ವ
ವಂದಿ ೧೦೭ – ೧೦೬ ಹೊಗಳುಭಟ್ಟ
ವಡ್ಡರಾವುತ್ತ ೩೬೦ – ೮೪ವ ಕುದುರೆಯ ಮದಿಸವಾರ
ವರ್ತಿ ೨೦೫ – ೧೫೮ ಬತ್ತಿ
ವಪುರಿಂದ್ರಿಯ ೨೩ – ೧೧೦ ಶ್ರೇಷ್ಠವಾದ ದೇಹ ವಲಂ ೮ – ೩೩ ನಿಶ್ಚಯವಾಗಿ
ವಲಭಿ ೨೮ – ೧೪೩ ಮೇಲ್ಛಾವಣಿ
ವಲಿ ೨೦೭ – ೧ ವ ಒಂದು ವಿಧದ ರಾಗ
ವಲ್ಗನ ೮೫ – ೮ನೆಗೆತ
ವಲ್ಲಕಿ ೨೫ – ೧೨೪ ವೀಣೆ
ವಸಂತ ೧೧೨ – ೧೪ ಒಂದು ವಿಧದ ರಾಗ
ವಾತೂಳಿಕ ೨೪೫ – ೭೧ ವ ಸುಂಟರಗಾಳಿ
ವಾದಕ ೨೦೮ – ೫ ನುಡಿಸುವವನು
ವಾನಾಯುಜ ೪೫೨ – ೨೦ವ ಒಂದುದೇಶದ ಕುದುರೆ
ವಾಮೆ ೧೭೮ – ೨೨ ಸುಂದರಿ
ವಾರಾಂಪತಿ ೮೦ – ೭೭ ವರುಣ
ವಾರಿದ ೩೧೪ – ೪೪ ಮೇಘ
ವಾರಿಧಿಪುತ್ರ ೮೮ – ೨೧ ಚಂದ್ರ
ವಾರುಣಿ ೮೪ – ೩ ಒಂದುಬಗೆಯ ಮದ್ಯ
ವಾಲಧರ ೭೨ – ೪೨ ವೃಷಭ
ವಾಸ ೧೨೭ – ೯೦ ಕೊಳಲು
ವಾಸಂತಿ ೨೫೬ – ೧೨೫ ಒಂದು ಬಗೆಯ ಪುಷ್ಪ
ವಾಸಕಾಱ ೪೫೧ – ೧೭ ವಸ್ತ್ರಗಳನ್ನು ಸಿದ್ಧಪಡಿಸುವವ
ವಾಸರವ್ಯಾಪಾರ ೩೧೦ – ೨೫ ವ ಪ್ರತಿದಿನ ಮಾಡುವ ವ್ಯಾಪಾರ
ವಾಹ್ಯಾಳಿ ೪೬ – ೬೮ವ ಕುದುರೆಯ ಸವಾರಿ
ವಿಂಶತಿ ೨೦೭ – ೧ವ ಇಪ್ಪತ್ತು
ವಿಕಚಿಸು ೩೭೨ – ೧೩೧ ಅರಳು
ವಿಕಲ್ಪಿಸು ೮೭ – ೧೪ವ ಬದಲಾಗು, ಹೆಚ್ಚುಕಮ್ಮಿ ಯಾಗು
ವಿಗಂಡ ೨೪೬ – ೭೬ ವಿಸ್ತಾರವಾದ
ವಿಗುರ್ವಣೆ ೧೫೩ – ೪೬ ವ ಭಯಂಕರವಾದ,ಭೀತಿ ಹುಟ್ಟಿಸುವ
