೪೯೭
ಮೇರುಗಿರಿ ಶಿಖರ ಪಶ್ಚಿಮದ್ವಾರದಲ್ಲಿ ಎರಡು ಗೂಬೆ ಹುಟ್ಟಿತ್ತು.
ಆ ಎರಡೂ ಗೂಬೆಯು ಏಕವಾಗಿ ಅಕಾರ ಉಕಾರ ಮಕಾರವ ನುಂಗಿತ್ತು.
ನಾದ ಬಿಂದು ಕಳೆಯ ನುಂಗಿ ಕಲಾತೀತವಾಗಿ ಅತ್ತತ್ತ ಹಾರಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.
೪೯೮
ಮೇರುಗಿರಿ ಶಿಖರ ಪಶ್ಚಿಮ ದ್ವಾರದ ಮಧ್ಯದಲ್ಲಿ
ನಿರಾಳವೆಂಬ ಮಹಾಗಿರಿಯೊಂದು ನೋಡಾ.
ಆ ಮಹಾಗಿರಿಯ ಶಿಖರದ ತುದಿಯಲ್ಲಿ
ನಿರಂಜನವೆಂಬ ಕದಳಿಯುಂಟು ನೋಡಾ.
ಆ ಕದಳಿಯ ಒಳಹೊಕ್ಕು ನೋಡಲು
ನಿರಂಜನಾತೀತವೆಂಬ ಲಿಂಗವ ಕಂಡು
ಸ್ವಯಲಿಂಗಿಯಾದನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.
೪೯೯ ೫೦೦ ೫೦೧ ೫೦೨ ೫೦೩ ೫೦೪ ೫೦೫ ೫೦೬ ೫೦೭ ೫೦೮ ೫೦೯ ೫೧೦ ೫೧೧ ೫೧೨ ೫೧೨ ೫೧೪ ೫೧೬ ೫೧೭ ೫೧೮ ೫೧೯ ೫೨೦ ೫೨೧ ೫೨೨ * * ಈ ವಚನಾನುಭಾವದ ಹೃದಯವನಱಿದಡೆ, ಪಠಿಸಿದಡೆ ಸಾಲೋಕ್ಯ
ನಾದ ಬಿಂದು ಕಲಾತೀತವಾಗಿಹ ಜ್ಯೋತಿರ್ಮಯವಾಗಿಹ ಲಿಂಗವ
ಕಿಂಚಿತ್ಮಾತ್ರ ಧ್ಯಾನಿಸಿದರೆ ಜನನ ಮರಣವಿಲ್ಲವೆಂಬ
ಅಣ್ಣಗಳು ನೀವು ಕೇಳಿರೆ,
ನವಣೆಯ ಮರಿಯಾದೆ ನೆನದರು ಮರದರು; ಅಱಿವಲ್ಲ.
ನೆನಹು ಮರಹು ಎರಡ
ಅಪ್ರಮಾಣ ಕೂಡಲಸಂಗಮದೇವ.
ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ ನಾಲ್ಕು ದೇಶವ ತಿರುಗಿದಡೆ
ಅಷ್ಟಾಷಷ್ಠಿಕೋಟಿ ತೀರ್ಥಂಗಳಲ್ಲಿ ಸ್ನಾನವ ಮಾಡಿದಡೆ
ಸಂಸಾರವೆಂಬ ದೃಮ ನಾಶವಾಗುವದೆಂಬರು ನೋಡಾ,
ಅಪ್ರಮಾಣ ಕೂಡಲಸಂಗಮದೇವ.
ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ ನಾಲ್ಕು ದೇಶವ ತಿರುಗಿದಡೇನು ಫಲವಿಲ್ಲ
ಅಷ್ಟಾಷಷ್ಠಿಕೋಟಿ ತೀರ್ಥಂಗಳಲ್ಲಿ ಸ್ನಾನವ ಮಾಡಿದಡೂ
ಜನನ ಮರಣ ಪುಣ್ಯ ಪಾಪಂಗಳು ಬಿಡವು.
ಅದೆಂತೆಂದಡೆ :
ಅನೇಕ ಕಾಲವು ಅಷ್ಟಾಷಷ್ಠಿಕೋಟಿ ತೀರ್ಥಂಗಳೊಳಗೆ
ಮತ್ಸ್ಯ ಕೂರ್ಮ ಮಂಡೂಕಂಗಳಿಹವು.
