ಪ್ರೌಢದೇವರಾಯನ ಮಂತ್ರಿ ಲಕ್ಷ್ಮೀಧರನ ಸ್ವಪ್ನದಲ್ಲಿ ವಿಘ್ನೇಶ್ವರನು ಬಂದು ಮಾಲ್ಯವಂತ ಪರ್ವತದ ದಕ್ಷಿಣಭಾಗದಲ್ಲಿ ಅಕೃತಿಮವಾದ ಒಂದು ಗುಹೆಯಿದೆ. ಅಲ್ಲಿ ನನ್ನನ್ನು ಪ್ರತಿಷ್ಠಿಸು ಎನ್ನಲು ಮಂತ್ರಿ ಹಸಾದವೆಂದು ಹೇಳಿ, ಅಲ್ಲಿ ವಿಘ್ನೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ದತ್ತಿಬಿಟ್ಟನೆಂದು ಈ ಶಾಸನ ತಿಳಿಸುತ್ತದೆ. ಇಲ್ಲಿ ಹೇಳಿದ ಲಕ್ಷ್ಮೀಧರಾಮಾತ್ಯನ (ನೀತಿವಾಕ್ಯಾಮೃತ, ಆನಂದ ರಾಮಾಯಣ, ಕೃಷ್ಣಲೀಲಾ) ಕೃತಿಗಳು ಇನ್ನೂ ಸಿಕ್ಕಿಲ್ಲ. ಆತನ ತಾಯಿ ಹೇಳಿದ “ಕೆರೆಯಂ ಕಟ್ಟಿಸು……..” ಎಂಬ ಪದ್ಯದಲ್ಲಿ ನಮ್ಮ ಸಂಸ್ಕೃತಿ ಮಡುಗಟ್ಟಿ ನಿಂತಿದೆ. ಪುಟ್ಟ ಚಂಪೂಕಾವ್ಯದಂತಿರುವ ಈ ಶಾಸನವನ್ನು ಬರೆದವ ಧರ್ಮನಾಥ ಪುರಾಣದ ಕರ್ತೃ, ಮಧುಕವಿ.
೧. ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರಚಾರವೇ [1*] ತ್ರೈಲೋಕನಗರಾ – ರಂಭ ಮೂಲಸ್ತಂಭಾ –
೨. ಯ ಶಂಭವೇ || [೧*] ಶ್ರೀಮತ್ಸಿಂಧೂರಬಂಧಾರುಣಬಿದು ನವಸಂ – ಧಾಂಬುದಂ ಪುಷ್ಕರಪ್ರೋ –
೩. ದ್ದಾಮಾಂಭಃಶೀಕರಂ ತಳ್ತು [ಡು] ಗಣಮುರುದಂಷ್ಟ್ರಾಂಕುರಂ ಬಾಲ – ಚಂದ್ರಂ [1*] ಪೋ ಮಾತೇನೆಂಬ ನೇರ್ಪ್ಪಿ ನಭಮ [ನ] ಣಕಿ –
೪. ಪಂತಿರ್ದ್ದ ನಿತ್ಯೋಂನಮತ್ತೇಜೋಮೂರ್ತ್ತಿ ಶ್ರೀಮಹೇಭಾನನನನವರ – ತಂ ಕೂರ್ತು ರಕ್ಷಕ್ಕೆ ನಿಂಮಂ | [೨ *] ತಣಿಯೆ
೫. ಸದಾಳಿಯಂ ಪೊರವ ದಾನಗುಣಂ ಪರಿಪೂ [ರ್ನ]ಭದ್ರಲಕ್ಷಣಮಳಮಟ್ಟ ಶಕ್ತಿಸುಮನಸ್ತುತಮಾದನವದ್ಯವಿದ್ಯೆ
೬. ಸಂ [1*] ದಣಿಯರಮಾವನೊಳ್ನೆಗಳ್ದುದೆಂನವೊಲೆಂದು ಮುದಂಮಿಗ – ಲ್ಮಹಾಗಣಪತಿ ಕೂ [ರ್ಮ್ಮೆ] ಯಿಂ ಕುಡು –
೭. ಗೆ ಲಕ್ಷ್ಮಣಮಂತ್ರಿಗಭೀಷ್ಟಸಿದ್ಧಿಯಂ || [೩*] ಘೋರಭವಭಯನಿದಾ – ಘದಿನೋರಂತಳ [ವ] ಳಿದು ಬಂದವ –
೮. ರ್ಗ್ಗೋಳ್ಪಂ ಭಾ [1*] ಗೀರಥಿ ಜನಿಯಿಸಿದಾನಂದಾರಾಮಪದಂಗಳೀಉ – ದೊಂದಚ್ಚರಿಯೇ || [೪*] ಶ್ರೀಲಕ್ಷ್ಮೀಧರಗುರುಪದನಾ [ಳೀ] –
೯. ಕನವೀನಗಂಧದೊಳ್ಬಗೆದಂ [ದಾ] [1*] ಲೋಲತೆಯನುಳಿದ ಮನುಜ – ಮದಾಳಿಗೆ ಸೊಗಯಿಪುದೆ ಜಡಪದಾಂಬುಜಸಂಗಂ || [೫]
೧೦. ಪೊಂಬೆಟ್ಟಮೆ ಪೊಸಕೇಸರಮೆಂಬವೊಲಳವಟ್ಟ ಕುವಲಯಂ ಕುವಲಯ – ದಂ [1*] ತಿಂಬಾಗಿರೆ ತಂನಯ ತುದಿಗೊಂಬಿನೊಳಂಬು –
೧೧. ಧಿಯೊಳೆಸೆದನಾದಿ [ವ] ರಾಹಂ || [೬*] ಆ ಮಾಯಾಪೋತ್ರಿ ದಾತ್ರೀಭರ – ಮನಱಸಿ ತುಳ್ಕಾಡಿದಂದಾರ್ದ್ದಮರ್ತ್ಯಸ್ತೋಮಂ ಮಂಥಾ –
೧೨. ದ್ರಿಯಂ ಮಂನಿಸದೊ [ದೆ] ಗಡೆದಂದಿಂಬುಗೊಂಡೋದಂಬಿಂ [1*] ರಾಮಂ ಕೈವೋಗದೆಚ್ಚಂದಳವಳಿಯದೆ ಗಾಂಭೀರ್ಯ್ಯ –
೧೩. ಧಾಮಂ ತಿತಿ [ಕ್ಷಾ]ಸೀಮಂ ಭೂಮಂಡಲಕ್ಕಾಭರಣಮೆನಿಸಿದಂ ಭೂರಿಭ – ದ್ರಂ ಸಮುದ್ರಂ || [೭*] ಅಂತಸೆವಂಬುರಾ [ಶಿ] –
