೨೩೦
ಇನ್ನು ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನ
ಉತ್ಪತ್ಯವದೆಂತೆಂದಡೆ :
ಪರಬ್ರಹ್ಮ ಸ್ವರೂಪವಾಗಿಹ ಪರಮ ಪ್ರಣವದ
ಜ್ಯೋತಿಸ್ವರೂಪದಲ್ಲಿ ಐಕ್ಯನುತ್ಪತ್ಯವಾದನು.
ಆ ಪ್ರಣವದ ದರ್ಪಣಾಕಾರದಲ್ಲಿ ಶರಣನುತ್ಪತ್ಯವಾದನು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಪ್ರಾಣಲಿಂಗಿ ಉತ್ಪತ್ಯವಾದನು.
ಆ ಪ್ರಣವದ ಕುಂಡಲಾಕಾರದಲ್ಲಿ ಪ್ರಸಾದಿ ಉತ್ಪತ್ಯವಾದನು.
ಆ ಪ್ರಣವದ ದಂಡಕಸ್ವರೂಪದಲ್ಲಿ ಮಹೇಶ್ವರ ಉತ್ಪತ್ಯವಾದನು.
ಆ ಪ್ರಣವದ ತಾರಕಾಸ್ವರೂಪದಲ್ಲಿ ಭಕ್ತನುತ್ಪತ್ಯವಾದನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೩೧
ಚಿತ್ಪ್ರ್‌ಕಾಶ ಉತ್ತರಸಾರೇ ಸಾಕ್ಷಿ-
ಓಂಕಾರಜ್ಯೋತಿರೂಪೇ ಚ ಐಕ್ಯಶ್ಚೈವ ಸಮುದ್ಭವಃ |
ಓಂಕಾರದರ್ಪಣಾಕಾರೇ ಶರಣಶ್ಚ ಸಮುದ್ಭವಃ ||
ಓಂಕಾರೇ ಚಾರ್ಧಚಂದ್ರೇ ಚ ಪ್ರಾಣಲಿಂಗೀ ಸಮುದ್ಭವಃ |
ಓಂಕಾರಕುಂಡಲಾಕಾರೇ ಪ್ರಸಾದೀ ಚ ಸಮುದ್ಭವಃ ||
ಓಂಕಾರದಂಡರೂಪೇ ಚ ಮಾಹೇಶ್ವರಃ ಸಮುದ್ಭವಃ |
ಓಂಕಾರತಾರಕಾರೂಪೇ ಭಕ್ತಶ್ಚೈವ ಸಮುದ್ಭವಃ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೩೨
ಇನ್ನು ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನ ನೆಲೆ,
ಅದೆಂತೆಂದಡೆ :
ಪ್ರಥ್ವೀಭೂತದಲ್ಲಿ ಭಕ್ತನಿಹನು, ಅಪ್ಪುಭೂತದಲ್ಲಿ ಮಾಹೇಶ್ವರನಿಹನು,
ತೇಜಭೂತದಲ್ಲಿ ಪ್ರಸಾದಿಯಿಹನು, ವಾಯುಭೂತದಲ್ಲಿ ಪ್ರಾಣಲಿಂಗಿಹನು,
ಆಕಾಶಭೂತದಲ್ಲಿ ಶರಣನಿಹನು, ಆತ್ಮಭೂತದಲ್ಲಿ ಐಕ್ಯನಿಹನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೩೩
ಚಿತ್ಪ್ರಕಾಶ ಉತ್ತರಸಾರೇ, ಸಾಕ್ಷಿ-
ಪ್ರಥ್ವೀಭೂತೇ ಚ ಭಕ್ತಶ್ಚ ಅಪ್‌ಭೂತೇ ಚ ಮಹೇಶ್ವರಃ |
ಪ್ರಸಾದೀ ತೇಜಭೂತಂ ಚ ಪ್ರಾಣಶ್ಚ ವಾಯುಭೂತಕಂ ||
ಶರಣಾಕಾಶಭೂತೇ ಚ ಐಕ್ಯಶ್ಚಾತ್ಮಭೂತಕಂ |
ಇತಿ ಷಷ್ಠಸ್ಥಲಂ ದೇವಿ ಸ್ಥಾನೇ ಸ್ಥಾನೇ ಸಮಾಚರೇತ್ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೩೪
ಶ್ರೀ ಷಡ್ವಿಧ ಹಸ್ತ ಉತ್ಪತ್ಯ, ಅದೆಂತೆಂದಡೆ :
ಪರಬ್ರಹ್ಮ ಸ್ವರೂಪವಾಗಿಹ ಪರಮ ಪ್ರಣವದ
ಜ್ಯೋತಿಸ್ವರೂಪದಲ್ಲಿ ಭಾವಹಸ್ತ ಹುಟ್ಟಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಜ್ಞಾನಹಸ್ತ ಹುಟ್ಟಿತ್ತು.