ಆ ಮತ್ಸ್ಯಕೂರ್ಮ ಮಂಡೂಕಂಗಳಿಗೆ
ಜನನ ಮರಣ ಪುಣ್ಯಪಾಪಂಗಳು ಬಿಡದೆ ಹೋದವು.
ಇದು ಕಾರಣ ಗುರುಪಾದ ಸೇವೆಯ ಮಾಡಿ, ಗುರುಕಾರುಣ್ಯವ ಪಡದು
ನಿರಾಳ ನಿರಂಜನ ನಿರಾಮಯ ನಿರಾಮಯಾತೀತವೆಂಬ
ಗಂಗೆಯಲ್ಲಿ ಮುಳುಗಿದಡೆ
ನಿರಾಳ ನಿರಂಜನ ನಿರಾಮಯ ನಿರಾಮಯಾತೀತವಾಗಿಹುದು
ನೋಡಾ ಜನನವು, ಅಪ್ರಮಾಣ ಕೂಡಲಸಂಗಮದೇವ.
ಚಿತ್ಸ್ವರೂಪವಾಗಿ ತನ್ನೊಳಗೆ ತೀರ್ಥ
ಚಿತ್ಪ್ರಕಾಶವಾಗಿಹುದು ನೋಡಾ.
ಆ ತೀರ್ಥವನಱಿಯದೆ ಹೊರಗೆ ಹರಿವ
ನೀರ ತೀರ್ಥವೆಂದು ಹೋಗುವರು ನೋಡಾ.
ಶುದ್ಧಪ್ರಕಾಶವಾಗಿಹ ತೀರ್ಥವನಱಿಯದೆ
ಹರಿವ ನೀರ ತೀರ್ಥವೆಂದು ಹೋಗುವ ಭವಭಾರಿಗಳಿಗೆ
ಎಂದೆಂದಿಗೂ ಜನನ-ಮರಣ ಬಿಡದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.
ಆ ತೀರ್ಥ ಸೂರ್ಯ ಪ್ರಭೆಗೂ ಬತ್ತಲೀಯವಾಗದು
ಜ್ವಾಲಾಗ್ನಿ ಉಷ್ಣಕೂ ಬತ್ತಲೀಯದು,
ಗಾಳಿ ಬೀಸಿದಡೆ ಅಲ್ಲಾಡದು,
ತೆರೆ ನೊರೆಗಳಿಲ್ಲ, ಹುಳುಗಳಿಲ್ಲ,
ಆಕಾಶದಲ್ಲಿದ್ದು ಬಾಹ ಮಳೆಯಲ್ಲ;
ಪೃಥ್ವಿ ಅಪ್ಪು ತೇಜ ವಾಯು ಆಕಾಶ
ಲಯವಾದಡೂ ಲಯವಿಲ್ಲ,
ಆ ತೀರ್ಥಕ್ಕೆ ಅಂಥ ಚಿತ್ಪ್ರಕಾಶ ತೀರ್ಥವ ಮಹಾಶರಣ ಬಲ್ಲನಲ್ಲದೆ
ಮಿಕ್ಕ ಭವಭಾರಿಗಳೆತ್ತ ಬಲ್ಲರು ನೋಡಾ,
ಅಪ್ರಮಾಣ ಕೂಡಲಸಂಗಮದೇವ.
ತಾನೊಂದು ಕಾಲದಲ್ಲಿ ನಿರಾಮಯವಾಗಿರ್ದನು ನೋಡಾ.
ತಾನೊಂದು ಕಾಲದಲ್ಲಿ ನಿರಾಳವಾಗಿರ್ದನು ನೋಡಾ.
ತಾನೊಂದು ಕಾಲದಲ್ಲಿ ನಿರಂಜನವಾಗಿರ್ದನು ನೋಡಾ.
ತಾನೊಂದು ಅಪ್ರಮಾಣ ಕೂಡಲಸಂಗಮದೇವ.
ತಾನೊಂದು ಕಾಲದಲ್ಲಿ ನಾದ ಬಿಂದು ಕಲೆಯಾದನು.
ತಾನೊಂದು ಕಾಲದಲ್ಲಿ ನಾದದೊಳಗೆ ಸುನಾದವಾದನು.
ತಾನೊಂದು ಕಾಲದಲ್ಲಿ ನಾದದೊಳಗೆ ಬಿಂದುವಾದನು.
