ಹೆಸರುಇಂದಿರಾ
ಊರುಕವಲಂದೆ

ಪ್ರಶ್ನೆಆತ್ಮೀಯ ಡಾ.ಶರತ್‌ಕುಮಾರವರಿಗೆ ನನ್ನ ವಂದನೆಗಳುನಿಮ್ಮ ಕಾರ್ಯಕ್ರಮ ಮಹಿಳೆಯರಿಗೆ ಹೆಚ್ಚಿನ ಜಾಗೃತಿ ಮುಡಿಸುವ ಕಾರ್ಯಕ್ರಮ ಎಂದರೆ ತಪ್ಪಾಗಲಾರದು.

ನಾನು ಚಾಮರಾಜನಗರ ಜಿಲ್ಲೆಯ ಕವಲಂದೆ ಗ್ರಾಮದಿಂದ  ಪತ್ರ ಬರೆಯುತ್ತಿದ್ದೇನೆ.  ನಾನು IWDP ಗ್ರಾಮ ಪ್ರಾಜೆಕ್ಟ್ನಲ್ಲಿ ಸಮಾಜ ಸೇವಕಿಯಾಗಿ ಕೆಲಸನಿರ್ವಹಿಸುತ್ತಿದ್ದೇನೆನಮ್ಮ ಕೆಲಸ ಹೆಚ್ಚಾಗಿ ಗ್ರಾಮೀಣ ಪ್ರದೇಶದ ಮಹಿಳೆಯರ ಮಧ್ಯೆಯಲ್ಲಿ ನಿರ್ವಹಿಸುವುದರಿಂದ ನಾನು ಕೆಲವು ಸಮಸ್ಯೆಗಳನ್ನು ಕುರಿತು ತಮ್ಮಿಂದ ಉತ್ತರತಿಳಿದುಕೊಳ್ಳಲು ಆಶಿಸುತ್ತಿದ್ದೇನೆ.

ಮಹಿಳೆಯರಲ್ಲಿ ಬಿಳಿ ಮುಟ್ಟು ಕಾಣಿಸಿಕೊಳ್ಳಲು ಕಾರಣವೇನುಹಾಗೂ ಬಿಳಿ ಮುಟ್ಟು ಎಂದರೇನು?  ಯಾವ ವಯಸ್ಸಿನವರಿಗೆ  ಸಮಸ್ಯೆ ಕಂಡುಬರುತ್ತದೆನಿರ್ದಿಷ್ಟವಾಗಿ ಬಿಳಿಮುಟ್ಟು ಎಂದು ಗುರ್ತಿಸುವುದು ಹೇಗೆ ಬಿಳಿ ಮುಟ್ಟಿನ ಸೂಚನೆ ಮತ್ತು ಲಕ್ಷಣಗಳೇನುಹಾಗೂ ಪರಿಹಾರಗಳೇನುಹಾಗೂ ಅನಾಹುತಗಳೇನು ಎಲ್ಲಾಪ್ರಶ್ನೇಗಳಿಗೂತಮ್ಮ ಸಲಹೆಯನ್ನು ತಪ್ಪದೆ ತಿಳಿಸಿ.

ಉತ್ತರಬಿಳಿ ಮುಟ್ಟು ಯೋನಿಯಿಂದ ಉಂಟಾಗುವ ಯೋನಿರಸ ಮತ್ತು ರಕ್ತಸ್ರಾವವನ್ನು ಬಿಟ್ಟು ಉಳಿದೆಲ್ಲಾ ರೀತಿಯ ಸ್ರವಿಕೆಗಳನ್ನು ಬಿಳಿಸೆರಗು, ಬಿಳಿ ಮುಟ್ಟು, ಬಿಳಿ ಬಟ್ಟೆ, ವೈಟ್ ಹೋಗುವದು ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ.

ವಿಧಗಳು: ಎರಡು ರೀತಿಯ ಬಿಳಿಮುಟ್ಟಿನ ಸ್ರಾವವನ್ನು ಕಾಣಬಹುದು.

೧. ಸಹಜ ಮತ್ತು ೨.ಅಸಹಜ.