ವಿಗುರ್ವಿಸು ೧೬೦ – ೮೦ ಭೀತಿಹುಟ್ಟಿಸು
ವಿಘೂರ್ಣಿಸು ೨೧೨ – ೨೫ ಗಟ್ಟಿಯಾಗಿ ಧ್ವನಿಮಾಡು
ವಿಟಪಿ ೨೫೩ – ೧೧೦ ಮರ
ವಿಡಂಬಿಸು ೫೫ – ೩೫ವ, ೧೫೩ – ೪೩ವ ಪ್ರದರ್ಶಿಸು
ವಿಡಾಯಿ ೪೪ – ೫೮ ಆಡಂಬರ
ವಿದ್ಧ ೩೯ – ೩೦ ಹೋಲುವ
ವಿದ್ರುಮ ೧೯ – ೯ವ ಹವಳ
ವಿಲಂಪಟ ೨೩೨ – ೮ ಅತಿಕಾಮುಕ
ವಿಲಂಬಿಸು ೨೨ – ೧೦೮, ೨೮ – ೧೪೩ ನೇತಾಡು
ವಿಲೋಡಿಸು ೨೪೫ – ೭೧ ವ ಚೆನ್ನಾಗಿ ಕಲಕು
ವಿವಾದಿಸು ೧೬೬ – ೧೨೨ ಕೊಂಬು
ವಿಸಟಂಬರಿಯಿಸು ೩೬೫ – ೧೦೫ವ ಅಡ್ಡಾದಿಡ್ಡಿ ಓಡಾಡಿಸು
ವಿಸರ್ಪಣ ೩೮೭ – ೪೯ವ ಸಾಲು, ಹೆಚ್ಚಿಗೆ
ವಿಸ್ಮಾಪಕ ೨೩೨ – ೮ವ ಆಶ್ಚರ್ಯ, ವಿಚಿತ್ರ
ವಿಳಸನ ೧೦೪ – ೯೨ ಹೊಳೆಯುವ, ಪ್ರಕಾಶಿಸುವ
ವೀಜನ ೨೯ – ೧೪೪ ಬೀಸಣಿಗೆ
ವೇಶ್ಮ ೪೨೭ – ೬೬ ಮನೆ, ವಾಸಸ್ಥಾನ
ವೇಸರಿ ೨೪೨ – ೫೬ ಕತ್ತೆ
ವೈಕಚ ೬೫ – ೯ ತಲೆಗೂದಲು
ವೈಕುರ್ವಣ ೧೬೫ – ೧೦೩ ವ ದೈವಿಕ ಶಕ್ತಿಯಿಂದ ನಿರ್ಮಿತವಾದುದು
ವೈಜಯಂತಿ ೨೭೫ – ೫೬ವ ಸ್ತುತಿಪಾಠಕ
ವ್ಯಕ್ತೀಕರಿಸು ೭೬ – ೬೧ ವ ಸ್ಪಷ್ಟಪಡಿಸು
ಶ
ಶಂಗ ೧೬೩ – ೯೫ ನುಸಗೆಂಪುಬಣ್ಣ (?)
ಶಂಬರ ೧೨೯ – ೯೮ ಒಬ್ಬ ರಾಕ್ಷಸ, ಪರ್ವತ
ಶರ್ವ ೮೦ – ೮೧ ಶಿವ
ಶಾಖಾಚರ ೧೭೭ – ೨೦ವ ಕೋತಿ
ಶಾತಕುಂಭ ೩೪ – ೩ವ ಚಿನ್ನ
ಶಾತ್ರವ ೧೦೨ – ೮೫ ಶತ್ರು
ಶೀತಗು ೫೮ – ೪೯ (?)