ತಾನೊಂದು ಕಾಲದಲ್ಲಿ ನಾದದೊಳಗೆ ಕಲೆಯಾದನು.
ತಾನೊಂದು ಕಾಲದಲ್ಲಿ ನಾದದೊಳಗೆ ನಾದಾತೀತನು ನೋಡಾ,
ನಮ್ಮ ಅಪ್ರಮಾಣ ಕೂಡಲಸಂಗಮದೇವ.
ತಾನೊಂದು ಕಾಲದಲ್ಲಿ ಬಿಂದುವಿನೊಳಗೆ ಬಿಂದುವಾದನು.
ತಾನೊಂದು ಕಾಲದಲ್ಲಿ ಬಿಂದುವಿನೊಳಗೆ ನಾದವಾದನು.
ತಾನೊಂದು ಕಾಲದಲ್ಲಿ ಬಿಂದುವಿನೊಳಗೆ ಕಲೆಯಾದನು.
ತಾನೊಂದು ಕಾಲದಲ್ಲಿ ಬಿಂದುವಿನೊಳಗೆ ಬಿಂದ್ವಾತೀತನಾದನು ನೋಡಾ,
ನಮ್ಮ ಅಪ್ರಮಾಣ ಕೂಡಲಸಂಗಮದೇವ.
ತಾನೊಂದು ಕಾಲದಲ್ಲಿ ಕಲೆಯೊಳಗೆ ಕಲೆಯಾದನು.
ತಾನೊಂದು ಕಾಲದಲ್ಲಿ ಕಲೆಯೊಳಗೆ ನಾದವಾದನು.
ತಾನೊಂದು ಕಾಲದಲ್ಲಿ ಕಲೆಯೊಳಗೆ ಬಿಂದುವಾದನು.
ತಾನೊಂದು ಕಾಲದಲ್ಲಿ ಕಲೆಯೊಳಗೆ ಕಲಾತೀತನಾದನು ನೋಡಾ,
ನಮ್ಮ ಅಪ್ರಮಾಣ ಕೂಡಲಸಂಗಮದೇವ.
ಅಯ್ಯಾ ಆತ್ಮಯೋಗಿಗಳು ದೇಹವಾಸನೆ ಕೆಡದೆ
ಮೋನ ಮುದ್ರೆಯಲ್ಲಿದ್ದಡೇನು?
ಅಯ್ಯಾ ಆತ್ಮಯೋಗಿಗಳು ಜೀವ ಹಮ್ಮು ಕೆಡದೆ
ಮೋನ ಮುದ್ರೆಯಲ್ಲಿದ್ದಡೇನು?
ಅಯ್ಯಾ ಆತ್ಮಯೋಗಿಗಳು ಮನದ ಸಂಚವನಱಿಯದೆ
ಮೋನ ಮುದ್ರೆಯಲ್ಲಿದ್ದಡೇನು?
ಅಯ್ಯಾ ಆತ್ಮಯೋಗಿಗಳು ಭಾವ ಭ್ರಮೆಯಱಿಯದೆ
ಮೋನ ಮುದ್ರೆಯಲ್ಲಿದ್ದಡೇನು?
ಭವಭವಾಂತರದಲ್ಲಿ ಬಹುದು ತಪ್ಪದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.
ನಿರಂಜನ ಜಾಗ್ರದಲ್ಲಿ ನಿಂದಡೆ ಭಕ್ತನೆಂಬೆ.
ನಿರಂಜನ ಸ್ವಪ್ನದಲ್ಲಿ ನಿಂದಡೆ ಮಹೇಶ್ವರನೆಂಬೆ.
ನಿರಂಜನ ಸುಷುಪ್ತಿಯಲ್ಲಿ ನಿಂದಡೆ ಪ್ರಸದಿಯೆಂಬೆ.
ನಿರಂಜನ ತುರ್ಯದಲ್ಲಿ ನಿಂದಡೆ ಪ್ರಾಣಲಿಂಗಿಯೆಂಬೆ.
ನಿರಂಜನ ವ್ಯೋಮದಲ್ಲಿ ನಿಂದಡೆ ಶರಣನೆಂಬೆ.
ನಿರಂಜನ ವ್ಯೋಮಾತೀತದಲ್ಲಿ ನಿಂದಡೆ ಐಕ್ಯನೆಂಬೆ.
