೩೮೮
ಇನ್ನು ಇನ್ನೂಱ ಇಪ್ಪತ್ತು ನಾಲ್ಕು ಭುವನ ಉತ್ಪತ್ಯವದೆಂತೆಂದಡೆ :
ಅಖಂಡ ಜ್ಯೋತಿರ್ಮಯ ಶ್ರೀ ಇನ್ನೂಱು ಇಪ್ಪತ್ತು ನಾಲ್ಕು ಭುವನವಾಗಿಹ
ಗೋಳಕಾಕಾರ ಪ್ರಣವದ ಜ್ಯೋತಿಸ್ವರೂಪದಲ್ಲಿಹ,
ಚಿದಾತ್ಮ ಪರಮಾತ್ಮನಲ್ಲಿ ಜೀವಹಂಸ ಪರಮ ಹಂಸ ಉತ್ಪತ್ಯ.
ಆ ಜೀವಹಂಸ ಪರಹಂಸನ ದೆಶೆಯಿಂದ ಇನ್ನೂಱ ಇಪ್ಪತ್ತುನಾಲ್ಕು ಭುವನವಾದವು.

ಆ ಇನ್ನೂಱ ಇಪ್ಪತ್ತುನಾಲ್ಕು ಭುವನಂಗಳ ವಿವರವದೆಂತೆಂದಡೆ :
ಅನಾಶ್ರಿತ, ಅನಾಥ, ಅನಂತ, ವ್ಯೋಮರೂಪ, ವ್ಯಾಪಿನಿ, ಊರ್ಧ್ವಗಾಮಿನಿ,
ಮೋಚಿಕಾ, ರೋಚಿಕಾ, ದೀಪಿಕಾದೀ, ಶ್ಯಾಂತತೀತೆ, ಶಾಂತಿ ಶಾಂತಿ,
ವಿದ್ಯೆ, ಪ್ರತಿಷ್ಠೆ, ನಿವೃತ್ತಿ, ಸದಾಶಿವ, ಅಚಿಂತ್ಯ, ಸೂಕ್ಷ್ಮ
ವಾಮದೇವ, ಸತ್ಯಾನಂದ, ಸರ್ವೇಶ್ವರ, ಶಿವೋತ್ತಮ
ನಿತ್ಯಾನಂದ, ಐಕ್ಯನೇತ್ರ, ಸದಾನಂದ, ಏಕರುದ್ರ, ನಿಜಾನಂದ,
ತ್ರಿಮೂರ್ತಿ, ಶ್ರೀಕಂಠ, ಶಿಖಂಡಿ, ವಾಮಜೇಷ್ಠ, ರೌದ್ರಿ ಕಲವಿಕರಣಿ,
ಕಾಳಿ, ಬಲ ವಿಕರಣಿ, ಸರ್ವ್ವ, ಭೂತದಮನಿ, ಬಲ ಪ್ರಮದಿನಿ,
ಮನೋನ್ಮನಿ, ಅಂಗುಷ್ಟಮಾತ್ರ ಭೂಮನಿ, ಮಹಾಭುವನ, ಏಕಿಶಾನ, ಏಕ,
ಪಿಂಗಳೆಕ್ಷಣ, ಉದ್ಭವ, ಭವ, ವಾಮದೇವ, ಮಹಾದೇವ, ಶಿಬೇದ, ಏಕವೀರ, ಪಂಚಾಂತಕ,
ಶೂರ, ಸಂವರ್ತನ, ಜ್ಯೋತಿ, ಚಂಡ, ಕ್ರೋಧ, ಅನಂತ, ಏಕನೇಕ, ಭವ್ಯ,
ಮಂಗಳ, ಅಜ, ಉಮಾಪತಿ, ಏಕಧೀರ, ಪ್ರಚಂಡ, ಈಶಾನ, ಉಗ್ರ, ಭೀಮ,
ಭೌಮ, ಕೌಮಾರಿ, ವೈಷ್ಣವ, ಬ್ರಾಹ್ಮಣ, ವೈಭವ, ಕೃತ, ಶಾಕೃತ,
ಯಾಮ್ಯ, ವ್ರಿಜೇಶ, ಸಾಮ್ಯ, ಇಂದ್ರ, ಗಾಂಧರ್ವ, ಯಕ್ಷ, ರಾಕ್ಷಸ,
ಪೈಶಾಚಿಕ, ಸ್ಥಲೇಶ್ವರ, ಸ್ಥೂಲೇಶ್ವರ, ಶಂಖಕರ್ನ, ಕಾಳಾಂಜನ,
ಮಂಡಲೇಶ್ವರ, ಮಾಕೂಚ, ದ್ವಿರಂಚ, ಛಗ, ಚಂದ, ಸ್ಥಾಣು, ಸ್ವರ್ಣಾಕ್ಷ,
ಭದ್ರಕರ್ಣ, ಮಹಾಲಯ, ಅವಿಮುಕ್ತ, ರುದ್ರಕೋಟಿ, ವಸ್ತ್ರಾಪದ,
ಭೀಮೇಶ್ವರ, ಮಹೇಂದ್ರ, ಅಷ್ಟಹಾಸ, ವಿಮಲೇಶ್ವರ, ನಖಲ, ನಾಖಲ.
ಕುರುಕ್ಷೇತ್ರ, ಭೈರವ, ಕೈದಾರ, ಮಹಾಬಲ, ಮಧ್ಯಮೇಶ್ವರ, ಮಾಹೇಂದ್ರಕೇಶ್ವರ,
ಜಲಭೇಶ್ವರ, ಶ್ರೀಶೈಲ, ಹರಿಶ್ಚಂದ್ರ, ಅಕುಲಿಶ, ಗ್ರಸನ, ಮುಂಡಿ
ಜಾಂಭೂತಿ, ಆಗೋಡಿ, ಕ್ಷರ, ನೈಮಿಷ, ಪ್ರಭಾಸ, ಅಮರೇಶ್ವರ
ಭದ್ರಕಾಳ, ವೀರಭದ್ರ, ತ್ರಿಲೋಚನ, ವಿಪ್ಸು, ಭವ, ವಿವಾಹೆ,
ತ್ರಿದಶೇಶ್ವರ, ತ್ರಿಯಕ್ಷ, ಗಣಾ, ದೃಕ್ಷ, ವಿಭು, ಶಂಭು, ದೌಷ್ಠಿ,
ವಜ್ರ, ಫಣೀಶ, ಉದುಂಬರೀಶ, ಗ್ರಸನ,
ಮಾರುತಾಸನ, ಕ್ರತುಮರ್ಧನ, ಅನಂದ, ವೃಷಧರ, ಬಲಿಪ್ರಿಯ,
ಭೂತಪಾಲ, ಜೇಷ್ಠ, ಸರ್ವಸುರೇಶಾನ, ವೇದಪಾಠಕ, ಜ್ಞಾನಭೂತ,
ಸರ್ವಜ್ಞ, ಈಶ, ಸರ್ವ, ವಿದ್ಯಾಧೀಪ, ಪ್ರಕಾಮದ, ಪ್ರಸೀದಡನ,
ಶ್ರೀಧರ, ಲಕ್ಷ್ಮೀಧರ, ಜಟಾಧರ, ಸೌಮ್ಯದೇಹ, ಧನ್ಯರೂಪ,
ನಿಧೀಶ, ಮೇಘವಾಹನ, ಕಪರ್ದಿ, ಪಂಚಶಿಖಿ, ಪ್ರಪಂಚಾಂತಕ,
