ತಂಡಸ ೨೪೭ – ೮೧ ಇಕ್ಕುಳ, ಒಂದು ಜಾತಿಯ ಮರ

ತಂದಲ್ ೨೨ – ೧೦೯ ವ ಸೋನೆ, ತುಂತುರುಮಳೆ

ತಂಪು ೨೫೬ – ೧೨೬ ಒಂದು ಬಗೆಯ ಹೆಂಡ

ತಂಬೆರಲ್ ೧೩ – ೧೧೬ ವ ತಂಪಾದ ಗಾಳಿ

ತಕ್ಕೈಸು ೨೭ – ೧೩೬ ಅಪ್ಪು, ಆಲಂಗಿಸು

ತಗುಳ್ ೭೦ – ೩೫ ಕೂಡು, ಸೇರು

ತಟವುಚ್ಚು ೨೨೩ – ೮೦ ಎಲ್ಲೆಮೀರು, ಮೇರೆಮೀರು

ತಟಿಲ್ಲತೆ ೨೩೯ – ೩೮ ಬಳ್ಳಿಮಿಂಚು

ತಟ್ಟುಂತಾಱು ೩೬೫ – ೧೦೬ ವ ಕೂಡು, ಸೇರು

ತಣ್ಗದಿರು ೧೩೨ – ೧೧೧ ತಂಪಾದ ಕಿರಣ, ಬೆಳುದಿಂಗಳು

ತಣ್ಣಲರ್ ೭೦ – ೩೪ ತಂಪದ ಗಾಳಿ

ತತ್ತು ೨೧೫ – ೩೭ ಸೇರು, ಕೂಡು

ತದುಕು ೨೪೯ – ೯೨ ಬೇಲ

ತನೂದರ ೭೧ – ೩೭ ತೆಳುವಾದ ಹೊಟ್ಟೆ

ತನ್ವಂಗಿ ೪೨ – ೪೬ ಹೆಂಗಸು

ತಪ್ಪಣೆಗುಟ್ಟು ೨೫೯ – ೧೩೯ ವ ತಪ್ಪು ಹೆಜ್ಜೆ ಹಾಕು, ತೂರಾಡು

ತರ್ಕಜ್ಞೆ ೪೫ – ೬೨ ತರ್ಕದಲ್ಲಿ ಪರಿಣತೆ

ತರ್ಕಯಿಸು ೧೭೭ – ೨೦ ಅಪ್ಪು, ಆಲಂಗಿಸು

ತವಿಸು ೩೪೮ – ೨೬ ನಾಶಮಾಡು, ಹಾಳುಮಾಡು

ತಳರ್ ೫೨ – ೧೯ ಚಲಿಸು

ತಳರ್ನಡೆ ೨೧೮ – ೫೧ ಚಂಚಲವಾದ ನಡಗೆ

ತಳವಱ ೯೧ – ೪೧ ಕಾವಲುಗಾರ

ತಳಿ ೧೮೫ – ೫೫ ಚಿಮುಕಿಸು

ತಳೆ ೯ – ೩೬ ಹೊಂದು, ಧರಿಸು

ತಳ್ತಿಱಿ ೩೪೪ – ೭ವ ಎದುರಿಸಿ ಹೊಡೆ

ತಳ್ಪೊಯ್ ೧೫೪ – ೫೨ ಕೂಡು, ಸೇರು

ತಳ್ಳಳಿಸು ೨೫೪ – ೧೧೭ ತಲ್ಲಣಿಸು

ತಱಿ ೨೪೮ – ೮೪ ಕದಿರ ಮರ

ತಱಿಸರ್ ೯೫ – ೬೦ವ ನಿಶ್ಚಯಿಸು

ತಾಂಬೂಲಿಕ ೪೬ – ೬೮ವ ವೀಳೆಯದೆಲೆ ಮಾರುವವನು

ತಾಣ ೧೧೩ – ೧೭ ಸ್ಥಾನ, ಸ್ಥಳ

ತಾಮರಸ ೫೭ – ೪೫ ಕಮಲ

ತಾಯ್ಗಡಲ್ ೧೯೩ – ೯೬ ಸಮುದ್ರದ ತಳ

ತಾರ ೨೦೮ – ೩ವ ಸಂಗೀತದ ಏರಿಳಿತಗಳಲ್ಲಿ ಒಂದು

ತಾರಗೆ ೮೭ – ೧೫ವ ನಕ್ಷತ್ರ

ತಾರೇಲೈಯ ೨೫೯ – ೧೪೦ವ ಒಂದು ಬಗೆಯ ಅನುಕರಣದ ಹಾಡು

ತಾಳಿಸು ೮೦ – ೭೯ ಸುಡು, ಬೇಯಿಸು

ತಿಂತಿಣಿ ೧೧೦ – ೬ ಗುಂಪು, ಸಮೂಹ

ತಿಟ್ಟಿವಿಡು ೨೨೩ – ೭೮ ಚಿತ್ರಬರೆ

ತಿಣ್ಣ ೨೧೨ – ೨೨ವ ತೀಕ್ಷ್ಣ, ಅಧಿಕ, ಹೆಚ್ಚು

ತಿರೀಟ ೪೬೨ – ೬೩ ಕಿರೀಟ

ತಿರುಪು ೨೧೦ – ೧೬ ತಿರುವು