ನಿರಂಜನ ವ್ಯೋಮಾತೀತಕತ್ತತ್ತವಾಗಿಹ ಮಹಾಘನ
ನಿರ್ವಾಣಾತೀತವೆ ಅಂಗವಾದ ಮಹಾಶರಣಂಗೆ ಭವ ಹಿಂಗಿತ್ತಾಗಿ
ಅವರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.
ನಕಾರದೊಳಗೆ ಐವತ್ತೊಂದಕ್ಷರವನಱಿಯದೆ
ಎಂತು ಆಚಾರಲಿಂಗ ಸಂಬಂಧಿಯೆಂಬೆ?
ಮಕಾರದೊಳಗೆ ಐವತ್ತೊಂದಕ್ಷರವನಱಿಯದೆ
ಎಂತು ಗುರುಲಿಂಗ ಸಂಬಂಧಿಯೆಂಬೆ?
ಶಿಕಾರದೊಳಗೆ ಐವತ್ತೊಂದಕ್ಷರವನಱಿಯದೆ
ಎಂತು ಶಿವಲಿಂಗ ಸಂಬಂಧಿಯೆಂಬೆ?
ವಕಾರದೊಳಗೆ ಐವತ್ತೊಂದಕ್ಷರವನಱಿಯದೆ
ಎಂತು ಜಂಗಮಲಿಂಗ ಸಂಬಂಧಿಯೆಂಬೆ?
ಯಕಾರದೊಳಗೆ ಐವತ್ತೊಂದಕ್ಷರವನಱಿಯದೆ
ಎಂತು ಪ್ರಸಾದಲಿಂಗ ಸಂಬಂಧಿಯೆಂಬೆ?
ಓಂಕಾರದೊಳಗೆ ಐವತ್ತೊಂದಕ್ಷರವನಱಿಯದೆ
ಎಂತು ಮಹಾಲಿಂಗ ಸಂಬಂಧಿಯೆಂಬೆ?
ಓಂಕಾರದೊಳಗೆ ಸಮಸ್ತ ಭೇದಾದಿಭೇದಂಗಳ ತಿಳಿದು ಮೀಱಿ
ನಿರ್ವಯಲನಱಿಯದೆ,
ಎಂತು ನಿರ್ವಯಲಸಂಬಂಧಿಯೆಂಬೆನಯ್ಯಾ,
ಅಪ್ರಮಾಣ ಕೂಡಲಸಂಗಮದೇವ.
ಪರಸ್ತ್ರೀ ಪರಾರ್ಥ ಪರಾನ್ನಕ್ಕೆ ಸುಳಿವ ಅಣ್ಣಗಳು ನೀವು ಕೇಳಿರೆ,
ಪರಸ್ತ್ರೀಗೆ ಚಕ್ಷು ದಗ್ಧವಾಗಿರಬೇಕು ಕೇಳಿರಣ್ಣಾ.
ಪರಾರ್ಥಕ್ಕೆ ಹಸ್ತ ದಗ್ಧವಾಗಿರಬೇಕು ಕೇಳಿರಣ್ಣಾ.
ಪರಾನ್ನಕ್ಕೆ ಜಿಹ್ವೆ ದಗ್ಧವಾಗಿರಬೇಕು ಕೇಳಿರಣ್ಣಾ.
ನಿಂದೆಸ್ತುತಿಗೆ ಕಿವುಡನಾಗಿರಬೇಕು ಕೇಳಿರಣ್ಣಾ.
ಬಯಲ ಬ್ರಹ್ಮವ ನುಡಿವ ತರ್ಕಿಗಳ ಕಂಡಡೆ
ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು, ಶರಣನು ಕೇಳಿರಣ್ಣಾ-
ಇವರಿಂಗೆ ಭವನಾಸ್ತಿ ನೋಡಾ,
ಅಪ್ರಮಾಣ ಕೂಡಲಸಂಗಮದೇವ.
ಪರಧನ ಪರಸ್ತ್ರೀ ಪರಾನ್ನದಾಸೆಯ ಬಿಡದೆ, ನಿಂದೆ ಸ್ತುತಿಗಳೆರಡು ಸಮವಾಗದೆ,
ಮಾಗಿಯ ಕೋಗಿಲೆಯಂತೆ ಮೂಗನಾಗಿರಲಱಿಯದೆ,
ಬಯಲ ಬ್ರಹ್ಮವ ನುಡಿವ ತರ್ಕಿಗಳ ಕೂಡೆ ತರ್ಕವ ಮಾಡಿ
ಶರಣನೆಂದು ಸುಳಿದಡೆ, ಪಂಚಮಹಾಪಾತಕ ನೋಡಾ,
ಅಪ್ರಮಾಣ ಕೂಡಲಸಂಗಮದೇವ.
