೧೮೨
ಉತ್ತರವಾತುಲಸಾರೇ ಸಾಕ್ಷಿ-
ಓಂಕಾರ ಜ್ಯೋತಿ ರೂಪೇಚ ತೃಪ್ತಿಶ್ಚೈವ ಸಮುದ್ಭವಂ |
ಓಂಕಾರ ದರ್ಪಣಾಕಾರೇ ಶಬ್ದಶ್ಚೈವ ಸಮುದ್ಭವಂ ||
ಓಂಕಾರ ಅರ್ಧಚಂದ್ರಶ್ಚ ಸ್ಪರ್ಶನಂ ಚ ಸಮುದ್ಭವಂ |
ಓಂಕಾರ ಕುಂಡಲಾಕಾರೇ ರೂಪಂಚೈವ ಸಮುದ್ಭವಂ ||
ಓಂಕಾರ ದಂಡ ರೂಪೇಚ ರಸಂ ಚೈವ ಸಮುದ್ಭವಂ |
ಓಂಕಾರ ತಾರಕಾರೂಪೇ ಗಂಧಂ ಚೈವ ಸಮುದ್ಭವಂ ||
ಇತಿ ಷಷ್ಠದ್ರವ್ಯಂ ಚೈವ ಸ್ಥಾನೇ ಸ್ಥಾನೇ ಸಮುದ್ಭವಂ | ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೧೮೩
ಇನ್ನು ಷಡ್ವಿಧ ಪರಿಣಾಮದ ನೆಲೆ ಅದೆಂತೆಂದಡೆ :
ಆಧಾರಚಕ್ರದಲ್ಲಿ ಗಂಧವಿಹುದು.
ಸ್ವಾಧಿಷ್ಠಾನಚಕ್ರದಲ್ಲಿ ರಸವಿಹುದು.
ಮಣಿಪೂರಕಚಕ್ರದಲ್ಲಿ ರೂಪವಿಹುದು.
ಅನಾಹತಚಕ್ರದಲ್ಲಿ ಸ್ಪರ್ಶನವಿಹುದು.
ವಿಶುದ್ಧಚಕ್ರದಲ್ಲಿ ಶಬ್ದವಿಹುದು.
ಆಜ್ಞಾಚಕ್ರದಲ್ಲಿ ಪರಿಣಾಮವಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೮೪
ಉತ್ತರವಾತುಲಸಾರೇ, ಸೂತ್ರ, ಸಾಕ್ಷಿ :
ಆಧಾರಂ ಚೈವ ಗಂಧಂ ಚ ಸ್ವಾಧಿಷ್ಠೇರಸಮುಚ್ಯತೆ |
ಮಣಿಪೂರಂ ಚ ರೂಪಂ ಚ ಸ್ಪರ್ಶನಂ ಚ ಅನಾಹತಂ ||
ವಿಶುದ್ಧಿಶ್ಚ ಶಬ್ದಂಚ ಆಜ್ಞೇಯಂ ತೃಪ್ತಿ ಮೇವಚ | ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೧೮೫
ಇನ್ನು ಋಗ್ವೇದ ಯಜುರ್ವೇದ ಸಾಮವೇದ ಅಥರ್ವಣವೇದ
ಅಜಪೆ ಗಾಯತ್ರಿ ಉತ್ಪತ್ಯವದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ತಾರಕಾ ಸ್ವರೂಪದಲ್ಲಿ ಋಗ್ವೇದ ಉದ್ಭವವಾಯಿತ್ತು.
ಆ ಪ್ರಣವದ ದಂಡಸ್ವರೂಪದಲ್ಲಿ ಯಜುರ್ವೇದ ಉತ್ಪತ್ಯವಾಯಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ಸಾಮವೇದ ಉದ್ಭವವಾಯಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಅಥರ್ವಣವೇದ ಉದ್ಭವವಾಯಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಗಾಯತ್ರಿ ಉದ್ಭವವಾಯಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಅಜಪೇ ಉತ್ಪತ್ಯವಾಯಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೮೬
ಶಿವಾಗಮೇ ಸಾರೆ, ಸಾಕ್ಷಿ :
ಓಂಕಾರ ಜ್ಯೋತಿಸ್ವರೂಪೇ ಚ ಅಜಪಂ ಚ ಚ ಜಾಯತೇ |
ಓಂಕಾರ ದರ್ಪಣಾಕಾರೇ ಗಾಯತ್ರಿಶ್ಚ ಚ ಜಾಯತೇ ||
ಓಂಕಾರ ಅರ್ಧಚಂದ್ರೇಚ ಅಥರ್ವಣಂ ಚ ಚ ಜಾಯತೇ |
ಓಂಕಾರ ಕುಂಡಲಾಕಾರೇ ಸಾಮವೇದಂ ಚ ಚ ಜಾಯತೇ ||
ಓಂಕಾರ ದಂಡ ಸ್ವರೂಪೇ ಚ ಯಜುರ್ವೇದಂ ಚ ಜಾಯತೇ |
ಓಂಕಾರ ತಾರಕಾ ರೂಪೇ ಋಗ್ವೇದಂ ಚ ಜಾಯತೇ ||
ಏವಂ ವೇದ ಸಮುತ್ಪನ್ನಂ ಸುಸೂಕ್ಷ್ಮಂ ಕಮಲಾನನೇ | ಎಂದುದಾಗಿ
ಅಪ್ರಮಾಣ ಕೂಡಲಸಂಗಮದೇವ.

