ಮೊದಲನೆಯ ಅಂಕಿ ಪುಟವನ್ನೂ ಎರಡನೆಯ ಅಂಕಿ ಪದ್ಯವನ್ನು ನಿರ್ದೇಶಿಸುತ್ತದೆ.

ಅಂತರಾಯ ೪೭೭ – ೧೩೪ ವ ಮೋಕ್ಷವನ್ನು ಬಯಸಿ ಮುಂದುವರಿಯುವವರಿಗೆ ನಡುವೆ ಉಂಟಾಗುವ ತೊಡಕು

ಅಂತರ್ಮುಹೂರ್ತ ೧೦೩ – ೮೮ವ ಒಂದು ಮುಹೂರ್ತಕ್ಕಿಂತಲೂ ಕಡಮೆಯಾದ ಕಾಲ, ತುಂಬಾ ಕಡಮೆ ಪ್ರಮಾಣದ ಕಾಲ

ಅಕಾಮನಿರ್ಜರೆ ೫೧೩ – ೨೯೫ ವ ವ್ಯಕ್ತಿಯ ಉದ್ದೇಶವಿಲ್ಲದೆ ತನ್ನಷ್ಟಕ್ಕೆ ತಾನೇ ಆಗುವ ನಿರ್ಜರೆ

ಅಘಾತಿಕಲುಷ ೩ – ೨ ಜೀವದ ಅನಂತಜ್ಞಾನಾದಿಗುಣಗಳನ್ನು ನಾಶಮಾಡುವ ಕರ್ಮಗಳು

ಅಜೀವತತ್ತ್ವ ೫೧೦ – ೨೮೨ ಏಳು ತತ್ತ್ವಗಳಲ್ಲಿ ಎರಡನೆಯದು

ಅರಿಷಡ್ವರ್ಗ ೩೮ – ೨೩ವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ

ಅರ್ಥಾಪತ್ತಿ ೯೭ – ೬೬ವ ಪ್ರತ್ಯಕ್ಷಾದಿಪ್ರಮಾಣಗಳಲ್ಲಿ ಒಂದು

ಅವಧಿಜ್ಞಾನ ೧೯೭ – ೧೧೯ ಎಂಟು ಬಗೆಯ ಜ್ಞಾನಗಳಲ್ಲಿ ಒಂದು

ಅವಸರ್ಪಿಣಿ ೫೦೭ – ೨೬೯ ವ ಮನುಷ್ಯರ ಆಯುಸ್ಸು ಸುಖ ಮುಂತಾದವುಗಳು ಕ್ರಮವಾಗಿ ಕುಂದುವ ಕಾಲ

ಅಷ್ಟಮಹಾಪ್ರಾತಿಹಾರ್ಯ ೩೩೪ – ೧೪೧ ಜಿನನ ಎಂಟು ಮಂಗಳ ಲಾಂಛನಗಳು ೧ ಅಶೋಕವೃತ್ತ ೨ ಸುರಪುಷ್ಪವೃಷ್ಟಿ ೩ ದಿವ್ಯಧ್ವನಿ ೪ ಚತುಃಷಷ್ಟಿ ಚಾಮರ ೫ ರತ್ನಜಡಿತ

ಸುವರ್ಣ ಸಿಂಹಾಸನ ೬ – ಪ್ರಭಾವಲಯ ೭ ದೇವ ದುಂದುಭಿ ೮ ಛತ್ರತ್ರಯ

ಅಷ್ಟವಿಧಾರ್ಚನೆ ೧೦೭ – ೧೦೪ ಅಕ್ಷತೆ, ಜಲ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ತಾಂಬೂಲ – ಇವುಗಳ ಅರ್ಪಣೆ

ಅಷ್ಟಶೋಭೆ ೫೨ – ೧೫ ಸುಣ್ಣ ಬಣ್ಣಗಳನ್ನು ಹಚ್ಚುವುದು, ಸುಗಂಧ ದ್ರವ್ಯಗಳಿಂದ ಸಾರಣೆ, ರಂಗವಲ್ಲಿ, ತಳಿರುತೋರಣ, ಧ್ವಜವನ್ನು ಏರಿಸುವುದು, ಪುಷ್ಪಗುಚ್ಛ ಗಳಿಂದ ಅಲಂಕರಿಸುವುದು, ಚಪ್ಪರಹಾಕುವುದು, ಮೇಲುಕಟ್ಟು ಕಟ್ಟುವುದು

