ಬಿಡದಿರೋ ಎನ್ನ ಕೈಯ್ಯ ಸದ್ಗುರು ರಾಯ || ಎನ್ನ ಕೈಯ್ಯಾ || ಬಿಡದಿರೋ ಎನ್ನ ಕೈಯ್ಯ ಬೇಡಿಕೊಂಬೆ ಜೀಯ | ಕೊಡು ಕೊಡು ಕೊಡೋ ಗುರುವೇ ದಿವ್ಯ ಮತಿಯಾ || ಜನನ ಮರಣದ ದುಃಖವಾ ತಾಳಲು ಕಷ್ಟ ಜನನೀ ಗರ್ಭನಿವಾಸವ ನೆನಸಿಕೊಂಡರೆ ಎನ್ನ ತನು ತಲ್ಲಣಿವುದು ಘನ ಮಹಿಮನೇ ಎನ್ನ ಜನನವಾ ಹರಿಸಯ್ಯ || ಪ || (ಬಿಡದಿರೋ)

ಘೋರ ಪಾತಕ ಸಂಹಾರ ಹೃದಯೇಶ್ವರ ವೀರತ್ರೈ ಜಗದಾದಾರ ಕಾರುಣ್ಯ ನಿಧಿ ಕಾರ‍್ಯ ಕಾರುಣಮೂರ್ತಿಯೇ ವೀರ ಗುರುವೇ ನೀ ವೃಧೋರಿ ಪಾಲಿಪ್ರಿಯ ||

ಧರೆಯೋಳ್ ರಂಭಾಪುರಿಯ ಸದ್ಗುರುವಾದ ಗುರು ರೇಣುಕನೇ ನಿನ್ನಯ ಚರಣವಲ್ಲದೆ ಬೇರೊಂದನರಿಯೆ ನೀ ನರಿಯಯ ಕರುಣೆ ನೀ ಹೊರೆನ್ನ ಕೈಯ್ಯ ಸದ್ಗುರು ರಾಯ ಬಿಡದಿರೋ ಎನ್ನ ಕೈಯ್ಯ ||