ಮೊದಲನೆಯ ಸಂಖ್ಯೆ ಆಶ್ವಾಸವನ್ನೂ ಎರಡನೆಯ ಸಂಖ್ಯೆ ಪದ್ಯವನ್ನೂ ಸೂಚಿಸುತ್ತದೆ.
ಅಕ್ಕೆಬೊಟ್ಟು ೧ – ೭೫ ಹಣೆಗೆ ಇಟ್ಟುಕೊಳ್ಳುವ ಬೊಟ್ಟು
ಅಡರ್ಪು ೨ – ೮ ಆಸರೆ
ಅಣಲ್ ೧ – ೬೨ ಬಾಯಿಯ ಒಳಭಾಗ, ಅಂಗುಳು
ಅಧರತೆ ೧ – ೬೮ ಕೀಳಾಗಿರುವಿಕೆ, ಕೀಳುತನ
ಅಮ್ಮಾವು ೪ – ೬೧ ಕಾಡುಹಸು
ಅರೋಚಕ ೪ – ೬೫ ರುಚಿಯನ್ನು ಹುಟ್ಟಿಸದುದು, ಒಂದು ರೋಗ
ಅವತಂಸ ೧ – ೮೩ ಕಿವಿಯ ಆಭರಣ
ಅಳಿಗೂರ್ಮೆ ೧ – ೧೧೨ ನಾಶವಾಗುವ ಪ್ರೀತಿ
ಆಣೆಗೋಷಣೆ ೧ – ೬೯ ಅಪ್ಪಣೆಯನ್ನು ಸಾರಿಹೇಳುವುದು
ಆರ್ಮ ೧ – ೧೩ ಆಶ್ರಯಸ್ಥಾನ, ನೆಲೆ
ಇಮ್ಮಾವು ೪ – ೬೧ ಸಿಹಿಯಾದ ಮಾವು
ಉದ್ಯೋತ ೨ – ೮ ಹೊಳಪು, ಕಾಂತಿ
ಉದ್ದಮೂಳ ೧ – ೬೩ ಅತಿದಡ್ಡ ಮಹಾಮೂರ್ಖ
ಉಪ್ಪಾಗು ೧ – ೬೦ ಅಲಷ್ಯಕ್ಕೆ ಒಳಗಾಗು, ಲೆಕ್ಕಕ್ಕೆ ಇಲ್ಲದಾಗು
ಎಳವೆಱೆ ೩ – ೯೨ ಎಳೆಯಚಂದ್ರ, ಬಾಲಚಂದ್ರ
ಕಂತೆವೊರೆ ೧ – ೬೬ ಕೆಲಸಕ್ಕೆ ಬಾರದ ಮಾತಾಡು
ಕಂಬು ೩ – ೯೬ ಶಂಖ
ಕಣ್ಣಲೆ ೧ – ೭೦ ದೃಷ್ಟಿಗೋಚರ, ಕಣ್ಣಿಗೆ ತಾಗುವುದು
ಕಣ್ಣೆಲೆ ೧ – ೭೧ ಕಣ್ಣಿಗೆ ನೆಲೆಯಾದದ್ದು, ನೋಡಲು ತಕ್ಕದ್ದು, ಗಮನಾರ್ಹವಾದುದು
ಕಣ್ಬರಿ ೨ – ೧೦ ಕಣ್ಣಿನ ಹರಹು, ನೋಟದ ವಿಸ್ತಾರ
ಕಮ್ಮಂಗಳವೆ ೨ – ೩೦ ಸುವಾಸನೆಯ ನೆಲ್ಲು
ಕರಭ ೧ – ೫೪ ಪ್ರಾಣಿಯ ಮರಿ
ಕುಸುರಿವಾತು ೧ – ೭೦
ಸೂಕ್ಷ್ಮವಾದ ಮಾತು, ನಾಜೂಕಿನ ಮಾತು
ಕುಳಿರ್ಕೋಡು ೫ – ೪ವ ಹಿಗ್ಗು, ಸಂತೋಷ ಪಡು
ಕೆಯ್ಪಱೆ ೨ – ೨೮ ಚಪ್ಪಾಳೆ
ಕೊಳೆಗಬ್ಬಿಗ ೧ – ೬೬ ಕೀಳು ಕಾವ್ಯಗಳನ್ನು ರಚಿಸುವವನು, ಕೆಟ್ಟಕವಿ
ಗಣಿದಂಗೊಳ್ ೧ – ೬೯ ಎಣಿಕೆ ಮಾಡು, ಲೆಕ್ಕಾಚಾರ ಮಾಡು
ಗಸಣಿ ೧ – ೬೭ ತೊಂದರೆ, ಹಿಂಸೆ, ಕಾಟ
ಗೊರವ ೧ – ೫೬ ತಿರುಕ, ಭಿಕ್ಷುಕ
ಚಯ್ಯಾಡು ೩ – ೧೨೧ ಚಲ್ಲಾಟವಾಡು
ಡವಕೆ ೩ – ೧೧೧ ಉಗುಳುವ ಪಾತ್ರೆ
ಡುಂಡುಚಿ ೧ – ೫೭ ಗೊರವರು ಬಾರಿಸುವ ವಾದ್ಯ, ಡಮರು
ತರುವಲಿ ೨ – ೧೧೨ ವ ಹುಡುಗ
ತಳ್ಬೊಯ್ ೫ – ೧೦ ಮೀರು, ತುಂಬು
ತೂಱಲ್ಗೊಂಬು ೧ – ೫೩ ತುತ್ತತುದಿಯ ಕೊಂಬೆ
ತೇಳ್ ೧ – ೬೨ಚೇಳು
