ಕಂಚನಾರ ೩೮೦ – ೨೪ವ ಒಂದು ಜಾತಿಯ ಮರ

ಕಂಚುಕಿ ೧೨೦ – ೪೯ವ ಅಂತಃಪುರದ ಅಧಿಕಾರಿ

ಕಂಡರಣೆ ೩೧ – ೧೫೬ ಕೊರೆಯುವುದು

ಕಂತುಱು ೨೫೩ – ೧೧೩ ಕುಳಿ, ಬಿಲ

ಕಂಪಾಕ್ಷಿ ೨೩೭ – ೩೧ ಚಂಚಲವಾದ ಕಣ್ಣು

ಕಂಪಾಪಾಂಗಿಕೆ ೧೩೬ – ೧೨೮ ಕಂಪನದಿಂದ ಕೂಡಿದ ಕಡೆಗಣ್ಣ ನೋಟವುಳ್ಳವಳು (?)

ಕಂಬಳ ೧೭೦ – ೧೩೩ ಕಂಬಳಿ, ಜಾಡಿ

ಕಕ್ಕಪಾಳ ೨೫೫ – ೧೨೪ ಬಗಲುಚೀಲ

ಕಚಾಕಚಿ ೨೫೭ – ೬೭ ಪರಸ್ಪರ ಕೂದಲು ಹಿಡಿದು ಎಳೆದಾಡುವುದು

ಕಜ್ಜಳ ೧೪ – ೬೭ ಕಣ್ಣಿಗೆ ಹಚ್ಚಿಕೊಳ್ಳುವ ಕಾಡಿಗೆ

ಕಟಾರ ೩೬೨ – ೯೧ವ ಬಾಕು, ಚೂರಿ

ಕಟಿದಘ್ನ ೩೮೧ – ೨೯ ಸೊಂಟದವರೆಗೆ ಮುಳುಗುವ

ಕಟ್ಟಾಯುತ ೨೦೯ – ೬ ಶ್ರೇಷ್ಠವಾದ

ಕಟ್ಟಿಗೆಕಾಱ ೫೫ – ೩೫ ದೊಣ್ಣೆ ಹಿಡಿದು ಓಲಗದಲ್ಲಿ ಶಿಸ್ತು ಕಾಯುವವನು, ವೇತ್ರಧಾರಿ

ಕಟ್ಟಿದಿರು ೮೫ – ೮ವ ಸಮಕ್ಷ, ಕಣ್ಣಿನ ಮುಂದೆ

ಕಡಪ ೩೧ – ೧೫೬ ಕಡೆಯುವಿಕೆ

ಕಡವ ೭೭ – ೬೫ ದೊಡ್ಡ ಜಿಂಕೆ, ಸಾರಂಗ

ಕಡಿತಲೆ ೩೫೮ – ೭೦ ಖಡ್ಗ, ಕತ್ತಿ

ಕಡಿಯಾಣ ೧೭೯ – ೨೯ ಕಡಿವಾಣ

ಕಡುಗಲಿ ೨೪೦ – ೪೭ ಅತ್ಯಂತ ಶೂರ

ಕಡುಗಾಳಿ ೧೭೪ – ೩ ಬಿರುಗಾಳಿ

ಕಡುನೀಱೆ ೧೨೨ – ೫೯ ಅತಿಸುಂದರಿ

ಕಡುಪು ೨೩೯ – ೪೧ ಉಗ್ರತೆ, ತೀವ್ರತೆ

ಕಡುವಿಳಿದು ೧೨೬ – ೮೩ ಅಚ್ಚಬಿಳಿಯದು

ಕಡೆಯ ೨೩೭ – ೩೦ ಕಾಲಕಡಗ

ಕಡೆಯಾಣಿ ೧೨೯ – ೯೬ವ ಚೊಕ್ಕ ಚಿನ್ನ, ಅಪರಂಜಿ

ಕಣಿಶ ೧೨೬೭ – ೧೪ ಧಾನ್ಯದ ತೆನೆ

ಕಣೆ ೬೭ – ೧೫ ಬಾಣ

ಕಣ್ಗಾಯ್ ೧೬೨ – ೯೪ ಮನೋಹರವಾಗು (?)