ಆ ಪ್ರಣವದ ಆರ್ಧಚಂದ್ರಕದಲ್ಲಿ ಸುಮನಹಸ್ತ ಹುಟ್ಟಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ನಿರಹಂಕಾರಹಸ್ತ ಹುಟ್ಟಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಸುಬುದ್ಧಿಹಸ್ತ ಹುಟ್ಟಿತ್ತು.
ಆ ಪ್ರಣವದ ತಾರಕಾಸ್ವರೂಪದಲ್ಲಿ ಸುಚಿತ್ತಹಸ್ತ ಹುಟ್ಟಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೩೫
ಅಸಿಪದಾತೀತಾಗಮೇ ಸಾಕ್ಷಿ-
ಓಂಕಾರಜ್ಯೋತಿರೂಪೇ ಚ ಭಾವಹಸ್ತಶ್ಚ ಜಾಯತೇ |
ಓಂಕಾರದರ್ಪಣಾಕಾರೇ ಜ್ಞಾನಹಸ್ತಶ್ಚ ಜಾಯತೇ ||
ಓಂಕಾರೇಚಾರ್ಧಚಂದೇ ಚ ಮನಹಸ್ತಶ್ಚ ಜಾಯತೇ |
ಓಂಕಾರಕುಂಡಲಾಕಾರೇ ನಿರಹಂಕಾರೋ ಜಾಯತೇ ||
ಓಂಕಾರದಂಡರೂಪೇ ಚ ಬುದ್ಧಿಹಸ್ತಂ ಚ ಜಾಯತೇ |
ಓಂಕಾರ ತಾರಕಾರೂಪೇ ಚಿತ್ತಹಸ್ತಂ ಚ ಜಾಯತೇ |
ಇತಿ ಷಷ್ಠಹಸ್ತಂ ದೇವಿ ಸ್ಥಾನೇ ಸ್ಥಾನೇ ಚ ಜಾಯತೇ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೩೬
ಇನ್ನು ಷಡ್ವಿಧ ಹಸ್ತದ ನೆಲೆ, ಅದೆಂತೆಂದಡೆ :
ಪೃಥ್ವಿಯಲ್ಲಿ ಸುಚಿತ್ತಹಸ್ತವಿಹುದು, ಅಪ್ಪುವಿನಲ್ಲಿ  ಸುಬುದ್ಧಿಹಸ್ತವಿಹುದು,
ತೇಜದಲ್ಲಿ ನಿರಹಂಕಾರಹಸ್ತವಿಹುದು, ವಾಯುವಿನಲ್ಲಿ ಸುಮನಹಸ್ತವಿಹುದು,
ಆಕಾಶದಲ್ಲಿ ಸುಜ್ಞಾನಹಸ್ತವಿಹುದು, ಆತ್ಮನಲ್ಲಿ ಭಾವಹಸ್ತವಿಹುದು,
ಈ ಭೇದವನಱಿವುದು ಅತ್ಯಂತ ಸೂಕ್ಷ್ಮ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೩೭
ಚಿದ್ರೂಪಸಾರೇ, ಸಾಕ್ಷಿ-
ಚಿತ್ತಹಸ್ತಂ ಚ ಪೃಥ್ವೀ ಚ ಬುದ್ಧಿಹಸ್ತಂ ಚ ಆಪಕಂ |
ಅಹಂಕಾರಂ ಚ ತೇಜಶ್ಚ ಮನೋಹಸ್ತಂ ಚ ಮಾರುತಃ ||
ಜ್ಞಾನಹಸ್ತಂ ಚ ಆಕಾಶಂ ಭಾವಹಸ್ತಂ ಚ ಆತ್ಮಕಂ |
ಇತಿ ಹಸ್ತಸ್ಯ ಸಂಜ್ಞಾತ್ವಾ ಸುಸೂಕ್ಷಂ ಶೃಣು ಪಾರ್ವತಿ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೩೮