ಕ್ಷಯಾಂತಕ, ತಿಕ್ಷು, ಸುಸೂಕ್ಷ್ಮ, ವಾಯುವೇಘಗ, ಲಘು,
ಶೀಗ್ರ, ಸುನಾದ, ಮೇಘನಾದ, ಜ್ವಲಾಂತಕ, ದೀರ್ಘಬಾಹು,
ಜಯ, ಭದ್ರ, ಸ್ವೇತಮಹಾಭಲ, ಪಾಶಹಸ್ತ, ಅತಿಬಲ,
ಮಹಾಬಲ, ವಾರುಣೀಶ, ದೌಷ್ಟ್ರಿವ, ಲೋಹಿತ, ದ್ರೂಮ,
ವಿರೂಪಾಕ್ಷ, ಊರ್ಧ್ವಶೇಷ, ಉಭಾಯನಕ, ಕ್ರೂರದೃಷ್ಟಿಹಂತ,
ಮಾರಣನಿರುತಿ, ಧರ್ಮ, ಧರ್ಮಪರೀನ, ನಿಯೋಕ್ತೃ, ಕರ್ತು, ಹರ,
ಮೃತ್ಯು, ಯಾಮ್ಯ, ಕ್ಷಯಾಂತಕ, ಭಸ್ಮಾಂತಕ, ಬಬ್ರು.
ದಹನ, ಜ್ವಲನ, ಹರಿಹರ, ಖಾದಕ, ಪಿಂಗ, ಉತಾಶನ,
ಜಯರುದ್ರ, ತ್ರಿದಶಾದೀಪ, ಪಿನಾಕಿ, ಶಾಸ್ತ್ರ ಅವ್ಯಯ,
ವಿಭೂತಿ, ಪ್ರಮರ್ಧ, ವಜ್ರದೇಹ, ಬುದ, ಅಜಕಪಾಲಿ,
ಈಶ್ವರ, ರುದ್ರ, ವಿಷ್ಣು, ಬ್ರಹ್ಮ, ಹಾರ್ತ, ಕುಷ್ಮಾಂಡ,
ಕಾಲಾಗ್ನಿ, ರುದ್ರ, ಪ್ರಳಯಕಾಲ, ಮಹಾರುದ್ರ,
ಅಂತೂ ಇನ್ನೂರಾ ಇಪ್ಪತ್ತುನಾಲ್ಕು, ಭುವನಧ್ವ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೮೯
ಇನ್ನು ಮೂವತ್ತಾಱು ತತ್ವಂಗಳುತ್ಪತ್ಯವದೆಂತೆಂದಡೆ-
ಪರಶಿವತತ್ವ ತಾನೆ ತನ್ನ ಲೀಲಾವಿನೋದಕ್ಕೆ ಸಕಲ ನಿಃಕಲ ತತ್ವವಾಯಿತ್ತು.
ಆ ನಿಃಕಲ ತತ್ವದಲ್ಲಿ ದಶತತ್ವ ಉತ್ಪತ್ಯವದೆಂತೆಂದಡೆ-
ಪರಾಶಕ್ತಿ ಸದಾಶಿವ ಈಶ್ವರ ಶುದ್ಧವಿದ್ಯೆ ಮಾಯೆ ಕಾಲ ನಿಯತಿ
ಕಲೆ ವಿದ್ಯೆ ರಾಗ ಈ ದಶ ತತ್ವಂಗಳು ನಿಃಕಲತತ್ವದಲ್ಲಿ ಉತ್ಪತ್ಯವಾಯಿತ್ತು.
ಇನ್ನು ಸಕಲತತ್ವದಲ್ಲಿಯ ಇಪ್ಪತ್ತುನಾಲ್ಕು ತತ್ವ, ಉತ್ಪತ್ಯವದೆಂತೆಂದಡೆ :
ಗುಣತ್ರಯ ಬುದ್ಧಿ ಅಹಂಕಾರ ಚಿತ್ತ ಶ್ರೋತ್ರ ತ್ವಕ್ಕು ಚಕ್ಷು
ಜಿಹ್ವೆ ಘ್ರಾಣ ವಾಕ್ಕು ಪಾಣಿ ಪಾದ ಪಾಯು ಗುಹ್ಯ ಶಬ್ದ ಸ್ಪರ್ಶ
ರೂಪು ರಸ ಗಂಧ ಆಕಾಶ ವಾಯು ತೇಜ ಅಪ್ಪು ಪೃಥ್ವಿ
ಈ ಇಪ್ಪತ್ತುನಾಲ್ಕು ತತ್ವಂಗಳು ಸಕಲತತ್ವದಲ್ಲಿ ಉತ್ಪತ್ಯವಾಯಿತ್ತು.
ಆ ಸಕಲ ನಿಃಕಲ ತತ್ವ ಮೊದಲಾಗಿ ರಾಗ ಪೃಥ್ವಿತತ್ವ ಕಡೆಯಾಗಿ
ಈ ಮೂವತ್ತಾಱು ತತ್ವವು ತತ್ವಾಧ್ವ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೯೦
ಇನ್ನು ಷಟ್‌ ಕಲೆಗಳುತ್ಪತ್ಯವದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ಜ್ಯೋತಿ ಸ್ವರೂಪದಲ್ಲಿ ಶಾಂತ್ಯತೀತ್ತೋತ್ತರಕಲೆ ಉತ್ಪತ್ಯ.
ಆ ಪ್ರಣವದ ದರ್ಪಣಾಕಾರದಲ್ಲಿ ಶಾಂತ್ಯತೀತಕಲೆ ಉತ್ಪತ್ಯ.
ಆ ಪ್ರಣವದ ಅರ್ಧಚಂದ್ರಕದಲ್ಲಿ ಶಾಂತಿ ಕಲೆ ಉತ್ಪತ್ಯ.
ಆ ಪ್ರಣವದ ಕುಂಡಲಾಕಾರದಲ್ಲಿ ವಿದ್ಯಾ ಕಲೆ ಉತ್ಪತ್ಯ.
ಆ ಪ್ರಣವದ ದಂಡಕಸ್ವರೂಪದಲ್ಲಿ ಪ್ರತಿಷ್ಠಾ ಕಲೆ ಉತ್ಪತ್ಯ.
ಆ ಪ್ರಣವದ ತಾರಕಸ್ವರೂಪದಲ್ಲಿ ನಿವೃತ್ತಿಕಲೆ ಉತ್ಪತ್ಯ.
ಅಂತು ಈ ಷಟ್‌ಕಲಾ ನಾಮಂಗಳು ಕಲಾಧ್ವ ನೋಡಾ.
ಅಪ್ರಮಾಣ ಕೂಡಲಸಂಗಮದೇವ.