ಕಣ್ಗೊಳ್ ೨೬ – ೧೨೮ ಮನೋಹರವಾಗು

ಕಣ್ಗೊಳಿಸು ೩೧ – ೧೫೭ ಮನೋಹರವಾಗು

ಕಣ್ಣೆಮೆ ೨೯ – ೧೪೭ ಕಣ್ಣಿನ ರೆಪ್ಪೆ

ಕಣ್ಪೊಲ ೨೪೭ – ೭೮ ವ ಕಣ್ಣಿಗೆ ಕಾಣಿಸುವಷ್ಟು ಪ್ರದೇಶ

ಕತ್ತರ ೪೫೨ – ೧೯ ಕುಸ್ತಿಯಲ್ಲಿ ಒಂದು ವರಸೆ

ಕತ್ತಲಿಸು ೨೪೭ – ೭೮ವ ಕತ್ತಲೆಯಾಗು, ಕಪ್ಪಾಗು

ಕದಂಬಕ ೨೬೬ – ೯ ಗುಂಪು, ಸಮೂಹ, ಮೊಸರು ವಡೆ (?)

ಕದಿರ್ ೨೭೩ – ೩೬ ಕಿರಣ

ಕನಲ್ ೨೫೨ – ೧೦೪ ಸಿಟ್ಟಾಗು, ರೇಗು

ಕನ್ನೆ ೭೮ – ೬೭ ಕುಮಾರಿ, ಕನ್ಯೆ

ಕಬಳಂಗೊಳ್ ೩೬೮ – ೧೧೨ವ ತಿನ್ನು, ನುಂಗು

ಕಮ್ಮೆಣ್ಣೆ ೧೨೯ – ೯೯ ಸುವಾಸನೆಯ ಎಣ್ಣೆ

ಕಯ್ವಾರ ೩೧೧ – ೩೦ ವ ಹೊಗಳಿಕೆ, ಕೊಂಡಾಟ

ಕರವಡ ೪೫೨ – ೧೯ ಮಲ್ಲಯುದ್ಧದ ಒಂದು ಪಟ್ಟು

ಕರಿಣಿ ೧೯ – ೯೫ ಹೆಣ್ಣಾನೆ

ಕರಿವೋಗು ೮೦ – ೭೯ ಸುಟ್ಟು ಕರಿಕಾಗು

ಕರುಮಾದ ೪೬ – ೬೮ವ ಉಪ್ಪರಿಗೆ ಮನೆ

ಕರುವಿಡು ೨೨೩ – ೭೮ ಎರಕಹೊಯ್

ಕರ್ಕಟಕ ೧೬ – ೭೮ ಏಡಿ

ಕರ್ಣಪಾಲಿಕೆ ೧೨೫ – ೭೬ ವ ಕಿವಿಯ ಹಾಲೆ

ಕರ್ಣಪೂರ ೧೪೨ – ೧೫೮ ಕಿವಿಯ ಆಭರಣ

ಕರ್ದುಂಕು ೨೭೩ – ೩೮ ಕೊಕ್ಕಿನಿಂದ ಕುಕ್ಕು, ಕಚ್ಚು

ಕರ್ಬುರಿತ ೨೬೧ – ೧೪೯ ಮಿಶ್ರವರ್ಣವಾದ

ಕಲಾಪ ೯೪ – ೫೫ವ ಗುಂಪು, ಸಮೂಹ

ಕಲ್ಕ ೨೦೧ – ೧೩೭ವ ಕದಡು, ರಾಡಿ

ಕಲ್ಲಿ ೨೫೧ – ೧೦೦ ಹೆಣಿಕೆಯ ಬಲೆ, ಬಲೆಚೀಲ

ಕವಲ್ವರಿ ೨೭೮ – ೫೮ ಕವಲು ಕವಲಾಗಿ ಹರಡು, ವಿಸ್ತರಿಸು

ಕವು ೧೫೫ – ೫೭ ಆವರಿಸು, ಮುತ್ತು

ಕಳ್ ೩೧ – ೧೫೭ ಕದಿ, ಅಪಹರಿಸು

ಕಳವೆ ೧೬ – ೭೯ ಬತ್ತ

ಕಳೆ ೯೬ – ೬೪ವ ವಾದ್ಯವಿಶೇಷ (?)