ಸಹಜ ಬಿಳಿಮುಟ್ಟುಹಾರ್ಮೋನಗಳಿಂದ ಏರುಪೇರಿನಿಂದಾಗಿ ಸಹಜ ಬಿಳಿಮುಟ್ಟು ಉಂಟಾಗುತ್ತದೆ. ಇದು ಮುಟ್ಟು ಪ್ರಾರಂಭವಾಗುವ ಮೊದಲು, ಅಂಡಾಣು ಬಿಡುಗಡೆಯಾಗುವ ಸಮಯದಲ್ಲಿ ಲೈಂಗಿಕವಾಗಿ ಉದ್ರೇಕಗೊಂಡಾಗ, ಗರ್ಭ ಧರಿಸಿದಾಗ, ದೈಹಿಕ ಮತ್ತು ಮಾನಸಿಕ ಸ್ಥಿತಿ ಸರಿಯಿಲ್ಲದಿರುವಾಗ ಜ್ವರ ಮುಂತಾದ ಖಾಯಿಲೆಗಳು ಸಹಜ ಬಿಳಿಮುಟ್ಟಿಗೆ ಕಾರಣವಾಗುತ್ತದೆ. ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ಅಸಹಜ ಬಿಳಿಮಟ್ಟುಸಹಜವಲ್ಲದ ಬಿಳಿಮುಟ್ಟಿಗೆ ಲ್ಯೂಕೋರಿಯಾ (Leucorrhoea) ಎಂದು ಹೆಸರು.  ಈ ಸಮಸ್ಯೆಯಲ್ಲಿ ಯೋನಿಸ್ರಾವ ಹೆಚ್ಚಿನ ಪ್ರಮಾಣದಲ್ಲಿದ್ದು. ಸ್ರಾವವು ಹಳದಿ, ಹಸಿರು ಮತ್ತು ಕಂದು ಬಣ್ಣದಲ್ಲಿರುತ್ತದೆ. ಜನನಾಂಗದಲ್ಲಿ ಉರಿ, ನವೆ ಕಂಡುಬರುತ್ತದೆ. ಜೊತೆಗೆ ಕೆಳಹೊಟ್ಟೆ ನೋವು. ಬೆನ್ನುನೋವು, ತೊಡೆನೋವು ಇರುತ್ತದೆ. ಇದಕ್ಕೆ ತಜ್ಞವೈದ್ಯರ ಸಲಹೆ ಮತ್ತು ಚಿಕಿತ್ಸೆ ಅತ್ಯವಶ್ಯಕ. ಇಲ್ಲದಿದ್ದರೆ ಮುಂದೆ ಇದು ಜನನಾಂಗಗಳಿಗೆ ಸೋಂಕು ಉಂಟಾಗಿ ಲೈಂಗಿಕ ಖಾಯಿಲೆಗಳಿಗೆ ಮತ್ತು ಬಂಜೆತನಕ್ಕೆ ಕಾರಣವಾಗಬಹುದು.

ಬಿಳಿಮುಟ್ಟಿಗೆ ಕಾರಣಗಳು: ಬಿಳಿಮುಟ್ಟು ಉಂಟಾಗಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಮಖ್ಯವಾಗಿ

ಸೂಕ್ಷ್ಮಾಣು ಜೀವಿಯಿಂದ:

ಬ್ಯಾಕ್ಟೀರಿಯಾ: ಇದಕ್ಕೆ ನಿಖರವಾದ ಕಾರಣ ತಿಳಿಯಲು ಸಾಧ್ಯವಾಗುವುದಿಲ್ಲ. ಬ್ಯಾಕ್ಟೀರಿಯಾದ ಏರಿಕೆಯಿಂದ ಸೋಂಕು ಉಂಟಾಗುತ್ತದೆ. ಏರಿಕೆಯಾಗುವ ಸಂದರ್ಭದಲ್ಲಿ ಯೋನಿಯಲ್ಲಿನ pH ಏರುಪೇರಾಗುತ್ತದೆ.  ಈ ಏರುಪೇರಿಂದ ಬಿಳಿಮುಟ್ಟಿನ ಸಮಸ್ಯೆ ಕಂಡುಬರುತ್ತದೆ.