ಶುಂಡ ೨೫೯ – ೧೩೯ ವ ಮದ್ಯ
ಶುಂಡಾಲ ೧೫೩ – ೪೭ ಆನೆ
ಶುಕ್ತಿ ೧೦೫ – ೧೦೦ ವ ಮುತ್ತಿನ ಚಿಪ್ಪು
ಶುಕ್ಲಕುಷ್ಠ ೨೨೨ – ೭೪ ಬಿಳಿ ತೊನ್ನು
ಶುನಾಸೀರ ೧೮೯ – ೭೫ವ ಇಂದ್ರ
ಶೂಕ ೧೭ – ೮೨ ಹೊಟ್ಟು, ಊಬು
ಶೌಂಡಕಿತ ೨೨೦ – ೬೫ ಮದವೇರಿದ
ಶೌಂಡಿಕ ೨೫೯ – ೧೩೯ ವ ಮದ್ಯಪಾನಿ, ಹೆಂಡ ಗುಡುಕ
ಶ್ರದ್ಧಾನ ೭೬ – ೬೦ ನಂಬಿಕೆ, ವಿಶ್ವಾಸ
ಶ್ಲಥೀಭೂತ ೩೭೭ – ೫ ಸಡಿಲವಾದ
ಷ
ಷಡ್ಜ ೨೦೭ – ೧ವ ಸಂಗೀತದ ಒಂದು ಮಟ್ಟು
ಸ
ಸಂಕಲೆ ೧೭ – ೮೬ ಸಂಕೋಲೆ, ಬೇಡಿ
ಸಂಕೆ ೧೩೦ – ೧೦೦ ಶಂಕೆ, ಸಂದೇಹ
ಸಂಗಡಿಸು ೬೯ – ೭೨ ಒಟ್ಟಾಗು, ಕೂಡು
ಸಂಗಣಿಸು ೨೮೧ – ೭೨ ಕೂಡು, ಸೇರು
ಸಂಗಳಿಸು ೨೦೦ – ೧೨೯ ಕೂಡು, ಸೇರು
ಸಂಚ ೨೮೦ – ೭೦ ವ ಪತ್ರಗಳ ಕಟ್ಟು
ಸಂಚಯ ೧೨೫ – ೭೭ ರಾಶಿ, ಗುಂಪು
ಸಂಚಿಸು ೧೨೧ – ೫೬ ಕೂಡಿಸು, ಸೇರಿಸು
ಸಂಛನ್ನ ೨೪೧ – ೫೦ ಮುಚ್ಚಲ್ಪಟ್ಟ, ಹೊದಿಸಿದ
ಸಂತಪನ ೯೮ – ೬೭ ವ ಕುದಿಸುವಿಕೆ
ಸಂತ್ರಾಸನ ೯೫ – ೫೯ ಭಯ, ಹೆದರಿಕೆ
ಸಂದಂಶ ೨೪೦ – ೪೬ ಇಕ್ಕುಳ
ಸಂದಣಿಸು ೧೪೯ – ೨೮ ಸೇರಿಸು, ಕೂಡಿಸು
ಸಂದೆಗ ೧೧೪ – ೨೫ ಸಂದೇಹ
ಸಂಧುಕ್ಷಣಂಗೆಯ್ ೧೨೯ – ೯೭ವ ಹೊತ್ತಿಸು
ಸಂನಂದಿತ ೧೪೮ – ೨೪ ಸೇರಿದ, ಕೂಡಿದ
ಸಂಪಣ ೮೦ – ೭೮ ಕಲಸಿದ ಹಿಟ್ಟು
ಸಂಬಳ ೬೮ – ೨೧ ಬುತ್ತಿ
ಸಂಸರಣ ೨೦೫ – ೧೫೪ ಸಂಸಾರ
ಸಂಸ್ತವ ೧೭೪ – ೨ ಹೊಗಳಿಕೆ
ಸಕ್ಕಸಮ ೪೬೦ – ೫೬ವ ಸರಿಸಮಾನ
ಸಚ್ಚಕ್ಕಣ ೨೩ – ೧೧೦ ಮದ್ಯ ಕುಡಿಯುವಾಗ ನಂಜಿಕೊಳ್ಳುವ ಮಾಂಸದ ಚೂರು
ಸಜ್ಜಾಲಕ ೫೩ – ೨೧ ಉತ್ತಮವಾದ ಯುದ್ಧಕವಚ
ಸಜ್ಜಿಕೆ ೧೫೮ – ೭೩ ಅಲಂಕಾರಮಾಡಿದ ಹೆಂಗಸು