ಅಹಮಿಂದ್ರ ೧೦೩ – ೮೮ ವ ಹದಿನಾರು ಸ್ವರ್ಗಗಳೂ ಅಣೂತ್ತರಗಳೂ ಆದಮೇಲೆ ಬರುವ ಗ್ರೈವೇಯಕವೆಂಬ ಲೋಕಭಾವದಲ್ಲಿ ಹುಟ್ಟುವ ಜೀವ

ಅಹಮೇವೇಂದ್ರ ೧೦೫ – ೯೭ ಹದಿನಾರು ಸ್ವರ್ಗಗಳೂ ಅಣೂತ್ತರಗಳೂ ಆದಮೇಲೆ ಬರುವ ಗ್ರೈವೇಯಕಮೆಂಬ ಲೋಕಭಾವದಲ್ಲಿ ಹುಟ್ಟುವ ಜೀವ

ಆರ್ತಧ್ಯಾನ ೫೦೬ – ೨೬೭ ಇಷ್ಟವಲ್ಲದ ವಸ್ತುಗಳಿಂದ ಅಗಲಬೇಕೆಂಬ ಆಕಾಂಕ್ಷೆಯಿಂದಲೂ, ಇಷ್ಟವಾಗಿರುವ ವಸ್ತುಗಳು ಬೇಕೆಂಬ ಆಕಾಂಕ್ಷೆಯಿಂದಲೂ ಮನಸ್ಸು ತುಂಬಿ ಅವುಗಳನ್ನೇ ಧ್ಯಾನಿಸುತ್ತಿರುವುದು

ಆಸನಕಂಪ ೧೪೧ – ೧೫೫ ತೀರ್ಥಂಕರನ ಜನನವೇ ಮುಂತಾದ ವಿಶೇಷ ಪ್ರಸಂಗಗಳಲ್ಲಿ ದೇವೇಂದ್ರನಿಗೆ ಉಂಟಾಗುವ ಪೀಠದ ಅಲುಗಾಟ

ಉತ್ಸರ್ಪಿಣಿ ೫೦೭ – ೬೯ ವ ಮನುಷ್ಯರ ದೇಹ ಪ್ರಮಾಣ, ಶರೀರ ಬಲ, ಆಯುಸ್ಸು, ಸುಖ ಮುಂತಾದವುಗಳು ಕ್ರಮವಾಗಿ ಏರುವ ಕಾಲ