ಟ್ರೈಕೋಮೊನಾಸಿಸ್: ಪ್ರೊಟೋಜೋನ್ (Protozoan) ಎಂಬ ಏಕಕೋಶ ಜೀವಿಯಿಂದ ಬಿಳಿಮುಟ್ಟಿನ ಸಮಸ್ಯೆ ಉಂಟಾಗುತ್ತದೆ. ಲೈಂಗಿಕ ಕ್ರಿಯೆಯಿಂದ ಸಾಮಾನ್ಯವಾಗಿ ಈ ಸಮಸ್ಯೆ ಕಂಡುಬರುತ್ತದೆ.  ತೇವವಿರುವ ಬಟ್ಟೆಗಳಲ್ಲಿ ಹೆಚ್ಚಾಗಿ ಇರುತ್ತದೆ. ಇದು ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತದೆ.

.ಮೊನಿಲಿಯಾ (ಈಸ್ಟ್): ಕ್ಯಾನ್ ಡಿಡಾ ಆಲ್ ಬೈಕನ್ಸ್ (Candida Albicans) ಎಂಬ ಸೂಕ್ಷ್ಮಾಣು ಜೀವಿಯಿಂದ ಈ ಸೋಂಕು ಉಂಟಾಗುತ್ತದೆ. ಇದು ಯೋನಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಯಾವಾಗಲೂ ಇರುತ್ತದೆ. ಇದು ಏರಿಕೆಯಾದ ಸಂದರ್ಭದಲ್ಲಿ ಯೋನಿಯಲ್ಲಿನ pHನ ಪ್ರಮಾಣ ಬದಲಾಗುತ್ತದೆ.  ಈ ಬದಲಾವಣೆಯಿಂದಾಗಿ ಬಿಳಿಮುಟ್ಟು ಕಾಣಿಸಿಕೊಳುತ್ತದೆ.

ಖಾಯಿಲೆಗಳಿಂದಕೆಲವೊಂದು ಖಾಯಿಲೆಗಳಿಂದ ಬಿಳಿಮುಟ್ಟು ಕಂಡುಬರುತ್ತದೆ. ಅವುಗಳೆಂದರೆ, ಜ್ವರ, ಜನನಾಂಗದ ಸೋಂಕು, ಗರ್ಭಕೋಶ ಮತ್ತು ಗರ್ಭಕಂಠದ ಸೋಂಕು, ಜನನಾಂಗದ ಸ್ವಚ್ಛತೆ ಇಲ್ಲದಿರುವುದು, ಮಧುಮೇಹ ಖಾಯಿಲೆ, ಉರಿಮೂತ್ರ, ಆಯತಪ್ಪಿದ ಮುತ್ರ, ಗರ್ಭಕೋಶದ ಗೆಡ್ಡೆಗಳು, ಗರ್ಭಕಂಠದ ಹುಣ್ಣು, ಕ್ಯಾನ್ಸರ, ಲೈಂಗಿಕ ಖಾಯಿಲೆಗಳು, ಋತುಬಂಧವಾದ ಮೇಲೆ ಮುಂತಾದ ಖಾಯಿಲೆಗಳಿಂದ (ಸಿಫಿಲಿಸ್, ಗನೋರಿಯಾ, HIV ಮುಂತಾದವು) ಬಿಳಿಮುಟ್ಟಿನ ಸಮಸ್ಯೆ ಕಂಡುಬರುವುದು ಮತ್ತು ಹೆಚ್ಚಾಗಬಹುದು.

ಇತರೆ ಕಾರಣಗಳು: ಗರ್ಭನಿರೋಧಕ ಮಾತ್ರೆಗಳ ಅಧಿಕ ಸೇವನೆ ಮತ್ತು ವಂಕಿ, ಕಾಪರ್ಟಿಯ ಅಳವಡಿಕೆಯಿಂದ ಬಿಳಿಮುಟ್ಟು ಬರಬಹುದು. ಮತ್ತು ಜನನಾಂಗದ ಸ್ವಚ್ಛತೆಯ ಬಗ್ಗೆ ನಿರ್ಲಕ್ಷ್ಯವಹಿಸುವುದು ಮತ್ತು ಸುಗಂಧ ಭರಿತ ಸೋಪ್‌ಗಳು, ಪ್ಯಾಡಗಳನ್ನು ಬಳಸುವದರಿಂದ ಬಿಳಿಮುಟ್ಟಿನ ಸಮಸ್ಯೆ ಪ್ರಾರಂಭವಾಗುತ್ತದೆ.