೧೮೭
ಇನ್ನು ಋಗ್ವೇದ ಯಜುರ್ವೇದ ಸಾಮವೇದ ಅಥರ್ವಣವೇದ
ಗಾಯತ್ರಿ ಅಜಪೆಯ ನೆಲೆ, ಅದೆಂತೆಂದಡೆ :
ಆಧಾರ ಚಕ್ರದಲ್ಲಿ ಋಗ್ವೇದವಿಹುದು.
ಸ್ವಾಧಿಷ್ಠಾನ ಚಕ್ರದಲ್ಲಿ ಯಜುರ್ವೇದವಿಹುದು.
ಮಣಿಪೂರಕ ಚಕ್ರದಲ್ಲಿ ಸಾಮವೇದವಿಹುದು.
ಅನಾಹತ ಚಕ್ರದಲ್ಲಿ ಅಥರ್ವಣವೇದವಿಹುದು.
ವಿಶುದ್ಧಿ ಚಕ್ರದಲ್ಲಿ ಗಾಯತ್ರೀ ಮಂತ್ರವಿಹುದು.
ಆಜ್ಞಾ ಚಕ್ರದಲ್ಲಿ ಅಜಪೆ ಮಂತ್ರವಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೮೮
ನೀಲಕಂಠಸಾರೇ ಸಾಕ್ಷಿ :
ಆಧಾರೇ ಋಗ್ವೇದಂ ಚ ಸ್ವಾಧಿಷ್ಠಿ ಯಜುರ್ವೇದಕಂ |
ಮಣಿಪೂರಂ ಚ ನಾಮಂ ಚ ಅತಃ ಶ್ರುತಿಶ್ಚನಾಹತಂ ||
ಗಾಯತ್ರಿಶ್ಚ ವಿಶುದ್ಧಿಶ್ಚ ಆಜ್ಞಾಯೆ ಅಜಪಂ ಭವೇತ್ | ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೧೮೯
ಇನ್ನು ಅಖಂಡಲಿಂಗದ ವರ್ಮ ಅದೆಂತೆಂದಡೆ :
ಲಿಂಗವೆಂಬುದು ನಾದಬಿಂದು ಕಲಾತೀತ
ಲಿಂಗವೆಂಬುದು ಅಖಂಡ ಜ್ಞಾನ
ಲಿಂಗವೆಂಬುದು ಅಖಂಡ ಪರಿಪೂರ್ಣ
ಲಿಂಗವೆಂಬುದು ನಿರಾಮಯ
ಲಿಂಗವೆಂಬುದು ನಿಃಶಬ್ದ ಬ್ರಹ್ಮ
ಲಿಂಗವೆಂಬುದು ಹರಿಬ್ರಹ್ಮಾದಿಗಳ ನಡುವೆ ನೆಗಳ್ದ ಜ್ಯೋತಿರ್ಮಯಲಿಂಗವು.
ಸಾಕ್ಷಿ : ಅಖಿಲಾರ್ಣವ ಲಯಾನಾಂ ಲಿಂಗ ಮುಖ್ಯಂ ಪರಂ ತಥಾ |
ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್ ||
ಯಥಾ ಮಿಶ್ರಕಂ ತೇಜ ಸ ಲಿಂಗಂ ಪಂಚ ಸಂಜ್ಞಕಂ | ಎಂದುದಾಗಿ,
ಇದು ಲಿಂಗದ ವರ್ಮ ಅಪ್ರಮಾಣ ಕೂಡಲಸಂಗಮದೇವ.