ಉಪಪಾದ ೧೦೩ – ೮೮ ವ ಗರ್ಭವಾಸವಿಲ್ಲದೆ ಇದ್ದಕ್ಕಿದಂತೆ ಹುಟ್ಟುವುದು

ಏಕತ್ವ ೯೮ – ೬೮ವ ದ್ವಾದಶ ಅನುಪ್ರೇಕ್ಷೆಗಳಲ್ಲಿ ನಾಲ್ಕನೆಯದು

ಏಕರಜ್ಜು ೧೩ – ೬೧ವ ಕಾಲದ ಒಂದು ಅಳತೆ, ಪ್ರಮಾಣ

ಐದಾಚಾರ ೩೩೯ – ೧೬೬ ದರ್ಶನ, ಜ್ಞಾನ, ಚಾರಿತ್ರ, ತಪ, ವೀರ್ಯ

ಕರ್ಮಕ್ಷಯ ೫೧೩ – ೩೦೦ ಇರುವ ಕರ್ಮವನ್ನು ನಾಶಮಾಡುವುದು ಮತ್ತು ಬರುವ ಕರ್ಮವನ್ನು ತಡೆಗಟ್ಟುವುದು

ಕನ್ನೆಲೆ ೧೦೨ – ೮೪ ಬೇಸಿಗೆಯಲ್ಲಿ ಕಲ್ಲಿನ ಮೇಲೆ ನಿಂತು ಮಾಡುವ ತಪಸ್ಸು

ಕಲ್ಪಾವಾಸಿಗ ೧೫೦ – ೩೮ ಸ್ವರ್ಗದಲ್ಲಿ ವಾಸಮಾಡುವವನು, ದೇವತೆ

ಕಷಾಯ ೬ – ೨೨ ಸುಖದುಃಖಗಳನ್ನುಂಟುಮಾಡುವ ನಾಲ್ಕು ಬಗೆಯ ದೋಷಗಳು

ಫಾತಿಕರ್ಮ ೧೪೦ – ೧೪೯ ಜೀವಕ್ಕೆ ಸಹಜವಾದ ಅನಂತಜ್ಞಾನ, ಅನಂತದರ್ಶನ, ಅನಂತವೀರ್ಯ, ಅನಂತಸುಖ ಎಂಬ ನಾಲ್ಕು ಅನಂತಗುಣಗಳಿಗೆ ಘಾತಿ ಉಂಟು ಮಾಡುವ ಕರ್ಮ

ಚತುರ್ನಿಕಾಯ ೧೪೧ – ೧೫೫ ವ ಕಿನ್ನರ ಕಿಂಪುರುಷ ಗರುಡ ಗಂಧರ್ವರೆಂಬ ನಾಲ್ಕು ವಿಧ ದೇವತೆಗಳು

ಚತುರ್ವಿಂಶತೀಂದ್ರ ೧೫೨ – ೪೪ವ ಇಪ್ಪತ್ತನಾಲ್ಕು ಕಲ್ಪವಾಸಿ ದೇವತೆಗಳು

ಚರಮದೇಹ ೧೦೫ – ೧೦೦ ವ ತದ್ಭವ ಮೋಕ್ಷಗಾಮಿಯಾದ ಶರೀರ

ಚಾರಣಪರಮೇಷ್ಠಿ ೭೪ – ೫೩ ವ ತಪಸ್ಸಿನ ಪ್ರಭಾವದಿಂದ ಆಕಾಶದಲ್ಲಿ ಸಂಚಾರ ಮಾಡುವ ಸಾಮರ್ಥ್ಯವುಳ್ಳ ಮುನಿ

ಚಾರಣಮುನಿ ೫೦ – ೧೨ ‘ಚಾರಣಪರಮೇಷ್ಠಿ’ನೋಡಿ

ಜ್ಞಾನಾವರಣೀಯ ೪೭೭ – ೧೩೪ ಕರ್ಮಪ್ರಕೃತಿಗಳಲ್ಲಿ ಒಂದು

ಜ್ಯೋತಿಷ್ಕ ೫೦೮ – ೨೭೪ವ ದೇವತೆಗಳಲ್ಲಿ ಒಂದು ಪ್ರಭೇದ

ದಶಾವಸ್ಥೆ ೪೩೪ – ೮೯ ದೃಕ್‌ಸಂಗ, ಮನಸ್ಸಂಗ, ಸಂಕಲ್ಪ, ಜಾಗರ, ಕೃಶತೆ, ಅರತಿ, ಹ್ರೀತ್ಯಾಗ, ಉನ್ಮಾದ, ಮೂರ್ಛೆ, ಅಂತ

ದಶಾಶೆ ೬೯ – ೨೭ ಪೂರ್ವ, ಆಗ್ನೇಯ, ದಕ್ಷಿಣ, ನೈರುತ, ಪಶ್ಚಿಮ, ವಾಯುವ್ಯ, ಉತ್ತರ, ಐಶಾನ್ಯ, ಊರ್ಧ್ವ, ಅಧೋ

ದರ್ಶನ ಮೋಹನೀಯ ೧೦೬ – ೧೦೧ವ ಮಿಥ್ಯಾತ್ವ, ಸಮ್ಯಕ್ ಮಿಥ್ಯಾತ್ವ, ಸಮ್ಯಕ್ತ ಪ್ರಕೃತಿ

ದರ್ಶನಾವರಣೀಯ ೪೭೭ – ೧೩೪ ವ ಘಾತಿಕರ್ಮಗಳಲ್ಲಿ ಒಂದು

ದಶಧರ್ಮ ೩೩೯ – ೧೬೬ ಉತ್ತಮಕ್ಷಮೆ, ಮಾರ್ದವ, ಅರ್ಜವ, ಶೌಚ, ಸತ್ಯ, ಸಂಯಮ, ತಪಸ್ಸು, ತ್ಯಾಗ, ಆಕಿಂಚನ್ಯ, ಬ್ರಹ್ಮಚರ್ಯ