ತಿರೋಹಿತ ೨೪೭ – ೭೯ ಕಳೆದುಹೋದ, ಮರೆಯಾದ

ತಿವುರಿ ೨೩೪ – ೧೯, ೨೮೦, ೨೪ವ ಒಂದು ಬಗೆಯ ಸುಗಂಧ ದ್ರವ್ಯ

ತಿಳಕ ೩೮೦ – ೨೪ವ ಒಂದು ಜಾತಿಯ ಮರ

ತೀವು ೧೪೭ – ೨೧ ತುಂಬು

ತುಂಬೀಫಲ ೯೮ – ೬೭ ವ, ೨೪೩ – ೬೫ ಸೋರೆ ಬರುಡೆ, ಒಂದು ಬಗೆಯ ವೀಣೆ

ತುಡುಂಕು ೫೬ – ೩೮ ವ ಹಿಡಿ

ತುಪ್ಪುಳ್ ೧೩೩ – ೧೧೭ ಹೂಮುಡಿ

ತುಱುಗು ೨೨ – ೧೦೮ ಮುಡಿ

ತೂಣೀರ ೨೫೦ – ೧೦೦ ಬತ್ತಳಿಕೆ

ತೂಳ್ ೮೮ – ೨೦ ಬೆನ್ನಟ್ಟು, ಅಟ್ಟು

ತೆಂಬೆರಲ್ ೨೪೩ – ೬೩ ತೆಂಕಣಗಾಳಿ, ತಂಪಾದ ಗಾಳಿ

ತೆತ್ತಿಸು ೧೬೩ – ೯೮ವ ನಾಟಿಸು, ಅಂಟಿಸು, ಕೂಡಿಸು

ತೇಂಕಾಡು ೩೦ – ೧೫೧ ತೃಪ್ತಿಹೊಂದು

ತೇಂಕು ೪೫೮ – ೪೪ ತೇಲು

ತೇರೈಸು ೨೩೯ – ೪೧ ಅಧಿಕವಾಗು, ಹೊರಸೂಸು

ತೊಂಗಲು ೧೯೬ – ೧೧೧ ಸಮೂಹ

ತೊಂಡಿ ೧೧೨ – ೧೪ ಒಂದು ರಾಗ

ತೊತ್ತುಗೆಯ್ ೧೪೫ – ೧೬ ಸೇವೆಮಾಡು

ತೊಳಲ್ ೮೧ – ೮೨ ಸುತ್ತಾಡು, ಅಲೆ

ತೋರ ೧೬ – ೮೧ ದೊಡ್ಡ, ದಪ್ಪ

ತೋರಿತ್ತು ೬೯ – ೨೬ ದೊಡ್ಡದು, ದಪ್ಪವಾದುದು

ತೋಳಬಂದಿ ೧೩೧ – ೧೦೭ ತೋಳಿನ ಆಭರಣ

ತ್ರಾಸ ೩೬ – ೧೩ ಹೆದರಿಕೆ, ಭಯ

ತ್ರಿಪಥೆ ೨೪೭ – ೭೮ ಗಂಗೆ

ತ್ರಿವಿಷ್ಟಪ ೨೦೪ – ೧೫೨ ವ ಸ್ವರ್ಗ

ದಂಡೆ ೧೩೧ – ೧೦೮ ಹಾರ

ದಂದುಗ ೫೯ – ೫೨ ಕಷ್ಟ, ಕ್ಲೇಶ

ದಂಭ ೨೮ – ೧೪೦ ಅಹಂಕಾರ, ಗರ್ವ

ದಟ್ಟಡಿ ೨೧೮ – ೫೧ ತಪ್ಪು ಹೆಜ್ಜೆ

ದಸರಿದೊಡಕು ೨೫೯ – ೧೩೯ ವ ಅಸಂಬದ್ಧ (?)

ದಳವೇಱು ೭೮ – ೬೬ವ ಹೆಚ್ಚಾಗು, ಅತಿಯಾಗು

ದಾಸಣ ೨೫೫ – ೧೨೩ ದಾಸವಾಳದ ಹೂವು

ದಿಂಕಿಡಿಸು ೩೦೬ – ೭ವ ಹಾರಿಸು, ನೆಗೆಯಿಸು

ದಿನಮಾಳಿಕೆ ೪೪ – ೫೯ ವ ಸೂರ್ಯ

ದೀಪಕಳಿಕೆ ೨೮೪ – ೮೭ ವ ದೀಪದ ಉರಿ

ದೀವ ೨೩ – ೧೧೧ ಬೇಟೆಯ ಪ್ರಾಣಿಗಳನ್ನು ಹಿಡಿಯಲು ಬಳಸುವ ಸಾಕಿದ ಪ್ರಾಣಿ

ದುಮ್ಮಳ ೨೩೪ – ೧೯ ದುಃಖ

ದೂಟಿಕ್ಕು ೩೯೫ – ೮೫ ಓಡಿಸು, ನಿವಾರಿಸು

ದೂದವಿ ೯೦ – ೩೫ ಸೇವಕಿ, ದೂತಿ

ದೇಯ ೨೫೮ – ೧೩೪ ಕಾಣಿಕೆ, ಬಹುಮಾನ

ದೇವಳ ೩೩೧ – ೧೨೬ ದೇವಪೂಜೆ (?)

