ಬಕುಳ ೩೮೦ – ೨೪ವ ರೆಂಜೆಮರ, ರೆಂಜೆಹೂ

ಬಕ್ಕೆವಲಸು ೧೯೦ – ೮೨ವ ಸಿಹಿಯಾದ ಹಲಸು

ಬಗೆಕಾಱ ೪೫೧ – ೧೭ ಮನಸ್ಸಿಗೆ ಬಂದಂತೆ ನಡೆಯುವವನು

ಬಗೆಗೊಳಿಸು ೧೨೮ – ೯೪ವ ಆಕರ್ಷಿಸು, ಸೆಳೆ

ಬಗ್ಗಿಸು ೨೩ – ೧೧೨ (ಕೋಗಿಲೆ) ಧ್ವನಿಮಾಡು, ಕೂಗು

ಬಚ್ಚಿಸು ೧೨೫ – ೭೭ ಮುಚ್ಚಿಡು, ಅಡಗಿಸು

ಬಟ್ಟಿದು ೩೪ – ೩ವ ಗುಂಡಾದ

ಬಟ್ಟೆ ೨೪೧ – ೫೨ ಮಾರ್ಗ

ಬಣ್ಣವಣ್ಣಿಗೆ ೧೨೩ – ೬೬, ೨೩೫ – ೨೦, ೨೭೭ – ೫೨ ೩೦೧ – ೧೭೧ ವಿಧವಿಧವಾದ ಬಣ್ಣ

ಬದ್ದವಣ ೭೧ – ೩೮ವ ಮಂಗಳವಾದ್ಯ

ಬನ್ನ ೧೩೨ – ೧೧೩ ಕಷ್ಟ, ತೊಂದರೆ

ಬಬ್ಬರಿ ೨೫೬ – ೧೨೬ ಒಂದು ಬಗೆಯ ಹೆಂಡ

ಬಬ್ಬರಿಗೆ ೨೫೭ – ೧೩೨ ವ ಒಂದು ಬಗೆಯ ಹೆಂಡ

ಬಯಲ್ದಾವರೆ ೧೮ – ೮೯ ಬಯಲಿನಲ್ಲಿನ ತಾವರೆ

ಬಯ್ಕೆ ೪೧ – ೪೨ ಬಚ್ಚಿಡುವಿಕೆ, ಕೂಡಿಡುವುದು

ಬರಿಬರಿ ೨೫೨ – ೧೦೮ ಪಕ್ಕೆಲುಬು

ಬಲಗೊಳ್ ೫೮ – ೪೮ ಪ್ರದಕ್ಷಿಣೆ ಮಾಡು

ಬಗಘಟ್ಟನ ೨೪೧ – ೧೩೪ ಬಲವಾದ ತುಳಿತ

ಬಲವರು ೧೭೧ – ೧೩೪ ಪ್ರದಕ್ಷಿಣೆ ಮಾಡು

ಬಸನಿಗ ೪೨೮ – ೬೯ವ ದುಶ್ಚಟಕ್ಕೆ ಒಳಗಾದವನು

ಬಸವಳಿ ೪೩೨ – ೮೨ವ ಶಕ್ತಿಗುಂದು

ಬಹುಲಜ್ಞ ೯೩ – ೪೯ ಚೆನ್ನಾಗಿ ತಿಳಿದವನು

ಬಳ್ ೫೯ – ೫೨ ಬದುಕು, ಜೀವಿಸು

ಬಳಿಸಲ್ ೪೬೮ – ೯೧ ಅನುಸರಿಸು, ಹಿಂಬಾಲಿಸು

ಬಳ್ಚು ೧೪೧ – ೧೫೪ ವ ಬದುಕು, ಜೀವಿಸು

ಬಳಿಸಲ್ ೪೬೮ – ೧೫೪ವ ಬದುಕು, ಜೀವಿಸು

ಬಱಬಱ ೮೦ – ೭೯ ಸಂಪೂರ್ಣವಾಗಿ ಒಣಗು

ಬಾಕುಳಿಕೆ ೪೪೩ – ೧೨೯ ಅತಿಯಾಸೆ

ಬಾಜಿಸು ೧೯ – ೯೩ ಬಾರಿಸು, ನುಡಿಸು