ಕಱುತ್ತು ೪೦ – ೩೫ ಕೆರಳಿ, ಆವೇಶಗೊಂಡು

ಕಾಪು ೨೨೧ – ೬೮ ರಕ್ಷಣೆ

ಕಾದಂಬಿನಿ ೯೫ – ೬೦ವ ಮೋಡಗಳ ಗುಂಪು

ಕಾಲ್ಗಣ್ಚಿ ೨೫೧ – ೧೦೦ ಕಾಲಿಗೆ ಕಟ್ಟುವ ಹಗ್ಗ

ಕಾವಡಿಕಾಱ ೨೪೨ – ೫೭ ಕಾವಡಿಹೊರುವವನು, ಕಂಬಿಕಾರ

ಕಾಳಭ ೧೨ – ೫೫ ಆನೆಯ ಮರಿ

ಕಾಳಾಗರು ೧೩೩ – ೧೧೬ ವ ಕರಿಯ ಅಗರು

ಕಾಳ್ಪುರ ೨೦೭ – ೩ ಕಾಡಿನ ಪ್ರವಾಹ

ಕಿಂಕಿರಾತ ೨೫೨ – ೧೦೫ ಕೆಂಪುಗೋರಂಟಿ

ಕಿಂಜಲ್ಕ ೧೩೭ – ೧೩೫ ಹೂವಿನ ಕೇಸರ

ಕಿಸುಗಲ್ ೧೭೦ – ೧೩೩ ಕೆಂಪಾದ ಕಲ್ಲು

ಕೀರ್ತಿಮುಖ ೧೨೪ – ೭೧ ಬಳೆಯಾಕಾರದ ಒಂದು ಆಭರಣ

ಕೀಲಿಸು ೨೮ – ೧೪೧ ಸೇರಿಸು, ಕೂಡಿಸು

ಕೀಳ್ನೆಲ ೨೫೩ – ೧೧೩ ಕೆಳಗಿನ ನೆಲ, ಒಳಭೂಮಿ

ಕೀಳ್ಮಾಡು ೧೭೪ – ೫ ಕಡಮೆಮಾಡು, ತಿರಸ್ಕರಿಸು

ಕುಂಟಣಿ ೪೩೧ – ೭೭ ತಲೆಹಿಡುಕಿ

ಕುಂತಲ ೧೦

೬ – ೧೦೦ ವ ತಲೆಗೂದಲು

ಕುಂಭಭವ ೪೫೮ – ೪೬ ಅಗಸ್ತ್ಯ

ಕುಟ್ಟಿಮ ೧೪೬ – ೧೬ವ ಸಮಮಾಡಿದ ನೆಲ

ಕುಡಿ ೧೧೯ – ೪೪ವ ಗುಡಿ, ಬಾವುಟ

ಕುಡಿವೆಳಗು ೧೨೧ – ೫೫ ಬೆಳಕಿನ ಕಿರಣ

ಕುತ್ತು ೨೫೩ – ೧೧೦ ಚುಚ್ಚು, ತಿವಿ

ಕುಮಾರಕಾಲ ೨೨೭ – ೯೮ವ ಹದಿನಾರು ವರ್ಷದ ಒಳಗಿನ ಪ್ರಾಯ

ಕುಮುದ್ವತಿ ೮೫ – ೫ ಸರೋವರ

ಕುರವಕ ೩೮೧ – ೨೮ ಗೋರಂಟಿ

ಕುಲ್ಯ ೧೫ – ೭೨ ಹಳ್ಳ, ಕಾಲುವೆ