ದೇವಾಂಗ ೨೦೯ – ೯ ವಸ್ತ್ರ

ದೇಹಾರ ೩೨ – ೧೬೫ ದೇವಸ್ಥಾನ

ದೇಹಾರಾಗಾರ ೧೩೩ – ೧೧೫ ವ ದೇವಾಲಯ

ದೈವತ ೨೦೭ – ೧ವ ಸಪ್ತಸ್ವರಗಳಲ್ಲಿ ಒಂದು

ದೌವಾರಿಕ ೧೨೩ – ೬೫ ದ್ವಾರಪಾಲಕ

ದ್ಯುಗಂಗೆ ೧೫೮ – ೭೧ ದೇವಗಂಗೆ

ದ್ಯುಮಣಿ ೧೧೫ – ೩೦ ಸೂರ್ಯ

ದ್ರೋಣಾಮುಖ ೪೭೦ – ೧೦೨ ನದೀದಡದ ಮೇಲಿರುವ ಊರು

ದ್ವಿರೇಫ ೨೭೮ – ೫೯ ತುಂಬಿ

ದ್ವೀಂದ್ರಿಯ ೫೦೫ – ೨೬೧ ವ ಎರಡು ಇಂದ್ರಿಯಗಳುಳ್ಳ

ಧನಾಳಿ ೧೮ – ೯೨ ಐಶ್ಚರ್ಯವಂತ, ಸಿರಿವಂತ

ಧನ್ವಿ ೨೪೦ – ೪೬ ಬಿಲ್ಲುಗಾರ

ಧಮ್ಮಿಲ್ಲ ೧೩೯ – ೧೪೩ ಮುಡಿ, ತುರುಬು

ಧಾತ್ರೀಧರ ೬ – ೧೯ ಪರ್ವತ, ಬೆಟ್ಟ

ಧುರಧರ ೬೦ – ೩೮ ಭಾರವನ್ನು ಹೊರುವವನು

ನಟ್ಟವಿಗ ೫೫ – ೩೫ವ ನರ್ತನವನ್ನು ಕಲಿಸುವವನು, ನರ್ತಕ

ನಟ್ಟುವ ೨೪೭ – ೮೧ ನರ್ತನಕಾರ, ನಟ

ನನೆವಿಲ್ಲ ೪೨೩ – ೫೦ವ ಮನ್ಮಥ

ನವತಿ ೨೧೦ – ೧೪ ತೊಂಬತ್ತು

ನಾಗವಲ್ಲಿ ೧೩೪ – ೧೧೮ವ ವೀಳಯದೆಲೆಯ ಬಳ್ಳಿ

ನಾಡಾಡಿ ೬೮ – ೨೩ ವ ಸಾಮಾನ್ಯ ಮನುಷ್ಯ

ನಾಡೆ ೨೦ – ೯೯ ವಿಶೇಷವಾಗಿ, ಚೆನ್ನಾಗಿ

ನಾಭಿದಘ್ನ ೩೮೧ – ೨೯ ನಾಭಿ ಮುಳುಗುವಷ್ಟು

ನಿಕುರುಂಬ ೧೫೫ – ೫೬ ಸಮೂಹ, ಗುಂಪು

ನಿಚಿತ ೩೦ – ೧೫೨ ಸಮೂಹ

ನಿಚ್ಚ ೩ – ೪ ನಿತ್ಯ

ನಿಟ್ಟಿಸು ೮೮ – ೨೩ ನೋಡು

ನೀಡುಸುಯ್ಲು ೪೩೨ – ೮೨ ನಿಟ್ಟುಸಿರು

ನಿತ್ತರಿಸು ೮೧ – ೮೨ ನಿಭಾಯಿಸು, ನಿರ್ವಹಿಸು

ನಿಪೀಡಿಸು ೪೫೭ – ೩೮ ಹಿಸುಕು, ಯಾತನೆಪಡಿಸು