ಬಾಡಬಾಗ್ನಿ ೮೭ – ೧೯ ಸಮುದ್ರದ ಬೆಂಕಿ

ಬಾಡವ ೩೫೧ – ೪೧ ಬಾಡಬಾಗ್ನಿ

ಬಾಣಡ್ಡಣಗೊಳ್ ೧೨೩ – ೬೫ ಆಹಾರವನ್ನು ಬಡಿಸುವ ಕಾರ್ಯ

ಬಾಯಿನ ೩೦೦ – ೧೬೫ವ ಉಡುಗೊರೆ

ಬಾರ್ ೨೫೨ – ೧೦೫ ಹಗ್ಗ

ಬಾರಿಸು ೧೬ – ೮೧ ತಡೆ, ನಿವಾರಿಸು

ಬಾಸಣಿಸು ೧೭ – ೮೩ ಮುಚ್ಚು, ಮರೆಮಾಡು

ಬಾಸಿಗ ೧೨೪ – ೭೨ ಬಾಸಿಂಗ

ಬಾಸುಳ್ ೪೨೭ – ೬೫ ಬಾಸುಂಡೆ

ಬಾಹತ್ತರ ೧೨೮ – ೯೪ವ ಎಪ್ಪತ್ತೆರಡು

ಬಾಳ ೧೩೦ – ೧೧೬ ವ ಲಾಮಂಚ

ಬಿಗುರ್ ೧೪೬ – ೧೯ ಭಯಂಕರತೆ

ಬಿಜ್ಜಣಿಗೆ ೪೩೩ – ೮೬ ಬೀಸಣಿಗೆ

ಬಿಡೌಜ ೧೮೭ – ೬೩ವ ಇಂದ್ರ

ಬಿಣ್ಪು ೧೪೪ – ೬ ಭಾರ, ಘನತೆ

ಬಿತ್ತರ ೭೯ – ೭೬ ವ ವಿಸ್ತಾರ

ಬಿತ್ತರಿಸು ೧೭ – ೮೭ ವಿಸ್ತರಿಸು

ಬಿದಿರ್ ೮೧ – ೮೬ ಹರಡು, ಚೆಲ್ಲು

ಬಿದಿರಿತ ೧೯ – ೯೩ ಹರಡಿದ

ಬಿದಿರ್ನೆಲಲಿ ೨೪೮ – ೮೪ ಒಂದು ಜಾತಿಯ ನೆಲ್ಲಿ

ಬಿನ್ನನೆ ೭೭ – ೬೫ ಮೌನವಾಗಿ

ಬಿಲ್ಗೀಸು ೨೫೧ – ೧೦೦ ಬಿಲ್ಲನ್ನು ಹೆರೆ, ಉಜ್ಜು

ಬಿಸಶಾಲಿನಿ ೪ – ೧೦ ಸರಸ್ವತಿ

ಬೀಜೋಕ ೧೩ – ೬೧ವ ಬೀಜ ಬಿತ್ತುವುದು

ಬೀಸರಂಬೊಗು ೨೬೧ – ೮೫ವ ಕೊನೆಗಾಣು, ಮುಗಿ

ಬೂವ ೩೦೧ – ೧೭೨ ಆಹಾರ

ಬೆಂಬಳಿ ೨೨೭ – ೯೨ ಹಿಂಬಾಲಿಸುವುದು, ಜೊತೆ ಸೇರುವುದು

ಬೆಂಬಿಡು ೯೮ – ೬೯ ಬಿಟ್ಟಹೋಗು

ಬೆಂಬೀಳು ೭೮ – ೭೦ ಅನುಸರಿಸು, ಹಿಂಬಾಲಿಸು

ಬೆಗಡು ೪೩೪ – ೮೯ವ ಆಶ್ಚರ್ಯ

ಬೆರ್ಚಿಸು ೧೩೭ – ೧೩೨ ಹೆದರಿಸು

ಬೆವಸೆ ೧೨೬ – ೮೦ ಬಯಕೆ, ಆಸಕ್ತಿ

ಬೆಸನ ೧೧೮ – ೪೦ ಕಾರ್ಯ