ಇನ್ನು ಶ್ರೀ ಷಡ್ವಿಧ ಲಿಂಗದುತ್ಪತ್ಯವದೆಂತೆಂದಡೆ :
ಪರಬ್ರಹ್ಮ ಸ್ವರೂಪವಾಗಿಹ ಪರಮ ಪ್ರಣವದ
ಜ್ಯೋತಿಸ್ವರೂಪದಲ್ಲಿ ಮಹಾಲಿಂಗ ಹುಟ್ಟಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಪ್ರಸಾದಲಿಂಗ ಹುಟ್ಟಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಜಂಗಮಲಿಂಗ ಹುಟ್ಟಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ಶಿವಲಿಂಗ ಹುಟ್ಟಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಗುರುಲಿಂಗ ಹುಟ್ಟಿತ್ತು.
ಆ ಪ್ರಣವದ ತಾರಕಾಸ್ವರೂಪದಲ್ಲಿ ಆಚಾರಲಿಂಗ ಹುಟ್ಟಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೩೯
ಶಿವಲಿಂಗಾಗಮೇ ಸಾಕ್ಷಿ-
ಓಂಕಾರಜ್ಯೋತಿರೂಪೇ ಚ ಮಹಾಲಿಂಗ ಚ ಜಾಯತೇ |
ಓಂಕಾರದರ್ಪಣಾಕಾರೇ ಪ್ರಸಾದಲಿಂಗೋ ಜಾಯತೇ ||
ಓಂಕಾರೇ ಚಾರ್ಧಚಂದ್ರೇ ಚ ಜಂಗಮಂ ಚ ಸ ಜಾಯತೇ |
ಓಂಕಾರ ದಂಡರೂಪೇ ಚ ಗುರುಲಿಂಗಂ ಚ ಜಾಯತೇ ||
ಓಂಕಾರತಾರಕಾರೂಪೇ ಆಚಾರಂ ಚ ಸಜಾಯತೇ | ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೪೦
ಇನ್ನು ಷಡ್ವಿಧಲಿಂಗ ಅದೆಂತೆಂದಡೆ :
ಪೃಥ್ವಿಯಲ್ಲಿ ಆಚಾರಲಿಂಗವಿಹುದು, ಅಪ್ಪುವಿನಲ್ಲಿ ಗುರುಲಿಂಗವಿಹುದು,
ತೇಜದಲ್ಲಿ ಶಿವಲಿಂಗವಿಹುದು, ವಾಯುವಿನಲ್ಲಿ ಜಂಗಮಲಿಂಗವಿಹುದು,
ಆಕಾಶದಲ್ಲಿ ಪ್ರಸಾದಲಿಂಗವಿಹುದು, ಆತ್ಮನಲ್ಲಿ ಮಹಾಲಿಂಗವಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೪೧
ಶಿವಲಿಂಗ ಸೂತ್ರೆ ಸಾಕ್ಷಿ-
ಆಚಾರಂ ಪೃಥ್ವೀಭೂತೇ ಚ ಆಪಶ್ಚ ಗುರುಲಿಂಗಯೊ |
ತೇಜಂ ಚ ಶಿವಲಿಂಗಂ ಚ ವಾಯೌಚ ಚರಲಿಂಗಕಂ ||
ಪ್ರಸಾದಲಿಂಗೇ ತ್ವಾಕಾಶಂ ಆತ್ಮಾಚ ಮಹಾಮೇವ ಚ |
ಇತಿ ಲಿಂಗಸ್ಥಲಂ ಜ್ಞಾತ್ವಾ ದುರ್ಲಭಂ ಚ ವರಾನನೇ || ಎಂದುದಾಗಿ
ಅಪ್ರಮಾಣ ಕೂಡಲಸಂಗಮದೇವ.

