ಅನುಬಂಧ

ಸಾಂಸ್ಕೃತಿಕ ಪದಕೋಶ

ಅಚ್ಚಮ್ಮಾರರು – ಬಿಲ್ಲವರ ಗುರಿಕಾರರಂತೆ ತೀಯ ಸಮುದಾದ ಮುಖ್ಯರು.

ಅಲೆತಣ್ಣಿ – ಮದುಮಗ ಮದುಮಗಳಿಂದ ವೀಳ್ಯದೆಲೆ, ಅಡಿಕೆ ಕಸಿದು ಓಡುವ ಒಂದು ಸಂಪ್ರದಾಯ.

ಎಟ್ಟಿಲ್ಲಕಾರ್ -ಎಟ್ಟ್‌+ಇಲ್ಲಂ+ಕಾರ್=”ಎಂಟು ಇಲ್ಲಂ” ನವರು, ಎಂಟು ಬಳಿಗಳವರು.

ಐನಿ-  ಈಳವರಲ್ಲಿ ವಧುವಿನ ತಾಯಿ ವರನಿಗಾಗಿ ಮಾಡುವ ಒಂದು ಬಗೆಯ ಅನ್ನ.

ಓಲೆಬೆಲ್ಲ – ತಾಳೆಯ ರಸದಿಂದ ತಯಾರಿಸಿದ ಒಂದು ಬಗೆಯ ಬೆಲ್ಲ.

ಕಡಲೇರ್ – ಕದಲಿನಲ್ಲಿ ಮೀನು ಹಿಡಿದು ಬದುಕುವ ಮೊಗವೀರರ ಸಮುದಾಯದವರು.

ಕನ್ಯಾವು ಪಳಂಬುನ್ನ -ಕನ್ಯಾವು ಬಡಿಸುವುದು; ಅಕಾಲಿಕವಾಗಿ ಮರಣಿಸಿದ ಚಿಕ್ಕಮಕ್ಕಳಿಗೆ ಬಡಿಸಿಡುವ ಶಾಸ್ತ್ರ.

ಕರಪತ್ತಾವುನಿ -ಮೈನೆರೆದ ಹೆಣ್ಣಿಗೆ ಅಡುಗೆಗೆ ತಯಾರಾಗುವಷ್ಷು ಪ್ರಬುದ್ಧಳಾದಳು ಎಂಬುದನ್ನು ಸೂಚಿಸಲು ಸಾಂಕೇತಿಕವಾಗಿ ಮಣ್ಣಿನ ಪಾತ್ರೆಯನ್ನು ಹಿಡಿಸುವ ವಿಧಿ.

ಕಾವುದೀಯನ್ -ಮರ್ಯಾದಿಕ್ಕಾರನ್ ಎಂದೂ ಕರೆಯಲಾಗುವ ತೀಯರ ಕ್ಷೌರಿಕ.

ಕೋಡಿ ಉಡುಕ್ಕಲ್- ಸೀಮಂತದ ಸೀರೆ ಉಡಿಸುವುದು.

ಕುದಿವೈಪು- ಮದುಮಗಳು ಗಂಡನ ಮನೆಗೆ ಹೋಗುವ ಆಚರಣೆ.

ಕುರುಂಟು – ಭತ್ತದ ಚಿಕ್ಕ ಮುಡಿ.

ಕಂಚಿ ಏರುನಿ- ವಧೂವರರ ಆಸನಗಳ ಎದುರು ಹಣ ಅಥವಾ ವಸ್ತು ರೂಪದ ಉಡುಗೊರೆ ಹಾಕಲಿ ಕಂಚಿನ ಹರಿವಾಣವನ್ನು ಇರಿಸುವುದು.