ಸಣ್ಣಿಸು ೧೨೩ – ೬೪ ಚೂರುಚೂರುಮಾಡು
ಸತ್ವರ ೨೧೦ – ೧೬ ವೇಗ
ಸನ್ನತ ೨೧ – ೧೦೬ ಕೂಡಿದ, ಸೇರಿದ
ಸನ್ನಹಿತ ೨೭ – ೧೩೭ ಕೂಡಿದ, ಸೇರಿದ
ಸನ್ನಿದ ೫೩ – ೨೫ ಸಮೀಪ
ಸನ್ನೆಗಾಳೆ ೨೨ – ೧೦೯ ವ ಸಂಜ್ಞೆಗಾಗಿ ಊದುವ ಕಹಳೆ
ಸಪುರ ೧೧೨ – ೧೫ವ ತೆಳು, ನಯ
ಸಪ್ತಚ್ಛದ ೧೭೯ – ೨೭ವ ಒಂದು ಜಾತಿಯ ಮರ
ಸಮಂಕಿತ ೧೦ – ೪೨ ಕೂಡಿದ
ಸಮಂಚಿತ ೨೭೪ – ೪೧ ವ ಕೂಡಿದ, ಸೇರಿದ
ಸಮಕಟ್ಟು ೨೩೪ – ೧೬ವ ಸಿದ್ಧತೆ
ಸಮನಿಸು ೫೨೧ – ೩೩೯ ಕೂಡು, ಪ್ರಾಪ್ತವಾಗು
ಸಮಪಹ ೫೨೧ – ೩೩೯ ಕೂಡು, ಪ್ರಾಪ್ತವಾಗು
ಸಮಪಹ ೧೭೩ – ೧೪೫ ನಾಶಮಾಡುವವನು
ಸಮಾಕಳಿತ ೨೧೧ – ೨೧ವ ಸೇರಿದ, ಕೂಡಿದ
ಸಮಾಸ್ಕಂದಿತ ೪೫೨ – ೨೦ವ ಕುದುರೆಯ ನಡಗೆಗಳಲ್ಲಿ ಒಂದು
ಸಮುತ್ಥ ೨೪೧ – ೫೨ ಮೇಲೆದ್ದ
ಸಮುದ್ಯುಷಿತ ೨೩೫ – ೪೫ವ ಚೆನ್ನಾಗಿನೆಲೆಗೊಂಡ
ಸಮುಪಕಂಠ ೨೯೨ – ೧೨೭ವ ಹತ್ತಿರ, ಸಮೀಪ
ಸಮುಪಗತ ೨೯ – ೧೪೫ವ ಹತ್ತಿರ ಬಂದ , ಸಮೀಪಿಸಿದ
ಸಮೆ ೯ – ೩೮ ಮಾಡು
ಸಮ್ಮದ ೭೫ – ೫೭ ಸಂತೋಷ
ಸರಭ ೨೫೫ – ೧೨೧ ಎಂಟು ಕಾಲಿನ ಒಂದು ಪ್ರಾಣಿ
ಸರವಳಿಗೆ ೩೦೨ – ೧೭೩ ಎಳೆ
ಸವನೋತ್ಸವ ೧೯೫ – ೧೦೩ ಜನ್ಮಾಭಿಷೇಕ
ಸಸಿನ ೧೪ – ೬೮ ಬಂಡೆ
ಸಾಯಾತ್ರಿಕ ೫೩೯ – ೪೨೧ ಜೊತೆಯಲ್ಲಿ ಹೋಗುವ ಯಾತ್ರಿಕ
ಸಾರತೆ ೧೩೦ – ೧೦೩ ಸತ್ವದಿಂದ ಕೂಡಿದ್ದು
ಸಾರಿಗೆ ೧೬೨ – ೧೪೧ ಸಮೀಪ
ಸಾಲಹಸ್ತ ೨೪ – ೧೨೦ ಕೋಟೆಯ ಎತ್ತರವಾದ ಗೋಡೆ
ಸಾವಗಿಸು ೪೧೧ – ೧೬೦ ಸರಿಯಾಗಿ ಹೊದ್ದುಕೊಳ್ಳು
ಸಾಸ ೨೫೭ – ೧೩೨ ವ ಸೊಗಸು, ಮನೋಹರ
ಸಾಸಿಗ ೭೨ – ೪೩ ಶೂರ, ಪರಾಕ್ರಮಿ
ಸಿಂದ ೩೮೮ – ೫೨ವ ಆನೆ (?)