೨೪೨
ಇನ್ನು ಷಡ್ವಿಧ ಮುಖಂಗಳುತ್ಪತ್ಯವದೆಂತೆಂದಡೆ :
ಪರಬ್ರಹ್ಮ ಸ್ವರೂಪವಾಗಿಹ ಪರಮ ಪ್ರಣವದ
ಜ್ಯೋತಿ ಸ್ವರೂಪದಲ್ಲಿ ಮನಸ್ಸು ಹುಟ್ಟಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಶ್ರೋತ್ರ ಹುಟ್ಟಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ತ್ವಕ್ಕು ಹುಟ್ಟಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ನೇತ್ರ ಹುಟ್ಟಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಜಿಹ್ವೆ ಹುಟ್ಟಿತ್ತು.
ಆ ಪ್ರಣವದ ತಾರಕಾಸ್ವರೂಪದಲ್ಲಿ ಪ್ರಾಣ ಹುಟ್ಟಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೪೩
ಚಕ್ರಾತೀತಾಗಮೇ ಸಾಕ್ಷಿ-
ಓಂಕಾರಜ್ಯೋತಿರೂಪೇ ಚ ಮಾನಸಂ ಚ ಸಮುದ್ಭವಂ |
ಓಂಕಾರದರ್ಪಣಾಕಾರೇ ಶ್ರೋತ್ರಂ ಚೈವ ಸಮುದ್ಭವಂ ||
ಓಂಕಾರೇ ಚಾರ್ಧಚಂದ್ರೇ ಚ ತ್ವಕ್ ಚೈವ ಸುಸಮುದ್ಭವಂ |
ಓಂಕಾರಕುಂಡಲಾಕಾರೇ ನೇತ್ರಂ ಚೈವ ಸಮುದ್ಭವಂ ||
ಓಂಕಾರದಂಡರೂಪೇ ಚ ಜಿಹ್ವಾ ಚೈವ ಸಮುದ್ಭವಂ |
ಓಂಕಾರತಾರಕಾರೂಪೇ ಘ್ರಾಣಂ ಚೈವ ಸಮುದ್ಭವಂ || ಎಂದುದಾಗಿ
ಅಪ್ರಮಾಣ ಕೂಡಲಸಂಗಮದೇವ.

೨೪೪
ಇನ್ನು ಷಡ್ವಿಧ ಮುಖಂಗಳ ನೆಲೆ, ಅದೆಂತೆಂದಡೆ :
ಘ್ರಾಣ ಪೃಥ್ವಿ ಆಶ್ರಯವಾಗಿಹುದು.
ಜಿಹ್ವೆ ಅಪ್ಪು ಆಶ್ರಯವಾಗಿಹುದು.
ನೇತ್ರ ತೇಜ ಆಶ್ರಯವಾಗಿಹುದು.
ತ್ವಕ್ಕು ವಾಯು ಆಶ್ರಯವಾಗಿಹುದು.
ಶ್ರೋತ್ರ ಆಕಾಶ ಆಶ್ರಯವಾಗಿಹುದು.