ಆಱು ಬೀಜವ ಮೀಱಿ ತೋಱಿತ್ತು ನೋಡಾ ಒಂದು ಬೀಜ,
ಆ ಬೀಜ ಸಪ್ತ ಸಾಗರವ ನುಂಗಿತ್ತು.
ಅಱುವತ್ತಾಱು ಕೋಟಿ ನದಿಗಳ ನುಂಗಿತ್ತು ನೋಡಾ.
ಹದಿನಾಲ್ಕು ಕುದುರೆಯ ನುಂಗಿತ್ತು.
ಮೂಱು ಕೋಣನ ನುಂಗಿತ್ತು ನೋಡಾ,
ಎಂಟಾನೆಯ ನುಂಗಿ ಆ ಬೀಜ ಆಱಾಱು ಈರಾಱು ಶಾಖೆಗಳಾಗಿ
ಅಮೃತ ಫಲರಸತುಂಬಿ, ತೊಟ್ಟಿಟ್ಟುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.
ಬಣ್ಣವಿಲ್ಲದ ಪಕ್ಷಿ ಬಯಲ ತತ್ತಿಯನಿಕ್ಕಿತ್ತು ನೋಡಾ.
ಆ ಬಯಲ ತತ್ತಿಗೆ ತುಪ್ಪುಳು ಬಾರದೆ
ಹದಿನಾಲ್ಕು ಗಿಣಿಗಳ ಕೂಡಿಯಾಡಿತ್ತು.
ಆ ಬಯಲ ತತ್ತಿಗೆ ಪಕ್ಕ ಬಂದು ಹಾರಿ
ನಮ್ಮ ಅಪ್ರಮಾಣ ಕೂಡಲಸಂಗನ ಕೂಡಿತ್ತು.
೫೧೫
ಅಂಧಕಾರವಾಗಿಹ ಕತ್ತಲೆಯೊಳು ಮಹಾಮೇರುವಿಹುದು ನೋಡಾ.
ಆ ಮಹಾಮೇರುವ ಉದಯಾಸ್ತಮಯವಾಗಿಹ ಚಂದ್ರಸೂರ್ಯರು ತಿರಗುವರು.
ಆ ಚಂದ್ರ ಸೂರ್ಯರ ದೆಸೆಯಿಂದ ಇರುಳು ಹಗಲೆಂಬ ವೃಕ್ಷ ಹುಟ್ಟಿ
ಆ ವೃಕ್ಷಕ್ಕೆ ಅಱವತ್ತು ಶಾಖೆಗಳಾದವು ನೋಡಾ.
ಒಂದು ಶಾಖೆಗಳಲ್ಲಿ ಮುನ್ನೂಱಱವತ್ತು ಮುನ್ನೂಱಱವತ್ತು
[3]ಗೂಬೆ[4]ಗಳು ಕುಳಿತು ಕೂಗುತ್ತಿಹವು ನೋಡಾ,
ಅಪ್ರಮಾಣ ಕೂಡಲಸಂಗಮದೇವ.
ಅಂದು ಮೊದಲಾಗಿ ಇಂದು ಕಡೆಯಾಗಿ
ಆ ಪರಾಪರದಲ್ಲಿ ಲಿಯ್ಯವಾದ ಶರಣರಿಗು
ಅಂಥಾದಿಂಥಾದೆಂದು ಹೇಳಬಾರದು.
ಉಪಮಾತೀತವ ಹೇಗಿದ್ದುದೆಂದಡೆ ಹಾಂಗೆ ಇದ್ದುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.
ರೂಪಿಲ್ಲದ ಪುಸ್ತಕದ ಬರಹವ
ಕಣ್ಣಿಲ್ಲದ ಕುರುಡನು ಕಂಡು ತೋಱಿದನು.
ಬಾಯಿಲ್ಲದ ಮೂಗನು ಓದಿದನು.
ಕಿವಿಯಿಲ್ಲದ ಕಿವುಡ ಕೇಳಿ ಪರಿಣಾಮಿಸಿದ.
