ಜನನ: ೨೨-೧೧-೧೯೨೨ ಶಹಾಪುರದಲ್ಲಿ

ಮನೆತನ: ಸಂಗೀತ ಕಲಾವಿದರ ಮನೆತನ. ಅಜ್ಜ ತಬಲಾ ವಾದಕರು. ಅಣ್ಣ ಬಾಲಕೃಷ್ಣ ಕಡ್ಲಾಸ್ಕರ್ ಹಾರ್ಮೋನಿಯಂ ವಾದಕರು.

ಗುರು ಪರಂಪರೆ: ಎ.ಪಿ ಚಿನ್ಮಯ ಶಾಸ್ತ್ರಿ ಅವರ ಬಳಿ ಹಾರ್ಮೋನಿಯಂ ವಾದನದಲ್ಲಿ ಶಿಕ್ಷಣ ಪಡೆದು ಮುಂದೆ ಡಿ.ಸಿ. ತಾಮ್ಹಣಕರ್ ಬುವಾ ಮತ್ತು ಕೆಲಕಾಲ ಕುಮಾರ ಗಂಧರ್ವ ಅವರ ಸಹೋದರರಾದ ಎಸ್.ಎಸ್. ಕೊಂಕಾಳಿ ಮಠ ಅವರಲ್ಲೂ ಅಭ್ಯಾಸ ಮಾಡಿದ್ದಾರೆ.

ಸಾಧನೆ: ಬಿಜಾಪುರ ಸಂಗೀತ ಸೇವಾ ಮಂಡಳಿಯ ಸಂಗೀತ ವಿಚಾರದ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ. ಆಕಾಶವಾಣಿ ಧಾರವಾಡ ಕೇಂದ್ರದಿಂದ ಗಾನ ಪ್ರಸಾರ. ಶಾಸ್ತ್ರೀಯ ಸಂಗೀತದೊಂದಿಗೆ ಸುಗಮ ಸಂಗೀತವನ್ನು ರೂಢಿಸಿಕೊಂಡು ಎರಡೂ ಪ್ರಕಾರಗಳಲ್ಲಿ ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

ಶಹಾಪುರದಲ್ಲಿ ತಮ್ಮದೇ ಆದ ಸಂಗೀತ ಸೇವಾ ಮಂಡಳಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಶಿಕ್ಷಣ ನೀಡುತ್ತಿದ್ದಾರೆ. ಗಮಕ ಕಲೆಯಲ್ಲೂ ಪರಿಶ್ರಮ ಹೊಂದಿದ್ದು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗಮಕ ತರಗತಿಗಳನ್ನು ನಡೆಸಿರುತ್ತಾರೆ. ಬೆಳಗಾವಿ ಕಲಾಕಾರರ ಸಂಘ, ಕುಮಾರ ಗಂಧರ್ವ ಸ್ಮೃತಿ ಸಮಿತಿಗಳ ಅಧ್ಯಕ್ಷತೆ, ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದ ಪರೀಕ್ಷಕರಾಗಿ ಮಾನ್ಯತೆ ಇವರು ಹಾಡಿರುವ ಗೀತ ಮಹಾವೀರ ಕನಕದಾಸರ ಹಾಗೂ ಕನ್ನಡ ಭಕ್ತಿ ಗೀತೆಗಳ ಧ್ವನಿ ಸುರುಳಿಗಳು ಹೊರಬಂದಿವೆ.

ಪ್ರಶಸ್ತಿ-ಸನ್ಮಾನ: ಅನೇಕ ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿರುತ್ತಾರೆ. ಭಜನ ಸಂಗೀತ ಚೂಡಾಮಣಿ ಎಂಬ ಬಿರುದಿಗೆ ಪಾತ್ರರಾದ ಕಡ್ಲಾಸ್ಕರ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೩-೯೪ರ ಸಾಲಿನ ಕರ್ನಾಟಕ ಕಲಾತಿಲಕ ಪ್ರಶಸ್ತಿ ನೀಡಿ ಗೌರವಿಸಿದೆ.