ಬಿಡು ಬಿಡಿನ್ಯಾತರ ಜ್ಞಾನ ನಿನ್ನ
ನಡೆನುಡಿ ಒಂದಾಗಿರುವುದೇ ಅಜ್ಞಾನ
ಗುರುಭಕ್ತಿ ನೆಲೆಯಾಗಿಲ್ಲ ನಾನೇ
ಗುರುವೆಂದು ಅಮ್ಮಿನಿಂದುರುವಿಲ್ಲ
ಕರುಣ ಶಾಂತಿಯು ಸತ್ಯವೆಲ್ಲಾ ಕೆಟ್ಟು ಅರಿ
ವರ್ಗವಾದ ಹೆಚ್ಚಿ ಮರೆಯುವೆಯ || ಬಿಡು ||

ಚದುರ ನೆಂದೆನಿಸಿಕೊಂಡಿರುವೆ ನಿನ್ನ ಪದುಮ
ದಂತೂಪ್ಪುವ ಮುಖದಿ ಶೋಭಿಸುವೆ
ಮಧುರವಾಕ್ಯವ ನುಡಿಯುತಿರುವೆ
ನಿನ್ನ ಹೃದಯದಿ ಕ್ಷತ್ರಿಯನಿಟ್ಟು ಕೊಂಡಿರುವೆ || ಬಿಡು ||

ತನು ವಿನಾಶಯ ಬಿಡಲಿಲ್ಲ ದೇಶಿಮನದ
ಸಂಕಲ್ಪ ಬೋಳಾಗಲಿಲ್ಲ ಅನುಮಾನವನು
ಬಿಡಲಿಲ್ಲ ನಮ್ಮ ಗುರುಲಿಂಗನೊಳಸಮರಸವಿಲ್ಲ || ಬಿಡು ||