ಮನ ಆತ್ಮಾ ಅಶ್ರಯವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೪೫
ಜ್ಯೋತಿಸಾರೇ, ಸಾಕ್ಷಿ-
ಘ್ರಾಣಂ ಪೃಥ್ವೀಮಾಶ್ರಿತ್ಯ ಜಿಹ್ವಾ ಚ ಜಲಮಾಶ್ರಿತಃ |
ನೇತ್ರಂ ಚ ತೇಜ ಆಶ್ರಿತ್ಯ ತ್ವಕ್ ಚೈವ ವಾಯುಮಾಶ್ರಿತಃ ||
ಶ್ರೋತ್ರಂ ಚಾಕಾಶಮಾಶ್ರಿತ್ಯ ಮನಸ್ಸದಾತ್ಮಾನಮಾಶ್ರಿತಂ |
ಇತಿ ಷಷ್ಠಮುಖಂ ದೇವಿ ಸ್ಥಾನೇ ಸ್ಥಾನೇ ಸಮಾಚರೇತ್ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೪೬
ಇನ್ನು ಷಡ್ವಿಧ ಪರಿಣಾಮದುತ್ಪತ್ಯವದೆಂತೆಂದಡೆ :
ಪರಬ್ರಹ್ಮ ಸ್ವರೂಪವಾಗಿಹ ಪರಮ ಪ್ರಣವದ
ಜ್ಯೋತಿ ಸ್ವರೂಪದಲ್ಲಿ ಪರಿಣಾಮ ಹುಟ್ಟಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಶಬ್ದ ಹುಟ್ಟಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಸ್ಪರ್ಶನ ಹುಟ್ಟಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ರೂಪ ಹುಟ್ಟಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ರಸ ಹುಟ್ಟಿತ್ತು.
ಆ ಪ್ರಣವದ ತಾರಕಾಸ್ವರೂಪದಲ್ಲಿ ಗಂಧ ಹುಟ್ಟಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೪೭
ಶಿವಸೂತ್ರಸಾರೇ, ಸಾಕ್ಷಿ-
ಓಂಕಾರಜ್ಯೋತಿರೂಪೇ ಚ ಪರಿಣಾಮಂ ಚ ಜಾಯತೇ |
ಓಂಕಾರದರ್ಪಣಾಕಾರೇ ಶಬ್ದಶ್ಚೈವ ಜಾಯತೇ ||
ಓಂಕಾರೇ ಚಾರ್ಧಚಂದ್ರೇ ಚ ಸ್ಪರ್ಶನಂ ಚ ಸಜಾಯತೇ |
ಓಂಕಾರಕುಂಡಲಾಕಾರೇ ರೂಪಂ ಚೈವ ಸಜಾಯತೇ ||
ಓಂಕಾರದಂಡರೂಪೇ ಚ ರಸಂ ಚೈವ ಸಜಾಯತೇ |
ಓಂಕಾರತಾರಕಾರೂಪೇ ಗಂಧಂ ಚೈವ ಸಜಾಯತೇ ||
ಓಂಕಾರತಾರಕಾರೂಪೇ ಗಂಧಂ ಚೈವ ಸಜಾಯತೇ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೪೮
ಇನ್ನು ಷಡ್ವಿಧ ಪರಿಣಾಮದ ನೆಲೆ ಅದೆಂತೆಂದಡೆ :
ಪೃಥ್ವಿಯಲ್ಲಿ ಗಂಧವಿಹುದು, ಅಪ್ಪುವಿನಲ್ಲಿ ರಸವಿಹುದು,
ತೇಜದಲ್ಲಿ ರೂಪವಿಹುದು, ವಾಯುವಿನಲ್ಲಿ ಸ್ಪರ್ಶವಿಹುದು,
ಆಕಾಶದಲ್ಲಿ ಶಬ್ದವಿಹುದು, ತೃಪ್ತಿ ಆತ್ಮಾಶ್ರಯವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೪೯
ಶಿವಸೂತ್ರೇ, ಸಾಕ್ಷಿ-
ಸುಗಂಧಃ ಪೃಥ್ವೀಮಾಶ್ರಿತ್ಯ ಸುರಸೋ ಜಲಮಾಶ್ರಿತಃ |