೧೪. ಯ ಮಗಳ್ಸಿರಿ ತಂನಯ ರಾಣಿಯಾಗ [ಲೋ]ರಂ [ತಿ] ರನಂತತಳ್ಪತಳದೊ – ಳ್ನಿಜಲೀಲೆಯನಿಂಬುಗೊಂಡು ನಿ [1*] ಶ್ವಿಂತೆಯಿನಿ [ರ್ದ್ದ]
೧೫. ನೀರರುಹನಾಭಿಯ ನಾಭಿಸರೋಜದೊಳ್ಜಗತ್ಕಾಂತನಲಂಪಿನಿಂ [ದೊ] ಗೆದ – ನೂರ್ಜ್ಜಿತಶಾಸನನಂಬುಜಾಸನಂ || [೮*] ಸರ –
೧೬. ಸಿಜಭವಾತ್ರಿವಿಧುಬುಧಪುರೂರವಾಯುಃಕ್ಷಿತೀಶನಹುಷಯಯಾತ್ಯಾ [1*] ದ್ಯರನುಕ್ರ [ಮ] ದಿಂ ಯದುಧರೆಗರ –
೧೭. ಸೆನಿಸಿದನಾದುದಾತನಿಂ ಯದುವಂಶಂ || [೯*] ಶ್ರೀಮತ್ಸೋಮಾ (೦) – ನ್ವಯಕ್ಕುದ್ಭವಿಸಿದ ಯದುವಂಶಾವನೀಪಾಲರೊಳ್ನಿಸ್ನೀಮಶ್ರೀ –
೧೮. ಸಂಗಮಕ್ಷ್ಮಾಪತಿ ದೊರೆವಡೆದಂ ತತ್ತನೂಜಂ ಸಮಸ್ತೋ [1*]ರ್ವ್ವೀ – ಮಾನ್ಯಂ ರೂಢಿವೆತ್ತಂ ಹರಿಹರನಧಟಿಂ ತಂನರೇಂದ್ರಾನುಜಂ
೧೯. ಸುತ್ರಾಮೊದ್ದಾಮಪ್ರತಾಪಂ ತಳೆದನಖಿಳಭೂಚಕ್ರಮಂ ಬುಕ್ಕರಾಯಂ || [೧೦*] ಆತಂಗೆ ಜನಿಸಿದಂ ವಿಖ್ಯಾತಂ ನಳ –
೨೦. ನಹುಷನುಗಭಗೀರಥರೊರೆಗೇ [1*] ಮಾತೊ ಸರಿಮಿಗಿಲೆನಲ್ಧರ್ಮ್ಮಾತತ – ರೂ [ಪಂ] ಪ್ರತಾಪಹರಿಹರಭೂಪಂ || [೧೧*] ದಾನ –
೨೧. ವಮರ್ದ್ಧನನಂತಿರೆ ಮೀನಾಗದೆ ಪಂದಿಯಾಗದಪ್ಪ್ರತಿರೂಪಂ[1*] ತಾನಾ ಪ್ರತಾಪಹರಿಹರನೇನುದ್ಧರಿಸಿದನೊ ವೇದಮಂ ಮೇದಿನಿ –
೨೨. ಯಂ || [೧೨*] ಆ ಭೂಮೀಪಾಲಪುಣ್ಯಾಂಕುರಮದು ಪುರುಷಾಕಾರದಿಂ ಪುಟ್ಟಿದಂತಾಶಾಭಾಗಪ್ರಸ್ಪುರತ್ಪಾವನಯ –
೨೩. ಶನಶನಿಪ್ರೌಢಬಾಹುಪ್ಪ್ರತಾಪಂ [1*] ಸೌಭಾಗ್ಯಶ್ರೀನಿವಾಸಂ ಜನಿಯಿಸಿ ಸಕಲಕ್ಷತ್ರಚೂಡಾಧಿರೂಢಾ –
೨೪. ಗ್ಞಾಭಾರಂ ಸಾರ್ವ್ವಭೌಮೋಂನತಿಯೊಳೆಸಗಿದಂ ದೇವರಾಜಾವನೀಂದ್ರಂ || [೧೩*] ಸಲೆ ನಾ [ನಾ] ಸಸ್ಯಸಂಪತ್ತಿಯನೊದವಿಸಿ ಸ –
೨೫. ಸಂತುಷ್ಟಿಯಂ ದಾನಧಾರಾಜಲದಿಂ ಸಂತಾಪಮಂ ತಳ್ಗಿಸಿ ವಿತತಸಿತಚ್ಛತ್ರ – ಸುಚ್ಛಾಯೆಗೊಯ್ದು [1*] ಜ್ವಲಿಪಾಗ್ಞಾದಾಮ –
೨೬. ದಿಂದಂ ನಿಯಮಿಸಿ ನಿಜದೋ [ಃ*] ಸ್ತಂಭದೊಳ್ಕಟ್ಟಿ ಗೋಮಂಡಲಮಂ ಸತ್ಕೀರ್ತಿದುಗ್ಧಂಗಱದನಱಕೆಯಿಂ ದೇವರಾ –
೨೭. ಜಾವನೀಂದ್ರಂ || [೧೪*] ಮಱಿಮಾತೇಂ ಪಗೆಗೊಂಡಪಾರ್ತ್ಥಿವರನ – ತ್ಯುಗ್ರಾಜಿಯೊಳ್ಕಾಯ್ದು ತಳ್ತಿಱಿವಾಗ [ಳ್ನೆ] ಗಳ್ದು [ಚ್ಛ] ವಂಬೆರಸು
೨೮. ಭೇತಾತಾಳಿ ಬೆಂನೆತ್ತರಂ [1*] ಸುಱಿದಿರ್ಪ್ಪಾಱದ ಕೈಗಳಿಂ ಕಡೆವರ [೦*] ದಿಗ್ಭಿತ್ತಿಯೋಳ್ಕೂಡಿ ಚಟ್ಟಿಱಿದಂತಿರ್ದ್ದಪುದಪ್ರ –
೨೯. ತರ್ಕ್ಕ್ಯತರತೇಜಂ ದೇವರಾಜೇಂದ್ರನಾ || [೧೫*] ಪೊಡಕರಿಪಗಂಡಗು – ಣದುಗ್ಗಡಮೇಂತು [ಟೊ] ಬಿಡದೆ ಜಡಿಯೆ ಜಯವಧುವತ್ತಿ [1*] ತ್ತ [ಡಿ] –
೩೦. ಯಿಡದೆ ಬಾಳಬಾಯೊಳೆ ನ[ಡ] ವಳ್ ಶ್ರೀದೇವರಾಯಭೂವಲ್ಲಭವ || [೧೬*] ಆ ದೇವರಾಯಭೂಪನ ಯಾದವವಂಶಪ್ರದೀಪನ (೦) –
