ನಾನು ಸಂಪಾದಿಸಿದ ಬಿ.ವಿ.ಕಾರಂತ (ನಿರ್ದೇಶಕನ ಸಾಧನೆಗಳ ಸಮಾಜ ಶೋಧ) ಗ್ರಂಥವನ್ನು ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬೋಳಂತಕೋಡಿ ಈಶ್ವರಭಟ್ಟರು ೧೯೯೬ರಲ್ಲಿ ತುಂಬ ಸಂಭ್ರಮದಿಂದ ಪ್ರಕಟಿಸಿದರು. ಬಿಡುವಿಲ್ಲದ ತಿರುಗಾಟದಲ್ಲಿದ್ದ ಬಿ.ವಿ.ಕಾರಂತರು ನನ್ನ ಪುಸ್ತಕವನ್ನು ಪೂರ್ತಿ ಓದಿರಲಿಲ್ಲ. ಮುಂದೆ ನನ್ನ ಪುಸ್ತಕದ ಕೆಲವು ಲೇಖನಗಳನ್ನು ಹಿಂದಿಗೆ ಅನುವಾದಿಸಿದವರಿಗೆ ಕಾರಂತರು ಸಹಾಯ ಮಾಡಬೇಕಾಯಿತು. ಆಗ ನನ್ನ ಪುಸ್ತಕ ಪೂರ್ತಿ ಓದಿದ ಕಾರಂತರು, ಫೋನ್ ಮಾಡಿ ಪುಸ್ತಕದ ಬಗ್ಗೆ ಮೆಚ್ಚುಗೆ ಸೂಚಿಸಿದ್ದು ನೆನಪಾಗುತ್ತದೆ. ನನ್ನ ಪುಸ್ತಕದ ಮಹತ್ವವನ್ನು ಗುರುತಿಸಿದ ಇನ್ನೊಬ್ಬರು ಹಿರಿಯ ನಿರ್ದೇಶಕ ದಿ.ಬಿ.ಆರ್.ನಾಗೇಶರನ್ನು ಈಗ ನೆನಪಿಸಿಕೊಳ್ಳುತ್ತಿದ್ದೇನೆ.

ಬಿ.ವಿ.ಕಾರಂತ (ನಿರ್ದೇಶಕನ ಸಾಧನೆಗಳ ಸಮೂಹ ಶೋಧ) ಗ್ರಂಥಕ್ಕಾಗಿ ನಾನು ಬರೆದ ಸಂಪಾದಕೀಯ ಈಗ ಪ್ರತ್ಯೇಕ ಕಿರು ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದೆ. ಈ ಪುಸ್ತಕವನ್ನು ಪ್ರಕಟಿಸುತ್ತಿರುವ ಬೆಂಗಳೂರಿನ ಸಾಧನಾ ಪ್ರಕಾಶನದ ಕೆ.ರವಿಚಂದ್ರ ರಾವ್ ಅವರಿಗೆ ಕೃತಜ್ಞತೆಗಳು.

 – ಮುರಳೀಧರ  ಉಪಾಧ್ಯ ಹಿರಿಯಡಕ
’ಸಖೀಗೀತ’, ಎಂ.ಐ.ಜಿ. – ೧’
ಹುಡ್ಕೊರ ೧ ಮೈನ್,
ದೊಡ್ಡನಗುಡ್ಡೆ, ಉಡುಪಿ – ೫೭೬೧೦೨
ಫೋನ್ – ೦೮೨೦ – ೨೫೨೩೦೦೬
MUPADHYAHIRI.BLOGSPOT.COM