ನಿಪ್ಪೊಸತು ೪೩ – ೫೦ ಹೊಚ್ಚ ಹೊಸದು

ನಿರ್ಮೋಕ ೨೪೫ – ೭೧ ಹಾವಿನ ಪೊರೆ

ನಿರ್ಯಾಣ ೨೧೨ – ೨೩ ವ ಮೋಕ್ಷ

ನಿರ್ವಾದ ೧೨ – ೫೭ ದೋಷ, ಕಲಂಕ

ನಿಲೀನ ೩೦ – ೧೫೦ ಆವರಿಸಿದ, ಸುತ್ತುವರಿದ

ನಿವಿಷ್ಟ ೯೪ – ೫೫ವ ಕುಳಿತುಕೊಂಡ

ನಿಶೀಥಿನಿ ೭೦ – ೩೪ ರಾತ್ರಿ

ನಿಷಣ್ಣ ೨೨೫ – ೮೮ ವ ಕುಳಿತ, ವಿಶ್ರಾಂತಿ ಹೊಂದಿದ

ನಿಷಾದ ೨೦೭ – ೧ವ ಸಪ್ತಸ್ವರಗಳಲ್ಲಿ ಒಂದು

ನಿಷೇವೆ ೩೪೦ – ೧೬೯ ಪರಿಚರ್ಯೆ, ಸೇವೆ

ನಿರ್ವೃತಿ ೪ – ೧೦ ಸಂತೃಪ್ತಿ, ಮುಕ್ತಿ

ನಿಷ್ಕ ೫೨೦ – ೩೩೦ ಚಿನ್ನ, ಚಿನ್ನದ ನಾಣ್ಯ

ನಿಷ್ಪ್ರವೀಚಾರತೆ ೧೦೫ – ೯೮ ಮೈಥುನಸೇವನೆ (ಕಾಯ ಮನ ವಚನ) ಇಲ್ಲದಿರುವಿಕೆ

ನಿಸ್ಸಂಖ್ಯ ೨೩೮ – ೩೩ ಲೆಕ್ಕವಿಲ್ಲದಷ್ಟು

ನಿಳಿಂಪಕಾಂತೆ ೧೧೪ – ೨೩ ದೇವತೆ

ನೀರ್ಮನುಷ್ಯ ೧೯೯ – ೧೨೭ ಜಲದೇವತೆ

ನೀರ್ದಳಿ ೧೨೯ – ೯೯ ನೀರನ್ನು ಚಿಮುಕಿಸು

ನೀಱೆ ೪೨ – ೪೫ ಸುಂದರಿ, ಚೆಲುವೆ

ನುಗುಳ್ ೧೩೩ – ೧೧೬ ನಸುಳು

ನೆಗಪು ೨೭೧ – ೨೮ ವ ಮೇಲೆತ್ತು

ನೆಗಳ್ತೆ ೪೬ – ೬೭ವ ಪ್ರಸಿದ್ಧಿ, ಖ್ಯಾತಿ

ನೆಮ್ಮು ೧೮೨ – ೪೬ ಅವಲಂಬಿಸು, ಆಶ್ರಯಿಸು

ನೆರಪು ೮೯ – ೨೯ ಕೂಡಿಸು, ನೆರವೇರಿಸು

ನೆಲವಡಲಿಗೆ ೧೮೨ – ೪೫ ಕಂಬ (?)

ನೆಲೆಮಾಡ ೩೧ – ೧೫೯ ಉಪ್ಪರಿಗೆ

ನೇರಿತು ೨೬ – ೧೨೮ ನೇರವಾದ

ನೇರ್ಪಡು ೪೬ – ೬೭ವ ಹೊಂದಿಕೊಳ್ಳು, ಸರಿಮಾಡು

ನೇರ್ಪು ೧೦೩ – ೯೦ ನೆಟ್ಟಗೆ

ನೇವುರ ೧೩೧ – ೧೦೭ ಕಾಲಂದುಗೆ

ನೇಳಕ ೨೧೫ – ೩೮ ಹಗ್ಗ (?)