೩೧. ನ್ವಯದೊ [ಳ್ಸಂ] [1*] ದಾದಿ ಪ್ರಧಾನರೀ ಧರೆಗಾದ [ರ್ಮ್ಮಾ] ದರಸ [ ಸಾ] – ಯಣ್ಯಾಖ್ಯರ್ಮ್ಮುಖ್ಯ [ರ್] || [೧೭*] ತೋಡದ ಭಾವಿಯಿಲ್ಲ ಮರೆಕಟ್ಟದ ಪೇರ್ಗ್ಗೆಱೆ –
೩೨. ಯಿಲ್ಲ ಲೀಲೆಯಂ ಮಾಡದ ದೇವತಾಭವನಮಿಲ್ಲೊಲವಿಂ ಬಿಡದಗ್ಗ್ರಹಾ – ರಮಿ [1*] ಲ್ಲಾಡಲದೇನೊ ಭೂಭುವನಭುಂ [ಭು] ಕಮಾ –
೩೩. ದು [ದು[ ಕೀರ್ತ್ತಿ ಬಾಪು [1]ನಾ ಪಾಡಿಯೆ[2] ಸೈಪು ಮಾದರಸ ಸಾಯಣ – ರೆಂಬ ಮಹಾಪ್ರಧಾನರಾ || [೧೮*] ಅವರಂ [ಬ] ಲಭದ್ರಾಚ್ಯುತ –
೩೪. ರಿವರನೆ ಜನವವರ ತಂಗಿ ಸಿಂಗಲೆ ಭುವನ [1*] ಸ್ತ [ವ] ನೀಯ್ಯಚರಿತೆ ಸಂತತಮವನೀಳತಳದೊಳ್ಸುಭದ್ರೆಯೆನಿಪುದು ಪಿರಿದೇ [ || ೧೯*] ಆ
೩೫. ತರುಣೀಶಿಖಾಮಣಿಗೆ ವಲ್ಲಭನಾರೆನೆ ವಿಷ್ಣುರ್ವುದ್ಧವಿಖ್ಯಾತಪವಿತ್ರಗೋತ್ತ – ದೊಳು ಗೋಸನೆವೆತ್ತೊಗೆದಂ ಜಗಜ್ಜನ [1*] ಪ್ಪ್ರೀತಿ –
೩೬. ಕರಂ ಗುಣಾಕರನಲಂಕ್ರುತಭೂಭುವನಂ ಬುಧಾಳಿಲೀಲಾತಿಶಯೈಕತಾ – ಮರಸನೆಂದೆನೆ ರಾಮರಸಂ ಧರಿತ್ರಿಯೊಳು || [೨೦*] ಅ –
೩೭. ನಿಮಿಷನಂದಕ್ಕಮರಭೂರುಹಪಂಚಕಮೀಶ್ವರಂಗೆ ನೆಟ್ಟನೆ ಮುಖಪಂಚಕಂ ನ್ರುಪನಯಾಭಿಮತಕ್ಕಮ[ರ್ದಂ] ಗಪಂಚಕ –
೩೮. ೦ [1*] ಜನಿಯಿಸಿ ಲೋಕರೂಢಿವಡದಂತೆ ಸಮಸ್ತಜನಂ ಮನಂಗೊಳ – ಲ್ಚಿನಿಸಿದು [ದಾ] ಗುಣೈಕನಿಧಿರಾಮರಸಂಗೆ ತನೂಜಪಂಚಕಂ || [೨೧*] ಕ್ರಮ –
೩೯. ದಿಂ ಲಕ್ಷ್ಮೀಧರ ಚೆನ್ನಮಂತ್ರಿ ಬುಕ್ಕಂಣ ಮಾಧವಂ [ಪೆ]ರ್ಗ್ಗಡೆಯೆಂ [1*] ದಮರ್ದಿರೆ ನಾಮಂ ನೆಗಳ್ದರ್ಸ್ಸಮನಿಸಿ ಸಿಂಗಾಂಬಿಕಾಪವಿತ್ರೋದರ – ದೊಳು || [೨೨*]
೪೦. ಆ ಮೆಱವೈವರೊಳಾಂತಂ ಶ್ರೀಮದ್ಭೀಮಪ್ರತಾಪನರ್ಜ್ಜುನಕೀರ್ತ್ತಿ[1*] ಪ್ರೇಮಂ ಲಕ್ಷ್ಮೀಧರನೆನ [ಲೀ] ಮಹಿಯೊಳ್ಧರ್ಮಸಂಭವಪ್ರಾಭವಮಂ || [೨೩*] ಕಂನ
೪೧. ಡಿಗಕುಲಕೆ ರಂನದ ಕಂನಡಿಯೆನೆ ವಿಶ್ವವಿದಿರ್ವುತ್ತಶ್ರೀಸಂ [1*] ಪಂನಂ ಲಕ್ಷ್ಮೀಧರದೇವಂ ನಿರ್ಮ್ಮಲನಾಗಿ ನೆಗಳ್ದನೊಳಗಂ ಪೊ –
೪೨. ಱಗಂ || [೨೪*] ಶ್ರೀರಾಮಂ ತಂದೆ ದೇವೋತ್ತಮ ದಶರಥರಾಮಂ ಮನೋದೈವಮಾನಂದಾರಾಮಂ [ರೂ] ಢಿ ವೆತ್ತಗ್ಗದ ಕುಲಗುರುವೆಂದಂದೆ ಪೋ –
೪೩. ಷಿಷ್ಪದೇವಿಂ [1*] ನಾರಂ ಸಿಂಗಾಂಬಿಕಾಮಂಗಳಜಠರಸುಧಾವಾರ್ಧ್ಧಿಸಂ – ಜಾತನಂ ತಾನಾರಾಮಂ ಲಕ್ಷ್ಮಣಾಮಾತ್ಯನೆ ಸಕಲಜಗಜ್ಜಾತಚೇತೋಭಿರಾ –
೪೪. ಮಂ || [೨೫*] ಕೆಱೆಯಂ ಕಟ್ಟಿಸು ಭಾವಿಯಂ ಸವಸು ದೇವಗಾರಾಮಂ ಮಾಡಿಸಜ್ಜೆರೆಯೊಳ್ಸಿಲ್ಕಿದನಾಥರಂ ಬಿಡಿಸು ಮಿತ್ರರ್ಗ್ಗಿಂಬುಕೆಯಿಂ ನಂಬಿ –
೪೫. ದ [1*] ಗ್ಗ್ರೆಱೆವೆಟ್ಟಾಗಿರು ಶಿಷ್ಟರಂ ಪೊರಯೆನುತ್ತಿಂತೆಲ್ಲವಂ ಪಿಂದೆ ತಾಂ ಯೆಱದಳ್ಪಾಲೆಱವಂದು ತೊಟ್ಟು ಕಿವಿಯೊಳ್ ಲಕ್ಷ್ಮೀಧರಾಮಾತ್ಯನಾ || [೨೬*]
