ಮೊದಲನೆಯ ಅಂಕಿ ಪುಟವನ್ನೂ ಎರಡನೆಯ ಅಂಕಿ ಪದ್ಯವನ್ನೂ ನಿರ್ದೇಶಿಸುತ್ತದೆ.
ಅ
ಅಂಗಚಿತ್ತ ೧೪೮ – ೨೨ ಪಾರಿತೋಷಿಕವಾಗಿ ತನ್ನ ಮೈಮೇಲಿಂದ ತೆಗೆದುಕೊಡುವ ವಸ್ತ್ರ, ಆಭರಣ
ಅಂಗದಾಹ ೮೨ – ೯೦ ಶರೀರದ ತಾಪ
ಅಂಗವಟ್ಟ ೧೩೦ – ೧೦೪ ವ ಮೈಮೇಲೆ ಹೊದೆಯುವ ಬಟ್ಟೆ
ಅಂಚಳ ೧೬೦ – ೮೪ ವಸ್ತ್ರದ ತುದಿ
ಅಂಚಿರ ೨೨ – ೧೦೯ ವ ಚಂಚಲ
ಅಂಚೆ ೧೩೩ – ೧೧೭ ಹಂಸ
ಅಂಜಳಿಪುಟ ೫೮ – ೪೮ವ ಬೊಗಸೆ
ಅಂಡಲೆ ೧೪೩ – ೫ ಕಾಡು, ಹಿಂಸೆಮಾಡು
ಅಂತಿಕ ೧೭೯ – ೨೭ವ ಹತ್ತಿರ, ಸಮೀಪ
ಅಂಬುದ ೧೭೯ – ೨೭ವ ಹತ್ತಿರ, ಸಮೀಪ
ಅಂಬುದ ೨೫ – ೧೨೧ ಮೇಘ
ಅಂಬುದುರ್ಗ ೪೦ – ೩೫ ನೀರಿನ ಕೋಟೆ
ಅಂಶುಕ ೮೬ – ೧೧ ಬಟ್ಟೆ
ಅಕುಲೀನತೆ ೫೫ – ೩೩ ಸತ್ಕುಲದಲ್ಲಿ ಹುಟ್ಟಿಲ್ಲ ದಿರುವುದು, ಭೂಮಿಯ ಸ್ಪರ್ಶವಿಲ್ಲದಿ ರುವುದು
ಅಕೂಪಾರ ೮೪ – ೧ವ ಸಾಗರ, ಸಮುದ್ರ
ಅಗಾರ ೨೩ – ೧೧೧ ಮನೆ
ಅಗಿ ೩೭ – ೧೭ ಹೆದರು, ಅಂಜು
ಅಗುರ್ವು ೩ – ೩ ಅತಿಶಯ, ಭಯ, ಬೆರಗು
ಅಚ್ಚಬಾಸಿಗ ೧೩೨ – ೧೧೦ವ ಒಳ್ಳೆಯ ಹೂವುಗಳಿಂದ ಕಟ್ಟದ ಹಾರ
ಅಜನಿಸು ೬೧ – ೬೩ ಉಂಟುಮಾಡು, ಹುಟ್ಟಿಸು
ಅಜ್ಜಿಕೆ ೪ – ೧೦ ಜೈನಸಂನ್ಯಾಸಿನಿ
ಅಟ್ಟಂಕ ೧೭೫ – ೯ ಮೇಲ್ಭಾಗ (?)