೩೯೧
ಇನ್ನು ಷಡಧ್ವದ ವರ್ತನೆ ಅದೆಂತೆಂದಡೆ :
ಆಧಾರಚಕ್ರದ ಚತುರ್ದಳ ಪದ್ಮದ ಮಧ್ಯದಲ್ಲಿಹ ಮಂತ್ರ
ಸದ್ಯೋಜಾತ ಮಂತ್ರ
ಅಲ್ಲಿಹ ಪದ ವ್ಯೋಮ ವ್ಯಾಪಿ ವ್ಯೋಮರೂಪಾಯ
ಸರ್ವವ್ಯಾಪಿನೆ ಶಿವಾಯ ವೆಂಬ ನಾಲ್ಕು ಪದ
ಅಲ್ಲಿಹ ವರ್ಣ ವ ಶ ಷ ಸ ಎಂಬ ನಾಲ್ಕು ವರ್ಣ.
ಅಲ್ಲಿಹ ಭುವನ : ಅನಾಶ್ರಿತ ಅನಾದ ಅನಂತ
ವ್ಯೋಮ ರೂಪ ವ್ಯಾಪಿನಿ ಊರ್ಧ್ವಗಾಮಿನಿ
ಮೋಚಿಕಾ ದೋಚಿಕಾ ದೀಪಿಕೋದೀಪ
ಶಾಂತ್ಯಾತೀತೆ ಶಾಂತಿ ವಿದ್ಯೆ ಪ್ರತಿಷ್ಠೆ ನಿವೃತ್ತಿ
ಸದಾಶಿವ ಅಚಿಂತ್ಯವೆಂಬ ಹದಿನಾಱು ಭುವನ
ಅಲ್ಲಿಹ ತತ್ತ್ವ : ಪೃಥ್ವಿ ಅಪ್ಪು ತೇಜ ವಾಯು
ಆಕಾಶವೆಂಬ ಪಂಚ ತತ್ತ್ವ,
ಅಲ್ಲಿಹ ಕಲೆ : ನಿವೃತ್ತಿಕಲೆ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೯೨
ಅಲ್ಲಿಂದ ಮೇಲೆ ಸ್ವಾಧಿಷ್ಠಾನ ಚಕ್ರ
ಷಡ್ದಳ ಪದ್ಮದ ಮಧ್ಯದಲ್ಲಿಹ ಮಂತ್ರ ವಾಮದೇವ ಮಂತ್ರ,
ಅಲ್ಲಿಹ ಪದ ಈಶಾನ್ಯ ಮೂರ್ದ್ನಾಯ ತತ್ಪುರುಷ ವಕ್ತ್ರಾಯ
ಅಘೋರ ಹೃದಯಾಯ ವಾಮದೇವ ಗುಹ್ಯಾಯ
ಸದ್ಯೋಜಾತ ಮೂರ್ತಯೆ ಓಂ ನಮೋನಮಃ
ಎಂಬ ಆಱು ಪದ.
ಅಲ್ಲಿಹ ವರ್ಣ, ಬ ಭ ಮ ಯ ರ ಲ
ಎಂಬ ಆಱು ವರ್ಣ.
ಅಲ್ಲಿಹ ಭುವನ, ಸೂಕ್ಷ್ಮ ವಾಮದೇವ.
ಸತ್ಯಾನಂದ, ಸರ್ವೇಶ್ವರ, ಶಿವೋತ್ತಮ, ನಿತ್ಯಾನಂದ,