೧೯೦
ಆಧಾರ ಚಕ್ರದಲ್ಲಿ ಅನಾದಿ ಎಂಬ ಸಂಜ್ಞೆ,
ಸ್ವಾಧಿಷ್ಠಾನ ಚಕ್ರದಲ್ಲಿ ಲಿಂಗಕ್ಷೇತ್ರವೆಂಬ ಸಂಜ್ಞೆ,
ಮಣಿಪೂರಕ ಚಕ್ರದಲ್ಲಿ ಶರೀರವೆಂಬ ಸಂಜ್ಞೆ,
ಅನಾಹತ ಚಕ್ರದಲ್ಲಿ ಗೂಢವೆಂಬ ಸಂಜ್ಞೆ,
ವಿಶುದ್ಧಿ ಚಕ್ರದಲ್ಲಿ ಪರವೆಂಬ ಸಂಜ್ಞೆ,
ಆಜ್ಞಾ ಚಕ್ರದಲ್ಲಿ ನಿರಾಕುಳವೆಂಬ ಸಂಜ್ಞೆ,
ಇದು ಸೂಕ್ಷ್ಮಕ್ಕು ಸೂಕ್ಷ್ಮವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೯೧
ಶಿವಲಿಂಗ ಸೂತ್ರೇ ಸಾಕ್ಷಿ :
ಆಧಾರಂ ಚನಾದಿಶ್ಚೈವ ಸ್ವಾಧಿಷ್ಠೇ ಲಿಂಗಕ್ಷೇತ್ರಕಂ |
ಶರೀರಂ ಮಣಿಪೂರಂ ಚ ಗೂಢಂ ಚನಾಹತಂ ||
ತಥಾ ವಿಶುದ್ಧಿಶ್ಚ ಪರಂ ಚೈವ ಆಜ್ಞಾ ನಿರಾಕುಳಂ ಭವೇತ್ |
ಇತಿ ಷಷ್ಠ ಸಂಜ್ಞೆ ಜ್ಞಾತ್ವಾ ದುರ್ಲಭಂ ಚ ವರಾನನೇ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೧೯೨
ಶ್ರೀ ಷಡ್‌ಚಕ್ರದ ಅರ್ಪಿತಾವಧಾನ
ಇನ್ನು ಷಡ್‌ಚಕ್ರದ ಅರ್ಪಿತಾವಧಾನ ಭೇದವೆಂತೆಂದಡೆ :
ಗುದ ಸ್ಥಾನದಲ್ಲಿ ಆಧಾರಚಕ್ರ ಪೃಥ್ವಿ ಎಂಬ ಮಹಾಭೂತ
ಆ ಚಕ್ರ ಚತುಷ್ಕೋಣಾಕಾರ, ಚತುರ್ದಳಪದ್ಮ,
ಆ ಪದ್ಮ ಕೆಂಪುವರ್ಣ; ಅಲ್ಲಿ ವಶಷಸ ಎಂಬ ಚತುರಾಕ್ಷರ
ಅಲ್ಲಿ ಪೀತವರ್ಣ ಸದ್ಯೋಜಾತ ಮುಖವನುಳ್ಳ ಆಚಾರಲಿಂಗ
ಆ ಲಿಂಗಕ್ಕೆ ನಿವೃತ್ತಿ ಕಲೆ, ಅಲ್ಲಿ ಕರ್ಮ ಸಾದಾಖ್ಯ
ಪಶ್ಚಿಮ ದಿಕ್ಕು, ಅಲ್ಲಿ ಪೆಣ್ದುಂಬಿಯ ನಾದ
ಆ ಲಿಂಗಕ್ಕೆ ಕಾಕಿನಿ ಎಂಬ ಪರಿಯಾಯ