ಅಟ್ಟಳೆ ೨೯೧ – ೧೨೫ ಕೊತ್ತಳ, ಬುರುಜು
ಅಟ್ಟಾಳ ೨೫ – ೧೨೩ ಕೊತ್ತಳ, ಬುರುಜು
ಅಡಗು ೨೫೮ – ೧೩೬ ವ ಮಾಂಸ
ಅಡಬಳ ೨೫೭ – ೧೩೧ ಮಾಂಸ
ಅಡಸು ೮೯ – ೩೦ ಒಳಸೇರಿಸು, ತುರುಕು
ಅಡರ್ಪು ೧೩೪ – ೧೧೮ವ ಊರೆ, ಆಧಾರ
ಅಡಿಕಿಲ್ಗೊಳ್ ೩೧ – ೧೫೪ ಒಂದರಮೇಲೊಂದಾಗಿ ಪೇರಿಸಿದು, ದಟ್ಟವಾಗಿರು
ಅಡುಕುವಾಸು ೧೩೩ – ೧೧೭ವ ಒಂದರ ಮೇಲೊಂದು ಸೇರಸಿದ ಹಾಸು
ಅಡ್ಡಣ ೧೨೩ – ೬೫ ಗುರಾಣಿ
ಅಡ್ಡತಾಳ ೨೦೭ – ೧ವ ಸಪ್ತತಾಳಗಳಲ್ಲಿ ಒಂದು
ಅಣಂ ೬೯ – ೩೦ ಸ್ವಲ್ಪವೂ
ಅಣಿವಣ ೨೯೮ – ೧೫೭ ಅಣಿವಿಣಿ, ಬಿಕ್ಕಟ್ಟು (?)
ಅಣೆದುನೊಂಕು ೧೬೬ – ೧೧೦ ವ ಗುರಿಯನ್ನು ತೋರಿಸಿ ತಟ್ಟಿ ಮುಂದಕ್ಕೆ ಬಿಡು
ಅತನು ೧೩೫ – ೧೨೪ ಮನ್ನಥ
ಅತಿಶಯಿಸು ೫೮ – ೪೭ ಮೀರು, ಮೇಲಾಗು
ಅತೀತಜನ್ಮ ೯೭ – ೬೬ ವ ಹಿಂದಿನ ಜನ್ಮ
ಅದಿರ್ಮುತ್ತೆ ೨೪೯ – ೮೭ ಒಂದು ಬಗೆಯ ಹೂವು, ಮಾಧವಿ
ಅಧರತ್ವ ೨೪ – ೧೨೦ ಕೀಳಾಗಿರುವುದು, ಕೀಳುತನ
ಅಧಿವಾಸನ ೧೩೪ – ೧೧೮ವ ಸುಗಂಧದ್ರವ್ಯಗಳಿಂದ ವಾಸನೆ ಕಟ್ಟುವುದು
ಅಧ್ವಗ ೧೮ – ೯೦ ದಾರಿಹೋಕ
ಅಧ್ವಾನಿಸು ೨೫೦ – ೯೭ ತೊಂದರೆಮಾಡು
ಅನವದ್ಯ ೧೬೫ – ೧೦೮ ನಿಷ್ಕಳಂಕವಾದ
ಅನಾಗತ ೧೦೫ – ೧೦೦ ವ ಭವಿಷ್ಯ
ಅನಾರತಂ ೫ – ೧೩ ನಿರಂತರವಾಗಿ
ಅನಿಶಂ ೩ – ೧ ಯಾವಾಗಲೂ
ಅನುಭೂತಿ ೮೭ – ೧೬ ದರ್ಶನ, ಸಾಕ್ಷಾತ್ಕಾರ
ಅನುಮಾನ ೯೭ – ೬೬ವ ತರ್ಕ, ಊಹೆ
ಅನುಮೇಯ ೯೭ – ೬೬ವ ತರ್ಕದಿಂದ ತಿಳಿಯ ಬಹುದಾದುದು
ಅನೋಕಹ ೨೧ – ೧೦೨ ಮರ
ಅನ್ನಯ ೧೬೯ – ೧೨೮ ಅನ್ಯಾಯ
ಅಪಲಾಪನ ೯೭ – ೬೬ವ ಅಸತ್ಯ, ಮುಚ್ಚುಮರೆಯಾತು
ಅಪವರ್ಗ ೪ – ೭ ಮುಕ್ತಿ
ಅಪಾಂಗ ೧೫೫ – ೫೬ ಕಡೆಗಣ್ಣು
ಅಪೋಹಿಸು ೨೪೯ – ೮೮ ಕಳೆ, ನಿವಾರಿಸು
ಅಪ್ಪಯಿಸು ೧೧೨ – ೧೬ವ ಒಪ್ಪಿಸು, ವಹಿಸು, ಆಶ್ರಯಿಸು
ಅಪ್ಪುಕೆಯ್ ೨೨೦ – ೬೧ವ ಅಂಗೀಕರಿಸು, ಒಪ್ಪು