ತಲೆಯಿಲ್ಲದ [5]ಮುಂಡ[6]ನು ನಿಶ್ಚೈಸಿದನೆಂದು
ನೆಲೆಯಿಲ್ಲದವ ಹೇಳಿದನು ನೋಡಾ.
ಅಪ್ರಮಾಣ ಕೂಡಲಸಂಗಮದೇವ.
ಓಂಕಾರವೆಂಬ ಬಾವಿಯೊಳಗೆ ಒಂದು ಮರ ಹುಟ್ಟಿತ್ತು ನೋಡಾ.
ಆ ಮರ ಮೂಱೇಳು ಸಾವಿರದರುನೂಱು ಕೊಂಬುಗಳಾದವು ನೋಡಾ.
ಏಳುಸಾವಿರದಿನ್ನೂಱು ಕೊಂಬು ಮುರಿದು ಬಿದ್ದವು ನೋಡಾ.
ಪೃಥ್ವಿ ಜಲದಲ್ಲಿ ಮುದ್ದೆಯಾಯಿತ್ತು;
ಆ ಹಣ್ಣ ಸವಿಯಬಲ್ಲಾತನು ಮಹಾ ಶರಣ ನೋಡಾ.
ಅಪ್ರಮಾಣ ಕೂಡಲಸಂಗಮದೇವ.
ತತ್ವ ಮೂಱಱಾದಿಯನಱಿದು
ಮೂಱರೊಳಗೆ ಮೂವತ್ತಾಱು ತತ್ತ್ವವ ಭೇದಿಸಿ,
ಆ ಮೂವತ್ತಾಱು ತತ್ತ್ವದೊಳಗೆ
ತ್ವಂ ಪದತತ್ತ್ವದ ಅಸಿಪದಂಗಳನಱಿದು
ಅಕಾರ ಉಕಾರ ಮಕಾರವ ತಿಳಿದು,
ಅಕಾರ ಉಕಾರ ಮಕಾರದಲ್ಲಿ
ತ್ವಂ ಪದತತ್ತ್ವದ ಅಸಿಪದಂಗಳ
ಅಕಾರ ಉಕಾರ ಮಕಾರದಲ್ಲಿ ಅಡಗಿಸಿ,
ಆ ಪ್ರಣವದ ಶಿರೋಮಧ್ಯದಲ್ಲಿಹುದೆ ಜ್ಯೋತಿರ್ಮಯ ಲಿಂಗ.
ಆ ಜ್ಯೋತಿರ್ಮಯ ಲಿಂಗವನಱಿದ ಶರಣ
ಜ್ಞಾನಿಯೆಂಬೆನೆ ಜ್ಞಾನಿಯಲ್ಲ, ಅಜ್ಞಾನಿಯೆಂಬೆನೆ ಅದಕ್ಕೆ ಮುನ್ನವೆ ಅಲ್ಲ,
ದ್ವೈತಿಯೆಂಬೆನೆ ದ್ವೈತಿಯಲ್ಲ, ಅದ್ವೈತಿಯೆಂಬೆನೆ ಅದ್ವೈತಿಯಲ್ಲ.
ಶೂನ್ಯನೆಂಬೆನೆ ಶೂನ್ಯನಲ್ಲ, ನಿಃಶೂನ್ಯನೆಂಬೆನೆ ನಿಃಶೂನ್ಯನಲ್ಲ,
ನಿಮ್ಮ ಶರಣನ ನಿಲವ ನೀನೆ ಬಲ್ಲೆಯಯ್ಯಾ,
ಅಪ್ರಮಾಣ ಕೂಡಲಸಂಗಮದೇವ.
ತ್ರಿಪುರಂಗಳ ಸಂಹಾರವ ಮಾಡಿ ಉದಯಕ್ಕೆ ಹುಟ್ಟಿದಾತನೆ ದಿವ್ಯಯೋಗಿ.
ಅಸ್ತಮಾನಕ್ಕೆ [7]ಸಾ[8]ಯದಾತನೆ ಪರಮ ಯೋಗಿ.
ಈ ಎರಡರ ಭೇದವನಱಿದು ಅನುಭವಿಸಬಲ್ಲಾತನೆ
ಪರಮಾನಂದ ಯೋಗಿ ನೋಡಾ,
ಅಪ್ರಮಾಣ ಕೂಡಲಸಂಗಮದೇವ.