ಸಿಂಪಿಣಿ ೪೦೩ – ೧೨೦ ಸಿಂಪಡಿಸುವಿಕೆ, ಚಿಮುಕಿಸುವಿಕೆ
ಸಿರಿಸ ೧೨೪ – ೭೨ ಒಂದು ಜಾತಿಯ ಪುಷ್ಪ
ಸಿರಿಸಿಂಬಿ ೨೫೬ – ೧೨೬ ಒಂದು ಜಾತಿಯ ಮದ್ಯ
ಸೀಂಪು ೧೯೭ – ೧೧೯ ಸೀನುವುದು
ಸೀವಟ್ಟಣ ೪೫೨ – ೧೯ ಮಲ್ಲಯುದ್ದದಲ್ಲಿ ಒಂದು ವರಸೆ
ಸುಗಿ ೧೩೩ – ೧೧೬ ವ ಹೆದರು
ಸುಟ್ಟುಂಬೆ ೧೧೮ – ೪೩ವ ತೋರುಬೆರಳು
ಸುನಾದೆ ೪೩ – ೧೨೬ ಒಂದು ಬಗೆಯ ಮದ್ಯ
ಸುರಿಗೆ ೨೫೩ – ೧೧೦ ಕತ್ತಿ
ಸುರಿಮುತ್ತು ೧
೧೩೧ – ೧೦೮ ಸುರಿಯುತ್ತಿರುವ ಮುತ್ತು
ಸುರುಳ್ಚು ೭೦ – ೩೫ ಮತ್ತು, ಮುಚ್ಚಿಡು
ಸುರ್ವುಗೊಳ್ ೨೫೨ – ೧೦೪ ವ ಗುಂಪಾಗು, ಒಟ್ಟಾಗು
ಸುಲಿ ೨೮ – ೧೪೨ ಉಜ್ಜು, ತೊಳೆ
ಸುಲಿಪಲ್ ೧೩೩ – ೧೧೦ ವ ಹಲ್ಲನ್ನು ಉಜ್ಜು
ಸುಷಿರ ೧೯೫ – ೧೦೪ ಒಂದು ಬಗೆಯ ವಾದ್ಯ
ಸೂಕರಜ ೨೫೧ – ೯೯ ಹಂದಿಯಿಂದ ಹುಟ್ಟಿದ
ಸೂಡಗ ೧೩೧ – ೧೦೭ ಬಳೆ
ಸೂಡು ೧೨೬ – ೭೯ ಮುಡಿ
ಸೂಸಕ ೧೮೨ – ೪೨ ಹಣೆಯ ಮೇಲೆ ಧರಿಸುವ ಒಂದು ಆಭರಣ, ಕುಚ್ಚು
ಸೂಳ್ವಡೆ ೪೩೬ – ೯೮ ಸರದಿಯನ್ನು ಹೊಂದು
ಸೆಕ್ಕು ೨೧೨ – ೨೫ ಸಿಕ್ಕಿಸು
ಸೇಕಿಸು ೭೫ – ೫೫ ನೀರು ಚಿಮುಕಿಸು
ಸೇದೆವಡು ೨೧೬ – ೪೩ ಆಯಾಸಪಡು, ಬಳಲು
ಸೈತುಮಾಡು ೧೮೫ – ೫೬ ನೆಟ್ಟಗೆಮಾಡು
ಸೈಪು ೧೪೦ – ೧೫೦ ಪುಣ್ಯ
ಸೈವಳ ೧೮೦ – ೩೧ ಪಾಚಿ
ಸೊಡರ್ಗುಡಿ ೧೮೩ – ೪೭ ವ ದೀಪದ ಕುಡಿ
ಸೊದೆವಳಿ ೪೯೬ – ೨೨೫ ವ ಅಮೃತವನ್ನು ಬಳಿ (?)