೪೬. ಕಯ್ಯೆಂದೊಡೆ ಮಂದಾರದ ಕಯ್ಯುಂ ಮಂತ್ರೀಂದ್ರಂ ಲಕ್ಷ್ಮಣಾಂಕನ ಕಯ್ಯುಂ [1*] ಕಯ್ಯಲ್ಲದುಳಿದ ಮನುಜರ ಕಯ್ಯೆಂಬುಉ ಮರುಳಕೈಗಳೇತ –
೪೭. ಱ ಕೈಗಳ್ || [೨೭*] ವೊಡವೆಯನೋವಿ ನೋಡಿ ಬಿಡಲಾಱದೆ [ಚ] ರ್ಮ್ಮ – ಮ [ನೆಲ್ವ] ನೊಳ್ಪುವೆತ್ತೊಡಲ ನೆಗಲ್ಚಿ ಕೊಟ್ಟಳಿದರಂತಕಟಾ ಶಚಿವೇಂದ್ರಲ –
೪೮. ಕ್ಷ್ಮಣಂ [1*] ಪೊಡವಿಯೊಳಂದೆ ಪುಟ್ಟಿ [ವ]ಡೆ ವಂದಿಗಳಿಷ್ಟಮನಿತ್ತು ಜೀವಮಂ ವಡೆಯನ ಸೂತಜಾತನ ದಧೀಚಿಯ ಖೇಚರಚಕ್ಕ್ರವರ್ತ್ತಿಯಾ || [೨೮*]
೪೯. ಮಾತೇನೋ ದೇವರಾಯಂಗಾತಂ ಸ(೦) [ನ್ಮಂ]ತ್ರಿಯೆನಿಸಿ ನೆಗಳ್ದಿರೆ ವಿಬುಧ [1*] ಪ್ಪ್ರೀತಿ ಮಿಗೆ ನಿಖಿಳವಿದ್ಯಾನೀತಿಗೆ ಗುರುವೆಂನದಿರ್ಪ್ಪರೇ ಲಕ್ಷ್ಮಣನಂ || [೨೯*] ಸು –
೫೦. ಮನೋವಿ(೦) ನ್ಯಾಸದಿಂ ವಿಶ್ಶ್ರುತವಿಬುಧಜನಾನೂನಸ(೦) ನ್ಮಾನದಾನ – ಕ್ರಮದಿಂದೀ ರಾಮಚಂದ್ರಾತ್ಮಜ ಶಚಿವಶಿರೋರತ್ನ ಲಕ್ಷ್ಮೀಧರಂಗಾ[1*] ರ್ಸ್ಸಮ –
೫೧. ರೆಂದಾನಳ್ಕಱಿಂ ಕೇಳ್ದೊಡೆ ಬಿಡು ಪೊಸತೇಂ ಪೋಗಿಯುಂ ಬಂದು ಕಲ್ಪದ್ರುಮಮೊಂದಂ ಪೇಳ್ವೆ ಮತ್ತುಳ್ಳೆಡೆ ನುಡಿ ಜಗತೀಚಕ್ರದೊಳ್ಸತ್ಕ –
೫೨. ವೀಂದ್ರಾ || [೩೦*] ಪುಸಿದಾನರ್ಜ್ಜಿಸುವರ್ಥ್ಧವೇಂ ಮುನಿ ೧ ದ ಕಯ್ಯೊಳ್ಪೇ – ಳಲೇ ವಂದಿ ವಾದಿಸರದಿರ್ವಂಶವಿಶುದ್ಧಿಯೊಳ್ವಿಭವದೊಳ್ವಿಖ್ಯಾತಿಯೊಳ್ನೀತಿ –
೫೩. ಯೊ [1*] ಳ್ಜಸದೊಳ್ಜಾಣ್ಮೆ ಯೊಳತ್ಯುದಾರಗುಣದೊಳ್ಗಾಂಭೀರ್ಯ್ಯದೊ – ಳ್ಕೂರ್ತ್ತು ಲಕ್ಷಿಗೆ ಲಕ್ಷ್ಮೀಧರನಲ್ಲದುಂಟೆ ಸಭೆಯೊಳ್ ಶ್ರೀದೇವರಾಜೇಂ ದ್ರನಾ || [೩೧*]
೫೪. ಧರಣೀಚಕ್ರಂ ಮನಂಗೊಳ್ವುದೆಯಮುರುತಮಸ್ತೋಮವಲ್ಲಾಡುವಾ – ತ್ಮಾಚರಣಂ ಸ(೦) ನ್ಮಾರ್ಗ್ಗಮುದ್ಯೋತಿಸುವ ರುಚಿ ಸದಾಲೋಕಮು ವ್ವೇಳ್ವ ತೇ –
೫೫. ಜ [1*] ಸ್ಫುರಣಂ ನಿತ್ಯಾನುರಾಗಕ್ಕೆಡೆಗುಡಲೆಸೆವೀ ಪೆರ್ಮ್ಮೆಯಿಂ ದೇವ – ಭೂಭ್ರುದ್ವರ ಪಾದಾಸಂನನೇನುಂನತಿವಡದನೊ ಲಕ್ಷ್ಮೀಧರಾಮಾತ್ಯ –
೫೬. ಮಿತ್ರಂ || [೩೨*] ಪೂವಿನ ಬಿಲ್ಲನೇಱಿಸುವ ಬಂಡ ೨ ಬಸಂತನನಾಸೆಮಾ – ಡುವಿಂಮಾವಿನರಲ್ಗಳಂ ಬನಸಗೆಯ್ವೆಳೆದಿಂಗಳ ಪಂಗುಗೊಳ್ವ ಬ [1*] ಲ್ಪೇಉ –
೫೭. ದೆನುತ್ತ ಚಿತ್ತಭವನಾವನ ಮೆಯಿವಳಿಗೊಂಡು ಕಂಡ ಕಾಂತಾವಳಿಯಂ ಮರಳ್ಚುವನೆನಲ್ಸೊಬಗೆಂತುಟೊ ಲಕ್ಷ್ಮಣಾಂಕನಾ || [೩೩*] ಸಾರಶ್ರೀ –
೫೮. ನೀತಿವಾಕ್ಯಾಮ್ರುತಪರಿಸರದೊಳ್ಪುಟ್ಟಿ ಮೆಯಿಗುಂದದಾನಂದಾರಾಮಾ – ಸಂನರಾಮಾಯಣದೊಳಮರ್ದು ತಳ್ತಾವಗಂ [ಕ್ರು]ಷ್ಣಲೀಲಾ [1*] ಧಾರಂ ತಾನಾ –
೫೯. ಗಿ ನಾನಾಫಲಮನಿಳೆಗೆ ಬೀಱಿತ್ತು ಸಂಸಾರಸೌಖ್ಯಾಕಾರಂ ಸ (೦) ನ್ಮಂತ್ರಿ ಲಕ್ಷ್ಮೀಧರನುರುಕವಿತಾಕಲ್ಪವಲ್ಲೀವಿತಾನಂ || [೩೪*] ಪದಪಿಂದಂ ಕವಿರಾಜಲ –