ಅಭಿಜ್ಞ ೧೦ – ೪೬ ಚೆನ್ನಾಗಿ ತಿಳಿದವನು
ಅಭಿನೂತ ೧೯೯ – ೧೨೮ ಹೊಗಳಲ್ಪಟ್ಟ, ಶ್ರೇಷ್ಠವಾದ
ಅಭಿರಾಮ ೨೦ – ೧೦೦ ಮನೋಹರವಾದ
ಅಭಿವಾಂಛೆ ೨೮ – ೧೪೦ ಉತ್ಕಟವಾದ ಅಪೇಕ್ಷೆ
ಅಭಿಷವ ೧೯೨ – ೯೪ ಅಭಿಷೇಕ
ಅಭಿಷಿಂಚಿಸು ೪೦೪ – ೧೨೫ ಅಭಿಷೇಕಮಾಡು
ಅಭಿಷ್ಟುತ ೬ – ೨೨ ಕೊಂಡಾಡಲ್ಪಟ್ಟ
ಅಭೀಕ್ಷಿಸು ೨೦೨ – ೧೪೧ ಚೆನ್ನಾಗಿ ನೋಡು
ಅಮಳ್ಗಂಗ ೨೨೦ – ೬೫ ಜೋಡಿಕಂಭ
ಅಮ್ಮು ೨೦೦ – ೧೩೪ ಸಮರ್ಥವಾಗು
ಅಯ ೭೩ – ೩೫ ಅರಳಿಸು
ಅರಳ್ಚಿಸು ೧೭೬ – ೧೫ ಅರಳಿಸು
ಅರಿಷ್ಟ ೧೪೬ – ೧೬ ವ ಶುಭ, ಮಂಗಳ
ಅರ್ಧಮಾಗಧಿ ೫೦೩ – ೨೫೨ವ ಜೈನಾಗಮಗಳ ಭಾಷೆ
ಅರ್ಯಮ ೧೧೯ – ೪೮ ಸೂರ್ಯ
ಅರ್ವಿಸು ೮೦ – ೮೧ ಸುಡು
ಅಲಕ್ತಕ ೧೭೦ – ೧೩೩ ಅರಗು
ಅಲರ್ ೧೫೬ – ೬೦ ಹೂವು
ಅಲರ್ಚಿಸು ೧೩೫ – ೧೨೨ ಅರಳಿಸು
ಅಲರ್ಚು ೩೨೪ – ೯೫ ವ ಅರಳಿಸು
ಅವಗತ ೨೮ – ೧೩೮, ೨೧೨ – ೨೩ ವ ಚೆನ್ನಾಗಿ ತಿಳಿದು ಕೊಂಡ, ಕಳೆದುಹೋದ
ಅವಗಮ್ಮ ೯೭ – ೬೬ ವ ತಿಳಿಯಬಹುದಾದ
ಅವಗವಿಸು ೨೬ – ೧೩೪, ೩೦ – ೧೫೨, ೨೨೧ – ೬೮ವ, ಪಡೆ, ಹೋಂದು, ಪರಿಹಾಸ ಮಾಡು
ಅವಗುಂಠಿತ ೨೯೨ – ೧೨೭ವ ಹೊದಿಸಲ್ಪಟ್ಟ, ಮರೆಮಾಡಲ್ಪಟ್ಟ
ಅವತಂಸ ೨೧೯ – ೫೭ (ಕಿವಿಯ) ಆಭರಣ
ಅವಭಾಸಿತ ೧೯ – ೯೩ವ ಹೊಳೆಯುವ, ಕಾಂತಿಯಿಂದ ಕೂಡಿದ
ಅವಲೀಢ ೭೫ – ೫೮ ನೆಕ್ಕಲ್ಪಟ್ಟ, ವ್ಯಾಪಿಸಲ್ಪಟ್ಟ
ಅವಷ್ಟಂಭಿಸು ೨೮೪ – ೮೭ವ ಆಶ್ರಯಿಸು
ಅವಸರಂಬಡು ೩೧೧ – ೨೭ವ ಅವಕಾಶವನ್ನು ಹೊಂದು
ಅವ್ವಳಿಸು ೧೩೮ – ೧೪೧ ಮೇಲೆಬೀಳು, ಆಕ್ರಮಿಸು
ಅಷ್ಟಚತ್ವಾರೀಶ ೪೬೮ – ೮೮ವ ನಲವತ್ತೆಂಟು
ಅಸಮಯಾಯುಧ ೪೬ – ೬೬ ಮನ್ಮಥ
ಅಸಿಕಾಱ ೪೫೪ – ೧೭ ಕತ್ತಿಯನ್ನು ಹಿಡಿದ ಸೈನಿಕ
ಅಸುಕೆ ೪೯ – ೯ ಅಶೋಕ ವೃಕ್ಷ
ಅಸ್ತೋಕ ೧೩ – ೬೧ವ ಅಧಿಕವಾದ, ಮಹತ್ತಾದ
ಅಹಿಜ ೩೮ – ೨೩ವ ಹಾವು (?)