[1]ನಾಮವ[2]ನುಳ್ಳ ಕ್ರಿಯಾಶಕ್ತಿ
ಋಗ್ವೇದವನುಚ್ಚರಿಸುತ್ತ ಸುಚಿತ್ತವೆಂಬ ಹಸ್ತದಿಂದ
ಸುಗಂಧವೆಂಬ ದ್ರವ್ಯವನು ಲಿಂಗದ ಘ್ರಾಣವೆಂಬ ಮುಖಕ್ಕೆ
ಸದ್ಭಕ್ತಿಯಿಂದರ್ಪಿಸುವಳು[3] :
ಬ್ರಹ್ಮಪೂಜಾರಿ ಅನಾದಿ ಎಂಬ ಸಂಜ್ಞೆ
ಇಂತಿವೆಲ್ಲಕ್ಕು ಮಾತೃಸ್ಥಾನವಾಗಿಹುದು.
ನಕಾರವೆಂಬ ಬೀಜಾಕ್ಷರ, ಅದು ಪ್ರಣವದ ತಾರಕಾಕೃತಿ
ಅಲ್ಲಿಹ ನಕಾರದಲ್ಲಿಹುದಾಗಿ ಆ ಈ ಊ ಏ ಓ ನಾಂ ಎಂಬ
ಬ್ರಹ್ಮನಾದಮಂತ್ರ ಮೂರ್ತಿ ಪ್ರಣವದ ಶಿರೋಮಧ್ಯದಲ್ಲಿಹ
ಗುಹ್ಯನಾದ ಮಂತ್ರ ಮೂರ್ತಿ ಪ್ರಣವಕ್ಕೆ ನಮಸ್ಕಾರವು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೯೩
ಅಲ್ಲಿಂದ ಮೇಲೆ ಲಿಂಗಸ್ಥಾನದಲ್ಲಿ ಸ್ವಾಧಿಷ್ಠಾನ ಚಕ್ರ
ಅಪ್ಪು ಎಂಬ ಮಹಾಭೂತ ಆ ಚಕ್ರ ಧನುರ್ಗತಿಯಾಕಾರ
ಷಡ್ದಳ ಪದ್ಮ, ಆ ಪದ್ಮ ಪಚ್ಚೆಯ ವರ್ಣ ಅಲ್ಲಿಯ ಅಕ್ಷರ
ಬ ಭ ಮ ಯ ರ ಲ ಎಂಬ ಷಡಕ್ಷರ ನ್ಯಾಸವಾಗಿಹುದು.
ಅಲ್ಲಿ ಶ್ವೇತವರ್ಣವಾದ ವಾಮದೇವ ಮುಖವನುಳ್ಳ ಗುರುಲಿಂಗ
ಆ ಲಿಂಗಕ್ಕೆ ಪ್ರತಿಷ್ಠೆ ಕಲೆ, ಅಲ್ಲಿ ಕರ್ತೃ ಸಾದಾಖ್ಯ,
ಉತ್ತರ ದಿಕ್ಕು ಅಲ್ಲಿ ವೀಣಾನಾದ, ಕಾಕಿನಿ ಎಂಬ
ಪರಿಯಾಯವನುಳ್ಳ ಜ್ಞಾನ ಶಕ್ತಿ, ಸುಬುದ್ಧಿಯೆಂಬ ಹಸ್ತದಿಂ
ಲಿಂಗದ ಜಿಹ್ವೆಯೆಂಬ ಮುಖಕ್ಕೆ ರಸದ್ರವ್ಯಮಂ
ನೈಷ್ಠಿಕಾ ಭಕ್ತಿಯಿಂದ ಯಜುರ್ವೇದವನುಚ್ಚರಿಸುತ್ತ ಅರ್ಪಿಸುವಳು.
ವಿಷ್ಣು ಪೂಜಾರಿ ಲಿಂಗಕ್ಷೇತ್ರವೆಂಬ ಸಂಜ್ಞೆ
ಇಂತಿವೆಲ್ಲಕ್ಕು ಮಾತೃಸ್ಥಾನವಾಗಿಹುದು ಮಕಾರವೆಂಬ ಬೀಜಾಕ್ಷರ
ಅದು ಪ್ರಣವದ [4]ದಂಡಾ[5]ಕೃತಿ ಅಲ್ಲಿಹ ಮಕಾರದಲ್ಲಿಹುದು.
ಆ ಈ ಊ ಏ ಓ ಮಾಂ ಎಂಬ ಬ್ರಹ್ಮನಾದಮಂ
ತ್ರಿಮೂರ್ತಿ ಪ್ರಣವದ ಶಿರೋಮಧ್ಯದಲ್ಲಿಹ
ಗುಹ್ಯನಾದ ಮಂತ್ರಮೂರ್ತಿ ಪ್ರಣವಕ್ಕೆ ನಮಸ್ಕಾರವು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೯೪
ಅಲ್ಲಿಂದ ಮೇಲೆ ನಾಭಿಸ್ಥಾನದಲ್ಲಿ ಮಣಿಪೂರಕ ಚಕ್ರ
ಅಗ್ನಿಯೆಂಬ ಮಹಾಭೂತ, ಆ ಚಕ್ರ ತ್ರಿಕೋಣಾಕಾರ ದಶದಳ ಪದ್ಮ
ಆ ಪದ್ಮ ಕೃಷ್ಣವರ್ಣ ಅಲ್ಲಿಯ ಅಕ್ಷರ ಡಢಣ ತಥದಧನ ಪಫ
ಎಂಬ ದಶಾಕ್ಷರ ನ್ಯಾಸವಾಗಿಹುದು.
ಅಲ್ಲಿ [6]ಅಕ್ಷರ[7] ವರ್ಣವಾಗಿ ಅಘೋರ ಮುಖವನುಳ್ಳ ಶಿವಲಿಂಗ
ಆ ಲಿಂಗಕ್ಕೆ ವಿದ್ಯೆ ಕಲೆ, ಅಲ್ಲಿ ಮೂರ್ತ ಸಾದಾಖ್ಯ
ಅಲ್ಲಿಯ ದಿಕ್ಕು ದಕ್ಷಿಣ ದಿಕ್ಕು, ಅಲ್ಲಿಯ ನಾದ ಘಂಟಾನಾದ
ಲಾಕಿನಿಯೆಂಬ ಪರಿಯಾಯವನುಳ್ಳ ಇಚ್ಛಾಶಕ್ತಿ.
ಆ ಲಿಂಗದ ನೇತ್ರವೆಂಬ ಮುಖಕ್ಕೆ ನಿರಹಂಕಾರವೆಂಬ ಹಸ್ತದಿಂ
ಅವಧಾನ ಭಕ್ತಿಯಿಂದ ರೂಪುದ್ರವ್ಯವನು ನಾಮವ
ಸಾಮವೇದವನುಚ್ಚರಿಸುತ್ತ ಅರ್ಪಿಸುವಳು.
ರುದ್ರ ಪೂಜಾರಿ, ಅಲ್ಲಿ ಶರೀರವೆಂಬ ಸಂಜ್ಞೆ.
ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು ಶಿಕಾರವೆಂಬ ಬೀಜಾಕ್ಷರ
ಅದು ಪ್ರಣವದ ಕುಂಡಲಾಕೃತಿಯಲ್ಲಿ ಶಿಕಾರದಲ್ಲಿಹುದು.
ಆ ಈ ಊ ಏ ಓ ಶಿಂ ಎಂಬ ಬ್ರಹ್ಮನಾದ ಮಂತ್ರ ಮೂರ್ತಿ
ಪ್ರಣವದ ಶಿರೋಮಧ್ಯದಲ್ಲಿಹ ಗುಹ್ಯನಾದ ಮಂತ್ರ ಮೂರ್ತಿ
ಪ್ರಣವಕ್ಕೆ ನಮಸ್ಕಾರವು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೯೫
ಅಲ್ಲಿಂದ ಮೇಲೆ ಹೃದಯಸ್ಥಾನದಲ್ಲಿ
ಅನಾಹತ ಚಕ್ರ ವಾಯುವೆಂಬ ಮಹಾಭೂತ
ಆ ಚಕ್ರ ಷಟ್ಕೋಣಾಕಾರ, ದ್ವಾದಶದಳ ಪದ್ಮ
ಆ ಪದ್ಮ ಕುಂಕುಮವರ್ಣ, ಅಲ್ಲಿಯ ಅಕ್ಷರ ಕಖಗಘಙ ಚಛಜಝಞಠ
ಎಂಬ ದ್ವಾದಶಾಕ್ಷರ ನ್ಯಾಸವಾಗಿಹುದು.
ಅಲ್ಲಿ ತತ್ಪುರುಷ ಮುಖವನುಳ್ಳ ಜಂಗಮಲಿಂಗ, ಆ ಲಿಂಗಕ್ಕೆ ಶಾಂತಿ ಕಲೆ
ಅಲ್ಲಿ ಅಮೂರ್ತ ಸಾದಾಖ್ಯ, ಅಲ್ಲಿಯ ದಿಕ್ಕು ಪೂರ್ವದಿಕ್ಕು
ಅಲ್ಲಿಯ ನಾದ ಭೇರಿ ನಾದ, ಶಾಕಿನಿಯೆಂಬ ಪರಿಯಾಯವನುಳ್ಳ ಆದಿಶಕ್ತಿ
ಲಿಂಗದ[ತ]ತ್ವಕ್ಕೆಂಬ ಮುಖಕ್ಕೆ[8] ಸುಮನ[9] ಹಸ್ತದಿಂದ
ಅನುಭಾವ ಭಕ್ತಿಯಿಂದ ಸ್ಪರ್ಶನ ದ್ರವ್ಯವನು
ಅಥರ್ವಣವೇದವನುಚ್ಚರಿಸುತ್ತ ಅರ್ಪಿಸುವಳು,
ಈಶ್ವರ ಪೂಜಾರಿ ಗೂಢವೆಂಬ ಸಂಜ್ಞೆ,
ಇಂತಿವೆಲ್ಲಕ್ಕು ಮಾತೃಸ್ಥಾನವಾಗಿಹುದು.
ವಕಾರವೆಂಬ ಬೀಜಾಕ್ಷರ, ಅದು ಪ್ರಣವದ ಅರ್ಧಚಂದ್ರಾಕೃತಿಯಲ್ಲಿಹ
ವಕಾರದಲ್ಲಿಹುದು. ಆ ಈ ಊ ಏ ಓ ವಾಂ ಎಂಬ ಬ್ರಹ್ಮನಾದ ಮಂತ್ರಮೂರ್ತಿ
ಆ ಪ್ರಣವದ ಶಿರೋಮಧ್ಯದಲ್ಲಿಹ ಗುಹ್ಯನಾದ ಮಂತ್ರಮೂರ್ತಿ ಪ್ರಣವಕ್ಕೆ
ನಮಸ್ಕಾರವು ನೋಡಾ, ಅಪ್ರಮಾಣ ಕೂಡಲಸಂಗಮದೇವ.