೬೦. ಕ್ಷ್ಮಣನ ಕಾವ್ಯಲಾ[ಪ] ಮಂ ಕೂರ್ತ್ತು ಕೇಳದೆ ಮುಂ ಪೋದರೆ ಪಾದ [ವೊಂ]ಮೆ [3]ಕವಿಗೊಟ್ಟೆತ್ತಾನುಮಾರೈದು ಸಂ [1*] ಮುದದಿಂ ಸೈತಿರ – ದೋರುದೂತಿಯರ ಮಾ –
೬೧. ತಂ ಮೀಱಿ ಕ(ಂ) ಣ್ಗೊಂಡು ನೋಡಿದ ಪೆ(೦) ಣ್ಗಳ್ಪುದಿದಿದ್ದ ಪೂಗಣೆಯ ಪುಂಣಿಂದಂಣಿ ಪುಯ್ಯಲ್ಚರೇ || [೩೫*] ವೋದಿ ಪರವಂಚನಂಗೆಯ್ವೋದು – ಗಳಂತಿರ್ಕ್ಕೆ ಲ –
೬೧. ಕ್ಷ್ಮಣಾಮಾತ್ಯನವೊ [1*] ಲಾದರಿಸಿ ಶಚಿವರಾದವರೋದುಉ [ದೋ] ರಂತೆ ಪತಿಹಿತಾರ್ಥ್ಯಾಗಮಮಂ || [೩೬*] ಸ್ವಾಮಿದ್ರೋಹರ್ಕ್ಕೆಲಂಬರ್ಮ್ಮಸಗಿ ಮಸೆದ ಬಾಳ್ಗೊಂಡು ಚ –
೬೩. ಂಡಪ್ರತಾಪೋದ್ದಾಮಶ್ರೀದೇವಭುವಲ್ಲಭನ ಗ್ರುಹಮಹಾದ್ವಾರಮಂ ಮುತ್ತೆ ಮತ್ತಿಂ [1*] ನೇ ಮಾತೀಮಾತಿನಿಂ ಮುಂನುಱುಬಿ ತಱು [ಬೆ] ನೂಱಂಕಮಂ
೬೪. ಸ್ವಾಮಿಕಾರ್ಯ್ಯಕ್ಕಾಮೆಂದುರ್ವ್ವೆಳ್ವರುತ್ಪಾಹಮನದಟಲದಂ ಲೋಕದೊಳು ಲಕ್ಷ್ಮಣಾಂಕಂ || [೩೭*] ಕೆಲಬಲನಂ ವಿಚಾರಿಸದೆ ಬಂದ ಭಟ್ಟರ್ಬ್ಬಲ [ವ] – ಂತರೆಂದೆನು –
೬೫. ತ್ತಲಸದೆ ನಿಂದು ತಂನ ಪತಿಕಾರ್ಯ್ಯಮೆ ಕಾರ್ಯ್ಯಮೆನುತ್ತ [ಪೂ] – ಣ್ದು ಮೆಯಿ [1*] ಗಲಿ ತಲೆಮಟ್ಟ [ವೀರ್ವ್ವಡೆ] ದ ಮುಂ [ದ್ದ] ಲೆಯೊಂದೆ ಜಗಜ್ಜನಕ್ಕೆ ಮೂದಲೆಯೆನಿಸಿ –
೬೬. ತ್ತದೇವೆಱಗೊ ಲಕ್ಷ್ಮಣಮಂತ್ರಿಯ ಸಂದಸಾಹಸಂ || [೩೮*] ನೆಲದೊ – ಳ್ಪತಿಹಿತರಾವೆಂದುಲಿವರ ನಾಲಿಗೆಯನಲುಗಲಿಯ್ಯದ ಬಲು ಸಂ [1*] ಕಲೆ – ಯಾದುದು ಮುಂ
೬೭. ಕೀರ್ತ್ತಿಯ ಕಲೆ ಮೂಜಗವಱಿಯೆ ಮಂತ್ರಿಲಕ್ಷ್ಮೀಧರನಾ || [೩೯*] ಆರಾನುಂ ದಾನೋದಕಧಾರೆಯನೊಸದಾಂಪರವನಿಸುರರೊಳ್ವೆರಗಂ [1*] ಪಾರದೆ ಲಕ್ಷ್ಮಣ –
೬೮. ನಂತಿಸಿಂಧಾರೆಯನಾಂಪವರ್ಗಳುಂಟೆ ವಸುಧಾತಳದೊಳ್ || [೪೦*] ಗಣ – ನಾ ಮಾತ್ರಮೆ ದೇವರಾಯನರನಾಥಾಸ್ಥಾನದೊಳ್ಮಾನವಾಗ್ರಣಿಗಳ್ಸೈತೆ ವಿ – ಚಾರಿಪಾ –
೬೯. ಗಳುಪಧಾಸಂಶುದ್ಧಿಯಿಂ ಬುದ್ಧಿಯಿಂ [1*] ಗುಣದಿಂ ಗೌರವದಿಂ [ಪೊ] – ದಳ್ದೆಸವ ಮುದ್ರಾಮಾತ್ಯ ಯೋಗಂಧರಾಯಣ ಚಾಣಾಕ್ಯ ಸುಮಂತ್ರರೊ –
೭೦. ಳ್ದೊರೆಗೆವಂದಂ ಮಂತ್ರಿ ಲಕ್ಷ್ಮೀಧರಂ || [೪೧*] ವಚನ || ಆ ಮಹಾಪ್ರ – ಧಾನ ಲಕ್ಷ್ಮೀಧರನೊಂದು ರಾತ್ರಿಯೊಳ್ಸುಖಸುಪ್ತಿಯನಪ್ಪುಗೆಯ್ದಿರ್ಪ್ಪಿನಂ ಸ್ವಪ್ನ –
೭೧. ದೊಳಪ್ಪ್ರತಿಮತೇಜನಖಿಲಚರಾಚರಜನನಬೀಜಂ | ಬೀಜಾಪೂರಸಮುಚಿತಾ – ಯುಧವಿಶೇಷವಿಲಸಿತದಶಭುಜಾದಂಡಂ | ಖಂಡೇಂದುಮಂ –
೭೨. ಡಿತಮಣಿಮಕುಟಮಹನೀಯ್ಯಶಿಖಂಡಂ | ಗಂಡಸ್ಥಳಗಳಿತಮದಮದಿರಾ – ಪ್ರಮತ್ತಮಧುಕರಝೇಂಕಾರಮುಖರಿತನಿಖಿಲದ್ವಿಲಯಂ | ವ –
೭೩. ಲಯಾಂಗದಾಂಗುಲೀಯ್ಯಕಾದಿಭೂಷಣವಿಭೂಷಿತ್ಸರ್ವ್ವಾಗನಂಗೀಕ್ರುತ – ಭುಜಂಗಪರಿರ್ವುಢ ಪ್ರಾಲಂಬಂ | ಲಂಬೋದರಕಲಿತಕಾಕೋದ –
೭೪. ರಫಣಾಮಣಿಮರೀಚಿನಿರಾಕೃತನಾಭೀಕುಹರವಿಹರದಪಾರಾಂಧಕಾರಂ | ಕ – ನಕಕಟಿಸೂತ್ರವಿಚಿತ್ರಿತಜಘನಮಂಡಲಂ | ವೀರಕಟಕನೂ –