ಅಳುಂಬ ೪೬ – ೬೭ ವ ಆಧಿಕ್ಯ
ಅಳುರ್ಕೆ ೨೦೮ – ೩ವ ಹರಡುವುದು, ಅತಿಶಯ ವಾಗುವುದು
ಅಳ್ತಿ ೧೪೨ – ೧೫೭ ಪ್ರೀತಿ
ಅಳ್ಳಿಱಿ ೫೪ – ೨೯ ವ ಅಲುಗಾಡು, ಸ್ಪಂದಿಸು
ಱಱುದಿಂಗಳು ೧೧೭ – ೩೮ ವ ಆರುತಿಂಗಳು
ಅಱುನೀರು ೮೦ – ೮೦ ಬತ್ತಿದ ನೀರು
ಆಱೆ ೧೮೧ – ೪೦ ಬಂಡೆ
ಅಱೆಯಟ್ಟು ೧೬೫ – ೧೦೬ ಬೆನ್ನಟ್ಟಿಹೋಗು, ಹೊಡೆದೋಡಿಸು
ಆ
ಆಂಕೆಗೊಳ್ ೪೮ – ೧ವ ಪ್ರತಿಭಟಿಸು, ಎದುರಿಸು
ಆಕಳನ ೧೪೭ – ೨೨ ಶೇಖರಿಸುವುದು
ಆಕಳಿತ ೧೪ – ೬೭ ಸೇರಿದ, ಕೂಡಿದ
ಆಕೀರ್ಣ ೧೨ – ೫೯ ಹರಡಿದ, ತುಂಬಿದ
ಆಕುಳಿತ ೯೯ – ೭೩ವ ತುಂಬಿದ
ಆಕೃಷ್ಟಿ ೨೮೨ – ೭೭ ಆಕರ್ಷಿಸಲ್ಪಟ್ಟ
ಆಖಂಡಳ ೨೦೯ – ೮ ದೇವೇಂದ್ರ
ಆಗತಿ ೮೮ – ೨೩ ಬರುವುದು, ಸೇರುವುದು
ಆಗಿಸು ೧೦೯ – ೧ ಉಂಟುಮಾಡು
ಆಗುಳಿರ್ಕೆ ೭೧ – ೩೮ ಆಕಳಿಕೆ
ಆಟಕಾಱ ೪೫೧ – ೧೭ ಆಟವಾಡುವವನು
ಆಡುಂಬೊಲ ೬೮ – ೨೩ವ ಆಟದ ಬಯಲು
ಆತಪವಾರಣ ೩೦೮ – ೧೭ ಛತ್ರಿ, ಕೊಡೆ
ಆತ್ತಚಿತ್ತ ೧೩೯ – ೧೪೫ ಮನಸ್ಸಿನ ಏಕಾಗ್ರತೆಯುಳ್ಳವನು
ಆದಂ ೨೪ – ೧೧೮ ವಿಶೇಷವಾಗಿ
ಆದಮೆ ೩೦ – ೧೫೨ ವಿಶೇಷವಾಗಿ
ಆಧರಿಸು ೧೦೪ – ೯೫ ಆಧಾರವಾಗಿಮಾಡಿಕೊ
ಆನಕ ೪೯೩ – ೨೧೨ ನಗಾರಿ
ಆಪಣ ೨೦ – ೯೭ ಅಂಗಡಿ
ಆಭೋಗ ೧೧೫ – ೨೮ ಸುಖ, ಸಂತೋಷ
ಆಮುತ್ರಿಕ ೩೨೪ – ೯೩ ವ ಮೋಕ್ಷ
ಆಯತ್ತ ೯ – ೪೦ ಪಡೆದ, ಹೊಂದಿದ