ಬೆಳಂಬೀಡೆ ೨೪೮ – ೮೪ ಒಂದು ಜಾತಿಯ ಮರ

ಬೆಳರ್ ೯ – ೩೮ ಬಿಳಿದಾಗು, ಕಾಂತಿಹೊಂದು

ಬೆಳುವಸದನ ೧೩೧ – ೧೦೮ವ ಬಿಳಿಯಬಟ್ಟೆ

ಬೆಳೆಗೆಯ್ ೧೯ – ೯೫ ಬೆಳೆ ಬೆಳೆದಿರುವ ಹೊಲ

ಬೆಳ್ಗೊಡೆ ೧೬೩ – ೯೮ವ ಬಿಳಿಯ ಕೊಡೆ

ಬೆಳ್ವಟ್ಟೆ ೧೯೭ – ೧೧೫ ಬಿಳಿಯ ಬಟ್ಟೆ

ಬೆಳ್ವಸದನ ೧೩೨ – ೧೧೦ ವ ಬಿಳಿಯಬಟ್ಟೆ

ಬೇಗಡವೆಸ ೩೧ – ೧೫೬ ರಂಧ್ರಕೊರೆಯುವ ಕೆಲಸ

ಬೇರ್ವರಿ ೨೬೦ – ೧೪೧ ವ ಆವರಿಸು, ಹಬ್ಬು

ಬೇವಸ ೨೧೫ – ೩೭ ವ್ಯಾಕುಲ, ಉಮ್ಮಳ

ಬೇಳನ ೪೩೧ – ೭೯ವ ಯಾಗಮಾಡುವುದು

ಬೊಟ್ಟೆತ್ತು ೧೦ – ೪೬ ಬೆರಳನ್ನು ತೋರಿಸು

ಬೋನ ೧೨೩ – ೬೪ ಆಹಾರ

ಭಣಿತ ೮ – ೩೦ ಧ್ವನಿಮಾಡಿದ

ಭದ್ರಜಾತಿ ೨೩೮ – ೩೫ ಒಂದು ಜಾತಿಯ ಆನೆ

ಭರವಸ ೩ – ೪ ಆತ್ಮವಿಶ್ವಾಸ, ನಂಬಿಕೆ

ಭರಿಕೈ ೧೬೮ – ೧೨೨ ಆನೆಯ ಸೊಂಡಿಲು

ಭಸ್ತ್ರಾನನ ೩೬ – ೧೧ ಆನೆಯ ಸೊಂಡಿಲು

ಭಾಭಾಸಮಾನ ೧೧೬ – ೩೧ ಹೊಳೆಯುವ, ಕಾಂತಿ ಯುಕ್ತವಾದ, ಸಮಾನವಾದ

ಭಾವಜ ೨೫೯ – ೧೩೮ ಮನ್ಮಥ

ಭಿಮ್ಮಿಡು ೨೪೭ – ೭೯ ಮೌನವಾಗಿರು, ಬಿಕೋಎನ್ನು

ಭೂಷಿಸು ೧೩೧ – ೧೦೭ ಅಲಂಕರಿಸು

ಭೇಷಜ ೯೯ – ೭೦ ಒಂದು ಮೂಲಿಕೆ

ಮಂಜರಿಕೆ ೬೫ – ೬ ರಾಶಿ

ಮಂಜಿಷ್ಠ ೨೩೭ – ೩೦ವ ಕೆಂಪುಬಣ್ಣ

ಮಂಜೀರ ೧೩೯ – ೧೪೩ ಕಾಲಂದುಗೆ

ಮಂಜುಕೆ ೬೬ – ೧೦ ಮನೋಹರ

ಮಂಡಗೆ೩೦೨ – ೧೭೪ ಒಂದು ಭಕ್ಷ್ಯ

ಮಂಡಳಿಕ ೧೧೦ – ೭ ಒಂದು ಪ್ರಾಂತದ ಅಧಿಕಾರಿ

ಮಂಡಳಿಸು ೧೬೨ – ೯೩ ಗುಂಡಗೆ ಸುತ್ತು

ಮಂದೆವಳ ೨೨೭ – ೯೯ವ ಅಹಂಕಾರ, ಪ್ರತಿಷ್ಠೆ

ಮಂದೈಸು ೧೬೬ – ೧೧೧ ದಟ್ಟವಾಗು, ವ್ಯಾಪಿಸು

