ಹೆಸರು: ಮಾಲಾ
ಊರು: ಕಿರಂಗೂರು

 

ಪ್ರಶ್ನೆ: ನಾನು ೧೮ ವರ್ಷದ ವಿವಾಹಿತೆ. ಈಗ ತಿಂಗಳ ಗರ್ಭಿಣೀ. ನನ್ನ ಸಮಸ್ಯೆ ಏನೆಂದರೆ ನನ್ನ ಕೆಳಹೊಟ್ಟೆ ಮತ್ತು ಸ್ತನಗಳಲ್ಲಿ ತುರಿಕೆ ಕಾಣಿಸಿಕೊಂಡಿದ್ದು. ಕೆರೆದ ಭಾಗಗಳಲ್ಲಿ ಬೆರಳಿನಾಕಾರದ ಗುರುತು ಬೀಳುತ್ತದೆ. ಗುರುತನ್ನು ಹೋಗಲಾಡಿಸಲು ಏನು ಮಾಡಬೇಕು? ಅದನ್ನು ಈಗ ಬಳಸಬೇಕೋ ಇಲ್ಲಾ ಹೆರಿಗೆಯ ನಂತರ ಬಳಸಬೇಕೋ ದಯವಿಟ್ಟು ತಿಳಿಸಿ.

ಉತ್ತರ: ಬಿರುಕು ಗೆರೆಗಳನ್ನು ಹೋಗಲಾಡಿಸಲು ಬ್ರಷ್‌ನಿಂದ ಮಸಾಜ್‌ಮಾಡುವುದು ಹರಳೆಣ್ಣೆಯನ್ನು ಬಿರುಕು ಗೆರೆಗಳಿರುವ ಭಾಗದಲ್ಲಿ ಹಚ್ಚಿ ಮಸಾಜ್ ಮಾಡುವುದರಿಂದ ಹೋಗಲಾಡಿಸಬಹುದು. ಅಲ್ಲದೆ Rosezipoil, Elisina cream, Pregna Creama. ಮುಂತಾದ ಮುಲಾಮುಗಳನ್ನು ಹಚ್ಚುವುದರಿಂದಲೂ ಹೋಗಲಾಡಿಸಬಹುದು.

ಈ ಮೇಲಿನ ಔಷಧಿಗಳಿಂದ ಬಿರುಕು ಗೆರೆಗಳು ಹೋಗಲಿಲ್ಲವೆಂದರೆ ಪ್ಲಾಸ್ಟಿಕ್ ಸರ್ಜರಿ ತಜ್ಞರನ್ನು ಕಂಡು ಚಿಕಿತ್ಸೆ ಪಡೆಯಬಹುದು.