ಆಯಾತ ೨೩೦ – ೩ ವ ಬಂದ
ಆರ್ಪು ೨೬ – ೧೨೮ ಸಾಮರ್ಥ್ಯ
ಆಲ್ ೧೯೧ – ೮೮ ಗಟ್ಟಿಯಾಗಿ ಕೂಗು
ಆಲಾನಸ್ತಂಭ ೧೭೯ – ೨೭ ವ ಆನೆಯನ್ನು ಕಟ್ಟುವ ಕಂಬ
ಆವಗಂ ೨೦೫ – ೧೫೭ ಯಾವಾಗಲೂ
ಅವಸಥ ೨೦ – ೯೯ ವಾಸಸ್ಥಾನ, ಮನೆ
ಆವಿಳ ೨೬ – ೧೩೦ ಕದಡಿದ, ಕೂಡಿದ, ಸೇರಿದ
ಆವೆಯೋಡು ೨೫೭ – ೧೩೦ ಮಣ್ಣಿನ ಮಡಕೆ
ಆಶಾಂತ ೧೫೦ – ೩೬ ದಿಕ್ಕಿನ ಕೊನೆ
ಆಸವ ೨೫೬ – ೧೨೪ವ ಮದ್ಯ
ಆಱಡಿ ೨೨ – ೧೦೯ವ, ೭೫ – ೭ ತುಂಬಿ, ಸೂರೆ
ಇ
ಇಂದಿಂದಿರ ೨೨ – ೧೦೯ವ ತುಂಬಿ
ಇಂದಿರೆ ೨೬ – ೧೨೭ ಲಕ್ಷ್ಮಿ
ಇಂಬು ೨೧೧ – ೧೯, ೧೯ – ೧೧೪ ಆಶ್ರಯ, ನೆಲೆ, ಪ್ರೀತಿ
ಇಕ್ಷುವಾಟ ೧೪ – ೭೨ ಕಬ್ಬಿನ ತೋಟ
ಇಟ್ಟೆಡೆ ೨೪೪ – ೬೭ ಇಕ್ಕಟ್ಟು
ಇದ್ದ ೬ – ೨೨ ವೃದ್ಧಿಹೊಂದಿದ
ಇನಿಮಿನಿ ೮೭ – ೧೫ವ ಚೆನ್ನಾಗಿ, ವಿಶೇಷವಾಗಿ (?)
ಇಬ್ಬರಿ ೮೫ – ೭ ಎರಡುಮಗ್ಗುಲು
ಇಮ್ಮಡಿಸು ೨೬ – ೧೨೯ ಎರಡರಷ್ಟುಮಾಡು
ಇರೆ ೩೮ – ೨೩ ಭೂಮಿ
ಇಳಿಕೆಯ್ ೧೩೧ – ೧೦೫ ಕಡೆಗಣಿಸು, ಕೀಳಾಗಿ ಕಾಣು
ಇಳ್ಕುಳಿಗೊಳ್ ೨೧೬ – ೪೩ ಸೆಳೆದುಕೊಳ್ಳು, ಆಕರ್ಷಿಸು
ಈ
ಈಡಾರ್ಡು ೯೨ – ೪೬ ವ ಚೆಲ್ಲಾಡು, ತೂರಾಡು
ಈಡಿಱಿ ೧೯೯ – ೧೨೮ ಕೊಂಬಿನಿಂದ ಬಲವಾಗಿ ತಿವಿ
ಈರೇಳು ೧೩ – ೬೦ ಹದಿನಾಲ್ಕು
ಈರೈದು ೨೧೦ – ೧೪ ಹತ್ತು
ಈಸು ೪೨೯ – ೭೦ ಈಜು
ಈಱಾಱು ೧೩೯ – ೧೬೬ ಹನ್ನೆರಡು
ಉ