[1]ಏಕ[2] ನೇತ್ರ ಸದಾನಂದ ಏಕರುದ್ರ ನಿಜಾನಂದ
ತ್ರಿಮೂರ್ತಿ ಶ್ರೀಕಂಠ ಶಿಖಂಡಿ ವಾಮಜೇಷ್ಠ
ಕಾದ್ರಿ ಕರಂದಿಕರಣಿ ಕಾಳಿ ಬಲವಿಕರಣಿ
ಸರ್ವಭೂತದಮನಿ ಬಲಪ್ರಮದಿನಿ ಮನೋನ್ಮನಿ
ಅಂಗುಷ್ಠ ಮಾತ್ರ ಭುವನಿ ಮಹಾಭುವನ
ಏಕಿಶಾನವೆಂಬ ಎಪ್ಪತ್ತು ನಾಲ್ಕು ಭುವನ
ಅಲ್ಲಿಹ ತತ್ತ್ವಶಬ್ದ ಸ್ಪರ್ಶ ರೂಪು ರಸ ಗಂಧವೆಂಬ ಪಂಚತತ್ತ್ವ
ಅಲ್ಲಿಹ ಕಲೆ, ಪ್ರತಿಷ್ಠಾ ಕಲೆ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೯೩
ಅಲ್ಲಿಂದ ಮೇಲೆ ಮಣಿಪೂರಕ ಚಕ್ರದ
ದಶದಳ ಪದ್ಮದ ಮಧ್ಯದಲ್ಲಿಹ ಮಂತ್ರ ಅಘೋರ ಮಂತ್ರ.
ಅಲ್ಲಿಹ ಪದ, ಗುಹ್ಯಾತಿ ಗುಹ್ಯಾಯ ಗೌಪ್ತ್ರೆ ಅನಿಧನಾಯ
ಸರ್ವಯೋಗಾಧಿ ಕೃತಾಯ ಜ್ಯೋತಿ ರೂಪಾಯ
ಪರಮೇಶ್ವರ ಪರಾಯ ಚೇತನ ಅಚೇತನ ವೈಮಿನ್
ಎಂಬ ಎಂಬತ್ತು ಪದ
ಅಲ್ಲಿಹ ವರ್ಣ ಡ ಢ ಣ ತ ಥ ದ ಧ ಪ ಫ ಎಂಬ ದಶ ವರ್ಣ ಹತ್ತು ವರ್ಣ
ಅಲ್ಲಿಹ ಭುವನ ಏಕ ಪಿಂಗಳೆ ಕ್ಷಣ ಉದ್ಭವ ವಾಮದೇವ ಮಹಾದೇವ
ಶಿವಭೇದ ಏಕ ವೀರ, ಪಂಚಾಂತಕ ಶೂರ ಸಂವರ್ತನೆ
ಜ್ಯೋತಿ ಚಂಡುಕ್ರೋಧ ಆನಂದ ಏಕನೇಕಾಭವ್ಯ
ಮಂಗಳ ಅಜ ಉಮಾಪತಿ ಏಕಧೀರ ಪ್ರಚಂಡ
ಈಶಾನ್ಯ ಉಗ್ರ ಭೀಮ ಭೌಮ ಕೌಮಾರಿ ವೈಷ್ಣವ
ಬ್ರಾಹ್ಮಣ ರೈಭವಕೃತ ಆಕೃತ ಯಾಮ್ಯ ಪ್ರಜೇಶ ಸೌಮ್ಯ
ಇಂದ್ರ ಗಾಂಧರ್ವ ಯಕ್ಷ ರಾಕ್ಷಸ ಪೈಶಾಚಿಕ ಎಂಬ ನಾಲ್ವತ್ತು ಭುವನ.
ಅಲ್ಲಿಹ ತತ್ತ್ವ ವಾಕು ಪಾಣಿ ಪಾದ ಪಾಯು ಗುಹ್ಯವೆಂಬ ಪಂಚತತ್ತ್ವ
ಅಲ್ಲಿಹ ಕಲೆ ವಿದ್ಯಾ ಕಲೆ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೯೪
ಅಲ್ಲಿಂದ ಮೇಲೆ ಅನಾಹತ ಚಕ್ರದ ದ್ವಾದಶದಳ ಪದ್ಮ
ಮಧ್ಯದಲ್ಲಿಹ ಮಂತ್ರ ತತ್ಪುರುಷ ಮಂತ್ರ.
ಅಲ್ಲಿಹ ಪದ ವ್ಯಾಪಿನ್ ಅರೂಪಿನ್ ನಿರೂಪಿನ್ ಪ್ರಪು
ಪ್ರಥಮ ತೇಜಸ್ತೇಜ ಜೋತಿರ್ಜೋತಿ ಅರೂಪ
ಅನಿಲಿನ ಅಧೂಮವೆಂಬ ಹನ್ನೆರಡು ಪದ
ಇಲ್ಲಿಹ ವರ್ಣ ಕ ಖ ಗ ಘ ಙ ಚ ಛ ಜ ಝ ಞ ಟ ಠ
ಎಂಬ ಹನ್ನೆರಡು ವರ್ಣ.
ಅಲ್ಲಿಹ ಭುವನ ಸ್ಥಲೇಶ್ವರ ಸ್ಥೂಲೇಶ್ವರ ಶಂಖಕರ್ನ ಕಾಳಾಂಜನ
ಮಂಡಲೇಶ್ವರ ಮಾಕೂಟ ದ್ವಿರಂಡ ಛಗಚಂದ ಸ್ಥಾಣು ಸ್ವರ್ಣಾಕ್ಷ
ಭದ್ರಕರ್ಣ ಮಹಾಲಯ ಅವಿಮುಕ್ತ ರುದ್ರ
ಕೋಟಿ ವಸ್ತ್ರಪದಂ ಭೀಮೇಶ್ವರ.
ಮಹೀಂದ್ರ ಅಷ್ಟಹಾಸ ವಿಮಲೇಶ್ವರ ನಖಲ ನಾಖಲ
ಕುರುಕ್ಷೇತ್ರ ಭೈರವ ಕೈದಾರ ಮಹಾಬಲ
ಮಧ್ಯಮೇಶ್ವರ, ಮಾಹೇಂದ್ರಕೇಶ್ವರ, ಜಲಭೇಶ್ವರ,
ಶ್ರೀಶೈಲ, ಹರಿಶ್ಚಂದ್ರ, ಅಕುಲಿಶ, ಮುಂಡಿ, ಚಾರಭೂತಿ,
ಆಷಾಢಿ, ಪೌಷ್ಕರ, ನೈಮಿಷ, ಪ್ರಭಾಸ, ಅಮರೇಶ್ವರ,
ಭದ್ರಕಾಳ, ವೀರಭದ್ರ, ತ್ರಿಲೋಚನ, ವಿಪುಪ್ಸು
ಭವ, ವಿವಾಹೆ, ತ್ರಿದಶೇಶ್ವರ, ತ್ರಿಯಕ್ಷಗಣಾ ಎಂಬ
ನಾಲ್ವತ್ತೆಂಟು ಭುವನ.
ಅಲ್ಲಿಹ ತತ್ವ-ಶ್ರೋತ್ರ, ತ್ವಕ್ಕು, ಚಕ್ಷು, ಜಿಹ್ವೆ, ಘ್ರಾಣವೆಂಬ ಪಂಚತತ್ವ.
ಅಲ್ಲಿಹಕಲೆ, ಶಾಂತಿಕಲೆ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೯೫
ಅಲ್ಲಿಂದ ಮೇಲೆ ವಿಶುದ್ಧಿಚಕ್ರದ ಷೋಡಶ ದಳದ