ಚಟ್ಟುವಂ ಪಿಡಿ -ಸಟ್ಟುಗವನ್ನು ಹಿಡಿಯುವುದು; ಬಿಲ್ಲವರ ಸಟ್ಟುಗ ಮರ್ಯಾದೆ ಶಾಸ್ತ್ರದಂತೆ ತೀಯರಲ್ಲಿ ಮದುಮಗಳು ಮೊದಲ ಬಾರಿಗೆ ಗಂಡನಿಗೆ ಬಡಿಸುವ ಕ್ರಮ.

ಚಮ್ಮಾನತಿಂಡೆ ಅರಿಕೆಟ್ಟಲ್ -ರೀಯರ ಗರ್ಭಿಣಿ ಹೆಣ್ಣಿನ ಮಡಿಲನ್ನು ಅಕ್ಕಿ, ತೆಂಗಿನ ಕಾಯಿ, ವೀಳ್ಯದೆಲೆ, ಅಡಿಕೆ, ಚಿಲ್ಲರೆ ಹಣ ಇತ್ಯಾದಿಗಳಿಂದ ಉಡಿ ತುಂಬುವ ಕಾರ್ಯ.

ಚಿಕ್ಕಿ- ತೀಯರಲ್ಲಿ ಪುಟ್ಟ ಹೆಣ್ಣು ಮಗುವಿನ ಜನನಗಾಂಗವು ಮುಚ್ಚುವಂತೆ ಹಾಕುವ ಸಣ್ಣ ಪದಕರೂಪದ ಆಭರಣ.

ತಾವಯಿ – ಸೋದರ ಮಾವನ ಬಳಿಕ ಮನೆಯ ಅಧಿಕಾರ ಸೋದರಳಿಯನಿಗೆ ಪರಂಪರೆಯಿಂದ ಬರುವ ಪ್ರಕ್ರಿಯೆ.

ತೆರಂಡ್‌ಕುಳಿ/ ತಲಕಾಣಿ/ ವಯಸರಿಕ್ಕ್‌ನ್ -ಮೈನೆರೆದಾಗ ಮಾಡುವ, ವಯಸ್ಸನ್ನು ತಿಳಿಸುವ ಆಚರಣೆ.

ತಂಡಾನ್- ಉತ್ತರ ಕನ್ನಡದ ಬಿಲ್ಲವರಾದ ಈಳವ ಸಮುದಾಯದ ಮುಖ್ಯರುನಾಲ್ಪಕ್ಕಾರತಿ -ಕೆಲವು ವಿಶಿಷ್ಟ ಅಧಿಕಾರ ಪಡೆದ ೪ ಬಳಿಗಳ ಹೆಂಗಸರು.

ನೀರ್ಪಾವುನಿ – ನೀರು ಮೀಯಿಸುವ ಶಾಸ್ತ್ರ; ಇದು ಮೈನೆರೆದ ಹೆಣ್ಣಿಗೆ ಮಾಡುವ ವಿಧಿಗಳಲ್ಲಿ ಒಂದು.

ಪುಳಿಕುಡಿ – ಸೀಮಂತದ ಸಂದರ್ಭದಲ್ಲಿ ತೀಯರ ಗರ್ಭಿಣಿ ಹೆಣ್ಣು ತನ್ನ ಗಂಡನ ಕೈಯಿಂದ ಕುಡಿಯುವ ಹುಳಿರಸ.

ಪೆಣ್‌ ಚೋದಿಕ್ಕಲ್ – ಹೆಣ್ಣು ಕೇಳುವುದು.

ಪೇರ್ ಪೂಜುಲಿ – ಹಾಲು ಸವರುವುದು; ಮದುವೆಯ ಸಂದರ್ಭದಲ್ಲಿ ವಧೂವರರ ಅಲಂಕಾರಕ್ಕೆ ಪೂರ್ವಭಾವಿಯಾಗಿ ಅವರ ಮೈಗೆ ಅರಿಶಿಣ ಬೆರೆಸಿದ ಹಾಲನ್ನು ಪೂಸಿ, ಬಳಿಕ ಸ್ನಾನ ಮಾಡಿಸುವುದು.