ನೊಚ್ಚಿತು ೯೯ – ೭೨ ಕಳಪೆ, ಕೀಳು, ಹಗುರ

ನೋಂಪಿ ೧೪೦ – ೧೫೧ ವ್ರತ

ಪಂಚಧಾರೆ ೧೭೬ – ೧೨ ಕುದುರೆಯ ಐದು ಬಗೆಯ ನಡಗೆ

ಪಂಚಮ ೨೦೭ – ೧ವ ಸಪ್ತಸ್ವರಗಳಲ್ಲಿ ಒಂದು

ಪಂಚಾಸ್ಯ ೩೬೫ – ೧೦೪ ಸಿಂಹ

ಪಂತಿ ೧೦೯ – ೨ ಸಾಲು, ಪಂಕ್ತಿ

ಪಂತಿಕೆ ೪೯೭ – ೨೨೯ ಸಾಲು, ಪಂಕ್ತಿ

ಪಕ್ಕ ೧೭ – ೮೨ ರೆಕ್ಕೆ

ಪಕ್ಕಣ ೨೫೧ – ೧೦೦ ಬೇಡೆರ ಬೀಡು

ಪಚ್ಚಿಡು ೭೯ – ೭೫ ವಿಭಾಗಿಸು, ಹಂಚು

ಪಜ್ಜಳಿಸು ೨೦೯ – ೧೧ ಪ್ರಕಾಶಿಸು, ಹೊಳೆ

ಪಟವೈಶ್ಯಜ ೨೬ – ೧೨೬ ಬಟ್ಟೆಮಾರುವವನು

ಪಟಹ ೨೩೮ – ೩೪ ನಗಾರಿ

ಪಟಳಿಕೆ ೫೬ – ೩೮ ಸಮೂಹ, ಗುಂಪು

ಪಟ್ಟಣಿಗೆ ೪ – ೨೯ ಸಮೂಹ, ಗುಂಪು

ಪಟ್ಟಣಿಗೆ ೪೨೯ – ೭೩ ವಸ್ತ್ರ

ಪಟ್ಟವರ್ಧನ ೨೩೫ – ೨೧ವ ಪಟ್ಟದಾನೆ

ಪಟ್ಟಸಾಲೆ ೨೮ – ೧೩೮ ಮೊಗಸಾಲೆ, ಹಜಾರ

ಪಡಲ್ವಡಿಸು ೩೪೪ – ೭ವ ಚೆಲ್ಲಾಪಿಲ್ಲಿಮಾಡು

ಪಡವಳಗಟ್ಟಿಗೆ ೩೮೮ – ೫೨ವ ಬಟ್ಟೆಬರೆಗಳನ್ನು ಅಲಂಕಾರ ಮಾಡುವವನು ಹಿಡಿದುಕೊಳ್ಳುವ ಕೋಲು

ಪಡಿ ೨೩೧ – ೭ ಪ್ರತಿ, ಸಮಾನ

ಪಡಿಗ ೩೦೫ – ೪ವ ಉಗುಳುವ ಪಾತ್ರೆ,ಪೀಕದಾನಿ

ಪಡಿಮಟ್ಟೆ ೨೦೭ – ೧ ವ ಸಪ್ತತಾಳಗಳಲ್ಲಿ ಒಂದು

ಪಡಿಯಱ ೫೦ – ೧೦ವ ಬಾಗಿಲುಕಾಯುವವನು

ಪಡಿರಾಣಿ ೧೨೧ – ೫೫ ಸಮಾನವಾದ ರಾಣಿ

ಪಡೆಮಾತು ೨೬೮ – ೧೮ ಪ್ರತಿಮಾತು, ಸುದ್ಧಿ

ಪಣ್ಣು ೧೭೮ – ೨೧ ಸಜ್ಜುಮಾಡು, ಸಿದ್ಧಪಡಿಸು

ಪಣ್ಯಾಂಗನೆ ೨೯೪ – ೧೩೯ವ ವೇಶ್ಯೆ

ಪತ್ತನ ೨೪ – ೧೧೫ ಪಟ್ಟಣ

ಪತ್ತನಕ ೨೯ – ೧೪೬ ಪಟ್ಟಣ

ಪತ್ತಳಿಕೆ ೨೨ – ೧೦೯ವ ಬತ್ತಳಿಕೆ

ಪತ್ತೆಸಾರು ೪೬ – ೬೮ ವ ಹತ್ತಿರ ಬರು

ಪತ್ರವಲ್ಲಿ ೪೨ – ೪೮ ಸುವಾಸನೆಯ ಪರಿಕರಗಳಿಂದ ದೇಹದ ಮೇಲೆ ಬರೆದ ಚಿತ್ರಗಳು

ಪದಪು ೧೫ – ೭೪ ಸಡಗರ

ಪದುಳ ೧೭೬ – ೧೪ ಕ್ಷೇಮ

ಪದುಳಿಸು ೩೪೯ – ೩೦ ಚೆನ್ನಾಗಿರಿಸು, ಸಿದ್ಧವಾಗಿಡು

ಪದೆ ೧೮ – ೮೮ ಬಯಸು, ಅಪೇಕ್ಷಿಸು

ಪದೆಪು ೩ – ೩ ಸಡಗರ, ಸಂಭ್ರಮ

ಪರಕಲಿಸು ೧೧೧ – ೮ ಹಬ್ಬು, ವ್ಯಾಪಿಸು

ಪರುಪುಷ್ಟ ೩೭೬ – ೩ ಕೋಗಿಲೆ

ಪರಿಕಲಿಸು ೧೮೩ – ೪೭ ವ ಹಬ್ಬು, ಆವರಿಸು

ಪರಿಕಲ್ಪಿಸು ೨೧೩ – ೨೭ವ ನಿಶ್ಚಯಿಸು, ಗೊತ್ತುಮಾಡು

ಪರಿಕಾಲು ೧೭ – ೮೭ ಹರಿಯುವ ಕಾಲುವೆ

ಪರಿಕೀಲಿಸು ೨೪೫ – ೭೧ವ ಸೇರು, ಕೂಡು

ಪರಿಖೆ ೨೬೯ – ೨೧ ಅಗಳು, ಕಂದಕ

ಪರಿಘೂರ್ಣನ ೪೯೬ – ೨೨೨ವ ಗಟ್ಟಿಯಾದ ಧ್ವನಿ

ಪರಿಣಾಹಕ ೧೯೧ – ೮೬ ವಿಸ್ತಾರ, ವಿಶಾಲ

ಪರಿತಪ್ತ ೨೨೦ – ೬೪ ದುಃಖಕ್ಕೀಡಾದ

ಪರಿಧಾನ ೧೩೫ – ೧೨೦ ಉಡುಗೆ, ತೊಡುಗೆ

ಪರಿಪಂಥಿ ೨೦ – ೯೭ ಶತ್ರು, ವೈರಿ

ಪರಿಪೀಡೆ ೧೭ – ೮೭ ದೊಡ್ಡ ತೊಂದರೆ

ಪರಿಯಷ್ಟಿ ೧೨೨ – ೬೦ ವ ಆಹಾರ

ಪರಿಯಾಣ ೩೦೫ – ೪ವ ಹರಿವಾಣ, ತಟ್ಟೆ

ಪರಿವಿಗಳೆ ೨೭೬ – ೪೬ವ ತುಂಬಿ, ಹರಿ, ಮೇರೆ ಮೀರು (?)