೧೯೬
ಅಲ್ಲಿಂದ ಮೇಲೆ ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ
ಆಕಾಶವೆಂಬ ಮಹಾಭೂತ, ಆ ಚಕ್ರ ವರ್ತುಳಾಕಾರ
ಶೋಡಷದಲ ಪದ್ಮ, ಆ ಪದ್ಮ ಶ್ವೇತವರ್ಣ,
ಅಲ್ಲಿಯ ಅಕ್ಷರ ಅ ಆ ಇ ಈ ಉ ಊ ಋ ಋ ಞ ಞ
ಏ ಐ ಓ ಔ ಅಂ ಅಃ ಎಂಬ ಶೋಡಶಾಕ್ಷರ ನ್ಯಾಸವಾಗಿಹುದು.
ಈಶಾನ್ಯ ಮುಖವನುಳ್ಳ ಪ್ರಸಾದಲಿಂಗ,
ಆ ಲಿಂಗಕ್ಕೆ ಶಾಂತ್ಯತೀತೆಯೆಂಬ ಕಲೆ,
ಅಲ್ಲಿ ಶಿವಸಾದಾಖ್ಯ, ಅಲ್ಲಿಯ ದಿಕ್ಕು ಊರ್ಧ್ವದಿಕ್ಕು
ಅಲ್ಲಿಯ ನಾದ ಮೇಘಧ್ವನಿ, [10]ಠಾಕಿನಿ[11]ಯೆಂಬ ಪರಿಯಾಯವನ್ನುಳ್ಳ ಪರಾಶಕ್ತಿ,
ಲಿಂಗದ ಶ್ರೋತ್ರವೆಂಬ ಮುಖದಲ್ಲಿ, ಸುಜ್ಞಾನವೆಂಬ ಹಸ್ತದಿಂದ
ಆನಂದ ಭಕ್ತಿಯಿಂದ ಶಬ್ದದ್ರವ್ಯವನು
ಗಾಯತ್ರಿಯನುಚ್ಚರಿಸುತ್ತ ಅರ್ಪಿಸುವಳು.
ಸದಾಶಿವ ಪೂಜಾರಿ, ಪರವೆಂಬ ಬ್ರಹ್ಮನಾದ ಮಂತ್ರಮೂರ್ತಿ
ಪ್ರಣವದ ಶಿರೋಮಧ್ಯದಲ್ಲಿಹ ಗುಹ್ಯನಾದ ಮಂತ್ರಮೂರ್ತಿ
ಪ್ರಣವಕ್ಕೆ ನಮಸ್ಕಾರವು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೯೭
ಅಲ್ಲಿಂದ ಮೇಲೆ ಭೂಮಧ್ಯದಲ್ಲಿ ಆಜ್ಞಾ ಚಕ್ರವೆಂಬ ಮಹಾಭೂತ,
ಆ ಚಕ್ರ ಮಂದಾಕಾರ, ದ್ವಿದಳ ಪದ್ಮ, ಆ ಪದ್ಮ ಮಾಣಿಕ್ಯವರ್ಣ
ಅಲ್ಲಿಯ ಅಕ್ಷರ ಹಂ ಳಂ ಹಂ ಕ್ಷಂ ಎಂಬ
ಚತುರಾಕ್ಷರ ನ್ಯಾಸವಾಗಿಹುದು. ನಿರ್ಭಾವ ಮುಖವನುಳ್ಳ ಮಹಾಲಿಂಗ
ಆ ಲಿಂಗಕ್ಕೆ ಶಾಂತ್ಯತೀತೋತ್ತರ ಕಲೆ,
ಅಲ್ಲಿ ನಿರ್ಮುಕ್ತಿಯೆಂಬ ಮಹಾಸಾದಾಖ್ಯ, ಅಲ್ಲಿಯ ನಾದ ಪ್ರಣವನಾದ,
ಹಾಕಿನಿಯೆಂಬ ಪರಿಯಾಯವನುಳ್ಳ ಚಿಚ್ಛಕ್ತಿ
ಲಿಂಗದ ಹೃದಯವೆಂಬ ಮುಖದಲ್ಲಿ
ಸದ್ಭಾವವೆಂಬ ಹಸ್ತದಿಂದ ಸಮರಸ ಭಕ್ತಿಯಿಂದ
ಪರಿಣಾಮವೆಂಬ ದ್ರವ್ಯವನು ಅಜಪೆಯನುಚ್ಚರಿಸುತ್ತ ಅರ್ಪಿಸುವಳು.
ಪರಶಿವ ಪೂಜಾರಿ, ನಿರಾಕುಳವೆಂಬ ಸಂಜ್ಞೆ
ಇಂತಿವೆಲ್ಲಕ್ಕು ಮಾತೃವಾಗಿಹುದು ಓಂಕಾರವೆಂಬ ಬೀಜಾಕ್ಷರ
ಅನಂತಕೋಟಿ ಬೀಜಾಕ್ಷರವ ಗರ್ಭೀಕರಿಸಿಕೊಂಡು
ಅಕಾರ ಉಕಾರ ಮಕಾರವೆಂಬ ನಾದಬಿಂದು ಕಳೆಗೆ ಆಶ್ರಯವಾಗಿ
ತತ್ವಮಸಿಯೆಂಬ ಪದತ್ರಯವನೊಳಕೊಂಡು
ಅನೇಕಕೋಟಿ ಸೂರ್ಯ ಚಂದ್ರಾಗ್ನಿ ಕಿರಣರಾಶಿ ತೇಜೋವರ್ಧನಕ್ಕೆ
ತಾನೆಯಾಗಿಪ್ಪುದಾಗಿ, ಆ ಈ ಉ ಊ ಓಂ ಎಂಬ
ಬ್ರಹ್ಮನಾದ ಮಂತ್ರಮೂರ್ತಿ ಪ್ರಣವದ ಶಿರೋಮಧ್ಯದಲ್ಲಿಹ
ಗುಹ್ಯನಾದ ಮಂತ್ರ ಮೂರ್ತಿ ಪ್ರಣವಕ್ಕೆ ನಮಸ್ಕಾರವು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೯೮
ಇನ್ನು ಪ್ರಣವದಲ್ಲಿಯ ಪ್ರಣವ ಅತ್ಯಂತ ಗೋಪ್ಯಮಾಗಿ
ಅತ್ಯಂತ ರಹಸ್ಯವಾಗಿ ಹೇಳುತ್ತಿಹೆನು, ಅದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದಲ್ಲಿ
ತಾರಕಾ ಸ್ವರೂಪಪ್ರಣವವೆಂದು, ದಂಡಕಸ್ವರೂಪ ಪ್ರಣವವೆಂದು,
ಕುಂಡಲಾಕಾರ ಪ್ರಣವವೆಂದು, ಅರ್ಧಚಂದ್ರಕ ಪ್ರಣವವೆಂದು,
ದರ್ಪಣಾಕಾರ ಪ್ರಣವವೆಂದು, ಜ್ಯೋತಿಸ್ವರೂಪ ಪ್ರಣವವೆಂದು,
ಆಱು ಪ್ರಕಾರವಾಗಿಹುದು ನೋಡಾ, ಅಪ್ರಮಾಣ ಕೂಡಲಸಂಗಮದೇವ.