೭೫. ಪುರಪುರಸ್ಕ್ರುತಪದಸರೋಜಸನಾಥಂ | ಯಥೋಚಿತದಿಶಾನಿಷಂಣನಿಜನಿ – ಜಶಕ್ತಿಯುಕ್ತಹರಿಹರವ [ರಾ] ಹಕುಸುಮಸಾಯಕಂ | ಸೇವಕಜ –
೭೬. ನಮನೋರಥದಾಯಕಂ | ಸಕಲಲೋಕೈಕನಾಯಕಂ ಮಹಾವಿನಾಯಕಂ ಬಂದೆಲೆ ಲಕ್ಷ್ಮೀಧರಾ || ಲವಣಾಂಭೋನಿಧಿ ತಳ್ತು ಸುತ್ತಿಱಿದ ಜಂಬೂ –
೭೭. ದ್ವೀಪಮಧ್ಯಸ್ಥ ಮೇರುವ ತೆಂಕಲ್ಭರತಾವನೀತಳದೊಳುಂಟಾಹ್ಲಾದಕಂ ಪು – (೦) ಣಸಂ [1*] ಭವಸದ್ಮಂ ಹರಿಪದ್ಮಗರ್ಬ್ಭಮುಖಲೇಖಾನೀಕಲೀಲಾ –
೭೮. ಮಹೋತ್ಫವಗೇಹಂ ಪರಿಧೂತಮೋಹಮಮಲನ್ಧಾಮಂ ವಿರೂಪಾಕ್ಷನಾ || [೪೨*] ಅಲ್ಲಿ || ಯೆಡದ ಮಡದಿಗೆ ಬಿಗುರ್ತ್ತಾ ಜಡವೆಱೆಗೊಂಡಮರನದಿ –
೭೯. ಯದೇ ಸೊಬಗೆನೆ ನೇ [1*] ರ್ಪ್ಪಡೆ ತುಂಗಭದ್ರೆ ದೇವನೆ ಬಿಡದಡಸಿದ ವಾಮಭಾಗದೊಳ್ಸೊಗಯಿಸುಗುಂ || [೪೩*] ಜಲಮಮ್ರುತಮಯಂ ಸೊಗಯಿಪ ಜಲವಿ –
೮೦. ಹಗಂ ಪರಮಹಂಸಮಯಮೆಂದುಂ ತ [1*] ಜ್ಚಲಚರಮನಿಮಿಷಮಯ – ಮೆನಲೆಲೆ ಬಂಣಿಪನಾವನದಱ ತೀರದ ಸಿರಿಯಂ || [೪೪*] ವಚನ || ಆ ಪಾವನದೀಪ –
೮೧. ಯಃಪಾನಪರಿಣತ [ಪಣ್ಕಿ] ಲತೃಣನಾರಿಕೇಳಚೂತಮಾತುಳುಂಗರಂಭಾಜಂ – ಬೀರಪೂಗನಾಗಕೇಸರಾದಿಭೂಜಾತಜಾತಿಕೇತಕೀಮುಖನಿಖಿಲಕುಸುಮಸು –
೮೨. ಗಂಧಬಂಧುರಗಂಧಶಾಳಿಪಾಳೀಪರಿಕಲಿತಕಳಹಂಸಶುಕಪಿಕಶಿಖಾವಳಕೇಕೀ ವಿಳಾಸ – ವಿಚಿತ್ರಂ | ಸಕಲಭವಪವಿತ್ರಂ | ದುರಿತಲತಾವಿತ್ರಂ | ಭವಾಂಬುಧಿ –
೮೩. ಬಹಿತ್ರಂ | ವಾರಾಣಶೀ ಶ್ರೀಪರ್ವ್ವತಾದಿಸಿದ್ಧಸ್ಥಾನಮಣಿಗಣಮಾಲಾಸೂ – ತ್ರಂ | ಪಂಪಾಕ್ಷೇತ್ರಂ ಸೊಗಯಿಪ್ಪುದದಱ ಪೂರ್ವ್ವದಿಗ್ಭಾಗದೆ ಮಾಲ್ಯವ – ತ್ಪರ್ವ್ವತ –
೮೪. ದ ತೆಂಕವಕ್ಕದೊಳೊಂದು ಮಹಾಗುಹೆಯುಂಟದಕ್ರುತ್ರಿಮದಿವ್ಯಾಗಾರ – ಮದಱೊಳೆಂನಂ ಸುಪ್ರತಿಷ್ಠೆಗೆಯ್ವುದೆಂದು ನಿರೂಪಿಸೆ ಮಹಾಪ್ರಸಾದ –
೮೫. ವೆಂದು ಕೈಕೊಂಡು || ಆ ಸ (೦) ನ್ಮಂತ್ರೀಂದ್ರಲಕ್ಷ್ಮೀಧರನಮರಗುರು ಶ್ರೀವಿರೂಪಾಕ್ಷಲೀಲಾವಾಸಂ ತಾನಾದ ಪಂಪಾಪುರಪರಿಸರದೀ ಮಾಲ್ಯವ – ದ್ಭೂಧ್ರ –
೮೬. ದೊಳ್ನಾ [1*] ನಾಸಿದ್ಧಿಶ್ರೀಯ್ಯ [ನೀ] ಯ್ಯಲ್ನೆಲೆಗೊಳಿಸಿ ಮಹಾಶಹೇರಂ – ಬನಂ ವಿಶ್ವಾಸಂ ಮೆಯ್ಪೆತ್ತ ಭಕ್ತಿಪ್ರಭವವಿಭವದಿಂ ಧಾತ್ರಿಯೊಳ್ಕೀರ್ತ್ತಿ – ವೆತ್ತಂ || [೪೫*]
೮೭. ತತ್ಸಮಯಕ್ಕೆ ದ್ರುಕ್ಪುರಶಿಖೀಂದು ಶಶಾಂಕಮಿರಲ್ವಿರೋಧಿಸಂವತ್ಫರ ಫಾಲ್ಗುನ ಪ್ರಥಮವಾಸರದೊಳ್ಗುರುವಾರದೊಂದೆ ವಿ [1*] ದ್ವೆತ್ಭಭೆ ಬಂಣಿ – ಪಂತೆ –
೮೮. ಸಗಿದಂ ಶಚಿವಾಗ್ಗ್ರಣಿ ಲಕ್ಷ್ಮಣಂ ಸಮಸ್ತೋತ್ಫವಮುಣ್ಮಿ ಪೊಣ್ಮಿರೆ ಮಹಾ ಗಣನಾಥನವಪ್ರತಿಷ್ಠೆಯಂ || [೪೬*] [ವಚನ || ಅಂತಾ ಪ್ರತಿಷ್ಠೆಯಂ