ಪದ್ಮದ ಮಧ್ಯದಲ್ಲಿಹ ಮಂತ್ರ ಈಶಾನ್ಯ ಮಂತ್ರ.
ಅಲ್ಲಿಹ ಪದ ಅಭಸ್ಮ ಅನಾದೆ ಅನಾದೆ ನಾ ನಾ ನಾ
ಧೂ ಧೂ ಧೂ ಓಂ ಭೂಃ ಓಂ ಭುವಃ ಓಂ ಸ್ವಾಹಾ
ಅ ನಿ ಧ ನಾ ನಿದನೋದ್ಭವ ಶಿವ ಶರ್ವ ಎಂಬ ಹದಿನಾಱು ಪದ.
ಅಲ್ಲಿಹ ವರ್ಣ, ಅ ಆ ಇ ಈ ಉ ಊ ಋ ಋ ಇ ಞ ಎ ಐ ಒ ಔ ಅಂ ಅಃ ಎಂಬ ಹದಿನಾಱು ವರ್ಣ.
ಅಲ್ಲಿಹ ಭುವನ, ದೃಕ್ಷ ವಿಭು ರಿಂಭು ದೌಷ್ಟ್ರಿ ವಜ್ರ ಸರ್ವ ಸುರೇಶಾನ ಫಣೀಶ
ಉದಂಬರೀಶ ಗ್ರಸನ ಮಾರುತಾಶನ ಕ್ರತು
ಮರ್ದನ ಆನಂದ ವೃಷಧರ ಬಲಿಪ್ರಿಯ ಭೂತಪಾಲ
ಜೇಷ್ಠ ಸರ್ವ ಸೂರೇಶಾನ ವೇದಪಾರಗ ಜ್ಞಾನ ಭೂತ
ಸರ್ವಜ್ಞಾ ಈಶ ಸರ್ವವಿದ್ಯಾಧಿಪ ಪ್ರಕಾಮದ ಪ್ರಸಿದ್ಧಡನ
ಶ್ರೀಧರ ಲಕ್ಷ್ಮೀಧರ ಜಟಾಧರ ಸೌಮ್ಯದೇಹ ಧನ್ಯರೂಪ
ನಿಧೀಶ ಮೇಘವಾಹನ ಕಪರ್ದಿ ಪಂಚಶಿಖಿ ಪ್ರಪಂಚಾಂತಕ
ಕ್ಷಯಾಂತಕ ತಿಕ್ಷ ಸುಸೂಕ್ಷ್ಮ ವಾಯುವೇಗ ಲಘು ಶೀಘ್ರ
ಸುನಾದ ಮೇಘನಾದ ಜ್ವಲಾಂತಕ ದೀರ್ಘಬಾಹು
ಜಯ ಭದ್ರ ಶ್ವೇತ ಮಹಾಬಲ ಪಾಶಹಸ್ತ ಅತಿಬಲ
ಮಹಾಬಲ ವಾರುಣೀಕ ದೌಷ್ಠ್ರಿ ವಲೋಹಿತ
ಧೂಮ್ರ ವಿರೂಪಾಕ್ಷ ಊರ್ಧ್ವಶೇಷ ಉಭಯಾನಖ
ಕ್ರೂರ ದೃಷ್ಟಿ ಹಂತ ಮಾರಣ ನಿರುತಿ ಧರ್ಮಪರೀಣ
ನಿಯೋಕ್ತೃ ಎಂಬ ಅಱುವತ್ತುನಾಲ್ಕು ಭುವನ
ಅಲ್ಲಿಹ ತತ್ವಗುಣತ್ರಯ ಬುದ್ಧಿ ಅಹಂಕಾರ ಚಿತ್ತ
ಸಕಲವೆಂಬ ಪಂಚತತ್ವ
ಅಲ್ಲಿಹ ಕಲೆ ಶಾಂತ್ಯಾತೀತ ಕಲೆ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೯೬
ಅಲ್ಲಿಂದ ಮೇಲೆ ಆಜ್ಞಾಚಕ್ರದ ಚತುರ್ದಳ ಪದ್ಮದ
ಮಧ್ಯದಲ್ಲಿಹ ಮಂತ್ರ ಹೃದಯ ಶಿರ ಶಿಖಾ ಕವಚ
ನೇತ್ರಾಸ್ತ್ರಂಗಳೆಂಬ ಆಱು ಮಂತ್ರ.
ಅಲ್ಲಿಹ ಪದ ಪರಮಾತ್ಮ, ಮಹೇಶ್ವರ, ಮಹಾತೇಜ, ಮಹಾತೇಜ
ಯೋಗಾಧಿಪತೆ ಮುಂಚ ಮುಂಚ ಪ್ರಮದ
ಶರ್ವ ಶರ್ವ ಭವ ಭವ ಭವೋದ್ಭವ ಸರ್ವಭೂತ
ಸುಖಪ್ರದ ಸರ್ವಸಾನಿಧ್ಯಕರ ಬ್ರಹ್ಮ ವಿಷ್ಣು ರುದ್ರ
ಪರ ಅರ್ಚಿತಾರ್ಚಿತ ಅಸ್ತುತಾ ಸ್ತುತಾ
ಪೂರ್ವಸ್ಥಿತ ಪೂರ್ವಸ್ಥಿತ ಸಾಕ್ಷಿ ಸಾಕ್ಷಿ ತರು ತರು
ಪತಂಗ ಪತಂಗ ಪಿಂಗ ಪಿಂಗ ಜ್ಞಾನ ಜ್ಞಾನ
ಶಬ್ದ ಶಬ್ದ ಸೂಕ್ಷ್ಮ ಸೂಕ್ಷ್ಮ ಶಿವ ಶರ್ವ ಶರ್ವ
ಓಂನಮಃ ಶಿವಾಯ ಓಂನಮಃ ಶ್ರೀ ಶಿವಾಯ
ನಮೋನಮಃ ಓಂ ಎಂ ನಾಲ್ವತ್ತಾಱು ರುದ್ರ
ಅಲ್ಲಿಹ ವರ್ಣ ಹಂಳಂ ಹಂಕ್ಷಂ ಎಂಬ ನಾಲ್ಕು ವರ್ಣ
ಅಲ್ಲಿಹ ಭುವನ ಕರ್ತೃ ಹರ ಮೃತ್ಯು ಯಾಮ್ಯ
ಕ್ಷಯಾಂತಕ ಭಸ್ಮಾಂತಕ ಬಭ್ರುದಹನ ಜ್ವಲನ
ಹರಿಹರ ಖಾದಕ [3]ಫಿಂ[4]ಗ ಹುತಾಶನ ಜಯರುದ್ರ
ತ್ರಿದಶಾಧಿಪ ಪಿನಾಕಿ ಶಾಸ್ತ್ರ ಅವ್ಯಯ ವಿಭೂತಿ
ಪ್ರಮರ್ಧ ವಜ್ರದೇಹ ಬುಧ ಅಜಕಪಾಲಿ ಈಶ್ವರ
ರುದ್ರ ವಿಷ್ಣು ಬ್ರಹ್ಮ ಹಾಟಕ ಕೂಷ್ಮಾಂಡ
ಕಾಲಾಗ್ನಿ ರುದ್ರ ಪ್ರಳಯಕಾಲ ಮಹಾರುದ್ರನೆಂಬ
ಮುವತ್ತೆರಡು ಭುವನ.
ಅಲ್ಲಿಹ ತತ್ವ ಪರಶಿವ
ಪರಶಕ್ತಿ ಸದಾಶಿವ ಈಶ್ವರ ಶುದ್ಧವಿದ್ಯೆ
[5]ಮಯೋ[6]ಕಾಲ ನಿಯತಿ ಕಲೆ ವಿದ್ಯೆರಾಗವೆಂಬ
ಹನ್ನೊಂದು ತತ್ತ್ವ, ಅಲ್ಲಿಹ ಕಲೆ ಶಾಂತ್ಯಾತೀತೋತ್ತರ ಕಲೆ
ನೋಡಾ, ಅಪ್ರಮಾಣ ಕೂಡಲಸಂಗಮದೇವ.

