓಂಕಾರದಂಡಸ್ವರೂಪೇ ಚ ಬುದ್ಧಿ ಹಸ್ತಂಚ ಜಾಯತೇ |
ಓಂಕಾರತಾರಕಾರೂಪೋ ಚಿತ್ತ ಹಸ್ತಂ ಚ ಜಾಯತೇ ||
ಇತಿ ಷಡ್ವಧಹಸ್ತಾಶ್ಚ ಸ್ಥಾನೇ ಸ್ಥಾನೇ ಚ ಜಾಯತೇ | ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೧೬೪
ಇನ್ನು ಷಡ್ವಿಧಹಸ್ತಂಗಳ ನೆಲೆ ಅದೆಂತೆಂದಡೆ :
ಆಧಾರಚಕ್ರದಲ್ಲಿ ಸುಚಿತ್ತಹಸ್ತವಿಹುದು.
ಸ್ವಾಧಿಷ್ಠಾನಚಕ್ರದಲ್ಲಿ ಸುಬುದ್ಧಿಹಸ್ತವಿಹುದು.
ಮಣಿಪೂರಕಚಕ್ರದಲ್ಲಿ ನಿರಹಂಕಾರ ಹಸ್ತವಿಹುದು.
ಅನಾಹತಚಕ್ರದಲ್ಲಿ ಸುಮನಹಸ್ತವಿಹುದು.
ವಿಶುದ್ಧಿಚಕ್ರದಲ್ಲಿ ಜ್ಞಾನಹಸ್ತವಿಹುದು.
ಆಜ್ಞಾಚಕ್ರದಲ್ಲಿ ಭಾವಹಸ್ತವಿಹುದು. ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೬೫
ಚಕ್ರಾತೀತಾಗಮೇ || ಸಾಕ್ಷಿ ||
ಆಧಾರ ಸುಚಿತ್ತಂ ಚ ಸ್ವಾಧಿಷ್ಠಾನೇ ಸುಬುದ್ಧಿಕಂ |
ಮಣಿಪೂರೇಚಹಂಕಾರಂ ಮನೋಹಸ್ತಂಚನಾಹತಂ ||
ವಿಶುದ್ಧಿ ಜ್ಞಾನಹಸ್ತಂಶ್ಚ ಆಜ್ಞಾಯಾಂ ಭಾವಹಸ್ತಕಂ
ಇತಿ ಹಸ್ತಸ್ಯ ಭೇದಾಜ್ಞಾ ದುರ್ಲಭಂ ಚ ವಕಾನನೇ |
ಎಂದುದಾಗಿ ಅಪ್ರಮಾಣ ಕೂಡಲಸಂಗಮದೇವ.

೧೬೬
ಇನ್ನು ನವಶಕ್ತಿಗಳುತ್ಪತ್ಯ ಅದೆಂತೆಂದಡೆ :
ಏನು ಏನೂ ಏನಲಿಲ್ಲದ ಮಹಾಘನ ನಿರಂಜನ ವಸ್ತುವಿನ ನೆನಹು ಮಾತ್ರದಲ್ಲಿ
ನಿರ್ಭಿನ್ನ ಶಕ್ತಿ ಹುಟ್ಟಿದಳು.
ಆ ನಿರ್ಭಿನ್ನ ಶಕ್ತಿಯ ನೆನಹುಮಾತ್ರದಲ್ಲಿ ನಿಭ್ರಾಂತ ಶಕ್ತಿ ಹುಟ್ಟದಳು.
ಆ ನಿಭ್ರಾಂತ ಶಕ್ತಿಯ ನೆನಹುಮಾತ್ರದಲ್ಲಿ ನಿರ್ಮಾಯ ಶಕ್ತಿ ಹುಟ್ಟಿದಳು.
ಆ ನಿರ್ಮಾಯ ಶಕ್ತಿಯ ನೆನಹುಮಾತ್ರದಲ್ಲಿ ಹಾಕಿನಿ ಶಕ್ತಿ ಹುಟ್ಟಿದಳು.