ದುಷ್ಷಮ ಸುಷಮ ೫೦೭ – ೨೬೯ ವ ಅವಸರ್ಪಿಣಿಯ ನಾಲ್ಕನೆಯ ಕಾಲ

ದುಷ್ಷಮೆ ೫೦೭ – ೨೬೯ ವ ಅವಸರ್ಪಿಣಿಯ ಐದನೆಯ ಕಾಲ

ದ್ವಾದಶವಿಧ ತಪ ೧೦೧ – ೮೦ ಅನಶನ, ಅವಮೋದರ್ಯ, ವೃತ್ತಿಸಂಖ್ಯಾನ, ರಸತ್ಯಾಗ, ಕಾಯಕ್ಲೇಶ, ವಿವಿಕ್ತಶಯನಾಸನ, ಪ್ರಾಯಶ್ಚಿತ, ವಿನಯ, ವೈಯಾಪೃತ್ಯ, ಸ್ವಾಧ್ಯಾಯ ವ್ಯುತ್ಸರ್ಗ, ಧ್ಯಾನ

ನವರಸ ೨೧೦ – ೧೬ವ ಶೃಂಗಾರ, ವೀರ, ಕರುಣ, ಅದ್ಭುತ, ಹಾಸ್ಯ, ಭಯಾನಕ, ಭೀಭತ್ಸ, ರೌದ್ರ, ಶಾಂತ

ನಿರ್ವಾಣ ಕಲ್ಯಾಣ ೫೨೫ – ೩೫೬ ಪಂಚಕಲ್ಯಾಣಗಳಲ್ಲಿ ಒಂದು

ಪಂಚಾಚಾರ ೩ – ೩ ಜ್ಞಾನಾಚಾರ, ದರ್ಶನಾಚಾರ, ಚಾರಿತ್ರಾಚಾರ, ತಪಾಚಾರ, ವೀರ್ಯಾಚಾರ

ಪಂಚಾಶ್ಚರ್ಯ ೧೪೧ – ೧೫೭ವ ದೇವದುಂದುಭಿ ಮೊಳಗುವುದು, ಹೂಮಳೆಗರೆ ಯುವುದು, ಚಿನ್ನದ ಮಳೆ ಕರೆಯುವುದು, ದೇವತೆಗಳು ಪ್ರಶಂಸೆ ಮಾಡುವುದು, ತಂಗಾಳಿ ಬೀಸುವುದು

ಪತ್ತುಧರ್ಮ ೩ – ೩ ‘ದಶಧರ್ಮ’ ನೋಡಿ

ಪನ್ನೆರಡಂಗ ೪ – ೧೦ ಆಚಾರಾಂಗ, ಸೂತ್ರ, ಕೃತಾಂಗ, ಸ್ಥಾನಾಂಗ, ಸಮವಾಯಾಂಗ, ವ್ಯಾಖ್ಯಾಪ್ರಜ್ಞ್ಯಪ್ತಂಗ, ಜಾತೃಕಥಾಂಗ, ಉಪಾಸಕಾಧ್ಯಾಯನಾಂಗ, ಅಂತಕೃದ್ದ ಶಾಂಗ, ಅನುತ್ತರೋಪಪಾದೇಯದಶಾಂಗ, ಪ್ರಶ್ನ ವ್ಯಾಕರಣಾಂಗ, ವಿಪಾಕ ಸೂತ್ರಾಂಗ, ದೃಷ್ಟಿವಾದಾಂಗ