ಪರಿಶಂಕೆ ೧೭೧ – ೧೩೮ ಅಪನಂಬಿಕೆ, ಅನುಮಾನ

ಪರಿಷೇಕ ೩೪೦ – ೧೬೯ ಸುತ್ತುವರಿಯುವಿಕೆ

ಪರೆ ೧೪೯ – ೩೨ ಹರಡು, ವ್ಯಾಪಿಸು

ಪರ್ಯಂಕಾಸನ ೧೬೧ – ೮೫ವ ಒಂದು ವಿಧದ ಆಸನ

ಪರ್ವು ೧೨ – ೫೯ ಹಬ್ಬು

ಪರ್ವುಗೆ ೧೬೮ – ೧೨೦ ಹಬ್ಬುವಿಕೆ

ಪಲ್ಲಣ ೧೬೯ – ೨೯ ಜೀನು

ಪಲ್ಮಿಸು ೧೭೯ – ೨೯ ಹಲ್ಲುಕಿಸಿ, ನಗು

ಪಲ್ಸುಲಿ ೨೮ – ೧೪೨ ಹಲ್ಲುಜ್ಜು

ಪವಣಿಸು ೫೨ – ೧೬ವ ಪೋಣಿಸು

ಪವಣು ೨೦೬ – ೧೬೦ವ ಹವಣು, ಪ್ರಮಾಣ

ಪವಳ್ಗುಡಿ ೩೭೬ – ೨ ಹವಳದ ಬಳ್ಳಿಯ ಕುಡಿ

ಪವಿಧರ ೬೩ – ೭೨ ಇಂದ್ರ

ಪಸಾರಿತ ೫೭ – ೪೨ವ ಹರಡಿದ

ಪಸಾಯದಾನ ೩೮೩ – ೭೬ ಉಡುಗೊರೆ

ಪಳಂಚಲೆ ೩೦೦ – ೧೬೫ ವ ಮೇಲೆಬಿದ್ದು ಹೊಡೆ

ಪಳಂಚು ೧೩೩ – ೧೧೫ ತಾಗು, ತಟ್ಟು

ಪಳಚ್ಚನೆ ೧೨೮ – ೯೪ ಕಾಂತಿಯುಕ್ತವಾಗಿ

ಪಳಯಿಗೆ ೩೫೩ – ೪೭ವ ಧ್ವಜ

ಪಳವಿಗೆ ೧೫೬ – ೬೦ ಧ್ವಜ, ಬಾವುಟ

ಪಳಿ ೯ – ೩೮ ಹಳಿ, ನಿಂದಿಸು

ಪಳಿಕು ೨೮ – ೧೪೨ ಸ್ಫಟಿಕ

ಪಱಮೆ ೨೬ – ೧೩೦ ತುಂಬಿ

ಪಱುಗೋಲು ೨೪೬ – ೭೫ ಹರುಗೋಲು, ದೋಣಿ

ಪಱೆ ೨೬೫ – ೧ವ ತಮಟೆ

ಪಾಗುಡ ೩೦ – ೧೪೯ ಉಡುಗೊರೆ, ಕಾಣಿಕೆ

ಪಾಣ್ಬ ೪೨೦ – ೩೩ ಜಾರ, ವಿಟ

ಪಾಣ್ಬೆ ೪೨೦ – ೩೩ ಜಾರೆ

ಪಾದಪ ೨೨ – ೧೦೯ ವ ವೃಕ್ಷ, ಮರ

ಪಾಮರಿ ೧೭ – ೮೨ ಹಳ್ಳಿಯ ಹೆಂಗಸು

ಪಾರ್ ೧೬ – ೭೯ ನಿರೀಕ್ಷಿಸು

ಪಾವುಗೆ ೧೨೩ – ೬೫ ಹಾವುಗೆ, ಎಕ್ಕಡ

ಪಾಶಿ ೫೧೯ – ೩೨೭ ವರುಣ

ಪಾಸ ೨೫೧ – ೧೦೦ ಹಗ್ಗ

ಪಾಸಟಿ ೨೦ – ೯೯ ಸಮಾನ, ಸಾಟಿ

ಪಾಸು ೧೩೯ – ೧೪೩ ಹಾಸಿಗೆ

ಪಾಸುಗೆ ೧೩೩ – ೧೧೭ ಹಾಸಿಗೆ

ಪಿಂಡುಗೊಳ್ ೨೮೧ – ೭೫ವ ಗುಂಪಾಗು, ಒಟ್ಟಾಗು

ಪಿಂದುಗೊಳ್ ೨೨೬ – ೯೨ ಅನುಸರಿಸು

ಪಿಕ್ಕು ೧೨೬ – ೭೯ ಬಾಚು, ಬಿಡಿಸು

ಪಿಡಿ ೧೯ – ೯೫ ಹೆಣ್ಣಾನೆ

ಪಿಡಿಕಟ್ಟು ೬೫ – ೭ ಸೆರೆ, ಬಂಧನ

ಪಿಟ್ಟಾಳಸ ೪೫೨ – ೧೯ ಮಲ್ಲಯುದ್ಧದ ಒಂದು ವರಸೆ

ಪಿಣಿ ೨೭ – ೧೩೭ ಪೆಣೆ, ಸೇರು, ಕೂಡು (?)

ಪಿಪ್ಪಳ ೩೮೧ – ೨೮ ಒಂದು ಜಾತಿಯಮರ

ಪಿಲ್ಲಿ ೧೩೧ – ೧೦೮ ಕಾಲುಂಗುರ

ಪಿಶಂಗ ೨೪ – ೧೧೬ ನಸುಗೆಂಪು

ಪುಂಜಿಸು ೫೬ – ೩೮ವ ರಾಶಿಮಾಡು, ಗುಂಪು ಕೂಡಿಸು

ಪುಂಸವನ ೧೪೫ – ೧೪ ವ ಗರ್ಭಿಣಿಸ್ತ್ರೀಗೆ ಮಾಡುವವೊಂದು ಧಾರ್ಮಿಕ ಸಂಸ್ಕಾರ

ಪುಗು ೨೬೩ – ೧೫೪ವ ಪ್ರವೇಶಿಸು, ಒಳಹೋಗು

ಪುಟಮಿಕ್ಕು ೨೩೦ – ೧ವ ಬೆಂಕಿಯಲ್ಲಿ ಕಾಯಿಸು

ಪುಟ್ಟು ೯೧ – ೪೨ ಆಶ್ರಯ, ನೆಲೆ

ಪುಡಿಗತ್ತುರಿ ೧೨೬ – ೭೯ ಕಸ್ತೂರಿಯ ಪುಡಿ

ಪುದಿ ೧೬೩ – ೯೬ ಸೇರು, ಕೂಡು

ಪುನ್ನಾಗ ೨೬೦ – ೧೪೫ ಬಿಳಿಯಆನೆ, ಸುರಹೊನ್ನೆ ಯಮರ

ಪುರಂದರ ೧೯೩ – ೯೭ ವ ಇಂದ್ರ

ಪುರಂಧ್ರಿ ೨೩ – ೧೧೧ ಪತಿವ್ರತೆ

ಪುರುಡಿಸು ೨೩ – ೧೧೧ ಪತಿವ್ರತೆ

ಪುರುಡಿಸು ೮೫ – ೮ವ ಸ್ಪರ್ಧಿಸು

ಪುಲ್ಲಿ ೩೮೭ – ೪೯ (?)