ಆ ಹಾಕಿನಿ ಶಕ್ತಿಯ ನೆನಹುಮಾತ್ರದಲ್ಲಿ ಠಾಕಿನಿ ಶಕ್ತಿ ಹುಟ್ಟಿದಳು.
ಆ ಠಾಕಿನಿ ಶಕ್ತಿಯ ನೆನಹುಮಾತ್ರದಲ್ಲಿ ಶಾಕಿನಿ ಶಕ್ತಿ ಹುಟ್ಟಿದಳು.
ಆ ಶಾಕಿನಿ ಶಕ್ತಿಯ ನೆನಹುಮಾತ್ರದಲ್ಲಿ ಲಾಕಿನಿ ಶಕ್ತಿ ಹುಟ್ಟಿದಳು.
ಆ ಲಾಕಿನಿ ಶಕ್ತಿಯ ನೆನಹುಮಾತ್ರದಲ್ಲಿ ರಾಕಿನಿ ಶಕ್ತಿ ಹುಟ್ಟಿದಳು.
ಆ ರಾಕಿನಿ ಶಕ್ತಿಯ ನೆನಹುಮಾತ್ರದಲ್ಲಿ ಕಾಕಿನಿ ಶಕ್ತಿ ಹುಟ್ಟಿದಳು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೬೭
ನಿರಾಮಯಾತೀತಾಗಮೇ | ಸಾಕ್ಷಿ-
ನಿರಂಜನ್ಯಮನೋಜ್ಞಾನಾನ್ನಿರ್ಭಿನ್ನಶ್ಚ ಸಮುದ್ಭವಃ |
ನಿರ್ಭಿನ್ನಸ್ಯ ಮನೋಜ್ಞಾನಾನ್ನಿಭ್ರಾಂತಶಕ್ತಿರುದ್ಭವಾ ||
ನಿಭ್ರಾಂತ ಮನೋಜ್ಞಾನಾನ್ನಿರ್ಮಾಯಂಚ ಸಮುದ್ಭವಂ |
ನಿರ್ಮಾಯಸ್ಯ ಮನೋಜ್ಞಾನಾತ್ ಹಾಕಿನೀಶಕ್ತಿರುದ್ಭವಾ ||
ಹಾಕಿನೇಶ್ಚ ಮನೋಜ್ಞಾನಾತ್ ಢಾಕಿನಿಶ್ಚ ಸಮುದ್ಭವಾ |
ಡಾಕಿನೇಶ್ಚ ಮನೋಜ್ಞಾನಾತ್ ಶಾಕಿನಿಶ್ಚ ಸಮುದ್ಭವಾ ||
ಶಾಕಿನೇಶ್ಚ ಮನೋಜ್ಞಾನಾತ್ ಲಾಕಿನಿಶ್ಚ ಸಮುದ್ಭವಾ |
ಲಾಕಿನೇಶ್ಚ ಮನೋಜ್ಞಾನಾತ್ ರಾಕಿನಿಶ್ಚ ಸಮುದ್ಭವಾ ||
ರಾಕಿನೇಶ್ಚ ಮನೋಜ್ಞಾನಾತ್ ಕಾಕಿನಿಶ್ಚ ಸಮುದ್ಭವಾ |
ಏಕೈಕಂ ಪ್ರಾಣಮಾಖ್ಯಾತಂ ಏಕೈಕಂತು ಸಮನ್ವಿತಂ || ಎಂದುದಾಗಿ
ಅಪ್ರಮಾಣ ಕೂಡಲಸಂಗಮದೇವ.

೧೬೮
ಇನ್ನು ನವಶಕ್ತಿಗಳನೆಲೆ ಅದೆಂತೆಂದಡೆ :
ಆಧಾರ ಚಕ್ರದಲ್ಲಿ ಕಾಕಿನಿ ಶಕ್ತಿ ಇಹಳು.
ಸ್ವಾಧಿಷ್ಠಾನ ಚಕ್ರದಲ್ಲಿ ರಾಕಿನಿಶಕ್ತಿ ಇಹಳು.
ಮಣಿಪೂರಕ ಚಕ್ರದಲ್ಲಿ ಲಾಕಿನಿಶಕ್ತಿ ಇಹಳು.