ಪನ್ನೆರಡುತಪ ೩ – ‘ದ್ವಾದಶವಿಧ ತಪ’ ನೋಡಿ

ಪಲ್ಯಪ್ರಮಿತಕಾಲ ೧೧೭ – ೩೭ವ ಕಾಲದಲ್ಲಿ ಒಂದು ಭೇದ

ಪುದ್ಗಲ ೫೦೯ – ೨೭೭ವ ಸ್ಪರ್ಶ ರಸ ಗಂಧ ವರ್ಣಗಳುಳ್ಳ ದ್ರವ್ಯ

ಪ್ರಾಭಾಕರ ೧೧೧ – ೧೨ ಒಂದು ಬಗೆಯ ತತ್ತ್ವಜ್ಞಾನ

ಬಾಹ್ಯಾಭ್ಯಂತರ ಪರಿಗ್ರಹ ೧೦೨ – ೮೪ ವ ದ್ವಾದಶವಿಧ ತಪಗಳನ್ನು ಸ್ವೀಕರಿಸುವುದು

ಬೆಳ್ಳವಾಸ ೧೦೨ – ೫೪ ಮೊಳಕಾಲು ಮುಳುಗುವವರೆಗೆ ನೀರಿನಲ್ಲಿ ನಿಂತು ಮಾಡುವ ತಪಸ್ಸು

ಭವನಾಮರ ೧೫೨ – ೪೪ವ ಅಸುರ, ನಾಗ, ಸುಪರ್ಣಾದಿ ಹತ್ತು ಪ್ರಕಾರದ ದೇವರು ಭವನದೊಳಗೆ ಅಂದರೆ ಪಾತಾಳದೊಳಗೆ ವಾಸಿಸುವುದು

ಮಡಂಬ ೪೦ – ೧೦೨ ಐದುನೂರು ಗ್ರಾಮಗಳನ್ನೊಳಗೊಂಡ ಮುಖ್ಯಪಟ್ಟಣ

ಮತಿಶ್ರುತಾವಧಿ ೧೪೫ – ೧೪ ಮತಿ, ಶ್ರುತಿ, ಅವಧಿ ಎಂಬ ಮೂರು ಬಗೆಯ ಜ್ಞಾನಗಳು

ಮಿಥ್ಯಾದೃಷ್ಟಿ ೧೦೬ – ೧೦೧ವ ಜೈನಮತ ತತ್ತ್ವಗಳು ಸುಳ್ಳೆಂದು ಅವನ್ನು ನಂಬದಿರುವುದು

ಮೂವತ್ತಾಱುಭಾಸ್ವದ್ಗುಣ ೩೩೯ – ೧೬೬ ಅನಶನಾದಿ ಹನ್ನೆರಡು ತಪಗಳು, ಸಾಮಾಯಿಕಾದಿ ಪ್ರತಿಕ್ರಮಣಾದಿ ಆರು ಆವಶ್ಯಕಗಳು, ಉತ್ತಮ ಕ್ಷಮಾದಿ ಹತ್ತು ಧರ್ಮಗಳು, ಜ್ಞಾನಾಚಾರಾದಿ ಐದು ಆಚಾರಗಳು ಮತ್ತು ಮನೋಗುಪ್ತಾದಿ ಮೂರು ಗುಪ್ತಿಗಳು – ಇವೆಲ್ಲ ಕೂಡಿ ಆಚಾರ್ಯರ ಮೂವತ್ತಾರು ಗುಣಗಳಾಗುತ್ತವೆ

ಮೂಱರಗುಪ್ತಿ ೩೩೯ – ೧೬೬ ಮನೋಗುಪ್ತಿ, ವಚನಗುಪ್ತಿ, ಕಾಯಗುಪ್ತಿ

ಮೋಹನೀಯ ೪೭೬ – ೧೩೪ವ ಕರ್ಮಗಳಲ್ಲಿ ಒಂದು

ರತ್ನತ್ರಯ ೪ – ೯ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ

ಲೋಕಾಕಾಶ ೫೦೯ – ೨೭೯ ವ ಧರ್ಮ, ಅಧರ್ಮ, ಪುದ್ಗಲ, ಜೀವ, ಮತ್ತು ಕಾಲ – ಇವು ಎಲ್ಲಿಯವರೆಗೆ ಇರುವವೋ ಅಲ್ಲಿಯವರೆಗಿನ ಆಕಾಶ