ರೂಪಶ್ಚ ತೇಜ ಆಶ್ರಿತ್ಯ ಸ್ಪರ್ಶನಂ ವಾಯುಮಾಶ್ರಿತಂ ||
ಶಬ್ದಮಾಕಾಶಮಾಶ್ರಿತ್ಯ ಆತ್ಮನಿ ತೃಪ್ತಿ ಆಶ್ರಿತಃ |
ಇತಿ ಷಡಿಂದ್ರಿಯಂ ದೇವಿ ಸ್ಥಾನೇ ಸ್ಥಾನೇ ಸಮಾಚರೇತ್ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೫೦
ಇನ್ನು ಅರ್ಪಿತಾವಧಾನದ ಭೇದವೆಂತೆಂದಡೆ :
ಭೂಮಿಯೆ ಅಂಗವಾದ ಭಕ್ತನು ಸುಚಿತ್ತವೆಂಬ ಹಸ್ತದಲ್ಲಿ
ಆಚಾರಲಿಂಗಕ್ಕೆ ಘ್ರಾಣವೆಂಬ ಮುಖದಲ್ಲಿ ಗಂಧವನೆ ಸಮರ್ಪಣವ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೫೧
ರಹಸ್ಯೇ, ಸಾಕ್ಷಿ-
ಚಿತ್ತಹಸ್ತೇನ ಭೂಮ್ಯಾಂಗೋ ಭಕ್ತಶ್ಚಾಚಾರಲಿಂಗಿನಃ |
ಘ್ರಾಣೇ ಚ ತನ್ಮುಖೇ ಗಂಧಃ ಅರ್ಪಿತಂ ತೃಪ್ತಿಭೋಕ್ತವಾನ್ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೫೨
ಅಪ್ಪುವೆ ಅಂಗವಾದ ಮಹೇಶ್ವರನು ಸುಬುದ್ಧಿಯೆಂಬ ಹಸ್ತದಲ್ಲಿ
ಗುರುಲಿಂಗಕ್ಕೆ ಜಿಹ್ವೆಯೆಂಬ ಮುಖದಲ್ಲಿ ರಸವ ಸಮರ್ಪಣವ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೫೩
ಸಾಕ್ಷಿ-
ಮಹೇಶ್ವರೋ ಜಲಾಂಗಶ್ಚ ಬುದ್ಧಿಹಸ್ತೇನ ಸದ್ಗುರುಃ |
ಜಿಹ್ವಾಮುಖೇ ರಸೋಭೇದಃ ಅರ್ಪಿತಂ ತೃಪ್ತಿಭೋಕ್ತವಾನ್ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೫೪
ಅಗ್ನಿಯೆ ಅಂಗವಾದ ಪ್ರಸಾದಿ ನಿರಹಂಕಾರವೆಂಬ ಹಸ್ತದಲ್ಲಿ
ಶಿವಲಿಂಗಕ್ಕೆ ನೇತ್ರವೆಂಬ ಮುಖದಲ್ಲಿ ಸೂಸಮರ್ಪಣವಂ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೫೫
ಸಾಕ್ಷಿ-
ನಿರಹಂಕಾರ ಹಸ್ತೇನ ಅನಲಾಂಗಃ ಪ್ರಸಾದಿಚ |
ಶಿವಲಿಂಗ ಮುಖೇನೇತ್ರೇ ಅರ್ಪಿತಂ ರೂಪಭೋಕ್ತವಾನ್ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೫೬
ವಾಯುವೆ ಅಂಗವಾದ ಪ್ರಾಣಲಿಂಗಿ ಸುಮನವೆಂಬ ಹಸ್ತದಲ್ಲಿ
ಜಂಗಮಲಿಂಗಕ್ಕೆ ತ್ವಕ್ಕೆಂಬ ಮುಖದಲ್ಲಿ
ಸ್ಪರ್ಶನವ ಸಮರ್ಪಣವ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೫೭
ಸಾಕ್ಷಿ-
ಮನೋಹಸ್ತೇನ ವಾಯ್ವಂಗಃ ಪ್ರಾಣಲಿಂಗೀ ತಥೈವಚ |
ಜಂಗಮೇ ತ್ವಕ್ಮುಖೇಚೈವ ಅರ್ಪಿತಂ ಸ್ಪರ್ಶಭೋಕ್ತವಾನ್ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೫೮