ಅನಾಹತ ಚಕ್ರದಲ್ಲಿ ಶಾಕಿನಿಶಕ್ತಿ ಇಹಳು.
ವಿಶುದ್ಧಿ ಚಕ್ರದಲ್ಲಿ ಠಾಕಿನಿಶಕ್ತಿ ಇಹಳು.
ಆಜ್ಞಾ ಚಕ್ರದಲ್ಲಿ ಹಾಕಿನಿಶಕ್ತಿ ಇಹಳು.
ಬ್ರಹ್ಮ ಚಕ್ರದಲ್ಲಿ ನಿರ್ಮಾಯಾಶಕ್ತಿ ಇಹಳು.
ಶಿಖಾ ಚಕ್ರದಲ್ಲಿ ನಿಭ್ರಾಂತಶಕ್ತಿ ಇಹಳು.
ಪಶ್ಚಿಮ ಚಕ್ರದಲ್ಲಿ ನಿರ್ಭಿನ್ನಶಕ್ತಿ ಇಹಳು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೬೯
ಸಾಕ್ಷಿ-
ಆಧಾರೇ ಕಾಕಿನಿಶ್ಚೈವ ಸ್ವಾಧಿಷ್ಠಾನೇ ಚ ರಾಕಿನಿ |
ಲಾಕಿನಿ ಮಣಿಪೂರೇ ಚ ಶಾಕಿನಿಶ್ಚ ಅನಾಹತೇ ||
ವಿಶುದ್ಧೌ ಠಾಕಿನಿಶ್ಚೈವ ಆಜ್ಞಾಯಾಂ ಹಾಕಿನಿಸ್ಥಿಥಾ |
ಬ್ರಹ್ಮಚಕ್ರೇ ತು ನಿರ್ಮಾಯಾ ಶಿಖಾಚಕ್ರೇ ನಿಭ್ರಾಂತಕಂ ||
ಪಶ್ಚಿಮೇ ತು ನಿರ್ಭಿನ್ನಾ ಸ್ಥಾನೇ ಸ್ಥಾನೇ ಸಮಾಚರೇತ್ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೧೭೦
ಇನ್ನು ಷಡ್ವಿಧ ದೇವತೆಗಳುತ್ಪತ್ಯ, ಅದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ಜ್ಯೋತಿಸ್ವರೂಪದಲ್ಲಿ ಆತ್ಮನುತ್ಪತ್ಯವಾದನು.
ಆ ಪ್ರಣವದ ದರ್ಪಣಾಕಾರದಲ್ಲಿ ಸದಾಶಿವನುತ್ಪತ್ಯವಾದನು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಈಶ್ವರನುತ್ಪತ್ಯವಾದನು.
ಆ ಪ್ರಣವದ ತಾರಕಕುಂಡಲಾಕಾರದಲ್ಲಿ ರುದ್ರನುತ್ಪತ್ಯವಾದನು.
ಆ ಪ್ರಣವದ ದಂಡಕಸ್ವರೂಪದಲ್ಲಿ ವಿಷ್ಣು ಉತ್ಪತ್ಯವಾದನು.
ಆ ಪ್ರಣವದ ತಾರಕ ಸ್ವರೂಪದಲ್ಲಿ ಬ್ರಹ್ಮ ಉತ್ಪತ್ಯವಾದನು
ನೋಡಾ, ಅಪ್ರಮಾಣ ಕೂಡಲಸಂಗಮದೇವ.