ಮಕರಪತಾಕ ೧೩೭ – ೧೩೧ ಮನ್ಮಥ

ಮಕರಿಕೆ ೧೨೫ – ೭೪ ದೇಹದ ಮೇಲೆ ಸುಗಂಧ ದ್ರವ್ಯದಿಂದ ಬರೆಯುವ ಚಿತ್ರ

ಮಘವ ೨೧೨ – ೨೨ವ ಇಂದ್ರ

ಮಚ್ಚರಿಸು ೪೦೭ – ೧೨೮ ಅಸೂಯೆಪಡು

ಮಟ್ಟೆ ೨೦೭ – ೧ ವ ಒಂದು ತಾಳ

ಮಣಿಕುಟ್ಟಿಮ ೨೧೩ – ೨೭ವ ಪಚ್ಚೆಯ ನೆಲೆಗಟ್ಟು

ಮಣಿಗಾಱ ೨೬ – ೧೨೬ ರತ್ನವ್ಯಾಪಾರಿ

ಮಣಿಮಾಡ ೩೧ – ೧೫೪ ಮಣಿಗಳಿಂದ ಕಟ್ಟಿದ ಮನೆ

ಮತಲ್ಲಿಕೆ ೨೨ – ೧೦೯ ವ ಶ್ರೇಷ್ಠವಾದ

ಮತ್ಕುಣ ೯ – ೩೭ ತಿಗಣೆ

ಮತ್ತಹಾಸ್ತಿಕ ೨೩೪ – ೧೭ ಮದಿಸಿದ ಆನೆ

ಮತ್ತಾಳಿನಿ ೨೭ – ೧೩೪ ಮದಿಸಿದ ತುಂಬಿ

ಮದುವೆನಿಲ್ ೫೨೩ – ೩೫೪ ಮದುವೆಯಾಗು

ಮಧುಕರ ೫ – ೧೬ ತುಂಬಿ

ಮಧುಮಾಸ ೫೪೧ – ೪೩೨ ಚೈತ್ರಮಾಸ

ಮಧ್ಯಮ ೨೦೭ – ೧ವ, ೨೦೮ – ೩ವ ರಾಗಗಳಲ್ಲಿ ಒಂದು ಬಗೆ

ಮನದೆಗೊಳ್ ೪೮ – ೧ವ ಮನಸ್ಸಿಗೆ ತಂದುಕೊಳ್ಳು, ಮೆಚ್ಚು

ಮಮ್ಮಳಿ ೩೬೦ – ೮೪ವ ರೂಪುಗೆಟ್ಟ ಸಾವು

ಮರವಟ್ಟಿಗೆ ೨೫೬ – ೧೨೬ ಒಂದು ಜಾತಿಯ ಹೆಂಡ

ಮರಾಳಿಕೆ ೧೪೫ – ೧೬ವ ಹೆಣ್ಣುಹಂಸ

ಮರಿಚ ೮೦ – ೭೯ ಕರಿಯ ಮೆಣಸು

ಮಲಹರಿ ೧೧೨ – ೧೪ ಒಂದು ಜಾತಿಯ ರಾಗ

ಮಲೀಮಸ ೨೪೧ – ೫೧ ಕೊಳಕು, ಮಲಿನ

ಮಲ್ಲಶ್ರವ ೪೫೨ – ೧೮ವ ಮಲ್ಲಯುದ್ಧದಿಂದ ಆಗುವ ಶ್ರಮ, ಆಯಾಸ

ಮಸಗು ೨೧೩ – ೨೭ ವಿಜೃಂಭಿಸು

ಮಹತ್ತರಿ ೧೨೩ – ೬೫ ಗೌರವಾನ್ವಿತ ಹೆಂಗಸು

ಮಹಾಚೀನ ೩೦೯ – ೨೦ವ ಒಂದು ಬಗೆಯ ರೇಶ್ಮೆಬಟ್ಟೆ

ಮಹಿಷಿಕ ೫೧೯ – ೩೨೭ ಎಮ್ಮೆ

ಮಹೀಧ್ರ ೨೯ – ೧೪೫ ಪರ್ವತ

ಮಹೋದಾರ ೨೫ – ೧೨೩ವ ಒಂದು ಜಾತಿಯ ಮರ