೩೯೭
ಈ ಷಡ್ವಿಧದಿಂದವೆ ಅನೇಕ ವೇದಂಗಳೆಸಗಿತ್ತು
ಈ ಷಡ್ವಿಧದಿಂದವೆ ಅನೇಕ ಶಾಸ್ತ್ರಂಗಳೆಸಗಿತ್ತು
ಈ ಷಡ್ವಿಧದಿಂದವೆ ಅನೇಕ ಪುರಾಣಂಗಳೆಸಗಿತ್ತು
ಈ ಷಡ್ವಿಧದಿಂದವೆ ಅನೇಕ ಕಾಮಂಗಳೆಸಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೯೮
ಮಂತ್ರಾಧ್ವಪದಾಧ್ವವ ತನ್ನಲ್ಲಿ ತಿಳಿದು
ಅನುಭವಿಸಬಲ್ಲಾತನ ಆಚಾರ್ಯನೆಂಬೆ
ವರ್ಣಾಧ್ವಭುವನಾಧ್ವವ ತನ್ನಲ್ಲಿ ತಿಳಿದು
ಅನುಭವಿಸಬಲ್ಲಾತನ ಆಚಾರ್ಯನೆಂಬೆ !
ತತ್ತ್ವಾಧ್ವ ಕಲಾಧ್ವವ ತನ್ನಲ್ಲಿ ತಿಳಿದು
ಅನುಭವಿಸಬಲ್ಲಾತನ ಆಚಾರ್ಯನೆಂಬೆ !
ಈ ಷಡ್ವಿಧವ ತನ್ನಲ್ಲಿ ತಿಳಿದು ಅನುಭವಿಲಱಿಯದೆ
ಆಚಾರ್ಯರೆಂಬ ಅನಾಚಾರ್ಯರ ಮೆಚ್ಚುವನೆ
ನಮ್ಮ ಅಪ್ರಮಾಣ ಕೂಡಲಸಂಗಮದೇವ.
ಷಡಧ್ವ ಉತ್ಪತ್ಯದ ವರ್ತನೆಯ ವಚನ ಸಮಾಪ್ತ ಶ್ರೀ ಶ್ರೀ ಶ್ರೀ