ಕುಸುಮಿಸು ೨೯೪ – ೧೩೯ವ ಹೂ ಬಿಡು

ಕುಳಿರ್ ೧೪೭ – ೨೦ವ ತಂಪಾಗಿರು

ಕುಱುಪು ೧೫೦ – ೩೮ ಗುರುತು

ಕೂಗುರಿ ೨೬೭ – ೧೩ ಒಂದು ಬಗೆಯ ಕಾಯಿಪಲ್ಯ

ಕೂರಿದು ೧೬ – ೭೯ ಹರಿತವಾದ

ಕೂರ್ಚಧರ ೨೩೦ – ೩ ಕುಂಚವನ್ನು ಹಿಡಿದವನು

ಕೂರ್ಪು ೨೭೦ – ೨೫ ಪ್ರೀತಿ, ಸ್ನೇಹ

ಕೂರ್ವಾಳ್ ೩೪೭ – ೧೨ ಹರಿತವಾದ ಕತ್ತಿ

ಕೂಸುಮೃಗ ೮೧ – ೮೬ ಮರಿಜಿಂಕೆ

ಕೆಂಬರಲ್ ೧೮೨ – ೪೨ ಕೆಂಪುಹರಳು, ಮಾಣಿಕ್ಯ

ಕೆಕ್ಕಟಗೆರಳ್ ೩೬೩ – ೯೭ವ ಹೆಚ್ಚು ಕೋಪಗೊಳ್ಳು

ಕೆಕ್ಕಳಿಸು ೨೫೩ – ೧೦೯ ರೇಗು, ಕಣ್ಣುಕೆಂಪಗೆ ಮಾಡಿ ಕೊಂಡು ನೋಡು

ಕೆಯ್ಮಿಗು ೨೧೨ – ೨೪ವ ಅಧಿಕವಾಗು, ಹೆಚ್ಚಾಗು

ಕೆಲಗೆಲ ೧೩೮ – ೧೪೧, ಸ್ವಲ್ಪ, ಕೊಂಚ

ಕೆಳೆಗೊಳ್ ೭೯ – ೭೨ ಜೊತೆಗೂಡು, ಸೇರು

ಕೇಗು ೩೧೨ – ೩೩ ನವಿಲಿನ ಕೂಗು

ಕೇರ್ ೧೩೩ – ೧೧೬ ವ ಗೋಡೆ

ಕೇವಣ ೨೯೯ – ೧೬೨ ಹರಳುಗಳನ್ನು ಕೂಡಿಸುವುದು, ಕುಂದಣ

ಕೇವಣಿಸು ೧೨೯ – ೯೬ ವ ಜೋಡಿಸು, ಪೋಣಿಸು

ಕೇಸಡಿ ೧೭೭ – ೫೧ವ ಕೆಂಪಾದ ಪಾದ

ಕೈಗಣ್ಮು ೧೮೪ – ೫೧ವ ಮೀರು, ಅತಿಶಯವಾಗು

ಕೈಗೆಯ್ ೨೧೨ – ೨೨ವ ಅಲಂಕರಿಸು, ಸಿಂಗರಿಸು

ಕೈಘಟ್ಟಿಗೊಳ್ ೩೦೨ – ೧೭೭ ವ ಸುಗಂಧವನ್ನು ಕೈಗೆ ಲೇಪಿಸಿಕೊ

ಕೈನಿಱೆ ೧೮೯ – ೭೫ ಕೈಚಾಚು

ಕೈಮಡಗು ೨೩೧ – ೭ ಕೈಮಾಡು,ಹೋರಾಡು (?)