೮೯. ನಿಷ್ಠೆಯಿಂ ಮಾಡಿ ಮತ್ತಮದಱೊತ್ತಿನೊಳ್ತಾನೆ ಕಯ್ಯಾರೆ ಕೆಯ್ಯಮನ – ಲ್ಲಿಟ್ಟು ತೆಂಗು ಕೌಂಗ ಮಾಉ ಮಾದಳೆ [ಅತ್ತಿ] ಜಂಬು ನಿಂಬೆ ಕಂಕೇಲಿನೆಲ್ಲಿ
೯೦. ಬಾಳೆ ರಸ್ತಾಳೆ ದಾಳಿಂಬಬಂ ಮೊದಲಾದ ಫಲತರುಗಳಿಂ | ಪಲಉಂ ಪೂಗಿ – ಡುಗಳಿಂ ಬೆಳಂಗುವ ಧ [ರ್ಮ್ಮ] ತೋಂಟಮಂ | ಕಂನಡಿಯ ಕೆಱೆಯ ಕೆಳಗೆ
೯೧. ಮಾಱುಗೊಂಡ [ಮಣ್ಣು]ವಿನ ಖಂ || ಹತ್ತು ಕೊಳಗದ ಗದ್ದೆಯಂ ದೇವರ ಅಂಗರಂಗಭೋಗಕ್ಕೆ ಧಾರಾಪೂರ್ವ್ವಕ್ಕಂ ಕೊಟ್ಟು | ಧೂಪದೀಪ – [ನೀ *] ರಾಜನಂ ಮುಂತಾದ
೯೨. ವಿವಿಧೋಪಕರಣಂಗಳಂ | ಮಂಗಳ ಮಕುಟಮಂ | ಸುವರ್ನ್ನಕರ್ನ್ನತಾ – ಳಮಂ | ರಜತರದನಾದಿಶರೀರಪರಿಷ್ಕಾರಮಂ ದೇವಿಯರ್ಗ್ಗೆ ಸರ್ವ್ವಾ – ಭರಣಮಂ ಸಮರ್ಪ್ಪಿ –
೯೩. ಸಿ ಸಕಲಭುವನಂ ಪೊಗಳೆ ಪು (೦)ಣ್ಯಕೀರ್ತ್ತಿಯನುಪಾರ್ಜಿಸಿ || ಗುರು – ದೈವಂ ಮೆಚ್ಚೆ ನಿಚ್ಚಂ ಬಗೆದಣಿದ ಮನೋಭಕ್ತಿ ವಿದ್ವಜ್ಜನಂ ಬಾಪುರೆ ಬಾಪೆಂದೆತ್ತಿಕೊಂಡಾ –
೯೪. ಡುವ ವಿವಿಧಕಳಾಪ್ರೌ [ಢಿ] ವಂದಿಬ್ರಜಂ ಕಂ [1*] ಡಿರದಿಷ್ಟಾರ್ಥಂಗಳಂ ಕೊಂಡ [ಡ] ರೆ ಪೊಗಳ್ವ ವಿಶ್ರಾಣನಂ ವಿಶ್ವ [ವಂದ್ಯಂ] ಚರಿತಂ ತಾನಾಗಲೇ – ನುಂನತಿವ –
೯೫. ಡೆದನೊ ಲಕ್ಷ್ಮೀಧರಾಮಾತ್ಯವರ್ಯ್ಯಂ || [೪೭*] ಅವನಿಯನಾಕ್ರಮಿ – [ಪ] ದು ದಾನವಿಚಿತ್ರಂ ಲೋಕವಱಿಯೆ ಶುಚಿಯೆನಿಸಿ [ರ್ದ್ದುಂ] [1*] ಶಿವನುಟ್ಟ ಸೀರೆಯಂ ಪಿಡಿದವಗಡಿಪ –
೯೬. ಳ್ಕೀರ್ತ್ತಿಲಕ್ಷ್ಮಿ ಲಕ್ಷ್ಮಿಧರನಾ || [೪೮*] ಪೊಗಳಲ್ಪೊಂಬುಳಿಯೋದ ಪೆಂಪಿನ ಯಶೋಲಕ್ಷ್ಮೀಧರಂ ಬಲ್ಲವರ್ಬ್ಬಗೆಗೊಳ್ವಿಂಪಿನ ಸೊಂಪುವೆತ್ತ ಕವಿತಾಲಕ್ಷ್ಮೀಧರಂ ರಾಜನೀ [1*] ತಿಗೆ ನೇ –
೯೭. ರ್ಪ್ಪಾದ ಮಹಾಪ್ರಧಾನಪದವೀಲಕ್ಷ್ಮೀಧರಂ ಧಾತ್ರಿಯೊಳ್ನೆಗಳ್ದಂ ನಿರ್ಮ್ಮ – ಲರಾಮಚಂದ್ರತನಯಂ ಸ (೦) ನ್ಮಂತ್ರಿಲಕ್ಷ್ಮೀಧರಂ || [೪೯*] ಧರೆ ಪೊ – ಗಳ್ವಿನಮಾ ಲ –
೯೮. ಕ್ಷ್ಮೀಧರಂಗೆ ದೇ [ವಕಿ] ಯುಮೆಸೆವ ಸೋಮಲೆಯುಂ ಗೈ [1*] ನೆರದರ – ಸಿಯರಾದರ್ [ಗೊ][4] ರ್ತರಸಿಯರಾದಂತೆ ಹರಿಗೆ ಸಿರಿಯುಂ ಧರೆಯುಂ || [೫೦*]
೯೯. ಆ [ಇ] ರ್ವ್ವರೊಳು || ಪಿರಿಯಳೆನೆ ಸಂದ ಪೆರ್ಮ್ಮೆಯ ಪಿರಿಯ [ಳ್] ಸೌಭಾಗ್ಯದಿಂದ ಪಿರಿಯಳ್ಗುಣದಿಂ [1*] ಪಿರಿಯಳ್ಪಾತಿವ್ರತ್ಯದೆ ಪಿರಿಯಳೆ – ನಲ್ಪಿರಿಯಳಮಮ ದೇವಕಿ ನೆಗ –
೧೦೦. ಳ್ದ [ಳ್] || [೫೧*] ಪೂವಿನಮಾಲೆ ತುಂಬಿ [ದಿರುಳೀ] ಶನ ಜೂಟಕೆ ಚಂದ್ರಲೇಖೆ ಲಕ್ಷ್ಮೀವರನೊ [ಳ್ವುರಕ್ಕೆ] ವನಮಾಲೆ ಸಮಂತಮರ್ದಂತೆ ವಿಶ್ವಧಾ [1*] ತ್ರಿವಿನುತಪ್ರಸಿದ್ಧಗು –
೧೦೧. ಣ ಲಕ್ಷ್ಮ ಮಂತ್ರಿಗೆ ತಾನೆ ಸ [ತ್ಕ] ಳಾಭಾವಕಿ ಸೇಸೆವೆತ್ತೆಸದ ದೇವಕಿ ವಲ್ಲಭೆಯಾದಳಾವಗಂ || [೫೨*] ಆ ನೆಗಳ್ದೊಳ್ಪುವೆತ್ತೆಸವ ದೇವಕಿ ದೇವಕಿಯೆಂತು ಸರ್ವ್ವ[5]ಧಾತ್ರೀ[6] ಸಮ್ಮಾ[ನಿತ] –