ಆಕಾಶವೆ ಅಂಗವಾದ ಶರಣ ಸುಜ್ಞಾನವೆಂಬ ಹಸ್ತದಲ್ಲಿ
ಪ್ರಸಾದ ಲಿಂಗಕ್ಕೆ ಶ್ರೋತ್ರವೆಂಬ ಮುಖದಲ್ಲಿ ಶಬ್ದ ಸಮರ್ಪಣವ ಮಾಡಿ,
ತೃಪ್ತಿಯನೆ ಭೋಗಿಸುವನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೫೯
ಸಾಕ್ಷಿ-
ಜ್ಞಾನ ಹಸ್ತೇನ ಶರಣಃ ವ್ಯೋಮಾಂಗಶ್ಚ ಪ್ರಸಾದಿಕಃ |
ಶ್ರೋತ್ರೇಚ ತನ್ಮಖೇಚೈವ ಅರ್ಪಿತಂ ಶಬ್ದಭೋಕ್ತವಾನ್ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೬೦
ಆತ್ಮನೆ ಅಂಗವಾದ ಐಕ್ಯ ಭಾವವೆಂಬ ಹಸ್ತದಲ್ಲಿ
ಮಹಾಲಿಂಗಕ್ಕೆ ಮನವೆಂಬ ಮುಖದಲ್ಲಿ
ಪರಿಣಾಮದ ಸಮರ್ಪಣವ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೬೧
ಸಾಕ್ಷಿ-
ಆತ್ಮಾಂಗೋ ಭಾವಹಸ್ತೇನ ಐಕ್ಯಶ್ಚಾಪಿ ಮಹಾತ್ಮನೇ |
ಹೃನ್ಮುಖೇ ಅರ್ಪಿತೇಚೈವ ಪದಾರ್ಥಂ ತೃಪ್ತಿಭೋಕ್ತವಾನ್ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೬೨
ಇನ್ನು ಷಡ್ವಿಧಭೂತಂಗಳ ನಿವೃತ್ತಿ ಅದೆಂತೆಂದಡೆ :
ಪರಬ್ರಹ್ಮಸ್ವರೂಪವಾಗಿಹ ಪರಮಪ್ರಣವದ ತಾರಕಾಸ್ವರೂಪದಲ್ಲಿ
ಪೃಥ್ವಿಯೆಂಬ ಮಹಾಭೂತವಡಗಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಅಪ್ಪುವೆಂಬ ಮಹಾಭೂತವಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ತೇಜವೆಂಬ ಮಹಾಭೂತವಡಗಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ವಾಯುವೆಂಬ ಮಹಾಭೂತವಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಆಕಾಶವೆಂಬ ಮಹಾಭೂತವಡಗಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ
ಆತ್ಮನೆಂಬ ಮಹಾಭೂತವಡಗಿತ್ತು, ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೬೩
ಇನ್ನು ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನ ನಿವೃತ್ತಿ ಅದೆಂತೆಂದಡೆ :
ಆ ಪ್ರಣವದ ತಾರಕಾಸ್ವರೂಪದಲ್ಲಿ ಭಕ್ತನಡಗಿದನು
ಆ ಪ್ರಣವದ ದಂಡಕಸ್ವರೂಪದಲ್ಲಿ ಮಾಹೇಶ್ವರನಡಗಿದನು
ಆ ಪ್ರಣವದ ಕುಂಡಲಾಕಾರದಲ್ಲಿ ಪ್ರಸಾದಿಯಡಗಿದನು
ಆ ಪ್ರಣವದ ಅರ್ಧಚಂದ್ರಕದಲ್ಲಿ ಪ್ರಾಣಲಿಂಗಿಯಡಗಿದನು
ಆ ಪ್ರಣವದ ದರ್ಪಣಾಕಾರದಲ್ಲಿ ಶರಣನಡಗಿದನು