ಕೈಮಿಗು ೧೧೫ – ೨೮ ಹೆಚ್ಚಾಗು, ಅಧಿಕವಾಗು

ಕೈಲಡೆಗೊಡು ೩೦೫ – ೭ ರಕ್ಷಣೆಯಾಗಿ ಕೊಡು

ಕೊಕ್ಕರಿಸು ೯೨ – ೪೬ ವ ಅಸಹ್ಯಪಡು

ಕೊಪ್ಪು ೧೩೧ – ೧೦೮ ಕಿವಿಯ ಆಭರಣ

ಕೊಮ್ಮು ೮೧ – ೮೨ ಕೊಂಕಿಸು, ಹೊರಳಿಸು

ಕೊಲ್ಲಣಿಗೆ ೩೮೮ – ೫೨ ವ ಸಂದಣಿ, ನೆರವಿ

ಕೊಸಗು ೪೨೮ – ೬೯ವ ಬೆಟ್ಟದಾವರೆ

ಕೊಳ್ಕೊಡೆ ೨೩೩ – ೧೩ ವಿನಿಮಯ

ಕೊಳ್ಗೆಸರ್ ೨೧೩ – ೨೭ ಮಂದವಾದ ಕೆಸರು

ಕೋಡು ೭೨ – ೪೨ ಕೊಂಬು, ತಂಪಾಗು

ಕ್ರೋಡ ೧೯೧ – ೮೪ವ ಕಾಡುಹಂದಿ

ಖನಿ ೧೫ – ೭೧ ಗಣಿ

ಖರಕರ ೨೯ – ೧೪೮ ಸೂರ್ಯ

ಖರದಂಡ ೨೯ – ೧೪೫ವ ತಾವರೆ

ಖರ್ಪರ ೧೪ – ೬೭ ತಲೆಬುರುಡೆ

ಖರ್ವ ೩೪೫ – ೧೪ವ ಒಂದು ಸಂಖ್ಯೆ

ಖರ್ವಡ ೪೭೦ – ೧೦೨ ನಗರ ಮತ್ತು ಹಳ್ಳಿಗಳ ಮಧ್ಯದಲ್ಲಿ ನದಿ ಪರ್ವತಗಳಿಂದ ಕೂಡಿದ ಗ್ರಾಮ

ಖಳ್ಗ ೩೭ – ೧೫ ಖಡ್ಗ, ಕತ್ತಿ

ಖುಸುರುಗಲಾಸೆ ೪೫೩ – ೨೨ ಒಂದು ಬಗೆಯ ಮಾತು (?)