೧೭೧
ಬ್ರಹ್ಮತ್ಪರಸೂತ್ರೇ ಸಾಕ್ಷಿ-
ಓಂಕಾರಜ್ಯೋತಿರೂಪೇ ಚ ಜಿವಾತ್ಮಾ ಚ ಸಜಾಯತೇ |
ಓಂಕಾರದರ್ಪಣಾಕಾರೇ ಸದಾಶಿವಶ್ಚ ಜಾಯತೇ ||
ಓಂಕಾರಚಾರ್ಧಚಂದ್ರೇಚ ಈಶ್ವರಶ್ಚ ಸಜಾಯತೇ |
ಓಂಕಾರ ಕುಂಡಲಾಕಾರೇ ಕಾಲರುದ್ರಶ್ಚ ಜಾಯತೇ ||
ಓಂಕಾರದಂಡರೂಪೇಚ ನಾರಾಯಣಶ್ಚ ಜಾಯತೇ |
ಓಂಕಾರತಾರಕಾರೂಪೇ ವಿರಿಂಚಿಶ್ಚ ಸಜಾಯತೇ || ಎಂಬುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೧೭೨
ಇನ್ನು ನವಷಡ್ವಿಧ ಅಧಿದೇವತೆಗಳ ನೆಲೆ ಅದೆಂತೆಂದಡೆ :
ಆಧಾರ ಚಕ್ರಕ್ಕೆ ಬ್ರಹ್ಮನಧಿದೇವತೆ.
ಸ್ವಾಧಿಷ್ಠಾನ ಚಕ್ರಕ್ಕೆ ವಿಷ್ಣು ಅಧಿದೇವತೆ.
ಮಣಿಪೂರಕ ಚಕ್ರಕ್ಕೆ ರುದ್ರನಧಿದೇವತೆ.
ಅನಾಹತ ಚಕ್ರಕ್ಕೆ ಈಶ್ವರನಧಿದೇವತೆ.
ವಿಶುದ್ಧಿ ಚಕ್ರಕ್ಕೆ ಸದಾಶಿವನಧಿದೇವತೆ.
ಆಜ್ಞಾ ಚಕ್ರಕ್ಕೆ ಆತ್ಮನಧಿದೇವತೆ.
ಬ್ರಹ್ಮ ಚಕ್ರಕ್ಕೆ ಅಂತರಾತ್ಮನೆಂಬ ಮಹಾಗುರುವೆ ಅಧಿದೇವತೆ.
ಶಿಖಾಚಕ್ರಕ್ಕೆ ಪರಮಾತ್ಮನೆಂಬ ಮಹಾಲಿಂಗವೆ ಅಧಿದೇವತೆ.
ಪಶ್ಚಿಮ ಚಕ್ರಕ್ಕೆ ಸರ್ವಾತ್ಮನೆಂಬ ಮಹಾ ಜಂಗಮನೆ ಅಧಿದೇವತೆ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೭೩
ಇನ್ನು ಅಷ್ಟ ನಾದದುತ್ಪತ್ಯವದೆಂತೆಂದಡೆ :
ನಿಶ್ಶಬ್ದವೆಂಬ ಪರಬ್ರಹ್ಮದ ನೆನಹು ಮಾತ್ರದಲ್ಲಿ ಸಿಂಹನಾಡದ ಉತ್ಪತ್ಯ
ಆ ಸಿಂಹನಾದದಲ್ಲಿ ದಿವ್ಯನಾದ ಉತ್ಪತ್ಯ
ಆ ದಿವ್ಯನಾದದಲ್ಲಿ ಪ್ರಣವನಾದ ಉತ್ಪತ್ಯ
ಆ ಪ್ರಣವನಾದದಲ್ಲಿ ಮೇಘನಾದ ಉತ್ಪತ್ಯ
ಆ ಮೇಘಧ್ವನಿನಾದದಲ್ಲಿ ಭೇರಿನಾದ ಉತ್ಪತ್ಯ
ಆ ಭೇರಿನಾದದಲ್ಲಿ ಘಂಟಾನಾದ ಉತ್ಪತ್ಯ
ಆ ಘಂಟಾನಾದದಲ್ಲಿ ವೀಣಾನಾದ ಉತ್ಪತ್ಯ
ಆ ವೀಣಾನಾದದಲ್ಲಿ ಪೆಣ್ದುಂಬಿಯನಾದ ಉತ್ಪತ್ಯ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೭೪
ಸಾಮವೇದೇ, ಸಾಕ್ಷಿ-
ಓಂಕಾರ ಬ್ರಹ್ಮಣಿ ಸಿಂಹೋ ಜನಿತಾ, ಸಿಂಹನಾದೌ ದಿವ್ಯಃ ಜನಿತಾ,
ದಿವ್ಯನಾದೌ ಪ್ರಣವಃ ಜನಿತಾ, ಪ್ರಣವನಾದೌ ಮೇಘಧ್ವನಿಃ ಜನಿತಾ,
ಮೇಘಧ್ವನೌ ಭೇರಿನಾದಃ ಜನಿತಾ, ಭೇರಿನಾದೌ ಘಂಟಾನಾದಃ ಜನಿತಾ,
ಘಂಟಾನಾದೌ ವೀಣಾನಾದಃ ಜನಿತಾ, ವೀಣಾನಾದೌ ಭ್ರಮರನಾದಃ ಜನಿತಾ,
ಎಂದುದಾಗಿ, ಅಪ್ರಮಾಣ ಕೂಡಲಸಂಗಮದೇವ.