೩೯೯
ಇನ್ನು ಗುರುಲಿಂಗ ಜಂಗಮವೆಂದು ಸುಳಿವ ಮಹಾತ್ಮರ
ತಾಮಸ ನಿರಸನವ ಮಾಡಿ ನುಡಿದ ವಚನವದೆಂತೆಂದಡೆ :
ಗುರುಲಿಂಗ ಜಂಗಮವೆಂದು ಸುಳಿ[7]ವ ಅಣ್ಣಗಳು ನೀವು ಕೇಳಿರೆ !
ದಾಸಿಯ ಸಂಗವುಳ್ಳನ್ನಕ್ಕ ಗುರುವೆನ್ನಲಾಗದು-
ವೇಶಿಯಸಂಗವುಳ್ಳನ್ನಕ್ಕ ಲಿಂಗವೆನ್ನಬಾರದು
ಪರಸ್ತ್ರೀಯ ಸಂಗವುಳ್ಳನ್ನಕ್ಕ ಜಂಗಮವೆನ್ನಬಾರದು
ಈ ತ್ರಿವಿಧಸಂಗವುಳ್ಳನ್ನಕ್ಕರ ಗುರುಲಿಂಗ ಜಂಗಮವೆನ್ನಬಾರದು
ಅವರ ಪಂಚಮಹಾಪಾತಕರೆಂಬೆ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೦೦
ದಾಸಿಯ ಸಂಗವುಳ್ಳನ್ನಬರ ಗುರುವಿಲ್ಲವೆಂಬ
ಶ್ರುತಿ ದಿಟ ನೋಡಾ !
ವೇಶಿಯ ಸಂಗವುಳ್ಳನ್ನಬರ ಲಿಂಗವಿಲ್ಲವೆಂಬ
ಶ್ರುತಿ ದಿಟ ನೋಡಾ !
ಪರಸ್ತ್ರೀಯ ಸಂಗವುಳ್ಳನ್ನಬರ ಜಂಗಮವಿಲ್ಲವೆಂಬ
ಶ್ರುತಿ ದಿಟ ನೋಡಾ !
ಈ ತ್ರಿವಿಧ ಸಂಗವುಳ್ಳನ್ನಬರ ತ್ರಿವಿಧ ಪ್ರಸಾದವಿಲ್ಲವೆಂಬ
ಶ್ರುತಿ ದಿಟ ನೋಡಾ !
ತ್ರಿವಿಧ ಪ್ರಸಾದವಿಲ್ಲದಾತನೆ ಅನಾಚಾರಿಯೆಂಬ
ಶ್ರುತಿ ದಿಟ ನೋಡಾ !
ಆ ಅನಾಚಾರಿಯೆ ಪಂಚಮಹಾಪಾತಕನೆಂಬ
ಶ್ರುತಿ ದಿಟ ನೋಡಾ !
ಅಪ್ರಮಾಣ ಕೂಡಲಸಂಗಮದೇವ.