ಗಂಗಾಸಾಗರ ೨೫೬ – ೧೨೬ ಒಂದು ಬಗೆಯ ಮದ್ಯ

ಗಗ್ಗರಿಕೆ ೩೩೬ – ೧೫೧ ಅಸ್ಪಷ್ಟವಾದ ಧ್ವನಿ

ಗಣಿಕೆ ೨೭ – ೧೩೩ ಸೂಳೆ

ಗದಗಂಪು ೨೧೦ – ೧೪ ಗದ್ಗದಧ್ವನಿ

ಗರಜಾಕರಣ ೧೪೬ – ೧೬ ವ ದಿನದ ಒಂದು ವಿಭಾಗ

ಗಱಿಗಟ್ಟು ೧೨೪ – ೭೩ ಗರಿಯನ್ನು ಕಟ್ಟು, ಬಲಗೊಳ್ಳು

ಗಾಂಧಾರ ೨೦೭ – ೧ವ ಸಪ್ತಸ್ವರಗಳಲ್ಲಿ ಒಂದು

ಗಾಡಿ ೨೭ – ೧೩೬ ಸೌಂದರ್ಯ
ಗಾವಿಲ ೯೬ – ೬೩ ಗಾಂಪ, ದಡ್ಡ

ಗುಂಟ ೨೫೧ – ೧೦೦ ಗೂಟ

ಗುಂಡಿಗೆ ೨೪೬ – ೭೫ ಪಾತ್ರೆ

ಗುಜ್ಜು ೧೪೫ – ೧೫ ಕುಳ್ಳು

ಗುಜ್ಜುಮೆಟ್ಟು ೨೯೦ – ೬೬ ಕಿರಿದಾದ ನಡಗೆ

ಗೊಂದಣಿಸು ೧೪೮ – ೨೪ ಗುಂಪುಕೂಡು

ಗೊಂದಳ ೩೨೭ – ೧೦೬ ವ ಗುಂಪು, ಸಮೂಹ

ಗೊಲಗೊಳಿಸು ೨೧೧ – ೧೭ – ತುದಿಮುಟ್ಟಿಸು

ಗೋತ್ರವಿಭೇದಿ ೨೦ – ೯೯ (ಬೆಟ್ಟಗಳನ್ನು ಸೀಳುವವನು) ಇಂದ್ರ

ಗೋಪಶಿಖಿ ೭೨ – ೪೩ ಈಶ್ವರನ ಹಣೆಗಣ್ಣಿನ ಬೆಂಕಿ

ಗೋರಿ ೪೨೯ – ೭೧ ಆಕರ್ಷಣ, ಸೆಳೆತ

ಗೋಸನೆಕಾಱ ೪೫೩ – ೨೧ವ ಗಟ್ಟಿಯಾಗಿ ಸಾರುವವನು

ಗ್ರೈವೇಯಕ ೨೦೨ – ೧೩೮ ವ ಒಂದು ಬಗೆಯ ಹಾರ

ಘಟ್ಟಿ ೨೬ – ೧೩೧ ಗಂಧ

ಘೂರ್ಣಿಸು ೨೩೮ – ೩೩ ಗರ್ಜಿಸು, ಶಬ್ದಮಾಡು

ಘೋಣ ೧೬೭ – ೧೧೪ ಕುದುರೆಯ ಮೂಗು, ಮೂಗಿನ ಹೊಳ್ಳೆ

ಘೋಳಾಯಿಲ ೩೫೩ – ೪೭ ವ ಕುದುರೆಸವಾರ

ಘೋಳಿಸು ೧೩೪ – ೧೧೮ ವ ಹುರಿ

ಚಂಡಾಂಶು ೫೧೮ – ೩೨೦ ಸೂರ್ಯ

ಚಂಪೆ ೨೩೪ – ೧೯ ಸುಗಂಧದ್ರವ್ಯ

ಚಕ್ರಿ ೮ – ೩೪ ಕೃಷ್ಣ, ವಿಷ್ಣು

ಚಚ್ಚರ ೧೦೩ – ೮೮ವ ಬೇಗನೆ, ತ್ವರಿತವಾಗಿ

ಚಚ್ಚರುಚು ೨೯೨ – ೧೩೧ ರಭಸ, ವೇಗ (?)