ಉಕ್ಕೆವ ೩೭ – ೧೬ ಉತ್ಸಾಹ, ಸಡಗರ
ಉಗ್ಘಡಿಸು ೨೩ – ೧೧೨ ಘೋಷಿಸು, ಗಟ್ಟಿಯಾಗಿ ಕೂಗಿ ಹೇಳು
ಉಚ್ಚು ೧೧೬ – ೩೨ ಭೇದಿಸು, ಚುಚ್ಚು, ತಿವಿ
ಉಜ್ಜುಗ ೧೨ – ೫೮ ಉದ್ಯೋಗ, ಕಾರ್ಯ
ಉಜ್ಝನ ೧೯ – ೯೪ ಬಿಡುವುದು
ಉಠಬೈಸ ೪೫೩ – ೨೨ ಮಲ್ಲಯುದ್ಧದ ವರಸೆ
ಉಡುಚೋರ ೧೬೯ – ೧೨೮ ನಕ್ಷತ್ರಗಳ ಕಾಂತಿಯನ್ನು ಮಸಳಿಸುವವನು, ಚಂದ್ರ
ಉಣ್ಮು ೩ – ೫ ಹೊಮ್ಮು, ಹೊರಸೂರು
ಉತ್ಕಂಪ ೧೨ – ೫೮ ನಡುಕ
ಉತ್ಕರ ೧೧ – ೫೧ ರಾಶಿ, ಸಮೂಹ
ಉತ್ಕಳಿಕ ೬೬ – ೧೨ ವಿರಹಕಾತರತೆ
ಉತ್ತಂಸ ೨೭೫ – ೪೪ವ ಆಭರಣ
ಉತ್ಸೇಧ ೧೬೯ – ೧೨೪ ವ ಎತ್ತರ, ಔನ್ನತ್ಯ, ಉದ್ದ
ಉದಗ್ರ ೨೦೧ – ೧೨೮ವ ಎತ್ತರವಾದ
ಉದೀರಣ ೩೩೮ – ೧೬೦ವ ಹೇಳುವಿಕೆ
ಉದ್ಘ ೩ – ೨ ಶ್ರೇಷ್ಠವಾದ
ಉದ್ಧವ ೪೫ – ೧ವ ಹಬ್ಬ, ಉತ್ಸವ
ಉದ್ಧುರ ೩ – ೩ ಶ್ರೇಷ್ಠವಾದ
ಉದ್ಧೂತ ೧೦೬ – ೧೦೧ ವ ಮೇಲಕ್ಕೆಸೆಯಲ್ಪಟ್ಟ
ಉದ್ವವರ್ತನಂಗೆಯ್ ೨೭೫ – ೪೪ ವ ಸುಗಂಧ ದ್ರವ್ಯಗಳನ್ನು ಲೇಪಿಸು
ಉಪಚಯ ೬೮ – ೨೨ ರಾಶಿ, ಸಮೂಹ
ಉಪಪತ್ತಿ ೯೭ – ೬೬ವ ಸಿದ್ಧಾಂತವನ್ನು ಸಮರ್ಥಿಸುವುದಕ್ಕೆ ಮಾಡುವ ತರ್ಕ
ಉಪಾಧಿ ೨೮೬ – ೧೦೧ ತೊಂದರೆ, ಹಿಂದೆ
ಉಪ್ತ ೧೯ – ೯೩ ಬಿತ್ತಿದ
ಉಪ್ಪವಡಿಸು ೧೩೯ – ೧೪೨ವ ನಿದ್ರೆಯಿಂದ ಎಚ್ಚರಗೊಳ್ಳು
ಉಪ್ಪುಗಂಡ ೨೫೭ – ೧೩೨ವ ಉಪ್ಪನ್ನು ಸವರಿದ ಮಾಂಸದ ತುಂಡು (?)