ಎನ್ನ ಮನ ಬುದ್ಧಿ ಚಿತ್ತ ಅಹಂಕಾರವೆಂಬ ಭೂಮಿಯ ಮೇಲೆ
ತಮ್ಮ ಕೃಪಾದೃಷ್ಟಿಯೆಂಬ ಗೋಮಯದಲ್ಲಿ
ಸ್ವಯಂಪ್ರಕಾಶವೆಂಬ ಅಗ್ಘವಣಿಯಂ ನೀಡಿ,
ಸಮ್ಮಾರ್ಜನೆಯಂ ಮಾಡಿ,
ಎನ್ನ ಅಷ್ಟಮದಂಗಳ ಕುಟ್ಟಿ ರಂಗವಲ್ಲಿಯನಿಕ್ಕಿ,
ನಮಃ ಶಿವಾಯವೆಂಬ ಬೀಜವಂ ಸುರಿದು,
ನಿರಂಜನ ಪ್ರಣವ ಅವಾಚ್ಯಪ್ರಣವ ಕಲಾಪ್ರಣವ
ಅನಾದಿಪ್ರಣವ ಆದಿ ಪ್ರಣವವೆಂಬ ಪಂಚ ಕಳಸಂಗಳಲ್ಲಿ
ನಿರಂಜನಾತೀತವೆಂಬ ಉದಕವಂ ತುಂಬಿ
ಪಂಚಾಕ್ಷರವೆಂಬ ಬೀಜದ ಮೇಲೆ
ಪಂಚ ಪ್ರಣವವೆಂಬ ಪಂಚಕಳಶಂಗಳಂ ಸ್ಥಾಪ್ಯವಂ ಮಾಡಿ,
ಅಱಿವೆಂಬ ದಾರವಂ ಸುತ್ತಿ,
ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗ ಆಚಾರಲಿಂಗ
ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ
ಮಹಾಲಿಂಗವೆಂಬ ನವರತ್ನವಂ ನೀಡಿ,
ಮೂವತ್ತೆಂಟು ಕಲೆಯೆಂಬ ದರ್ಭೆಯಂ,
ಅಱುವತ್ತುನಾಲ್ಕು ಕಲೆ, ಜ್ಞಾನವೆಂಬ ತಳಿರುಗಳಂ ತುಂಬಿ
ನಿರಾಳವೆಂಬ ವಿಭೂತಿಯಂ ಧರಿಸಿ
ನಿರಂಜನವೆಂಬ ಗಂಧವಂ ಇಟ್ಟು
ನಿರಾಮಯವೆಂಬ ಅಕ್ಷತೆಯಂ ಸಮರ್ಪಿಸಿ,
ಪರಮಾನಂದವೆಂಬ ಮಧುರಸವನಿರಿಸಿ,
ಅನಂತಕೋಟಿ ಸೂರ್ಯ ಚಂದ್ರಾಗ್ನಿ ಪ್ರಕಾಶವಾಗಿಹ
ಅಷ್ಟದಳ ಕಮಲವೆಂಬ ಪುಷ್ಪವಂ ಸಮರ್ಪಿಸಿ
ಜ್ಞಾನವೆಂಬ ಧೂಪವಂ ಬೀಸಿ
ಸ್ವಯಂ ಜಾತಿಯೆಂಬ ಆರತಿಯಂ ಬೆಳಗಿ,
ಅಖಂಡಿತವೆಂಬ ಅಡಕೆ, ಏಕೋಭಾವವೆಂಬ ಎಲೆ
ಶುದ್ಧ ಶಿವಾಚಾರವೆಂಬ ಸುಣ್ಣವ ತಂದು,
ತಾಂಬೂಲವಂ ಸಮರ್ಪಿಸಿ,
ಈ ಕ್ರಮದಲ್ಲಿ ಕಳಶಾಭಿಷೇಕವಂ ಮಾಡಿ,
ಆ ಶಿಷ್ಯನ ಭಕ್ತಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರೆಂಬ
ಗಣತಿಂಥಿಣಿಗೆ ದೀರ್ಘದಂಡ ನಮಸ್ಕಾರವಂ ಮಾಡಿಸಿ,
ಸಮತೆ ಸಮಾಧಾನವೆಂಬ ವಿಭೂತಿಯ
ಸರ್ವಾಂಗವೆಲ್ಲವಂ ಧೂಳನವಂ ಮಾಡಿಸಿ,