೧೭೫
ಇನ್ನು ಅಷ್ಟನಾದದ ನೆಲೆ ಅದೆಂತೆಂದಡೆ :
ಆಧಾರ ಚಕ್ರದಲ್ಲಿ ಪೆಣ್ದುಂಬಿಯನಾದವಿಹುದು.
ಸ್ವಾಧಿಷ್ಠಾನ ಚಕ್ರದಲ್ಲಿ ವೀಣಾನಾದವಿಹುದು.
ಮಣಿಪೂರಕ ಚಕ್ರದಲ್ಲಿ ಘಂಟಾನಾದವಿಹುದು.
ಅನಾಹತ ಚಕ್ರದಲ್ಲಿ ಭೇರಿನಾದವಿಹುದು.
ವಿಶುದ್ಧಿ ಚಕ್ರದಲ್ಲಿ ಮೇಘಧ್ವನಿನಾದವಿಹುದು.
ಆಜ್ಞಾ ಚಕ್ರದಲ್ಲಿ ಪ್ರಣವನಾದವಿಹುದು.
ಬ್ರಹ್ಮ ಚಕ್ರದಲ್ಲಿ ದಿವ್ಯನಾದವಿಹುದು.
ಶಿಖಾ ಚಕ್ರದಲ್ಲಿ ಸಿಂಹನಾದವಿಹುದು. ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೭೬
ಅಸಿ ಪದಾಗಮಸಾರೇ, ಸಾಕ್ಷಿ :
ಆಧಾರೇ ಭ್ರಮರಂ ಚೈವ ಸ್ವಾಧಿಷ್ಠೇವೀಣಕಂ ತಥಾ |
ಮಣಿಪೂರಂ ಚ ಘಂಟಾಂ ಚ ಭೇರಿನಾದಂ ಚನಾಹತಂ ||
ವಿಶುದ್ಧಿ ಮೇಘನಾದಂ ಚ ಆಜ್ಞೇ ಪ್ರಣವ ನಾದಕಂ |
ಬ್ರಹ್ಮಾ ಚ ದಿವ್ಯನಾದಂ ಚ ಸಿಂಹನಾದೆ ಶಿಖಾಗ್ರಕಂ ||
ಏಕಮಷ್ಟನಾದಂ ಜ್ಞಾತ್ವಾ ದುರ್ಲಭಂ ಚ ವರಾನನೇ | ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೧೭೭
ಇನ್ನು ಷಡ್ವಿಧ ಭಕ್ತಿ ಉತ್ಪತ್ಯವದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ಜ್ಯೋತಿ ಸ್ವರೂಪದಲ್ಲಿ ಸಮರಸಭಕ್ತಿ ಹುಟ್ಟಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಆನಂದಭಕ್ತಿ ಹುಟ್ಟಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಅನುಭಾವಭಕ್ತಿ ಹುಟ್ಟಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ಅವಧಾನಭಕ್ತಿ ಹುಟ್ಟಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ನೈಷ್ಠಿಕಾಭಕ್ತಿ ಹುಟ್ಟಿತ್ತು.