ಉಬ್ಬೆಗ ೩೧ – ೧೫೭ ದುಃಖ, ಸಂತಾಪ, ಚಿಂತೆ
ಉಭಯಜಿಹ್ವ ೮ – ೩೪ ಹಾವು
ಉಮ್ಮಳ ೨೨೫ – ೮೮ ದುಃಖ
ಉರವಣಿಸು ೨೨೮ – ೧೦೧ ರಭಸದಿಂದ ನುಗ್ಗು, ಆಕ್ರಮಿಸು
ಉರ್ಕು ೧೬೮ – ೧೨೩ ದರ್ಪ, ಪೌರುಷ
ಉರ್ಪು ೧೫೩ – ೪೬ವ ಅತಿಶಯ, ಹೆಚ್ಚಳ
ಉಲಿ ೧೧೨ – ೧೫ ಧ್ವನಿಮಾಡು
ಉಷ್ಣಕರ ೫೫ – ೩೪ ಶಾಖವಾದ ಕಿರಣಗಳುಳ್ಳವನು, ಸೂರ್ಯ
ಊಡು ೧೨೪ – ೬೭ ತಿನ್ನಿಸು
ಊರ್ಮಿ ೨೪ – ೧೧೫ ದೊಡ್ಡ ಅಲೆ
ಎ
ಎಕ್ಕತಾಳ ೨೦೭ – ೧ವ ಸಪ್ತತಾಳಗಳಲ್ಲಿ ಒಂದು ಸ್ವರಮೇಳ
ಎಕ್ಕತುಳ ೩೬೨ – ೯೧ವ ಪರಾಕ್ರಮ, ಶೌರ್ಯ
ಎಕ್ಕಾವಳಿ ೧೩೯ – ೧೪೪ ಒಂದೆಳೆಯ ಸರ
ಎಗ್ಗ ೮೨ – ೫೪ ಅಸಂಸ್ಕೃತ, ದಡ್ಡ, ಒರಟ
ಎಡೆದೆಱಹು ೧೫ – ೭೨ ಬಿಡುವು, ವಿರಾಮ
ಎಡೆಯಾಡು ೧೫ – ೭೪ ಅಲೆದಾಡು, ಸಂಚರಿಸು
ಎಡೆಯುಡುಗು, ೬೬ – ೧೨ವ ನಡುವೆ ನಿಂತುಹೋಗು
ಎಡೆವಱಿ ೧೧೯ – ೩೪ವ ನಡುವೆ ಕತ್ತರಿಸಿಹೋಗು
ಎಡ್ಡ ೨೧೦ – ೧೬ವ ಸುಂದರ, ಮನೋಹರ
ಎನಸುಂ ೧೯೩ – ೯೬ ಬಹಳವಾಗಿ
ಎಯ್ದೆ ೧೭ – ೮೫ ಚೆನ್ನಾಗಿ, ವಿಶೇಷವಾಗಿ
ಎಯ್ಯಮೃಗ ೨೫೩ – ೧೧೩ ಮುಳ್ಳುಹಂದಿ
ಎಲರ್ ೧೫೬ – ೬೦ ಗಾಳಿ
ಎಸಕ ೬೯ – ೨೭ ಕಾರ್ಯ
ಎಸು ೨೬ – ೧೨೯ ಬಾಣಪ್ರಯೋಗಮಾಡು
ಎಳೆಮುದ್ದು ೭೮ – ೬೮ ಸಣ್ಣಮಕ್ಕಳ ಮುದ್ದು
ಎಱಕ ೨೧೬ – ೪೧ ಪ್ರೀತಿ
ಏ
ಏಗಳುಂ ೧೬ – ೮೧ ಯಾವಾಗಲೂ
ಏಡಿಸು ೩೦೫ – ೬ ತಿರಸ್ಕರಿಸು, ಜರೆ
ಏಳಾಲತೆ ೨೪೯ – ೮೭ ಏಲಕ್ಕಿಬಳ್ಳಿ
ಏಳಿಸು ೧೦೬ – ೧೦೩ ಅವಹೇಳನಮಾಡು, ನಿಂದಿಸು, ಹೀಯಾಳಿಸು
ಐ
ಐಸರ ೧೩೧ – ೧೦೭ ಐದು ಎಳೆಯ ಹಾರ
ಐಳಬಿಳ ೧೦೬ – ೧೦೩ ಕುಬೇರ
ಒ
ಒಗು ೮೬ – ೧೪ ಹೊರಸೂಸು, ಚೆಲ್ಲು
ಒಟ್ಜಜೆ ೮೮ – ೨೩ ಗುಂಪು, ಸಮೂಹ