ಪೊಡಕೊಡ – ಮದುವೆ ಸಂದಭಲ್ಲಿ ನೀಡುವ ಸೀರೆ.

ಪಂದಳ್ ಮಂಗಲ – ಚಪ್ಪರ ಮದುವೆ.

ಬಾಳ್ ದೀಪುನಿ – ವರನ ಕ್ಷೌರ ಮಾಡುವುದಕ್ಕೆ ಸಾಂಕೇತಿಕವಾಗಿ ಅವನ ಕೆನ್ನೆಗೆ ಬಾಳ್ ತಾಗಿಸುವ ಶಾಸ್ತ್ರ.

ಬಿರುವೆರ್ -ಬಿಲ್ಗಾರರು ಎಂಬ ಅರ್ಥದಲ್ಲಿ ಸಾಮೂಹಿಕವಾಗಿ ಬಿಲ್ಲವರನ್ನು ಸಂಭೋಧಿಸುವ ಪದ.

ಬಿರುವೆದಿ -ಬಿಲ್ಲವರ ಸಮುದಾಯದ ಮಹಿಳೆ.

ಬೈದ್ಯೆದಿ -ಬಿಲ್ಲವ ಸಮುದಾಯಕ್ಕೆ ಸೇರಿದ ನಾಟಿ ವೈದ್ಯ ಮಾಡುವ ಮಹಿಳೆ.

ಮಡಲೇರ್- ಮೂರ್ತೆಗಾರಿಕೆಯ ವೃತ್ತಿ ಹಿನ್ನೆಲೆಯ ಬಿಲ್ಲವ ಸಮುದಾಯದವರು.

ಮದ್ಮಲೆ ಮರ್ದ್‌ – ಮೊದಲಬಾರಿ ಋತುಮತಿಯಾದ ಹೆಣ್ಣಿಗೆ ಪೋಷಕಾಂಶವನ್ನು ಒದಗಿಸುವ ತುಪ್ಪ, ಬೆಲ್ಲ, ತೆಂಗಿನಕಾಯಿ ಮೊದಲಾದ ಸಾಮಗ್ರಿಗಳಿಂದ ತಯಾರಿಸುವ ವಿಶೇಷ ಬಗೆಯ ಆಹಾರ.

ಮಾಟ್‌ – ಮಡಿವಸ್ತ್ರ; ಮೊದಲಾಗಿ ಮೈನೆರೆದ ಹೆಣ್ಣು ಮನೆಯೊಳಗೆ ಪ್ರವೇಶಿಸುವ ಮೊದಲು ಸೂತಕ ಕಳೆಯಿತೆಂಬುದನ್ನು ಸೂಚಿಸಲು ವಣ್ಣಾತ್ತಿಯು ತಂದು ಕೊಡುವ ಬಟ್ಟೆ. ಮೈನೆರೆದ ಹೆಣ್ಣು ಅದನ್ನು ಉಟ್ಟು ಮನೆಯನ್ನು ಪ್ರವೇಶಿಸಬೇಕು.

ಮಾಮಿಸಿಕೆ/ ತೊಡಮನೆ -ಹೊಸದಾಗಿ ಮದುವೆಯಾದ ಗಂಡಿಗೆ ಹೆಂಡತಿಯ ಮನೆಯಲ್ಲಿ ಅತ್ತೆ ಮಾಡುವ ಸಂಮಾನ.

ಮೂರ್ತತಿಂಡೆ ಕಿಡಾವು – ಮುಹೂರ್ತದ ಮಗು; ತೀಯರಲ್ಲಿ ಪಂದಳ್ ಮಂಗಲಕ್ಕೆ ಆರಿಸುವ ಏಳು ವರ್ಷದೊಳಗಿನ ಹೆಣ್ಣು ಮಗು.