೪೦೧
ಹೊನ್ನು ಬಿಡದೆ ಹಿರಿಯರೆಂಬರು,
ಅಲ್ಲಲ್ಲ ನೋಡಾ.
ಹೆಣ್ಣು ಬಿಡದೆ ಹಿರಯರೆಂಬರು,
ಅಲ್ಲಲ್ಲ ನೋಡಾ.
ಮಣ್ಣು ಬಿಡದೆ ಹಿರಿಯರೆಂಬರು,
ಅಲ್ಲಲ್ಲ ನೋಡಾ.
ಈ ತ್ರಿವಿಧವನತಿಗಳೆಯದೆ
ಹಿರಿಯರೆಂಬ ನುಡಿಗೆ ನಾಚರು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೦೨
ಹೊನ್ನಬಿಟ್ಟಡೆ ಹಿರಿಯರೆಂಬೆನೆ?
ಅಲ್ಲಲ್ಲ ನೋಡಾ.
ಹೆಣ್ಣಬಿಟ್ಟಡೆ ಹಿರಿಯರೆಂಬೆನೆ?
ಅಲ್ಲಲ್ಲ ನೋಡಾ.
ಮಣ್ಣಬಿಟ್ಟಡೆ ಹಿರಿಯರೆಂಬೆನೆ?
ಅಲ್ಲಲ್ಲ ನೋಡಾ.
ಈ ತ್ರಿವಿಧವು ಒಂದಬಿಟ್ಟೊಂದಿರದಾಗಿ
ಈ ತ್ರಿವಿಧವನತಿಗಳೆದು ಮಹಾಘನದಲ್ಲಿ
ಮನಲಿಯ್ಯವಾಗಿ ಸುಳಿವ ನಿಜ ಸುಳಿವಿಂಗೆ
ನಮೋ ನಮೋ ಎಂಬೆ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೦೩
ಹೆಣ್ಣೆಂಬ ಭೂತದ ಸೋಂಕಿ ಹೆಣನಾಗಿಹ ಗುರುಗಳು
ಗುರುವಲ್ಲವೆಂದುದು ನೋಡಾ, ಶ್ರುತಿಗಳು,
ಹೊನ್ನೆಂಬ ಭೂತವ ಸೋಂಕಿ ಹೊಲೆಯನಾಗಿಹ ಗುರುಗಳು
ಗುರುವಲ್ಲವೆಂದುದು ನೋಡಾ, ಶ್ರುತಿಗಳು.
ಕಾಮವೆಂಬ ಭೂತವ ಸೋಂಕಿ ಕರ್ಮಿಯಾಗಿಹ ಗುರುಗಳು
ಗುರುವಲ್ಲವೆಂದುದು ನೋಡಾ, ಶ್ರುತಿಗಳು.
ಪಾಶವೆಂಬ ಭೂತವ ಸೋಂಕಿ ಪಾಪಿಯಾಗಿಹ ಗುರುಗಳು
ಗುರುವಲ್ಲವೆಂದುದು ನೋಡಾ, ಶ್ರುತಿಗಳು.
ಈ ಪಂಚಭೂತಂಗಳನತಿಗಳದು ಮನವು ಮಹಾಘನದಲ್ಲಿ ನಿಂದ
ನಿಜಗುರುವಿಂಗೆ ನಮೋ ನಮೋ[8]ಯೆನುತಿದ್ದುದು[9] ನೋಡಾ ಶ್ರುತಿಗಳು,
ಅಪ್ರಮಾಣ ಕೂಡಲಸಂಗಮದೇವ.


[1]     ಐಕ್ಯ (ತಾ.ಪ್ರ. ೫೮೬)

[2]

[3]      ವಿ (ತಾಪ್ರ ೫೮೬)

[4]

[5]     ಮಾದಿ (ತಾ.ಪ್ರ. ೭೬)

[6]

[7]      +ಸು (ತಾಪ್ರ ೭೬)

[8]     ಎಂದುದು (ತಾ.ಪ್ರ. ೭೬)

[9]