ಒಟ್ಟೆ ೨೪೧ – ೫೩ ಒಂಟೆ
ಒಟ್ಟೈಸು ೧೯೭ – ೧೧೫ ಗುಂಪುಕೂಡಿಸು, ರಾಶಿ ಮಾಡು
ಒಡರಿಸು ೭೯ – ೭೫ ಮಾತು, ನರೆವೇರಿಸು
ಒಡರ್ಚಿಸು ೧೬೫ – ೧೦೭ ಉಂಟುಮಾಡು
ಒಡರ್ಚು ೧೭೩ – ೧೪೪ ತೊಡಗು, ಮಾಡು
ಒಡವರು ೨೭೭ – ೫೧ ವ ಜೊತೆಯಲ್ಲಿ ಬರು
ಒಡ್ಡಯಿಸು ೧೨೭ – ೮೫ವ ಜೊತೆಯಲ್ಲಿ ಬರು
ಒಡ್ಡಯಿಸು ೧೨೭ – ೮೫ ಪ್ರದರ್ಶಿಸು, ತೋರಿಸು
ಒಡ್ಡುಗೊಳ್ ೧೭೯ – ೨೭ವ ಗುಂಪಾಗು
ಒತ್ತಮಿಸು ೧೨೫ – ೭೫ ಮೀರು, ಅತಿಕ್ರಮಿಸು
ಒದ ೨೭ – ೧೩೫ ಹೆಚ್ಚಳ, ಆಧಿಕ್ಯ
ಒದವು ೧೮ – ೯೧ ಹೆಚ್ಚಳ, ಆಧಿಕ್ಯ
ಒಯ್ಕನೆ ೧೯೮ – ೧೨೩ ನೆಟ್ಟಗೆ, ನೇರವಾಗಿ
ಒರಸೊರಸು ೧೧೪ – ೫೪ವ ತಿಕ್ಕಾಟ, ಘರ್ಷಣೆ
ಒಸಗೆ ೭೧ – ೩೮ ಶುಭ, ಮಂಗಳಕಾರ್ಯ
ಒಸರು ೭೦ – ೩೧ ಜಿನುಗು
ಒಸೆ ೨೮ – ೧೧೫ ಶೋಭಿಸು, ಸೊಗಸು, ಹಿಗ್ಗು
ಒಳುವಂಡ ೨೫ – ೧೨೫ ಒಳ್ಳಯ ಮಕರಂದ
ಒಳ್ಕವಿಲ್ ೧೭೦ – ೧೩೩ ಒಳ್ಳೆಯ ಕಪಿಲವರ್ಣ
ಒಳ್ದೊಡಿಗೆ ೨೫೨ – ೧೦೩ ಒಳ್ಳೆಯ ಆಭರಣ
ಒಳ್ಪು ೫ – ೧೬ ಸಜ್ಜನಿಕೆ, ಸುಖ, ಕ್ಷೇಮ, ಶ್ರೇಯಸ್ಸು
ಒಳ್ವಾಲು ೭೮ – ೬೮ ಒಳ್ಳೆಯ ಹಾಲು
ಓ
ಓ ೮೭ – ೧೮ ಪ್ರೀತಿಸು
ಓಗಡಿಸು ೩೯೨ – ೭೨ ಜುಗುಪ್ಸೆಹೊಂದು, ವಾಂತಿಮಾಡು
ಓಪಳ್ ೩೮೪ – ೪೦ ಪ್ರಿಯೆ, ನಲ್ಲೆ
ಓರಂತೆ ೮೪ – ೩ ಒಂದೇಸಮನೆ
ಓರಣಿ ೨೮ – ೧೩೮ ವ ಸಾಲು
ಓಲಯಿಸು ೩೨ – ೧೬೧ವ ಸೇವೆಮಾಡು
ಓಲಾಡು ೯೬ – ೬೨ ಹಿಗ್ಗು, ನಲಿದಾಡು
ಓಸರ ೨೦೮ – ೪ ಒಂದುಮಗ್ಗುಲಿಗೆ ಸರಿಯುವುದು
ಓಹಹ ೨೫೫ – ೧೨೨ ಸಾಲು, ಗುಂಪು
ಓಳಿ ೪೯೭ – ೨೨೯ ಪಂಕ್ತಿ, ಸಮೂಹ, ಕ್ರಮ
ಔ
ಔರ್ವಜ್ಜಳನ ೭೯ – ೭೨ ಸಮುದ್ರದ ಕಿಚ್ಚು
Leave A Comment