ಮನೆತನ : ಸಂಗೀತ ಕಲಾವಿದರ ಮನೆತನ. ತಂದೆ ಆರ್. ವೆಂಕಟೇಶಮೂರ್ತಿ ಸಂಗೀತಕಾರರು ಹಾರ್ಮೋನಿಯಂ ವಾದಕರು. ತಾಯಿ ಚೆಲುವರಂಗಮ್ಮ.

ಗುರುಪರಂಪರೆ : ಮೊದಲಿಗೆ ತಂದೆಯವರ ಬಳಿಯಲ್ಲೆ ಶಿಕ್ಷಣ. ಹಾರ್ಮೋನಿಯಂ ವಾದನದಲ್ಲಿ ತರಬೇತಿ. ಮುಂದೆ ಬಾಲಕೃಷ್ಣಪ್ಪನವರ ಬಳಿ ಪಿಟೀಲು ಕಲಿಕೆ. ಅನಂತರ ಪಂ. ಶೇಷಾದ್ರಿ ಗವಾಯಿಗಳ ಬಳಿ ಸಿತಾರ್ ವಾದನದಲ್ಲಿ ಶಿಕ್ಷಣ.

ಸಾಧನೆ: ಮೊದ ಮೊದಲಿಗೆ ಗಾಯಕಿ ಬಿ.ಕೆ. ಸುಮಿತ್ರ ಅವರ ವಾದ್ಯವೃಂದಲ್ಲಿದ್ದು ಗಾಯನ ವಾದ್ಯವಾದನಗಳಲ್ಲಿ ಪಾಲ್ಗೊಳ್ಳುವಿಕೆ. ೧೯೯೨ ರಲ್ಲಿ ಅವರೊಂದಿಗೆ ಮೂರು ತಿಂಗಳ ಕಾಲ ಅಮೆರಿಕಾ ಪ್ರವಾಸ. ಹಲವಾರು ಪ್ರತಿಷ್ಠಿತ ಸ್ಥಳಗಳಲ್ಲಿ ಕಾರ್ಯಕ್ರಮ. ನಾಡಿನ ಸುಗಮ ಸಂಗೀತ ಕ್ಷೇತ್ರದ ಹಲವಾರು ಜನಪ್ರಿಯ ಕಲಾವಿದರುಗಳ ಗಾಯನಕ್ಕೆ ಪಕ್ಕ ವಾದ್ಯ ಸಹಕಾರ ನೀಡಿದ ಹಿರಿಮೆ.

ಸಂಗೀತ ನಿರ್ದೇಶಕರಾಗಿ ಅನೇಕ ಭಕ್ತಿಗೀತೆಗಳು, ಭಾವಗೀತೆಗಳಿಗೆ ಸ್ವರ ಸಂಯೋಜನೆ ಮಾಡಿರುವುದೆ ಅಲ್ಲದೆ. ಜಾನಪದ ಗೀತೆಗಳ ರಾಗ ಸಂಯೋಜನೆ ಮಾಡಿ ಸುಮಾರು ೬೦೦ ಕ್ಕೂ ಮಿಕ್ಕಿ ಧ್ವನಿ ಸುರುಳಿಗಳು ಹೊರಬಂದಿವೆ. ರಾಷ್ಟ್ರಕವಿ ಕುವೆಂಪುರವರ ’ಬೆರಳ್ಗೆ ಕೊರಳ್’ ಎಂಬ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುತ್ತಾರೆ. ೧೯೯೮ ರಲ್ಲಿ ಅಮೆರಿಕಾದಲ್ಲಿ ನಡೆದ ’ಅಕ್ಕ’ ಸಮ್ಮೇನದಲ್ಲಿ ಪಾಲ್ಗೊಂಡಿದ್ದರು. ’ಈಟಿವಿ’ ಪ್ರಚುರ ಪಡಿಸುತ್ತಿರುವ ’ಎದೆ ತುಂಬಿ ಹಾಡುವೆನು’ ಪ್ರಸಾರಕ್ಕೆ ಕಿರಿಯ ಕಲಾವಿದರ ಪರಿಚಯ ಮಾರ್ಗದರ್ಶನ ಮಾಡಿರುತ್ತಾರೆ. ೨೦೦೬ ರಲ್ಲಿ ನಂದಿ ತಾಳವಾದ್ಯ ಅಕಾಡೆಮಿಯ ವೃಂದದ ಜೊತೆ ಪ್ಯಾರಿಸ್, ನೆದರ್ ಲ್ಯಾಂಡ್, ಜರ್ಮನಿ, ಬೆಲ್ಜಿಯಂ ಪ್ರವಾಸ ಮಾಡಿದ್ದಾರೆ. ಅನೇಕ ಶಿಕ್ಷಣ ಶಿಬಿರಗಳಲ್ಲಿ ಸುಗಮ ಸಂಗೀತ ಕುರಿತು ಮಾರ್ಗದರ್ಶನ ನೀಡಿದ್ದಾರೆ.

ಪ್ರಶಸ್ತಿ – ಸನ್ಮಾನ : ೨೦೦೦ ರಲ್ಲಿ ಸ್ವರ ಮಂದಾರ ಪ್ರಶಸ್ತಿ. ೨೦೦೩ ರಲ್ಲಿ ಸಂಗೀತ ಗಂಗಾದ ಜಿ. ವಿ. ಅತ್ರಿ ಪ್ರಶಸ್ತಿ. ಅಲ್ಲದೆ ೧೯೯೫-೯೬ರ ಸಾಲಿನ ಸಂಗೀತ ನೃತ್ಯ ಅಕಾಡೆಮಿಯ ’ಕರ್ನಾಟಕ ಕಲಾಶ್ರೀ ಪ್ರಶಸ್ತಿ’ ಇವರಿಗೆ ಸಂದಿದೆ.