೧೯೯
ಇನ್ನು ದಶಚಕ್ರಂಗಳ ನಿವೃತ್ತಿ, ಅದೆಂತೆಂದಡೆ :
ಆಧಾರ ಚಕ್ರ ಸ್ವಾಧಿಷ್ಠಾನ ಚಕ್ರದಲ್ಲಿ ಅಡಗಿತ್ತು,
ಸ್ವಾಧಿಷ್ಠಾನ ಚಕ್ರ ಮಣಿಪೂರಕ ಚಕ್ರದಲ್ಲಿ ಅಡಗಿತ್ತು.
ಮಣಿಪೂರಕ ಚಕ್ರ ಅನಾಹತ ಚಕ್ರದಲ್ಲಿ ಅಡಗಿತ್ತು.
ಅನಾಹತಚಕ್ರ ವಿಶುದ್ಧಿಚಕ್ರದಲ್ಲಿ ಅಡಗಿತ್ತು.
ವಿಶುದ್ಧಿಚಕ್ರ ಆಜ್ಞಾಚಕ್ರದಲ್ಲಿ ಅಡಗಿತ್ತು.
ಆಜ್ಞಾಚಕ್ರ ಬ್ರಹ್ಮಚಕ್ರದಲ್ಲಿ ಅಡಗಿತ್ತು.
ಬ್ರಹ್ಮಚಕ್ರ ಶಿಖಾಚಕ್ರದಲ್ಲಿ ಅಡಗಿತ್ತು.
ಶಿಖಾಚಕ್ರ ಪಶ್ಚಿಮಚಕ್ರದಲ್ಲಿ ಅಡಗಿತ್ತು.
ಪಶ್ಚಿಮಚಕ್ರ ಅಣುಚಕ್ರದಲ್ಲಿ ಅಡಗಿತ್ತು.
ಅಣುಚಕ್ರ ಅಖಂಡ ಜ್ಯೋತಿರ್ಮಯವಾಗಿಹ-
ಗೋಳಕಾಕಾರ ಪ್ರಣವದ [12]ನೆನಹು ಮಾತ್ರ[13] [14][ದಲ್ಲಿ][15]
ಅಡಗಿತ್ತು ನೋಡಾ, ಅಪ್ರಮಾಣ ಕೂಡಲಸಂಗಮದೇವ.