ತೊಂಡುವೆಸರ್ ೧ – ೪೯ ಹೆಮ್ಮೆಗಾಗಿ ಪಡೆದ ಬಿರುದು
ದಕ್ಕಾಲಿ ೩ – ೯೫ ನೋಡುವ ಸಾಮರ್ಥ್ಯವಿಲ್ಲದ ಕಣ್ಣುಗುಡ್ಡೆ
ದೂನಿಸು ೩ – ೧೧೭ವ ಶೋಕಪಡು
ಧಮ್ಮಿಲ್ಲ ೧ – ೧೧೫ ತುರುಬು, ಮುಡಿ
ನಾಡಱಿಕೆ ೧ – ೬೨ ಲೋಕಪ್ರಸಿದ್ಧಿ
ನಿಳಿಂಪ ೫ – ೧೩ ದೇವತೆ
ಪಡಿಗಿಱಿ ೧ – ೭೦ ಬಾಗಿಲನ್ನು ಮುಚ್ಚು, ಕದವಿಕ್ಕು
ಪದಪು ೧ – ೩೪ ಆಸೆ, ಉತ್ಸಾಹ, ಸೊಗಸು
ಪರಿಕಾಲ್ ೨ – ೨೯ ವ ನೀರು ಹರಿಯುತ್ತಿರುವ ಕಾಲುವೆ, ನಾಲೆ
ಪರಿಪ್ಲವ ೨ – ೧೨ ಚಂಚಲತೆ, ಅಸ್ಥಿರ
ಪವಣಿಸು ೧ – ೬೮ ಎಣಿಸು, ಲೆಕ್ಕಹಾಕು
ಪಸ ೨ – ೨೦ ಬರ, ಕ್ಷಾಮ
ಪಳು ೨ – ೧೫ ಕಾಡು, ಅರಣ್ಯ
ಪಾಮರಿ ೨ – ೨೮ ಹಳ್ಳಿಯ ಹೆಂಗಸು ಒಕ್ಕಲಗಿತ್ತಿ
ಪಿಗ್ಗು ೨ – ೩೧ ದೊಡ್ಡದಾಗು, ಅಗಲವಾಗು
ಪಿರ್ಕು ೧ – ೪೨ ಬೇರ್ಪಡಿಸು, ಪ್ರತ್ಯೇಕಿಸು
ಪೀಲಿಗಣ್ ೩ – ೧೨೬ ನವಿಲುಗರಿಯ ಮಧ್ಯದಲ್ಲಿರುವ ಕಪ್ಪು ಬಿಂಬ
ಪೇಕುಳಿನಾಯ್ ೧ – ೬೩ ಹುಚ್ಚುನಾಯಿ
ಪೇಶಲ ೩ – ೧೨ ಸುಂದರ, ಮನೋಹರ
ಬಂದುಗೆ ೨ – ೮೧ ಕೆಂಪು ಹೂಬಿಡುವ ಒಂದು ಬಗೆಯ ಸಸ್ಯ
ಬಣ್ಣನೆ ೧ – ೩೦ ವರ್ಣನೆ
ಬವರಿಸು ೧ – ೨೪ ಹೋರಾಡು, ಸ್ಪರ್ಧಿಸು
ಬಾಯ್ದೆಱೆ ೩ – ೮೪ ತುಟಿ
ಬೀದಿವರಿ ೧ – ೫೭ ಸ್ವೇಚ್ಛೆಯಿಂದ ಕೂಡಿದ ನಡೆ
ಬೀಸರಂಬೋಗು ೩೧ – ೬೫ ವ್ಯರ್ಥವಾಗು, ನಿರರ್ಥಕವಾಗು
ಬೀಳುಡೆ ೧ – ೭೬ ಇನ್ನೊಬ್ಬರು ಉಟ್ಟುಕಳಚಿದ ವಸ್ತ್ರ
ಬೆಲೆವೆಣ್ ೧ – ೧೧೨ ಸೂಳೆ
ಮದಪ್ಲವ ೧ – ೬೪ ಸಂತೋಷದ ಪ್ರವಾಹ
ಮರಂದ ೨ – ೧೨ ಹೂವಿನ ಬಂಡು, ಮಕರಂದ
ಮರಾಳ ೨ – ೩೧ ಹಂಸಪಕ್ಷಿ
ಮಾಲಾಕಾರ ೧ – ೪೫ ಹೂವಿನ ಹಾರ ಕಟ್ಟಿ ಮಾರುವವನು ಹೂವಾಡಿಗ
ಮಾಸರ ೧ – ೪೪ ಅಂದ, ಸೊಗಸು
ಮುರವು ೧ – ೧೧೪ ಕಲಗಚ್ಚು, ಬೇಯಿಸಿದ ಅಂಬಲಿ, ಮುಸುರೆ
ಮುಪ್ಪುರಿಗೊಳ್ ೧ – ೬೦ ಕೂಡು, ಸೇರು, ಹೆಚ್ಚಾಗು
ಮೆಯ್ಯಾರ್ ೩ – ೧೨೧ ಶರೀರವು ತೃಪ್ತಿಹೊಂದು
ಸೊಪ್ಪಾಗು ೧ – ೬೦ ಬಾಡು, ಶಕ್ತಿಗುಂದು
ವಿರಿಂಚ ೩ – ೯೮ ಬ್ರಹ್ಮ
ಸುಮನ ೧ – ೪೫ ಹೂವು, ಪುಷ್ಪ, ದೇವತೆ
ಹುಂಡ ೧ – ೩೩ ಹೆಡ್ಡ, ದಡ್ಡ
Leave A Comment