ಪುಳಿಂದಿನಿ ೨೫೨ – ೧೦೬ ಬೇಡಿತಿ, ಬೇಡರ ಹೆಂಗಸು

ಪುಳಿನ ೭೮ – ೬೯ ಮರಳಿನ ದಿನ್ನೆ

ಪೂಗುಡಿ ೭೭ – ೬೫ ಹೂಗೊಂಚಲು

ಪೂತ್ಕರಿಸು ೧೫೭ – ೬೯ ಧ್ವನಿಮಾಡು

ಪೂವಲಿ ೧೮೨ – ೪೩ ರಂಗವಲ್ಲಿ

ಪೂಸು ೧೩೧ – ೧೦೬ ಸವರು, ಬಳಿ

ಪೆಂಡೆಯ ೧೩೧ – ೧೦೮ ಕಾಲ ಬಿರುದಿನ ಬಳೆ

ಪೆಟ್ಟುವೆರ್ಚು ೧೪೧ – ೧೫೫ ವ ಪೆಟ್ಟುತಿನ್ನು

ಪೆರ್ಗೆಱೆ ೬೭ – ೧೬ ದೊಡ್ಡಕೆರೆ

ಪೆರ್ಚು ೧೧ – ೪೮ ಹೆಚ್ಚುಗೆ, ಅಧಿಕ್ಯ

ಪೆರ್ಚುಗೆಡು ೧೯೦ – ೭೯ ಕುಂದು

ಪೆರ್ಮಡದಿ ೨೩೮ – ೩೪ ವೃದ್ಧಸ್ತ್ರೀ, ಹಿರಿಯ ಹೆಂಡತಿ

ಪೆರ್ಮೆ ೧೨೩ – ೬೫ ಹೆಮ್ಮೆ

ಪೆಸರಿಲಿ ೨೫೬ – ೧೨೯ ಹೆಸರಿಲ್ಲದ, ಅನಾಮಿಕ

ಪೆಱಪಿಂಗು ೭೯ – ೭೫ವ ಹಿಂದೆಗೆ, ಮರೆಯಾಗು

ಪೇಟ ೨೬ – ೧೨೭ ಗುಂಪು

ಪೇಡಿವಡು ೧೪೩ – ೫ ಹೇಡಿಯಾಗು, ಅಂಜು, ಹೆದರು

ಪೇರಡವಿ ೨೪೮ – ೮೨ ದೊಡ್ಡಕಾಡು

ಪೇರಣೆ ೧೨೭ – ೮೫ ಕುಣಿತ, ನೃತ್ಯ

ಪೇಱು ೨೨ – ೧೦೭ ಒಂದರ ಮೇಲೊಂದು ಜೋಡಿಸು

ಪೊಂಪುಳಿ ೨೨ – ೧೦೯ ವ ರೋಮಾಂಚನ

ಪೊಗಳ್ತೆ ೪೬ – ೬೭ವ ಹೊಗಳಿಕೆ

ಪೊಚ್ಚಿಸು ೧೪೬ – ೧೯ ಹತ್ತಿಸು

ಪೊಡವಡು ೯೪ – ೫೫ ವ ನಮಸ್ಕರಿಸು

ಪೊಡೆ ೧೯ – ೯೫ ಹೊಡೆ, ಧಾನ್ಯದ ತೆನೆ

ಪೊಣರ್ ೨೨೬ – ೯೩ ಹೋರಾಡು

ಪೊಣರ್ವಕ್ಕಿ ೧೨೪ – ೭೦ ಚಕ್ರವಾಕಪಕ್ಷಿ

ಪೊದಳ್ ೧೧ – ೫೨ ಹೊರಬರು, ವ್ಯಾಪಿಸು, ಕಾಣು

ಪೊನಲು ೪೪ – ೫೭ ಪ್ರವಾಹ

ಪೊರೆಯೇಱು ೫೮ – ೪೬ ಉತ್ಸಾಹಗೊಳ್ಳು

ಪೊರ್ದು ೩ – ೩ ಸೇರು, ಕೂಡು

ಪೊರ್ದುಗೆ ೬೮ – ೨೩ ಸೇರುವಿಕೆ

ಪೊಲ ೧೬೮ – ೧೨೪ ಸ್ಥಳ, ನೆಲೆ, ನೋಟದ ಜಾಗ

ಪೊಲಂಬು ೯೬ – ೬೩ ದಾರಿ, ಮಾರ್ಗ, ರೀತಿ

ಪೊಲಂಬುಗೆಡು ೨೦೫ – ೧೫೪ ದಾರಿತಪ್ಪು

ಪೊಲಗೆಡಿಸು ೧೮೨ – ೪೫ ದಾರಿತಪ್ಪಿಸು

ಪೊಸಂತಿಲು ೧೫೭ – ೬೭ ಹೊಸ್ತಿಲು

ಪೊಸಯಿಸು ೧೭೨ – ೧೩೯ ಉಜ್ಜಿಸು, ತಿಕ್ಕಿಸು

ಪೊಱಮಡು ೧೩೦ – ೧೦೪ ಹೊರಹೊರಡು

ಪೊಱವೀಡು ೧೫೨ – ೪೫ವ ಹೊರಗಡೆ ಬಿಡುವ ಬೀಡು