೨೦೦
ಇನ್ನು ನವಪದ್ಮದ ನಿವೃತ್ತಿ, ಅದೆಂತೆಂದಡೆ :
ಚತುರ್ದಳಪದ್ಮ ಷಡ್ದಳಪದ್ಮದಲ್ಲಿ ಅಡಗಿತ್ತು.
ಷಡ್ದಳಪದ್ಮ ದಶದಳಪದ್ಮದಲ್ಲಿ ಅಡಗಿತ್ತು.
ದಶದಳಪದ್ಮ ದ್ವಾದಶದಳ ಪದ್ಮದಲ್ಲಿ ಅಡಗಿತ್ತು.
ದ್ವಾದಶದಳ ಪದ್ಮ ಷೋಡಶದಳ ಪದ್ಮದಲ್ಲಿ ಅಡಗಿತ್ತು.
ಷೋಡಶದಳಪದ್ಮ ದ್ದಿದಳ ಪದ್ಮದಲ್ಲಿ ಅಡಗಿತ್ತು.
ದ್ವಿದಳ ಪದ್ಮ ಸಹಸ್ರದಳ ಪದ್ಮದಲ್ಲಿ ಅಡಗಿತ್ತು.
ಸಹಸ್ರದಳ ಪದ್ಮ ತ್ರಿದಳ ಪದ್ಮದಲ್ಲಿ ಅಡಗಿತ್ತು.
ತ್ರಿದಳ ಪದ್ಮ ಏಕದಳ ಪದ್ಮದಲ್ಲಿ ಅಡಗಿತ್ತು.
ಆ ಏಕದಳ ಪದ್ಮ ನಿರಂಜನಾತೀತವೆಂಬ ಪದ್ಮಪುಷ್ಪದಲ್ಲಿ
ಅಡಗಿತ್ತು ನೋಡಾ, ಅಪ್ರಮಾಣ ಕೂಡಲಸಂಗಮದೇವ.