ವ್ಯವಹಾರಕಾಲ ೫೧೦ – ೨೮೦ ಕಾಲದ್ರವ್ಯದ ಘಳಿಗೆ ದಿವಸ ತಿಂಗಳು ಮುಂತಾದ ಪರ್ಯಾಯಗಳು

ಶುಕ್ಲಧ್ಯಾನ ೫೨೩ – ೩೪೪ ಶುಚಿತ್ವಸಮೇತವಾದದ್ದು ಶುಕ್ಲಧ್ಯಾನ, ಧರ್ಮಧ್ಯಾನವನ್ನು ಮುಗಿಸಿ ಮುಕ್ತಿಹೊಂದುವುದನ್ನು ಚಿಂತಿಸುವುದು. ಶುಕ್ಲಧ್ಯಾನವು ಸಾಕ್ಷಾತ್ತಾಗಿ ಮುಕ್ತಿಗೆ ಸಾಧನವಾಗುತ್ತದೆ.

ಷಟ್ತರ್ಕ ೧೦ – ೪೬ ಬೌದ್ಧ, ನೈಯಾಯಿಕ, ಸಾಂಖ್ಯ, ಜೈನ, ವೈಶೇಷಿಕ, ಜೈಮಿನೀಯ

ಷಡಾವಶ್ಯಕ ೩೩೯ – ೧೬೬ ಸಾಮಾಯಿಕ, ತೀರ್ಥಂಕರಸ್ತವನ, ಪಂಚಪರಮೇಷ್ಠಿ ವಂದನ, ಪ್ರತಿಕ್ರಮಣ, ಪ್ರತ್ಯಾಖ್ಯಾನ, ಕಾಯೋತ್ಸರ್ಗ

ಷಡ್ದ್ರವ್ಯ ೧೩ – ೬೦ ಜೀವ, ಪುದ್ಗಲ, ಧರ್ಮ, ಅಧರ್ಮ, ಆಕಾಶ, ಕಾಲ

ಷೋಡಶಭಾವನೆ ೫೪೦ – ೪೩೮ ದರ್ಶನವಿಶುದ್ಧಿ, ವಿನಯ ಸಂಪನ್ನತೆ, ಶೀಲ ವ್ರತೇಷ್ವನತಿಚಾರ, ಆಭೀಕ್ಷ್ಣ ಜ್ಞಾನೋಪಯೋಗ, ಸಂವೇಗ, ಶಕ್ತಿತಸ್ತ್ಯಾಗ, ಶಕ್ತಿತಸ್ತಪ, ಸಾಧುಸಮಾಧಿ, ವೈಯಾವೃತ್ಯಕರಣ, ಅರ್ಹದ್ಭಕ್ತಿ, ಆಚಾರ್ಯ ಭಕ್ತಿ, ಬಹುಶ್ರುತ ಭಕ್ತಿ, ಪ್ರವಚನ ಭಕ್ತಿ, ಆವಶ್ಯಕಾಪರಿಹಾಣಿ, ಮಾರ್ಗಪ್ರಭಾವನೆ, ಪ್ರವಚನ ವತ್ಸಲತ್ವ

ಷೋಡಶಶುಭಸ್ವಪ್ನ ೧೩೮ – ೧೪೧ವ ಬಿಳಿಯಾನೆ, ಬಿಳಿ ಎತ್ತು, ಸಿಂಹ, ಲಕ್ಷ್ಮಿ, ಹೂವಿನಹಾರ, ಚಂದ್ರ, ಬಾಲಸೂರ್ಯ, ಎರಡು ಎಳೆಯ ಮೀನುಗಳು, ಜೋಡಿ ರತ್ನಕುಂಭಗಳು, ತಾವರೆಗೊಳ, ಸಮುದ್ರ, ಸಿಂಹಾಸನ, ದೇವನಿಲಯ, ನಾಗನಿಲಯ, ರತ್ನಸಮೂಹ, ಉರಿಯುವ ಅಗ್ನಿಜ್ವಾಲೆ