ಮೂರ್ತೆಗಾರಿಕೆ – ತಾಳೆ ಅಥವಾ ತೆಂಗಿನ ಮರದಿಂದ ರಸ ಇಳಿಸುವ ಕಾಯಕ (ವೃತ್ತಿ)

ಮೂಪತ್ತಿ – ಬಂಗೇರ ಬಳಿಗೆ ಸೇರಿದ ಕುಟುಂಬದ ಹಿರಿಯ ಮುತ್ತೈದೆ ಸ್ತ್ರೀ.

ಮೋತಳ್ ಮಂಗಲ – ಮದುವೆಗಿಂತ ಮೊದಲು ಮಾಡುವ ಚಪ್ಪರ ಮದುವೆ.

ಮೋಂದಲ್ ಸೇಸೆ -ತೀಯರಲ್ಲಿ ವರನಿಗೆ ಕ್ಷೌರದ ಬಳಿಕ ಹಾಕುವ ಮೊದಲ ಅಕ್ಷತೆ

ಸೇಜ -ಸಲ್ಲಬೇಕಾದ ಕಾಣಿಕೆ.

ವಡಕ್ಕನ್‌ಪ್ಪಾಟ್ಟು – ತೀಯರಲ್ಲಿ ಪ್ರಚಲಿತದಲ್ಲಿರುವ ಹಾಡಿನ ರೂಪದಲ್ಲಿರುವ ಕತೆಗಳು.

ವಣ್ಣಾನ್ -ಮಡಿವಾಳ (ಅಗಸ) ರ ಗಂಡಸು.

ವಣ್ಣಾತ್ತಿ -ಮಡಿವಾಳ ಹೆಂಗಸು.

ವಯತ್‌ಪೊಂಗಳ್, ಪುಞಮಂಗಲ-ಸೀಮಂತ.

 

ಅನುಬಂಧ

ಗ್ರಂಥಋಣ

೧. ಕೋಟಿ ಚೆನ್ನಯ -ಸಾಂಸ್ಕೃತಿಕ ಅಧ್ಯಯನ
(ಪ್ರಕಟಿತ ಪಿಎಚ್.ಡಿ. ಮಹಾಪ್ರಬಂಧ; ೨೦೦೨), ಡಾ. ವಾಮನ ನಂದಾವರ

೨. ದಕ್ಷಿಣ ಕನ್ನಡ ತೀಯ ಜನಾಂಗ: ಒಂದು ಸಾಂಸ್ಕೃತಿಕ ಅಧ್ಯಯನ
(ಅಪ್ರಕಟಿತ ಪಿಎಚ್.ಡಿ. ಮಹಾಪ್ರಬಂಧ ;೨೦೦೪), ಸಂಗೀತಾ ಎಂ.

೩. ದಕ್ಷಿಣ ಕನ್ನಡದ ಬಿಲ್ಲವರು: ಒಂದು ಸಾಂಸ್ಕೃತಿಕ ಅಧ್ಯಯನ
(ಅಪ್ರಕಟಿತ ಪಿಎಚ್.ಡಿ. ಮಹಾಪ್ರಬಂಧ ;೨೦೦೪), ಎಂ. ದೇಜಪ್ಪ ದಲ್ಲೋಡಿ

೪. ಬಿಲ್ಲವರು: ಒಂದು ಸಾಂಸ್ಕೃತಿಕ ಅಧ್ಯಯನ (೨೦೦೨). ಬನ್ನಂಜೆ ಬಾಬು ಅಮೀನ್

೫. ಬಿಲ್ಲವರು: ಒಂದು ಅಧ್ಯಯನ (೨೦೦೩), ಬಾಬು ಶಿವಪೂಜಾರಿ

೬. ತುಳುನಾಡಿನ ಬಿಲ್ಲವರು -ಕೆ. ಕೃಷ್ಣಪ್ಪ ಪೂಜಾರಿ