ಸೊಪ್ಪಿಸು ೯೦ – ೩೧ ಸೊರಗು, ಬಾಡು
ಸೊಪ್ಪುಳ್ ೨೫೨ – ೧೦೮ ಧ್ವನಿ
ಸೋಗಿಲು ೨೧೨ – ೨೪ ಮಡಿಲು
ಸೋಗೆ ೮೧ – ೮೫ ನವಿಲು
ಸೋರ್ಮುಡಿ ೧೬ – ೮೧ ಇಳಿಬಿದ್ದಿರುವ ತುರುಬು
ಸೋವು ೧೭ – ೮೨ ಓಡಿಸು, ಅಟ್ಟು
ಸೌವಸ್ತಿಕ ೩೪೨ – ೧ವ ಪೂಜಾರಿ
ಸ್ತಂಬೇರಮ ೨೭೦ – ೨೩ ಆನೆ
ಸ್ತೂಯಮಾನ ೨೦೪ – ೧೫೨ ವ ಹೊಗಳಲ್ಪಟ್ಟಿ
ಸ್ವರಮಂಡಳ ೨೦೭ – ೧ವ ಒಂದು ಬಗೆಯ ವೀಣೆ
ಹ
ಹಂಚೆ ೪೩೧ – ೭೮ ಹಂಸ
ಹಕ್ಕರಿಕೆ ೨೩೯ – ೪೧ ಕುದುರೆಯ ಜೀನು
ಹಡಪ ೧೨೬ – ೮೨ವ ಎಲೆ ಅಡಕೆಯ ಚೀಲ
ಹಡಪಿಗ ೩೯೨ – ೭೩ ಎಲೆ ಅಡಕೆಯ ಚೀಲ ಹಿಡಿದವನು
ಹಡಿಕೆ ೮೯ – ೩೦ ಕೆಟ್ಟವಾಸನೆ
ಹೆಮ್ಮೈಸು ೨೪೧ – ೫೫ ಭಯಪಡು, ಹೆದರು
ಹರಿಚಂದನ ೪೮ – ೩ ಶ್ರೀಗಂಧ
ಹರಿನೀಳಕುಟ್ಟಿಮ ೨೭೪ – ೪೧ ಹಚ್ಚೆಯ ನೆಲಗಟ್ಟು
ಹವಣಿ ೨೦೭ – ೧ವ ರಾಗದ ಒಂದು ಬಗೆ
ಹಳ ೩೪ – ೩ವ ನೇಗಿಲು
ಹಳಿಗು ೧೩೮ – ೧೨೩ ಹೆಣಗು, ಹೋರಾಡು
ಹಾರೀತಕ ೫೦೦ – ೨೩೯ವ ಒಂದು ಜಾತಿಯ ಪಾರಿವಾಳ
ಹಾವಂಚೆ ೨೪೦ – ೪೯ ಪಾಚಿ
ಹಾವಸೆ ೧೭೮ – ೨೩ ಪಾಚಿ
ಹಾವುಗೆ ೨೭೬ – ೪೮ ವ ಮರದ ಪಾದರಕ್ಷೆ
ಹಾಸು ೧೨೩ – ೬೫ ಹಾಸಿಗೆ
ಹಿಡಿಯಂಬು ೨೫೨ – ೧೦೫ ಒಂದು ಬಗೆಯ ಬಾಣ
ಹೀಲಿ ೧೧೪ – ೨೩ ನವಿಲುಗರಿ
ಹುಂಡ ೨೫೫ – ೧೨೪ ಹೊರೆ, ಭಾರ
ಹುಡಿಕೆನೀರು ೪೦೩ – ೧೧೯ ಬಿಸಿನೀರು
ಹುಱಿಗಲ್ ೨೪೮ – ೮೪ ಒಂದು ಜಾತಿಯ ಮರ
ಹೂತಿಯ ಬೆಕ್ಕು ೨೪೮ – ೮೩ ಒಂದು ಜಾತಿಯ ಬೆಕ್ಕು
ಹೂಸಣಂಬು ೩೦೨ – ೧೭೪ ಒಂದು ತಿಂಡಿ
ಹೆಕ್ಕಳಿಸು ೨೫೧ – ೧೦೦ ಗರ್ವಪಡು, ಹೆಮ್ಮೆಪಡು
ಹೆಡ್ಡೈಸು ೨೨೩ – ೭೬ ಹೀನವಾಗಿ ಕಾಣು, ತಿರಸ್ಕರಿಸು
ಹೇರುಡು ೨೫೩ – ೧೧೩ ದೊಡ್ಡಉಡ
ಹೇಳಾಲಂಬಿ ೪೪ – ೫೬ ವಿನೋದಪ್ರಿಯ
ಹೊಗರೇಱು ೨೮೯ – ೧೧೬ ಕಾಂತಿಯುಕ್ತವಾಗು
ಹೊದರು ೨೫೩ – ೧೧೩ ಪೊದರು
ಹೊನ್ನೆ ೭೭ – ೬೬ ಒಂದು ಜಾತಿಯ ಮರ
ಹೊರಜೆ ೪೫೨ – ೧೯ವ ದೊಡ್ಡ ಹಗ್ಗ
ಹೋರಾಶಾಸ್ತ್ರ ೧೦ – ೪೫ ಜ್ಯೋತಿಷ್ಯ
ಱ
ಱಂಚೆ ೨೩೫ – ೨೧ವ ಜೀನು
Leave A Comment