ಚಿಹ್ನೆಗಳು: ಕೆಲವು ಮಹಿಳೆಯರಿಗೆ ಯಾವುದೇ ಚಿಹ್ನೆಗಳು ಕಂಡುಬರದೇ ಬಿಳಿಮುಟ್ಟಿನ ಸಮಸ್ಯೆ ಉಂಟಾಗಬಹುದು. ಸಾಮಾನ್ಯವಾಗಿ ಈ ಕೆಳಕಂಡ ಚಿಹ್ನೆಗಳು ಎಲ್ಲರಲ್ಲಿಯು ಕಂಡುಬರಹುದು.

೧. ಅಧಿಕ ಬಿಳಿಮುಟ್ಟಿನ ಸ್ರಾವ.

೨. ಯೋನಿಯಲ್ಲಿ ಕಡಿತ, ನವೆ, ಉರಿ, ಕಂಡುಬರುತ್ತದೆ.

೩. ಸ್ರಾವವೂ ಕಂದು, ಹಳದಿ, ಹಸಿರು, ಬಿಳಿ ಬಣ್ಣದಿಂದ ಕೂಡಿರುತ್ತದೆ.

೪. ಸ್ರಾವವು ತೆಳು ಅಥವಾ ಗಟ್ಟಿಯಾಗಿರುತ್ತದೆ.

೫. ಕೆಟ್ಟ ವಾಸನೆಯಿಂದ ಕೂಡಿರುತ್ತದೆ. ಈ ಮುಂತಾದ ಕಂಡುಬರುತ್ತವೆ.

ಈ ಕೆಲವು ತಪಾಸಣೆಗಳಿಂದ ಬಿಳಿಮುಟ್ಟಿನ ಖಾಯಿಲೆಯನ್ನು ಕಂಡುಹಿಡಿಯಬಹುದು. ಅವುಗಳೆಂದರೆ,

೧. ದೇಹ ತಪಾಸಣೆ.

೨. ಬಿಳಿಮುಟ್ಟಿನ ಸೂಕ್ಷ್ಮದರ್ಶಕ ಪರೀಕ್ಷೆ.

೩. ರಕ್ತ ಮತ್ತು ಮೂತ್ರ ಪರೀಕ್ಷೆ.

೪. ಕೀಳ್ಗುಳಿ ಪರೀಕ್ಷೆ (Pelvic Examination).

೫. ಸ್ಕ್ಯಾನಿಂಗ್.

೬. ಜೀವಕೋಶಗಳ ಪರೀಕ್ಷೆ (PAP Smear) ಇತ್ಯಾದಿ.

ಈ ಕೆಲವೊಂದು ಚಿಕಿತ್ಸೆಗಳಿಂದ ಬಿಳಿಮುಟ್ಟಿನ ಸಮಸ್ಯೆಯನ್ನು ನಿಯಂತ್ರಿಸಬಹುದು.

೧. ಸೂಕ್ತ ಜೀವನಿರೋಧಕ ಔಷಧಿ (Antibiotics) ಗಳನ್ನು ತೆಗೆದುಕೊಳ್ಳುವುದು.

೨. ನವೆ, ಉರಿ ಕಡಿಮೆ ಮಾಡುವ ಮುಲಾಮುಗಳನ್ನು ಬಳಸುವುದು.

೩. ಸೋಂಕು ಕಡಿಮೆ ಮಾಡುವ ಔಷಧಿಗಳನ್ನು ಉಪಯೋಗಿಸುವುದು.

೪. ಗರ್ಭಕೋಶದಲ್ಲಿ ಗಡ್ಡೆಗಳು, ಹುಣ್ಣುಗಳಿದ್ದರೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು.

೫. ಋತುಬಂಧದ ನಂತರ ಈಸ್ಟ್ರೋಜನ್ ಹಾರ್ಮೋನ್ (Oestrogen)ನ ಬಳಕೆಯಿಂದ ಬಿಳಿಮುಟ್ಟಿನ ಸಮಸ್ಯೆಯನ್ನು ಕಡಿಮೆಮಾಡಬಹುದು.