ಎತ್ತಬಾರದು ಎತ್ತಬಾರದು ಎತ್ತಬಾರದು ಜನ್ಮವ
ಸತ್ತು ಹೋದ ಮೇಲೆ ಪುನರಪಿ ಎತ್ತಬಾರದು ಜನ್ಮವ || ಪ ||

ಮೂರು ಕೂಡಿದ ಮಂಟಪಾದೊಳು ಏರಿಕೂತಿಹ ಚಂದವಾ
ಈ ಭೂ ಭೂಷಣದೊಳಗೆ ಇರುವ ನೋಡು
ಮನದಾನಂದವಾ ||

ಈ ಕಾಯ ನೋಡಿ ಬಾಯ ಬಡಿಯುವ ಏನು ಇದರನ್ಯಾಯವ
ಈ ಮೂರು ಪಾಷಕೆ ಸಿಲುಕಬೇಡವೋ
ತಿಳಿದು ನೋಡೋ ಜ್ಞಾನವ
ಕಲ್ಲು ಮುಳ್ಳು ಒಳಗೆ ಇರುವ ಅಲ್ಲಿ ಜೀವಾದಾರವ ||

ನಂಬಬೇಕು ಅಂಬರಾದೊಳು ಶಂಭು ಲಿಂಗವಧ್ಯಾನವ
ಈ ಕಷ್ಟಪಟ್ಟ ಮಂತ್ರ ಹಿಡಿದು ಹೊಂದು ನೀನು
ಮೋಕ್ಷವಾ | ಬಿಟ್ಟಕಡೆಗೆ ಬಿಡುವದುಂಟೆ
ಇಂಥ ಜ್ಞಾನ ವಸ್ತುವ | ನೀ ನಿಷ್ಟೆಯಿಂದ ಮನನ
ಮಾಡಿ ಸೇರು ನೀನು ಮೋಕ್ಷವಾ || ಪ ||