ಚಟ್ಟಳೆ ೨೫೭ – ೧೩೦, ೨೫೯ – ೧೪೧ ಮಣ್ಣಿನ ಪಾತ್ರೆ

ಚರಣವಾರಿಪ್ರಯೋಗ ೨೧೦ – ೧೪ ನಡಗೆಯ ಒಂದು ಭೇದ

ಚರಿಗೆ ೭೬ – ೬೧ವ ಜೈನಮುನಿಗಳ ಪಾರಣೆ

ಚರ್ಚೆ ೫೯ – ೫ವ ಲೇಪನ

ಚಲ್ಲವಾಡು ೪೯೭ – ೨೨೫ ವ ವಿಹರಿಸು, ಕ್ರೀಡಿಸು

ಚಳಯ ೫೨ – ೧೫ ಸಿಂಪಡಿಸುವಿಕೆ

ಚಳಿಸು ೨೫೧ – ೧೦೨ ಕುಟ್ಟು

ಚಾಟುಕಾರ ೨೪೭ – ೪೦ವ ಚತುರೋಕ್ತಿಯನ್ನು ಆಡುವವನು

ಚಾತುರ್ದಂತ ೨೪೩ – ೬೩ ವ ಆನೆ

ಚಾಮೀಕರ ೨೨ – ೧೦೯ ವ ಚಿನ್ನ

ಚಿಂಚಿಲಿ ೪೪೧ – ೧೧೮ ಒಂದು ಅನುಕರಣ ಶಬ್ದ

ಚಿತ್ತರ ೧೧ – ೫೧ ಚಿತ್ರ

ಚಿನ್ನಕಬ್ಬುನ ೧೭ – ೮೬ ಒಂದು ಬಗೆಯ ಲೋಹ

ಚಿಬುಕ ೩೦೬ – ೧೦ವ ಗಲ್ಲ

ಚಿಬ್ಬಂಬೊಯ್ ೨೬ – ೧೨೮ ಹಚ್ಚೆಹಾಕು
ಚಿಲ್ಲ ೨೪೮ – ೮೪ ಒಂದು ಜಾತಿಯ ಮರ

ಚುಳಕ ೧೯೩ – ೯೭ ಅಂಗೈ ಗುಳಿ

ಚೂಳಿಕೆ ೧೪ – ೬೬, ೭೦ – ೩೪ ತುದಿ, ಕೊನೆ , ನೆತ್ತಿ, ತಲೆ

ಚೆಚ್ಚರ ೮೬ – ೧೨ ಬೇಗನೆ

ಚೆನ್ನತ್ತಿ ೨೪೮ – ೮೪ ಒಂದು ಜಾತಿಯ ಮರ

ಚೇಷ್ಟಿಸು ೯೬ – ೬೪ವ ಮಾಡು, ಚಲಿಸು

ಚೋಚುಂಬ್ಯ ೨೩೦ – ೧ವ ತಾಗುವ, ಮುತ್ತಿಡುವ

ಚೋದಿಸು ೩೬೨ – ೮೯ವ ಓಡಿಸು, ನಡೆಸು

ಚೌಕಳಿ ೩೯೯ – ೧೦೨ ಕಿವಿಯ ಆಭರಣ

ಚೌಪಳಿಕೆ ೨೭೨ – ೩೨ ವ ಹಜಾರ

ಚೌರಿಗೆ ೨೩೪ – ೧೯ ಅಂಗಳ

ಚೌವಟ್ಟ ೪೫೨ – ೧೯ ಮಲ್ಲಯುದ್ದದ ಒಂದು ವರಸೆ

ಜಕ್ಕುಲಿಸು ೨೦೮ – ೩ವ ಚಕ್ಕಳಗುಳಿಯಿಡು, ವಿನೋದ ಪಡಿಸು

ಜಡಾಶಯ ೩೧೫ – ೪೯ ಜಲಾಶಯ

ಜರ್ವು ೪೬ – ೬೬ ಠೀವಿ

ಜಾಂಬೂನದ ೧೩೦ – ೧೦೦ ವ ಚಿನ್ನ

ಜಾಗರ ೧೮೨ – ೪೫ ಹೊದಿಕೆ, ಕವಚ

ಜಾನುದಘ್ನ ೩೮೧ – ೨೯ ಮೊಳಕಾಲು ಮುಳುಗುವ ವರೆಗೆ

ಜಾವುರೆ ೪೫೩ – ೨೨ ಸಂಗೀತದ ಒಂದು ಪ್ರಭೇದ

ಜಿಗೀಷು ೩೩೧ – ೧೨೮ ಜಯಿಸಲು ಬಯಸುವವನು

ಜೇವಡೆ ೨೦೭ – ೨ ಬಿಲ್ಲಿನ ಹೆದೆಯನ್ನು ಠಂಕಾರ ಮಾಡು

ಜೋಗಿಣಿ ೨೫೫ – ೧೨೪ ಯೋಗಿಣಿ, ಸಂನ್ಯಾಸಿನಿ

ಜೋಡು ೨೪೦ – ೪೭ ಕವಚ

ಜೋಳಿ ೩೯೯ – ೧೦೨ ಜೋಡಿ, ಜೊತೆ

ಝಂಪೆ ೨೦೭ – ೧ವ ಸಂಗೀತದ ತಾಳ

ಝಲ್ಲರಿ ೧೧೪ – ೨೩ ಜಾಲರಿ

ಟೆಂಟಣಿಸು ೪೩೧ – ೭೯ವ ರೇಗು

ಠಾಯ ೨೦೭ – ೧ವ, ೩೩೫ – ೧೪೪ ಕೀರ್ತನೆಯಲ್ಲಿ ಒಂದು ಬಗೆ

ಡಂಬರ ೨೨೪ – ೮೨ ಆಡಂಬರ

ಡಕ್ಕೆ ೧೨೭ – ೮೯ ಒಂದು ಚರ್ಮವಾದ್ಯ

ಡವಕೆ ೧೨೬ – ೮೪ ಉಗುಳುವ ಪಾತ್ರೆ, ಪೀಕದಾನಿ

ಡಿಂಡಿಮ ೧೫೦ – ೩೬ ಚರ್ಮವಾದ್ಯ

ಡಿಳ್ಳಿಸು ೨೨೨ – ೭೧ ಹೆದರು, ಭಯಪಡು

ಡೆಳ್ಳೆ ೫೦೦ – ೨೩೯ವ ಹೆಡಗೆ (?)

ಡೊಂಗು ೨೫೮ – ೧೩೫ ಕಂಪಿಸು, ನಡುಗು

ಢಾಳೆ ೪೩೮ – ೧೦೭ ಕ್ರಮ, ರೀತಿ (?)

ಢೊಕ್ಕರ ೪೫೨ – ೧೯ ಮಲ್ಲಯುದ್ಧದಲ್ಲಿ ಒಂದು ವರಸೆ