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಐಕ್ಯನಡಗಿದನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೬೪
ಇನ್ನು ಷಡ್ವಿಧ ಹಸ್ತ ನಿವೃತ್ತಿ ಅದೆಂತೆಂದಡೆ :
ಆ ಪ್ರಣವದ ತಾರಕಾಸ್ವರೂಪದಲ್ಲಿ ಸುಚಿತ್ತ ಹಸ್ತವಡಗಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಸುಬುದ್ಧಿ ಹಸ್ತವಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ನಿರಹಂಕಾರ ಹಸ್ತವಡಗಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಸುಮನ ಹಸ್ತವಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಸುಜ್ಞಾನ ಹಸ್ತವಡಗಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ

[1]ಸದ್ಭಾವ[2] ಹಸ್ತವಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೬೫
ಇನ್ನು ಷಡ್ವಿಧಲಿಂಗನಿವೃತ್ತಿ, ಅದೆಂತೆಂದಡೆ :
ಆ ಪ್ರಣವದ ತಾರಕಾಕೃತಿಯಲ್ಲಿ ಆಚಾರ ಲಿಂಗವಡಗಿತ್ತು
ಆ ಪ್ರಣವದ ದಂಡಕಾಕೃತಿಯಲ್ಲಿ ಗುರುಲಿಂಗವಡಗಿತ್ತು
ಆ ಪ್ರಣವದ ಕುಂಡಲಾಕೃತಿಯಲ್ಲಿ ಶಿವಲಿಂಗವಡಗಿತ್ತು
ಆ ಪ್ರಣವದ ಅರ್ಧ ಚಂದ್ರಾಕೃತಿಯಲ್ಲಿ ಜಂಗಮಲಿಂಗವಡಗಿತ್ತು
ಆ ಪ್ರಣವದ ದರ್ಪಣಾಕೃತಿಯಲ್ಲಿ ಪ್ರಸಾದಲಿಂಗವಡಗಿತ್ತು
ಆ ಪ್ರಣವದ ಜ್ಯೋತಿಸ್ತಂಭಾಕೃತಿಯಲ್ಲಿ ಮಹಾಲಿಂಗವಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೬೬
ಇನ್ನು ಷಡ್ವಿಧ ಮುಖಂಗಳ ನಿವೃತ್ತಿ, ಅದೆಂತೆಂದಡೆ :
ಆ ಪ್ರಣವದ ತಾರಕಾಕೃತಿಯಲ್ಲಿ ಘ್ರಾಣೇಂದ್ರಿಯವಡಗಿತ್ತು
ಆ ಪ್ರಣವದ ದಂಡಕಾಸ್ವರೂಪದಲ್ಲಿ ಜಿಹ್ವೇಂದ್ರಿಯವಡಗಿತ್ತು
ಆ ಪ್ರಣವದ ಕುಂಡಲಾಕಾರದಲ್ಲಿ ನೇತ್ರೇಂದ್ರಿಯವಡಗಿತ್ತು
ಆ ಪ್ರಣವದ ಅರ್ಧಚಂದ್ರಕದಲ್ಲಿ ತ್ವಗೇಂದ್ರಿಯವಡಗಿತ್ತು
ಆ ಪ್ರಣವದ ದರ್ಪಣಾಕಾರದಲ್ಲಿ ಶ್ರೋತ್ರೇಂದ್ರಿಯವಡಗಿತ್ತು
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಮನಸ್ಸೇಂದ್ರಿಯವಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.


[1]     ಭಾವ (ತಾ.ಪ್ರ- ೫೮೬)

[2]