ಶಾಂತಿಯೆಂಬ ಯಜ್ಞೋಪವೀತವಂ ಧರಿಸಿ,
ಅಪ್ರಮಾಣ ಕೂಡಲಸಂಗನೆಂಬ ಲಿಂಗಕ್ಕೆ
ಪರಮ ಪರಿಣಾಮವೆಂಬ ಪಂಚಾಮೃತದಲ್ಲಿ ಅಭಿಷೇಕವಂ ಮಾಡಿಸಿ,
ನಿರಾಳಾತೀತವೆಂಬ ಗಂಧವಂ ಧರಿಸಿ
ಅನಾಮಯವೆಂಬ ಅಕ್ಷತೆಯನಿಟ್ಟು
ಕಾಳಾಂಧರವೆಂಬ ಪದ್ಮಪುಷ್ಪವಂ ಸಮರ್ಪಿಸಿ
ಸಚ್ಚಿದಾನಂದವೆಂಬ ದೀಪವಂ ಬೀಸಿ
ನಿತ್ಯಾನಂದವೆಂಬ ದೀಪವಂ ಬೆಳಗಿ
ಪರಾಪರವೆಂಬ ನೈವೇದ್ಯವನಿಟ್ಟು
ಅನುಭಾವವೆಂಬ ಅಡಕೆ, ಅಪ್ರಮೇಯವೆಂಬ ಎಲೆ,
ಸ್ವಾನುಭೂತಿಯೆಂಬ ಸುಣ್ಣವಂ ತಂದು,
ತಾಂಬೂಲವಂ ಸಮರ್ಪಿಸಿ,
ಆ ಶಿಷ್ಯನ ನಿರಾಕಾರವೆಂಬ ಕರಸ್ಥಲದಲ್ಲಿ
ಅಪ್ರಮಾಣ ಕೂಡಲಸಂಗಯ್ಯನೆಂಬ ಲಿಂಗವಂ ಬಿಜಯಂಗೈಯ್ಸಿ,
ಪರಾಕಾಶವೆಂಬ ಕರ್ಣದ್ವಾರದಲ್ಲಿ
ಪರಮ ಪಂಚಾಕ್ಷರವೆಂಬ ಮೂಲ
ಅನಾದಿ ಮೂಲ ಸುಮಂತ್ರಮಂ ತುಂಬಿ,
ಭಕ್ತಿ ಭಿಕ್ಷಾಂದೇಹಿ ಎಂದು ಲಿಂಗಾರ್ಪಿತ ಭಿಕ್ಷವಂ ಬೇಡಿಸಿ,
ಈ ಕ್ರಮದಲ್ಲಿ ನಿರ್ವಾಣ ದೀಕ್ಷೆಯಂ ಕೊಟ್ಟು
ಎನ್ನ ಕೃತಾರ್ಥನ ಮಾಡಿದ ಅಪ್ರಮಾಣ ಕೂಡಲಸಂಗಯ್ಯನ
ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
ಈ ವಚನಾನುಭಾವದಲುಳ್ಳರ್ಥವು
ಸಕಲ ವೇದಾಗಮ ಶಾಸ್ತ್ರ ಪುರಾಣಂಗಳಲ್ಲಿಯುಂಟು, ನೋಡಾ.
ಈ ವಚನಾನುಭಾವದಲ್ಲಿಲ್ಲದರ್ಥವು,
ಸಕಲ ವೇದಾಗಮ ಶಾಸ್ತ್ರ ಪುರಾಣಂಗಳಲ್ಲಿಯೂ ಇಲ್ಲ ನೋಡಾ.
ಈ ವಚನಾನುಭಾವದ ಅರ್ಥವು
ಸಕಲ ವೇದಾಗಮ ಶಾಸ್ತ್ರ ಪುರಾಣಂಗಳಿಗೂ ನಿಲುಕದು ನೋಡಾ.
ಈ ವಚನಾನುಭಾವದ ಅರ್ಥವು
ಸಕಲ ವೇದಾಗಮ ಶಾಸ್ತ್ರ ಪುರಾಣತೀತವು ನೋಡಾ.
ಅಪ್ರಮಾಣ ಕೂಡಲಸಂಗಮದೇವ.
ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ ಚತುರ್ವಿಧ ಪದವ ಪಡೆವರು.
ಶುಭಮಸ್ತು ಮಂಗಳಮಹಾ ಶ್ರೀ ಶ್ರೀ
Leave A Comment