ಆ ಪ್ರಣವದ ತಾರಕಾ ಸ್ವರೂಪದಲ್ಲಿ ಸದ್ಭಕ್ತಿ ಹುಟ್ಟಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೭೮
ಅಸಿಪದಾತೀತಾಗಮೇ ಸಾಕ್ಷಿ :
ಓಂಕಾರ ಜ್ಯೋತಿಸ್ವರೂಪೇ ಚ ಸಮರಸಂ ಸಮುದ್ಭವಂ |
ಓಂಕಾರ ದರ್ಪಣಾಕಾರೇ ಆನಂದಭಕ್ತಿಚೋದ್ಬವಂ ||
ಓಂಕಾರ ಅರ್ಧಚಂದ್ರೇಚ ಅನುಭಾವ ಸಮುದ್ಭವಂ |
ಓಂಕಾರ ಕುಂಡಲಾಕಾರೇ ಅವಧಾನ ಸಮುದ್ಭವಂ ||
ಓಂಕಾರ ದಂಡಸ್ವರೂಪೇಚ ನೈಷ್ಠಿಕಾ ಭಕ್ತಿಚೋದ್ಭವಂ |
ಓಂಕಾರ ತಾರಕಾರೂಪೇ ಸದ್ಭಕ್ತಿಶ್ಚ ಸಮುದ್ಭವಂ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೧೭೯
ಇನ್ನು ಷಡ್ವಿಧ ಭಕ್ತಿಯ ನೆಲೆ ಅದೆಂತೆಂದಡೆ :
ಆಧಾರ ಚಕ್ರದಲ್ಲಿ ಸದ್ಭಕ್ತಿ ಇಹುದು.
ಸ್ವಾಧಿಷ್ಠಾನ ಚಕ್ರದಲ್ಲಿ ನೈಷ್ಠಿಕಾಭಕ್ತಿ ಇಹುದು.
ಮಣಿಪೂರಕ ಚಕ್ರದಲ್ಲಿ ಅವಧಾನಭಕ್ತಿ ಇಹುದು.
ಅನಾಹತ ಚಕ್ರದಲ್ಲಿ ಅನುಭಾವಭಕ್ತಿ ಇಹುದು.
ವಿಶುದ್ಧಿ ಚಕ್ರದಲ್ಲಿ ಆನಂದಭಕ್ತಿ ಇಹುದು.
ಆಜ್ಞಾ ಚಕ್ರದಲ್ಲಿ ಸಮರಸಭಕ್ತಿ ಇಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೮೦
ಅಸಿಪದಾತೀತಾಗಮೇ ಸಾಕ್ಷಿ-
ಆಧಾರೇ ಭೃತ್ಯಭಕ್ತಿಶ್ಚ ಸ್ವಾಧ್ವಿಷ್ಠೇ ನೈಷ್ಠಿಕಾಂ ತಥಾ |
ಅವಧಾನೇ ತಥಾ ಪೂರಂ ಅನುಭಾನಂ ಚನಾಹತಂ ||
ಆನಂದಶ್ಚ ವಿಶುದ್ಧಿಶ್ಚ ಆಜ್ಞೆ ಸಮರಸಂ ಭವೇತ್ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೧೮೧
ಇನ್ನು ಷಡ್ವಿಧ ಪರಿಣಾಮದುತ್ಪತ್ಯವದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ಜ್ಯೋತಿಸ್ವರೂಪದಲ್ಲಿ ಪರಿಣಾಮ ಉತ್ಪತ್ಯವಾಯಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಶಬ್ದ ಉತ್ಪತ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಸ್ಪರ್ಶಉತ್ಪತ್ಯವಾಯಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ರೂಪ ಉತ್ಪತ್ಯವಾಯಿತ್ತು.
ಆ ಪ್ರಣವದ ದಂಡಪಸ್ವರೂಪದಲ್ಲಿ ರಸ ಉತ್ಪತ್ಯವಾಯಿತ್ತು.
ಆ ಪ್ರಣವದ ತಾರಕಾಸ್ವರೂಪದಲ್ಲಿ ಗಂಧ ಉತ್ಪತ್ಯವಾಯಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.