೨೦೧
ಇನ್ನು ಐವತ್ತೆರಡಕ್ಷರದ ನಿವೃತ್ತಿ, ಅದೆಂತೆಂದಡೆ :
ವಶಷಸ ಎಂಬ ಚತುರಾಕ್ಷರವು
ಆಧಾರ ಚಕ್ರದ ನಕಾರ ಬೀಜದಲ್ಲಿ ಅಡಗಿತ್ತು.
ಬಭಮಯರಲ ಎಂಬ ಷಡಾಕ್ಷರವು
ಸ್ವಾಧಿಷ್ಠಾನಚಕ್ರ ಮಕಾರ ಬೀಜದಲ್ಲಿ ಅಡಗಿತ್ತು.
ಡಢಣತತಥದಧನ ಪಫ ಎಂಬ ದಶಾಕ್ಷರವು
ಮಣಿಪೂರಕ ಚಕ್ರದ ಶಿಕಾರ ಬೀಜದಲ್ಲಿ ಅಡಗಿತ್ತು.
ಕಖಗಘಙ ಚಛಜಝಞ ಟಠ ಎಂಬ ದ್ವಾದಶಾಕ್ಷರವು
ಅನಾಹತ ಚಕ್ರದ ವಕಾರ ಬೀಜದಲ್ಲಿ ಅಡಗಿತ್ತು.
ಅಆ ಇಈ ಉಊ ಋಋ ಞಞ ಏಐ ಓಔ ಅಂ ಅಃ
ಎಂಬ ಷೋಡಶಾಕ್ಷರವು, ವಿಶುದ್ಧಿಚಕ್ರದ ಯಕಾರ ಬೀಜದಲ್ಲಿ ಅಡಗಿತ್ತು.
ಹ ಹಂ ಳಂ ಕ್ಷಂ ಎಂಬ ಚತುರಾಕ್ಷರವು
ಆಜ್ಞಾಚಕ್ರದ ಅಖಂಡ ಜ್ಯೋತಿರ್ಮಯವಾಗಿಹ-
ಗೋಳಕಾಕಾರ ಪ್ರಣವಬೀಜದ ಜ್ಯೋತಿ ಸ್ವರೂಪದಲ್ಲಿಹ
ಚಿದಾತ್ಮ ಪರಮಾತ್ಮದಲ್ಲಿ ಅಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.[1] x (ತಾಪ್ರ ೫೮೬)

[2]

[3]     ರು (ತಾಪ್ರ ೭೬)

[4]     ದಂಡಕಾ (ತಾಪ್ರ ೭೬)

[5]

[6]     ರಕ್ತ (ತಾಪ್ರ ೭೬)

[7]

[8]     ದಲ್ಲಿ (ತಾಪ್ರ ೭೬)

[9]     +ವೆಂಬ (ತಾಪ್ರ ೭೬

[10]    ಡಾಕಿನಿ (ತಾಪ್ರ ೭೬)

[12]    ನೆನಹಿನಲ್ಲಿ (ತಾಪ್ರ ೭೬)

[14]    ಹಿನಲ್ಲಿ (ತಾಪ್ರ ೫೮೬)