ಸಕಾಮನಿರ್ಜರೆ ೫೧೩ – ೨೯೫ವ ಕರ್ಮ ತಕ್ಕಕಾಲ ಬಂದಾಗ ಪರಿಪಕ್ವವಾಗಿ ಅನುಭವಿಸಿದ ಬಳಿಕ ತಾನಾಗಿಯೇ ಸಹಜವಾಗಿ ಕಳಚಿಬೀಡುತ್ತದೆ. ಹೀಗೆ ಕರ್ಮ ಸಹಜವಾಗಿ ಕಳಚಿಬೀಳುವುದಕ್ಕೆ ಸಕಾಮನಿರ್ಜರೆ ಎಂದು ಹೆಸರು

ಸದಸದ್ವಾದ ೪೫ – ೬೦ ಸತ್ ಮತ್ತು ಅಸತ್ ಇವುಗಳ ಚರ್ಚೆ

ಸಪ್ತತಾಳ ೨೦೭ – ೧ವ ಧ್ರುವ, ಮಠ್ಯ, ರೂಪಕ, ಝಂಪೆ, ತ್ರಿಪುಟ, ಅಟ್ಟ, ಏಕ

ಸಪ್ತಧಾತು ೧೦೩ – ೯೦ರಸ, ರಕ್ತ, ಮಾಂಸ, ಮಜ್ಜ, ಅಸ್ತಿ, ಮೇದಸ್ಸು ಮತ್ತು ವೀರ್ಯ

ಸಪ್ತವ್ಯಸನ ೯೧ – ೪೧ ಜೂಜು,ಕಳವು, ಬೇಟೆ, ಕಳ್ಳು, ಮಾಂಸ, ಕುತ್ಸಿಕವೇಶ್ಯೆ, ಪರದಾರ

ಸಪ್ತಸ್ವರ ೨೦೭ – ೧ವ ಸ, ರಿ, ಗ, ಮ, ಪ, ದ, ನಿ

ಸಮವಸರಣ ೬೫ – ೮ ತೀರ್ಥಂಕರನು ಧರ್ಮೋಪದೇಶ ಮಾಡುವುದಕ್ಕಾಗಿ ಕುಬೇರನು ನಿರ್ಮಿಸಿದ ಮಂಟಪ

ಸಮ್ಯಗ್ದೃಷ್ಟಿ ೧೦೭ – ೧೦೪ ವ ಜೀವಾದಿ ಸಪ್ತತತ್ತ್ವಗಳಲ್ಲಿ ನಿರ್ದುಷ್ಟ ರೀತಿಯಿಂದ ನಂಬಿಕೆಯಿಡುವುದು

ಸಾಗಾರಧರ್ಮ ೫೧೪ – ೩೦೨ವ ಗೃಹಸ್ಥಧರ್ಮ

ಸುಷಮದುಷ್ಷಮ ೫೦೭ – ೨೬೯ ಅವಸರ್ಪಿಣಿಯ ಮೂರನೆಯ ಕಾಲವು. ಇದರ ಪರಿಮಿತಿ ಎರಡು ಕೋಟಾಕೋಟಿ ಸಾಗರೋಪಮ

ಸುಷಮಸುಷಮ ೫೦೭ – ೨೬೯ವ ಇದು ಅವಸರ್ಪಿಣಿಯ ಮೊದಲನೆಯ ಕಾಲವು. ಇದು ನಾಲ್ಕು ಕೋಟಾಕೋಟಿ ಸಾಗರ ಪರಿಮಿತ ವರ್ಷದಷ್ಟು ಇರುತ್ತದೆ.

ಸ್ವಸಂವೇದನ ಜ್ಞಾನ ೯೭ – ೬೬ ವ ಆತ್ಮಜ್ಞಾನ

ಸ್ಯಾದ್ವಾದ ೬ – ೧೯ ಅನೇಕಾಂತಮಯವಾದ ವಸ್ತುವನ್ನು ಕಥನಾತ್ಮಕ ರೀತಿಯಲ್ಲಿ ವರ್ಣಿಸುವ ಪದ್ಧತಿಗೆ ಸ್ಯಾದ್ವಾದವೆಂದು ಹೆಸರು.