೧೦೨. ರಾಮಕ್ರುಷ್ಣಯುಗಮಂ ಪಡೆದಳ್ಪ [ಡೆದಳ್ದ]ಲಂತೆ ಪ [1] ದ್ಮಾಸ[7]ನದೊ – ಳ್ಪುಮೀ ಕುವಲಯಾಂಗದ ನೇರ್ಪ್ಪುಮೊಡಂಬಡಲ್ಕೆ ತೇಜೋನಿಧಿಭಾ – ನುವಂ ವಿಬುಧಸೇವ್ಯಕಳಾನಿಧಿರಾಮಚಂದ್ರನಂ [ || ೫೩]
೧೦೩……………… ಗುರುವೆನೆ ರೂಢಿವೆತ್ತ ಲಕ್ಷ್ಮೀಧರನಂ || [೫೪*]
೧೦೪……………. ಆಚಂದಾರ್ಕವಾಗಿ ನಾಗಜೀಯಗೆ ಕೊಟ್ಟರು ||
ಇದೇ ಕಲ್ಲಿನ ಒಂದು ಪಕ್ಕದಲ್ಲಿ
೧೦೫. ವೀರಾವತಮೆಸೆವಂತಿರೆ ಚಾರುಚಮ ]ತ್ಕಾ –
೧೦೬. ರ] ದಿಂದ ವಿಬುಧಜನಂ ಕೈ [1*] ದೋರಿಸೆ ಲಕ್ಷ್ಮ[ಣ] –
೧೦೭. ಮಂತ್ರಿ ಕುಮಾರಚತುಷ್ಟಯದಿನೆಸೆದನ –
೧೦೮. ವನೀತಳದೊಳ್ || [೫೫*] ತನುವಂ ಮ (೦)ನ್ಮಥ ಸೌಮ್ಯ ಭಾ –
೧೦೯. ವಮೊಳಕೆಯ್ಯಲ್ನಂದನಶ್ರೀಮುಖಂ ತನ –
೧೧೦. ಗಾನಂದಮನೀಯೆ ವಿಕ್ತಮಜಯಂಗ –
೧೧೧. ಳ್ದೋಳೊಳಿಂಬಾಗೆ ನೆ [1*] ಟ್ಟನೆ ಸಾಧಾರಣಮಲ್ಲದೀ –
೧೧೨. ಶ್ವರದಾಬ್ಜಂ ಪಾರ್ಥ್ಥಿವಶ್ರೀಯ್ಯನೀಯ್ಯೆ ನಯ –
೧೧೩. ಂಬೆರ್ತ್ತುದು ಕೀರ್ತ್ತಿದುಂದುಭಿನಿನಾದಂ ಲಕ್ಷ್ಮ –
೧೧೪. ಣಾಮಾತ್ಯನ || [೫೬*] [ಪಿಂಗ]ದೆ ಲಕ್ಷ್ಮೀಧರಶಚಿವಂ –
೧೧೫. ಗಾಚಂದ್ರಾರ್ಕ್ಕಮೊದವಿದಾಯುಂ ಶೀಯು –
೧೧೭. ವಾಗೆ ಮಧುರನೀ ಶಾಸನಮಂ || [೫೭*] ಬಗೆಗೊಳ್ವಂತಿವರ –
೧೧೮. ೦ ಮೆಚ್ಚಿಸಿದ ಸುಕವಿ ಸುಕ್ಷೇತ್ರಹಸ್ತ್ಯಶ್ವಭೂ
೧೧೯. ಷಾದಿಗಳಂ ಮುಂಪೆತ್ತೊಡಂ [ಭೂಭರದೊ]ಳಣಿ –
೧೨೦. ಯದೀ ಲೋಕಮೆಂದೆಂಬು ದು [1*]. ಗಮು [೦] ವೇಳ –
೧೨೧. ಳ್ಕವೀಂದ್ರಾಭರಣಮಧುರನಂ ಮಾ (೦) ನ್ಯನಂ ಗೂ –
೧೨೨. ಡಿ ತಂನಿಂ ಮಿಗಿಲೆಂಬಂತಳ್ಕಱಿಂ …. ನವ –
೧೨೩. ನಿಯೊಳ್ಮಂತ್ರಿಲಕ್ಷ್ಮೀಧರಾಂಕಂ || [೫೮*] ಗಣಿದಂಗೊ –
೧೨೪. ಳ್ವೆಡೆ ಮಿಕ್ಕಿನಕರದ ಮಾತಂತಿ [ರ್ಕ್ಕೆ] ತನ್ನಾಣೆ
೧೨೫. ಘೋಷಣೆ ಸಲ್ಗುಂ ಸುಕವೀಂದ್ರರ್ವುಂದಸಭೆಯೊ
೧೨೬. ಳ್ ತಾನೆಂದೊಡಂಮಂಮ ಧಾ [1*] ರಿಣಿಯೊಳ್ಕೇಳ್ದಱಿಯಾ –
೧೨೭. ರ್ಜಡಾ ಮಧು[ರ] ನಂ [ನಿ]ರ್ನ್ನೀತಕರ್ನ್ನಾಟಲಕ್ಷ್ಮಣ –
೧೨೮. ಪಾದಸರೋಜನಂ ಪ್ರವಿಲಸದ್ಧಾತ್ರೀಮುಖಾಂಭೋ –
೧೨೯. ಜನಂ || [೫೯*] ಯೀ ಸಿದ್ಧಶಾಸನಂ ಕೈಲಾಸಂ ಹಿಮಗಿರಿ ಸು –
೧೩೦. ಮೇರು ವಾರಾಶಿ [ನಿಲಂ] [1*] ನೇಸಱು ನೆಗಳ್ವಿನಮೆಂದುಂ
೧೩೧. ಮಾಸದೆ ಮುಸುಳಿಸದೆ ನಿಲ್ಕೆ ನಿಃ (ಪ್ರ) ತೂ ಹಂ || [೬೦*]
ಇದೇ ಕಲ್ಲಿನ ತಲೆಯ ಮೇಲೆ
೧೩೨. ಹರಿಹರದ
೧೩೩. ಧರಣೋಜ –
೧೩೪. ನ ಬರಹ[II*]
[1] ‘ನಾಡಾಡಿಯೆ’ ಎಂದು ಇರಬಹುದು.
[2] ‘ನಾಡಾಡಿಯೆ’ ಎಂದು ಇರಬಹುದು.
[3] ‘ಗಿ’ ಇರಬಹುದು ೨ ‘ದ’ ಇರಬಹುದು.
[4] [ಕೂ] ಇರಬಹುದು
[5] ಧಾತ್ರೀ ಅನವಶ್ಯ.
[6] ಧಾತ್ರೀ ಅನವಶ್ಯ.
[7] ‘ನ’ ಇರಬಹುದು.
Leave A Comment