ಬಿಡು ಬಿಡು ರಾಜನ ಪೂಜೆಯನು
ಮೊದಲೊಡಲಭಿಮಾನವ ಕೊರೆ
ನೀನಾ ಮಡದಿಯ ಕಾಣದೆ
ಮಿಡುಕುತ ಮನದಲಿ ಮೃಡನಡಿ ಪೂಜಿಸಿ ಫಲವೇನೂ ||

ಹರನೊಳು ಚಿತ್ತವನಿಡಲಿಲ್ಲಾ ಶಿವಕರಲಾರಿ
ಗರ್ಥವ ಕೊಡಲಿಲ್ಲಾ ಮರಣವ ಭೀತಿಗೆ
ಶಿವಪೊರೆಯಂದರೆ ನರಕದ ನೂತನೆ
ಬಿಡದಲ್ಲಾ || ಬಿಡು ||

ಆಗಮ ದರ್ಮರಂಗಳ ತೊರೆದು ಸತಿ
ಭೊರದಿ ಪ್ರತಿಯಿಲ್ಲದೆ ಮೆರೆದಂ ರೋಗವು
ಬಂದರೆ ಹರ ಪೊರೆಯೆನೂ ರೋಗವು ನಿನ್ನ
ಕೊಲ್ಲದೆ ಬಿಡುದೋ || ಬಿಡು ||

ಧೃಡದ ಶಿವಭಕ್ತಿಯ ಬಿಟ್ಟು ನಿಜ ಮಡದಿಯ
ಮೋಹಕೆ ಒಳಪಟ್ಟು ಸಡುಗರದೊಳಗಿದೆ ಮೊತರು
ಬರಲವರೊಡಲೊಡುವೆ ಎಲ್ಲವ ಬಿಟ್ಟು ||

ತರಣಿಗೆ ಮುತ್ತಿನ ಮಾಲೆಗಳರಾ ಪುರಹರನಿಗೆ
ಹತ್ತಿಯ ಜೂಲುಗಳು ಸರಸರಿ ನೀ ಮಾಡುವ
ಈ ಭಕ್ತಿಗೆ ಹುರಿವರು ನಿನ್ನೆ ಮನದೊಳ್ || ಬಿಡು ||

ಸಿರಿಯೊಳು ಶಿವನಾಡುವ ತೊರೆಯಾ ಅತಿ
ಹರುಷದಿ ಕಣ್ಣಂದೆ ಮೆರೆದು ಬರ
ಬಂದರೆ ಶಿವಪೊರೆ ಎಂದರೆ ನಿನ್ನನು
ನರಕದೊಳಿಲ್ಲಿಸುವ ಮುರಿದು || ಬಿಡು ||

ಹರನೊಳು ಚಿತ್ತವನಿಡಲಿಲ್ಲಾ ಶಿವ
ಶರಣರ ಸೇವೆಯು ಹಿತವಿಲ್ಲಾ ತರಳರ
ಪೊರೆಯೋ ಶಿವನೆಂದರೆ ಪರಹರಿ
ಕೇಳಿನಾಳಲ್ಲಾ || ಬಿಡು ||

ದಾಸರಿಗನ್ನಲೆ ನೀಡಲಿಲ್ಲಾ ಪರದೂಷಣೆಗಳೆನೀ
ಬಿಡಲಿಲ್ಲಾ ಕಾಸನು ತೋರಿಸಿ ಶಿವನೇ ಪೊರೆ
ಯನಲ್ಲಾ ಶಿವನೇ ಬಡತನವಿಲ್ಲಾ || ಬಿಡು ||

ಪಾಪದ ಕೃತ್ಯವು ಕೂಡಲಿಲ್ಲ ಪರತಾಪವೆನ್ನುವುದು
ಬಿಡಲಿಲ್ಲಾ ದೀಪದ ಕೆಚ್ಚೆನೆ ಶಿವನೇ ಪೊರೆಯನಲ್ಲಾ
ಪರಮಗೆ ಕತ್ತಲೆಯಿಲ್ಲಾ || ಬಿಡು ||

ಬಿಡಲಿಲ್ಲಾ ಬರಿದೇ ದುಃಖವು ಹರಿಯಲಿ
ಎಂದರೆ ಗುರು ಶಂಕರ ನಿನ್ನೊರಗಲ್ಲಾ || ಬಿಡು ||