ಮಱೆಯೇಱು ೬೫ – ೭ ಬಚ್ಚಿಟ್ಟುಕೊಂಡು ಮಾಡುವ ಯುದ್ಧ

ಮಾಂದಳಿರು ೨೫೬ – ೧೨೫ವ ಮಾವಿನ ಚಿಗುರು

ಮಾಕಂದ ೩೪ – ೩ವ ಮಾವಿನಮರ

ಮಾಗಾಯ್ ೫೫ – ೩೨ ಒಂದು ಆಭರಣ

ಮಾತಂಗ ೩೩೬ – ೧೪೮ ಚಂಡಾಲ

ಮಾತುಳುಂಗ ೧೮೩ – ೪೮ವ ಮಾದಲ

ಮಾಮಸಕ ೨೫೩ – ೧೦೯ ಅತ್ಯಂತ ಕೋಪ

ಮಾರಸಾಲ ೨೧ – ೧೦೫ ಶ್ರೇಷ್ಠವಾದ ಕಬ್ಬು

ಮಾರ್ಪೊಳೆಪು ೧೭ – ೮೪ ಹೊಳಪು, ಪ್ರಕಾಶ

ಮಾವಂತಿಗ ೧೭೯ – ೨೭ ವ ಮಾವಟಿಗ

ಮಾಸವಳ ೪೫೧ – ೧೮ ವೀರ, ಪರಾಕ್ರಮಿ

ಮಾಳವೋದರಿ ೨೫೬ – ೧೨೬ ಒಂದು ಬಗೆಯ ಮದ್ಯ

ಮಿಳ್ಳಿಸು ೧೩೬ – ೧೨೬ ಚಲಿಸು, ಅಲ್ಲಾಡು

ಮೀ ೧೪೯ – ೨೯ ಸ್ನಾನಮಾಡು

ಮುಂಕುಡಿ ೨೪೬ – ೭೬ವ ಮುಂಭಾಗದ ಸೈನ್ಯ

ಮುಂಡಾಡು ೨೨ – ೧೦೮ ಅಪ್ಪು, ಮುದ್ದಿಸು

ಮುಖರ ೩೦ – ೧೫೦ ಅಶ್ಲೀಲ, ಹಾಸ್ಯ

ಮುಗ್ಗು ೧೭೫ – ೬ ಮುಗ್ಗರಿಸು

ಮುಟ್ಟೆವರ್ ೨೬೧ – ೧೪೯ವ ಹತ್ತಿರಬರು

ಮುನ್ನೀರ್ ೨೪ – ೧೧೫ ಸಮುದ್ರ

ಮುಮ್ಮಟ್ಟು ೧೧೫ – ೨೮ ಅಟ್ಟಿಸಿಕೊಂಡು ಹೋಗು

ಮುಯ್ವಾನ್ ೮೮ – ೨೨ ವಿರೋಧಿಸು, ಪ್ರತಿಭಟಿಸು

ಮುರಜ ೧೨೭ – ೮೮ ಮದ್ದಳೆ

ಮುಹಡ ೪೫೨ – ೧೯ ಮಲ್ಲಯುದ್ಧದಲ್ಲಿ ಒಂದು ವರಸೆ

ಮುಳ್ಗು ೬ – ೨೩ ಮುಳುಗು

ಮುರ್ಮೊಗ ೨೦೦ – ೧೨೯ ಮೂರು ದಿಕ್ಕು

ಮೂವಳಸು ೧೯೯ – ೧೨೫ ಮೂರುಸುತ್ತು

ಮೆಲ್ಲುಲಿ ೧೩೩ – ೧೧೫ ಮೃದುವಾದ ಧ್ವನಿ

ಮೆಳ್ಪಡು ೯೬ – ೬೪ ಮೋಸಹೋಗು

ಮೇಘರಂಜಿ ೧೧೨ – ೧೪ ಒಂದು ಜಾತಿಯ ರಾಗ

ಮೇದುರ ೧೨ – ೫೫ ನಯ,ಮೃದು

ಮೇಲುವತ್ತಿ ೧೩೪ – ೧೧೮ ವ ಶ್ರೇಷ್ಠ, ಉತ್ತಮ (?)