ಪೊಱವೊಳಲು ೫೪ – ೨೮ ಊರಿನ ಹೊರಭಾಗ

ಪೌಳಿಂದಿನಿ ೨೫೧ – ೧೦೨ ಬೇಡರ ಹೆಂಗಸು

ಪ್ರಚೇತ ೩೮ – ೨೩ವ ವರುಣ

ಪ್ರಣಮನ ೭೫ – ೫೭ ನಮಸ್ಕರಿಸುವುದು

ಪ್ರಣಾದ ೩೦ – ೧೫೦ ಧ್ವನಿ

ಪ್ರಣಾಶಿ ೩ – ೫ ಹಾಳುಮಾಡುವವ

ಪ್ರಣುತೆ ೩೧ – ೧೫೮ ಹೊಗಳಲ್ಪಟ್ಟ

ಪ್ರತಿಪನ್ನ ೯೭ – ೬೬ವ ಪಡೆದ, ಹೊಂದಿದ

ಪ್ರತಿಹಾರಕ ೯೪ – ೫೬ ಬಾಗಿಲುಕಾಯುವವನು

ಪ್ರತೀಚಿಕೆ ೩೧೨ – ೩೬ ಪಡೆಯುವ, ಹೊಂದುವ

ಪ್ರತೋಳಿಕ ೧೫೮ – ೭೩ವ ರಾಜಮಾರ್ಗ,ಮುಖ್ಯ ಬೀದಿ

ಪ್ರಥಿತ ೧೨ – ೫೯ ಪ್ರಸಿದ್ಧವಾದ

ಪ್ರಪಂಚಿಸು ೧೦೯ – ೩ವ, ೧೪೭ – ೨೦ವ ಹರಡು, ವಿಸ್ತರಿಸು, ಪ್ರಕಟಿಸು

ಪ್ರಪಾಕಳಾಪ ೧೮ – ೮೯ವ ಅರವಟ್ಟಿಗೆಯ ಕೆಲಸ

ಪ್ರಭಂಜನ ೩೮ – ೨೩ ವ ಗಾಳಿ

ಪ್ರಭವಿಸು ೩೯ – ೩೦ ಹುಟ್ಟು

ಪ್ರರಾಗ ೬೬ – ೧೧ ಬಣ್ಣದಿಂ ತುಂಬಿದ

ಪ್ರರಿಂಖ ೧೯೪ – ೧೦೨ ಧ್ವನಿ (?)

ಪ್ರಲಂಬ ೪೫೪ – ೨೭ ನೇತಾಡುವಿಕೆ

ಪ್ರಲುಂಟನ ೨೩೨ – ೮ ಅಂದೋಲನ, ಹೊರಳಾಡುವುದು

ಪ್ರವಾಳ ೧೨೯ – ೯೭ ಹವಳ

ಪ್ರವಿಭಾಸನ ೨೨೬ – ೯೧ ಚೆನ್ನಾಗಿ ಹೊಳೆಯುವ

ಪ್ರವೇಕ ೧೯೮ – ೧೨೪ ಶ್ರೇಷ್ಠ, ಮುಖ್ಯ

ಪ್ರಶ್ರಯ ೨೧೬ – ೩೮ವ ವಿನಯ, ಆದರ

ಪ್ರಸೂನ ೨೯೬ – ೧೪೬ ಹೂ,ಹಣ್ಣು

ಪ್ರಸ್ಥಾನಭೇರಿ ೫೧ – ೧೩ವ ದಂಡಯಾತ್ರೆಗೆ ಹೊರಡುವ ಸಮಯದ ವಾದ್ಯ

ಪ್ರಸ್ಥಾನಶಿಬಿರ ೨೩೮ – ೩೩ವ ದಂಡಯಾತ್ರೆಯ ವೇಳೆಯಲ್ಲಿ ಬಿಡುವ ಬೀಡು

ಪ್ರಹೇಳಿಕೆ ೧೨೯ – ೯೬ವ ಒಗಟು, ಸಮಸ್ಯೆ

ಪ್ರಾಂಚಿತ ೧೩೩ – ೧೧೭, ೧೬೨ – ೯೦ ಮುಂಭಾಗ

ಪ್ರಾದುರ್ಭಾವ ೨೧೩ – ೨೭ ವ ಕಾಣುವ, ತೋರುವ

ಪ್ರಾಪಣೈಕ ೭೫ – ೫೮ ಹೊಂದುವುದು, ಪಡೆಯುವುದು

ಪ್ರೇಷಿತ ೩೦೪ – ೨ವ ಕಳುಹಿಸಲ್ಪಟ್ಟ

ಪ್ರೋತ್ತಾಲ ೨೫ – ೧೨೧ ಗಟ್ಟಿಯಾದ

ಪ್ರೋದ್ದಾಮ ೯ – ೪೧ ಶ್ರೇಷ್ಠವಾದ

ಪ್ರೋಲ್ಲಸಿತ ೧೯೨ – ೮೯ ಪ್ರಕಾಶಿಸುವ, ಹೊಳೆಯುವ

ಪ್ಲುತ ೪೫೨ – ೨೦ವ ಕುದುರೆಯ ಒಂದು ನಡಗೆ

ಫೇನ ೧೩ – ೬೨ ಸಮುದ್ರದ ನೊರೆ