ಮೇಳವಿಸು ೧೮೫ – ೫೬ ಜತೆಗೂಡು, ಒಟ್ಟಾಗು

ಮೇಳೈಸು ೨೩೪ – ೧೭ ಸೇರು, ಕೂಡು

ಮೊಕ್ಕಳ ೩೪೪ – ೯ ಸಮೂಹ, ಗುಂಪು

ಮೊಗೆ ೧೯೩ – ೯೫ ತುಂಬು

ಮೊಗ್ಗು ೨೨೦ – ೬೨ ಶಕ್ಯ, ಸಾಧ್ಯ

ಮೊರೆ ೨೩೭ – ೩೨ ಧ್ವನಿಮಾಡು

ಮೋನ ೧೦೧ – ೮೧ ಮೌನ

ಮೌರಿ ೧೨೭ – ೯೦ ಒಂದು ಬಗೆಯ ವಾದ್ಯ

ಮೌರ್ವಿ ೪೦೫ – ೧೨೯ ಬಿಲ್ಲಿನ ಹೆದೆ

ಯಕ್ಷಕರ್ದನು ೨೦೦ – ೧೩೦ ಒಂದು ಬಗೆಯ ಸುಗಂಧ ದ್ರವ್ಯ

ಯಷ್ಟಿ ೧೩೨ – ೧೨೦ ವ ಕೋಲು, ದೊಣ್ಣೆ

ರಂಗವಲನ ೨೧೧ – ೧೭ ಯುದ್ಧಭೂಮಿ

ರಕ್ತಾಕ್ಷತ್ವ ೭೨ – ೪೨ ಕೆಂಪುಬಣ್ಣ (?)

ರಚ್ಛೆ ೨೦೭ – ೧ ವ ಸಪ್ತತಾಳಗಳಲ್ಲಿ ಒಂದು

ರಕ್ತಾಕ್ಷತ್ವ ೭೨ – ೪೨ ಕೆಂಪುಬಣ್ಣ (?)

ರಚ್ಛೆ ೨೦೭ – ೧ವ ಸಪ್ತತಾಳಗಳಲ್ಲಿ ಒಂದು

ರತ್ನಕುಟ್ಟಿಮ ೩೩ – ೧೬೬ ರತ್ನಖಚಿತವಾದ ನೆಲ

ರತ್ನಾಕರ ೨೦ – ೯೮ ಸಮುದ್ರ

ರಲ್ಲಕ ೨೪೪ – ೬೬ ಕಣ್ಣಿನ ಕಾಡಿಗೆ, ಉಣ್ಣೆಯಬಟ್ಟೆ

ರಸನೇಂದ್ರಿಯ ೨೩ – ೧೧೦ ನಾಲಗೆ

ರಸಾಲ ೨೧ – ೧೦೫ ಮಾವು, ಕಬ್ಬು

ರಾಗಿಣಿ ೧೩೩ – ೧೧೬ ಅನುರಕ್ತೆ

ರಾಗಿಸು ೬೪ – ೧ ಪ್ರೀತಿಸು

ರಾಜಕ ೧೦೭ – ೧೦೬ ವ ರಾಜ

ರಾಜನ್ಯಕ ೨೮೨ – ೭೬ ವ ಕ್ಷತ್ರಿಯವಂಶ

ರಾವಣಹಸ್ತ ೨೦೭ – ೧ವ ಒಂದು ಬಗೆಯ ವೀಣೆ

ರುತಿ ೩೨ – ೧೬೨ ಧ್ವನಿ

ರುಪ್ಪೆತ್ತು ೩೪೮ – ೨೫ ದಂಡೆತ್ತು (?)

ರುಷಭ ೨೦೭ – ೧ವ ಸಪ್ತಸ್ವರಗಳಲ್ಲಿ ಒಂದು

ರೇಚಿತ ೪೫೨ – ೨೦ವ ಕುದುರೆಯ ನಡಗೆಗಳಲ್ಲಿ ಒಂದು

ಲಂಬಳ ೧೦೯ – ೨ ಮುತ್ತಿನಹಾರ

ಲಂಬುಷ ೨೩೫ – ೨೧ವ ಹಾರ

ಲಟಹ ೧೬೫ – ೧೦೭ ಆನಂದ, ಸಂತೋಷ

ಲತಾಂತ ೧೬ – ೭೬ ಪುಷ್ಪ

ಲಳಿಲುಳಿ ೪೫೩ – ೨೦ವ ಉತ್ಸಾಹದಿಂದ ಕೂಡಿದ ಕೈಚಳಕ

ಲೋವಿ ೨೭೨ – ೩೩ ಇಳಿಭಾವಣಿ